Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, June 9, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ:78 (3) KARNATAKA POLICE ACT 1963.
ದಿನಾಂಕ:08-06-2016 ರಂದು ರಾತ್ರಿ 7-20 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಗಿಣಿಗೇರಾ ಗ್ರಾಮದ ಮಸೀದಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್. ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿ ದೇವೇಂದ್ರ ತಂದೆ ಷಣ್ಮೂಖಪ್ಪ ಚೌವ್ಹಾಣ  ವಯ: 30 ವರ್ಷ ಸಾ: ಗಿಣಿಗೇರಾ ಇತನಿಂದ ನಗದು ಹಣ ರೂ. 2,620=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಮತ್ತು ಒಂದು ಮೊಬೈಲ್. ಅಂಕಿ. 300=00 ರೂ. ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 96/2016 ಕಲಂ: 406, 420, ಐ.ಪಿ.ಸಿ.
ದಿನಾಂಕ 29.06.2015 ರಿಂದ 04.03.2016 ರ ನಡುವಿನ ಅವಧಿಯಲ್ಲಿ ಆರೋಪಿ ವಿ.ನಾಗೇಂದ್ರ ತಂದೆ ರಮೇಶ ಸಾ: ಗವಿಮಠ ರೋಡ್ ಕೊಪ್ಪಳ ಇತನು ಫಿರ್ಯಾದಿದಾರರ ಶ್ರೀರಾಮ ಪೈನಾನ್ಸ ನಲ್ಲಿ ಕೆಲವೊಂದು ದಾಖಲೆಗಳನ್ನು ಸಲ್ಲಿಸಿ ಅವರಿಂದ ತಾನು ಕೊಪ್ಪಳ ನಗರದ ಬಸವೇಶ್ವರ ಗಂಜ್ ಹತ್ತಿರ ಕರುಣಾಮಯ ಕೃಪಾ ಟಾಯರ್ಸ ಅಂತಾ ಎಮ್.ಆರ್.ಎಫ್ ಕಂಪನಿಯ ಟಾಯರಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತೇನೆ ಅದಕ್ಕಾಗಿ ತಮ್ಮ ಪೈನಾನ್ಸನಿಂದ ಸಾಲದ ರೂಪವಾಗಿ 200000=00 ರೂಪಾಯಿಗಳನ್ನು ಪಡೆದುಕೊಂಡು ಸ್ವಲ್ಪ ದಿನಗಳ ನಂತರ ಫಿರ್ಯಾದಿದಾರರ ಶ್ರೀರಾಮ ಪೈನಾನ್ಸಗೆ ಸಾಲದ ಹಣವನ್ನು ಪಾವತಿಸದೇ ತನ್ನ ಅಂಗಡಿಯನ್ನು ಬಂದ ಮಾಡಿಕೊಂಡು ಎಲ್ಲಿಯೋ ಹೋಗಿದ್ದ ಕಾರಣ ತಮ್ಮ ಪೈನಾನ್ಸಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿದ್ದ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 97/2016 ಕಲಂ: 420, 34 ಐ.ಪಿ.ಸಿ.
ಆರೋಪಿ ಸಂತೋಷ ಕುಮಾರ ತಂದೆ ಪ್ರಭಂಜನ್ ರಾವ್ ವಿರಾಪೂರ್ ಸಾ: ಬಳ್ಳಾರಿ ಇತನು ಕೊಪ್ಪಳ ನಗರದ ಹುಡ್ಕೋ ಕಾಲೋನಿಯಲ್ಲಿ ವಿ3 ಲೈಫ್ ಕೇರ್ ಇಂಡಿಯಾ ಲಿ. ಅಂತಾ ಖಾಸಗಿ ಕಂಪನಿಯನ್ನು ತೆರೆರಿದ್ದು ಸದರಿ ಆರೋಪಿತರು ಫಿರ್ಯಾದಿ ನಾಗೇಶಯ್ಯ ಇವರಿಗೆ ತಮ್ಮ ಕಂನಿಯಲ್ಲಿ ಪ್ಲ್ಯಾಯಿಂಗ್ ಫ್ಯಾನ್ಟಸಿ 25000 ಟ್ರೀಸರ್ ಆಫ್ ಇಂಡಿಯಾ 49999 ಎಂಬ ಹೊಸದಾಗಿ ಯೋಜನೆಯನ್ನು ಹುಟ್ಟುಹಾಕಿ ಅದರಲ್ಲಿ ಹಣವನ್ನು ಹೂಡಿಕೆ ಮಾಡಿದರೇ ವಿದೇಶ ಪ್ರವಾಸ ಮತ್ತು ಮನೆಗೆ ಗೃಹ ಬಳಕೆ ವಸ್ತುಗಳನ್ನ ಮತ್ತು ಪಿಠೋಪಕರಣಗಳನ್ನು ಒದಗಿಸಿಕೊಡುತ್ತೇವೆ ಅಂತಾ ನಂಬಿಕೆ ಬರುವಂತೆ ಹೇಳಿ ದಿನಾಂಕ 05.11.2011 ರಂದು 1, 29,498 ರೂಪಾಯಿಗಳನ್ನು ಪಡೆದುಕೊಂಡು ಹಣವನ್ನು ವಾಪಾಸ ನೀಡದೇ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 110 (ಎ)&(ಜಿ)  ಸಿ.ಆರ್.ಪಿ.ಸಿ.
ದಿನಾಂಕ 08.06.2016 ರಂದು ಸಾಯಂಕಾಲ 5:00 ಗಂಟೆಗೆ ಪಿ.ಸಿ 70-ಇಬ್ರಾಹಿಂ ಕೊಪ್ಪಳ ನಗರ ಪೊಲೀಸ್ ಠಾಣೆರವರು ಹಾಜರಾಗಿ ಒಂದು ಗಣಕೀಕೃತ ವರದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:08-06-2016 ರಂದು ಮದ್ಯಾನ 4-00 ಗಂಟೆಗೆ ನಾನು ನಮ್ಮ ಠಾಣೆಯ ಸಿಬ್ಬಂದಿ ಯವರಾದ ಪಿಸಿ-332 ಸಣ್ಣವೀರಣ್ಣ ಇವರೊಂದಿಗೆ ಗೌರಿ ಅಂಗಳದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಹೊರಟಿದ್ದಾಗ ಇಬ್ಬರೂ ವ್ಯಕ್ತಿಗಳು ಗೌರಿಅಂಗಳದ ದ್ಯಾಮವ್ವ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಯಾವ ಸೂಳೇ ಮಕ್ಕಳು ಯಾರು ನಮಗೇನು ಮಾಡುವುದಿಲ್ಲಾ ಅಂತಾ ಒದರಾಡುತ್ತಾ ರಸ್ತೆಯ ಮೇಲೆ ಹೋಗಿ ಸಾರ್ವಜನಿಕರಿಗೆ ಹಾಗೂ ದೇವಸ್ಥಾನಕ್ಕೆ ಬರುವ ಜನರಿಗೆ ಸತಾಯಿಸುತ್ತಿದ್ದಾಗ ಸದರಿಯವರನ್ನು ಹಿಡಿದುಕೊಂಡು ಅವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರು 1] ಅಲ್ತಾಫ್ ತಂದೆ ಮಹ್ಮದಸಾಬ ಹಾಲಹಳ್ಳಿ ವಯಾ: 19 ವರ್ಷ ಜಾ: ಮುಸ್ಲಿಂ ಉ: ಬೇಲ್ದಾರ ಕೆಲಸ ಸಾ: ನಿರ್ಮಿತಿ ಕೇಂದ್ರದ ಹತ್ತಿರ ಕೊಪ್ಪಳ 2] ಮುಜಾಹೀದ್ದಿನ್ ತಂದೆ ಶಕೀಲ್ ಅಹ್ಮದ್ ಸಂಗಟಿ ವಯಾ: 19 ವರ್ಷ, ಜಾ: ಮುಸ್ಲಿಂ  ಉ: ಕೂಲಿ ಕೆಲಸ ಸಾ: ಗೌರಿ ಅಂಗಳ ಕೊಪ್ಪಳ  ಅಂತಾ ಹೇಳಿದ್ದು, ಸದರಿ ಆರೋಪಿತರನ್ನು ಹಾಗೆಯೇ ಬಿಟ್ಟಲ್ಲಿ ಸದರಿಯವರು ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಮುಂಜಾಗೃತೆ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 155/2016 ಕಲಂ: 506,498A,504,324 ಐ.ಪಿ.ಸಿ. 
