Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, April 12, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 45/2017 ಕಲಂ: 96(ಬಿ) ಮತ್ತು (ಸಿ) Karnataka Police Act.
ದಿನಾಂಕ 11-04-2017 ರಂದು ಬೆಳಗ್ಗೆ  06-30 ಗಂಟೆಗೆ ಪಿಸಿ 382 ರಾಜಶೇಖರ ಇವರು ನೀಡಿದ ವರದಿಯಲ್ಲಿ ಇಂದು 5-30 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ನಾನು ಮತ್ತು ಪಿಸಿ 226 ರವರೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಾ ನಗರದ ಲೇಬರ್ ಕ್ರಾಸ್ ಹತ್ತಿರ ತಿರುಗಾಡುತ್ತಿದ್ದಾಗ ಒಬ್ಬನು ನಮ್ಮನ್ನು ನೋಡಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ತನ್ನ ಮುಖ ಮುಚ್ಚಿಕೊಂಡು ಕತ್ತಲಲ್ಲಿ ಅವಿತುಕೊಂಡಿರುವುದು ಕಂಡುಬಂದಿದ್ದು, ಆಗ ನಾವು ಅವನನ್ನ ನೋಡಿದ್ದು, ನಮಗೆ ಅವನ ಮೇಲೆ ಸಂಶಯ ಬಂದು, ಕೂಡಲೇ ನಾವು ಅವನನ್ನು ಹಿಡಿಯಲು ಹೋದಾಗ ಅವನು ನಮ್ಮನ್ನು ನೋಡಿ ಪೊಲೀಸ್ರು ಅಂತಾ ಗುರುತಿಸಿ ಓಡಿ ಹೊರಟಿದ್ದು, ಆಗ ನಾವು ಅವನನ್ನು ಬೆನ್ನತ್ತಿ ಹಿಡಿದುಕೊಂಡು ಅವನನ್ನು ನೋಡಲಾಗಿ ಅವನು ನಮ್ಮ ಠಾಣೆಯ ಎಮ್.ಓ.ಬಿ ಆಸಾಮಿ ಇದ್ದು, ಇವನ ಹೆಸರು ಗುಲಾಬಷಾವಲಿ @ ಗುಲಾಬ ತಂದೆ ಮೈನುದ್ದಿನಸಾಬ ಚುಮ್ಣಾ ವಯಾ: 30 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಕಪಾಲಿ ಓಣಿ ಕೊಪ್ಪಳ. ಅಂತಾ ಇದ್ದು ನಂತರ ನಾವು ಅವನಿಗೆ ಬೆಳಗಿನ ಜಾವದಲ್ಲಿ ಅಲ್ಲಿದ್ದ ಬಗ್ಗೆ ವಿಚಾರಿಸಲು ಅವ ಸಮರ್ಪಕವಾದ ಉತ್ತರ ಕೊಡಲಿಲ್ಲಾ, ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ನಗರದಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡುಬಂದಿದ್ದರಿಂದ ಮುಂಜಾಗೃತೆ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 323 324 504 ಐ.ಪಿ.ಸಿ ಹಾಗೂ ಎಸ್.ಸಿ ಎಸ್.ಟಿ 3 (1) (10) ಯಾಕ್ಟ್.
ದಿನಾಂಕ 11-04-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾಧಿದಾರ ಶ್ರೀ ದುರುಗಪ್ಪ ತಂದೆ ದುರುಗಪ್ಪ ವಡ್ಡರ್. ವಯಾ 55 ವರ್ಷ ಜಾತಿ ಹಿಂದೂ ವಡ್ಡರ್. ಉ: ಕೂಲಿ ಕೆಲಸ ಸಾ: ನವಲಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 11-04-2017 ರಂದು ಬೆಳಗ್ಗೆ 09-30 ಗಂಟೆಯ ಸುಮಾರಿಗೆ ನವಲಿ ರೈತ ಸಂಪರ್ಕ ಕೇಂದ್ರಕ್ಕೆ ನನ್ನ ಮಗನ ಜಮೀನಿನಲ್ಲಿ ತೆಗೆಸಿದ ಕೃಷಿ ಹೊಂಡದ ಬಿಲ್ಲ್ ವಿಳಂಬದ ಬಗ್ಗೆ ಕೇಳಲು ಹೋದಾಗ ನವಲಿಯ ಕೃಷಿ ಅಧಿಕಾರಿಯಾದ ಜೆ.ದೇವೆಂದ್ರಪ್ಪನು ನಿಮ್ಮ ಹೊಲದಲ್ಲಿನ ಕೃಷಿ ಹೊಂಡದ ಬಿಲ್ಲ ಮಾಡಬೇಕಾದರೆ 8.000 ರೂ. ಗಳು ಲಂಚ ಕೊಡಿ ಅಂತಾ 15 ದಿನದಲ್ಲಿ ಬಿಲ್ಲ್ ಕೊಡುತ್ತೇನೆ ಎಂದು ಹೇಳಿದರು ಸರ್ ನೀವು ಸರಕಾರಿ ನೌಕರರು ಸಕರ್ಾರ ಸಂಬಳ ಕೊಡುತ್ತೇ ನಾವು ಎಲ್ಲಿಂದ 8.000 ರೂ ಕೊಡೋದು ನಾವು ರೋಕ್ಕ ಕೊಡೋದಿಲ್ಲಾ ಅಂತಾ ನಾನು ಹೇಳಿದಾಗ ಆಗ ಜೆ.