This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
1] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 29/2017
ಕಲಂ: 279, 338, 304[ಎ] ಐ.ಪಿ.ಸಿ:.
ದಿನಾಂಕ:
02-04-2017 ರಂದು
ಸಾಯಾಂಕಾಲ 18-30 ಗಂಟೆಗೆ
ಫಿರ್ಯಾದಿದಾದರರಾದ ಶ್ರೀ ಅನೀಲ್ ಕಾಟವಾ ಸಾ: ಚಳಗೇರಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ
ಹಾಜರಪಡಿಸಿದ್ದರ ಸಾರಾಂಶವೆನೆಂದರೆ. ಫಿರ್ಯಾದಿಯ ತಮ್ಮನಾದ ದಿನಾಂಕ:
07-03-2017 ರಂದು
ರಾತ್ರಿ
8-45 ಗಂಟೆಯ
ಸುಮಾರಿಗೆ ತಮ್ಮ ಚಿಕ್ಕಪ್ಪನಾದ ಚಂದ್ರಾಹಾಸ ಕಾಟಾವಾ ರವರು ಫಿರ್ಯಾದಿಯ ಮನೆಗೆ ಫೋನಮಾಡಿ
ತಿಳಿಸಿದ್ದೆನೆಂದರೆ, ಅನೀಲನು ಹೂಲಗೇರಿ ಹನಮಸಾಗರ ರಸ್ತೆಯ ಹೈಸ್ಕೂಲ್ ಮುಂದೆ ರೋಡಿನ
ತಿರುವಿನಲ್ಲಿ ಗಾಡಿ ಅಪಘಾತ ಮಾಡಿಕೊಂಡು ಬಿದ್ದಿರುವನು ಅಂತಾ ಫೊನ್ ಮೂಲಕ ರಾತ್ರಿ 8-45 ಗಂಟೆಗೆ
ತಿಳಿಸಿದ್ದರಿಂದ ಫಿರ್ಯಾದಿ ಹಾಗೂ ಅವರ ತಂದೆ ಕೂಡಿ ಸ್ಥಳಕ್ಕೆ ಹೋಗಿ ನೋಡಲು ಅನೀಲನಿಗೆ
ಹಿಂದೆಲೆಗೆ ಹಾಗೂ ಎರಡೂ ತುಟಿ, ಹಾಗೂ ಎಡಕಪಾಳ ಮತ್ತು ಎಡಕುತ್ತಿಗೆ ಹತ್ತಿರ
ಭಾರಿ ರಕ್ತ ಗಾಯವಾಗಿದ್ದು ಅಷ್ಟರಲ್ಲಿ 108 ಆಂಬ್ಯುಲೆನ್ಸ್ ಬಂದಿದ್ದು, ತಾನು ಹಾಗೂ
ತಮ್ಮ ತಂದೆ ಕೂಡಿ ಅನೀಲನನ್ನು 108 ಆಂಬ್ಯುಲೆನ್ಸದಲ್ಲಿ
ಕರೆದುಕೊಂಡು ಬಾಗಲಕೋಟ ಧನುಷ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲಾಜು ಕುರಿತು ಸೇರಿಕೆ
ಮಾಡಿದ್ದು,
ನಂತರ
ವಿಷಯ ತಿಳಿದು ಹನಮಸಾಗರ ಪೊಲೀಸ್ ಠಾಣೆಯ ಶಿವಕುಮಾರ ಹೆಚ್.ಸಿ-104 ರವರು
ಬಂದಿದ್ದು,
ಫಿರ್ಯಾದಿಯ
ತಮ್ಮ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ತಮ್ಮ ತಂದೆ ಪರಶುರಾಮಸಾ ರವರು ಈ ಘಟನೆ ಬಗ್ಗೆ
ನಂತರ ಠಾಣೆಗೆ ಬಂದು ತಿಳಿಸುವುದಾಗಿ ಹಾಗೂ ಸದ್ಯ ಯಾವುದೇ ಫಿರ್ಯಾದಿ ಇರುವುದಿಲ್ಲ ಅಂತಾ ಅರ್ಜಿ
ಬರೆದು ಕೊಟ್ಟಿದ್ದು ಇರುತ್ತದ. ನಂತರ ಫಿರ್ಯಾದಿ ತಮ್ಮನನ್ನು ಅಲ್ಲಿಂದ
ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ
ಮಾಡಿದ್ದು,
ಫಿರ್ಯಾದಿ
ತಮ್ಮ ಆರಾಮ ಆಗಬಹುದು ಅಂತಾ ಇಲ್ಲಿಯವರೆಗೆ ಕಾದು ನೋಡಿದರು ಆರಾಮ ಆಗದೇ ಇಂದು ದಿನಾಂಕ:
02-04-2017 ರಂದು
ಮುಂಜಾನೆ
10-00 ಗಂಟೆಗೆ
