Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 14, 2017

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 96/2017 ಕಲಂ. 457, 380 ಐ.ಪಿ.ಸಿ:
ದಿನಾಂಕ: 12-07-2017 ರಂದು ರಾತ್ರಿ ಸುಮಾರು 11 ಗಂಟೆಯಿಂದ ದಿನಾಂಕ: 13-07-2017 ರ ಬೆಳಿಗ್ಗೆ ಸುಮಾರು 06 ಗಂಟೆ ಅವಧಿಯ ಮದ್ಯದಲ್ಲಿ ಯಾರೋ ಕಳ್ಳರು ಶಾಲಾ ಆವರಣದಲ್ಲಿಯ ಅಡುಗೆ ಕೋಣೆಗೆ ಹಾಕಿದ ಬೀಗದ ಲಾಕ್ ಮೀಟಿ ಅಲ್ಲಿದ್ದ 1). 50 ಕೆ.ಜಿ. ಗಾತ್ರದ ಅಲ್ಯೂಮಿನೀಯಂ ಬೊಗಾಣೆ ಸುಮಾರು 15 ಕೆ.ಜಿ. ತೂಕವಿದ್ದು, ಇದರ ಅಂ.ಕಿ. 4,500/-ರೂ. 2). 30 ಕೆ.ಜಿ. ಗಾತ್ರದ ಅಲ್ಯೂಮಿನೀಯಂ ಬೊಗಾಣೆ ಸುಮಾರು 10 ಕೆ.ಜಿ. ತೂಕವಿದ್ದು, ಇದರ ಅಂ.ಕಿ. 2,500/-ರೂ. 3). ಅನ್ನ ನೀಡುವ 03 ಸ್ಟೀಲ್ ಚಮಚಗಳು ಅಂ.ಕಿ. 150/- ರೂ. 4). ಸಾಂಬರ ನೀಡುವ 03 ಚಮಚಗಳು ಅಂ.ಕಿ. 210/-ರೂ. 5). 01 ಸ್ಟೀಲ್ ಜಗ್ಗು ಅಂ.ಕಿ. 120/-ರೂ. 6). 02 ಸ್ಟೀಲ್ ಚರಗಿ ಅಂ.ಕಿ. 300/-ರೂ. 7). ಅಲ್ಯೂಮೀನಿಯಂದ 01 ಸಣ್ಣ ಡಬರಿ ಅಂ.ಕಿ. 70/- ರೂ. 8). ಅಲ್ಯೂಮೀನಿಯಂ ಲೋಹದ 02 ಬೇಸನ ಪುಟ್ಟಿ ಅಂ.ಕಿ. 300/-ರೂ.ಹೀಗೆ ಒಟ್ಟು 8,150/-ರೂ. ದಷ್ಟು ಬೆಲೆಬಾಳುವ ಪಾತ್ರೆ ಪರಿಕರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 96/2017 ಕಲಂ. 32, 34  ಕರ್ನಾಟಕ ಅಬಕಾರಿ ಕಾಯ್ದೆ:

ದಿನಾಂಕ: 13-07-2017 ರಂದು ಸಂಜೆ 7-30 ಗಂಟೆ ಸುಮಾರಿಗೆ ಆರೋಪಿತನು ಕಲ್ಲೂರು ಕ್ರಾಸ್ ನಲ್ಲಿ ಯಾವುದೇ  ಪರವಾನಿಗೆ ಇಲ್ಲದೇ ಮಧ್ಯದ ಟೆಟ್ರಾ ಪಾಕೇಟಗಳನ್ನು ಮಾರಾಟ ಮಾಡುವ ಉದ್ಧೇಶದಿಂದ ಒಂದು ಕೈ ಚೀಲದಲ್ಲಿ ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಫಿರ್ಯಾದಿದಾರರು, ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಲಾಗಿ ಸದರಿ ಆರೋಪಿತನಿಂದ 1] 90 ML ನ HAYWARDS CHEERS WHISKY- ಒಟ್ಟು 40 (ನಲವತ್ತು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ-28.13 ರೂಗಳಂತೆ ಒಟ್ಟು 1,125.2 ರೂ. ಗಳಾಗಿದ್ದು ಇರುತ್ತದೆ. 2] 180 ML ನ OLD TAVERN WHISKY- ಒಟ್ಟು 10 (ಹತ್ತು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ-68.56 ರೂಗಳಂತೆ ಒಟ್ಟು 685.6 ರೂ. ಗಳಾಗಿದ್ದು ಇರುತ್ತದೆ. ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ 1,810.8/- ರೂ ಆಗುತ್ತದೆ. ಸದರಿ ಆರೋಪಿತನನ್ನು, ಮುದ್ದೇಮಾಲನ್ನು ವಶಪಡಿಸಿಕೊಂಡು ವಾಪಸ್ ಠಾಣೆಗೆ ಬಂದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008