ದೇವೆಂದ್ರಪ್ಪನು ನೀನು ಯಾರಿಗೆ ಹೇಳುತ್ತಿ ಹೇಳು ಹೋಗು ಅಂತಾ ಗದರಿಸುತ್ತಾ ಲೇ ವಡ್ಡರ ಸೂಳೆ ಮಗನೆ ನಿಂದು ಭಹಳ ಆಗೈತಿ ನಿನಗೆ ಒಂದು ಗತಿ ಕಾಣಿಸುತ್ತೇನೆ ನನ್ನನ್ನು ಸಾಮಾನ್ಯ ಎಂದು ತಿಳಿಬೇಡ ಎಂದು ಸಾರ್ವಜನಿಕರ ಎದುರಲ್ಲಿ ನನಗೆ ಜಾತಿ ಹೆಸರಲ್ಲಿ ಬೈದು ನನ್ನ ಮೇಲೆ ಹಲ್ಲೇ ಮಾಡಿರುತ್ತಾನೆ. ಇದರಿಂದ ನನಗೆ ಒಳಪೆಟ್ಟಾಗಿರುತ್ತದೆ ಅಲ್ಲಿಯೇ ಇದ್ದು ವಿರೇಶ ಹರಿಜನ ಪ್ಯಾಟೆಪ್ಪ ನಾಯಕ್. ಇವರು ಕೂಡ ನೀವಬ್ಬ ಅಧಿಕಾರಿಯಾಗಿ ಹಿಗೇ ಗದರಿಸಿದರೆ ಹೇಗೆ ಎಂದು ಕೇಳಿದ್ದಕ್ಕೆ ಅವರಿಗೂ ಕೂಡ ಜಾತಿಯಿಂದ ಬೈದಿರುತ್ತಾರೆ. ಅಲ್ಲದೆ ನಿನ್ನ ಮೇಲೆ ಸುಳ್ಳು ಕೇಸು ಹಾಕುತ್ತೇನೆ ನೋಡು ಎಂದು ಹೆದರಿಸಿ ನನಗೆ 20.000 ರೂ ಹಣ ಕೊಡು ಎಂದು ಕೇಳಿದನು ನಾನು ಕೊಡುವುದಿಲ್ಲಾ ಎಂದು ಹೇಳಿದಾಗ ನನಗೆ ಪದೇ ಪದೇ ಸಾರ್ವಜನಿಕ ಸ್ಥಳದಲ್ಲಿ ನಾನು ಒಬ್ಬ ಪರಿಶೀಷ್ಟ ಜಾತಿ (ವಡ್ಡರ್) ಎಂದು ಗೊತ್ತಿದ್ದು ಜಾತಿಯಿಂದ ಬೈದಿರುತ್ತಾನೆ. ಈ ಬಗ್ಗೆ ನಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಈ ದಿವಸ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಮೇಲೆ ಹಲ್ಲೇ ಜಾತಿ ನಿಂದನೆ ಹಾಗೂ ಸುಳ್ಳು ಕೇಸು ದಾಖಲಿಸುವುದಾಗಿ ಹಣ ಕೇಳಿದ ಜೆ. ದೇವೆಂದ್ರಪ್ಪ ಕೃಷಿ ಅದಿಕಾರಿ ನವಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾಧಿಯ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ. 70/2017 ಕಲಂ: 323,324,504,506  ಸಹಿತ 34 ಐಪಿಸಿ.
ಫಿರ್ಯಾಧಿ ಲಕ್ಷ್ಮಣ ಅಳ್ಳಳ್ಳಿ ಸಾ: ಗಂಗನಾಳ ಇವರು ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ದಿನಾಂಕ : 11-04-2017 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ಹಿರೆಮನ್ನಾಪೂರದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ಇದ್ದ ಕಾರಣ ಜಾತ್ರೆಯಲ್ಲಿ ಇದ್ದಾಗ ಆಗ ನನಗೆ ನನ್ನ ಅಣ್ಣನಾದ ಹನಮಪ್ಪನಿಗೆ ಹಿರೇಮನ್ನಾಪೂರ ಗ್ರಾಮದ ತಾಯಪ್ಪ ತಂದೆ ತಿಪ್ಪಣ್ಣ ಇಲಾತಿ ಮತ್ತು ಆತನ ತಮ್ಮ ನಿರುಪಾದಿ ಹಾಗೂ ನನ್ನ ಅಣ್ಣನ ಹೆಂಡತಿಯಾದ ಮಲ್ಲಮ್ಮ ರವರು ಕೂಡಿ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ಸುದ್ದಿ ಗೊತ್ತಾಗಿ ನಾನು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಹಿರೇಮನ್ನಾಪೂರ ಗ್ರಾಮದ ನೀರಲೂಟಿ ರಸ್ತೆಯಲ್ಲಿ ಸದರಿಯವರು ನನ್ನ ಅಣ್ಣನೊಂದಿಗೆ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದರು ಆಗ ನಾನು ಸದರಿ ನನ್ನ ಅಣ್ಣನನ್ನು ಬಿಡಿಸಿಕೊಳ್ಳಲು ಹೋದಾಗ ಸದರಿ ತಾಯಪ್ಪ ಈತನು ನನಗೆ ಈ ಸೂಳೆ ಮಗ ಇಲ್ಲಿಗೆ ಯಾಕೆ ಬಂದಾ ಅಂತಾ ಅಂದವನೇ ಅಲ್ಲಿಯೇ ಇದ್ದ ಒಂದು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದನು ಅದರಿಂದ ನನಗೆ ರಕ್ತಗಾಯವಾಯಿತು, ಹಾಗೂ ನಿರುಪಾದಿ ಇತನು ಕೈಯಿಂದ ನನ್ನ ಮೈಕೈಗಳಿಗೆ ಹೊಡಿ ಬಡಿ ಮಾಡಿದನು, ಹಾಗೂ ನಮ್ಮ ಅತ್ತಿಗೆಯಾದ ಮಲ್ಲಮ್ಮಈಕೆಯು ಕೂಡಾ ನನಗೆ ಕಾಲಿನಿಂದ ಒದ್ದಳು, ಅಷ್ಟರಲ್ಲಿ ಅಲ್ಲಿಯೇ ಇದ್ದ ನನ್ನ ಅಣ್ಣನ ಮಗನಾದ ಕಂಠೆಪ್ಪ, ಗೊವಿಂದಪ್ಪ ತಂದೆ ಹನಮಪ್ಪ ಮ್ಯಾಗೇರಿ, ಮಾನಪ್ಪ ತಂದೆ ಕರಿಯಪ್ಪ ಯಾಪಲದಿನ್ನಿ, ಹನಮಪ್ಪ ತಂದೆ ಹುಲುಗಪ್ಪ ಚೌಡಕಿ ರವರು ಬಂದು ಜಗಳಾ ಬಿಡಿಸಿಕೊಳ್ಳಲು ಸದರಿಯವರು ನಮಗೆ ಲೇ ಸೂಳೇ ಮಕ್ಕಳೇ ಇವತ್ತು ಉಳಿದು ಕೊಂಡಿರಿ ನಿಮ್ಮನ್ನು ಇಂದಲ್ಲ ನಾಳೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ  ಅಲ್ಲಿಂದ ಹೋದರು.