Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 31, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 171/2015  ಕಲಂ 78(3) Karnataka Police Act.
ದಿನಾಂಕ 30-07-2015 ರಂದು 20-45 ಶ್ರೀ ಮಹಾಕೂಟೇಶ್ವರ, ಎ.ಎಸ್.ಐ. ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವ ಕುರಿತು ಜಪ್ತಿ ಪಂಚನಾಮೆ ಹಾಗೂ ಮುದ್ದೇಮಾಲನ್ನು ತಮ್ಮದೊಂದು ವರದಿಯೊಂದಿಗೆ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 30-07-2015 ರಂದು 19-00 ಗಂಟೆಗೆ ಆರೋಪಿತರಾದ (01) ಸಾಬಣ್ಣ ತಂದೆ ಶಾಮೀದಸಾಬ. (02) ಗೋವಿಂದರಾಜ @ ರಾಜ ತಂದೆ ಹನುಮಂತ ಇವರು ಗಂಗಾವತಿ ನಗರದ ಸಂತೇಬಯಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಾ ಮಟಕಾ ಚೀಟಿಯನ್ನು ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಸಾಬಣ್ಣ ಇತನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 2,240-00. (02) 08 ಮಟಕಾ ನಂಬರ ಬರೆದ ಪಟ್ಟಿಗಳು. (03) ಒಂದು ಬಾಲ್ ಪೆನ್ನು ಹಾಗೂ (04) ಒಂದು ಕಾರ್ಬನ್ ಕಂಪನಿಯ ಮೊಬೈಲ್ ದೊರೆತಿರುತ್ತದೆ.  ಹಾಗೂ ಆರೋಪಿ ನಂ. 02 ಗೋವಿಂದರಾಜ @ ರಾಜ ಇತನಿಂದ ಮಟಕಾ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 790-00  [02] ಒಂದು ಮಟಕ ನಂಬರ ಬರೆದ ಚೀಟಿ ಹಾಗೂ (03) ಒಂದು ಬಾಲ್ ಪೆನ್ನು ಮತ್ತು (04) ಒಂದು ನೋಕಿಯಾ ಕಂಪನಿಯ ಮೊಬೈಲ್  ದೊರೆತಿರುತ್ತದೆ.  ಈ ಬಗ್ಗೆ 7-00 ಪಿ.ಎಂ. ದಿಂದ 8-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಳ್ಳಲಾಯಿತು. ಆರೋಪಿ ನಂ. 03 ನೇದ್ದವನು ಸದರಿ ಮಟಕಾ ಪಟ್ಟಿಗಳನ್ನು ತೆಗೆದುಕೊಳ್ಳುವ ಬುಕ್ಕಿ ಆಗಿರುತ್ತಾನೆ. ಕಾರಣ ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 165/2015  ಕಲಂ 78(3) Karnataka Police Act.

ದಿನಾಂಕಃ- 30-07-2015 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ನಾನು  ಕಾರಟಗಿ ಪೊಲೀಸ ಠಾಣೆಯಲ್ಲಿದ್ದಾಗ ಕಾರಟಗಿ ಎ.ಪಿ.ಎಂ.ಸಿ ಗೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಅಂತಾ ಖಚೀತ ಬಾತ್ಮೀ ಬಂದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿಯವರಾದ ಪಿ.ಸಿ– 330,ರವರಿಗೆ ವಿಷಯ ತಿಳಿಸಿ ಇಬ್ಬರು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಸದರಿ ನಮ್ಮ ಸಿಬ್ಬಂದಿಯವರು ಮತ್ತು ಠಾಣೆಗೆ ಕರೆಯಿಸಿದ್ದ ಇಬ್ಬರು ಪಂಚರನ್ನು ರನ್ನು ಹಾಗೂ ನಮ್ಮ ಜೀಪ ಚಾಲಕ ಎ.ಪಿ.ಸಿ-179 ಕರೆದುಕೊಂಡು ನಮ್ಮ ಸಕಾರಿ ಜೀಪ್ ನಂ: ಕೆ.-37 ಜಿ-452 ನೇದ್ದರಲ್ಲಿ ಮದ್ಯಾಹ್ನ 12-15  ಗಂಟೆಗೆ ಠಾಣೆಯನ್ನು ಬಿಟ್ಟು ಬಾತ್ಮೀ ಪ್ರಾಕಾರ  ಎ.ಪಿ.ಎಂ.ಸಿ ಗೆಟ್ ಹತ್ತಿರ ಹೊಗಿ  ಅಲ್ಲಿ ಮೆರೆಯಲ್ಲಿ ಜೀಪ ನಿಲ್ಲಿಸಿ ನಿಂತು ನೊಡಲು ಎ.ಪಿ.ಎಂ.ಸಿ ಗೆಟ್ ಪಕ್ಕದಲ್ಲಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆಯುತ್ತಾ ಇದ್ದು ಇನ್ನೊಬ್ಬನು ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ನಂಬರಿನ ಪಟ್ಟಿಯನ್ನು ಬರೆದುಕೊಳ್ಳುತ್ತಿರುವದನ್ನು ಖಚಿತ ಪಡಿಸಿಕೊಂಡು ನಾವು ಎಲ್ಲರೂ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಕೂಗಿ ಕರೆಯುತ್ತಿದ್ದವನು ಮತ್ತು ಮಟ್ಕಾ ನಂಬರ ಚೀಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿರುತ್ತಾರೆ ಕೂಗಿ ಕರೆಯುತ್ತಿದ್ದವನಿಗೆ ವಿಚಾರಿಸಲಾಗಿ ಪುಂಡಲೀಕಪ್ಪ ತಂದಿ ತಿಪ್ಪಣ್ಣ ಸಂಗಾ ವಯಾ- 50 ವರ್ಷ ಜಾ- ನೇಕಾರ ಸಾ- ಬಸ್ ನಿಲ್ದಾಣದ ಹತ್ತಿರ ಕಾರಟಗಿಅಂತಾ ಹೇಳಿದ್ದು ಅವನ ಅಂಗ ಜಪ್ತಿ ಮಾಡಲು ಅವನ ಹತ್ತಿರ ಒಂದು ಸೆಲ್ ಕಾನ್ ಮೋಬೈಲ ಅಂ.ಕಿ. 500-00 ರೂಪಾಯಿ ಆಗಬಹುದು ಮಟ್ಕಾಪಟ್ಟಿಯನ್ನು ಬರೆದು ಕೊಳ್ಳುವವನಿಗೆ ವಿಚಾರಿಸಲಾಗಿ ಅವನ ಹೆಸರು ಜಗದೀಶ ತಂದಿ ಹನುಮಂತಪ್ಪ ನಾಯಕ ವಯಾ- 23 ವರ್ಷ ಜಾ- ನಾಯಕ ಸಾ- ಉಪ್ಪಾರ ಓಣಿ ಕಾರಟಗಿ ಅಂತಾ ಹೇಳಿದ್ದು ಅವನ ಅಂಗ ಜಪ್ತಿ ಮಾಡಲು ಅವನ ಹತ್ತಿರ ಎರಡು ಓ.ಸಿ. ಪಟ್ಟಿ, ಒಂದು ಬಾಲ್ ಪೆನ್ನ, ಹಾಗೂ ಕಾರ್ಬನ ಮೊಬೈಲ ಅಂ.ಕಿ.- 500 ಹಾಗೂ ನಗದು ಹಣ 3100-00 ದೊರೆತಿದ್ದು ಪಟ್ಟಿಯನ್ನು ಯಾರಿಗೆ ಕೊಡುತ್ತಿರಿ ಅಂತಾ ವಿಚಾರಿಸಲಾಗಿ ಕಾರಟಗಿಯ ಮಲ್ಲಯ್ಯಸ್ವಾಮಿ ಇತನಿಗೆ ಕೊಡುವುದಾಗಿ ಹೇಳಿದ್ದು  ಆರೋಪಿತರು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮೋಸಮಾಡುವ ಉದ್ದೇಶದಿಂದ  ಈ ರೀತಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರನ್ನುತಾಬಾಕ್ಕೆ ತೆಗೆದುಕೊಂಡು ಆರೋಪಿತರ ವಶದಿಂದ ದೊರೆತ ಮಟಕಾ ಸಾಮಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಪಂಚರ ಸಹಿ ಚೀಟಿ ಅಂಟಿಸಿ ನನ್ನ ವಶಕ್ಕೆ ಪಡಿದುಕೊಂಡು ಸದರಿ ಮಟ್ಕಾ ದಾಳಿ ಪಂಚನಾಮೆಯನ್ನು ಇಂದು ದಿನಾಂಕ- 30-07-2015 ರಂದು  ಮದ್ಯಾಹ್ನ-12-45 ಗಂಟೆಯಿಂದ  ಮದ್ಯಾಹ್ನ1-45  ಗಂಟೆಯ ವರೆಗೆ ಸ್ಥಳದಲ್ಲೇ ಮಾಡಿಕೊಂಡು ಮಟ್ಕಾ ಸಾಮಾಗ್ರಿಗಳು ಮತ್ತು ಆರೋಪಿತನೊಂದಿಗೆ ಠಾಣೆಗೆ ಮದ್ಯಾಹ್ನ 1-55 ಗಂಟೆಗೆ ಬಂದು ಈ ಬಗ್ಗೆ ಮುಂದಿನ ಕಾನೂನು ರೀತಿ ಕ್ರಮ ಜರುಗಿಸಲು ಸೂಚಿಸಿದೆ. ಅಂತಾಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ  ನಾನು ಅಮರಪ್ಪ ಸಿ.ಹೆಚ್.ಸಿ- 89  ಕಾರಟಗಿ ಠಾಣೆ ಗುನ್ನೆ ನಂಬರ್ – 165 /2015 ಕಲಂ- 78(3) ಕೆ.ಪಿ.ಯಾಕ್ಟ ಹಾಗೂ ಕಲಂ 420 .ಪಿ.ಸಿ. ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    ನಂತರ ಸದರಿ ಆರೋಪಿತರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರಿಂದ  ದಸ್ತಗಿರಿ ನಿಯಮಗಳನ್ನು ಅನುಸರಿಸಿದ್ದು ಇರುತ್ತದೆ.  

