Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, February 28, 2017

1]  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 10/2017 ಕಲಂ: 143, 147, 148, 427, 448, 354, 323, 324, 506 ಸಹಿತ 149 ಐ.ಪಿ.ಸಿ:.
ದಿನಾಂಕ: 27-02-2017 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರೋಪಿತರೆಲ್ಲರೂ ಕೂಡಿಕೊಂಡು ಪಿರ್ಯಾದಿದಾರಳ ಮನೆಯ ಮುಂದಿನ ಗೇಟನ್ನು ಕಿತ್ತು ಹಾಕಿ ಎಲ್ಲರೂ ಏಕಾಏಕಿ ಯಾವ ಕಾರಣ ಇಲ್ಲದಿದ್ದರೂ ಮನೆಗೆ ನುಗ್ಗಿ ಪಿರ್ಯಾದಿದಾರಳಿಗೆ ಹೊಡೆದು ಬಡಿದಿದ್ದು, ಆಕೆಯ ಗಂಡನಿಗೆ ಎಳೆದಾಡಿ ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮಾಡಿದ್ದು, ದೌರ್ಜನ್ಯದಿಂದ ಪಿರ್ಯಾದಿದಾರಳ ಸೀರೆ ಹರೆದು ಮಾನ ಹೋಗುವಂತೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 34/2017 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ:-28-02-2017 ರಂದು ಬೆಳಗಿನ ಜಾವ 3-40 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಮಲ್ಲಿಕಾರ್ಜುನ ತಂದೆ  ಪರಮೇಶ್ವರಪ್ಪ ಸಜ್ಜನ್ ವಯ 44 ವರ್ಷ ಜಾತಿ  ಲಿಂಗಾಯತ . ವ್ಯಾಪಾರ ಸಾ. ವಶಕ್ತಿ ಗ್ಯಾರೇಜ್ ಹಿಂದೆ ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ದಿನಾಂಕ:-27-02-2017 ರಂದು ರಾತ್ರಿ 8-50 ಗಂಟೆಯ ಸುಮಾರಿಗೆ ಕಾರಟಗಿ ಬಸವೇಶ್ವರ ನಗರದಲ್ಲಿರುವ ನವ ಶಕ್ತಿ ಗ್ಯಾರೇಜ್ ಹತ್ತಿರ ಗಂಗಾವತಿ-ಸಿಂಧನೂರು ರಸ್ತೆಯ ಮೇಲೆ ಆರೋಪಿ ಚಾಲಕ ರಂಗನಾಥ ತಂದಿ ವೀರಣ್ಣ ಭೋವಿ ಈತನು ಕಾರಟಗಿ ಹಳೆ ಬಸ್ ನಿಲ್ದಾಣ  ಕಡೆಯಿಂದ ತನ್ನ ಮೋ.ಸೈ ನಂ ಕೆ.-34/ವಾಯ್-7000 ನೇದ್ದನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಯಶೋದ ಗಂಡ ಮಲ್ಲಿಕಾರ್ಜುನ, 35 ವರ್ಷ ಮತ್ತು ಶಿವಮ್ಮ ಗಂಡ ದುರಗಪ್ಪ, 55ವರ್ಷ ಸಾ. ಕಾರಟಗಿ ಇವರಿಗೆ ಟಕ್ಕರ ಮಾಡಿ ಅಪಘಾತಪಡಿಸಿದ್ದರಿಂದ ಯಶೋದಾ, ಶಿವಮ್ಮ ಹಾಗೂ ಮೋಟಾರ್ ಸೈಕಲ್ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಲಕ್ಷ್ಮಣ್ಣ ತಂದಿ ವೀರಣ್ಣ ಇವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತವೆ. ನಾನು ನನ್ನ ಹೆಂಡತಿಯನ್ನು ಮತ್ತು ಶಿವಮ್ಮಳನ್ನು ಹೆಚ್ಚಿನ ಚಿಕಿತ್ಸೆ ಕುರಿತು ಗಂಗಾವತಿಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು ಲಕ್ಷ್ಮಣ್ಣನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಸಿಂಧನೂರಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿದುಕೊಂಡು ಈಗ ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Saturday, February 25, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 31/2017 ಕಲಂ: 78(3) Karnataka Police Act.
