ಕೊಲೆ ಪ್ರಕರಣ
ದಿನಾಂಕ: 17-03-2016 ರಂದು ಮದ್ಯಾಹ್ನ 12-15
ಗಂಟೆಗೆ ಪಿರ್ಯಾದಿದಾರರಾದ ಕನಕಪ್ಪ ತಂದೆ
ಮರಿಯಪ್ಪ ಹಳ್ಳದಮಾಳಿ ವಯಾ 58 ವರ್ಷ ಜಾ: ಉಪ್ಪಾರ ಉ: ಒಕ್ಕಲುತನ ಸಾ: ವಣಗೇರಿ
ತಾ:ಕುಷ್ಟಗಿ ಫಿರ್ಯಾದಿಯನ್ನು ನೀಡಿದ್ದು ಫಿರ್ಯಾದಿಯ ಸೊಸೆಯಾದ ಮಂಜುಳಾ
ಈಕೆಯು ಈಗ್ಗೆ ಸುಮಾರು 6-7 ವರ್ಷಗಳಿಂದ ಆಶಾ ಕಾರ್ಯಕರ್ತೆ ಅಂತಾ ಕೆಲಸ ಮಾಡುತ್ತಿದ್ದು, ಆಕೆಯು ನಮ್ಮ
ಗ್ರಾಮದ ಗರ್ಭಿಣಿ ಹೆಣ್ಣುಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಅವರ ಆರೋಗ್ಯದ ಯೋಗಕ್ಷೇಮ
ವಿಚಾರಿಸಿಕೊಳ್ಳುವುದು ಹಾಗೂ ಹೆರಿಗೆ ಸಮಯದಲ್ಲಿ ಅವರೊಂದಿಗೆ ಸರಕಾರಿ ಆಸ್ಪತ್ರೆಗೆ ಹೋಗಿ ಹೆರಿಗೆ
ಮಾಡಿಸಿಕೊಂಡು ಬರುತ್ತಿದ್ದಳು. ಕುರುಬನಾಳ ಗ್ರಾಮದ ಸೀಮಾದಲ್ಲಿ ಕುರುಬನಾಳ-ಕಂದಕೂರ ಹಳೇ ಕಚ್ಚಾ
ರಸ್ತೆಯ ಹತ್ತಿರ ಗುಡ್ಡದಲ್ಲಿ ಒಂದು ಹೆಣ್ಣುಮಗಳ ಶವ ಸುಟ್ಟ ಸ್ಥಿತಿಯಲ್ಲಿ ಬಿದ್ದಿದೆ ಮತ್ತು ಸದರಿ
ಶವ ಹತ್ತಿರ ಸುಟ್ಟ ಸೀರೆ ಇದ್ದು ಅದು ಆಶಾ ಕಾರ್ಯಕರ್ತೆಯರು ಹಾಕಿಕೊಳ್ಳುವ ಸೀರೆ ತರಹ ಇದೆ ಅಂತಾ ಸುದ್ದಿ
ಗೊತ್ತಾಗಿದ್ದರಿಂದ ಸದರಿ ಸ್ಥಳಕ್ಕೆ ಹೋಗಿ ನೋಡಲು ವಿಷಯ ನಿಜ ಇದ್ದು, ಸದರಿ ಶವವನ್ನು ಪರಿಶೀಲಿಸಿ
ನೋಡಲಾಗಿ ದಿನಾಂಕ. 16-03-2016 ರಂದು ರಾತ್ರಿ
7-00 ಗಂಟೆ ಯಿಂದ ದಿನಾಂಕ. 17-03-2016 ರಂದು ಬೆಳಗಿನ 7-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಮಂಜುಳಾ
ಈಕೆಯನ್ನು ಯಾವುದೋ ದ್ವೇಷದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷ್ಯವನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು
ಸದರಿ ಸ್ಥಳದಲ್ಲಿ ತಂದು ಶವದ ಮೈಮೇಲೆ ಸೀಮೆ ಎಣ್ಣೆ ಅಥವಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ
ಮಾಡಿರುತ್ತಾರೆ. ಸದರಿ ಪ್ರಕರಣವನ್ನು
ದಾಖಲಿಸಿಕೊಂಡು ತನಿಖೆ ಕೈ ಗೊಂಡು ಪತ್ತೇ ಹಚ್ಚುವ ಸಲುವಾಗಿ ವಿಶೇಷ ತಂಡ ರಚಿಸಲಾಗಿದೆ.
0 comments:
Post a Comment