Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 31, 2015

1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 279/2015 ಕಲಂ. 78(3) Karnataka Police Act.
ದಿನಾಂಕ 30-12-2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಮುನಿರಾಬಾದ ಠಾಣಾ ವ್ಯಾಪ್ತಿಯ ಹೊಸ ಲಿಂಗಾಪೂರ  ಗ್ರಾಮದ Pɧ£Á¯ï ©æqïÓ ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಮಟಕಾ  ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ  ಮೇರೆಗೆ ಶೇಷಗಿರಿರಾವ್ ಎ.ಎಸ್.ಐ ರವರು ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಹಿಡಿದು ಒಬ್ಬನು ಆರೋಪಿಯು ಸಿಕ್ಕಿದು ಅವರಿಂದ ಜೂಜಾಟದ ಸಾಮಾಗ್ರಿಗಳಾದ ಮಟಕಾ ಪಟ್ಟಿ ,ಒಂದು ಬಾಲ ಪೆನ್ನು ಜೂಜಾಟದ ನಗದು ಹಣ 770-00 ರೂ.ಗಳನ್ನು ಜಪ್ತು ಮಾಡಿ ಮೂಲ ಪಂಚನಮೆ ಹಾಗೂ ಪಿರ್ಯದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 305/2015 ಕಲಂ. 87 Karnataka Police Act.
ದಿನಾಂಕ 30-12-2015 ರಂದು 16-30 ಗಂಟೆಗೆ ಶ್ರೀ ಈ,ಕಾಳಿಕೃಷ್ಣ  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05 ಜನರೊಂದಿಗೆ, ಜಪ್ತಿಪಂಚನಾಮೆ ಹಾಗೂ ವರಧಿಯನ್ನು ನೀಡಿ ಸದರಿಯವರ ಮೇಲೆ  ಕ್ರಮ ಜರುಗಿಸಲು ಸೂಚಿಸಿದ್ದು ವರದಿ ಸಾರಾಂಶವೇನೆಂದರೆ,   ಇಂದು ದಿನಾಂಕ 30-12-2015 ರಂದು 15-00 ಗಂಟೆಗೆ ನಮೂದಿತ ಆರೋಪಿತರು ಗಂಗಾವತಿ ನಗರದ ಕೋಟೇ ಆಂಜನೇಯ ದೇವಸ್ತಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 2,600-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಬಗ್ಗೆ ಪಂಚರ ಸಮಕ್ಷಮ 15-00 ಗಂಟೆಯಿಂದ 16-00 ಗಂಟೆಯವರೆಗೆ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಸದರಿ ಪ್ರಕರಣವು ಎನ್.ಸಿ. ಸ್ವರೂಪದ ಪ್ರಕರಣವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 368/2015 ಕಲಂ. 78(3) Karnataka Police Act.

ದಿನಾಂಕ: 30-12-2015 ರಂದು ರಾತ್ರಿ 10:00 ಗಂಟೆಗೆ ಶ್ರೀ ಆಂಜನೇಯ ಡಿ.ಎಸ್. ಪಿ.ಎಸ್.ಐ. ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 30-12-2015 ರಂದು ಸಂಜೆ 7:30 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದ ಗಾಂದಿ ಪ್ರತಿಮೆ ಹತ್ತಿರ ಗುಜರಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಟಾಟ ನೆಡೆಯುತ್ತಿದೆ ಅಂತ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ.ಸಾಹೇಬರು ಮಾರ್ಗದರ್ಶನದಂತೆ ನಾನು ಮತ್ತು ಸಿಬ್ಬಂದಿಯವರಾದ ಪಿಸಿ 100, 287, ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆಎ-37/ಜಿ-262 ನೇದ್ದರಲ್ಲಿ ಜೀಪ್ ಚಾಲಕ ಎ.ಪಿ.ಸಿ. ಬಾಸ್ಕರ್ ರವರೊಂದಿಗೆ ಗಂಗಾವತಿಯಿಂದ ಹೊರಟು ಬಸಾಪಟ್ಟಣ ಗ್ರಾಮ ಸಮೀಪ ಜೀಪನ್ನು ನಿಲ್ಲಿಸಿ ಎಲ್ಲರೂ ಕೂಡಿ ನಡೆದುಕೊಂಡು ರಾತ್ರಿ 8:00 ಗಂಟೆಗೆ ಹೋಗಿ ನೋಡಲಾಗಿ ಗುಜರಿ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು ಜನರು ಸೇರಿದ್ದು ಅದರಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತವೆ ನಸಿಬದ ಮಟಕಾ ಜೂಜಾಟ ಅಂತಾ ಕೂಗುತ್ತಾ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದು, ಇನ್ನೊಬ್ಬನು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಕೂಡಲೇ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರೆಲ್ಲರೂ ಅಲ್ಲಿಂದ ಓಡಿ ಹೋಗಿದ್ದು, ಸಿಕ್ಕಿಬಿದ್ದವನನ್ನು ವಿಚಾರಿಸಲು ಅವನು ತನ್ನ ಹೆಸರು ಹಸನ್ ತಂದೆ ಮರ್ದಾನಸಾಬ ರಾಡಬೈಂಡಿಂಗ್ ಕೆಲಸ ವಯಸ್ಸು: 29 ವರ್ಷ ಜಾತಿ: ಮುಸ್ಲಿಂ, ಉ: ಡ್ರೈವರ್ ಕೆಲಸ ಸಾ: ವಡ್ಡರಹಟ್ಟಿ ಹಾ:ವ: ಬಸಾಪಟ್ಟಣ 4 ನೇವಾರ್ಡ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ 1260-00 ರೂ, 01 ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನು ದೊರೆತಿದ್ದು ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀಯಾ ಅಂತಾ ವಿಚಾರಿಸಲು ಅಲ್ಲಿಂದ ಓಡಿ ಹೋಗಿದ್ದ ಅಕ್ಕಪ್ಪ ಸಾ: ಜಯನಗರ-ಗಂಗಾವತಿ ಮೊಬೈಲ್ ನಂ: 9060621099 ಎಂಬುವವನಿಗೆ ಕೊಡುವುದಾಗಿ ತಿಳಿಸಿದನು. ಈ ಬಗ್ಗೆ ರಾತ್ರಿ 8:00 ಗಂಟೆಯಿಂದ 9:00 ಗಂಟೆಯವರಗೆ ಸ್ಥಳದಲ್ಲಿಯೇ ನಿರ್ವಹಿಸಿ ಆರೋಪಿತನೊಂದಿಗೆ ವಾಪಸ್ಸು ಠಾಣೆಗೆ ಬಂದು ಸದರಿ ಆರೋಪಿತರ ವಿರುದ್ದ ಕಲಂ: 78(3) ಕೆಪಿ. ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವ ಕುರಿತು ವರದಿಯನ್ನು ಸಲ್ಲಿಸಿದ್ದು ಇರುತ್ತದೆ.  

