Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, June 15, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ: 224, 332 ಐ.ಪಿ.ಸಿ.  
ದಿನಾಂಕ: 14-06-2016 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿದಾರರಾದ ಚಂದ್ರಪ್ಪ ಎಹೆಚ್.ಸಿ-46 ರವರ ತನ್ನ ಸಂಗಡ ಆರೋಪಿ ವಿಚಾರಣಾಧೀನ ಕೈದಿ ಅಶೋಕ-46 ಇತನೊಂದಿಗೆ ಠಾಣೆಗೆ ಹಾಜರಾಗಿ ದಿನಾಂಕ: 14.06.2016 ರಂದು ಬೆಳಿಗ್ಗೆ ನಾನು ಹಾಗೂ ರಾಜೇಶ .ಪಿ.ಸಿ 130, ಅಮೃತ .ಪಿ.ಸಿ-100 ಮೂರು  ಜನರು ಕೂಡಿಕೊಂಡು ಸರ್ಕಾರಿ ವಾಹನ ನಂ ಕೆ.-37/ಜಿ-263 ನೇದ್ದರಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆರೋಪಿ ಬೆಂಗಾವಲು ಕರ್ತವ್ಯಕ್ಕೆ ಹೋಗಿದ್ದು ಇರುತ್ತದೆ. ನಂತರ ಅಲ್ಲಿ ನಮಗೆ ವಿಚಾರಣಾ ಕೈದಿಯಾದ ಅಶೋಕ @ ರವಿ ತಂದೆ ಚಂದಪ್ಪ ನಂ 4684 ನೇದ್ದವರಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವಂತೆ ಜಿಲ್ಲಾ ಕೇಂದ್ರ ಕಾರಾಗೃಹದ ಸಿಬ್ಬಂದಿಯವರು ತಿಳಿಸಿದ್ದು ಅದರಂತೆ ನಾನು ಹಾಗೂ ರಾಜೇಶ .ಪಿ.ಸಿ-130, ಅಮೃತ .ಪಿ.ಸಿ-100 ಕೂಡಿಕೊಂಡು ನಮ್ಮ ಸರ್ಕಾರಿ ವಾಹನದಲ್ಲಿ ಬೆಳಿಗ್ಗೆ 10:50 ಗಂಟೆಗೆ ವಿಚಾರಣಾ ಕೈದಿಯಾದ ಅಶೋಕ @ ರವಿ ತಂದೆ ಚಂದಪ್ಪ ಕೈದಿ ನಂ 4684 ನೇದ್ದವರಿಗೆ ಆರೋಗ್ಯ ತಪಾಸಣೆ ಮಾಡಿಸುವ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅವನನ್ನು ಇಲ್ಲಿನ ವೈದ್ಯಾಧಿಕಾರಿಗಳ ಹತ್ತಿರ ಆರೋಗ್ಯ ತಪಾಸಣೆ ಮಾಡಿಸಿ ನಂತರ ಮದ್ಯಾನ 12:30 ಗಂಟೆಯ ಸುಮಾರಿಗೆ ಸದರಿ ಆರೋಪಿತನನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ವಾಪಾಸ ಕರೆದುಕೊಂಡು ಹೋಗುವ ಸಲುವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ನಮ್ಮ ವಾಹನ ನಂ ಕೆ.-37/ಜಿ-263 ನೇದ್ದರ ಒಳಗೆ ಕೂಡಿಸುವಷ್ಟರಲ್ಲಿ ಬಾಗಿಲಿನ ಹತ್ತಿರ ನಿಂತಿದ್ದ ನನಗೆ ಏಕಾಏಕೀ ಕೈಯಿಂದ ನನ್ನ ಮರ್ಮಾಂಗಕ್ಕೆ ಮುಷ್ಟಿಯಿಂದ ಹೊಡೆದು ನಂತರ ಅಲ್ಲಿಯೇ ಇದ್ದ ಅಮೃತ .ಪಿ.ಸಿ-100 ರವರಿಗೆ ಇವರಿಗೂ ಸಹ ಕೈಯಿಂದ ಹಲ್ಲೆ ಮಾಡಿ, ನಮಗೆ ಕೆಳಗೆ ದಬ್ಬಿ ಅಲ್ಲಿಂದ ಓಡಿಹೋದನು. ನಂತರ ನಾವು ಸುಧಾರಿಸಿಕೊಳ್ಳುವಷ್ಟರಲ್ಲಿ ಸದರಿ ಆರೋಪಿತನು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಎನ್.ಹೆಚ್-63 ರಸ್ತೆ ಹೊಸಪೇಟೆ ರಸ್ತೆಯ ಕಡೆಗೆ ಓಡಿಹೋಗಿ ಹೊಸಪೇಟೆ ಕಡೆ ಹೊರಟಿದ್ದು ಯಾವುದೋ ಒಂದು ಟಂ.ಟಂ. ವಾಹನದಲ್ಲಿ  ಹತ್ತಿ ಹೋದನು. ಆಗ ನಾವು ಅವನಿಗೆ ಬೆನ್ನಟ್ಟಿದ್ದು ಅದೇ ವೇಳೆಗೆ ಡಿ.ಸಿ.ಆಫೀಸ್ ಕಡೆಯಿಂದ ಕಂಟ್ರೊಲ್ ರೂಮ್ ಮೆಸೆಂಜರ್ ರವರಾದ ಪ್ರತಾಪ್ ದಂಡಿನ ಎಪಿಸಿ-111 ಮತ್ತು ಚಂದ್ರಕಾಂತ ಎಪಿಸಿ-76 ರವರ ಅಲ್ಲಿಗೆ ತಮ್ಮ ಮೋಟಾರ್ ಸೈಕಲ್ ಮೇಲೆ ಬಂದಿದ್ದು, ಅವರನ್ನು ನೋಡಿ ನಾವು ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿತನು ಹೊಸಪೇಟೆ ಕಡೆ ಹೊರಟಿದ್ದ ಟಂ.ಟಂ. ವಾಹನದಲ್ಲಿ ಹೋಗುತ್ತಿದ್ದಾನೆ. ಅವನನ್ನು ಹಿಡಿಯಿರಿ ಅವನಿಗೆ ಕೈ ಮತ್ತು ಕಾಲುಗಳ ಮೇಲೆ ಚರ್ಮ ರೋಗವಿರುತ್ತದೆ ಅಂತಾ ಹೇಳಿದಾಗ ಅವರು ಸಹ ತಮ್ಮ ಮೋಟಾರ್ ಸೈಕಲ್ ತೆಗೆದುಕೊಂಡು ಆರೋಪಿ ತನನ್ನು ಬೆನ್ನಟ್ಟಿದ್ದು, ಅಭಯ್ ಸಾಲ್ವಂಟ  ಮುಂದೆ ರಸ್ತೆಯ ಮೇಲೆ ಸದರಿ ವಾಹನವನ್ನು ನಿಲ್ಲಿಸಿ ಎಪಿಸಿ-111 ಮತ್ತು 76 ರವರು ನಾವು ಹೇಳಿದ ಲಕ್ಷಣಗಳುಳ್ಳ ವ್ಯಕ್ತಿಯನ್ನು ಹಿಡಿದುಕೊಂಡಿದ್ದು ಅದೇ ವೇಳೆಗೆ ಹೊಸಪೇಟೆ ಕಡೆಯಿಂದ ಪಿ.ಎಸ್.. ಮುನಿರಾಬಾದ ವಾಹನ ಚಾಲಕನಾದ ಶಿವಕುಮಾರ .ಪಿಸಿ-96 ರವರು ಸಹ ಅಲ್ಲಿಗೆ ಬಂದಿದ್ದನು. ಆಗ ನಾನು ಮತ್ತು ಅಮೃತ ಎಪಿಸಿ-100 ಇಬ್ಬರೂ ಸ್ಥಳಕ್ಕೆ ಹೋಗಿ ಸದರಿ ಆರೋಪಿತನಿಗೆ ವಶಕ್ಕೆ ಪಡೆದೆವು. ಆಗ ಸಮಯ ಮಧ್ಯಾಹ್ನ 1:00 ಗಂಟೆಯಾಗಿತ್ತು. ಕಾರಣ ಸಮವಸ್ರ್ತದಲ್ಲಿ ಕರ್ತವ್ಯದ ಮೇಲೆ ಇದ್ದ ನಮ್ಮ ಮೇಲೆ ಹಲ್ಲೆ ಮಾಡಿ ಮತ್ತು ಪೊಲೀಸ ಅಭೀರಕ್ಷೆಯಿಂದ ತಪ್ಪಿಸಿಕೊಂಡ ಅಶೋಕ @ ರವಿ  ವಿಚಾರಣಾಧಿನ ಕೈದಿ ನಂ 4684 ನೇದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 123/2016 ಕಲಂ: 109 ಐ.ಪಿ.ಸಿ.