ಇಲಾಜು ಫಲಿಸದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈ ಗೊಂಡಿರುತ್ತಾರೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 34/2017
ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 02-04-2017 ರಂದು ರಾತ್ರಿ 07-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ನಿರುಪಾದಿ ತಂದೆ ಹೊಳಿಯಪ್ಪ ಗೊಲ್ಲರ್, ವಯಾ :38 ವರ್ಷ. ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು. ದಿನಾಂಕ :31-03-2017 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ಬೀಮಣ್ಣ ತಂದಿ ಕಂಠೆೆಪ್ಪ ದಂಡಿನ್ ಇತನು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋ.ಸೈಕಲ್ನ್ನು ನಂ :ಕೆ.ಎ-37-ವಾಯ್-1898 ನೇದ್ದನ್ನು ಕನಕಗಿರಿ ಪಟ್ಟಣದ ಹೊರ ವಲಯದಲ್ಲಿರುವ ಕಾತರ್ಿಕ್ ಪೆಟ್ರೋಲ್ ಬಂಕ್ ಕಡೆಯಿಂದ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಗಂಗಾವತಿ ಕಡೆ ಜೋರಾಗಿ ತಿರುಗಿಸಿ ಹೋಗುತ್ತಾ ಎದುರುಗಡೆ ನಿಧಾನವಾಗಿ ಬರುತ್ತಿದ್ದ ವೆಂಕಟೇಶ ಗೊಲ್ಲರ್ ಇತನ ಮೋ.ಸೈಕಲ್ ಹೋಂಡಾ ಶೈನ್ ನಂ : ಕೆ.ಎ-37/ಈಎ-5143 ನೇದ್ದಕ್ಕೆ ಜೋರಾಗಿ ಟಕ್ಕರ್ ಕೊಟ್ಟಿದ್ದು, ಇದರಿಂದ ವೆಂಕಟೇಶ ಆತನ ಹಿಂದೆ ಕುಳಿತ ಅತ್ತಿಗೆ ಕರಿಯಮ್ಮ ಮತ್ತು ಚಾಲಕ ಬೀಮಣ್ಣನಿಗೆ ಸಾದ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ನಂತರ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆ ಕನಕಗಿರಿಗೆ ದಾಖಲಿಸಿ ಅದೇ ದಿವಸ ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಗೆ ಸೇರಿಸಿದ್ದು ಈ ಬಗ್ಗೆ ನಾವು ನಮ್ಮ ಮನೆಯವರರೊಂದಿಗೆ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 28/2017
ಕಲಂ: 279, 337, 304(ಎ) ಐ.ಪಿ.ಸಿ:
ದಿನಾಂಕ: 01-04-2017 ರಂದು ಮದ್ಯಾಹ್ನ 2-50 ಗಂಟೆಯ ಸುಮಾರಿಗೆ ಪಿರ್ಯಾದಿದಾರನು ತನ್ನ ತಾಯಿಯಾದ ಶ್ರೀಮತಿ ಸುಗಂಧವ್ವ ಗಂಡ ಪರಸಪ್ಪ ಕಲಘಟಗಿ ಇವರನ್ನು ಮೋಟಾರ ಸೈಕಲ ನಂ : ಕೆ.ಎ-51/ಇ.ಎಂ-8233