ದಿನಾಂಕ:-24-02-2017 ರಂದು ಮದ್ಯಾಹ್ನ 3-45 ಗಂಟೆಗೆ ಮಲ್ಲಪ್ಪ ಎ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟ್ಕಾ ಜೂಜಾಟದ ವರದಿ ಮೂಲ ಪಂಚನಾಮೆ ಮತ್ತು ಮಾನ್ಯ ನ್ಯಾಯಾಲಯದ ಪರವಾನಿಗೆಯೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿಯ ಸಾರಾಂಶದಲ್ಲಿ ಇಂದು ದಿನಾಂಕ:-24-02-2017 ರಂದು ಮದ್ಯಾಹ್ನ 2-00 ಗಂಟೆಗೆ ಹಗೇದಾಳ ಗ್ರಾಮದಲ್ಲಿ ಆರೋಪಿ ಲಕ್ಮಣ ತಂದಿ ಹುಲಿಗೆಪ್ಪ ತಳವಾರ ವಯಾ-26 ವರ್ಷ ಸಾ. ಹಗೇದಾಳ ಈತನು ಹಗೇದಾಳ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಎ.ಎಸ್.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದುಕೊಂಡು ಆರೋಪಿತನಿಂದು  ರೂ. 1450=00 ಗಳನ್ನು ಮತ್ತು ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಆರೋಪಿ ಸಮೇತ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 32/2017 ಕಲಂ: 279, 338 ಐ.ಪಿ.ಸಿ:.
ದಿನಾಂಕ:-24-02-2017 ರಂದು ಸಾಯಂಕಾಲ 6-40 ಗಂಟೆಗೆ ಪಿರ್ಯಾದಿದಾರರಾದ ಬಾಬುಸಾಬ ತಂದಿ ಖಾಜಾಹುಸೇನ ಕೊಪ್ಪಳದ ವಯಾ-62ರ್ಷ ಸಾ.  ಕಾರಟಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಕೊಟ್ಟಿದ್ದ ಸದ್ರಿ ದೂರಿನ ಸಾರಾಂಶದಲ್ಲಿ ಇಂದು ದಿನಾಂಕ:-24-02-2017 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಮೊಮ್ಮಗನಾದ ಅಜ್ಮೀರ ವಯಾ-11 ವರ್ಷ ಇತನಿಗೆ ಟಾಟಾ ಏಸ್ ನಂ ಕೆ.ಎ-35/ಬಿ-1723 ನೆದ್ದರ ಚಾಲಕನು ತಮ್ಮ ವಾಹನದಲ್ಲಿ ಕೂಡಿಸಿಕೊಂಡು ಅತೀ ವೇಗ ಅಲಕ್ಷತನದಿಂದಚಲಾಯಿಸಿಕೊಂಡು ಹೋಗಿದ್ದರಿಂದ ಗಂಗಾವತಿ-ಸಿಂಧನೂರು ರಸ್ತೆಯ ಕಾರಟಗಿ ಸರಕಾರಿ ಆಸ್ಪತ್ರೆಯ ಕ್ರಾಸ್ ಹತ್ತಿರ ಟಾಟಾ ಏಸ್ ವಾಹನದಲ್ಲಿ ಕುಳಿತುಕೊಂಡಿದ್ದ ಅಜ್ಮೀರ ಈತನು ಪುಟಿದು ಕೆಳಗೆ ಬಿದ್ದು ತಲೆಗೆ ಈತರೆ ಕಡೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಟಾಟಾ ಏಸ್ ವಾಹನದ ಚಾಲಕನ ಮೇಲೆಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 26/2017 ಕಲಂ: 41(1)(ಡಿ) ಸಹಿತ 102 ಸಿ.ಆರ್.ಪಿ.ಸಿ ಮತ್ತು 379  ಐ.ಪಿ.ಸಿ:.