ದಿ:14-06-2016 ರಂದು ರಾತ್ರಿ 9-15 ಗಂಟೆಗೆ ಅಂಜನಪ್ಪ ಸಿಪಿಸಿ-346 ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ತಮ್ಮ ವರದಿಯೊಂದಿಗೆ ಒಬ್ಬ ವ್ಯಕ್ತಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:14-06-2016 ರಂದು ರಾತ್ರಿ ತಾನು ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದ ಮೇರೆಗೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹದ ಕರ್ತವ್ಯದಲ್ಲಿದ್ದಾಗ ಗಿಣಿಗೇರಿ ಗ್ರಾಮದ ಬೈಪಾಸ್ ಹತ್ತಿರ ನಾಗರಾಜ @ ರಾಜಾ ತಂದೆ ನಿಂಗಪ್ಪ ಟವಲ್. ವಯ: 28 ವರ್ಷ, ಜಾ: ನಾಯಕ, ಕೂಲಿಕೆಲಸ, ಸಾ:ಮೋಕಾ. ತಾ:ಜಿ: ಬಳ್ಳಾರಿ ಇವನು ಸಂಶಯಾಸ್ಪದ ರೀತಿಯಲ್ಲಿ ಸಿಕ್ಕಿದ್ದು ಸದರಿಯವರಿಗೆ ಸದರಿ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ಗಿಣಿಗೇರಿ ಗ್ರಾಮದಲ್ಲಿ  ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದು ಎಂಬ ಬಲವಾದ ಸಂಶಯ ಬಂದಿದ್ದು, ಹಾಗೂ ಸ್ವತ್ತಿನ ಅಪರಾಧ ನಿಯಂತ್ರಣಕ್ಕಾಗಿ ಮತ್ತು ಮುಂಜಾಗ್ರತಾ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.


Tuesday, June 14, 2016

1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 41/2016 ಕಲಂ: 498A, 504, 326, 506 ಐ.ಪಿ.ಸಿ.  
ಫಿರ್ಯಾದಿ ಯಮನವ್ವ ಇವಳು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಆರೋಪಿ ಹನುಮಂತ ಇವನನ್ನು ಮದುವೆ ಆಗಿದ್ದು  ಆರೋಪಿತನು ಫಿರ್ಯಾದಿದಾರಳೊಂದಿಗೆ ಈ ಮೊದಲು ಚೆನ್ನಾಗಿ ಸಂಸಾರ ಮಾಡಿಕೊಂಡಿಕೊಂಡು ಹೋಗಿದ್ದು ನಂತರದ ದಿನಗಳಲ್ಲಿ ಆರೋಪಿತನು ಫಿರ್ಯಾದಿದಾರಳೊಂದಿಗೆ ವಿನಾ:ಕಾರಣ ಜಗಳ ಮಾಡುತ್ತಿದ್ದರಿಂದ ಇವರಿಬ್ಬರಲ್ಲಿ ವೈಮನಸ್ಸಾಗಿದ್ದರಿಂದ ಫಿರ್ಯಾದಿದಾರಳು ಈಗ್ಗೆ ಸುಮಾರು 2 ವರ್ಷಗಳಿಂದ ತನ್ನ ಮಕ್ಕಳೊಂದಿಗೆ ತನ್ನ ತವರುಮನೆಯಾದ ಮುರುಡಿ ಗ್ರಾಮಕ್ಕೆ ಬಂದು ತನ್ನ ತಂದೆ ತಾಯಿಯವರ ಮನೆಯಲ್ಲಿ ವಾಸವಾಗಿದ್ದು ಆದಾಗ್ಯೂ ಕೂಡಾ ಆರೋಪಿತನು ಆಗಾಗ ಮುರುಡಿ ಗ್ರಾಮದ ಫಿರ್ಯಾದಿದಾರಳ ಮನೆಗೆ ಬಂದು ಫಿರ್ಯಾದಿದಾರಳಿಗೆ ನೀನು ಗಂಡನನ್ನು ಬಿಟ್ಟು ಬಂದು ಇಲ್ಲಿ ಯಾರ ಜೋತೆಗೆ ಸಂಸಾರ ಮಾಡುತ್ತಿ ಇಲ್ಲಿ ನೀನು ಅವರಿವರ ಜೋತೆಗೆ ಮಾತನಾಡುತ್ತಿ ನಿನ್ನ ನಡತೆ ಸರಿ ಇಲ್ಲಾ ನೀನು ಹೊಲಸು ಸೂಳೆ ಅದಿದಿ ಅಂತಾ ಅವಳ ಶೀಲದ ಬಗ್ಗೆ ಶಂಕಿಸುತ್ತಾ ಕೈಯಿಂದ ಹೋಡಿ ಬಡಿ ಮಾಡುತ್ತಾ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಇರುತ್ತದೆ, ನಂತರ ದಿನಾಂಕ: 12.06.2016 ರಂದು ಸಾಯಂಕಲ 4:30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಹಾಗೂ ಇವಳ ತಂದೆ ನಾಗಪ್ಪ ಇಬ್ಬರೂ ತಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ ಆರೋಪಿತನು ಫಿರ್ಯಾದಿದಾರಳು ಇದ್ದ ಮನೆಗೆ ಬಂದವನೇ ವಿನಾ:ಕಾರಣ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಏನಲೇ ಸೂಳೇ ರಂಡೆ ನೀನು  ಗಂಡನನ್ನು ಬಿಟ್ಟು ಬಂದು ಇಲ್ಲೇ ಸೇರಿದಿ ಎಷ್ಟು ಹೇಳಿದರು ನೀನು ನನ್ನ ಮಾತು ಕೇಳುವುದಿಲ್ಲಾ ಅಂತಾ ಅಂದವನೇ ಒಮ್ಮಿಂದೊಮ್ಮಲೆ ಸಿಟ್ಟಿಗೆದು ಅಲ್ಲೆ ಇದ್ದ  ಒಂದು ಬಡಿಗೆಯನ್ನು ತೆಗೆದುಕೊಂಡು  ಫಿರ್ಯಾದಿದಾರಳ ತಲೆಗೆ ಬಲವಾಗಿ ಹೋಡೆದು ಭಾರಿ ರಕ್ತಗಾಯ ಮಾಡಿದ್ದು ಅಲ್ಲದೆ ಫಿರ್ಯಾದಿದಾರಳಿಗೆ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ:379 ಐ.ಪಿ.ಸಿ.