ದಿನಾಂಕ :08-06-2016 ರಂದು ಸಂಜೆ 05-00 ಗಂಟೆಗೆ ಕುಷ್ಟಗಿ ಪೊಲೀಸ್ ಠಾಣೆಯ ವೈಜನಾಥ ಹೆಚ್.ಸಿ-45 ರವರು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ನಿರ್ಮಲಾ ಗಂಡ ಹಾಮಪ್ಪ ಲಮಾಣಿ ಸಾ:ತೊಣಸಿಹಾಳತಾಂಡಾ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು  ಬಂದು ಹಾಜರಪಡಿಸಿದ್ದು ಸದರಿ ಪಿರ್ಯಾದಿ ಸಾರಾಂಶವೆನೆಂದರೆ. ಸದರಿ ಪಿರ್ಯಾದಿದಾರಳ ಮದುವೆಯಾಗಿ ಸುಮಾರು 14 ವರ್ಷಗಳು ಆಗಿದ್ದು. ಮೂರು ಮಕ್ಕಳು ಇದ್ದು ಸದರಿ ಮಕ್ಕಳಿಗೆ ಪಿರ್ಯಾದಿದಾರಳೇ ಲಾಲನೇ ಪಾಲನೇ ಮಡುತ್ತಿದ್ದು ಪಿರ್ಯಾದಿಯ ಗಂಡನಾದ ಹಾಮಪ್ಪ ಈತನು ಮದುವೆಯಾದ ನಂತರ ವಿನಾಃಕಾರಣ ಸಂಶಯ ಪಡುತ್ತಾ ತನ್ನ ಸಂಗಡ ಜಗಳ ತೆಗೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಬಂದು ನಿನ್ನೆ ದಿನಾಂಕ:07-06-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಅವಾಚ್ಯವಾಗಿ ಬೈದಾಡುತ್ತಾ ಹೊಡಿಬಡಿ ಮಾಡುತ್ತಾ ನೀನು ಇವತ್ತು ಸತ್ತು ಹೋಗು ಅಂತಾ ಬಾಟಲಿಯಲ್ಲಿದ್ದ ಸೀಮೆಎಣ್ಣಿಯನ್ನು ಪಿರ್ಯಾದಿಯ ಮೇಲೆ  ಹಾಕಿದ್ದು ಪಿರ್ಯಾದಿದಾರಳು ನನಗೆ ನೀನು ಏನು ಸಾಯಿಸುತ್ತಿ  ನಾನೇ ಸಾಯುತ್ತೇನೆ ಅಂತಾ ಅಂದವಳೇ ಬೆಂಕಿಕಡ್ಡಿಯಿಂದ ಬೆಂಕಿ ಹಚ್ಚಿಕೊಂಡಿದ್ದು ಇರುತ್ತದೆ. ನಂತರ ತನ್ನ ಗಂಡನು  ಮತ್ತು ಮಗನಾದ ರಾಹುಲ್ ಇವರು ಬೆಂಕಿ ಹಾರಿಸಿ ಚಿಕಿತ್ಸೆ ಕುರಿತು 108 ಅಮಬುಲೆನ್ಸ ನಲ್ಲಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಆಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆಯ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 157/2016 ಕಲಂ:78(3) Karnataka Police Act 

ದಿನಾಂಕ: 08-06-2016 ರಂದು ರಾತ್ರಿ 9-00 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಟಗಿ ಪಟ್ಟಣದ ಕನಕದಾಸ ವೃತ್ತ ಟೇಲಿಪೋನ್ ಆಫೀಸ್ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಅಬ್ದುಲ್ ಸಲೀಂ ತಂದೆ ಮಂಜೂರು ಸಾಬ ಮುದುಗಲ್ ವಯ: 30 ವರ್ಷ, ಜಾ: ಮುಸ್ಲಿಂ, ಉ: ವೈರಿಂಗ್ ಕೆಲಸ, ಸಾ: ಮದೀನಾ ಗಲ್ಲಿ ಕುಷ್ಟಗಿ ತಿಳಿಸಿದ್ದು ಸದರಿಯವನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 522-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ  ಮತ್ತು ಸೆಲ್ ಕಾನ್ ಕಂಪನಿಯ ಮೋಬೈಲ್ ಅಂ:ಕಿ:500/- ರೂ:ಗಳು ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಬಾಸ್ಕರ ಸಾವಜಿ ಸಾ: ಕುಷ್ಟಗಿ ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Wednesday, June 8, 2016

1] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 23/2016 ಕಲಂ: 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 07-06-2016 ರಂದು ರಾತ್ರಿ 7-35 ಗಂಟೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಬಸಪ್ಪ ಕೊಡದಾಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 07-06-2016 ರಂದು ನಾನು ಮತ್ತು ನಮ್ಮ ಅಣ್ಣ ಶರಣಪ್ಪ ಇಬ್ಬರೂ ನಮ್ಮ ಮೋಟಾರ್ ಸೈಕಲ್ ನಂಬರ್ KA 36 / R 6122 ನೇದ್ದನ್ನು ತೆಗೆದುಕೊಂಡು ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದು, ಅಲ್ಲಿ ಕೆಲಸವನ್ನು ಮುಗಿಸಿಕೊಂಡು ಮೆಕ್ಕೆಜೋಳದ ಪಾಕೀಟ್ ಗಳನ್ನು ತೆಗೆದುಕೊಂಡು ವಾಪಾಸ್ ನಮ್ಮೂರಿಗೆ ಹೋಗಲು ನನ್ನ ಮೋಟಾರ್ ಸೈಕಲ್ ಹಿಂದೆ ನಮ್ಮ ಅಣ್ಣನನ್ನು ಕೂಡಿಸಿಕೊಂಡು ಕುಷ್ಟಗಿ ರಸ್ತೆಯ ಮೇಲೆ ರೇಲ್ವೆ ಗೇಟ್ ದಾಟಿ ಗುರು ಗಾರ್ಡನ್ ಹೊಟೆಲ್ ಸಮೀಪ ಕಾಮನೂರು ಕಡೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಕಾರ್ ನಂ. KA 37 / M 5223 ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಕಾರನ್ನು ತನ್ನ ಮುಂದೆ ಬರುತ್ತಿರುವ ವಾಹನವನ್ನು ಓವರ್ ಟೇಕ್ ಮಾಡಿ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದು, ಇದರಿಂದ ನಾವು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಇದರಿಂದ ನನಗೆ ಬಲಗಾಲಿನ ಬೆರಳುಗಳಿಗೆ, ಬಲಗೈ ಮೊಣಕೈ ಗೆ ರಕ್ತಗಾಯ, ನನ್ನ ಅಣ್ಣ ಶರಣಪ್ಪ ಈತನಿಗೆ ಬಲಗಾಲಿನ ಪಾದಕ್ಕೆ, ಪಾದದ ಮೇಲ್ಭಾಗ ಮತ್ತು ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಯು.ಡಿ.ಆರ್. ನಂ: 12/2016 ಕಲಂ: 174 ಸಿ.ಆರ್.ಪಿ.ಸಿ:.