Wednesday, December 30, 2015

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 367/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ: 29-12-2015 ರಂದು ಸಂಜೆ 4:00  ಗಂಟೆಗೆ ಫಿರ್ಯಾದಿದಾರರಾದ   ಶ್ರೀ ಬಾಷಾ ತಂದೆ ಶಬ್ಬೀರಸಾಬ ವಯಸ್ಸು: 35 ವರ್ಷ ಜಾತಿ: ಮುಸ್ಲಿಂ ಉ: ಕಾರಪೇಂಟರ್ ಸಾ: ಮೈದಿನಗರ, 17 ನೇ ವಾರ್ಡ ಮಾನ್ವಿ ಜಿ: ರಾಯಚೂರ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ದೂರು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. “ ನನ್ನ ತಂಗಿಯಾದ ಶ್ರೀಮತಿ ಪೈಮುದಾಬೇಗಂ 28 ವರ್ಷ ಇವಳನ್ನು ಗಂಗಾವತಿಯ ಮಹಿಬೂಬನಗರದ ನಿವಾಸಿಯಾದ ಮಹಿಬೂಬ ಪಾಷಾ ತಂದೆ ಅಲ್ಲಾಬಂದಿ ವಯಸ್ಸು: 32 ವರ್ಷ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಅವರು ಪೆಂಟರ್ ಕೆಲಸ ಮಾಡಿಕೊಂಡಿದ್ದರು. ನಿನ್ನೆ ದಿನಾಂಕ: 28-12-2015 ರಂದು ರಾತ್ರಿ 10:00 ಗಂಟೆಗೆ ನಾನು ಮನೆಯಲ್ಲಿರುವಾಗ ಗಂಗಾವತಿಯಿಂದ ರಫೀಕ್ ಅನ್ನುವವರು ಪೋನ್ ಮಾಡಿ “ ನಿಮ್ಮ ಅಳಿಯನಾದ ಮಹಿಬೂಬ ಪಾಷಾ ತಂದೆ ಅಲ್ಲಾಬಂದಿ ಇತನಿಗೆ ಸಂಜೆ 7-00 ಗಂಟೆ ಸುಮಾರಿಗೆ ಶ್ರೀರಾಮನಗರದ ಹೊರಗಡೆ ಸ್ಮಶಾನದ ಹತ್ತಿರ ಗಂಗಾವತಿ-ಕಾರಟಗಿ ರಸ್ತೆಯ ಮೇಲೆ TVS ಅಪ್ಪಾಚಿ ಮೋಟಾರು ಸೈಕಲ್ ನಂ.KA-37/L-4377 ನೇದ್ದನ್ನು ಕಾರಟಗಿ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿದ್ದಾಗ ರಸ್ತೆ ತಿರುವಿನಲ್ಲಿ ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ವೇಗ ನಿಯಂತ್ರಿಸಲಾಗದೇ ಆಕಸ್ಮಾತಾಗಿ ತನ್ನ ಮೋಟಾರು ಸೈಕಲ್ ಸಮೇತ ಸ್ಕಿಡ್ ಆಗಿ ಬಿದ್ದು ತಲೆಗೆ ತೀವ್ರವಾಗಿ ಒಳಪೆಟ್ಟು ಹಾಗೂ ರಕ್ತಗಾಯಗಳಾಗಿದ್ದು, ಆತನನ್ನು 108 ಅಂಬುಲೆನ್ಸ್ ನಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಕೂಡಲೇ ವೈದ್ಯರು ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಿಮ್ಮ ತಂಗಿ ಬಳ್ಳಾರಿಗೆ ಕರೆದುಕೊಂಡು ಹೋಗುತ್ತಿರವುದಾಗಿ ” ತಿಳಿಸಿದರು. ರಾತ್ರಿಯಾಗಿದ್ದರಿಂದ ನಾನು ಈ ದಿವಸ ಬಳ್ಳಾರಿಗೆ ಹೋಗಬೇಕೆನ್ನುವಷ್ಟರಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಿಂದ ನನ್ನ ತನ್ನ ತಂಗಿ ಪೈಮುದಾಬೇಗಂ ಇವಳು ಫೋನ್ ಮಾಡಿ “ ಇಂದು ದಿನಾಂಕ : 29/12/2015 ರಂದು ಮುಂಜಾನೆ 9-30 ಗಂಟೆಗೆ ಮಹಿಬೂಬ ಪಾಷಾ ಈತನು ಚಿಕಿತ್ಸೆ ಫಲಿಸಲಾರದೇ ಮೃತಪಟ್ಟಿರುತ್ತಾನೆ ” ಅಂತಾ ತಿಳಿಸಿದಳು. ನಂತರ ಈ ಬಗ್ಗೆ ದೂರು ಕೊಡಲು ಯಾರೂ ಇರದ ಕಾರಣ ನಾನು ಮಾನ್ವಿಯಿಂದ ಈಗ ತಡವಾಗಿ ಠಾಣೆಗೆ ಬಂದು ಈ ನನ್ನ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಮೃತ ನನ್ನ ಅಳಿಯ ಮಹಿಬೂಬ ಪಾಷಾ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.”  ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 278/2015 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ. 28-12-2015 ರಂದು 12-30 ಪಿ.ಎಂ.ಕ್ಕೆ ಫಿರ್ಯಾದಿದಾರರು ಹಾಗೂ ಅವರ ಅಣ್ಣ ಮಣಿಕುಮಾರ ಮತ್ತು ಅವರ ಗೆಳೆಯರು ಮಹೇಶಕುಮಾರ, ಪವನ ಕೂಡಿಕೊಂಡು ಎರಡು ಮೋಟಾರ ಸೈಕಲ್‌ದಲ್ಲಿ  ಶ್ರೀರಾಮನಗರದಿಂದ ಕುಷ್ಟಗಿಗೆ ಹೋಗುತ್ತಿರುವಾಗ ಹೊಸಪೇಟೆ ಕುಷ್ಟಗಿ ಒನ್ ವೇ ಎನ್.ಹೆಚ್. 13 ರಸ್ತೆಯ ಮೇಲೆ ಎಂ. ಪಿ. ಡಾಬಾದ ಹತ್ತಿರ ಎದುರಿಗೆ ರಾಂಗ ಸೈಡಿನ ರಸ್ತೆಯಲ್ಲಿ ಮೋ.ಸೈ. ನಂ. ಕೆ.ಎ.37/ಎಸ್.4663 ನೇದ್ದರ ಚಾಲಕನು ಮೋ.ಸೈ.ನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಅಣ್ಣ ಮಣಿಕುಮಾರ ಈತನು ಚಲಾಯಿಸುತ್ತಿದ್ದ ಮೋ.ಸೈ. ನಂ. ಕೆ.ಎ.05/ಹೆಚ್.ಝಡ್.9080 ನೇದ್ದಕ್ಕೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ. ಸಮೇತ ಬಿದ್ದು ಫಿರ್ಯಾದಿ ಅಣ್ಣ ಮಣಿಕುಮಾರ ಮತ್ತು ಹಿಂದೆ ಕುಳಿತ ಮಹೇಶಕುಮಾರ ಇವರಿಗೆ ಮತ್ತು ಡಿಕ್ಕಿ ಕೊಟ್ಟ ಮೋ.ಸೈ. ಚಾಲಕ ಹನಮಪ್ಪ ಇವರಿಗೆ ಸಾದಾ ಮತ್ತು ಬಾರಿ ಸ್ವೂರಪದ ಗಾಯ ಪೆಟ್ಟಿಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 303/2015 ಕಲಂ. 04 ವರದಿಕ್ಷಿಣೆ ನಿಷೇಧ ಕಾಯ್ದೆ 1961 ಮತ್ತು 420 ಐ.ಪಿ.ಸಿ:
ದಿನಾಂಕ 29-12-2015 ರಂದು 20-30 ಗಂಟೆಗೆ ಪಿ.ಸಾಯಿಬಾಬು ತಂದೆ ಪಿ.ಸತ್ಯನಾರಾಯಣ ಪುಲಿಮೆ ವಯಸ್ಸು 48 ಜಾ: ಕಾಪು : ಟ್ರಾವೆಲ್ಸ್ ಸಾ: ಅಣ್ಣೂರು ಗೌರಮ್ಮ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗಳಾದ ಶ್ರೀಹಾರಿಕ ಇಕೆಯ ಮದುವೆಯನ್ನು ಆರೋಪಿ ನಂ. 01 ಸುನೀಲ್ ಇತನೊಂದಿಗೆ ನಿಶ್ಚಯಿಸಿ ಸದರಿಯವರ  ನಿಶ್ಚಿತಾರ್ಥವು ಗಂಗಾವತಿ ನಗರದ ಲಲೀತಮಹಲ್ ಹೋಟಲ್ ದಲ್ಲಿ ಜರುಗಿದ್ದು ಇರುತ್ತದೆ. ಫಿರ್ಯಾದಿದಾರರು ತನ್ನ ಹೆಸರಿನಲ್ಲಿರುವ ಒಂದು ಪ್ಲಾಟನ್ನು ಮದುವೆ ನಂತರ  ತಮ್ಮ ಮಗಳಿಗೆ  ಕೊಡುವುದಾಗಿ ಅದರಂತೆ 10 ತೊಲೆಯ ಬಂಗಾರವನ್ನು ಸಹ ಕೊಡುವುದಾಗಿ ಹೇಳಿದ್ದು ದಿನಾಂಕ 29-10-2015 ರಂದು ಸದರಿಯವರ ಮದುವೆ ನಿಶ್ಚಯಿಸಿದ್ದು ಇರುತ್ತದೆಮದುವೆ ಒಂದು ತಿಂಗಳು ಇರುವ ಸಮಯದಲ್ಲಿ ಆರೋಪಿತರಾದ ಸುನೀಲ್ ಮತ್ತು ಇತನ ತಂದೆ ಆನಂದರಾವ್ ಹಾಗೂ ತಾಯಿ ಶ್ರೀಮತಿ ಸುಜಾತ ಇವರು ಫಿರ್ಯಾದಿದಾರರಿಗೆ ಮದುವೆ ನಂತರ ಮಗಳಿಗೆ ಕೊಡುವ ಪ್ಲಾಟ್ ನ್ನು ಈಗಲೇ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮತ್ತು 10 ತೊಲೆಯ ಬಂಗಾರವನ್ನು ಈಗಲೇ ತಮಗೆ ಕೊಡಬೇಕೆಂದು ಒತ್ತಾಯಿಸುತ್ತಾ, ಪ್ಲಾಟ್ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಕೊಡುವವರೆಗೆ ಮತ್ತು 10 ತೊಲೆಯ ಬಂಗಾರವನ್ನು ಕೊಡುವವರೆಗೂ ಫಿರ್ಯಾದಿದಾರರ ಮಗಳನ್ನು ಮದುವೆ ಆಗುವುದಿಲ್ಲವೆಂದು  ವರದಕ್ಷೀಣೆಯ ಸಲುವಾಗಿ ಒತ್ತಾಯ ಮಾಡಿ ಮದುವೆ ಆಗಲು ನಿರಾಕರಿಸಿ ಮೋಸ ಮಾಡಿರುತ್ತಾರೆಂದು ನೀಡಿದ ಫಿರ್ಯಾದಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 259/2015 ಕಲಂ. 457, 380 ಐ.ಪಿ.ಸಿ:

ದಿನಾಂಕ 29-12-2015 ರಂದು ಮದ್ಯಾಹ್ನ 4-30 ಗಂಟಗೆ ಫಿರ್ಯಾದಿದಾರರರಾದ ಎ.ಕೆ ತುಪ್ಪದ ಉಪ-ಪ್ರಾಂಶುಪಾಲರು ಸಾ- ಬಾಲಕರ ಸ.ಪ.ಪೂ ಕಾಲೇಜ್ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 27-12-2015 ರಂದು ರಾತ್ರಿ 10-30 ಗಂಟೆಗೆ ಕಾಲೇಜನ ರಾತ್ರಿ ಕಾವಲುಗಾರ ರಮೇಶ ಇತನು ಕಾಲೇಜನ ಎಲ್ಲಾ ಕೊಠಡಿಗಳನ್ನ ಪರಿಶಿಲಿಸಿ ಕಾಲೇಜನಲ್ಲಿ ಮಲಗಿದ್ದು ನಂತರ ಮುಂಜಾನೆ 6-00 ಗಂಟೆಗೆ ಎದ್ದು ಕಾಲೆಜನ್ನು ಸ್ವಚ್ಛಮಾಡಲು ಎದ್ದು ಬಂದಾಗ ಕಾಲೇಜನ ಗುಮಾಸ್ತರ ಕೊಠಡಿಯ ಬಾಗಿಲಿನ ಬೀಗ ಒಡೆದಿದ್ದು ಮತ್ತು ಪ್ರಾಚಾರ್ಯಾರರ ಕೊಠಡಿಯ ಬಾಗಿಲು ತೆರೆಯಲು ಪ್ರಯತ್ನಿಸಿದ್ದು ಮತ್ತು ಬಿಸಿ ಊಟದ ಕೊಠಡಿಗಳು ತೆರೆದಿರುವುದನ್ನು ಕಂಡು ರಮೇಶ ಇತನು ನನಗೆ ಕರೆ  ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಮ್ಮ ಕಾಲೇಜ್ ನಲ್ಲಿ ಕೊಠಡಿಗಳ ಬಾಗಿಲು ಬೀಗಗಳು ಮುರಿದಿರುತ್ತವೆ ಬೇಗ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ಪ್ರಾಂಶುಪಾಲರಾದ ನಾಗರಾಜರಾವ್ ಕೂಡಲೇ ಬಂದು ನೋಡಿದಾಗ ವಿಷಯ ನಿಜ ಇದ್ದು, ಗುಮಾಸ್ತರ ಕೊಠಡಿಯಲ್ಲಿ ಯಾವುದೇ ರೀತಿಯ ಕಳ್ಳತನವಾಗಿರುವುದಿಲ್ಲಾ ಮತ್ತು ಬಿಸಿ ಊಟದ ಕೊಠಡಿಗೆ ಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಎರಡು ಹಂಡೆ ಮತ್ತು ಒಂದು ಕೋಳಗ ಮತ್ತು ಡೆಡ್ ಸ್ಟಾಕ್ ಕೊಠಡಿಯಲ್ಲಿದ್ದ ಗ್ಯಾಸ್ ವೆಲ್ಡಿಂಗ್ ಕಡ್ಡಿಗಳು ಮತ್ತು ಇನ್ನೊಂದು ಡೆಡ್ ಸ್ಟಾಕ್ ಕೊಠಡಿಯಲ್ಲಿದ್ದ ಮರಗೆಲಸದ ಸಾಮಗ್ರಿಗಳು ಎಲ್ಲಾ ಸೇರಿ ಅಂ.ಕಿ.ರೂ 10,000 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು ಕಳ್ಳತನ ಮಾಡಿದ ಕಳ್ಳರನ್ನ ಪತ್ತೇ ಮಾಢಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿರುವ ಫಿರ್ಯಾದಿ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೇನು.