ದಿನಾಂಕ 13-06-2016 ರಂದು 11-30 ಗಂಟೆಗೆ ಶ್ರೀ ಮಂಜುನಾಥ ತಂದೆ ವೀರಭಧ್ರಪ್ಪ ಪಟ್ಟಣಶಟ್ಟಿ. ವಯಾ 36 ವರ್ಷ ಜಾ: ಬಣಜಿಗ ಉ: ವ್ಯಾಪಾರ ಸಾ: ಚಿರ್ಚನಗುಡ್ಡ, ತಾ: ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 07-05-2016 ರಂದು 17-00  ಗಂಟೆಯಿಂದ 17-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ  ನಿಲ್ಲಿಸಿದ ಫಿರ್ಯಾದಿದಾರರ ಟಿ.ವಿ.ಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ ಮೋ. ಸೈಕಲ್ ನಂ ಕೆ,ಎ 37 ಎಸ್ 6306 ಚಾಸ್ಸಿ ನಂ MD621BD19B1G70496 ಇಂಜಿನ್ ನಂ 0D1GB1381857 ಇದ್ದು ಹಸಿರು ಬಣ್ಣದ್ದು ಅಂ.ಕಿಮ್ಮತ್ತು ರೂ. 15,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಗಣಕಿಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 112/2016 ಕಲಂ: ಮನುಷ್ಯಕಾಣೆ.
ದಿನಾಂಕ 13-06-2016 ರಂದು 7-00 ಪಿ.ಎಂ. ಕ್ಕೆ. ಫಿರ್ಯಾಧಿದಾರರಾದ ಬಾಬು ತಂದೆ ಸಂಗಪ್ಪ ಬಿಜಾಪೂರ, ವಯ 35 ವರ್ಷ ಉ: ಚಪ್ಪಲಿ ವ್ಯಾಪಾರ, ಜಾತಿ:  ಸಮಗಾರ, ಸಾ: ಮುರಾರಿ ನಗರ ಗಂಗಾವತಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರ ತಮ್ಮನಾದ ಸತ್ಯನಾರಾಯಣ 25 ವರ್ಷ ಇತನು ದಿನಾಂಕ: 14-02-2014 ರಂದು ಬೆಳಿಗ್ಗೆ ಸುಮಾರು 8-00 ಗಂಟೆಯ ವೇಳೆಗೆ ಮುರಹರಿ ನಗರದಲ್ಲಿರುವ ತಮ್ಮ ಮನೆಯಿಂದ ದುಡಿದುಕೊಂಡು ಬರುತ್ತೇನೆಂದು ಮನೆಯಿಂದ ಹೋದವನು ಇವುದರೆಗೂ ವಾಪಾಸ್ ಬರದೇ ಕಾಣೆಯಾಗಿರುತ್ತಾನೆ. ಕಾಣೆಯಾಗಿರುವ ತನ್ನ ತಮ್ಮನನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 122/2016 ಕಲಂ: 34, KARNATAKA EXCISE ACT, 1965
ದಿ:13-06-16 ರಂದು ಸಾಯಂಕಾಲ 4-30 ಗಂಟೆಗೆ ಕುಣಿಕೇರಾ ತಾಂಡಾದ ಕೆ.ಪಿ.ಆರ್ ಪ್ಯಾಕ್ಟ್ರಿಯ ಹತ್ತಿರ ಆರೋಪಿ ಶಂಕರ್ ತಂದೆ ಕೃಷ್ಣಪ್ಪ ರಾಠೋಡ್ ಸಾ: ಕುಣಿಕೇರಿ ತಾಂಡಾ ಇತನು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಒಂದು ವಿಮಲ್ ಚೀಲದಲ್ಲಿ 1] ಕೊಡೇಶ್ ರಮ್ 180 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ. 61=39 ರೂ. ಹೀಗೆ ಒಟ್ಟು 11 ಟೆಟ್ರಾಪಾಕೇಟ್ ಗಳು. ಒಟ್ಟು ಅಂಕಿ. 675.29 ರೂ. 2] ಓಲ್ಡ್ ಟಾವೆರನ್ ವಿಸ್ಕಿ. 180 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ. 61=39 ರೂ. ಹೀಗೆ ಒಟ್ಟು 14 ಟೆಟ್ರಾಪಾಕೇಟ್ ಗಳು. ಒಟ್ಟು ಅಂಕಿ. 859=46 ರೂ. 3] ಹಾಯ್ ವಾಡ್ರ್ಸ ವಿಸ್ಕಿ 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ. 26=14 ರೂ. ಹೀಗೆ ಒಟ್ಟು 21 ಟೆಟ್ರಾಪಾಕೇಟ್ ಗಳು. ಒಟ್ಟು ಅಂಕಿ. 548=94 ರೂ. 4] ಕಿಂಗಫಿಶರ್ ಸ್ಟ್ರಾಂಗ್ ಬಿಯರ್ 650 ಎಮ್.ಎಲ್. ಅಳತೆಯ ಒಂದು ಬಾಟಲಿ ಅಂಕಿ. 120=00. ರೂ. ಹೀಗೆ 07 ಬಾಟಲಿಗಳು. ಒಟ್ಟು ಅಂಕಿ. 840=00 ರೂ. 5] ಕಿಂಗಫಿಶರ್ ಸ್ಟ್ರಾಂಗ್ ಬಿಯರ್ 330 ಎಮ್.ಎಲ್. ಅಳತೆಯ ಒಂದು ಬಾಟಲಿ ಅಂಕಿ. 65=00. ರೂ. ಹೀಗೆ 04 ಬಾಟಲಿಗಳು. ಒಟ್ಟು ಅಂಕಿ. 260=00 ರೂ. 6] ಕಿಂಗಫಿಶರ್ ಸ್ಟ್ರಾಂಗ್ ಬಿಯರ್ 500 ಎಮ್.ಎಲ್. ಅಳತೆಯ ಒಂದು ಟಿನ್ ಅಂಕಿ. 95=00. ರೂ. ಹೀಗೆ 05 ಟಿನ್ ಗಳು. ಒಟ್ಟು ಅಂಕಿ. 