Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 12, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 101/2017 ಕಲಂ. 87 Karnataka Police Act.
ಪಿ.ಎಸ್.. ಹನುಮಸಾಗರ ಹಾಗೂ ಸಿಬ್ಬಂದಿಯವರು ಇಂದು ಸಾಯಾಂಕಾಲ 16-00 ಗಂಟೆಗೆ ಠಾಣೆಯಲ್ಲಿದ್ದಾಗ ಬೆನಕನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ದಾಳಿ ಮಾಡಲಾಗಿ ಮಟಕಾ ನಂಬರ ಬರೆಸಲು ಬಂದವನು ಮತ್ತು ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಗಂಗಾಧರ ತಂದೆ ಶಿವಾನಂದಪ್ಪ ಗುಡಿ, ವಯಾ: 45 ವರ್ಷ, ಜಾತಿ: ಲಿಂಗಾಯತ, ಸಾ: ಬೆನಕನಾಳ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 4500=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡಿದ್ದು, ಪ್ರಕರಣ ದಾಖಲಿಸಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 87/2017 ಕಲಂ. 32, 34  Karnataka Excise Act:
ದಿನಾಂಕ: 11-07-2017 ರಂದು ಸಂಜೆ 4-00 ಗಂಟೆಗೆ ಆರೋಪಿತನು ತಾವರಗೇರಾದ ಐ.ಬಿ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಸೈಯದ್ ಮಹಿಬೂಬ್ ತಂದೆ ಸೈಯದ್ ರಾಜಮೀಯಾ ಮಸ್ಕಿ ಸಾ: ತಾವರಗೇರಾ.  ಇವನ ಮೇಲೆ  ಪಂಚರ ಸಮಕ್ಷಮ ಶ್ರೀ. ಈರಣ್ಣ ಎ.ಎಸ್.ಐ ರವರು ದಾಳಿ ಮಾಡಿ ಅವನಿಂದ  ಅಂದಾಜು 1120=00 ರೂ  ಬೆಲೆ ಬಾಳುವ 180 ಎಂ.ಎಲ್. ಅಳತೆಯ ಓರಿಜಿನಲ್ ಚಾಯ್ಸ ಡಿಲಕ್ಸ್ ಮಿಸ್ಕಿ ಮದ್ಯದ 20 ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 88/2017 ಕಲಂ. 32, 34  Karnataka Excise Act:

ದಿನಾಂಕ: 11-07-2017 ರಂದು ರಾತ್ರಿ 8-00 ಗಂಟೆಗೆ ಆರೋಪಿತನು ತಾವರಗೇರಾದ ಎಸ್.ಎಲ್.ವಿ ಹೋಟೆಲಿನ ಸಾರ್ವಜನಿಕ ಸ್ಥಳದಲ್ಲಿ  ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಶ್ಯಾಮನಗೌಡ ತಂದೆ ಸಿದ್ದನಗೌಡ ಪುಂಡಗೌಡ್ರು ಸಾ: ತಾವರಗೇರಾ. ಇವನ ಮೇಲೆ  ಪಂಚರ ಸಮಕ್ಷಮ ಶ್ರೀ. ಈರಣ್ಣ ಎ.ಎಸ್.ಐ ರವರು ದಾಳಿ ಮಾಡಿ ಅವನಿಂದ  ಅಂದಾಜು 1008=00 ರೂ  ಬೆಲೆ ಬಾಳುವ 180 ಎಂ.ಎಲ್. ಅಳತೆಯ ಓರಿಜಿನಲ್ ಚಾಯ್ಸ ಡಿಲಕ್ಸ್ ಮಿಸ್ಕಿ ಮದ್ಯದ 18 ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008