Tuesday, December 29, 2015

1) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 365/2015 ಕಲಂ. 143, 147, 341, 323, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 28-12-2015 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶರಣಪ್ಪ ತಂದೆ ಶೇಖರಪ್ಪ ಜೇಕಿನ, ವಯಸ್ಸು 36 ವರ್ಷ, ಲಿಂಗಾಯತ ರೆಡ್ಡಿ ಉ: ಒಕ್ಕಲುತನ ಸಾ: ಕೇಸರಹಟ್ಟಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ: 28-12-2015 ರಂದು ಸಂಜೆ 6:00 ಗಂಟೆಯ ಸುಮಾರಿಗೆ ನಾನು, ನನ್ನ ತಮ್ಮನಾದ ಮಹೇಶ ತಂದೆ ಶೇಖರಪ್ಪ ಮತ್ತು ನನ್ನ ಕಕ್ಕನ ಮಗನಾದ ಬಸವರಾಜ ತಂದೆ ಕರಿಬಸಪ್ಪ ನಮ್ಮ ಮನೆಯ ಎದುರಿಗೆ ಹನುಮಂತಪ್ಪ ಮತ್ತು ಆತನ ಸಹೋದರರಾದ ವೆಂಕಟೇಶ ತಂದೆ ರಾಮಣ್ಣ, ಶರಣಪ್ಪ ತಂದೆ ಈರಪ್ಪ, ದುರಗಪ್ಪ ತಂದೆ ಯಂಕಪ್ಪ, ಮಾರ್ಕಂಡೆ ತಂದೆ ಹನುಮಂತಪ್ಪ, ಮುದಿಯಪ್ಪ @ ಬಾಗಪ್ಪ ತಂದೆ ಹನುಮಂತಪ್ಪ, ಹನುಮಂತ ತಂದೆ ಬಾಗಪ್ಪ ಎಲ್ಲರೂ ಜಾತಿ: ಉಪ್ಪಾರ ಸಾ: ಕೇಸರಹಟ್ಟಿ ಇವರು ನಾವು ಅಡ್ಡಾಡುವ ದಾರಿಗೆ ಹೊಂದಿಕೊಂಡಿರುವ ಕಂಪೌಂಡ್ ಗೋಡೆಗೆ ದಕ್ಷಿಣ ಮುಖವಾಗಿ ಗೇಟ್ ಇಡುವಾಗ ನಮಗೆ ಅಡ್ಡಾಡಲು ತೊಂದರೆ ಆಗುತ್ತದೆ ಇಲ್ಲಿ ಗೇಟ್ ಇಡಬೇಡಿ ಮತ್ತು ಪೂರ್ವಕಾಲದಿಂದಲೂ ಇಲ್ಲಿ ಯಾವುದೇ ಗೇಟ್ ಇರುವುದಿಲ್ಲಾ ಎಂದಾಗ ನಮ್ಮನ್ನು ತಡೆದು ನಿಲ್ಲಿಸಿ ನಾನು ಇಲ್ಲಿ ಗೇಟ್ ಇಡುತ್ತೇವೆ ಅದೇನು ಶಂಠಾ ಹರುಕೋತಿರಿ ಹರ್ಕೋರಿ ಹಾಗೂ ನಿಮ್ಮ ಕಡೆ ಎಷ್ಟು ಜನ ಗಂಡಸರು ಇದ್ದಿರಿ ಬರ್ರೀಲೇ ಎಂದು ಅವಾಜ್ ಹಾಕಿದರು. ಹೀಗೆಲ್ಲಾ ಮಾತನಾಡಬೇಡಿರಿ ಊರ ಹಿರಿಯರನ್ನು ಕೂಡಿಸಿ ಮಾತಾಡೋಣಾ ಅಂದಾಗ ಹನುಮಂತಪ್ಪ ತಂದೆ ಈರಪ್ಪ ಉಪ್ಪಾರ 41 ವರ್ಷ ಇತನು ನನ್ನ ತಲೆ ಕೂದಲು ಹಿಡಿದು ಬಗ್ಗಿಸಿ ಗುದ್ದಿದನು. ನನ್ನ ಚಿಕ್ಕಪ್ಪನ ಮಗನಾದ ಬಸವರಾಜ ತಂದೆ ಕರಿಬಸಪ್ಪ ಜೇಕಿನ ಈತನು ಬಿಡಿಸಲು ಬಂದಾಗ ವೆಂಕಟೇಶ ತಂದೆ ರಾಮಣ್ಣ ಈತನು ಸಹ ಬಂದು ನನ್ನ ಸಹೋದರನಾದ ಮಹೇಶ ತಂದೆ ಶೇಖರಪ್ಪನಿಗೆ ಕೆಳಗೆ ಬೀಳಿಸಿ ಬಲಗಾಲಿನಿಂದ ಒದ್ದನು. ದುರಗಪ್ಪನು ಬಸವರಾಜನಿಗೆ ಬಲಗಾಲಿನಿಂದ ಒದ್ದು ಮುಷ್ಠಿಯಿಂದ ಗುದ್ದಿದನು. ಬಿಡಿಸಲು ಬಂದ ನನ್ನ ಹೆಂಡತಿ ಲಲಿತಾಳಿಗೆ ಮೈ ಕೈ ಮುಟ್ಟಿ ಎಳೆದಾಡಿ ಕೈಗಳಿಂದ ಬಡಿದರು. ನಂತರ  ಈ ದಿನ ಉಳಿದುಕೊಂಡ್ರಿ ಮುಂದೊಂದು ದಿನ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಾ ಎನ್ನುತ್ತಾ ಜೀವದ ಬೆದರಿಕೆಯನ್ನು ಹಾಕಿದರು.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 366/2015 ಕಲಂ. 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:- 28-12-2015 ರಂದು ರಾತ್ರಿ 11:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹನುಮಂತಪ್ಪ ತಂದೆ ಈರಪ್ಪ ವಯಸ್ಸು: 38 ವರ್ಷ ಜಾತಿ: ಉಪ್ಪಾರ, ಉ: ಒಕ್ಕಲುತನ ಸಾ: ಕೇಸರಹಟ್ಟಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ:- 28-12-2015 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಾನು, ನಮ್ಮ ಮನೆಯ ಪಕ್ಕದಲ್ಲಿ ಕಂಪೌಂಡ ಕಟ್ಟಿಸುತ್ತಿರುವಾಗ ನಮ್ಮ ಗ್ರಾಮದ (1) ಶರಣಪ್ಪ ತಂದೆ ಶೇಖರಪ್ಪ ಜೇಕಿನ 36 ವರ್ಷ ಈತನು ಏಕಾಏಕಿಯಾಗಿ ಬಂದು ಯಾಕಲೇ ಉಪ್ಪಾರ ಸೂಳೆ ಮಗನೇ  ಈ ಜಾಗೆಯಲ್ಲಿ ಕಂಪೌಂಡ ಕಟ್ಟಲು ನಿನ್ನನ್ನು