475=00 ರೂ. ಹೀಗೆ ಒಟ್ಟು ಮದ್ಯದ ಬಾಟಲಿ, ಟೆಟ್ರಾಪಾಕೇಟಗಳ ಅಂ.ಕಿ. 3,658=00. ರೂ. ಬೆಲೆಬಾಳುವುಗಳನ್ನು ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದು ಆಗ ಆರೋಪಿತನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ಮುದ್ದೆ ಮಾಲನ್ನು ಜಪ್ತು ಮಾಡಿಕೊಂಡು ಆರೋಪಿತನ ಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 78(3) Karnataka Police Act
ದಿನಾಂಕ: 13-06-2016 ರಂದು ರಾತ್ರಿ 9-00 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಟಗಿ ಪಟ್ಟಣದ ಮಲ್ಲಿಕ್ ಹೊಟೇಲ್ ಹತ್ತಿರ ಆಫೀಸ್ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ-109,117,116,161,24 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಮಲ್ಲಿಕ್ ಹೊಟೇಲ್  ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನನ್ನು ಹಿಡಿದು ವಿಚಾರಿಸಿದಾಗ ಹೆಸರು ಸೈಯದ ಬಾಷಾ ತಂದೆ ಬಾಬುಸಾಬ್ ಮುನಿಯರ್ ವಯ: 34 ವರ್ಷ, ಜಾ: ಮುಸ್ಲಿಂ, ಉ: ಬಳಿ ವ್ಯಾಪಾರ  ಸಾ: ಮದೀನಾ ಗಲ್ಲಿ ಕುಷ್ಟಗಿ ತಿಳಿಸಿದ್ದು ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 3700=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ  ಮತ್ತು  ಇಂಟೇಕ್ಸ್ ಕಂಪನಿಯ ಮೋಬೈಲ್ ಅಂ:ಕಿ: 500/- ರೂ:ಗಳು ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಅಶೋಕ  ಸಾವಜಿ ಸಾ: ಗಜೇಂದ್ರಗಡ ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಆರೋಪಿತತನ್ನು ಮುದ್ದೆಮಾಲುಗಳನ್ನು, ಪಂಚನಾಮೆ ಮತ್ತು ವರದಿಯೊಂದಿಗೆ ಹಾಜರಪಡಿಸಿ ವರದಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 58/2016 ಕಲಂ: 279,337,338,304(A) ಐ.ಪಿ.ಸಿ.
ದಿನಾಂಕ: 13-06-2016 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಆರೋಪಿ ಪ್ರಕಾಶ ತಂದೆ ಅಂದಾನಪ್ಪ ಕೊತಂಬ್ರಿ ಸಾ: ಬ್ಯಾಹಟ್ಟಿ ತಾ: ಹುಬ್ಬಳ್ಳಿ ಇತನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಸ ನಂ : ಕೆ.ಎ-25/ಎ-8962 ನೇದ್ದನ್ನು  ಅತಿಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಕಾತ್ರಾಳ ಸೀಮಾದಲ್ಲಿ ಸಿದ್ದಪ್ಪ ಜಾಲಿಹಾಳ ರವರ ಹೊಲದ ಹತ್ತಿರ ಹೊಗುತ್ತಿದ್ದಾಗ ಟ್ರ್ಯಾಕ್ಸ ಚಾಲಕನು ವಾಹನದ ಮೇಲೆ ನಿಯಂತ್ರಣ ಸಾಧಿಸದೇ  ರಸ್ತೆಯ ಬಲಮಗ್ಗಲು ಪಲ್ಟಿ ಹೊಡೆಯುತ್ತಾ ಹೋಗಿ ತೆಗ್ಗಿನಲ್ಲಿ ಬಲಮಗ್ಗಲಾಗಿ ಬಿದ್ದಿದ್ದರಿಂದ ಪಿರ್ಯಾದಿಯ ತಂದೆ ಯಮನೂರಪ್ಪ ಬೊಂದಾಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟ್ರ್ಯಾಕ್ಸನಲ್ಲಿದ್ದ ಪಿರ್ಯಾದಿ, ಹಾಗೂ ಇತರೇ 07 ಜನ  ಪ್ರಯಾಣಿಕರಿಗೆ ಮತ್ತು ಆರೋಪಿತನಿಗೆ ಸಾದಾ & ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಅಂತಾ  ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Monday, June 13, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 167/2016 ಕಲಂ: 87 Karnataka Police Act.