ದಿನಾಂಕ 24-02-2017 ರಂದು ಮುಂಜಾನೆ 9-30 ಗಂಟೆಗೆ ಶ್ರೀ ಕಾಮಣ್ಣ, .ಎಸ್.. ಗಂಗಾವತಿ ನಗರ ಪೊಲೀಸ್ ಠಾಣೆ ರವರು ಅಪರಾಧ ವಿಭಾಗದ ಸಿಬ್ಬಂದಿಯವರಾದ ಪಿಸಿ 205 ರವರೊಂದಿಗೆ ಗಂಗಾವತಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತ  ಡಾಲ್ಪಿನ್ ಕ್ರಾಸ್ ಹತ್ತಿರ ಬಂದಾಗ ಆರೋಪಿತನಾದ ರಾಜಾಹುಸೇನಿ @ ಬಾರ್ಡರ್ ತಂದೆ ಅಬ್ದುಲ್ ಗನಿ ವಯಸ್ಸು 24 ವರ್ಷ ಜಾ: ಮುಸ್ಲಿಂ ಸಾ: ಲಕ್ಷ್ಮೀಕ್ಯಾಂಪ್, ಗಂಗಾವತಿ ಇವನು ಒಂದು ಟಿ.ವಿ.ಎಸ್. ಎಕ್ಸ್.ಎಲ್. ವಾಹನದ ಮೇಲೆ ಗಂಗಾವತಿ ಕಡೆಗೆ ಬರುತ್ತಿದ್ದು ಸದರಿಯವನಿಗೆ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದಾಗ ಸದರಿಯವನು ವಾಹನವನ್ನು ನಿಲ್ಲಿಸದೆ ಹಾಗೆಯೇ ಚಲಾಯಿಸಿಕೊಂಡು ಹೋಗಿದ್ದರಿಂದ ಸದರಿಯವನಿಗೆ ಬೆನ್ನಟ್ಟಿ ಹಿಡಿದು  ವಾಹನಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ವಿಚಾರಿಸಿದಾಗ ಸದರಿಯವರು ದಾಖಲಾತಿಗಳನ್ನು ಹಾಜರ ಪಡಿಸಲು ವಿಫಲರಾಗಿದ್ದು ಸದರಿಯವನು ಈಗ್ಗೆ 02 ದಿವಸಗಳಿಂದೆ ಮದ್ಯಾಹ್ನ 02-00 ಗಂಟೆಯ ಸುಮಾರಿಗೆ ಹಗರಿಬೊಮ್ಮನ ಹಳ್ಳಿಯ ಮಾರ್ಕೇಟನಲ್ಲಿನ ಕೊಟ್ಟುರೇಶ್ವರ ಸಿನಿಮಾ ಥೇಟರ್ ಹತ್ತಿರ ನಿಲ್ಲಿಸಿರುವುದನ್ನು ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಹೇಳಿದ್ದರಿಂದ ಸ್ಥಳಕ್ಕೆ ಇಬ್ಬರು ವ್ಯಕ್ತಿಗಳನ್ನು ಹಾಜರ ಪಡಿಸಿಕೊಂಡು ಪಂಚರನ್ನಾಗಿ ನೇಮಿಸಿಕೊಂಡು ಸದರಿಯವರ ಸಮಕ್ಷಮ ಟಿ.ವಿ.ಎಸ್. ಎಕ್ಸ್.ಎಲ್. ಹೆವಿ ಡ್ಯೂಟಿ ವಾಹನವಾಗಿದ್ದು, ಇದರ ನೊಂ.ಸಂ. ವಾಹನ ನೊಂ.ಸಂ K.A.35/W 2687 ಹಸಿರು ಬಣ್ಣದ್ದು ಚಾಸ್ಸಿ MD621BD13B2N97777 ಇಂಜಿನ್ ಸಂ OD1NB11687669  ಅಂ.ಕಿ.ರೂ. 25,000-00.  ಬೆಲೆ ಬಾಳುವುದನ್ನು ಪಂಚರ ಸಮಕ್ಷಮ 9-30 .ಎಂ. ದಿಂದ 10-30 .ಎಂ. ವರೆಗೆ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Friday, February 24, 2017

1] ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 05/2017 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ 23-02-2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿ ಮತ್ತು ರಾಘವೇಂದ್ರ ತಂದೆ ದುರುಗಪ್ಪ ಜೆಲ್ಲಿ ವಯಸ್ಸು 24 ಸಾ: ಮುಕ್ಕುಂಪಿ ಇವರು ತಮ್ಮೂರಿಗೆ ಹೋಗುವ ಕುರಿತು ಅಟೋವನ್ನು ಕಾಯುತ್ತಾ ವಿಶಾಲ ಪ್ರಾವಿಜನ್ ಸ್ಟೋರ್ ಹತ್ತಿರ ನಿಂತಿರುವಾಗ ಅದೇ ವೇಳೆಗೆ ಲಾರಿ ನಂ ಎಪಿ 07-ಟಿಇ 6899 ನೇದ್ದರ ಚಾಲಕನಾದ ಆರೋಪಿತನು ತನ್ನ ಲಾರಿಯಲ್ಲಿದ್ದ ಮಾಲನ್ನು ವಿಶಾಲ ಪ್ರಾವಿಜನ ಸ್ಟೋರ್ ಅಂಗಡಿಗೆ ಇಳಿಸುವ ಕುರಿತು ಒಮ್ಮೆಲೆ ನಿರ್ಲಕ್ಷತನದಿಂದ ಜೋರಾಗಿ ಹಿಂದಕ್ಕೆ ರಿವರ್ಸ ತಗೆದುಕೊಂಡು ಪಿರ್ಯಾದಿಗೆ ಮತ್ತು ರಾಘವೇಂದ್ರ ಇವರಿಗೆ ಟಕ್ಕರ ಕೊಟ್ಟು ಅಪಘಾತ  ಮಾಡಿದ್ದರಿಂದ ಪಿರ್ಯಾದಿದಾರನಿಗೆ ಮತ್ತು ರಾಘವೇಂದ್ರ ಇವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಒಳಪೆಟ್ಟಾಗಿದ್ದು ಇರುತ್ತದೆ. 

Thursday, February 23, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 35/2017 ಕಲಂ: 87 Karnataka Police Act.
ದಿ : 22-02-2017 ರಂದು 4-15 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಗಿಣಿಗೇರಿ ಸೀಮಾದ ಭದ್ರಯ್ಯ ಕೋಳಿ ಫಾರ್ಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 03 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 2100=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 36/2017 ಕಲಂ: 279, 337, 338, 304(ಎ) ಐ.ಪಿ.ಸಿ:.