ಬಿಡುವದಿಲ್ಲಾವೆಂದು ಜೀವ ಬೆದರಿಕೆ ಹಾಕಿದ್ದು ಆಗ ನಾನು ಮತ್ತು ನನ್ನ ನನ್ನ ಹೆಂಡತಿಯಾದ ಶ್ರೀಮತಿ ಕಾವೇರಿ ಇಬ್ಬರೂ ಕೂಡಿ ಆತನಿಗೆ ಯಾಕೇ ಸುಮ್ಮನೇ ಜಗಳ ಮಾಡುತ್ತೀಯಾ ಎಂದು ಕೇಳಿದಾಗ ತನ ಸಂಗಡ 2] ಶೇಖರಪ್ಪ ತಂದೆ ವೆಂಕಟರಡ್ಡಿ ಜೇಕಿನ 3] ಕರಿಬಸಪ್ಪ ತಂದೆ ವೆಂಕಟರಡ್ಡೆಪ್ಪ ಜೇಕಿನ 4] ಹನುಮಂತಪ್ಪ ತಂದೆ ವೆಂಕಟರಡ್ಡೆಪ್ಪ ಜೇಕಿನ 5] ಅಮರೇಶಪ್ಪ ತಂದೆ ದೊಡ್ಡಬಸಪ್ಪ ಜೇಕಿನ 6] ರುದ್ರಪ್ಪ ತಂದೆ ವಿರುಪಾಕ್ಷಪ್ಪ ಜೇಕಿನ 7] ವಿಜಯಕುಮಾರ ತಂದೆ ವಿರುಪಾಕ್ಷಪ್ಪ ಜೇಕಿನ 8] ಮಹೇಶ ತಂದೆ ಶೇಖರಪ್ಪ ಜೇಕಿನ 9] ಬಸವರಾಜ ತಂದೆ ಶೇಖರಪ್ಪ ಜೇಕಿನ 10] ಪ್ರಭು ತಂದೆ ಶೇಖರಪ್ಪ ಜೇಕಿನ 11] ಶರಣಪ್ಪ ತಂದೆ ಕರಿಬಸಪ್ಪ ಜೇಕಿನ 12] ಬಸವರಾಜ ತಂದೆ ಕರಿಬಸಪ್ಪ ಜೇಕಿನ 13] ಶರಣಪ್ಪ ತಂದೆ ಅಮರೇಶಪ್ಪ ಜೇಕಿನ 14] ನೀಲಮ್ಮ ಗಂಡ ಶೇಖರಪ್ಪ ಜೇಕಿನ 15] ಯಂಕಮ್ಮ ಗಂಡ ಕರಿಬಸಪ್ಪ ಜೇಕಿನ 16] ಲಲಿತಮ್ಮ ಗಂಡ ಶರಣಪ್ಪ ಜೇಕಿನ 17] ಲಕ್ಷ್ಮಿ ಗಂಡ ಮಹೇಶ ಜೇಕಿನ 18] ಹಂಪಮ್ಮ ಗಂಡ ಪ್ರಭು ಜೇಕಿನ 19] ಲಕ್ಷ್ಮಿ ಗಂಡ ಶರಣಪ್ಪ ಜೇಕಿನ ಸಾ: ಎಲ್ಲರೂ ಕೇಸರಹಟ್ಟಿ ಇವರೆಲ್ಲರೂ ಕೂಡಿ ಆಕ್ರಮ ಕೂಟ ರಚಿಸಿಕೊಂಡು ಬಂದು ನನಗೂ ಮತ್ತು ನನ್ನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಕೈಗಳಿಂದ ಎಳೆದಾಡಿ ಒದ್ದರು. ಮತ್ತು ಕಟ್ಟಿಗೆಯಿಂದ ಹೊಡೆದು ನನ್ನ ಹೆಂಡತಿಗೆ ಕಾಲಿನಿಂದ ಒದ್ದರು. ನಂತರ ನನಗೆ ಉಪ್ಪಾರ ಸೂಳೆ ಮಗನೇ ನೀನು ಇದ್ದು ಇಲ್ಲಿ ಅದೇ ಹೇಗೆ ಜೀವನ ಮಾಡುತ್ತೀಯಾ ಅಂತಾ ಬಯ್ದು ನನಗೆ ಜೀವ ಬೆದರಿಕೆ ಹಾಕಿದರು. ನಂತರ ಅಲ್ಲಿಯೇ ಇದ್ದ ನಮ್ಮ ಗ್ರಾಮದ ನಿವಾಸಿಗಳಾದ ವಿಶ್ವನಾಥ ಮಾಲಿಪಾಟೀಲ್, ಶರಣಪ್ಪ ಸಂಗಣ್ಣನವರ, ರಮೇಶ ಮಾಲಿಪಾಟೀಲ್ , ಹನುಮೇಶ ನಾಯಕ, ಇವರೆಲ್ಲರೂ ಕೂಡಿ ಜಗಳ ಬಿಡಿಸಿದರು. ನಂತರ ನಾನು ನನ್ನ ಹೆಂಡತಿ ಇಬ್ಬರೂ ಕೂಡಿ ಠಾಣೆಗೆ ಬಂದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬಂದು ಈಗ ತಡವಾಗಿ ಠಾಣೆಗೆ ಹಾಜರಾಗಿ ಈ ನನ್ನ ದೂರನ್ನು ಕೊಟ್ಟಿರುತ್ತೇನೆ. ಕಾರಣ ಮಾನ್ಯರು ಈ ಮೇಲ್ಕಂಡ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 177/2015 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ:-28/12/2015 ರಂದು 8-40 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಹೇಳಿಕೆ ಪಿರ್ಯಾದಿಯನ್ನು 8-50 ಪಿಎಂದಿಂದ 9-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಆರೋಪಿತ ಹನುಮಂತಪ್ಪನು ಊಟ ಮಾಡಿದ ಬಿಲ್ ಕೊಡದೇ ಹೋಟಲ್ ಮಾಲೀಕನೊಂದಿಗೆ ವಾದ ಮಾಡುತ್ತಿದ್ದಾಗ ಪಿರ್ಯಾದಿದಾರನು ದುಡ್ಡು ಕೊಡಲು ತಿಳಿಸಿದ್ದಕ್ಕೆ ಆರೋಪಿತ ಹನುಮಂತಪ್ಪನು ತನ್ನ ಮಗ ಆನಂದ ಮತ್ತು ರವಿ ಎನ್ನುವವನಿಗೆ ಹಾಗೂ ಇನ್ನೊಬ್ಬನಿಗೆ ಕರೆದುಕೊಂಡು ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು, ಕಲ್ಲಿನಿಂದ ಕೈಯಿಂದ ಬಡಿದು ರಕ್ತಗಾಯಗೊಳಿಸಿದ್ದು, ಅಲ್ಲದೇ, ಆವಾಚ್ಯವಾಗಿ ಬೈಯ್ದಾಡಿ, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 9-40 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

Monday, December 28, 2015

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 299/2015 ಕಲಂ. 302, 201 ಐ.ಪಿ.ಸಿ:.