ದಿನಾಂಕ:   12-06-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ಶ್ರೀ ಹನುಮಂತ ದೇವರ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. 160, 129, 323, 110, 354, 358, 277, 363, 386, 38 ಜೀಪ ಚಾಲಕ ಎ.ಪಿ.ಸಿ.77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು  ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಶ್ರೀ ಹನುಮಂತ ದೇವರ ಗುಡಿಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು,  ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಭೀಮಪ್ಪ ತಂದೆ ಸಿದ್ದಪ್ಪ ಚನ್ನಳ್ಳಿ, ವಯಸ್ಸು 38 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ದಾಸನಾಳ (2) ನಿಂಗಪ್ಪ ತಂದೆ ಮಂಗಳೆಪ್ಪ ತಿಪ್ಪನಾಳ, ವಯಸ್ಸು 54 ವರ್ಷ, ಜಾತಿ: ಲಿಂಗಾಯತ ಉ: ಕೂಲಿ ಕೆಲಸ ಸಾ: ದಾಸನಾಳ (3) ಯಲ್ಲಪ್ಪ ತಂದೆ ದುರಗಪ್ಪ ಡಂಬರ್, 45 ವರ್ಷ, ಕೂಲಿ ಕೆಲಸ ಸಾ: ದಾಸನಾಳ (4) ಶರಣಪ್ಪ ತಂದೆ ಮಲ್ಲಿಕಾರ್ಜುನ ಯರಗೇರಿ, ವಯಸ್ಸು 45 ವರ್ಷ, ಲಿಂಗಾಯತ ಉ: ಕೂಲಿ ಕೆಲಸ ಸಾ: ದಾಸನಾಳ (5) ಶೇಖಸಾಬ ತಂದೆ ಬಡೇಸಾಬ, ಪಿಂಜಾರ, 30 ವರ್ಷ, ಕೂಲಿ ಕೆಲಸ ಸಾ: ದಾಸನಾಳ (6) ಈರಪ್ಪ ತಂದೆ ಹನುಮಪ್ಪ, 35 ವರ್ಷ, ಜಾತಿ: ಉಪ್ಪಾರ, ಕೂಲಿ ಕೆಲಸ ಸಾ: ಬೇವೂರು ಹಾಲಿವಸ್ತಿ: ದಾಸನಾಳ (7) ಯಲ್ಲಪ್ಪ ತಂದೆ ಫಕೀರಪ್ಪ ಚಳಗೇರಿ, 35 ವರ್ಷ, ಉಪ್ಪಾರ, ಕೂಲಿ ಕೆಲಸ ಸಾ: ದಾಸನಾಳ ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 3,220/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿರುತ್ತದೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 168/2016 ಕಲಂ: 87 Karnataka Police Act.
ದಿನಾಂಕ:-12-06-2016 ರಂದು ಸಂಜೆ 6:30 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಆರೋಪಿತರನ್ನು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.      ಇಂದು
ದಿನಾಂಕ: 12-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡದ ಕ್ಯಾಂಪ್ನ ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. 160, 129, 323, 110, 354, 358, 277, 363, 386, 38, 335 ಜೀಪ ಚಾಲಕ ಎ.ಪಿ.ಸಿ.77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಗುಡ್ಡದ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು,  ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿ ಬಿದ್ದಿದ್ದು, ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಶಿವಪ್ಪ ತಂದೆ ಶಿವಪ್ಪ ಕಂಬಳಿ, 55 ವರ್ಷ, ಕುರುಬರು, ವ್ಯವಸಾಯ ಸಾ: 1ನೇ ವಾರ್ಡ-ವಡ್ಡರಹಟ್ಟಿ (2) ರಾಜಾ ಮೋಹಿನುದ್ದೀನ್ ತಂದೆ ಹುಸೇನ್ ಸಾಬ ಕಮಲಾಪೂರು, 36 ವರ್ಷ, ಮುಸ್ಲೀಂ, ಮೆಕಾನಿಕ್ ಸಾ: 7ನೇ ವಾರ್ಡ, ಅಗಡಿ ಸಂಗಣ್ಣ ಕ್ಯಾಂಪ್ ಗಂಗಾವತಿ (3) ಶ್ರೀನಿವಾಸ ತಂದೆ ಯಂಕಪ್ಪ, 38 ವರ್ಷ, ಬೋವಿ, ಮೇಸನ್ ಕೆಲಸ ಸಾ: 7ನೇ ವಾರ್ಡ, ಅಗಡಿ ಸಂಗಣ್ಣ ಕ್ಯಾಂಪ್ ಗಂಗಾವತಿ (4) ಮಹಿಬೂಬ ಸಾಬ ತಂದೆ ಅಬ್ದುಲ್ ರಹೆಮಾನ್ ಸಾಬ, ಮುಸ್ಲೀಂ, 45 ವರ್ಷ, ಗೌಂಡಿ ಕೆಲಸ ಸಾ: 13ನೇ ವಾರ್ಡ-ಇಸ್ಲಾಂಪೂರು, ಗಂಗಾವತಿ (5) ಹಂಪಣ್ಣ ತಂದೆ ಈರಪ್ಪ ಕಂಬಳಿ, 30 ವರ್ಷ, ಕುರುಬರು, ವ್ಯವಸಾಯ ಸಾ: 2ನೇ ವಾರ್ಡ-ಬಸಾಪಟ್ಟಣ (6) ಶರಣಪ್ಪ ತಂದೆ ಸಣ್ಣ ಲಿಂಗಪ್ಪ ಕಂಬಳಿ, 35 ವರ್ಷ, ಕುರುಬರು, ವ್ಯವಸಾಯ ಸಾ: 1ನೇ ವಾರ್ಡ-ಬಸಾಪಟ್ಟಣ (7) ರೇಣು ಕುಮಾರ ತಂದೆ ದೇವಪ್ಪ, 32 ವರ್ಷ, ಲಿಂಗಾಯತ, ಗುಮಾಸ್ತ್ತ ಸಾ: 8ನೇ ವಾರ್ಡ-ಪ್ರಶಾಂತ ನಗರ, ಗಂಗಾವತಿ (8) ಗುರು ತಂದೆ ಶಿವಪ್ಪ, 33 ವರ್ಷ, ಲಿಂಗಾಯತ, ಗುಮಾಸ್ತ ಸಾ: 8ನೇ ವಾರ್ಡ-ಪ್ರಶಾಂತ ನಗರ, ಗಂಗಾವತಿ (9) ಮಂಜುನಾಥ ತಂದೆ ವಿರುಪಣ್ಣ ಗುಡದೂರು, 38 ವರ್ಷ, ಲಿಂಗಾಯತ, ಗುಮಾಸ್ತ ಸಾ: ಬಸ್ ನಿಲ್ದಾಣದ ಹಿಂಭಾಗ, 27ನೇ ವಾರ್ಡ-ಗಂಗಾವತಿ (10) ಶಿವಪುತ್ರಪ್ಪ ತಂದೆ ಸಣ್ಣ ನಿಂಗಪ್ಪ, 31 ವರ್ಷ, ಲಿಂಗಾಯತ, ಉ: ವ್ಯವಸಾಯ ಸಾ: ಗುಡ್ಡದ ಕ್ಯಾಂಪ್ ತಾ: ಗಂಗಾವತಿ. ಅಂತಾ ತಿಳಿಸಿದ್ದು ಅವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ 4,390/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿರುತ್ತದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ: 379 ಐ.ಪಿ.ಸಿ.