ದಿ:22-02-2017 ರಂದು ಬೆಳಿಗ್ಗೆ ಫಿರ್ಯಾದಿದಾರರು ದಾಸನಾಳ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ, ವಾಪಾಸ್ ಟಾಟಾ ಎಸಿ ನಂ: ಕೆಎ-37/ಎ-3898 ನೇದ್ದರಲ್ಲಿ ಸುಮಾರು 15 ಜನರು ಕುಳಿತುಕೊಂಡು ಬರುತ್ತಿದ್ದಾಗ, ಇಂದು 4-45 ಪಿ.ಎಮ್ ಸುಮಾರಿಗೆ ಗಂಗನಾಳ-ಮ್ಯಾದನೇರಿ ರಸ್ತೆಯ ಚಿಕ್ಕಸೂಳಿಕೇರಿ ಕ್ರಾಸ್ ಹತ್ತಿರ ಟಾಟಾ ಎಸಿ ವಾಹನದ ಚಾಲಕ ಹನುಮಂತಪ್ಪ ತಳವಾರ ಇತನು ಹಾಗೂ ಅದೇ ಸಮಯಕ್ಕೆ ಎದುರುಗಡೆ ಮ್ಯಾದನೇರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-37/ವಾಯ್ -1907 ನೇದ್ದರ ಚಾಲಕ ಹೀಗೆ ಇವರುಗಳು ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವರೇ ಒಬ್ಬರಿಗೊಬ್ಬರು ಮುಖಾಮುಖಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಟಾಟಾ ಎಸಿ ಚಾಲಕ ಹನುಮಂತಪ್ಪ ತಳವಾರ ಹಾಗೂ ಸದರಿ ಟಾಟಾ ಎಸಿ ವಾಹನದ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಯಮನೂರಪ್ಪ ತಳವಾರ ಇವರಿಗೆ ಹಾಗೂ ಮೋಟಾರ ಸೈಕಲ್ ಸವಾರ ಕಾಶಪ್ಪ ವಡ್ರ ಸಾ: ಕೇಸರಹಟ್ಟಿ ಹಾಗೂ ಹಿಂಬದಿ ಸವಾರ ಶ್ಯಾಮೀದಅಲಿ ಪಿಂಜಾರ ಸಾ: ಕೇಸರಹಟ್ಟಿ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ ಸದರಿ ಪ್ರಕರಣದಲ್ಲಿಯ ಗಾಯಾಳು ಕಾಶಪ್ಪ ವಡ್ಡರ ಸಾ: ಕೇಸರಹಟ್ಟಿ. ಇತನನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇಂದು ರಾತ್ರಿ 10-20 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ [ಮೃತ] ಆಗಿದೆ ಎಂದು ತಿಳಿದುಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 30/2017 ಕಲಂ: 379 ಐ.ಪಿ.ಸಿ:.

ದಿನಾಂಕ:-22-02-2017 ರಂದು ಬೆಳಿಗ್ಗೆ 11:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುದಕಪ್ಪ ತಂದಿ ನಿಂಗಪ್ಪ ಎಡಿಬಾಳ ವಯಾ-40 ವರ್ಷ ಜಾ. ನಾಯಕ ಉ-ಒಕ್ಕಲುತನ ಸಾ.ಹುಳ್ಕಿಹಾಳ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರು ತಮ್ಮ ಹಿರೋ ಹೊಂಡಾ ಸ್ಪಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಕೆ.ಎ-37/ಆರ್-7099 ಅಂ.ಕಿ 25000=00 ರೂ.ಬೆಲೆಬಾಳುವದನ್ನು ದಿನಾಂಕ:-29-12-2016 ರಂದು ಮದ್ಯಾಹ್ನ 4-00 ಗಂಟೆಯಿಂದ ಇದೇ ದಿನ ರಾತ್ರಿ 7-00 ಗಂಟೆಯ ಮದ್ಯದ ಅವಧಿಯಲ್ಲಿ ಶ್ರೀ ದ್ಯಾಮಮ್ಮದೇವಿ ಜಾತ್ರೆಗೆ ಹೋದಾಗ ಫಿರ್ಯಾದಿದಾರರಿಗೆ ಪರಿಚಯಸ್ಥ ಶ್ರೀ  ಪರಸಪ್ಪ ತಂದೆ ದುರಗಪ್ಪ ಕಾರಟಗಿ ಮನೆಯ ಮುಂದೆ ಬಿಟ್ಟಿದ್ದಾಗ್ಗೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇಷ್ಟು ದಿವಸ ಉಳೆನೂರು, ನಂದಿಹಳ್ಳ, ಸಿದ್ದಾಪೂರ, ಕಂಪ್ಲಿ, ಗಂಗಾವತಿ, ಕಮಲಾಪೂರ, ಸಿಂಧನೂರು ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಸಿಗದ ಕಾರಣಕ್ಕೆ ಇಂದು ಬಂದು ದೂರು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    

 
Will Smith Visitors
Since 01/02/2008