ನೇದ್ದರಲ್ಲಿ ಹಿಂದುಗಡೆ ಕೂಡಿಸಿಕೊಂಡು ಸಂಕನೂರು ಕ್ರಾಸ, ಯಲಬುರ್ಗಾ ಮಾರ್ಗವಾಗಿ ಯಲಬುರ್ಗಾ-ಮಲಕಸಮುದ್ರ ರಸ್ತೆಯ ಮೇಲೆ ಮಲಕಸಮುದ್ರ ಸೀಮಾದಲ್ಲಿ ಬರುವ ದುರಗಪ್ಪ ಕುಡಗುಂಟಿ ಇವರ ಹೊಲದ ಹತ್ತಿರ ಕಿನ್ನಾಳ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮಲಕಸಮುದ್ರ ಗ್ರಾಮದ ಕಡೆಯಿಂದ ಆರೋಪಿತನಾದ ಮುತ್ತಪ್ಪ ತಂದೆ ಯಲ್ಲಪ್ಪ ಯಡಿಯಾಪೂರ ಸಾ|| ಚಿಕ್ಕಮ್ಯಾಗೇರಿ
ಈತನು ಮೋಟಾರ ಸೈಕಲ ನಂ ಕೆ.ಎ-29/ಕ್ಯೂ-6067
ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾ-ದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನು
ಚಲಾಯಿಸುತ್ತಿದ್ದ ಮೋಟಾರ ಸೈಕಲಗೆ ಜೋರಾಗಿ ಟಕ್ಕರ
ಕೊಟ್ಟಿದ್ದರಿಂದ ಪಿರ್ಯಾದಿದಾರ
& ಆತನ ತಾಯಿ ಮಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು,
ಪಿರ್ಯಾದಿದಾರನಿಗೆ ಎಡಗಡೆ ಚೆಪ್ಪಿಗೆ, ಎಡಗಾಲು ಮೊಣಕಾಲಿಗೆ ಒಳಪೆಟ್ಟಾಗಿದ್ದು ಹಾಗೂ ಆತನ ತಾಯಿ ಸುಗಂಧವ್ವ ಈಕೆಯ ತಲೆಯ ನೆತ್ತಿಗೆ ಭಾರಿ ಸ್ವರೂಪದ ಪೆಟ್ಟು ಬಿದ್ದು ರಕ್ತಗಾಯ, ಎಡಗೈ ರಟ್ಟೆಗೆ ಭಾರಿಸ್ವರೂಪದ ಒಳಪೆಟ್ಟಾಗಿ ಮುರಿದಿದ್ದು, ಎಡಗಾಲ ಪಾದದ ಕೀಲಿನ ಮೇಲ್ಭಾಗದಲ್ಲಿ ಭಾರಿ ಸ್ವರೂಪದ ಒಳಪೆಟ್ಟಾಗಿ, ಮತ್ತು ಬೆನ್ನಿಗೆ ತೆರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಹಾಗೂ ಆರೋಪಿತನಿಗೆ ಸಹ ಸಾಧಾ
ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲ ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನಮಸಾಗರ ಪೊಲೀಸ್ ಠಾಣಾ ಗುನ್ನೆ ನಂ: 28/2017
ಕಲಂ: 279, 304[ಎ] ಐ.ಪಿ.ಸಿ. ಮತ್ತು 187 ಐ.ಎಮ್.ವ್ಹಿ. ಕಾಯ್ದೆ:.
ದಿನಾಂಕ:
01-04-2017 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾದರರಾದ ಶ್ರೀ ಪ್ರಕಾಶಗೌಡ ಗೌಡರ ಸಾ: ಹೂಲಗೇರಿ ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ. ಫಿರ್ಯಾದಿಯ ತಮ್ಮನಾದ ಉಮೇಶನು ಹಾಗೂ ಪರಿಚಯದವರಾದ ಅಮರೇಶ
ಓತಗೇರಿ ಈತನ ಗ್ಲಾಮರ್ ಮೋಟಾರ್ ಸೈಕಲ್ ಮೇಲೆ ಸೇಬಿನಕಟ್ಟಿ ಮುತ್ತೆನ ಕಟ್ಟೆ ಜಾತ್ರೆಗೆ ಹೋಗಿ ಬರುತ್ತೇನೆ
ಅಂತಾ ಹೋಗಿದ್ದು,
ನಂತರ
ಸಾಯಂಕಾಲ
4-10 ಗಂಟೆಯ
ಸುಮಾರಿಗೆ ಫಿರ್ಯಾದಿ ಊರಲ್ಲಿದ್ದಾಗ ಮಹಾಂತೇಶ ಪಲ್ಲೇದ ರವರು ಫೋನ ಮೂಲಕ ತಿಳಿಸಿದ್ದೆನೆಂದರೆ. ಹನಮಸಾಗರ ದಿಂದ