ದಿನಾಂಕ: 12-06-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರರಾದ ಶೇಖಪ್ಪ ತಂದೆ ಯಂಕಪ್ಪ ಕಮತರ ವಯ: 42 ವರ್ಷ  ಜಾತಿ: ಒಕ್ಕಲಿಗ ಉ: ಒಕ್ಕಲುತನ ಸಾ: ಕವಲೂರು ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಿಕೀಕರಣ ಮಾಡಿಸಿದ ಫಿಯರ್ಾದಿ ನೀಡಿದ್ದು, ಅದರ ಸಾರಾಂಶವೆನಂದರೆ, ಕವಲೂರು ಸೀಮಾದಲ್ಲಿರುವ ಫಿರ್ಯಾಧಿದಾರರ ತೋಟದ ಹೊಲದಲ್ಲಿರುವ ಪಂಪಸೇಟ್ಗೆ ಹಾಕಿದ್ದ, 200 ಪೀಟ್ ಉದ್ದದ, ಒಟ್ಟು ಅಂದಾಜು ಕಿಮ್ಮತ್ತು 3000=00 ರೂಪಾಯಿ ಬೆಲೆಯುಳ್ಳ ಕೇಬಲ್ ವೈಯರನ್ನು ದಿನಾಂಕ: 09-06-2016 ರಂದು ಸಾಯಂಕಾಲ 5-00 ಗಂಟೆಯಿಂದ ದಿನಾಂಕ:10-06-2016 ಬೆಳಿಗ್ಗೆ 08-00 ಗಂಟೆಯ ನಡುವಿನ ಅವಧಿಯಲ್ಲಿ ಹಾಗೂ ಇತರೆ ಜನರ ಹೊಲದಲ್ಲಿಯ ಪಂಪಸೆಟ್ಗೆ ಹಾಕಿದ್ದ ಕೇಬಲ್ ವೈಯರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನವಾದ ತಮ್ಮ ವೈಯರನ್ನು ಹಾಗೂ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಲ್ಲಿಸಿ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 41/2016 ಕಲಂ: 498(ಎ), 504, 326, 506  ಐ.ಪಿ.ಸಿ:.

ಫಿರ್ಯಾದಿದಾರಳು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಆರೋಪಿ ಹನುಮಂತ ಇವನನ್ನು ಮದುವೆ ಆಗಿದ್ದು  ಆರೋಪಿತನು ಫಿರ್ಯಾದಿದಾರಳೊಂದಿಗೆ ಈ ಮೊದಲು ಚೆನ್ನಾಗಿ ಸಂಸಾರ ಮಾಡಿಕೊಂಡಿಕೊಂಡು ಹೋಗಿದ್ದು  ನಂತರದ ದಿನಗಳಲ್ಲಿ ಆರೋಪಿತನು ಫಿರ್ಯಾದಿದಾರಳೊಂದಿಗೆ ವಿನಾ:ಕಾರಣ ಜಗಳ ಮಾಡುತ್ತಿದ್ದರಿಂದ ಇವರಿಬ್ಬರಲ್ಲಿ ವೈಮನಸ್ಸಾಗಿದ್ದರಿಂದ ಫಿರ್ಯಾದಿದಾರಳು ಈಗ್ಗೆ ಸುಮಾರು 2 ವರ್ಷಗಳಿಂದ ತನ್ನ ಮಕ್ಕಳೊಂದಿಗೆ ತನ್ನ ತವರುಮನೆಯಾದ ಮುರುಡಿ ಗ್ರಾಮಕ್ಕೆ ಬಂದು ತನ್ನ ತಂದೆ ತಾಯಿಯವರ ಮನೆಯಲ್ಲಿ ವಾಸವಾಗಿದ್ದು ಆದಾಗ್ಯೂ ಕೂಡಾ ಆರೋಪಿತನು ಆಗಾಗ ಮುರುಡಿ ಗ್ರಾಮದ ಫಿರ್ಯಾದಿದಾರಳ ಮನೆಗೆ ಬಂದು ಫಿರ್ಯಾದಿದಾರಳಿಗೆ ನೀನು ಗಂಡನನ್ನು ಬಿಟ್ಟು ಬಂದು ಇಲ್ಲಿ ಯಾರ ಜೋತೆಗೆ ಸಂಸಾರ ಮಾಡುತ್ತಿ ಇಲ್ಲಿ ನೀನು ಅವರಿವರ ಜೋತೆಗೆ ಮಾತನಾಡುತ್ತಿ ನಿನ್ನ ನಡತೆ ಸರಿ ಇಲ್ಲಾ ನೀನು ಹೊಲಸು ಸೂಳೆ ಅದಿದಿ ಅಂತಾ ಅವಳ ಶೀಲದ ಬಗ್ಗೆ ಶಂಕಿಸುತ್ತಾ ಕೈಯಿಂದ ಹೋಡಿ ಬಡಿ ಮಾಡುತ್ತಾ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿದ್ದು ಇರುತ್ತದೆ, ನಂತರ ದಿನಾಂಕ: 12.06.2016 ರಂದು ಸಾಯಂಕಲ 4:30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ಹಾಗೂ ಇವಳ ತಂದೆ ನಾಗಪ್ಪ ಇಬ್ಬರೂ ತಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ ಆರೋಪಿತನು ಫಿರ್ಯಾದಿದಾರಳು ಇದ್ದ ಮನೆಗೆ ಬಂದವನೇ ವಿನಾ:ಕಾರಣ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು ಏನಲೇ ಸೂಳೇ ರಂಡೆ ನೀನು  ಗಂಡನನ್ನು ಬಿಟ್ಟು ಬಂದು ಇಲ್ಲೇ ಸೇರಿದಿ ಎಷ್ಟು ಹೇಳಿದರು ನೀನು ನನ್ನ ಮಾತು ಕೇಳುವುದಿಲ್ಲಾ ಅಂತಾ ಅಂದವನೇ ಒಮ್ಮಿಂದೊಮ್ಮಲೆ ಸಿಟ್ಟಿಗೆದು ಅಲ್ಲೆ ಇದ್ದ  ಒಂದು ಬಡಿಗೆಯನ್ನು ತೆಗೆದುಕೊಂಡು  ಫಿರ್ಯಾದಿದಾರಳ ತಲೆಗೆ ಬಲವಾಗಿ ಹೋಡೆದು ಭಾರಿ ರಕ್ತಗಾಯ ಮಾಡಿದ್ದು ಅಲ್ಲದೆ ಫಿರ್ಯಾದಿದಾರಳಿಗೆ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾಧಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Sunday, June 12, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 60/2016 ಕಲಂ: 87 Karnataka Police Act.
ದಿನಾಂಕ: 11-06-2016 ರಂದು 6-00 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 07 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-30 ಪಿಎಂಕ್ಕೆ ಅರಕೇರಿ ಗ್ರಾಮದ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1500/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 40/2016 ಕಲಂ: 341, 504, 323, 506 ಸಹಿತ 34 ಐ.ಪಿ.ಸಿ.