Wednesday, July 29, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 124/2015  ಕಲಂ 279, 337, 338 ಐ.ಪಿ.ಸಿ.
ದಿನಾಂಕ:28-07-2015 ರಂದು 06-15 ಪಿ.ಎಂ.ಕ್ಕೆ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೆಟ್ಟಿಕೊಟ್ಟು  ಗಾಯಾಳು ಪಿರ್ಯಾದಿದಾರನಾದ ಶಂಕ್ರಪ್ಪ ತಂದೆ ಮಲ್ಲಪ್ಪ ಹೂಗಾರ ಸಾ: ದುರ್ಗಾ ಕಾಲೋನಿ ಕುಷ್ಟಗಿ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ 07-25 .ಕ್ಕೆ ಬಂದು ಸದರ ಪಿರ್ಯಾದಿ ಸಾರಾಂಶವೆನೆಂದರೆ; ಇಂದು ಸಾಯಾಂಕಾಲ 5-15 ಗಂಟೆಯ ಸುಮಾರಿಗೆ ಪೊಲೀಸ್ ಠಾಣೆಯ ಎದುರಿಗೆ ಮೈಸೂರ ಬಾಗಲಕೋಟ ಬಸ್ ಬರುವುದನ್ನು ಕಾಯುತ್ತ ನಿಂತಿದ್ದು ಬಸ್ ಬಂದಿದ್ದು.ಕಂಡಕ್ಟರ ಕಡೆಯಿಂದ ಹೂವನ್ನು ಹಿ¹ದುಕೊAqÀÄ ಕೆಳಗೆ ಇಳಿದಾಗ ಬಸ್ ನ ಹಿಂದಿನಿಂದ ಆರೋಪಿ ತನ್ನ ಮೋಟಾರ ಸೈಕಲ ನಂ; ಕೆ.ಎ-29 ಎಕ್ಷ-1065 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಪಿರ್ಯಾದಿಗೆ ಭಾರಿ &ಸಾದಾ ¸Àéರೂಪದ ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
2) ಕಾರಟಗಿ ಪೊಲೀಸ್ ಠಾಣಾ ಗುನ್ನೆ ನಂ. 164/2015  ಕಲಂ 498(ಎ), 323, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ- 28-07-2015 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳಾದ ಶ್ರೀಮತಿ ವಿಜಯಲ್ಷಕ್ಮಿ ಗಂಡ ವೀರುಪಾಕ್ಷೆಪ್ಪ ಹಳೇಮನಿ ವಯ 25 ವರ್ಷ ಜಾತಿ ರಡ್ಡಿ ಲಿಂಗೈತ ಉ.ಮನೆಗೆಲಸ ಸಾ. ಸಿದ್ದಾಪೂರ ತಾ.ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶ ಏನೆಂದರೆ ನನ್ನ ತವರು ಮನೆ ಕೊಪ್ಪಳ ತಾಲೂಕಿನ ಡಂಕನಕಲ್ ಗ್ರಾಮವಿದ್ದು ನನ್ನನ್ನು ಸಿದ್ದಾಪೂರ ಗಾಮದ ವೀರುಪಾಕ್ಷೆಪ್ಪ ತಂದೆ ಭಿಪ್ಪ ಹಳೇಮನಿ ವಯ 35 ವರ್ಷ ಇತನೊಂದಿಗೆ ಈಗ್ಗೆ ಸುಮಾರು 9 ವರ್ಷಗಳ ಹಿಂದುಗಡೆಗೆ ಹಿರೇಡಂಕನಕಲ್ ಗ್ರಾಂದಲ್ಲಿ ಲಕ್ಷ್ ಗುಡಿಯಲ್ಲಿ ನನ್ನ ತಂದೆ ನನ್ನ ತಾಯಿ ಹಾಗೂ ನಮ್ಮ ಗುರುಹಿರಿಯರು ಕೂಡಿ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಟ್ಟಿದ್ದರು ಮದುವೆಯಾದ ನಂತರ ನಾನು ನನ್ನ ಗಂಡನ ಮನೆಗೆ ಬಾಳ್ವೆ ಮಾಡಲು ಬಂದಿದ್ದು ಇರುತ್ತದೆ ನನ್ನ ಗಂಡನು ಮದುವೆಯಾದಾಗಿನಿಂದ 8 ವರ್ಷಗಳ ವರೆಗೆ ಚೆನ್ನಾಗಿಯೇ ಬಾಳ್ವೆ ಮಾಡಿಕೊಂಡು ಬಂದಿದ್ದು ನಮಗೆ ಅಭಿನಯ ವಯ 7 ವರ್ಷ ಹಾಗೂ ಗಾಯತ್ರಿ ವಯ 5 ವರ್ಷದ ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ ನಮ್ಮ ಮನೆಯ ಮುಂದೆ ನನ್ನ ಗಂಡನ ಅಕ್ಕನಾದ ಪುಷ್ಪಾ ಗಂಡ ಶಂಕ್ರಪ್ಪ ವಯ 40 ವರ್ಷ ಹಾಗೂ ಈಕೆಯ ಗಂಡ ಶಂಕ್ರಪ್ಪ ತಂದೆ ಕಾಡನಗೌಡ ವಯ 50 ವರ್ಷ ಸಾ> ರಾಂಪೂರ ತಾ.ಕುಷ್ಟಗಿ ಹಾ.ವ. ಸಿದ್ದಾಪೂರ ಇವರು ವಾಸವಾಗಿದ್ದು ಇರುತ್ತದೆ ನನ್ನ ಅತ್ತೆ ಮಾವ ತೀರಿಕೊಂಡಿದ್ದು ಇರುತ್ತದೆ ಈಗ್ಗೆ ಒಂದು ವರ್ಷದಿಂದ ನನ್ನ ಗಂಡನು ನನ್ನ ಚಿಕ್ಕಮ್ಮಳಾದ ಪುಷ್ಪಾ ಗಂಡ ಶಂಕ್ರಪ್ಪ ಹಾಗೂ ಶಂಕ್ರಪ್ಪ ತಂದೆ ಕಾಡನಗೌಡ ಇವರ ಮಾತು ಕೇಳಿ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುವದು ಮತ್ತು ಹೊಡೆಯುವದು ಮತ್ತು ಬಡೆಯುವದು ಮಾಡುತ್ತಾ ಬಂದಿದ್ದು ಈ ಬಗ್ಗೆ ನಾನು ನಮ್ಮ ಓಣಿಯ ಜನರ ಮುಂದೆ ಹಾಗೂ ನಮ್ಮ ತಂದೆ ತಾಯಿ ಮತ್ತು ಸಹೋದರ ಮುಂದೆ ಹೇಳಿದ್ದೆ ಅವರು ಮುಝದೆ ಸರಿ ಹೋಗುತ್ತದೆ ಗಂಡನೊಂದಿಗೆ ಹೊಂದುಕೊಂಡು ಹೊಗು ಅಂತಾ ಬುದ್ದಿವಾದ ಹೇಳಿ ಕಳೂಹಿಸುತ್ತಿದ್ದು ಅಲ್ಲದೆ ನನ್ನ ಗಂಡನಿಗೆ ಮತ್ತು ಅವ ಮನೆಯವರಿಗೆ ಈ ರೀತಿ ಮಾಡುವುದು ಸರಿ ಅಲ್ಲ ಅಂತಾ ಬುದ್ದಿವಾದ ಹೇಳಿದ್ದು ಅದರೆ ಸದರಿಯವರು ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು ನಾನು ನನ್ನ ಗಂಡ ಮುಂದೆ ಸುದಾರಿಸಿಯಾನು ಅಂತಾ ಸುಮ್ಮನಿದ್ದೆ ಇತ್ತಿಚಿಗೆ ಒಂದುವರೆ ತಿಂಗಳಿನಿಂದ ಸದರಿ ನನ್ನ ಗಂಡನ ಅಕ್ಕ ಪುಸ್ಪಾ ಮತ್ತು ಶಂಕ್ರಪ್ಪ ಇವರು ವಿನಾಃಕಾರಣ ನನ್ನೊಂದಿಗೆ ಮನೆಯ ಮುಂದಿನ ಜಾಗದ ಸಂಬಂದವಾಗಿ ಬಾಯಿ ಮಾಡುತ್ತಾ ಇದ್ದು ಈ ಬೋಸುಡಿ ನಮ್ಮ ಜಾಗಾದಾಗ ಅದಾಳಾ ನವ್ರ್ಮೆಂದಿಗೆ ಬಾಯಿ ಮಾಡುತ್ತಾಳ ಅಂತಾ ಬೈದಾಡುತ್ತಿದ್ದು ಇವರ ಮಾತು ಕೇಳಿ ನನ್ನ ಗಂಡ ದಿನಾಲು ಕುಡಿದು ಬಂದು ಲೇ ಬೋಸುಡಿ ನಮ್ಮ ಅಕ್ಕನ ಸಂಗಡ ಯಾಕ ಬಾಯಿ ಮಾಡ್ತಿದಿ ಅಂತಾ ಬ್ಶೆದಾಡುವುದು ಮಾಡುತ್ತಿದ್ದು ಅಲ್ಲದೆ ಚಿತ್ರೆಹಿಂಸೆ ಕೊಡುತ್ತಿದ್ದು ಇರುತ್ತದೆ ಮೊನ್ನೆ ದಿನಾಂಕ : 27-07-2015 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ನಾನು ನನ್ನ ಮಕ್ಕಳೋಂದಿಗೆ ಮನೆಯಲ್ಲಿದ್ದಾಗ ನನ್ನ ಗಂಡನು ಬಂದು ನನಗೆ ಏನಲೇ ಸೂಳೇ ಅಂತಾ ಬೈದಾಡಿ ಕೈಯಿಂದ ಹೊಡೆ ಬಡಿ ಮಾಡಿ ಹತ್ತಿದ್ದು ಅಲ್ಲದೆ ಅಲ್ಲಿಯೇ ಇದ್ದ ಪುಸ್ಪಾ ಮತ್ತು ಈಕೆಯ ಗಂಡ ಶಂಕ್ರಪ್ಪ ಇವರು ಸಹ ನನ್ನ ಗಂಡನೊಂದಿಗೆ ಬಂದು ಈ ಬೋಸುಡಿನಾ ಸಾಯಿಸಿಬಿಡು ಇವಳದು ಬಾಳಾ ಆಗೈತಿ ಅಂತಾ ಬ್ಶೆದಾಡಿದ್ದು ಅಲ್ಲದೆ ಕೈಯಿಂದ ಹೊಡೆಯ ಹತ್ತಿದ್ದು ಆಗ ಅಲ್ಲಿಯೇ ಇದ್ದ ತಿಮ್ಮನಗೌಡ ತಂಧೆ ಭಿಪ್ಪ ಮತ್ತು ಹೇಮಂತಪ್ಪ ಇರರು ಬಂದು ಜಗಳ ಬಿಡಿಸಿಕೊಂಡರು ಆಗ ಸದರಿ ಪುಸ್ಪಾ ಮತ್ತು ಆಕೆಯ ಗಂಡ ಶಂಖ್ರಪ್ಪ ಇವರು ಲೇ ಸೂಳೆ ಇವತ್ತು ಉಳಕೊಂಡಿ ಮುಂದೆ ಎಚಿದಾದರೂ ಒಂದು ದಿನ ನಿನ್ನ ಅಸಿಡ್ ಹಾಕಿ ನಿನ್ನ ಮಕ್ಕಳನ್ನ ಮತ್ತು ನಿನ್ನ ಸಾಯಿಬಡಿಯುತ್ತಿವಿ ಅಂತಾ ಬೈದಾಡುತ್ತಾ ಹೋದರು. ನಂತರ ಸದರಿ ವಿಷಯವನ್ನು ನನ್ನ ತವರು ಮನೆಗೆ ತಿಳಿಸಿ ಈ ದಿನ ನನ್ನ ತಾಯಿ ಮತ್ತು ನಾಣು ಠಾಣೆಗೆ ಬಂದು ಈ ರೀತಿ ನನಗೆ ದಿನಾ ಮಾನಸಿಕ ಹಾಗೂ ದೈಹಿಕ ಕಿರುಕಳ ಕೊಟ್ಟು ಕೈಯಿಂದ ಹೊಡೆಬಡಿ ಮಾಡಿ ಜೀವದ ಬ್ಭೆದರಿಕೆ ಹಾಕಿದ ನನ್ನ ಗಂಡ ವೀರುಪಾಕ್ಷಪ್ಪ ಹಾಗೂ ಈತನ ಅಕ್ಕ ಪುಷ್ಪಾ ಮತ್ತು ಶಂಕ್ರಪ್ಪ ಇವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ದೂರು ನೀಡಿದ್ದು ಇರುತ್ತದೆ.

Tuesday, July 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 165/2015  ಕಲಂ 78(3) Karnataka Police Act & 420 ಐ.ಪಿ.ಸಿ.
ದಿನಾಂಕ 27-07-2015 ರಂದು 21-00 ಗಂಟೆಗೆ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ತಮ್ಮದೊಂದು ವರದಿಯನ್ನು  ಜಪ್ತಿ ಪಂಚನಾಮೆ  ಹಾಗೂ ಮುದ್ದೇಮಾಲನ್ನು ನಾಲ್ಕು ಜನ ಆರೋಪಿತರ ಸಮೇತವಾಗಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 27-07-2015 ರಂದು 19-00 ಗಂಟೆಗೆ ಆರೋಪಿತರಾದ ಶೇಖರಪ್ಪ ತಂದೆ ವೀರಭದ್ರಪ್ಪ ಇಂಗಳಗಿ, ವಯಾ: 56 ವರ್ಷ, ಜಾ: ಬಣಜಿಗ, ಸಾ: ಉಳ್ಳಿಡಗ್ಗಿ-ಗಂಗಾವತಿ ಇವನು ಗಂಗಾವತಿ ನಗರದ ಉಳ್ಳಿಡಗ್ಗಿ ಕ್ಯಾಂಪನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಾ ಮೋಬೈಲ್ ದಲ್ಲಿ ಮತ್ತು ಚೀಟಿಗಳಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ ಸದರಿಯರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ 01] ಮಟಕ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ. 680-00. (02) ಒಂದು ನೋಕಿಯಾ ಕಂಪನಿಯ ಮೊಬೈಲ್. (03) ಐದು ಮಟಕಾ ನಂಬರ ಬರೆದ ಚೀಟಿಗಳು ಹಾಗೂ (04) ಒಂದು ಪೆನ್ನುನ್ನು ವಶಕ್ಕೆ ತೆಗೆದುಕೊಂಡು ಪಂಚರ ಸಮಕ್ಷಮ 19-00 ಗಂಟೆಯಿಂದ 20-00 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಈ ಬಗ್ಗೆ ಜಪ್ತಿ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಮತ್ತು ಸದರಿಯವನು ಮಟಕಾ ಪಟ್ಟಿಯನ್ನು ನಭೀಸಾಬ ಸಾ: ಗಂಗಾವತಿ ಇವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಎಂದು ನೀಡಿದ ವರದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಸಂಚಾರ ಪೊಲೀಸ್ ಠಾಣಾ ಗುನ್ನೆ ನಂ. 46/2015  ಕಲಂ 279, 337 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 27-07-2015 ರಂದು ರಾತ್ರಿ 9-10 ಗಂಟೆಗೆ ಕೊಪ್ಪಳದ ಮಹಾದೇವಿ ಎಲುಬು ಮತ್ತು ಕೀಲು ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶ್ರೀ ಮನೋಹರಸಾ ಮೇರ್ವಾಡಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 27-07-2015 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನಂ. KA 33 / J 8769 ನೇದ್ದರ ಹಿಂದೆ ತಮ್ಮ ಹೆಂಡತಿ ಶ್ರೀಮತಿ ಗೀತಾಬಾಯಿ ಇವರನ್ನು ಕೂಡಿಸಿಕೊಂಡು ಹಸನ್ ರಸ್ತೆಯ ಮುಖಾಂತರ ಭಗವತಿ ಆಸ್ಪತ್ರೆಯ ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ್ KA 37 / U 0771 ನೇದ್ದರ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿದ್ದು, ಇದನ್ನು ನೋಡಿದ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ನ್ನು ಸೈಡಿಗೆ ತೆಗೆದುಕೊಂಡರೂ ಸಹ ಮೋಟಾರ್ ಸೈಕಲ್ ಸವಾರನು ಜೋರಾಗಿ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದು ಇದರಿಂದ ಫಿರ್ಯಾದಿದಾರರಿಗೆ ತಲೆಯ ಎಡಗಡೆ ಗಾಯ, ಎಡಗೈ ಬೆರಳುಗಳಿಗೆ ತೆರಚಿದ ಗಾಯ ಹಾಗೂ ಎಡಗಡೆ ಮೊಣಕಾಲಿನ ಹತ್ತಿರ ಒಳಪೆಟ್ಟು ಆಗಿದ್ದು ಹಾಗೂ ಫಿರ್ಯಾದಿಯ ಹೆಂಡತಿ ಗೀತಾಬಾಯಿಗೆ ಇವರಿಗೆ ಬಲ ಮಲಕಿನ ಹತ್ತಿರ ತೆರಚಿದ ಗಾಯ, ಬಲ ಮೊಣಕಾಲಿಗೆ ತೆರಚಿದ ಗಾಯ ಹಾಗೂ ಒಳಪೆಟ್ಟು ಬಿದ್ದಿದ್ದು, ಅಪಘಾತ ಮಾಡಿದ ನಂತರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯನ್ನು ರಾತ್ರಿ 9-20 ಗಂಟೆಯಿಂದ 10-10 ಗಂಟೆಯ ವರೆಗೆ ಪಡೆದುಕೊಂಡು ವಾಪಾಸ ಠಾಣೆಗೆ ರಾತ್ರಿ 10-20 ಗಂಟೆಗೆ ಬಂದು ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡೆನು.
3) ಹನುಮಸಾಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ. 15/2015  ಕಲಂ 174 ಸಿ.ಆರ್.ಪಿ.ಸಿ.