ದಿ:27-12-15 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪ್ರಭುಗೌಡ ಮಾಲಿಪಾಟೀಲ. ಸಾ: ಚುಕ್ಕನಕಲ್ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿ:27.12.15 ರಂದು ಮಧ್ಯಾನ್ನ 3.45 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ದೇವಪ್ಪ ವಾಲೀಕಾರ, ಚಿನ್ನಪ್ಪ ಹ್ಯಾಟಿ ಮತ್ತು ನಾಗಪ್ಪ ಚನ್ನದಾಸರ ಹೀಗೆ ಎಲ್ಲರೂ ನಮ್ಮೂರಿನ ಶ್ರೀಮತಿ ಭೀಮವ್ವ ಇವರ ಹೊಟೇಲ್ಲಿನಲ್ಲಿ ಇದ್ದಾಗ, ನಮಗೆ ಪರಿಚಯದ ಹೊಸಳ್ಳಿ ಗ್ರ್ರಾಮದ ಯಮನೂರಪ್ಪ ವಾಲ್ಮೀಕಿ ಈತನು ಬಂದು ಇಂದು ಮಧ್ಯಾನ್ನ 2.00 ಗಂಟೆ ಸುಮಾರಿಗೆ ನನ್ನ ಹೆಂಡತಿ ನಿಮ್ಮೂರಿನ ಕೆರೆಂದಹಳ್ಳದಲ್ಲಿ ಒಬ್ಬ ಗಂಡಸಿನ ಮೃತ ಶವವನ್ನು ನೋಡಿರುತ್ತಾಳೆ ಅಂತಾ ಹೇಳಿದನು. ಆಗ ನಾವೆಲ್ಲರೂ ಗಾಭರಿಯಾಗಿ ನಮ್ಮೂರ ಸೀಮಾದ ಕೆರೆಂದಹಳ್ಳದಲ್ಲಿ ಹೋಗಿ ನೋಡಲು ಶಾಂತಿಲಾಲ ಸೇಟ್ ಇವರ ಸುಬಾಬಲಿ ಗಿಡಗಳ ಹೊಲದ ಬಾಜು ಹಳ್ಳದಲ್ಲಿ ಒಂದು ಮೃತ ಶವ ಬಿದ್ದಿದ್ದು, ಸ್ವಲ್ಪ ಹತ್ತಿರ ಹೋಗಿ ನೋಡಲು ಸುಮಾರು 30-35 ವರ್ಷದ ಗಂಡಸಿನ ಶವವಿದ್ದು, ಶವ ಅಂಗಾತವಾಗಿ ಬಿದ್ದಿದ್ದು ಮುಖ ಸಂಪೂರ್ಣ ಸುಟ್ಟು ಗುರುತು ಸಿಗದಂತೆ ಆಗಿದ್ದು, ಬಲಗೈ ಸಂಪೂರ್ಣವಾಗಿ ಪ್ರಾಣಿಗಳು ತಿಂದಂತೆ ಮಾಂಸಖಂಡ ಹೊರಬಂದು ಎಲುಬು ಕಾಣುತ್ತಿದ್ದವು, ಮತ್ತು ಎದೆಯ ಬಲ ಭಾಗ ಹಾಗೂ ಮೈತುಂಬ ನೀರಿನ ಗೊಬ್ಬೆ ಆಗಿದ್ದವು. ಸ್ಥಳದಲ್ಲಿ ಸುಟ್ಟ ಅರೆಬರೆಯ ಹಸಿರು ಬಣ್ಣದ ಬನಿಯನ್, ಬಿಳಿಯ ಶಟರ್ಿನ ತೋಳು ಮತ್ತು ಕರಿಯ ಬಣ್ಣದ ಪ್ಯಾಂಟ್ ತುಣುಕುಗಳು ಬಿದ್ದಿದ್ದವು. ಯಾರೋ ದುಷ್ಕರ್ಮಿಗಳು ಸುಮಾರು 2 ದಿನಗಳಿಂದ ಇಂದು ಮಧ್ಯಾನ್ನ 2.00 ಗಂಟೆಯ ಅವಧಿಯೊಳಗೆ ಈ ಅಪರಿಚಿತ ಗಂಡಸು ವ್ಯಕ್ತಿಯನ್ನು ಯಾವುದೋ ಉದ್ದೇಶಕ್ಕಾಗಿ ಕೊಲೆ ಮಾಡಿ ಸಾಕ್ಷಿ ಪುರಾವೆ ಸಿಗದಂತೆ ಶವವನ್ನು ಸುಟ್ಟು ಹೋದಂತೆ ಕಾಣುತ್ತಿದ್ದು, ಕಾರಣ ಅಪರಿಚಿತ ಗಂಡಸು ವ್ಯಕ್ತಿಯನ್ನು ಕೊಲೆ ಮಾಡಿ ಹೋಗಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 299/2015. ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 258/2015 ಕಲಂ. 128 ಜನತಾ ಪ್ರಾತಿನಿಧ್ಯ ಅಧಿನಿಯಮ 1951.