ದಿನಾಂಕ:-07-06-2016 ರಂದು ಸಾಯಂಕಾಲ  4-40 ಗಂಟೆಗೆ ಪಿರ್ಯಾದುದಾರರಾದ ಕೇಶಪ್ಪ ತಂದಿ ದೇವಪ್ಪ ಅರಳ್ಳಿ ವಯಾ- 38 ವರ್ಷ ಜಾ. ನಾಯಕ ಸಾ. ನಂದಿಹಳ್ಳಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸಾರಾಂಶದಲ್ಲಿ ನಂದಿಹಳ್ಳಿ ಸೀಮಾದಲ್ಲಿ ಪಿರ್ಯಾದಿದಾರರ ಜಮೀನು ಇದ್ದು ಸದ್ರಿ ಜಮೀನಿನಲ್ಲಿ ಪಿರ್ಯಾದಿದಾರ ಮತ್ತು ಈತನ ಹೆಂಡಿತಿ ಶ್ರೀಮತಿ  ರಾಜಮ್ಮ ಗಂಡ ಕೇಶಪ್ಪ ಅರಳ್ಳಿ ಇವರು  ಇಂದು ದಿನಾಂಕ-07-06-2016 ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ್ಗೆ ಮದ್ಯಾಹ್ನ 2-45 ಗಂಟೆಯಿಂದ 3-00 ಗಂಟೆಯ ಅವಧಿಯಲ್ಲಿ ಹೊಲದಲ್ಲಿ ಕೃಷ್ಷಿ ಚಟುವಟಿಯಲ್ಲಿ ತೊಡಗಿದ್ದಾಗ್ಗೆ ಪ್ರಕೃತಿ ವಿಕೋಪದಿಂದ ಬಾರಿ ಮಳೆ ಗಾಳಿ ಬಂದಿದ್ದರಿಂದ ಸದ್ರಿ ಶ್ರೀಮತಿ ರಾಜಮ್ಮ ಈಕೆಯು ಗಿಡದ ಚಾಟಿನಲ್ಲಿ ನಿಂತಿದ್ದಾಗ್ಗೆ ಮಳೆಯೊಂದಿಗೆ ಬಂದ ಬಾರಿ ಸಿಡಿಲು ರಾಜಮ್ಮಳಿಗೆ ಬಡಿದು ಹೊಟ್ಟೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಯು.ಡಿ.ಅರ್. ನಂ: 11/2016 ಕಲಂ: 174(ಸಿ) ಸಿ.ಆರ್.ಪಿ.ಸಿ:.
ದಿನಾಂಕ : 07-06-2016 ರಂದು ಸಾಯಂಕಾಲ 5-30 ಗಂಟೆಗೆ ಫಿರ್ಯಾದಿದಾರರರಾದ ಗವಿಸಿದ್ದಪ್ಪ ತಂದೆ ಈರಣ್ಣ ಜತ್ತಿ ವಯಾ: 25 ವರ್ಷ ಜಾತಿ: ಲಿಂಗಾಯತ ಬಣಜಿಗ ಉ: ಖಾಸಗಿ ಜೀಪ್ ಚಾಲಕ ಸಾ: ಇರಕಲ್ ಗಡ ತಾ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸದರಿ ಸಾರಾಂಶವೆನೆಂದರೆ ಇಂದು ದಿನಾಂಕ: 07-06-2016 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಕೊಪ್ಪಳದಿಂದ ಕುಷ್ಟಗಿಗೆ ನನ್ನ ಕ್ರಷರ್ ನೇದ್ದರಲ್ಲಿ ಕೆಲವೊಂದು ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದು,  ಅವರಲ್ಲಿ ಒಬ್ಬ ಅಂದಾಜು 40 ವರ್ಷದ ಒಬ್ಬ ವ್ಯಕ್ತಿಯು ಸಹ ನನ್ನ ಕ್ರಷರ್ ನ್ನು ಹತ್ತಿದ್ದು ಸದರಿಯವನು ತುಂಬಾ ಮದ್ಯಪಾನ ಮಾಡಿದ್ದು ಅವನಿಗೆ ನಿಲ್ಲಲೂ ಬಾರದ ಸ್ಥಿತಿಯಲ್ಲಿದ್ದನು. ಸದರಿಯವನು ಕುಷ್ಟಗಿಗೆ ಕರೆದುಕೊಂಡು ಹೋಗುವಂತೆ ತಿಳಿಸಿ ಹಣ ಕೊಟ್ಟಿದ್ದು, ನಂತರ ನಾವು ಕುಷ್ಟಗಿಗೆ ಮಧ್ಯಾನ್ಹ 12-00 ಗಂಟೆ ಸುಮಾರಿಗೆ ಬಂದಿದ್ದು, ಆಗ ಸದರಿ ನನ್ನ ಕ್ರಷರ್ ನಲ್ಲಿ ಇದ್ದ ಎಲ್ಲಾ ಪ್ಯಾಸೆಂಜರ್ ರವರು ಕುಷ್ಟಗಿಯ ಅಮರೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿ ಹತ್ತಿರ ಇಳಿದಿದ್ದು, ಸದರಿ ಮದ್ಯಪಾನ ಮಾಡಿದ ವ್ಯಕ್ತಿಯು ಸಹ ಇಳಿದಿದ್ದು, ನಂತರ ನಾನು ನನ್ನ ಕ್ರಷರ್ ನ್ನು ಸ್ವಲ್ಪ ದೂರ ಮುಂದೆ ತೆಗೆದುಕೊಂಡು ಹೋಗಿ ಪಾರ್ಕಿಂಗ್ ಮಾಡಿ ನಿಲ್ಲಿಸಿ ನಾನು ಬಸ್ ಸ್ಟಾಂಡ್ ಹತ್ತಿರ ಕೊಪ್ಪಳ ಕಡೆಗೆ ಹೋಗುವ ರಸ್ತೆಯಲ್ಲಿ ನಿಂತಿದ್ದಾಗ ಸದರಿ ನಮ್ಮ ಕ್ರಷರ್ ವಾಹನದಲ್ಲಿ ಬಂದಿದ್ದ ಮದ್ಯಪಾನ ಮಾಡಿದ ವ್ಯಕ್ತಿಯು ಅಮರೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿ ಹತ್ತಿರ ನಿಂತಿದ್ದ ವ್ಯಕ್ತಿಯು ಏಕಾಏಕಿ ಅಲ್ಲಿಯೇ ಕುಸಿದು ಕೆಳಗೆ ಮಲಗಿದನು, ಆಗ ನಾನು ಮತ್ತು ಅಲ್ಲಿದ್ದ ಕೆಲವು ಜನರು ಸದರಿ ವ್ಯಕ್ತಿಯ ಹತ್ತಿರ ಹೋಗಿ ನೋಡಿದಾಗ ಆತನು ತುಂಬಾ ತ್ರಾಸ ಮಾಡಿಕೊಳ್ಳುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಆತನಿಗೆ ನೀರು ತಂದು ಕುಡಿಸಿದೆವು ಅಷ್ಟರಲ್ಲಿ ಸದರಿಯವನು ಮೃತಪಟ್ಟನು. ಸದರಿ ಮೃತ ವ್ಯಕ್ತಿಯು ಸುಮಾರು 40 ವರ್ಷದವನಾಗಿದ್ದು, ನೀಲಿ ಬಣ್ಣದ ಲೈನಿಂಗ್ ಶರ್ಟ, ಒಳಗೆ ಹಳದಿ ಬಣ್ಣದ ಟೀ-ಶರ್ಟ ಹಾಗೂ ಕಪ್ಪು ನಾಶಿ ಬಣ್ಣದ ಪ್ಯಾಂಟ್ ಧರಿಸಿದ್ದು, ಮುಖದ ಮೇಲೆ ಗಡ್ಡ ಮೀಸೆ ಇದ್ದು, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ಸುಮಾರು 5.5 ಅಡಿ ಎತ್ತರ ಇರುತ್ತಾನೆ. ಆತನ ಮೈ ಮೇಲೆ ಯಾವದೇ ಗಾಯ ವಗೈರೆ ಇರುವದಿಲ್ಲ. ವ್ಯಕ್ತಿಯು ಮದ್ಯಪಾನ ಮಾಡಿದ ಅಮಲಿನಲ್ಲಿ ಹೃದಯಾಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  


Tuesday, June 7, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 279, 338 ಐ.ಪಿ.ಸಿ:.