 ಫಿರ್ಯಾದಿ ಹುಚ್ಚಪ್ಪ ತಂದಿ ರಂಗಪ್ಪ ಇಲಾಳ ಸಾ: ಗುಡ್ಡದದೇವಲಾಪೂರ ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಸಾರಾಂಶವೇನೆಂದರೆ, ನನಗೆ ಒಂದು ಹೆಣ್ಣುಮತ್ತು ಎರಡು ಗಂಡು ಮಕ್ಕಳು ಇದ್ದು 1] ಶ್ರೀದೇವಿ ಈಕೆಯನ್ನು ರಾಮತಾಳ ಗ್ರಾಮದ ಪಾಂಡುರಂಗ ವಾಲೀಕರ ವರಿಗೆ ಮದುವೆ ಮಾಡಿಕೊಟ್ಟಿದ್ದು ಗಂಡನ ಮನೆಯಲ್ಲಿ ಇರುತ್ತಾಳೆ 2] ಬಸವರಾಜ ಈತನು ಪಿ.,ಯು.ಸಿ. ಹನಮನಾಳ ಓದುತ್ತಿದ್ದು 3] ಅರ್ಜುನ ಈತನು ಎಸ್.ಎಸ.ಲ್.ಸಿ. ಓದುತ್ತಿದ್ದು ದಿನಾಲೂ ಹೋಗಿ ಬರುವದನ್ನು ಮಾಡುತ್ತಾರೆ. ನಮ್ಮ ಉಪ ಜೀವನಕ್ಕಾಗಿ ಮನೆಯಲ್ಲಿ 4 ಆಕಳುಗಳನ್ನು ಸಾಕಿದದು ಇರುತ್ತದೆ. ನಿನನೆ ದಿನಾಂಕ 26-07-2015 ರಂದು ರವಿವಾರ ಇದ್ದುದರಿಂದ ನನ್ನ ಹಿರಿಯ ಮಗನಾದ ಬಸವರಾಜ ಈತನು ದನಗಳನ್ನು ಮೇಯಿಸಿಕೊಂಡು ಬಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಯಲಲಿ ದನಗನ್ನು ಕಟ್ಟಿ ಮನೆಯ ಪಕ್ಕದಲ್ಲಿರುವ ನಮ್ಮೂರ ಶರಣಪ್ಪ ತಂದಿ ರಂಗಪ್ಪ ನಾಯ್ಕರ ರವರ ಹೆಸರು ಹೊಲದಲ್ಲಿ ಮೇವು ಮಾಡಲು ಹೋಗಿ ನಸುಗು ಆಗುವವರೆಗೂ ಅಂದರೆ 700 ಗಂಟೆಗೆ ಮೇವು ಮಾಡಿಕೊಂಡು ಬದುವು ಹಿಡಿದು ಬರುವಾಗ ಎಡಗಾಲಿಗೆ ಏನೋ ಕಚ್ಚಿದಂತಾಗಿ ಸರ್ರ್ ಎಂದು ಹೋದ ಶಬ್ದ ಕೇಳಿದಂತಾಯಿತೆಂದು ಮನೆಯಲ್ಲಿ ನಮಗೆ ಹೇಳಿದ ದನಕ್ಕೆ ಮೇವು ಹಾಕಿ ಕೈ ಕಾಲು ತೊಳೆದು ಕೊಂಡು ಬಂದಾಗ ನಾನು ನನ್ನ ಹೆಂಡತಿ ನೋಡಲು ಸ್ವಲ್ಪ ತರೆಚಿದೆ ಎಂದು ಹೇಳಿ ರಾತ್ರಿ 8-30 ಗಂಟೆಗೆ ಊಟ ಮಾಡಿ ಮನೆಯ ಅಂಗಳದಲ್ಲಿ ಬಸವರಾಜ ಮಲಗಿದದನು ನಾನು ನನ್ನ ಹೆಂಡತಿ ನನ್ನ ಸಣ್ಣ ಮಗ ಅರ್ಜುನ ಮನೆಯಲ್ಲಿ ಮಲಗಿಕೊಂಡೆವು. ನಂತರ ಇಂದು ಮುಂಜಾನೆ 6-00 ಗಂಟೆ ಸುಮಾರಿಗೆ ನಾನು ಎದ್ದು ಕದವನ್ನು ತೆಗೆದು ಹೊರಗಡೆ ಮಲಗಿದ್ದ ಬಸವರಾಜನನ್ನು ಎಬ್ಬಿಸಲು ಹೋದಾಗ ಬಾಯಲ್ಲಿ ಬುರುಗು ಬಂದು ನೋಡಿ ನಾನು ಗಾಭರಿಯಾಗಿ ಬಸವ, ಬಸವ ದು ಮೈಮೇಲಿನ ಚಾದರ ಎಳೆದಾಗ ಕೈ ಕಾಲು ಮುಖ ಹಚ್ಚಗಾಗಿದದು ನೋಡಿ ನನ್ನ ಹೆಂಡತಿಗೆ ಬಸವರಾಜ ಏಳುವಲ್ಲ ಎಂದಾಗ  ನನ್ನ ಹೆಂಡತಿ ಕೂಡ ಎದ್ದು ಬಂದು ನಾವು ಹೊರಳಾಡಿಸಿ ನೋಡಲು ನನ್ನ ಮಗ ಮೃತಪಟಟಿದ್ದು ತಿಳಿದು ಬಂದಿತು ನನ್ನ ಮಗ ಬಸವರಾಜನು ನಿನ್ನೆ ಮೇವು ಮಾಡಿಕೊಂಡು ಹೊತ್ತುಕೊಂಡು ಬರುವಾಗ ಯಾವದೋ ವಿಷಕಾರಕ ವು ಕಚ್ಚಿದ್ದು ಅದು ನಮಗೆ ತಿಳಿಯದೆ ಹಾಗೆ ಇದ್ದುದರಿಂದ ನನ್ನ ಮಗ ಮೃತಪಟ್ಟಿದ್ದು ಈ ಮೇಲಿನ ಹೊರತಾಗಿ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಯು.ಡಿ.ಆರ್,. ನಂ: 15/2015 ಕಲಂ: 174 ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು
4) ಹನುಮಸಾಗರ ಪೊಲೀಸ್ ಠಾಣಾ ಯು.ಡಿ.ಆರ್ ನಂ. 16/2015  ಕಲಂ 174 ಸಿ.ಆರ್.ಪಿ.ಸಿ.

ಫಿರ್ಯಾದಿ ರೇಣುಕಾ ಗಂಡ ನಾಗಪ್ಪ @ ನಾಗನಗೌಡ ಅಮರಣ್ಣವರ ಸಾ: ಬಿಳೇಕಲ್ ಇವರು ಠಾಣೆಗೆ ಬಂದು ಲಿಖಿತ ದೂರು ನೀಡಿದ್ದು ಸಾರಾಂಶವೇನೆಂದರೆ, ತನಗೆ ಈಗ್ಗೆ 13 ವರ್ಷಗಳ ಹಿಂದೆ ಬಿಳೇಕಲ್ ಗ್ರಾಮದ ನಾಗಪ್ಪರವರಿಗೆ ಮದುವೆ ಮಾಡಿಕೊಟ್ಟಿದ್ದು ತಮಗೆ ಎರಡು ಗಂಡು ಮಕ್ಕಳು 1] ವಿರೇಶ 11 ವರ್ಷ, 2] ಶಿವಾನಂದ 7 ವರ್ಷ, ಹೀಗೆ ಎರಡು ಮಕ್ಕಳಿದ್ದು ಈತನು ಮದುವೆಯಾದಗಿನಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು ಇದರಿಂದಾಗಿ ಫಿರ್ಯಾದಿದಾರರು ತನ್ನ ತವರು ಮನೆಯಾದ ಯರಗೇರ ಗ್ರಾಮದಲ್ಲಿ ಇದ್ದು ಫೀರ್ಯಾದಿ ಗಂಡ ನಾಗಪ್ಪನು ಕುಷ್ಟಗಿಯಲ್ಲಿ ಜೆ.ಇ. ಹತ್ತಿರ ಕೆಲಸ ಮಾಡಿಕೊಂಡು ಬಂದು ಹೋಗಿ ಮಾಡುತ್ತಿದ್ದು ಇತ್ತೀಚೆಗೆ ಗ್ರಾಮ ಪಂಚಾಯತ ಚುನಾವಣಯಾದ ನಂತರ ಹಗಲು ರಾತ್ರಿ ಕುಡಿದು ಫಿರ್ಯಾದಿ ಸಂಗಡ ಪೇಚಾಡುವುದು ಹೊಡೆಬಡೆ ಮಾಡುವುದು ಈ  ಬಗ್ಗೆ ಊರಲ್ಲಿ ಹಿರಿಯರು ಹಾಗು ಫಿರ್ಯಾದಿ ಬುದ್ದಿವಾದ ಹೇಳಿದ್ದು ಮತ್ತು ಇಂದು ದಿನಾಂಕ: 27-07-2015 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಕಂಠ ಪೂರ್ತಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ಮೃತ ನಾಗಪ್ಪನು ತಮ್ಮೂರ ಬಿಳೇಕಲಗೆ ಹೋಗುತ್ತೇನೆ ಎಂದು ಹೆಂಡತಿ ಸಂಗಡ ಪೇಚಾಡಿ ಪಾಸ್ಟಿಕ್ ಪ್ಯಾಂಟ ಶರ್ಟ ಇಟ್ಟುಕೊಂಡು ಹೋಗುವಾಗ ಫಿರ್ಯಾದಿ ಎಷ್ಟೇ ಬೇಡ ಅಂತಾ ಕೇಳಿಕೊಂಡರು ಆಕೆಯನ್ನು ತಳ್ಳಿ ನಡೆದುಕೊಂಡು ಗೊರೆಬಾಳ ದಾರಿಯನ್ನು ಹಿಡಿದುಕೊಂಡು ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಬಾಲಪ್ಪ ಪೂಜಾರ ಈತನು ಹೊಲದಿಂದ ಊರಲ್ಲಿ ಬಂದು ಹಿರಿಯರಿಗೆ ನಾಗಪ್ಪ ಅಮರಣ್ಣವರ ವೆಂಕಟಪತಿ ಈಳಗೇರ ರವರ ಹೊಲದ ಬದುವಿಗೆ ಗಿಡಕ್ಕೆ ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ಹೇಳುವುದನ್ನು ಕೇಳಿ ಫಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜವಿದ್ದು ನಾಗಪ್ಪನು ಕುಡಿದ ಅಮಲಿನಲ್ಲಿ ತನ್ನ ಪ್ಯಾಂಟನಿಂದ ಗಿಡದ ಟೊಂಗೆಗೆ ನೇಣು ಮೃತಪಟ್ಟಿದ್ದು ಈ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

Monday, July 27, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 190/2015  ಕಲಂ 87 Karnataka Police Act.