ತಮ್ಮೂರಿಗೆ ಬರುವ ರೋಡಿನ ತಿರುಪತಿಗೆ ಹೋಗುವ ರಸ್ತೆಯ ಹತ್ತಿರ ರೋಡಿನಲ್ಲಿ ಮೋಟಾರ ಸೈಕಲಗೆ ಯಾವುದೋ
ವಾಹನ ಟಕ್ಕರಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ನಿಮ್ಮ ತಮ್ಮ ಉಮೇಶನಿಗೆ ಕಾಲು ಕೈಗೆ ಹಾಗೂ ತಲೆಗೆ
ಮತ್ತು ಮೂಗಲ್ಲಿ ಬಾಯಲ್ಲಿ ರಕ್ತ ಸೋರಿ ರೋಡಿನ ತೆಗ್ಗಿನಲ್ಲಿ ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದರಿಂದ
ಫಿರ್ಯಾದಿ ಕೂಡಲೇ ತನ್ನ ಮೋಟಾರ ಸೈಕಲ ಮೇಲೆ ಸ್ಥಳಕ್ಕೆ ಹೋಗಿ ನೋಡಿದ್ದು ಅಲ್ಲಿಗೆ ತಮ್ಮ ತಮ್ಮನ ಸಂಗಡ
ಹೋದ ಅಮರೇಶ ಓತಗೇರಿ ಈತನನ್ನು ಸಾಯಾಂಕಾಲ 04-00 ಗಂಟೆಯ ಸುಮಾರು ತಮ್ಮ ತಮ್ಮ
ಉಮೇಶನು ಮನ್ನೆರಾಳದಲ್ಲಿ ಬಿಟ್ಟು ಮೋಟಾರ ಸೈಕಲನ್ನು ತೆಗೆದುಕೊಂಡು ಹನಮಸಾಗರಕ್ಕೆ ಹೋಗಿ ಬರುತ್ತೇನೆ
ಅಂತಾ ಹೋಗಿದ್ದು,
ನಂತರ
ಅಪಘಾತವಾದ ವಿಷಯ ತಿಳಿದು ಅಲ್ಲಿಗೆ ಬಂದಿದ್ದು ಆಗ ಫಿರ್ಯಾದಿ ಹಾಗೂ ಅಮರೇಶನು ಇಬ್ಬರು ಸೇರಿ ಉಮೇಶನು
ಬದುಕಿರಬಹುದು ಅಂತಾ ಒಂದು ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಹನಮಸಾಗರಕ್ಕೆ ಬರುವಷ್ಟರಲ್ಲಿ
ಉಮೇಶನು ಮೃತಪಟ್ಟ ಬಗ್ಗೆ ತಿಳಿದು ಉಮೇಶನ ಶವವನ್ನು ಅಮರೇಶನ ಸಂಗಡ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ
ಕಳುಹಿಸಿ ತಾನು ವಾಪಾಸ್ ಘಟನಾ ಸ್ಥಳಕ್ಕೆ ಹೋಗಿ ನೋಡಲು ಉಮೇಶನು ನಡೆಸಿರುವ ಮೋಟಾರ್ ಸೈಕಲ್ ಗ್ಲಾಮರ್
ಬೈಕಿದ್ದು,
ಅದು
ಪೂರ್ತಿಯಾಗಿ ಡ್ಯಾಮೇಜಾಗಿ ಮುಂದಿನ ಡೂಮ್ ಹೊಲದಲ್ಲಿ ಬಿದ್ದಿದ್ದು, ಅದಕ್ಕೆ ನಂಬರ
ಇರಲಿಲ್ಲಾ ಅದರ ಚೆಸ್ಸಿ ನಂಬರ ನೋಡಲಾಗಿ MBLJA06AMF9G21459, ಹಾಗೂ ಇಂಜನ್ ನಂ:
JA06EJF9G21597 ಅಂತಾ ಇದ್ದು, ಉಮೇಶನು ಹೂಲಗೇರಿ ಕಡೆಯಿಂದ ಹನಮಸಾಗರಕ್ಕ ಬರುವಾಗ
ಎದುರಗಡೆ ಹನಮಸಾಗರ ಕಡೆಯಿಂದ ಯಾವುದೋ ಒಂದು ವಾಹನ ಅತೀವೇಗ ಹಾಗೂ ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ
ನಡೆಸಿಕೊಂಡು ಬಂದು ಉಮೇಶ ಮೋಟಾರ್ ಸೈಕಲ್ ಗೆ ಟಕ್ಕರಕೊಟ್ಟು ಅಪಘಾತಪಡಿಸಿ ವಾಹನ ನಿಲ್ಲಿಸದೇ ಹೋಗಿದ್ದು, ಅಪಘಾತ ಪಡಿಸಿ
ಓಡಿ ಹೋದ ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲು ವಿನಂತಿ. ಮುಂತಾಗಿ ಫಿರ್ಯಾದಿ
ಅದೆ.
1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ. ನಂ: 27/2017
ಕಲಂ: 78(3) Karnataka Police Act.
ದಿನಾಂಕ: 31-03-2017 ರಂದು ರಾತ್ರಿ
8-45 ಗಂಟೆಯ ಸುಮಾರಿಗೆ ಆರೋಪಿ ನಂ 01 ಈತನು ಕುದ್ರಿಕೋಟಗಿ ಗ್ರಾಮದಲ್ಲಿ ಬರುವ
ಬಸ್ಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು
ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು
ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ
ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ
ಹತ್ತಿರ ಮಟಕಾ ಜೂಜಾಟದ ನಗದು ಹಣ 740/-ರೂ. ಹಾಗೂ ನಂಬರ ಬರೆಯಿಸಲು ಬಂದಿದ್ದ ಆರೋಪಿ
ನಂ:2 ಮತ್ತು 3 ನೇದ್ದವರ ಹತ್ತಿರ 70 ರೂಪಾಯಿ ಮತ್ತು 50 ರೂಪಾಯಿ ಹೀಗೆ ಒಟ್ಟು ಜೂಜಾಟದ ನಗದು ಹಣ
860 ರೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್
ಅ.ಕಿ ಇಲ್ಲ. ನೇದ್ದುವುಗಳೊಂದಿಗೆ
ಸಿಕ್ಕಿಬಿದ್ದಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ. ನಂ: 73/2017
ಕಲಂ: 279, 337, 338(ಎ) ಐ.ಪಿ.ಸಿ:.
ದಿನಾಂಕ : 31-03-2017 ರಂದು ನಾನು ಮತ್ತು ನಮ್ಮ ಸಂಭಂದಿಕ ಬಸವರಾಜ ತಂದೆ ಹೊನ್ನೂರಸ್ವಾಮಿ
ಹಾಗೂ ರಾಮಾಂಜನೇಯ ತಂದಿ ಈಶ್ವರಪ್ಪ ಜೂಟುರ್ ಕೂಡಿಕೊಂಡು ರಾಮಾಂಜನೇಯ ಈತನ ಮೊಟಾರ್ ಸೈಕಲ್ ನಂಬರ್
– ಕೆ.ಎ- 37 / ಕ್ಯೂ- 173 ನೇದ್ದರ ಮೇಲೆ ನಮ್ಮೂರಿನಿಂದ ಶಿರಗೇರಿಗೆ ಗೊಬ್ಬರ ಏರಲೆಂದು
ಹೊಗಿದ್ದೆವು. ನಾವು ಗೊಬ್ಬರ ಕೆಲಸ ಮುಗಿಸಿಕೊಂಡು ನಮ್ಮೂರಿಗೆ ಹೊಗಲೆಂದು ಆನೆಗುಂದಿ
ಮುಖಾಂತರ ಅಂಜನಾದ್ರಿ ಬೇಟ್ಟ ದಾಟಿ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ನಮ್ಮ ಮೊಟಾರ್ ಸೈಕಲ್
ಚಾಲಕ ರಾಮಾಂಜನೇಯ ಇತನು ನಮಗೆ ಕೂಡ್ರಿಸಿಕೊಂಡು ನಿಧಾನವಾಗಿ ತಿರುವು ರಸ್ತೆಯಲ್ಲಿ ಹೊರಟಿದ್ದಾಗ್ಗೆ
ಬಸಾಪೂರ ಕಡೆಯಿಂದ ಒಬ್ಬ ಲಾರಿಯ ಚಾಲಕ ತಮ್ಮ ಲಾರಿಯನ್ನು ಅತೀ ವೇಗ ಹಾಗೂ ಅಜಾಗೃಕತೆಯಿಂದ
ತಿರುವು ರಸ್ತೆ ಇರುವದನ್ನು ಸರಿಯಾಗಿ ಗಮನಿಸದೆ ಓಡಿಸಿಕೊಂಡು ಬಂದು ನಮ್ಮ ಮೊಟಾರ್ ಸೈಕಲ್ಲಿಗೆ
ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದೇವು. ಇದರಿಂದ
ನನಗೆ ಬಲಗೈ ರಟ್ಟೆಗೆ ಹಾಗೂ ಮೊಣಕೈಗೆ ಮತ್ತು ಮೊಣಕಾಲಿಗೆ ಗಂಭೀರಗಾಯ ಮತ್ತು ಪೆಟ್ಟುಗಳಾಗಿರುತ್ತವೆ.