ದಿ:06-06-2016 ರಂದು 7-00 ಪಿ.ಎಮ್ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೈಕೆಯಲ್ಲಿದ್ದ ಈರಣ್ಣ ಧರ್ಮಾಪೂರ. ಸಾ: ಗಿಣಿಗೇರಿ. ತಾ:ಕೊಪ್ಪಳ. ಇವರು ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇಇಂದು ದಿ:06-06-16 ರಂದು ಸಂಜೆ 5-00 ಗಂಟೆಯ ಸುಮಾರಿಗೆ ತನ್ನ ಅಣ್ಣ ಯಲ್ಲಪ್ಪನು ಭೀಮನೂರ ಕಡೆ ಹೊಲದಿಂದಾ ವಾಪಾಸ್ ಮನೆಗೆ ಅಂತಾ ಬರುವಾಗ ಭೀಮನೂರ ರಸ್ತೆಯಲ್ಲಿ ತನ್ನ ಮೋಟಾರ ಸೈಕಲ್ ನಂ: ಕೆಎ-37/ಇಎ-8452 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ಬರುವಾಗ ನಿಯಂತ್ರಿಸದೇ ಸ್ಕಿಡ್ ಮಾಡಿಕೊಂಡು ಬಿದ್ದಿದ್ದು ಇರುತ್ತದೆ. ಈ ಅಪಘಾತದಲ್ಲಿ ಯಲ್ಲಪ್ಪನ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿಯಲ್ಲಿ ರಕ್ತ ಬಂದಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.       
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 47/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 06-06-2016 ರಂದು ಇಲಗಲ್ ಮಹಾಂತೇಶ(ಅಕ್ಕಿ) ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಗಾಯಾಳು ಯಲಗೂರದಪ್ಪ ತಂದೆ ಮಕಾಳೆಪ್ಪ ವಡಗೇರಿ. ಸಾ:ಕುಂಬಳಾವತಿ ರವರ ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ತನ್ನ ಮೋಟಾರ ಸೈಕಲ್ ನಂ. ಕೆ.ಎ-37/2041 ನೇದ್ದನ್ನು ತೆಗೆದುಕೊಂಡು ಅವರ ಮಾವ ಬಸಪ್ಪ ತಂದೆ ಹೊಳೆಯಪ್ಪ ಜೋಗಿನ ಈತನನ್ನು ಹಿಂದಗಡೆ ಕೂಡಿಸಿಕೊಂಡು ಕುಂಬಳಾವತಿ ಗ್ರಾಮ ಇನ್ನೂ 1 ಕಿ.ಮೀ. ದೂರ ಇರುವಾಗ ದ್ಯಾಮವ್ವನ ಪಾದಗಟ್ಟಿ ಹಾಗೂ ಆಂಜನೇಯ ದೇವಸ್ಥಾನದ ನಡುವೆ ಕುಂಬಳಾವತಿ ಗ್ರಾಮದ ಕಡೆಗೆ ಹೊರಟಾಗ ಎದುರುಗಡೆಯಿಂದ ಬಂದ ಮೋಟಾರ ಸೈಕಲ್ ನಂ:ಕೆ.ಎ-36/ಇ.ಸಿ-9693 ನೇದ್ದರ ಸವಾರ ಅತೀವೇಗ ಹಾಗೂ ಆಲಕ್ಷತನದಿಂದ ತನ್ನ ಮೋಟಾರ ಸೈಕಲನ್ನು ನಡೆಸಿಕೊಂಡು ಬಂದು ನನ್ನ ಮೋಟಾರ ಸೈಕಲನ ಬಲಗಡೆಯ ಕನ್ನಡಿಗೆ ಟಕ್ಕರಕೊಟ್ಟಿದ್ದು, ಅಪಘಾತಪಡಿಸಿದ್ದು, ಆಗ ನಾನು ಮತ್ತು ನಮ್ಮ ಮಾವ ಬಸಪ್ಪ ಜೋಗಿನ ಇಬ್ಬರೂ ಮೋಟಾರ ಸಮೇತ ಕೆಳಗೆ ಬಿದ್ದೇವು. ನನಗೆ ಬಲಗಡೆ ಪಾದಕ್ಕೆ, ಬಲ ಮೊಣಕಾಲಿಗೆ. ಬಲಗಡೆ ನಡಕ್ಕೆ ರಕ್ತ ಗಾಯಗಳಾಗಿರುತ್ತವೆ. ನಮ್ಮ ಮಾವ ಬಸಪ್ಪನಿಗೆ ಬಲಗಡೆ ಮೊಣಕಾಳಿಗೆ ಮೂಕಪೆಟ್ಟು. ಬಲಗಡೆ ಚೆಪ್ಪೆ ಮತ್ತು ನಡಕ್ಕೆ ರಕ್ತ ಗಾಯಗಳಾಗಿರುತ್ತವೆ. ಸಾದಾ ಹಾಗೂ ತೀವ್ರ ಸ್ವರೂಪದ ಗಾಯಪಡಿಸಿ ಓಡಿ ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 465, 468, 420, 425 ಐ.ಪಿ.ಸಿ :.
ಶ್ರೀ. ಕೊಟ್ರಬಸಯ್ಯ ಫಿರ್ಯಾದಿದಾರರು ಕೊಪ್ಪಳ ನಗರದ ಸರ್ವೆ ನಂ 644/4 ನೇದ್ದರಲ್ಲಿ 20 ಗುಂಟೆ ಜಾಗೆಯನ್ನು ಖರೀದಿ ಮಾಡಿದ್ದು ಆರೋಪಿತರು ಫಿರ್ಯಾದಿದಾರರ ನಕಲಿ ಸಹಿ ಮಾಡಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ತಹಸೀಲ್ ಆಫೀಸಿಗೆ ಕೊಟ್ಟು ಎನ್.ಎ. ಜಾಗೆ ಅಂತಾ ಸದರಿ ಜಾಗೆಯನ್ನು ಭೂ ಪರಿವರ್ಥನೆ ಮಾಡಿಸಿಕೊಂಡು ಸರ್ವೆ ಆಫೀಸಲ್ಲಿ ಫಿರ್ಯಾದಿದಾರರು ಅರ್ಜಿಯನ್ನು ಸಲ್ಲಿಸದೇ ಮತ್ತು ಫಿರ್ಯಾದಿದಾರರ ಗಮನಕ್ಕೆ ತರದೇ ಫಾರಂ ನಂ 10 ಮಾಡಿಸಿಕೊಂಡು ಮೊಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 110/2016 ಕಲಂ: 406, 420 ಸಹಿತ 34  ಐ.ಪಿ.ಸಿ :.

ನಾಗರಾಜ ತಂದೆ ಗುದ್ನೆಪ್ಪ  ಹಂಚಿನಾಳ   ಫಿರ್ಯಾದಿದಾರರು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಆರೋಪಿತರಾದ ಶ್ರೀನಿವಾಸ ಮತ್ತು ಶರಣಪ್ಪ ರವರು ಸಿ.ಬಿ.ಎಸ್. ಗಂಜದಲ್ಲಿ ಶ್ರೀ ರಾಘವೇಂದ್ರ ಕ್ಯಾನ್ವಸಿಂಗ್ ಹೆಸರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಆರೋಪಿತರಿಬ್ಬರು ಕೂಡಿಕೊಂಡು ದಿನಾಂಕ 04-02-2016 ರಿಂದ ದಿನಾಂಕ   03-03-2016 ರ   ಅವಧಿಯಲ್ಲಿ ಫಿರ್ಯಾದಿದಾರರಿಂದ ರೂ. 9,49,544-00 ಬೆಲೆ ಬಾಳುವ ಅಕ್ಕಿಯನ್ನು ಮಾರಾಟ   ಮಾಡಿಸುವ ಕುರಿತು ತೆಗೆದುಕೊಂಡು ಸದರಿ ಹಣವನ್ನು ಫಿರ್ಯಾದಿದಾರರಿಗೆ ಕೊಡದೆ ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದು ಅಲ್ಲದೇ ಅದರಂತೆ ಸಿ.ಬಿ.ಎಸ್. ಗಂಜದಲ್ಲಿ ವ್ಯಾಪಾರ ಮಾಡಕೊಂಡಿರುವ (01) ಶ್ರೀ ಶಿವ ಮಂಜುನಾಥ &  ಕೋ.ದ ಶರಣೇಗೌಡ ಇವರಿಂದ ರೂ.5,49,853-00 ಬೆಲೆ ಬಾಳುವ ಅಕ್ಕಿ. (02) ಶ್ರೀ ಟ್ರೇಡರ್ಸ್ನ  ಮಾಲೀಕರಾದ   ಲಲೀತ್ ಕುಮಾರ ಸುರಾನ ಇವರಿಂದ ರೂ. 5,37,370-00 ಬೆಲೆ ಬಾಳುವ ಅಕ್ಕಿ. (03) ರಾಜಶ್ರೀ & ಕಂಪನಿ  ಮಾಲೀಕರು ಶ್ರೀಮತಿ ಶೋಭಾ,ಆರ್.ಸುರಾನ ರವರಿಂದ ಒಟ್ಟು ಹಣ ರೂ. 3,84,153-00 ಬೆಲೆ ಬಾಳುವ ಅಕ್ಕಿ. (04) ಸಿಮ್ರತ್ ಮಲ್ ಪನ್ನಲಾಲ್ ಸುರಾನ ಅಂಗಡಿಯ ಮಾಲೀಕರಾದ ರಾಜೇಶಕುಮಾರ ಸುರಾನ ರವರಿಂದ ಒಟ್ಟು ರೂ.6,08,300-00 ಬೆಲೆ ಬಾಳುವ ಅಕ್ಕಿ. ಈ ರೀತಿಯಾಗಿ ಒಟ್ಟು ರೂ. 30,29,220-00 ಬೆಲೆ ಬಾಳುವ ಅಕ್ಕಿಯನ್ನು ಮಾರಾಟ ಮಾಡಿಸುವ ಕುರಿತು ತೆಗೆದುಕೊಂಡು ಇದರ ಹಣವನ್ನು ಸದರಿಯವರಿಗೆ ವಾಪಸ್ ಕೊಡದೆ ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Saturday, June 4, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ: 78(3) Karnataka Police Act.