ದಿನಾಂಕ 26.07.2015 ರಂದು ಸಾಯಂಕಾಲ 5:50 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಚಿಕ್ಕಸೂಳಿಕೇರಿ ಗ್ರಾಮದ ಗುಡ್ಡದ ಸಮೀಪ 11 ಜನ ಆರೋಪಿತರು ಸಾರ್ವಜನಿಕ ಸ್ಥಳೆದಲ್ಲಿ ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಎಸ್ಪೇಟ್ ಜೂಜಾಟದಲ್ಲಿ  ತೊಡಗಿದ್ದಾಗ ಶ್ರೀ. ಮೋಹನ ಪ್ರಸಾದ ಸಿ.ಪಿ.ಐ. ಕೊಪ್ಪಳ ಗ್ರಾಮೀಣ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 21,350=00 ರೂ ,ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 96/2015  ಕಲಂ 32, 34 Karnataka Excise Act.
ದಿನಾಂಕ:26-07-2015 ರಂದು 10-50 ಪಿಎಂಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ, ಪಿ.ಎಸ್ಐ ಕುಕನೂರ ಠಾಣೆರವರು ಆರೋಪಿತರನ್ನು ಹಾಜರಪಡಿಸಿ, ತಮ್ಮ ವರದಿಯೊಂದಿಗೆ ದಾಳಿ ಪಂಚನಾಮೆ ಲಗತ್ತಿಸಿ, ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ:26-07-2015 ರಂದು 8-40 ಪಿ.ಎಂ.ಕ್ಕೆ ತಾವು ಠಾಣೆಯಲ್ಲಿದ್ದಾಗ ಬಿನ್ನಾಳ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿಪಿಐ ಯಲಬುರ್ಗಾರವರ ಮಾರ್ಗದರ್ಶನದಲ್ಲಿ  ಕೂಡಲೇ ಇಬ್ಬರಿಗೆ ಪಂಚರಿಗೆ ಬರಮಾಡಿಕೊಂಡು ಅವರನ್ನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-122, ಪಿಸಿ-370,418,419, ಮಪಿಸಿ-29 ಹಾಗೂ ಜೀಪ ಚಾಲಕ ಎ.ಪಿಸಿ 192 ಇವರೊಂದಿಗೆ ಸರಕಾರಿ ಜೀಪ ನಂ: ಕೆ.ಎ.37/ಜಿ-427 ನೇದ್ದರಲ್ಲಿ ಕುಳಿತು ಠಾಣೆಯಿಂದ 8-50 ಪಿ.ಎಂ.ಕ್ಕೆ ಹೊರಟು 9-10 ಪಿ.ಎಂ.ಕ್ಕೆ ಬಿನ್ನಾಳ ಗ್ರಾಮ ತಲುಪಿ, ದುರಗಮ್ಮನ ಗುಡಿಯ ಸಮೀಪ ಮರೆಗೆ ಜೀಪ್ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು ಗುಡಿಯ ಗೋಡೆಯ ಮರೆಗೆ ನಿಂತು ನೋಡಲು ನಾಲ್ಕು ಜನರು ಒಂದು ಪ್ಲಾಸ್ಟಿಕ ಚೀಲದಲ್ಲಿಂದ ಸಾರ್ವಜನಿಕರಿಗೆ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುತ್ತಿದ್ದುದನ್ನು ನೋಡಿ ಹಾಜರಿದ್ದ ಪಂಚರ ಸಮಕ್ಷಮ ಪಿ.ಎಸ್.ಐ ರವರು & ಸಿಬ್ಬಂದಿಯವರು  ಸೇರಿ ಮದ್ಯದ ರಟ್ಟಿನ ಪಾಕೀಟ್ ಗಳನ್ನು ಮಾರಾಟ ಮಾಡುವವರಿಗೆ ಮುತ್ತಿಗೆ ಹಾಕಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಿ ಅವರ ಹತ್ತಿರ ಇದ್ದ ಚೀಲವನ್ನು ಪರಿಶಿಲಿಸಲು ಸದರ ಚೀಲದಲ್ಲಿ  90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಇದ್ದು,  ಒಂದಕ್ಕೆ  29.40 ರೂ. ಅಂತಾ ಇದ್ದು ಎಲ್ಲವುಗಳನ್ನು ಎಣಿಸಲಾಗಿ 90 ಎಂ.ಎಲ್.ದ ಹೈವಾರ್ಡ್ಸ ಚಿಯರ್ಸ ವಿಸ್ಕಿ ರಟ್ಟಿನ ಪಾಕೀಟ್ ಗಳು ಒಟ್ಟು 98 ಇದ್ದು ಅವುಗಳ ಒಟ್ಟು 12,881-00 ರೂಪಾಯಿ ಬೆಲೆ ಆಗುತ್ತದೆ. ಸದರ ವಿಸ್ಕಿ ರಟ್ಟಿನ ಪಾಕೀಟ್ ಗಳನ್ನು ಹೊಂದಿದ ಬಗ್ಗೆ ವಿಚಾರಿಸಿದ್ದು ಅವುಗಳ ಬಗ್ಗೆ ಯಾವ ಅದಿಕೃತ.ದಾಖಲಾತಿ ಇಲ್ಲ & ಅವುಗಳನ್ನು ಮುಚ್ಚುಮರೆಯಿಂದ ಮಾರಾಟ ಮಾಡಲು ತಂದಿದ್ದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪಿತ ಮಹಾಂತೇಶ ಇವನ ಅಂಗಜಡ್ತಿಯಿಂದ ಮದ್ಯ ಮಾರಾಟದ ಹಣ 200-00 ರೂ. ಗಳನ್ನು ಜಪ್ತ ಪಡಿಸಿಕೊಂಡಿದ್ದು ಈ ಬಗ್ಗೆ ಇಂದು 9-20 ಪಿಎಂದಿಂದ 10-20 ಪಿಎಂದವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರನ್ನು ಮತ್ತು ದಾಳಿಕಾಲಕ್ಕೆ ಸಿಕ್ಕ ಮುದ್ದೆಮಾಲಿನೊಂದಿಗೆ ವರದಿ ಹಾಜರಪಡಿಸಿದ್ದು, ಮುಂದಿನ ಕಾನೂನು ಕ್ರಮಜರುಗಿಸಲು ತಿಳಿಸಿದೆ ಅಂತಾ ಮುಂತಾಗಿ ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3) ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 95/2015  ಕಲಂ 279, 337 ಐ.ಪಿ.ಸಿ:.

ದಿನಾಂಕ:26-07-2015 ರಂದು 09.00 ಪಿಎಂ.ಕ್ಕೆ ಪಿರ್ಯಾಧಿದಾರರು ಠಾಣೆಗೆ ಬಂದು ಒಂದು ಗಣಕೀಕರಣ ಮಾಡಿಸಿದ ವರದಿಯನ್ನು ಹಾಜರಪಡಸಿದ್ದು ಅದರ ಸಾರಾಂಶವೇನೆಂದರೆ, ನಾನು ಮತ್ತು ನಮ್ಮ ಮಾಲೀಕರೊಂದಿಗೆ ಆರೋಪಿತನು ಸೇರಿಕೊಂಡು ಹುಬ್ಬಳ್ಳಿಗೆ ಟ್ರಾನ್ಸ ಪೋರ್ಟ ಕೆಲಸದ ನಿಮಿತ್ಯ ಕಾರ ನಂ. KA 25 MA 8674 ರಲ್ಲಿ ಹೋಗಿ ದಿನಾಂಕ:26-07-2015 ರಂದು ಸಂಜೆ 04.00 ಗಂಟೆಗೆ ಹುಬ್ಬಳ್ಳಿಯಿಂದ ವಾಪಾಸ್ಸು ಅದೇ ಕಾರಿನಲ್ಲಿ ಬರುವಾಗ ಸಂಜೆ 07.15 ಗಂಟೆ ಸುಮಾರಿಗೆ ಬನ್ನಿಕೊಪ್ಪ ಸೀಮಾದಲ್ಲಿ ಪೆಟ್ರೋಲ್ ಬಂಕ್ ಸಮೀಪ ನಡೆಸುತ್ತಿದ್ದ ಕಾರನ್ನು ಗದಗ ಕಡೆಯಿಂದ ಕೊಪ್ಪಳ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುವಾಗ ಕಾರಿನ ಮುಂದಿನ ಎಡ ಚಕ್ರದ ಟೈರ್ ಬಸ್ಟ್ ಆಗಿ ನಿಯಂತ್ರಣ ತಪ್ಪಿ NH 63 ರಸ್ತೆಯ ಬಲಗಡೆಗೆ ಪಲ್ಟಿಯಾಗಿ ಬಿದ್ದಿದ್ದರಿಂದ ಟ್ರಾನ್ಸ ಪೋರ್ಟ ಮಾಲೀಕರಿಗೆ ಮತ್ತು ಆರೋಪಿತನಿಗೆ ಸಾದಾ ಗಾಯಗಳಾಗಿದ್ದು, ಯಾವುದೋ ಕಾರ ಚಾಲಕರು ಚಿಕಿತ್ಸೆಗೆ ತಳಕಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು  ಕಾರಣ ಸದರ ಕಾರಿನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಇದ್ದ ವರದಿಯನ್ವಯ ಠಾಣಾ ಗುನ್ನೆ ನಂ: 95/2015 ಕಲಂ: 279. 337  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು. 