ನಂತರ ವಿಚಾರಿಸಿದಾಗ ನನ್ನ ಅಣ್ಣನಾದ ಹನುಮಪ್ಪನ ಮಗನಾದ ಕಂಠೆಪ್ಪ ಇತನು ಪೆಂಡಾಲ್ ಹಾಕುವ ಕೆಲಸ ಮಾಡುತ್ತಿದ್ದರಿಂದ ಹಿರೇಮನ್ನಾಪೂರದಲ್ಲಿ ಪೆಂಡಾಲ್ ಹಾಕಲು ಹೋದಾಗ ಸದರಿ ನಮ್ಮ ಅತ್ತಿಗೆಯಾದ ಮಲ್ಲಮ್ಮ ಈಕೆಯು ತಾಯಪ್ಪನ ಮನೆಯಲ್ಲಿರುವದನ್ನು ನೋಡಿ ನನ್ನ ಅಣ್ಣನಾದ ಹನುಮಪ್ಪನಿಗೆ ಹೇಳಿದ್ದು ಆಗ ಹನುಮಪ್ಪನು ಸದರಿಯವರಿಗೆ ಕೇಳಲು ಹೋದಾಗ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದ ಬಗ್ಗೆ ಗೊತ್ತಾಯಿತು, ನಂತರ ಗಾಯಗೊಂಡಿದ್ದ ನಾನು 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ಹಿರೇಮನ್ನಾಪೂರ ಗ್ರಾಮದ ತಾಯಪ್ಪ ತಂದೆ ತಿಪ್ಪಣ್ಣ ಇಲಾತಿ ಮತ್ತು ಆತನ ತಮ್ಮ ನಿರುಪಾದಿ ಹಾಗೂ ನನ್ನ ಅಣ್ಣನ ಹೆಂಡತಿಯಾದ ಮಲ್ಲಮ್ಮ ರವರು ಸದರಿ ಮಲ್ಲಮ್ಮಳು ಮನೆ ಬಿಟ್ಟು ಹೋಗಿದ್ದ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳಾ ತೆಗೆದು ಅವಾಚ್ಯಾಗಿ ಬೈದು ನನ್ನ ಅಣ್ಣನಾದ ಹನುಮಪ್ಪನಿಗೆ ಹಾಗೂ ನನಗೆ ಹೊಡೆಬಡೆ ಮಾಡಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Tuesday, April 11, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 44/2017 ಕಲಂ: 96(ಬಿ) ಮತ್ತು (ಸಿ) Karnataka Police Act.
ದಿನಾಂಕ 10-04-2017 ರಂದು ರಾತ್ರಿ 09-15 ಗಂಟೆಗೆ ಪಿಸಿ 226 ನಿಸಾರ್ ಅಹ್ಮದ್ ಇವರು ನೀಡಿದ ವರದಿಯಲ್ಲಿ ಇಂದು ರಾತ್ರಿ 08-15 ಗಂಟೆಗೆ ನಗರದ ಬಿ.ಟಿ ಪಾಟೀಲ್ ನಗರದಲ್ಲಿ ತಿರುಗಾಡುತ್ತಿದ್ದಾಗ  ಬಿ.ಟಿ ಪಾಟೀಲ್ ನಗರದ ಅರಿಹಂತ ಕಂಪ್ಯೂಟರ್ಸ್ ಹತ್ತಿರ ಒಬ್ಬನು ನಮ್ಮನ್ನು ನೋಡಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ತನ್ನ ಮುಖ ಮುಚ್ಚಿಕೊಂಡು ಕತ್ತಲಲ್ಲಿ ಅವಿತುಕೊಂಡಿರುವುದು ಕಂಡುಬಂದಿದ್ದು, ಆಗ ನಾನು ಅವನನ್ನ ನೋಡಿದ್ದು, ನನಗೆ ಅವನ ಮೇಲೆ ಸಂಶಯ ಬಂದು, ಕೂಡಲೇ ನಾನು ಅವನನ್ನು ಹಿಡಿಯಲು ಹೋದಾಗ ಅವನು  ನನ್ನನ್ನು ನೋಡಿ ಪೊಲೀಸ್ರು ಅಂತಾ ಗುರುತಿದಿ ಓಡಿ ಹೊರಟಿದ್ದು, ಆಗ ನಾನು ಅವನನ್ನು ಬೆನ್ನತ್ತಿ ಹಿಡಿದುಕೊಂಡೇನು, ಆಗ ನಾನು ಇವನನ್ನು ವಿಚಾರಿಸಲಾಗಿ ಅವನು ತನ್ನ ಹೆಸರನ್ನು ತಪ್ಪುತಪ್ಪಾಗಿ ಹೇಳಿದ್ದು ಮೇಲಿಂದ ಮೇಲೆ ವಿಚಾರಿಸಲಾಗಿ ತನ್ನ ಹೆಸರು  ಸಿರಾಜ್ಖಾನ್ ತಂದೆ ರಸೂಲ್ಖಾನ ಕುಡುಕ ವಯಾ: 19 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: ವಿಜಯ ಟಾಕೀಸ್ ಹಿಂದೆ ಹೊಸಪೇಟೆ ಜಿ: ಬಳ್ಳಾರಿ. ಅಂತಾ ಹೇಳಿದ್ದು ನಂತರ ನಾನು ಅವನಿಗೆ ರಾತ್ರಿ ವೇಳೆಯಲ್ಲಿ ಅಲ್ಲಿದ್ದ ಬಗ್ಗೆ ವಿಚಾರಿಸಲು ಅವನು ಸಮರ್ಪಕವಾದ ಉತ್ತರ ಕೊಡಲಿಲ್ಲಾ, ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ರಾತ್ರಿ ವೇಳೆಯಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡುಬಂದಿದ್ದರಿಂದ ಮುಂಜಾಗೃತೆ ಕುರಿತು ಸದ್ರಿಯವನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.   