ದಿನಾಂಕಃ- 03-06-2016 ರಂದು  ರಾತ್ರಿ 8-35 ಗಂಟೆಯ ಸುಮಾರಿಗೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 03-06-2016 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮ ಜುಮ್ಮಾ ಮಸದಿ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ  ಆರೋಪಿ  1) ನಬಿಸಾಬ ತಂದಿ ಅಮೀನಸಾಬ 2) ಬಸವನಗೌಡ ತಂದೆ ನಂದಪ್ಪ  ಸಾ. ಸಿದ್ದಾಪೂರ ರವರ ಮೇಲೆ ದಾಳಿ ಮಾಡಲು ಆರೋಪಿ ನಂ 2 ಈತನು ಓಡಿ ಹೋಗಿದ್ದು ಆರೋಪಿ ನಂ 1 ಈತನಿಗೆ ಹಿಡಿದುಕೊಂಡು ಈತನ ಕಡೆಯಿಂದ ನಗದು ಹಣ ರೂ,. 3755=00 ಗಳನ್ನು ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಈತನು ಬರೆದ ಪಟ್ಟು ಮತ್ತು ಹಣವನ್ನು ಆರೋಪಿ ನಂ 3 ಸಿದ್ದಪ್ಪ ತಂದಿ ಹನುಮಂತಪ್ಪ ಉಪ್ಪಾರ ಸಾ. ಈಳಿಗನೂರು ಈತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ಅಂತಾ ಮುಂತಾಗಿ ನೀಡದ ವರದಿಯ ಸಾರಾಂಶದ ಮೇಲಿಂದ  ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 121/2016 ಕಲಂ: 279, 304(ಎ) ಐ.ಪಿ.ಸಿ :.
ದಿನಾಂಕ 03-06-2016 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಆರೋಪಿತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ಸಂ. ಕೆ.ಎ.37 ಡಬ್ಲ್ಯೂ 2183 ನೇದ್ದನ್ನು ಚಲಾಯಿಸಿಕೊಂಡು ಕನಕಗಿರಿಯಿಂದ ಕಲ್ಕೇರಿಯ ಕಡೆಗೆ ಹೋಗುವ ರಸ್ತೆಯ ಮೇಲೆ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮೋಟಾರ್ ಸೈಕಲನ್ನು ನಡೆಯಿಸಿ ರೋಡ್ ಬ್ರೆಕ್ ತಪ್ಪಿಸಲು ಹೋಗಿ ಮೋಟಾರಸೈಕಲನ್ನು ನಿಯಂತ್ರಿಸಲಾಗದೇ ಕಲ್ಲಿಗೆ ಟಕ್ಕರ್ ಕೊಟ್ಟಿದ್ದು ಇದರಿಂದ ಆರೋಪಿತನಿಗೆ ತಲೆಗೆ ಭಾರಿ ರಕ್ತಗಾಯವಾಗಿ, ಸ್ಥಳದಲ್ಲಿಯೇ ಆರೋಪಿತನು ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 379 ಐ.ಪಿ.ಸಿ :.
ದಿನಾಂಕ: 03-06-2016 ರಂದು 7-30 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾದಿದಾರರ ಮಾಲೀಕತ್ವದ ಮೋಟರ ಸೈಕಲ್ ನಂ. ಕೆಎ-34/ಎಕ್ಸ್-1784 ಅಂ.ಕಿ 10,000-00 ರೂ. ನೇದ್ದನ್ನು ದಿನಾಂಕ: 23-05-2015 ರಂದು 00-45 ಎ.ಎಂ. ರಿಂದ 7-00 ಎ.ಎಂ. ಅವಧಿಯಲ್ಲಿ ಹಳೇ ನಿಂಗಾಪೂರ ಗ್ರಾಮದ ತಮ್ಮ ಮನೆಯ ಕಂಪೌಂಡನಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 379 ಐ.ಪಿ.ಸಿ :.

ದಿನಾಂಕ 03-06-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಂಜುನಾಥ ತಂದೆ ವೀರಣ್ಣ ಉಪ್ಪಾರ ವಯಾ: 38 ವರ್ಷ ಜಾತಿ: ಉಪ್ಪಾರ ಉಮೇಲ್ವಿಚಾರಕರು ಪ್ರಭಾರ  ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯ ಮತ್ತು ಪಾಲನೆ ಶಾಖೆ ಗು.ವಿ..ಕಂ.ನಿ. ಕುಷ್ಟಗಿ ಸಾ: ಮುನಿರಾಬಾದ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ ಮದಲಗಟ್ಟಿ ಗ್ರಾಮದ ಶ್ರೀಮತಿ ಅಂಬುಜಾ ಜಗನ್ನಾಥ ಗೋತಗಿ ಇವರ ತೋಟದಲ್ಲಿ  ಪಂಪಶೆಟ್ಟಗೆ ಅಳವಡಿಸಿದ 63 ಕೆವಿಎ ಪರಿವರ್ತಕ(ಟಿಸಿ) ಅಂದಾಜು ಕಿಮ್ಮತ್ತು 49,000=00 ರೂ. ಬೆಲೆ ಬಾಳುವದನ್ನು ದಿನಾಂಕ: 08-05-2016 ರಂದು ರಾತ್ರಿ 9-00 ಗಂಟೆಯಿಂದ ಬೆಳಗಿನ 6-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಪರಿವರ್ತಕವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕ್ರಮ ಕೈಕೊಂಡಿದ್ದು ಇರುತ್ತದೆ. 

Friday, June 3, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 156/2016 ಕಲಂ: 78(3) Karnataka Police Act.
ಶ್ರೀಮತಿ ಷಾನಾಜ ಬೇಗಂ, ಮ.ಎ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು ದಿನಾಂಕ:- 02-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ್ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಮಾನ್ಯ ಡಿ.ಎಸ್.ಪಿ ಸಾಹೇಬರು ಹಾಗೂ ಸಿಪಿಐ ಸಾಹೇಬರ ಮಾರ್ಗದರ್ಶನದ ಮೇರೆಗೆ ಪಿ.ಸಿ. 335, 323 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 6:00 ಗಂಟೆಗೆ ಹೊರಟು ಕೇಸರಹಟ್ಟಿ ಗ್ರಾಮ ತಲುಪಿದಾಗ ಇದೇ ಮಟಕಾ ಜೂಜಾಟದ ಮಾಹಿತಿ ಪಡೆದುಕೊಂಡು ದಾಳಿ ಮಾಡಲು ಕೊಪ್ಪಳದಿಂದ ಬಂದಿದ್ದ ಶ್ರೀ ಜಿ.ಎಸ್. ಉಡಗಿ ಪಿ.ಐ. ಡಿಸಿಆರ್.ಬಿ. ಕೊಪ್ಪಳ, ಶ್ರೀ ನಾರಾಯಣ ದಂಡಿನ, ಪಿ.ಎಸ್.ಐ., ಡಿ.ಸಿ.ಐ.ಬಿ. ಹಾಗೂ ಅವರ ಸಿಬ್ಬಂದಿಯವರಾದ ಚೋಳಪ್ಪ ಎ.ಪಿ.ಸಿ. 72, ದುರ್ಗಾಪ್ರಸಾದ ಎ.ಪಿ.ಸಿ. 166, ಚಾಂದಪಾಷ ಎ.ಪಿ.ಸಿ. 109, ಚಂದ್ರಶೇಖರ ಎ.ಪಿ.ಸಿ. 95 ಇವರೆಲ್ಲರೂ ಕೂಡಿಕೊಂಡು ವಾಹನಗಳನ್ನು ಊರ ಮುಂದೆ ನಿಲ್ಲಿಸಿ ಎಲ್ಲರೂ ಮಾನ್ಯ ಪಿ.ಐ. ರವರ ನೇತೃತ್ವದಲ್ಲಿ ಹೊರಟು   ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಕೇಸರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಂದು ಪಾನ ಶಾಪ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು ಬಸವರಾಜ ತಂದೆ ಮಲ್ಲಿಕಾರ್ಜುನ ದೇಸಾಯಿ, ವಯಸ್ಸು 35 ವರ್ಷ, ಜಾತಿ: ಲಿಂಗಾಯತ ಉ: ಪಾನ್ ಶಾಪ್ ಸಾ: ಕೇಸರಹಟ್ಟಿ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 2,500/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ಹಾಗೂ ಒಂದು ಸ್ಯಾಮಸಂಗ್ ಮತ್ತು ಎರಡು ನೋಕಿಯಾ ಮೊಬೈಲ್ ಗಳು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338 ಐ.ಪಿ.ಸಿ :.

ಗಾಯಾಳು ಶಾಂತಮ್ಮ ದಿನಾಂಕ: 02-06-2016 ರಂದು ಚಿಕ್ಕಮನ್ನಾಪೂರ ಗ್ರಾಮದಲ್ಲಿ  ನಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಅಲ್ಲಿಗೆ ಹೋಗುವ ಸಲುವಾಗಿ ನಮ್ಮ ತಾಯಿಯಾದ ಶಾಂತಮ್ಮ ಮತ್ತು ಅತ್ತೆಯಾದ ದ್ಯಾಮಮ್ಮ ಇಬ್ಬರನ್ನು ಕುಷ್ಟಗಿಯಲ್ಲಿ ಒಂದು ಅಟೋದಲ್ಲಿ ಹೋಗುವಂತೆ ಹೇಳಿ ಅವರ ಹಿಂದೆ ಫಿರ್ಯಾದಿಯು ತನ್ನ ಮೋ.ಸೈ ಮೇಲೆ ಹೋಗುತ್ತಿರುವಾಗ ಸದರಿ ಟಂ ಟಂ ವಾಹನದ ಚಾಲಕನು  ಕುಷ್ಟಗಿ ಕಂದಕೂರು ರಸ್ತೆಯ ಮಾರುತಿ ನಗರ ದಾಟಿ ಎರೆ ಹಳ್ಳದ ಸಮೀಪ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಅಟೋವನ್ನು  ನಡೆಸಿ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ರಸ್ತೆಯ ಬಲಗಡೆಗೆ ಕೆಡವಿದ್ದು ಕೂಡಲೇ ನಾನು ಹಿಂದೆ ಹೋಗುತ್ತಿದ್ದವನು ನನ್ನ ಮೋಟರ್ ಸೈಕಲ್ ನ್ನು ನಿಲ್ಲಿಸಿ ನೋಡಲಾಗಿ ನನ್ನ ತಾಯಿಯಾದ ಶಾಂತಮ್ಮ ಮತ್ತು ಅತ್ತೆಯಾದ ದ್ಯಾಮಮ್ಮ ರಸ್ತೆಯ ಮೇಲೆ ಬಿದ್ದರು. ಆಗ ನೋಡಲಾಗಿ ನನ್ನ ತಾಯಿಯಾದ ಶಾಂತಮ್ಮ ಮತ್ತು ನನ್ನ ಅತ್ತೆಯಾದ ದ್ಯಾಮಮ್ಮ ಇವರಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯವಾಗಿತ್ತು. ನಂತರ ಸದರಿ ಅಟೋವನ್ನು ನೋಡಲಾಗಿ ಕೆ.-36/2827 ಅಂತಾ ಇದ್ದು ಅದರ ಚಾಲಕನನ್ನು  ವಿಚಾರಿಸಲಾಗಿ ಆತನ ಹೆಸರು ರಮೇಶ ತಂದೆ ಗ್ಯಾನಪ್ಪ ಸುಂಕದಅಂತಾ ತಿಳಿಸಿದ್ದು ಆತನಿಗೂ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

Thursday, June 2, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 112/2016 ಕಲಂ: 279, 338 ಐ.ಪಿ.ಸಿ:.
ದಿ:02-06-2016 ರಂದು 01-40 ಎ.ಎಮ್ ಕ್ಕೆ. ಫಿರ್ಯಾದಿದಾರರಾದ ಆರ್. ಮಣಿ ತಂದೆ ಮಗಲೆಪ್ಪ. ಆರ್. ಸಾ: ಪುಂಗನೂರ. ಜಿ: ಚಿತ್ತೂರ [ಎ.ಪಿ] ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇ, ನಿನ್ನೆ ದಿ:01-06-16 ರಂದು ಮಧ್ಯಾಹ್ನ ನಾನು ಮತ್ತು ನಮ್ಮ ಐಶರ್ ಲಾರಿಯ ಚಾಲಕ ಜಿ. ಹನ್ಮಂತ ಇಬ್ಬರೂ ಕೂಡಿ ಬೆಳಗಾಂ ದಲ್ಲಿ ನಮ್ಮ ಐಶರ್ ವಾಹನದಲ್ಲಿ ಕೋಸಗಡ್ಡಿ ಲೋಡ ಮಾಡಿಕೊಂಡು ಬಳ್ಳಾರಿ ಗೆ ಅನಲೋಡ ಮಾಡಲು ಅಂತಾ ಬರುತ್ತಿದ್ದೆವು. ನಂತರ ನಮ್ಮ ಐಶರ ನಂ; ಎಪಿ-03/ಟಿಸಿ-9484 ನೇದ್ದರ ಚಾಲಕನು ನಿನ್ನೆ ರಾತ್ರಿ 11-50 ಗಂಟೆಯ ಸುಮಾರಿಗೆ ಗದಗ-ಕೊಪ್ಪಳ ಎನ್.ಹೆಚ್-63 ರಸ್ತೆಯ ದದೇಗಲ್ ದಾಟಿ ಕೊಪ್ಪಳ ಕಡೆಗೆ ರಸ್ತೆಯ ತಿರುವಿನಲ್ಲಿ ಓಡಿಸಿಕೊಂಡು ಬರುತ್ತಿದ್ದಾಗ, ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಲಾರಿ ನಂ: ಕೆಎ-19/ಎಎ-2606 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೇ ನಮ್ಮ ವಾಹನಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಅಪಘಾತ ಮಾಡಿದ ಲಾರಿಯ ಚಾಲಕ ಸೂರ್ಯಬಾನ ಇತನ ತಲೆಯ ಬಲಗಡೆ, ಬಲಕಿವಿಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲಕಾಲ ಮೊಣಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದೆ. ಮತ್ತು ಎಡಕಾಲ ಮೊಣಕಾಲ ಕೆಳಗಡೆ ತೆರೆಚಿದ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ. 
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 113/2016 ಕಲಂ: 279, 337, 338, 304(ಎ) ಐ.ಪಿ.ಸಿ :.