Sunday, July 26, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 88/2015  ಕಲಂ 279, 337, 338 ಐ.ಪಿ.ಸಿ:
ದಿನಾಂಕ: 25-07-2015 ರಂದು ಮಧ್ಯಾನ್ಹ 2-30 ಗಂಟೆಯ ಸುಮಾರಿಗೆ ಆರೋಪಿತನು ತಾನು ಚಲಾಯಿಸುತ್ತೀದ್ದ ಮೋಟಾರ ಸೈಕಲ ನಂ: ಕೆ.ಎ-34/ಆರ್-449 ನೇದ್ದನ್ನು ಯಲಬುರ್ಗಾ-ತುಮ್ಮರಗುದ್ದಿ ರಸ್ತೆಯ ಮೇಲೆ ಯಲಬುರ್ಗಾ ಕಡೆಯಿಂದ ತುಮ್ಮರಗುದ್ದಿ ಗ್ರಾಮದ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ತುಮ್ಮರಗುದ್ದಿ ಸೀಮಾದಲ್ಲಿ ಬರುವ ಭೀಮಪ್ಪ ಮುಶಿಗೇರಿ ಇವರ ಹೊಲದ ಹತ್ತಿರ ನಡೆಯಿಸಿಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಿಯಂತ್ರಣ ತಪ್ಪಿ (ಸ್ಕೀಡ ಆಗಿ) ಬಿದ್ದಿದ್ದರಿಂದ ಸದ್ರಿಯವನ ಎಡಗಣ್ಣಿಗೆ ಭಾರಿ ಸ್ವರೂಪದ ಗಾಯವಾಗಿದ್ದು, ತಲೆಗೆ ಒಳಪೆಟ್ಟಾಗಿದ್ದು, ಎಡಗೈ ಮುಂಗೈ ಮೇಲೆ ಮತ್ತು ಎಡಗಾಲ ಮೊಣಕಾಲ ಚಿಪ್ಪಿನ ಹತ್ತಿರ ತೆರಚಿದ ನಮೂನೆಯ ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 163/2015  ಕಲಂ 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 120 (ಬಿ) 504, 506 ಸಹಿತ 34 ಐ.ಪಿ.ಸಿ.
ದಿನಾಂಕ 25-07-2015 ರಂದು ಮಧ್ಯಾಹ್ನ 3-00 ಗಂಟೆಗೆ ಶ್ರೀ  ಮಂಜುನಾಥ ಸ್ವಾಮಿ ತಂದೆ ಕಾಶಿನಾಥ ಸ್ವಾಮಿ ವಯಸ್ಸು 30 ವರ್ಷ ಜಾ: ಜಂಗಮ ಉ: ವ್ಯವಸಾಯ ಮತ್ತು ವ್ಯಾಪಾರ ಸಾ: ಶ್ರೀ ವೀರಭದ್ರೇಶ್ವರ ದೇವಸ್ಥಾನ ಮಾರ್ಕೇಟ ರಸ್ತೆ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ  ನೀಡಿದ್ದು ಅದರ ಸಾರಂಶವೇನೆಂದರೆ,ಆರೋಪಿತರಾದ ಸಂತೋಷ ಮತ್ತು ಸುಭಾಸ ಸಾದರ ರವರು ಶ್ರೀ ರಾಘವೇಂದ್ರ ಫೈನಾನ್ಸಿಯರ್ಸ್ (ರಿ) ಗಂಗಾವತಿ ಹೆಸರಿನಲ್ಲಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಫಿರ್ಯಾದಿದಾರರು ದಿನಾಂಕ  11-02-2015 ರಂದು ಸದರಿ ಆರೋಪಿತರ ಹತ್ತಿರ ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದು ಇದಕ್ಕೆ ಆಧಾರವಾಗಿ ಖಾಲಿ ಪ್ರಾಮಿಸರಿ ನೋಟ್ ಮೇಲೆ ಸಹಿ ಮಾಡಿಕೊಟ್ಟಿದ್ದು, ಸದರಿ ಸಾಲದ ಹಣಕ್ಕೆ ಸಂಬಂಧಿಸಿದಂತೆ ಈಗಾಗಲೇ 34,200-00 ರೂ. ಗಳನ್ನು ಮರುಪಾವತಿ ಮಾಡಿದ್ದು ಇನ್ನು ರೂ. 65,800-00 ಗಳನ್ನು ಮರುಪಾವತಿಸುವುದು ಬಾಕಿ ಇದ್ದು, ಆರೋಪಿತರು ಒಳಸಂಚು ನಡೆಸಿ ಆರೋಪಿ ನಂ. 01 & 02 ನೇದ್ದವರು ಫಿರ್ಯಾದಿಯಿಂದ ಪಡೆದುಕೊಂಡಿರುವ ಸಹಿ ಮಾಡಿದ ಖಾಲಿ ಪ್ರಾಮಿಸರಿ ನೋಟ್ ಮೇಲೆ ಆರೋಪಿ ನಂ. 03 ಶೇಖರಗೌಡ ಇತನಿಗೆ ಫಿರ್ಯಾದಿಯು ರೂ. 7,75,000-00 ಗಳನ್ನು ಕೊಡಬೇಕಾಗಿರುತ್ತದೆಂದು ಬರೆದುಕೊಂಡು ಸದರಿ ಹಣಕ್ಕಾಗಿ ವಕೀಲರ ಮುಖಾಂತರ ನೋಟಿಸ್  ನೀಡಿದ್ದು ಅಲ್ಲದೇ ಸದರಿ ಪ್ರಾಮಿಸರಿ ನೋಟ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ.  ಹಾಗೂ ದಿನಾಂಕ 30-06-2015 ರಂದು  ಆರೋಪಿ ಸಂತೋಷ ಮತ್ತು ಸುಭಾಷ ರವರು ಕೋರ್ಟ ಬೇಲಿಫ್ ರವರೊಂದಿಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿರುವ ಫಿರ್ಯಾದಿದಾರರ ಮನೆಯ ಹತ್ತಿರ ಹೋಗಿ ಕೋರ್ಟ ನೋಟಿಸನ್ನು ಜಾರಿ ಮಾಡುವ ಸಲುವಾಗಿ ಫಿರ್ಯಾದಿಯನ್ನು ಕರೆದಿದ್ದು ಫಿರ್ಯಾದಿದಾರರ ಕುಟುಂಬದವರು ಫಿರ್ಯಾದಿಯು ಮನೆಯಲ್ಲಿ ಇಲ್ಲಾ ಅಂತಾ ಹೇಳಿದ್ದಕ್ಕೆ ಆರೋಪಿತರಿಬ್ಬರು ಫಿರ್ಯಾದಿದಾರರ ಮನೆಯ ಹತ್ತಿರ ನಿಂತುಕೊಂಡು ಅವಾಚ್ಯ ಶಬ್ದಗಳಿಂದ  ಆ ಸೂಳೇ ಮಗ ಎಲ್ಲಿದ್ದಾನೆ,  ಎಷ್ಟು ದಿವಸ ತಪ್ಪಿಸಿಕೊಳ್ಳುತ್ತಾನೆ, ನಾವು ನೋಡುತ್ತೇನೆ ಅವನು ಹೊರಗೆ ಬಂದರೆ ಪ್ರಾಣವನ್ನು ತೆಗೆಯುತ್ತೇವೆಂದು ಬೆದರಿಕೆ ಹಾಕಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 163/15 ಕಲಂ. 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಹಾಗೂ ಕಲಂ. 120 (ಬಿ), 504, 506 ಸಹಿತ 34  ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 167/2015  ಕಲಂ 78(3) Karnataka Police Act.