ಫಿರ್ಯಾದಿದಾರರು ಮತ್ತು ಆರೋಪಿತರು ಅಣ್ಣ ತಮ್ಮಂದಿರಿದ್ದು ಮಳೆ ಬಂದರೆ ಆರೋಪಿತರ ಹೊಲದಲ್ಲಿನ ಮಳೆ ನೀರು ಹರಿದು  ಹೊಲದ ಪಕ್ಕದ ಹೊಲದವರಾದ ತಮ್ಮೂರ ಹನುಮಪ್ಪ ಚೌರಿ ಇತನ ಹೊಲದಲ್ಲಿ ಹೊಗುತ್ತಿದ್ದು ಈಗ್ಗೆ ಎರಡು ದಿವಸಗಳಿಂದ ಮಳೆ ಬಂದಿದ್ದರಿಂದ ಇಂದು ದಿನಾಂಕ: 11.06.2016 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ಆರೋಪಿತರು ಮಳೆ ನೀರು ಹರಿದು ಹೋಗುತ್ತಿರುವ ಬಗ್ಗೆ ಹಾಗೂ ಹೊಲದ ಹದ್ದು ಬಸ್ತು ಮಾಡುವ ಬಗ್ಗೆ ಸದರಿ ಹನುಮಪ್ಪ ಚೌರಿ ಇತನೊಂದಿಗೆ ಬಾಯಿ ಮಾತಿನಿಂದ ಜಗಳ ಮಾಡುತ್ತಿರುವ ಕಾಲಕ್ಕೆ ಅದೇ ವೇಳೆಗೆ ಫಿರ್ಯಾದಿದಾರನು ತನ್ನ ಮನೆಯಿಂದ ತನ್ನ ಪಾಡಿಗೆ ತಾನು ತಮ್ಮ ಹೊಲಕ್ಕೆ ಗಳೆ ಹೊಡೆಯಲು ಹೋಗುತ್ತಿರುವಾಗ ಆರೋಪಿತರಿಬ್ಬರೂ ಫಿರ್ಯಾದಿದಾರನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಎನಲೇ ಬೋಸುಡಿ ಮಗನೇ ಮಳೆ ನೀರು ಹರಿದು ಹೋಗುತ್ತಿರುವ ಬಗ್ಗೆ ಹಾಗೂ ಹೊಲದ ಹದ್ದು ಬಸ್ತು ಮಾಡುವ ಬಗ್ಗೆ ನಾವು ಜಗಳ ಮಾಡುತ್ತಿದ್ದರೆ ಅದನ್ನು ನೋಡಿ ನಿನು ಸುಮ್ಮನೆ ಹೋಗುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವ್ಯಾಶ್ಚವಾಗಿ ಬೈದಾಡಿ  ಕೈಯಿಂದ ಹೊಡಿ ಬಡಿ ಮಾಡಿ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


Friday, June 10, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 56/2016 ಕಲಂ: 32,34,38A,KARNATAKA EXCISE ACT, 1965.
ದಿನಾಂಕ: 09-06-2016 ರಂದು ಸಾಯಾಂಕಾಲ 6-00 ಗಂಟೆಗೆ ಸುಮಾರಿಗೆ ಆರೋಪಿ ರಾಜಾಭಕ್ಷಿ ತಂದೆ ಮುರ್ತುಜಾಸಾಬ ಮೂಲಿಮನಿ ವಯ: 28 ವರ್ಷ ಸಾ: ಗಜೇಂದ್ರಗಡ ತಾ: ರೋಣ ಇತನು ಕಾತ್ರಾಳ ಕ್ರಾಸದಲ್ಲಿ ಬರುವ ತನ್ನ ಭಾರತ ಢಾಭಾದಲ್ಲಿ ಅನಧೀಕೃತವಾಗಿ ಮಧ್ಯಪಾನ ಮಾರಾಟ ಮಾಡುತ್ತಿದ್ದಾಗ  ಪಿ.,ಎಸ್.ಐ. ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಸದರಿ ಭಾರತ ಢಾಭಾದಲ್ಲಿ ದಾಳಿ ಮಾಡಲಾಗಿ, ಸದರಿ  ಆರೋಪಿತನಿಂದ ಪರಿಶೀಲನೆ ಮಾಡಿ ನೊಡಲಾಗಿ 1). 180 ಎಂ.ಎಲ್. ಇಂಪೀರಿಯಲ್ಲಿ ಬ್ಲೂ ವಿಸ್ಕಿ ಬಾಟಲಿಗಳು ಅಂ.ಕಿ. 659.50 ರೂ. ಗಳು, 2). 180 ಎಂ.ಎಲ್. 03  ಡಿ.ಎಸ್.ಪಿ. ಬ್ಲಾಕ ವಿಸ್ಕಿ ಬಾಟಲಿಗಳು ಅಂ.ಕಿ. 326.55 ರೂ.ಗಳು.   3).  180 ಎಂ.ಎಲ್. 19 ಬ್ಯಾಗಪೈಪರ್ ವಿಸ್ಕಿ ಟೆಟ್ರಾ ಪೌಚ್ ಅಂ.ಕಿ. 1,403.72 ರೂ.ಗಳು 4). 180 ಎಂ.ಎಲ್. 32 ಓಲ್ಡ ಟವರ್ನ ವಿಸ್ಕಿ ಟೆಟ್ರಾ ಪೌಚ್ ಅಂ.ಕಿ. 1,964.48 ರೂ.ಗಳು ಅಂ.ಕಿ. 5). 650 ಎಂ.ಎಲ್. 12 ಕಿಂಗ್ ಫೀಷರ್ ಸ್ಟ್ರಾಂಗ ಬೀಯರ್ ಅಂ.ಕಿ. 1,440/- ರೂ.ಗಳು 6] ಒಂದು ಪ್ಲಾಸ್ಟೀಕ ಗೊಬ್ಬರ ಅಂ.ಕೀ ಇಲ್ಲ ಹೀಗೆ ಒಟ್ಟು 5,794.55/-ರೂ. ದಷ್ಟು ಮದ್ಯ ಸಿಕ್ಕಿದ್ದು ಇರುತ್ತದೆ. ಸದರ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 158/2016 ಕಲಂ: 420, 468, 471, 191 ಐ.ಪಿ.ಸಿ.