ದಿ:02.06.2016 ರಂದು ಬೆಳಿಗ್ಗೆ 11.30 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದಿದ್ದರಿಂದ, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪೈಕಿ ಬಸವರಾಜ ತಂದೆ ಚಿದಾನಂದಪ್ಪ. ಸಾ: ಹಳೇಬಜಾರ, ಸಿಂಧನೂರ, ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ:02.06.2016 ರಂದು ವೈಯಕ್ತಿಕ ಕೆಲಸದ ನಿಮಿತ್ಯ ಗಂಗಾವತಿ-ಕೊಲ್ಲಾಪುರ ಬಸ್ಸಿನಲ್ಲಿ ರಸ್ತೆಯಲ್ಲಿ ಗಂಗಾವತಿಯಿಂದ ಬರುತ್ತಿರುವಾಗ ಬಸ್ ಗಿಣಗೇರಿ ದಾಟಿ ಕೊಪ್ಪಳ ಕಡೆ ಬಸಾಪುರ ಮಾರ್ಗವಾಗಿ ಹೊರಟಾಗ ಬಸಾಪುರ ದಾಟಿ ಕೊಪ್ಪಳ ಕಡೆ ಹೊರಟಾಗ ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ.ಎ-37/ಎಫ್-619 ನೇದ್ದರ ಚಾಲಕ ವೀರಣ್ಣ ಆವಟಿ, ಈತನು ರಸ್ತೆಯ ತಿರುವುಗಳನ್ನು ಲೆಕ್ಕಿಸದೇ ಬಸ್ಸನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬೆಳೆಗ್ಗೆ 09.15 ಗಂಟೆ ಸುಮಾರಿಗೆ ಎದುರುಗಡೆ ಬರುತ್ತಿದ್ದ ಲಾರಿ ನಂ: ಎ.ಪಿ.29/ಟಿ-9495 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತದಲ್ಲಿ ನನಗೆ ಮತ್ತು ನನ್ನಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ, 1] ಬಸಪ್ಪ ತಂದೆ ಫಕೀರಪ್ಪ ಮಡಿವಾಳರ, 2] ಮಾಯಮ್ಮ ಗಂಡ ಲಕ್ಷ್ಮಣ 3] ಶರತ್ ತಂದೆ ಶಿವಕುಮಾರ ಶಾಬಾದಿ 4] ಶಿವಕುಮಾರ ತಂದೆ ವೀರಬದ್ರಪ್ಪ ಸಿಂಪಿ 5] ಎನ್.ಶಂಕ್ರಪ್ಪ ತಂದೆ ವೀರುಪಾಕ್ಷಪ್ಪ ಸಿಂಪಿ 6] ಮಂಜುನಾಥ ತಂದೆ ಬಸಪ್ಪ ಕಳ್ಳಿಮನಿ 7] ಅನ್ನಪೂರ್ಣ ಗಂಡ ಮಂಜುನಾಥ ಕಳ್ಳಿಮನಿ 8] ವಿಜಯ ತಂದೆ ಮಂಜುನಾಥ ಕಳ್ಳಿಮನಿ, 9] ಈಶಪ್ಪ ತಂದೆ ಹನಮಂತಪ್ಪ ಕಾಸನಕಂಡಿ 10] ಪಾರ್ವತಿ ತಂದೆ ಹನಮಂತಪ್ಪ ಅಡ್ಡಿ 11] ಪವಿತ್ರಾ ತಂದೆ ರಾಘವೇಂದ್ರ ಮರಾಠಿ 12] ರಾಘವೇಂದ್ರ ತಂದೆ ಶೇಖರರಾವ್ ಮರಾಠಿ 13] ರವಿಕುಮಾರ ತಂದೆ ಮಲ್ಲಿಕಾರ್ಜುನ ಚಟ್ಟೇರ 14] ಸೈಯದ್ ಮದಾರ ತಂದೆ ಅಬ್ದುಲ್ ಖರೀಂ 15] ಅನೀಲಕುಮಾರ ತಂದೆ ಹನಮಂತಪ್ಪ ಚಾಕರಿ 16] ಸೋಮಣ್ಣ ತಂದೆ ಕಾಳಪ್ಪ ಪತ್ತಾರ 17] ಈರಮ್ಮ ಗಂಡ ನಾಗಪ್ಪ ಆಚಾರಿ 18] ಅಬ್ಬಾಸಲಿ ತಂದೆ ಶಬ್ಬೀರಸಾಬ ಅರಗಂಜಿ ಇವರಿಗೆ ಹಾಗೂ ಬಸ್ಸಿನ ಡ್ರೈವರ್ ವೀರಣ್ಣ ಆವಟಿ, ನಿರ್ವಾಹಕ. ಕೆ.ಮಂಜುನಾಥ ಕುರ್ಡೇಕರ್ ಇವರಿಗೆ ಹಾಗೂ ಲಾರಿಯ ಕ್ಲೀನರ್ ಮಲ್ಲಯ್ಯ ತಂದೆ ಅಚ್ಚಯ್ಯ ಇವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತದಲ್ಲಿ ಲಾರಿ ಡ್ರೈವರ್ ನಿರಂಜನ್ ಸಾ: ಹೈದ್ರಾಬಾದ. ಈತನಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ನಂತರ ಗಾಯಗೊಂಡಿದ್ದ ನಾವುಗಳು 108 ಅಂಬುಲೆನ್ಸ ದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆ ಯಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ.ಎ-37/ಎಫ್-619 ನೇದ್ದರ ಚಾಲಕ ವೀರಣ್ಣ ತಂದೆ ಶ್ರೀಶೈಲಪ್ಪ ಆವಟಿ ಬ್ಯಾಡ್ಜ್ ನಂ: 709 ಸಾ: ಕುಷ್ಟಗಿ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.


Wednesday, June 1, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀ ಚಳ್ಳಗೊಳ್ಳ ಸತ್ಯನಾರಾಯಣ ತಂದೆ ವೀರರಾಜು, ವಯಸ್ಸು 45 ವರ್ಷ, ಫಿರ್ಯಾದಿಯನ್ನು ನೀಡಿದ್ದು, ದಿನಾಂಕ:- 31-05-2016 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಯಾರೋ ನನ್ನ ಮಾವ ಕೃಷ್ಣರಾವ್ ಇವರ ಮೊಬೈಲ್ ನಿಂದ ನನಗೆ ಕರೆ ಮಾಡಿ ಶ್ರೀರಾಮನಗರದಲ್ಲಿ ಕಾರು ಅಪಘಾತದಲ್ಲಿ ಈ ಮೊಬೈಲ್ ಹೊಂದಿರುವ ವ್ಯಕ್ತಿ ಹಾಗೂ ಆತನ ಸಂಗಡ ಇನ್ನೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದರು.  ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕೃಷ್ಣಾರಾವ್ ಇವರ ಟಾಟಾ ಜೆಸ್ಟ್ ಕಾರ್ ನಂಬರ್: ಕೆ.ಎ-37/ ಎಂ-8598 ನೇದ್ದು ರಸ್ತೆಯಲ್ಲಿ ಪಲ್ಟಿ ಹೊಡೆದು ರಸ್ತೆಯ ಪಕ್ಕ ಒಂದು ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ನಂ: ಕೆ.ಎ-36/ ಟಿ.ಬಿ-3850 ನೇದ್ದಕ್ಕೆ ಟಕ್ಕರ್ ಆಗಿ ಅಪಘಾತವಾಗಿ ಡ್ರೈವರ್ ಸೀಟ್ ಪಕ್ಕದಲ್ಲಿ  ಕುಳಿತಿದ್ದ ಜಿ. ದೇವೇಂದ್ರರಾವ್ ಈತನು ಕಾರಿನಲ್ಲಿಯೇ ಮೃತಪಟ್ಟಿದ್ದು, ಆತನಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಎದೆಗೆ ಹಾಗೂ ಕೈಗೆ ಗಾಯಗಳಾಗಿದ್ದವು. ಕೃಷ್ಣರಾವ್ ಈತನು ಕಾರನ ಪಕ್ಕದಲ್ಲಿ ಹೊರಗಡೆ ಮೃತಪಟ್ಟಿದ್ದನು.  