ದಿನಾಂಕ 25-07-2015 ರಂದು ಪಿರ್ಯಾದುದಾರ ಶ್ರೀ. ಜಯಪ್ರಕಾಶ ಪಿ.ಎಸ್.ಐ. ಮುನಿರಾಬಾದ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಾಹಿತಿ ಇದ್ದ ಪ್ರಕಾರ ಹಿಟ್ನಾಳ ಗ್ರಾಮದಲ್ಲಿ ಕೆನಾಲ  ಹತ್ತಿರ ಹೋಗಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತ ಇಮ್ರಾನನ್ನು ಪಂಚರೊಂದಿಗೆ ದಾಳಿಮಾಡಿ ಹಿಡಿದು ಆತನಿಂದ ಒಂದು ಬಾಲ ಪೆನ್ನು, ಒಂದು ಮಟಕಾ ಪಟ್ಟಿ ಮತ್ತು ಜೂಜಾಟದ ನಗದು ಹಣ 1370-00 ರೂ ಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿದ್ದು ಸದರಿ ಜಪ್ತು ಮಾಡಿದ ಮುದ್ದೆಮಾಲು, ಆರೋಪಿತನಿಗೆ ಮತ್ತು ಮೂಲ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4) ಅಳವಂಡಿ ಪೊಲೀಸ್ ಠಾಣಾ ಗುನ್ನೆ ನಂ. 79/2015  ಕಲಂ 87 Karnataka Police Act.               
ಫಿರ್ಯಾಧಿದಾರರಾದ ಶ್ರೀ ಗಣೇಶ. ಸಿ. ಪಿ.ಎಸ್.ಐ. ಅಳವಂಡಿ ರವರು, ಸಿಬ್ಬಂದಿಯವರು ಮತ್ತು ಪಂಚರು ಕರೆದುಕೊಂಡು ಇಂದು ದಿನಾಂಕ: 25-07-2015 ರಂದು ಸಾಯಂಕಾಲ 5-30 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಬೆಟಗೇರಿ ಗ್ರಾಮದ ಕೆರೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 4 ಜನರು ಸಿಕ್ಕಿದ್ದು, ಸಿಕ್ಕವರಿಂದ ನಗದು ಹಣ ರೂ. 4300=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ ಒಂದು ಪ್ಲಾಸ್ಟಿಕ್ ಕವರನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು, ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕುಷ್ಟಗಿ ಪೊಲೀಸ್ ಠಾಣಾ ಗುನ್ನೆ ನಂ. 122/2015  ಕಲಂ 379 ಐ.ಪಿ.ಸಿ:

ದಿನಾಂಕ 25-07-2015 ರಂದು ರಾತ್ರಿ 08-00 ಗಂಟೆಗೆ ಪಿರ್ಯಾದಿದರರಾದ ಶರಣಪ್ಪ ತಂದೆ ಮಲ್ಲಪ್ಪ ಬಾದವಾಡಗಿ ವಯಾ 45ವರ್ಷ ಜಾ:ಲಿಂಗಾಯತ ಉ: ವಿ.ಅರ್.ಎಲ್. ಕಂಪನಿಯಲ್ಲಿ ಮ್ಯಾನೇಜರ ಕೆಲಸ ಸಾ:ಗಂಗಾವತಿ ರವರು ಠಾಣೆಗೆ ಬಂದು ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು,  ಸಾರಾಂಶವೆನೆಂದರೆ, ತಮ್ಮ ಕಂಪನಿಯ ವಿ.ಆರ್.ಎಲ್. ಟ್ರಾನ್ಸ್ ಪೋರ್ಟ ಲಾರಿ ನಂ ಕೆಎ 25/ಸಿ-7353 ನೇದ್ದರಲ್ಲಿ ಸೂರತ್ ದಿಂದ ಅನಂತಪೂರಕ್ಕೆ ವಾಯ ಸೊಲ್ಲಾಪೂರದಿಂದ ಹೊರಟಿದ್ದು,  ಈ ಲಾರಿಯಲ್ಲಿ ಚಾಲಕರುಗಳಾದ ಚಿದಾನಂದಪ್ಪ ತಂದೆ ಸಿದ್ದಪ್ಪ ಮುದಿಯಜ್ಜನವರ  ಸಾ: ಮೇವುಂಡಿ ಮತ್ತು ಮಹಾವೀರ ತಂದೆ ಬಸವರಾಜ ಜೈನ್ ಸಾ: ಪಟ್ಟಿಹಾಳ ತಾ: ಬೈಲಹೊಂಗಲ ಇಬ್ಬರೂ ಕೂಡಿ ದಿನಾಂಕ: 22-07-2015 ರಂದು ಸೂರತ್ ದಿಂದ ಸೊಲ್ಲಾಪೂರಕ್ಕೆ ಬಂದು ಅಲ್ಲಿಂದ ಸೊಲ್ಲಾಪೂರದಲ್ಲಿ ಲೋಡಿಂಗ್ – ಅನ್ ಲೋಡಿಂಗ್ ಮಾಡಿಕೊಂಡು ಅದೇ ದಿನ ಮಧ್ಯಾಹ್ಹ 1-56 ಗಂಟೆಗೆ ಬಿಟ್ಟು ಸಂಜೆ 6-30 ಗಂಟೆಗೆ ಜಳಕಿ ಚೆಕ್ ಪೋಸ್ಟ್ ಗೆ ಬಂದು ಅಲ್ಲಿ ಮಾಲನ್ನು ತಪಾಸಣೆ ಮಾಡಿಸಿ ಅಲ್ಲಿಂದ ಅದೇ ರಾತ್ರಿ 9-12 ಕ್ಕೆ ಬಿಜಾಪೂರ ಟೋಲ್ ಗೇಟ್ ನ್ನು  ತಲುಪಿ ಬಿಜಾಪೂರ ಟೋಲ್ ಗೇಟ್ ನಿಂದ ಹೊರಟು ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಂದು ಲಾರಿಯನ್ನು ಡಾಬಾದಲ್ಲಿ ನಿಲ್ಲಿಸಿ ಇಬ್ಬರೂ ಕೂಡಿ ಊಟ ವಗೈರೆ ಮಾಡಿಕೊಂಡು ಅಲ್ಲಿ ಸುಮಾರು 1 ತಾಸು ನಿಲ್ಲಿಸಿಕೊಂಡು ನಂತರ ನೇರವಾಗಿ ಎಲ್ಲಿಯೂ ನಿಲ್ಲಿಸದೇ ದಿನಾಂಕ: 24-07-2015 ರಂದು ಕುಷ್ಠಗಿ ಟೋಲ್ ಗೇಟ್ ದಾಟಿ ಬಂದು ಲಾರಿಯನ್ನು ನಿಲ್ಲಿಸಿ ಚಿದಾನಂದಪ್ಪ ಮೂತ್ರ ಮಾಡಿ ಲಾರಿಯ ತಾಡಪಲ್ಲನ್ನು ನೋಡಿದಾಗ ಅದರಲ್ಲಿ ತಾಡಪಲ್ಲ ಕಟ್ಟು ಮಾಡಿದ್ದನ್ನು ನೋಡಿ ಬೆಳಗಿನ 2-00 ಗಂಟೆಯ ಸುಮಾರಿಗೆ ಫಿರ್ಯಾಧಿದಾರರಿಗೆ  ವಿಷಯನ್ನು ಪೋನ್ ಮಾಡಿ ತಿಳಿಸಿದ್ದು ಆಗ ಫಿರ್ಯಾಧಿದಾರರು ಬಂದು ನೋಡಿದ್ದು ತಮ್ಮ ತಾಡಪಲ್ಲ ಲಾರಿಯಲ್ಲಿಯ 11 ಪಾರ್ಸಲ್ ಗಳು ಬೇಲ್ ಮತ್ತು ಬಾಕ್ಸ್ ಗಳು ಕಳುವಾಗಿದ್ದು ಅವುಗಳ ಒಟ್ಟು ಕಿಮ್ಮತ್ತು 2,13,274=00 ರೂ ಬೆಲೆಬಾಳುವದನ್ನು ಯಾರೋ ಕಳ್ಳರು ಬಿಜಾಪೂರ ಟೋಲ್  ಗೇಟ್ ದಾಟಿ ಬಂದು ಒಂದು ಡಾಬಾದ ಹತ್ತಿರ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿಯಿಂದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

Saturday, July 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 185/2015  ಕಲಂ 302, 201 ಐ.ಪಿ.ಸಿ:
ದಿ:24-07-2015 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರರಾದ ಹನುಮಪ್ಪ ಹಿರೇಮನಿ ಸಾ: ಕವಳಕೇರಿ, ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನಮ್ಮ ಅಳಿಯ ಬಸವರಾಜ ಇವನು ನಿನ್ನೆ ದಿನಾಂಕ: 23-07-2015 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನನ್ನ ಮಗಳು ಲಲಿತಮ್ಮ @ ರತ್ನಮ್ಮಳಿಗೆ ಕೂಲಿ ಕೆಲಸಕ್ಕೆ ಹೋಗಬೇಡ, ಮನೆಯಲ್ಲಿ ಅಡುಗೆ ಮಾಡಿಕೊಂಡಿರು ಅಂತ ಹೇಳಿದ್ದಕ್ಕೆ, ನನ್ನ ಮಗಳು ಕೂಲಿ ಹೋಗುತ್ತಿದ್ದುದನ್ನು ನೋಡಿ, ನನ್ನ ಅಳಿಯ ಅವಳಿಗೆ ಸಂಶಯ ಮಾಡಿ ಕೈಯಿಂದ ಅವಳ ಮುಖಕ್ಕೆ ಮತ್ತು ಬೆನ್ನಿಗೆ ಮೇಲಿಂದ ಮೇಲೆ ಜೋರಾಗಿ ಸಾಯುವಂತೆ ಗುದ್ದಿದ್ದರಿಂದ ಅವಳು ಮೂರ್ಚೇ ಹೋಗಿದ್ದು, ನಂತರ ಅವಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆ ಕೊಪ್ಪಳಕ್ಕೆ ಕರೆದುಕೊಂಡು ಹೋದಾಗ, ಉಪಚಾರ ಕಾಲಕ್ಕೆ ಮೃತಪಟ್ಟಿದ್ದು, ಸದರ ನನ್ನ ಅಳಿಯ ನನ್ನ ಮಗಳಿಗೆ ಕೊಲೆ ಮಾಡಿ, ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ದವಾಖಾನೆಯಲ್ಲಿ ಅವಳಿಗೆ ಹಾರ್ಟ ಆಗಿದೆ ಅಂತ ಸುಳ್ಳು ಹೇಳಿ, ಶವವನ್ನು ಯಾವುದೋ ಒಂದು ಆಟೋದಲ್ಲೆ ಊರಿಗೆ ತೆಗೆದುಕೊಂಡು ಹೋಗಿ ಕಿಚ್ಚು ಮಾಡಲು ಯತ್ನಿಸಿದ್ದು ಇರುತ್ತದೆ. ಕಾರಣ ನನ್ನ ಮಗಳನ್ನು ಕೊಲೆ ಮಾಡಿದ ಬಸವರಾಜ ತಂದಿ ಹನಮಪ್ಪ ಮ್ಯಾಗಳಮನಿ, ಸಾ: ನರೆಗಲ್ ಇವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 162/2015  ಕಲಂ 3 ಮತ್ತು 4 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಮತ್ತು ಹಾಗೂ ಕಲಂ 420 ಐ.ಪಿ.ಸಿ :.