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 61/2017 ಕಲಂ: 341, 34 IPC.
ದಿನಾಂಕ 10-04-2017 ರಂದು ಸಂಜೆ 6-30 ಗಂಟೆಗೆ  ಫಿರ್ಯಾಧಿದಾರರಾದ ನಾನು ಚಿಲಕೂರಿ ಸೂರ್ಯನಾರಾಯಣ ತಂದೆ ಕೃಷ್ಣಮೂರ್ತಿ ಸಾ: ಗಂಗಾವತಿ, ರವರು ಫಿರ್ಯಾದಿ ನೀಡಿದ್ದು, ನಾನು ಎನ್.ಅರ್. ಇಂಡಸ್ಟ್ರೀಜ್ ಪಾಲಿದಾರನಿದ್ದು ನೆಲ್ಲಿನ ಮತ್ತು ಅಕ್ಕಿಯ ವ್ಯಾಪಾರವನ್ನು ಮಾಡುತ್ತಿರುತ್ತೇನೆ. ದಿನಾಂಕ: 10-04-2017 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ವಡ್ಡರ ಹಟ್ಟಿ ಗ್ರಾಮದ ಗೋಡಾನ್ ನಿಂದ ಲಾರಿ ನಂಬರು: ಕೆಎ-37-5989 ಮೂಲಕ ನಮ್ಮ ಮಿಲ್ಲಿನ ನೆಲ್ಲು ತರಿಸಲು ಹೋಗಿದ್ದಾಗ ಅರೋಪಿ ಸಿಂಗನಾಳ ಸುರೇಶ ಮತ್ತು ಪ್ರಾಣೇಶ ಹಾಗೂ ಅವರ ಕೆಲ ಬೆಂಬಲಿಗರು, ಗುಂಡಾ ಜನರು ಬಂದು ಅಕ್ರಮವಾಗಿ ನಮ್ಮ ಲೋಡ ಗಾಡಿ ಲಾರಿಯನ್ನು ತಡೆಗಟ್ಟಿ ಅಕ್ರಮವಾಗಿ ತಮ್ಮ ಸ್ವಾದೀನದಲ್ಲಿ ತೆಗೆದುಕೊಂಡು ಹೋಗಿರುತ್ತಾರೆ. ವಿಚಾರಿಸಲು ಲಾರಿಯನ್ನು ಬಿಡುವುದಿಲ್ಲ ಅಂದು ಏನು ಮಾಡಿಕೊಳ್ಳುತ್ತಿರಾ ಮಾಡಿಕೊಳ್ಳಿ ಎಂದು ಉದ್ದಟತನದಿಂದ ಹೇಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ. ನಂ. 62/2017 ಕಲಂ: 143, 341, 448, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 10-04-2017 ರಂದು 9-30 ಪಿ.ಎಂ.ಕ್ಕೆ ರಾಜೇಂದ್ರ ತಂದೆ ಸೋಹನ್ ರಾಜ್ ಮೊತಾ, ವಯ 44 ವರ್ಷ, ಜಾತಿ: ಜೈನ್, ಉ: ಅಕ್ಕಿ ವ್ಯಾಪಾರ, ಸಾ: ಪಂಪಾನಗರ ಗಂಗಾವತಿ ರವರು ಫಿರ್ಯಾದಿ ನೀಡಿದ್ದು,  ದಿನಾಂಕ 10-04-2017 ರಂದು ಸಂಜೆ 4-00 ಗಂಟೆಯ ಸುಮಾರಿಗೆ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿರುವ ಸರಸ್ವತಿ ರೈಸ್ ಮಿಲ್ಲಿಗೆ ಮಹಾರಾಷ್ಟ್ರಕ್ಕೆ ಅಕ್ಕಿ ಲೋಡ ಕಳಿಸುವ ಸಲುವಾಗಿ ಹೊರ ರಾಜ್ಯದ ಲಾರಿ ಬಂದಿದ್ದು ಸದರಿ ಲಾರಿಯಲ್ಲಿ ಲೋಡ ಮಾಡಬೇಕೆನ್ನುವಷ್ಟರಲ್ಲಿ ಆರೋಪಿತರಾದ 01] ಅನ್ವರ 02] ಪರಶುರಾಮ 03] ಪರಶೂರಾಮ ಕಂಪ್ಲಿ, 04]ದಾವಲಸಾಬ 05]ಬಸವರಾಜ ನಾಯಕ, 06] ಮಹಿಬೂಬ ಹಾಗೂ ಇತರರು ಕೂಡಿಕೊಂಡು ಅಕ್ರಮ ಕೂಟವನ್ನು ರಚಿಸಿಕೊಂಡು ರೈಸ್ ಮಿಲ್ಲಿನಲ್ಲಿ ಅತಿ ಕ್ರಮ, ಪ್ರವೇಶಮಾಡಿ ಲೇ ಸೋಳೆ ಮಕ್ಕಳೇ ನಿಮಗೆಷ್ಟು ಸೊಕ್ಕು ನಮ್ಮ ಲಾರಿ ಅಧ್ಯಕ್ಷರು ಲಾರಿಗಳನ್ನು ಲೋಡ ಮಾಡ ಬೇಡಿರಿ ಅಂತಾ ಹೇಳಿದರು ಸಹ ನೀವು ಲಾರಿಯಲ್ಲಿ ಅಕ್ಕಿಯನ್ನು ಲೋಡಮಾಡಲು ಲಾರಿಯನ್ನು ತರಿಸಿರುವಿರಿ ಅಂತಾ ಮಿಲ್ಲಿನ ಮ್ಯಾನೇಜರ್ ಹಾಗೂ ಹಮಾಲರೊಂದಿಗೆ ಜಗಳ ಮಾಡಿದ್ದು, ಫಿರ್ಯಾದಿ ಹಾಗೂ ಇತರರು ಹೋಗಿ ವಿಚಾರಿಸಲು ಅವರಿಗೆ ನಮ್ಮ ಅದ್ಯಕ್ಷರಾದ ಸುರೇಶ ಸಿಂಗನಾಳ ಮತ್ತು ಪ್ರಾಣೇಶ ಇವರು ಗಂಗಾವತಿಯಲ್ಲಿ ನಮ್ಮ ಲಾರಿಗಳ ಬೇಡಿಕೆ ಇಡೆರುವವರೆಗೂ ಯಾವುದೇ ಲಾರಿಗಳನ್ನು ಚಾಲು,ಮಾಡಬಾರದೆಂದು ತಿಳಿಸಿರುತ್ತಾರೆಂದು ಹೇಳಿದ್ದು ಇರುತ್ತದೆ ಫಿರ್ಯಾದಿದಾರರು ಸದರಿಯವರಿಗೆ ವಿನಂತಿಸಿದರು ಸಹ ಕೇಳದೆ ಜಗಳ ಮಾಡಿ ಲೇ ಸೋಳೆ ಮಕ್ಕಳೆ ನೀವು ಲಾರಿಯನ್ನು ಹೇಗೆ ಲೋಡ ಮಾಡುತ್ತಿರಿ ನಾವು ನೋಡಿಕೊಳ್ಳುತ್ತೇವೆ ಲಾರಿಯನ್ನು ಲೋಡ ಮಾಡಿ ಕಳಿಸಿದರೆ ನಿಮಗೆ ಜೀವ ಸಹಿತಾ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.                  

Saturday, April 8, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 82/2017 ಕಲಂ: 78 (3) Karnataka Police Act.
ದಿ:-07-04-2017 ರಂದು ಸಂಜೆ 5:00 ಗಂಟೆಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ವೆಂಕಟಗಿರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಶ್ರೀ ಪ್ರಕಾಶ ಮಾಳಿ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಪಿ.ಸಿ. ನಂ: 160, 129 ಹೆಚ್.ಸಿ. 173, ಎ.ಎಸ್.ಐ. ಶ್ರೀ ಸಣ್ಣ ಬಸಪ್ಪ ಹೂಗಾರ ದಾಳಿ ಮಾಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ ಕೂಗಿ ಕರೆದು 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಜನರನ್ನು ಕರೆಯುತ್ತಿದ್ದು, ಇನ್ನೊಬ್ಬ ವ್ಯಕ್ತಿ ಕುಳಿತು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಅವರನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು (1) ಮಲ್ಲಿಕಾರ್ಜುನ ರಾಮಣ್ಣ ವಯಸ್ಸು 25 ವರ್ಷ, ಜಾತಿ: ಮಡಿವಾಳ ಉ: ಕಿರಾಣಿ ಅಂಗಡಿ ಸಾ: ವೆಂಕಟಗಿರಿ  ಅಂತಾ ತಿಳಿಸಿದನು.  ಮಟಕಾ ಪಟ್ಟಿ ಬರೆಯುತ್ತಿದ್ದವನು ತನ್ನ ಹೆಸರು (2) ಪರಸಪ್ಪ ತಂದೆ ಹನುಮಂತಪ್ಪ, ಜಾತಿ: ಮಡಿವಾಳರು, ವಯಸ್ಸು 35 ವರ್ಷ, ಉ: ಕಿರಾಣಿ ಅಂಗಡಿ ಸಾ: ವೆಂಕಟಗಿರಿ ಅಂತಾ ತಿಳಿಸಿದ್ದು, ಆತನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 690/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆಯಿತು. ಅವರಿಗೆ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತೀರಾ ? ಅಂತಾ ವಿಚಾರಿಸಲು ಅವರು ಪಟ್ಟಿಯನ್ನು ಬುಕ್ಕಿಯಾದ (3) ವಿಶ್ವನಾಥ @ ತಾತ ತಂದೆ ಸಂಗಯ್ಯ ಮಲ್ಲದಗುಡ ಸಾ: ಕನಕಗಿರಿ ಎಂಬಾತನಿಗೆ ಕೊಡುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 341, 323, 504, 506, 34 IPC.