ಆತನಿಗೆ ತಲೆಗೆ ಮತ್ತು ಎದೆಗೆ ತೀವ್ರ ಒಳಪೆಟ್ಟಾಗಿ  ಎರಡೂ ಕಿವಿಗಳಲ್ಲಿ ರಕ್ತ ಬಂದಿತ್ತು.  ಅಲ್ಲಿ ಸೇರಿದ್ದ ಜನರಿಗೆ ವಿಚಾರಿಸಲು ತಿಳಿದಿದ್ದೇನೆಂದರೆ, ಮಧ್ಯಾಹ್ನ 1:45 ಗಂಟೆಯ ಸುಮಾರಿಗೆ ಕೃಷ್ಣಾರಾವ್ ಮತ್ತು ದೇವೇಂದ್ರರಾವ್ ಇಬ್ಬರೂ ಕೂಡಿಕೊಂಡು ಕಾರಿನಲ್ಲಿ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿದ್ದು, ಕಾರನ್ನು ನಡೆಯಿಸುತ್ತಿದ್ದ ಕೃಷ್ಣಾರಾವ್ ಈತನು ಕಾರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಎಡಗಡೆ ಪೂಲ್ ಗೆ ಟಕ್ಕರ್ ಆಗುವುದನ್ನು ತಪ್ಪಿಸಲು ಒಮ್ಮೆಲೇ ಕಾರನ್ನು ಬಲಗಡೆ ತಿರುಗಿಸಿಕೊಂಡಿದ್ದರಿಂದ ಕಾರು ಪಲ್ಟಿ ಹೊಡೆದು ಸುಮಾರು 70 ಅಡಿಗಳಷ್ಟು ಮುಂದೆ ರಸ್ತೆಯ ಬಲಗಡೆ ಬಂದು ಒಂದು ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಟಕ್ಕರ್ ಕೊಟ್ಟು ಅಪಘಾತವಾಗಿದ್ದು, ಅಪಘಾತದ ರಭಸಕ್ಕೆ ದೇವೇಂದ್ರರಾವ್ ನು ಕಾರಿನ ಒಳಗಡೆ ಕುಳಿತಲ್ಲಿಯೇ ಮೃತಪಟ್ಟಿದ್ದು, ಕೃಷ್ಣಾರಾವ್ ನು ಕಾರಿನಿಂದ ಇಳಿದು ಹೊರಗಡೆ ಬಂದ ತಕ್ಷಣ ಮೃತಪಟ್ಟಿರುತ್ತಾನೆ ಅಂತಾ ತಿಳಿಯಿತು.  
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 150/2016 ಕಲಂ: 279, 337, 338, 304(ಎ) ಐ.ಪಿ.ಸಿ :.
ದಿನಾಂಕ: 31-05-2016 ರಂದು ರಾತ್ರಿ 09-30 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಗಾಯಾಳು ಹನುಮಂತಪ್ಪ ಗುರಿಕಾರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ದಿನಾಂಕ : 31-05-2016 ರಂದು ಗುಮಗೇರಿಯಲ್ಲಿ ನಮ್ಮ ಸಂಬಂಧಿಕರ ದೇವರ ಕಾರ್ಯವಿದ್ದ ಕಾರಣ ನಾನು ಮತ್ತು ನಮ್ಮೂರ ಹೊಸೂರಪ್ಪ ಮತ್ತು ಶ್ಯಾಮರಾಜ ರವರು ಕೂಡಿಕೊಂಡು ನಮ್ಮ ಊರಿನಿಂದ ಗುಮಗೇರಿಗೆ ಹೋಗುವ ಕುರಿತು ಶ್ಯಾಮರಾಜ ಬೆವಿನಾಳ ಇತನ ಹಿರೋ ಮೋ.ಸೈ ಇಂಜಿನ್ ನಂ : MBLJC59ADFGB00734 ನೇದ್ದನ್ನು ತೆಗೆದುಕೊಂಡು ಹಿರೇಮನ್ನಾಪೂರ ದಾಟಿ ಗುಮಗೇರಿ ಕಡೆಗೆ ಹೋಗುತ್ತಿದ್ದಾಗ ರಾತ್ರಿ 8-45 ಗಂಟೆ ಸುಮಾರಿಗೆ ಗುಮಗೇರಿ ಇನ್ನೂ ಸ್ವಲ್ಪ ದೂರ ಇರುವಾಗ್ಗೆ ಸದರಿ ನಮ್ಮ ಮೋ.ಸೈ. ನಡೆಸುತ್ತಿದ್ದ ಶ್ಯಾಮರಾಜ ಈತನು ಮೋ.ಸೈ.ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟು ಸದರ ರಸ್ತೆಯಲ್ಲಿ ಹೋಗುತ್ತಿದ್ದ 3 ಜನ ಪಾದಚಾರಿಗಳ ಪೈಕಿ ದೇವಪ್ಪ ತಂದೆ ಬಸಣ್ಣ ನೀರಲೂಟಿ ಇತನಿಗೆ ಟಕ್ಕರ್ ಮಾಡಿದ್ದು ಆಗ ಮೋ.ಸೈ. ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ನಮ್ಮ  ಎದರುಗಡೆಯಿಂದ ಬರುತ್ತಿದ್ದ ಮೋ.ಸೈ. ನಂ ಕೆಎ-37-ಡಬ್ಲು-4122 ನೇದ್ದರ ಸವಾರನಿಗೆ ಟಕ್ಕರ್ ಮಾಡಿ ಅಪಘಾತಪಡಿಸಿ ಮೋ.ಸೈ. ಕೆಡವಿದ್ದರಿಂದ ಅದರಲ್ಲಿದ್ದ ನಾನು ಮತ್ತು ಹೊಸೂರಪ್ಪ ಗಾಯಗೊಂಡಿದ್ದು ಹಾಗೂ ಸದರಿ ಶ್ಯಾಮರಾಜ ಇತನು ತೀವ್ರಗಾಯಗೊಂಡು ಸ್ಥಳದಲ್ಲಿಯೇ ಮೃಪಟ್ಟಿದ್ದು ನಾವು ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾದೆವು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ: 186, 323, 353, 504, 506 ಸಹಿತ 34 ಐ.ಪಿ.ಸಿ. ಹಾಗೂ ಕಲಂ: 4 ಸಹಿತ 3 ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ ಅಧಿನಿಯಮ 2009

ಫಿರ್ಯಾದಿದಾರರಾದ ಡಾ|| ಈಶ್ವರ ಶಿ. ಸವಡಿ ಮುಖ್ಯ ವೈಧ್ಯಾದಿಕಾರಿಗಳು ಉಪವಿಭಾಗ ಆಸ್ಪತ್ರೆ ಗಂಗಾವತಿ ರವರು ಫಿರ್ಯಾದಿಯನ್ನು ಸಲ್ಲಿಸಿದ್ದು, ದಿನಾಂಕ 31-05-2016 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯ ರಾಷ್ಟ್ರೀಯ ಕಾರ್ಯಕ್ರಮದ ನಿಮಿತ್ಯ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಕೈಕೊಂಡು ಅವರಿಗೆ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಇದ್ದುದರಿಂದ ನೆಲದ ಮೇಲೆ ಹಾಸಿಗೆ ಹಾಸಿ ಮಲಗಿಸುತ್ತಿದ್ದು, ಆ ಸಮಯದಲ್ಲಿ ಅಲ್ಲಿಗೆ ಬಂದ ಶಹಾಬುದ್ದೀನ್ ಮತ್ತಿತರೇ ಮೂರು ಜನರು ಅನಧೀಕೃತವಾಗಿ ಆಸ್ಪತ್ರೆಯಲ್ಲಿ ನುಗ್ಗಿ ಏಕಾಏಕಿ ನನಗೆ ಏಕವಚನದಲ್ಲಿ “ಏಯ್ ಏನ್ ಡ್ಯೂಟಿ ಮಾಡ್ತೀ ನೀನು ಭೋಸುಡಿಕೆ” ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇರುತ್ತದೆ.   ಕಾರಣ ಸದರಿ ಶಹಾಬುದ್ಧೀನ್ ಹಾಗೂ ಮತ್ತಿತರ ಮೂವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008