ರಾಮಾಂಜನೇಯ ಈತನಿಗೆ ತಲಗೆ ಮುಖಕ್ಕೆ, ಕೈ ಕಾಲುಗಳಿಗೆ ಗಂಭೀರಗಾಯ ಹಾಗೂ ಪೆಟ್ಟುಗಳಾಗಿದ್ದು,
ಬಸವರಾಜನಿಗೆ ತಲೆಗೆ ಬಲಗೈ ಹಾಗೂ ಮಲ ಬೊಣಕೈ ಹಾಗೂ ಇತರ ಕಡೆಗೆ ಭಾರೀ ಗಾಯಗಳಾಗಿ ಮಾತನಾಡುವ
ಸ್ಥಿತಿಯಲ್ಲಿರುವದಿಲ್ಲ. ಅಪಘಾತಪಡಿಸಿದ ಲಾರಿ ನಂಬರ್ ನೋಡಲು ಕೆ.ಎ- 01/ ಎ ಎಫ್- 3810 ಅಂತಾ ಇದ್ದು
ಚಾಲಕನ ಬಗ್ಗೆ ವಿಚಾರಿಸಲಾಗಿ ಗದ್ದೆಪ್ಪ ತಂದಿ ಬಸಪ್ಪ ಚಿಕ್ಕಪ್ಪೂರ ತಾ- ಲಿಂಗಸೂರ ಅಂತಾ ಗೊತ್ತಾಯಿತು.
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ. ನಂ: 57/2017
ಕಲಂ: 379 ಐ.ಪಿ.ಸಿ:.
ದಿನಾಂಕ 31-03-2017 ರಂದು ಸಾಯಂಕಾಲ
6-30 ಗಂಟೆಗೆ ಮಾನ್ಯ ಜೆ.ಎಂ.ಎಫ್.ಸಿ. ನ್ಯಾಯಾಲಯ ಕೊಪ್ಪಳದಿಂದ ಉಲ್ಲೇಖಿತ ಖಾಸಗಿ ಪಿರ್ಯಾದಿ ನಂ.79/2017
ನೇದ್ದನ್ನು ನ್ಯಾಯಾಲಯ ಕರ್ತವ್ಯದ ಪಿಸಿ-152 ರವರು ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ,
ಹೊಸನಿಂಗಾಪೂರದಲ್ಲಿರುವ ಕೆ.ಪಿ.ಟಿ.ಸಿ.ಎಲ್. ಪ್ರದೇಶದಲ್ಲಿ ಪಿರ್ಯಾದಿದಾರರು ವಿದ್ಯುತ್ ಪ್ರಸರಣದ
ಎಲೆಕ್ಟ್ರಾನಿಕ್ ಉಪಕರಣಗಳಾದ ಅಂದಾಜು 8,70,514/- ಮೌಲ್ಯದ 220KV Isolator parts like 1] Earth Swiich
Moving Contact Assembly for 220 KV 1250 Amps HDB Isolators (24 numbers in
quantity) 2] Main Switch Moving Contact Assembly for 220 KV 1250 Amps HDB
Isolators (07 numbers in quantity) ನೇದ್ದವುಗಳನ್ನು
ಶೇಖರಿಸಿದ್ದು, ಸದರಿ ವಸ್ತುಗಳನ್ನು ದಿನಾಂಕ: 19-11-2016 ರಂದು ಕಳ್ಳತನವಾಗಿರುತ್ತವೆ. ಗುನ್ನೆ
ನಂ. 57/2017 ಕಲಂ 379 ಐ.ಪಿ.ಸಿ. ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.