ದಿನಾಂಕ:-07-04-2017 ರಂದು ಮದ್ಯಾಹ್ನ 2-50 ಗಂಟೆಗೆ ಪಿರ್ಯಾದಿ ಎನ್. ಕೃಷ್ಣಾ ತಂದೆ ರತ್ನಯ್ಯ ನೆಲದ್ದವಲು ವಯಾ-58 ವರ್ಷ ಜಾ. ಕಮ್ಮಾ ಉ-ಒಕ್ಕುತನ ಸಾ. 5 ನೇ ವಾರ್ಡ ಮರ್ಲಾನಹಳ್ಳಿ ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ಒಂದು ದೂರನ್ನೆ ಹಾಜರು ಪಡಿಸಿದ್ದು ಸದ್ರಿ ದೂರಿನಲ್ಲಿ ನಮೂದು ಮಾಡಿದ ಆರೋಪಿ 1) ಮಂಜುನಾಥ ಶೆಟ್ಟಿ ತಂದಿ ಶ್ರೀನಿವಾಸ ಶೆಟ್ಟಿ ಸಾ. ಮರ್ಲಾನಹಳ್ಳಿ 2) ಶಶಿಧರರೆಡ್ಡಿ ಗುಂಡೂರು ಕಾರಟಗಿ ಕೇನಾರ್ ಬ್ಯಾಂಕ್ ಉದ್ಯೋಗಸ್ಥ 3)  ವಿನಯ ತಂದಿ ಶರಣಪ್ಪ ಬಾವಿ ಸಾ. ಸಿದ್ದಾಪೂರ ಇವರು ಪಿರ್ಯಾದಿದಾರರ ಮಗನಾದ ನರೇಶನಿಗೆ ಕರದುಕೊಂಡು ಹೋಗಿ ಪಿರ್ಯಾದಿದಾರರಿಗೆ ಏನು ಮಾಹಿತಿ ನೀಡಿದ ನರೇಶನಿಗೆ ಒಟ್ಟು ರೂ. 91 ಲಕ್ಷದಷ್ಟು ಬಡ್ಡಿ ಸಾಲ ಕೊಟ್ಟು ಆ ಸಾಲದ ಹಣದ ಮರುಪಾವತಿಯ ಸಲುವಾಗಿ ಪಿರ್ಯಾದಿದಾರರ ಮಗನಿಗೆ ಕಿರುಕುಳ ಕೊಟ್ಟು ಪಿರ್ಯಾದಿದಾರರ ಹೆಸರಿನಲ್ಲಿ ಜಾಲ್ಯಾಳ ಕ್ಯಾಂಪಿನಲ್ಲಿ ಪರ್ಟಿಲೈಸರ್ ಅಂಗಡಿಯಲ್ಲಿ ಸುಮಾರು 15 ಲಕ್ಷ ರೂ.ಗಳಷ್ಟು ಪರ್ಟಿಲೈಸರ್ ಮಾಲುಗಳನ್ನು ಪಡೆದುಕೊಂಡು ದಿನಾಂಕ:-21-03-2017 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಅಂಗಡಿಯ ಹತ್ತಿರ ಆರೋಪಿತರು ಬಂದು ಪಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಮೈಮುಟ್ಟಿ ಎಳೆದಾಡಿ ನಿನ್ನ ಮಗ ಕ್ರಿಕೇಟ್ ಬೆಟಿಂಗ್ ಮತ್ತು ಇಸ್ಪೀಟ್ ಸಲುವಾಗಿ ಸಾಲ ಪಡೆದುಕೊಂಡು ಸೋತಿದ್ದು ನಿನ್ನ ನಾವು ಮಗನಿಂದ ಖಾಲಿ ಚೆಕ್ ಮತ್ತು ಪ್ರಾಮೀಸರಿ ನೋಟ್ ಪಡೆದುಕೊಂಡಿರುತ್ತೇವೆ ನಿಮ್ಮನ್ನು ಕೋರ್ಟಿಗೆ ಎಳೆದು ನಿಮ್ಮ ಆಸ್ತಿಯನ್ನು ಬರೆಯಿಸಿಕೊಳ್ಳುತ್ತೇವೆ ಅಂತಾ ಜೀವ ಬೆದರಿಕೆ ಹಾಕಿದ್ದು ಅಲ್ಲದೇ ಇಲ್ಲಿಯವರೆಗೆ ಸಾಲದ ಮರುಪಾವತಿಗಾಗಿ ಅಂಗಡಿಯ ಹತ್ತಿರ ಮತ್ತು ಮನೆಯ ಹತ್ತಿರ ಬಂದು ಕಿರುಕುಳಕೊಡುತ್ತಿದ್ದಾರೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2017 ಕಲಂ: 174 ಸಿ.ಆರ್.ಪಿ.ಸಿ.
ದಿನಾಂಕ 07-04-2017 ರಂದು 05-00 ಎ.ಎಂ.ಕ್ಕೆ ಡಿ.ಶಾಂತಪ್ಪ ತಂದೆ ದಿ:ಬಸವನಗೌಡ ದಾನನಗೌಡ್ರು ವಯಸ್ಸು 41 ವರ್ಷ ಜಾ:ಲಿಂಗಾಯತ ಉ: ವ್ಯವಸಾಯ ಸಾ: ಗೆಣಿಕಿಹಾಳ್ ತಾ:ಜಿ: ಬಳ್ಳಾರಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾಧಿದಾರರ ತಮ್ಮನಾದ ಡಿ.ದೊಡ್ಡನಗೌಡ ಇತನು ಹುಬ್ಬಳ್ಳಿಯಲ್ಲಿಯ ಖಾಸಗಿ ಕಾಲೇಜದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿದ್ದು ಹಾಗೂ ಪಿ.ಹೆಚ್.ಡಿ. ಮಾಡಿಕೊಂಡಿದ್ದು, ತನಗೆ ಸರಕಾರಿ ನೌಕರಿ ಸಿಗಲಿಲ್ಲವೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ 06-04-2017 ರಂದು ಬೆಳಿಗ್ಗೆ 8-30 ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಫಿಯರ್ಾದಿದಾರರ ಸಹೋದರನಾದ ದೊಡ್ಡನಗೌಡ ಇತನು ಗಂಗಾವತಿ ನಗರದ ಜುಲಾಯಿನಗರದಲ್ಲಿರುವ ಸ್ವಾಗತ್ ಲಾಡ್ಜ ಹತ್ತಿರ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿದ್ದು, ಚಿಕಿತ್ಸೆ ಕುರಿತು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ದಿ: 06-04-2017 ರಂದು ರಾತ್ರಿ 8-30 ಗಂಟೆಗೆ ಮೃತಪಟ್ಟಿದ್ದು, ತನ್ನ ತಮ್ಮನ ಮರಣದಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲವೆಂದು ವಗೈರೆ ಆಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Friday, April 7, 2017

In view of World health day a program organized for Police and officers in parade ground Koppal the following Doctors are attended the function and given useful instruction and tips for maintaining health. Dr. K.G. Kulkarni, Dr. vijayanth Itagi, Dr. Umesh G. Rajoor, Dr. Shivakumar Sajjan, Dri. Vijay sunkad, Dr. Sharan, Dr. Mallikarjun, Dr. Uday and Dr. K. Thiyagarajn SP Koppal are participated in the program.