ದಿನಾಂಕ 24-07-2015 ರಂದು 19-45 ಗಂಟೆಗೆ ಮಾನ್ಯ ಪೊಲೀಸ್ ಉಪವಿಭಾಗಾಧಿಕಾರಿಗಳು, ಗಂಗಾವತಿ ರವರ ಕಾರ್ಯಾಲಯದಿಂದ  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 110/15 ಕಲಂ. 03 & 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ 420 ಐ.ಪಿ.ಸಿ. ನೇದ್ದು ಹದ್ದಿ ಪ್ರಯುಕ್ತ  ಗಂಗಾವತಿ ನಗರ ಠಾಣೆಗೆ ವರ್ಗಾವಣೆಗೊಂಡು ಬಂದಿದ್ದು ಇರುತ್ತದೆ.  ಸದರಿ ಫಿರ್ಯಾದಿಯನ್ನು ದಿನಾಂಕ. 15-07-2015 ರಂದು ರಾತ್ರಿ 9-45 ಗಂಟೆಗೆ ಶ್ರೀ ಬಿಂದು ಮಾಧವರಾವ್ ತಂದೆ ತಿರುಮಲರಾವ್ ದೇಸಾಯಿ ವಯಾ 66 ವರ್ಷ ಉ.ನಿವೃತ್ತ ನೌಕರ ಸಾ.ಕೃಷ್ಣಗಿರಿ ಕಾಲೋನಿ ಕುಷ್ಟಗಿ ರವರು ಕುಷ್ಟಗಿ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ 01-08-2009 ರಂದು ಗಂಗಾವತಿಯ ಅಜಯ್ ಫೈನಾನ್ಸ್ ನ ಶ್ರೀ ಮಲ್ಲಿಕಾರ್ಜುನ ಬಿಚ್ಚಾಲಿ ರವರ ಕಡೆಯಿಂದ 25 ಲಕ್ಷ ರೂಪಾಯಿ ಸಾಲ ರೂಪದಲ್ಲಿ ಪಡೆದು ಅಡವಾಗಿ ಗಂಗಾವತಿಯ ಪಂಪಾನಗರದಲ್ಲಿರು ತಮ್ಮ ಮನೆ ನಂ. 1-1-158/ಎ ನೇದ್ದನ್ನು ರಜಿಸ್ಟರ್ ಮಾಡಿಕೊಟ್ಟಿದ್ದು ಸದರಿ ವೇಳೆಯಲ್ಲಿ ಸಾಲ ತೀರಿದ ನಂತರ ಮನೆಯನ್ನು ವಾಪಸ್ ಬಿಟ್ಟುಕೊಡುವಂತೆ ಕರಾರು ಪತ್ರವನ್ನು ಮಾಡಿದ್ದು, ಸದರಿ ಮಲ್ಲಿಕಾರ್ಜುನ ಬಿಚ್ಚಾಲಿ ರವರು ಕರಾರನ್ನು ತಮ್ಮ ಪತ್ನಿಯಾದ ಶ್ರೀಮತಿ ಸುಜಾತಾ ಬಿಚ್ಚಾಲಿ ರವರ ಹೆಸರಿನಲ್ಲಿ ಮಾಡಿಕೊಂಡಿದ್ದು ಇರುತ್ತದೆ, ಸದರಿ ವ್ಯವಹಾರವು ಶ್ರೀ ರಾಮಕೃಷ್ಣ ಜಾಗೀರದಾರ ರವರ ಮುಖಾಂತರ ನಡೆದಿರುತ್ತದೆ, ನಂತರ ಸದರಿ ಮಲ್ಲಿಕಾರ್ಜುನ ಬಿಚ್ಚಾಲಿ ರವರಿಗೆ ಕಂತುಗಳ ರೂಪದಲ್ಲಿ ಹಣ ಪಾವತಿಸಿದ್ದು, ಆದರೆ ಸದರಿಯವರು ಈಗಾಗಲೇ ಫಿರ್ಯಾದಿದಾರರಿಂದ ಖಾಲಿ ಕಾಗದ ಪತ್ರಗಳ ಮೇಲೆ ಸಹಿ ಪಡೆದಿದ್ದರ ಆಧಾರದ ಮೇಲಿಂದ ಸಾಲವನ್ನು ಒಟ್ಟು 70 ಲಕ್ಷ ರೂಪಾಯಿ ಕೊಡಬೇಕಾಗಿದೆ ಅಂತಾ ಹೇಳಿ ಸನ್ 2013 ನೇ ಸಾಲಿನಲ್ಲಿ ಸದರಿಯವರು ಫಿರ್ಯಾದಿದಾರರ ಮನೆಗೆ ಬಂದು ಜಗಳ ಮಾಡಿ ಮನೆ ಖಾಲಿ ಮಾಡಿಸಿದ್ದುಹಾಗೂ ಸದರಿಯವರು ಫಿರ್ಯಾದಿದಾರರಿಗೆ ಕರಾರು ಪತ್ರದಲ್ಲಿ ಇರುವಂತೆ ಪ್ರತಿ ತಿಂಗಳಿಗೆ ನೂರು ರೂಪಾಯಿಗೆ 2-00 ರೂ. ಗಳಂತೆ ಬಡ್ಡಿ ವಿಧಿಸಿದ್ದು ಅಲ್ಲದೇ ಹಣ ಲೇವಾದೇವಿಯಲ್ಲಿಇ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಗಂಗಾವತಿ  ನಗರ ಪೊಲೀಸ್ ಠಾಣೆ ಗುನ್ನೆ ನಂ. 162/15 ಕಲಂ. 03 ಮತ್ತು 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯ 2004 ಹಾಗೂ ಕಲಂ. 420 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 186/2015  ಕಲಂ 279, 338 ಐ.ಪಿ.ಸಿ:
ದಿ:24-07-2015 ರಂದು ಸಂಜೆ 7-00 ಗಂಟೆಗೆ ಶ್ರೀ ಶರಣಪ್ಪ. ಹೆಚ್.ಸಿ-59 ರವರು ಗದಗ-ಬೆಟಗೇರಿ ಜರ್ಮನ್ ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ, ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಗಂಗಾಧರ ಹಳ್ಳಿ ತಳವಾರ ಸಾ: ಹಿರೇವ್ಡಡಟ್ಟಿ. ತಾ: ಮುಂಡರಗಿ ಇವರು ನೀಡಿದ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡು ಬಂದು ರಾತ್ರಿ 10-00 ಗಂಟೆಗೆ ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ದಿ:23-07-2015 ರಂದು ಸಾಯಂಕಾಲ 4-00 ಗಂಟೆಗೆ ಫಿರ್ಯಾದಿದಾರರ ಮಾವ ಫಕೀರಗೌಡ ತನು ತನ್ನ ಮೋಟಾರ ಸೈಕಲ್ ನಂ: ಕೆಎ-05/ಇಸಿ-9066 ನೇದ್ದನ್ನು ಕಿನ್ನಾಳ ದಿಂದಾ ಬುಡಶೆಟ್ನಾಳ ಗ್ರಾಮಕ್ಕೆ ಓಡಿಸಿಕೊಂಡು ಹೋಗುವಾಗ ಮಾರ್ಗದ ರಪ್ಪ ಬಸ್ಸೆಟ್ಟೆರ್ ಇವರ ಹೊಲದ ಹತ್ತಿರ ಅತಿವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ತನ್ನ ವಾಹನವನ್ನು ನಿಯಂತ್ರಿಸದೇ ಸ್ಕಿಡ್ ಮಾಡಿದ್ದರಿಂದ ವಾಹನ ಸಮೇತ ಬಿದ್ದು ಈ ಅಪಘಾತದಲ್ಲಿ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ನಮ್ಮ ಮಾವ ಫಕೀರಗೌಡ ವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

 
Will Smith Visitors
Since 01/02/2008