ದಿನಾಂಕ: 09-06-2016 ರಂದು ಸಂಜೆ 06-00 ಗಂಟೆಗೆ ತಾವರಗೇರಾ  ಪೊಲೀಸ್ ಠಾಣೆ ಯಿಂದ ಹದ್ದಿ ಪ್ರಯುಕ್ತ ವರ್ಗಾವಣೆಯಾದ ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 48/2016 ನೇದ್ದು ಸ್ವೀಕೃತವಾಗಿದ್ದು ಸಾರಾಂಶ ವೆನೆಂದರೆ ಪಿರ್ಯಾದಿ ಹಿರೇಹನುಮಪ್ಪ ಇವರ ತಾಯಿಯಾದ ಯಮನಮ್ಮ ರವರು ದಿನಾಂಕ:22-06-2011 ರಂದು ತೀರಿಕೊಂಡಿದ್ದು ಆಕೆಯ ಹೆಸರಿನಲ್ಲಿ ಸರ್ವೇ ನಂ:26 ಹಿಸ್ಸಾ 2 ಎ- ಕ್ಷೇತ್ರ 5 ಎಕರೆ 4 ಗುಂಟೆ ಜಮೀನು ಇದ್ದು  ಆದರೆ ಆರೋಪಿ ಪಂಪಪ್ಪ ತಂದೆ ಯಮನಮ್ಮ ಹರಿಜನ ವಯಾ 60 ವರ್ಷ ಉ:ಒಕ್ಕಲುತನ ಇತನು ಸುಳ್ಳು ದಸ್ತಾವೇಜುಗಳನ್ನು ತಯಾರಿಸಿ ತಮ್ಮ ಹೆಸರಿನಲ್ಲಿ ಸದರಿ ಜಮೀನಿನನ್ನು ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾರೆ. ಅಂತಾ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 165/2016 ಕಲಂ: 279, 304(ಎ) ಐ.ಪಿ.ಸಿ.

ದಿನಾಂಕ:- 10-06-2016 ರಂದು ಬೆಳಿಗ್ಗೆ 7:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಯಮನಪ್ಪ ತಂದೆ ಹನುಮಂತಪ್ಪ ಗಂಗಾವತಿ, 46 ವರ್ಷ ಜಾತಿ: ಗಂಗಾಮತ, ಸಾ: ಶ್ರೀಕೃಷ್ಣದೇವರಾಯ ನಗರ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ದಿ: 09-06-2016 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನನ್ನ ಮಗನಾದ ಸುರೇಶ ಈತನು ದಿನ ನಿತ್ಯದಂತೆ ಕೆಲಸಕ್ಕೆಂದು ಗಂಗಾವತಿಗೆ ಬಂದಿದ್ದನು. ನಂತರ ರಾತ್ರಿ 9:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಕ್ಯಾಂಪಿನ ಮುತ್ತೇಶ ಎಂಬಾತನು ಪೋನ್ ಮಾಡಿ “ನಾನು ಮಾಣಿಕಪ್ಪ ಆಸ್ಪತ್ರೆಯ ಮೆಡಿಕಲ್ ಶಾಫನಲ್ಲಿ ಕೆಲಸ ಮಗಿಸಿಕೊಂಡು ಗಂಗಾವತಿಯಿಂದ ಕೆಡಿನಗರಕ್ಕೆ ನನ್ನ ಮೋಟಾರ ಸೈಕಲ ಮೇಲೆ ಗಂಗಾವತಿ-ಕಂಪ್ಲಿ ಮುಖ್ಯ ರಸ್ತೆಯಲ್ಲಿ ದೇವಿನಗರದ ಹತ್ತಿರ ತಾಯಮ್ಮನ ಗುಡಿ ಹತ್ತಿರ ಬರುತ್ತಿರುವಾಗ ಒಬ್ಬ ವ್ಯಕ್ತಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ನನ್ನ ಮೋಟಾರ ಸೈಕಲನ್ನು ಓವರ ಮಾಡಿ ಮುಂದೆ ರಸ್ತೆಯ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು ಆಗದೇ ಮೋಟಾರ ಸೈಕಲ ಸಮೇತ ರಸ್ತೆಯ ಪಕ್ಕ ಕಾಲುವೆಯಲ್ಲಿ ಬಿದ್ದಿದ್ದು ಕೂಡಲೇ ನಾನು ನನ್ನ ಮೋಟಾರ ಸೈಕಲನ್ನು ಪಕ್ಕಕ್ಕೆ ನಿಲ್ಲಿಸಿ ಆತನನ್ನು ನೋಡಲಾಗಿ ನಿಮ್ಮ ಮಗನಾದ ಸುರೇಶನಿದ್ದು ಮೇಲಕ್ಕೆ ಎತ್ತಲು ಆತನಿಗೆ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ. ನಂತರ ಆತನು ನಡೆಸುತ್ತಿದ್ದ ಮೋಟಾರ ಸೈಕಲ ನೋಡಲು ನಂಬರ್ ಕೆ.ಎ-37/ವೈ-0526 ಹೊಂಡಾ ಡ್ರೀಮ್ ನಿಯೋ ಕಂಪನಿಯದ್ದು ಇದ್ದು ಮುಂಭಾಗ ಡೂಮ್ ಸಂಪೂರ್ಣವಾಗಿ ಡ್ಯಾಮೇಜ ಆಗಿದ್ದು ಕೂಡಲೇ ನಮ್ಮ ಆಸ್ಪತ್ರೆಯ ಅಂಬ್ಯುಲೆನ್ಸ್ ಗೆ ಪೋನ್ ಮಾಡಿದ್ದು ವಾಹನ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವದಾಗಿ ” ತಿಳಿಸಿದನು. ಕೂಡಲೇ ನಾನು ಮತ್ತು ನನ್ನ ಮಗನಾದ ಮಂಜುನಾಥ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆಗೆ ಬಂದು ನನ್ನ ತೀವ್ರವಾಗಿ ಗಾಯಗೊಂಡಿದ್ದ ನನ್ನ ಮಗನನ್ನು ನೋಡಲು ಚಿಕಿತ್ಸೆ ಮಾಡಿದ ವೈಧ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಯ ತತ್ವಾಧರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಮಗ ಮಂಜುನಾಥನು ಅದೇ ಅಂಬ್ಯುಲೆನ್ಸ್ ನಲ್ಲಿ ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ದಿನಾಂಕ: 10-06-2016 ರಂದು ಬೆಳಗಿನ ಜಾವ 2:00 ಗಂಟೆಯ ಸುಮಾರಿಗೆ ನನ್ನ ಮಗ ಮಂಜುನಾಥ ಈತನು ಪೋನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಈತನು ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ 01:15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು. ರಾತ್ರಿಯಾಗಿದ್ದರಿಂದ ಈಗ ತಡವಾಗಿ ಠಾಣೆಗೆ ಬಂದು ಈ ನನ್ನ ಹೇಳಿಕೆ ದೂರನ್ನು ಸಲ್ಲಿರುತತ್ತೇನೆ. ಈ ಅಪಘಾತಕ್ಕೆ ನನ್ನ ಮಗನಾದ ಸುರೇಶ ಈತನೇ ಕಾರಣನಾಗಿದ್ದು, ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008