1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 81/2017 ಕಲಂ: 143, 147, 447, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ:-06-04-2017 ರಂದು ಬೆಳಿಗ್ಗೆ 09:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ತಮ್ಮ ರುದ್ರಗೌಡ ತಂದೆ ಭೀಮನಗೌಡ ಮಾಲೀಪಾಟೀಲ್, ದೊಡ್ಡಪ್ಪನ ಮಗನಾದ ಮಲ್ಲಿಕಾರ್ಜುನಗೌಡ ತಂದೆ ವೀರಭದ್ರಗೌಡ ಇವರುಗಳು ಕೂಡಿಕೊಂಡು ನನ್ನ ಜಮೀನು ಸರ್ವೆ ನಂ: 75/3 ವಿಸ್ತೀರ್ಣ 6 ಎಕರೆ 18 ಗುಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಈ ಜಮೀನಿಗೆ ಸಂಬಂಧವಿರದ ವ್ಯಕ್ತಿಗಳಾದ (1) ಈರಣ್ಣ ತಂದೆ ಅಡಿವೆಪ್ಪ ಕುರಿ, 50 ವರ್ಷ (2) ಶಂಕ್ರಪ್ಪ ತಂದೆ ಅಡಿವೆಪ್ಪ ಕುರಿ, 44 ವರ್ಷ (3) ದುರಗಪ್ಪ ತಂದೆ ಅಡಿವೆಪ್ಪ ಕುರಿ, 42 (4) ನಾಗಬುಷ್ಯಪ್ಪ ತಂದೆ ಅಡಿವೆಪ್ಪ ಕುರಿ, 40 ವರ್ಷ (5) ಬಸವರಾಜ ತಂದೆ ಅಡಿವೆಪ್ಪ ಕುರಿ-38 ವರ್ಷ, ಎಲ್ಲರೂ ಸಾ: ಹಣವಾಳ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ನನ್ನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ನಮಗೆ “ ಲೇ ಸೂಳೇ ಮಕ್ಕಳೇ ಇಲ್ಲಿ ಏನು ಮಾಡುತ್ತಿದ್ದೀರಾ, ಈ ಜಮೀನು ನಮ್ಮದು ಇದೆ, ಇಲ್ಲಿಂದ ಹೋಗರಲೇ ” ಅಂತಾ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದಾಡಹತ್ತಿದರು. ಆಗ ನಾವು ಅವರಿಗೆ ಈ ಜಮೀನು ನಮ್ಮದು ಇದೆ, ನೀವು ವಿನಾ ಕಾರಣ ತಂಟೆ ಮಾಡಬೇಡಿರಿ ಅಂತಾ ಹೇಳಿದ್ದಕ್ಕೆ ಅವರು “ ನೀವು ಹೋಗದಿದ್ದರೆ ಇಲ್ಲಿಯೇ ನಿಮ್ಮನ್ನು ಹೂತು ಹಾಕುತ್ತೇವೆ, ಜೀವಸಹಿತ ಬಿಡುವುದಿಲ್ಲಾ” ಅಂತಾ ಜೀವದ ಬೆದರಿಕೆ ಹಾಕಿದರು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ: 429 .ಪಿ.ಸಿ:.

ದಿನಾಂಕ: 06-04-2017 ರಂದು ಪಿರ್ಯಾದಿದಾರರ ಅತ್ತಿಗೆಯವರಾದ ಶ್ರೀಮತಿ ಸುಜಾತ ರವರು ತಮ್ಮ ಎಮ್ಮೆಗಳನ್ನು ಮೇಯಿಸಲು ಹೋಸಳ್ಳಿ ರಸ್ತೆಯ ಕಡೆಗೆ ಹೋದಾಗ ಹೊಸಳ್ಳಿ ರಸ್ತೆಯಲ್ಲಿರುವ ವಿವೇಕ ಭಾರತಿ ಶಾಲೆಯ ಎದುರುಗಡೆ ಇರುವ ಗಟಾರಕ್ಕೆ ಹೊಂದಿಕೊಂಡಿರುವ ಟ್ರಾನ್ಸ ಫಾರ್ಮರ್ ಹತ್ತಿರ ಒಂದು  ಮ್ಮೆಯು ಗಟಾರದಲ್ಲಿಂದ ನೀರು  ಕುಡಿದು ರಸ್ತೆಗೆ ಬರುತ್ತಿದ್ದಾಗ ಗಟಾರಿಗೆ ಹೊಂದಿಕೊಂಡಿರುವ, ಟಿ.ಸಿ.ಗೆ ಅಳವಡಿಸಿದ ಕಬ್ಬಿಣದ ಜಾಲಿಗೆ ತಗುಲಿ ಶಾರ್ಟ ಸರ್ಕಿಟ್ ಆಗಿ ಕೆಳಗೆ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಇದರಿಂಧ ಪಿರ್ಯಾದಿದಾರರಿಗೆ ರೂ. 40,000/- ನಷ್ಟವಾಗಿರುತ್ತದೆ ಅಂತಾ ಮುಂತಾಗಿ ಪಿರ್ಯಾಧಿ ಸಾರಾಂಶ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, April 6, 2017

ಪತ್ರಿಕಾ ಪ್ರಕಟಣೆ

ಕೊಪ್ಪಳ ನಗರದಲ್ಲಿ ವಾಹನಗಳ ಸುಗಮ ಸಂಚರಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಜಿಲ್ಲೆ ರವರ ನಡುವಳಿಗಳ ಆದೇಶ ಸಂಖ್ಯೆ : ಕಂದಾಯ/ಎಂ.ಎ.ಜಿ/ಕ.ಸಂ/64/2012-2013 ದಿನಾಂಕ 16-10-2012 ರನ್ವಯ ನಗರದ ಗಡಿಯಾರ ಕಂಬದಿಂದ ಆಜಾದ ಸರ್ಕಲ್ ರ ವರೆಗೆ ಏಕಮುಖ ರಸ್ತೆ (One Way) ಯನ್ನು ದಿನಾಂಕ 10-04-2017 ರಿಂದ ಜಾರಿಗೊಳಿಸಲಾಗುವುದು.