ದಿನಾಂಕ: 27-12-2015 ರಂದು ರಾತ್ರಿ 09-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪಿ.ನಾಗೇಶ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿನಾಂಕ: 27.12.2015 ರಂದು ವಿಧಾನ ಪರಿಷತ್ ಚುನಾವಣೆಯಲ್ಲಿ ಶ್ರೀ ಚನ್ನಬಸಪ್ಪ ಕೊಟ್ಯಾಳ ನಗರ ಸಭೆ ಸದಸ್ಯರು ಕೊಪ್ಪಳ ಇವರು ಮತ ಹಾಕುವಾಗ ತಾವೇ ಫೇಸ್ ಬುಕ್ ನಲ್ಲಿ ತೋರಿಸಿದಂತೆ ತಾವು ಬಿಜೆಪಿಗೆ ಓಟು ಹಾಕಿರುವುದಾಗಿ ಅಪಲೋಡ್ ಮಾಡಿರುತ್ತಾರೆ ಇದನ್ನು ಅವರು 11 ಜನ ಬಿ.ಜೆ.ಪಿ ಸದಸ್ಯರು ತಮ್ಮ ಉಪಾಧ್ಯಕ್ಷರು ಅಗುವಾಗ ಓಟು ಹಾಕಿದ್ದಕ್ಕಾಗಿ ತಾವು ಓಟು ಮಾಡಿರುವುದಾಗಿ ತಿಳಿಸಿರುತ್ತಾರೆ.  ಇದು ಚುನಾವಣಾ ನೀತಿ ಸಂಹಿತೆ ಸ್ವಷ್ಟ ಉಲ್ಲಂಘನೆಯಾಗಿರುತ್ತದೆ ಕಾರಣ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ.ಸದರ ಪ್ರಕರಣವು ಅಸಂಜ್ಞೆ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯ ಗುನ್ನೆ ನಂ 258/2015 ಕಲಂ: 128 ಜನತಾ ಪ್ರಾತಿನಿದ್ಯ ಅಧಿನಿಯಮ 1951 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 176/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕ:27-12-2015 ರಂದು 7-30 ಪಿಎಂಕ್ಕೆ ಕುಕನೂರ ಸರ್ಕಾರಿ ಆಸ್ಪತ್ರೆಯಿಂದ ಅಪಘಾತದ ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, 7-45 ಪಿಎಂದಿಂದ 8-30 ಪಿಎಂದವರೆಗೆ ಪ್ರತ್ಯಕ್ಷ ಸಾಕ್ಷಿದಾರರಾದ ರುದ್ರೇಶರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ಕುಕನೂರಿನಿಂದ ಗುದ್ನೆಪ್ಪನ ಮಠದ ಜಾತ್ರೆಗೆ ತನ್ನ ಸಂಬಂದಿಕರನ್ನು ಅಟೋದಲ್ಲಿ ಕರೆದುಕೊಂಡು ಹೋಗಿದ್ದು, ನಂತರ ವಾಪಾಸ್ಸು ಕುಕನೂರ ಕಡೆಗೆ ಬರಲು ದ್ಯಾಂಪೂರದ ಅಟೋ ನಂ.ಕೆ.ಎ.29 ಎ.3981 ನೇದ್ದರಲ್ಲಿ ತನ್ನ ಸಂಬಂದಿಕರನ್ನು ಕೂಡಿಸಿ ತಾನು ಅಟೋದ ಹಿಂದೆ ಮೋಟಾರ್ ಸೈಕಲ್ ಮೇಲೆ ಬರುತ್ತಿರುವಾಗ ಕುಕನೂರ ಕಡೆಯಿಂದ ಟ್ರ್ಯಾಕ್ಟರ್ ನಂ.ಕೆ.ಎ.37 ಟಿ. 8155 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಯ ಸಂಬಂದಿಕರು ಮತ್ತು ಇನ್ನೊಬ್ಬರು ಕುಳಿತು ಹೊರಟ ಅಟೋಕ್ಕೆ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು, ಈ ಅಪಘಾತದಿಂದ ತನ್ನ ಸಂಬಂದಿಕರಿಗೆ ಹಾಗೂ ಶರಣಯ್ಯನಿಗೆ ಸಾದಾ ಹಾಗೂ ತೀವ್ರ ಸ್ವರೂಪದ ಗಾಯಗಳಾಗಿದ್ದು ಅದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Sunday, December 27, 2015

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 270/2015 ಕಲಂ. 87 Karnataka Police Act.
ದಿನಾಂಕಃ-26-12-2015 ರಂದು ಮದ್ಯಾಹ್ನ 13-45 ಗಂಟೆಗೆ ಪಿ.ಎಸ್.ಐ ಸಾಹೇಬರು ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಇಸ್ಪೀಟ್ ಜೂಜಾಟದ ವರದಿ ಮತ್ತು ಮೂಲ ಪಂಚನಾಮೆ ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶದಲ್ಲಿ ಇಂದು ದಿನಾಂಕಃ-26-12-2015 ರಂದು ಬೆಳಿಗ್ಗೆ 11-45 ಗಂಟೆಗೆ ನಂದಿಹಳ್ಳಿ ಗ್ರಾಮದ ದುರ್ಗಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದ್ದು ಇಸ್ಪೀಟ್ ಜುಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಉಳಿದ 10 ಜನರು ಓಡಿ ಹೋಗಿದ್ದು ಸಿಕ್ಕ ಆರೋಪಿತರ ಕಡೆಯಿಂದ ಒಟ್ಟು ನಗದು ಹಣ ರೂ.4630/- ಗಳು ಮತ್ತು ಇಸ್ಪೀಟ್ ಜೂಜಾಟದ ಸಮಾಗ್ರಿಗಳನ್ನ ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 271/2015 ಕಲಂ. 32, 34 Karnataka Excise Act
ದಿನಾಂಕಃ-24-12--2015 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ಹೊಸ ಜೂರಟಗಿ ಗ್ರಾಮದಲ್ಲಿ ಸೋಮಣ್ಣ ತಂದಿ ಹನಮಂತಪ್ಪ ಕಲ್ಮನಿ ಇತನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಮಾನ್ಯ ಪಿ.ಎಸ್.ಐ.  ಸಾಹೇಬರು ಕಾರಟಗಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿದ್ದು  ಆರೋಪಿ ಸೋಮಣ್ಣ ಓಡಿ ಹೊಗಿದ್ದು  ಅವನ ಕಪಾಟಿನಲ್ಲಿ ಅಕ್ರಮ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಸೋಮಣ್ಣನ ಕಪಾಟಿನಲ್ಲಿ ಒಟ್ಟು ಅಂ.ಕಿ 2,227=58- ರೂಗಳು ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಮತ್ತು ಪಂಚನಾಮೆ ಮಾಡಿಕೊಂಡು ಠಾಣೆಗೆ 8-30 ಬಂದು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ನೀಡಿದ್ದರ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 199/2015 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 26-12-2015 ರಂದು ಮುಂಜಾನೆ 6-15 ಗಂಟೆಗೆ ಫಿರ್ಯಧಿದಾರ ಶ್ರೀ ಸಲಿಂಸಾಬ ತಂದೆ ಸೈಯದಸಾಬ ಗೋಡೆಕಾರ ಸಾ: ಕನಕಗಿರಿ ಇವರು ಠಾಣೆಗೆ ಹಾಜರಾಗಿ ಗಣಕಿಕೃತ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 25-12-2015 ರಂದು ಸಂಜೆ 5-00 ಗಂಟೆಯ ಸುಮಾರಿಗೆ ನನ್ನ ಅಪೇ ವಾಹನ ರಿಪೇರಿ ಇದ್ದುದ್ದರಿಂದ ಅದನ್ನು ರಿಪೇರಿ ಮಾಡಿಸಲು ಗಂಗಾವತಿಗೆ ಹೊಗಿ ಅಲ್ಲಿ ನನ್ನ ವಾಹನವನ್ನು ರಿಪೇರಿ ಮಾಡಿಸಿಕೊಂಡು ವಾಪಸ್ ನನ್ನ ಅಪೇ ವಾಹನವನ್ನು ತೆಗೆದುಕೊಂಡು ರಾತ್ರಿ ಸುಮಾರು 11-00 ಗಂಟೆಯ ಸುಮಾರಿಗೆ ಗಂಗಾವತಿ ಬಿಟ್ಟು ಕನಕಗಿರಿ ಕಡೆ ಹೋಗುತ್ತಿದ್ದೇನು. ಇಂದು 26-12-2015 ರಂದು ಮದ್ಯರಾತ್ರಿ 12-30 ಗಂಟೆಯ ಸುಮಾರಿಗೆ ಸುಳೇಕಲ್ ಕ್ರಾಸ್ ದಾಟಿ ಕನಕಗಿರಿ ಕಡೆ ಹೋಗುತ್ತಿದ್ದಾಗ ಇನ್ನೂ ತಿಪ್ಪನಾಳ ಕ್ರಾಸ್ 1 ಕೀ,.ಮೀ ಇರುವಾಗ ತಿರುವಿನಲ್ಲಿ ಒಬ್ಬ ವ್ಯಕ್ತಿಯು ರಸ್ತೆ ಅಪಘಾತದಿಂದ ಭಾರಿ ಗಾಯಗೊಂಡು ರಸ್ತೆಯ ಮೇಲೆ ಬಿದ್ದಿದ್ದು, ಅವನ ಹತ್ತಿರ ರಸ್ತೆಯ ಮೇಲೆ ಟಿ.ವಿ.ಎಸ್. ಎಕ್ಸ್ಎಲ್ ಸುಪರ್ ಮೋ.ಸೈ. ನಂ.ಕೆಎ-37/ವಿ-2575 ಅಂತಾ ಇದ್ದು, ಅವನ ಹತ್ತಿರ ಹೋಗಿ ನೋಡಲಾಗಿ, ಬಲಗಡೆ ತಲೆಗೆ ಭಾರಿ ಪೆಟ್ಟಾಗಿದ್ದು, ಮೂಗು, ಕಿವಿ ಯಿಂದ ರಕ್ತ ಬಂದಿರುವದು ಕಂಡು ಬಂದಿದ್ದು, ಅವನಿಗೆ ಸುಮಾರು 23-25 ವಯಸ್ಸಿನವುಳ್ಳವನಾಗಿರುತ್ತಾನೆ, ಸಾದಾ ಕಪ್ಪು ಬಣ್ಣ ಇದ್ದು, ಉದ್ದವಾದ ಮುಖ ಇದ್ದು, ಮೈ ಮೇಲೆ ಒಂದು ತುಂಬಾ ತೋಳಿನ ಪುಲ್ ಶರ್ಟ, ಕಪ್ಪು ಪ್ಯಾಂಟ್ ಧರಿಸಿರುತ್ತಾನೆ. ಸದ್ಯ ಅವನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ನಿನ್ನೆ ದಿನಾಂಕ 25-12-2015 ರಂದು ರಾತ್ರಿ 10-30 ರಿಂದ 11-00 ಗಂಟೆಯ ಅವಧಿಯಲ್ಲಿ ಸುಮಾರು 23-25 ವರ್ಷ ವಯಸ್ಸಿನ ವ್ಯಕ್ತಿಯು ಟಿ.ವಿ.ಎಸ್. ಮೋ.ಸೈ. ನಂ.ಕೆಎ-37/ವಿ-2575 ನೇದ್ದನ್ನು ಗಂಗಾವತಿ ಕಡೆಯಿಂದ ಕನಕಗಿರಿ ಕಡೆ ಹೋಗುತ್ತಿದ್ದಾಗ ತಿಪ್ಪನಾಳ-ಸುಳೇಕಲ್ ರಸ್ತೆಯ ತಿರುವಿನಲ್ಲಿ ಯಾವುದೇ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋ.ಸೈ.ಗೆ ಟಕ್ಕರ್ ಕೊಟ್ಟು ವಾಹನವನ್ನು ನಿಲ್ಲಿಸದೇ ಓಡಿ ಹೋಗಿದ್ದು ಇರುತ್ತದೆ. ಇದರಿಂದ ಮೋ.ಸೈ. ಚಾಲಕನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 257/2015 ಕಲಂ. 420 ಐ.ಪಿ.ಸಿ:.

ದಿನಾಂಕ 23.09.2015 ರಂದು ಫಿರ್ಯಾದಿದಾರರಿಗೆ ಅನಾಮದ್ಯೇಯ ವ್ಯಕ್ತಿಯೊಬ್ಬ ತನ್ನ ಪೋನ್ ನಂ 9709605735 ನೇದ್ದರಿಂದ ಕರೆಮಾಡಿ ತಾನು ಆರ್,ಬಿ.ಐ ಅಧಿಕಾರಿಯಿದ್ದು ತಮ್ಮ ಬಳಿಯಿರುವ ಎ.ಟಿ.ಎಮ್ ಕಾರ್ಡ್ ಗಳ ನಂ ಗಳನ್ನು ಹೇಳಿರಿ ಅಂತಾ ತಿಳಿಸಿದ ಮೇರೆಗೆ ಅದನ್ನು ಪಿರ್ಯಾದಿದಾರರು ನಂಬಿ ತಮ್ಮ ಬಳಿ ಇರುವ ಎಸ.ಬಿ.ಐ. ಎಸ್.ಬಿ.ಎಮ್ ಬ್ಯಾಂಕಿನ ಎ.ಟಿ.ಎಮ್ ನಂಬರಗಳನ್ನು ನೀಡಿದ್ದು ಅದನ್ನು ಅನಾಮದ್ಯೇಯ ವ್ಯಕ್ತಿಯು ಪಡೆದುಕೊಂಡು ಫಿರ್ಯಾದಿದಾರರ ಬ್ಯಾಂಕ ಖಾತೆಯಿಂದ ಕ್ರಮವಾಗಿ 49,894=00, 31,997=00 ಹೀಗೆ ಒಟ್ಟು 81,891=00 ರೂಗಳನ್ನು ತೆಗೆದುಕೊಂಡು ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008