ಇನ್ನು ಮುಂದೆ ನಗರದಲ್ಲಿ ಹಿರೇಸಿಂಧೋಗಿ ರಸ್ತೆ ಕಡೆಯಿಂದ ಬರುವ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ (Except two wheelers) ಜವಾಹರ ರಸ್ತೆಯಲ್ಲಿ 3, 4 ಹಾಗೂ 6 ಚಕ್ರಗಳವುಳ್ಳ ವಾಹನಗಳು (3, 4, 6 Wheelers vehicles entry Prohibitated) ಗಡಿಯಾರ ಕಂಬದಿಂದ ಬರುವ ವಾಹನಗಳು ಎಡಗಡೆ ಹಸನ್ ರಸ್ತೆ ಮಾರ್ಗವಾಗಿ ಹಾಗೂ ಬಲಗಡೆ ಸಾಲರಜಂಗ್ ರಸ್ತೆ ಮಾರ್ಗವಾಗಿ ಸಂಚರಿಸತಕ್ಕದ್ದು, ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು ನಗರದಲ್ಲಿ ಸಂಚಾರ ವ್ಯವಸ್ಥೆ ಸುಗುಮವಾಗಿಸಲು ಪೊಲೀಸ್ ರೊಂದಿಗೆ ಸಹಕರಿಸಲು ವಿನಂತಿ.




 

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 80/2017 ಕಲಂ: 306 ಸಹಿತ 34 ಐ.ಪಿ.ಸಿ:.
ನನ್ನ ತವರುಮನೆ ಹೈದ್ರಾಬಾದ್ ಇದ್ದು, ಈಗ್ಗೆ 6 ವರ್ಷಗಳ ಹಿಂದೆ ಬಂಡಿಬಸಪ್ಪ ಕ್ಯಾಂಪಿನ ಕುಮಾರಸ್ವಾಮಿ. ಆರ್.ಕೆ. ತಂದೆ ಕೃಷ್ಣಪ್ಪ-35 ವರ್ಷ ಈತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನ ಸಹೋದರಿಯಾದ ಲಕ್ಷ್ಮೀ ಈಕೆಯು ತನ್ನ ಗಂಡನ ಜೊತೆ ಸೇರಿಕೊಂಡು ನಮ್ಮ ಮನೆಯನ್ನು ನನಗಾಗಲೀ, ನನ್ನ ಗಂಡನಿಗಾಗಲೀ ತಿಳಿಸದೇ ತಮ್ಮ ಹೆಸರಿಗೆ ಮಾಡಿಕೊಂಡ ನಂತರ ದಿನಗಳಿಂದ ನನ್ನ ಗಂಡನಿಗೆ ಆತನ ಅಕ್ಕ ಲಕ್ಷ್ಮೀ ಮತ್ತು ಆಕೆಯ ಗಂಡನಾದ ಯಮನೂರಪ್ಪ ತಂದೆ ಈರಪ್ಪ ಇವರು ಆಸ್ಥಿಯ ವಿಷಯದಲ್ಲಿ ಕಿರುಕುಳ ನೀಡಿದರೆ ಮನೆ ಬಿಟ್ಟು ಹೋಗುತ್ತಾನೆ ಅಂತಾ ಆಗಾಗ್ಗೆ ನನ್ನ ಗಂಡನಿಗೆ ತೊಂದರೆ ಮಾಡುತ್ತಿದ್ದರಿಂದ ಹಾಗೂ ಆತನ ಪಾಲಿಗೆ ಬರುವ ಜಮೀನು ಸಹ ತಮ್ಮ ಹೆಸರಿಗೆ ಮಾಡಿಕೊಳ್ಳುವ ಉದ್ದೇಶದಿಂದ ತೊಂದರೆ ಕೊಟ್ಟಿದ್ದರಿಂದಲೇ ನನ್ನ ಗಂಡನು ಅವರ ಕಿರುಕುಳ ತಾಳಲಾರದೇ ದಿನಾಂಕ:- 05-04-2017 ರಂದು ಬೆಳಗಿನಜಾವ 05:00 ಗಂಟೆಯಿಂದ ಮಧ್ಯಾಹ್ನ 12:30 ಗಂಟೆಯ ಅವಧಿಯಲ್ಲಿ ವಾಸದ ಮನೆಯಲ್ಲಿ ತನ್ನ ಲುಂಗಿಯಿಂದ ಕಬ್ಬಿಣದ ಯಾಂಗ್ಲರಿಗೆ ಬಿಗಿದು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನಾನು ಗರ್ಭವತಿ ಇದ್ದುದರಿಂದ ಮುನಿರಾಬಾದನಲ್ಲಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಇದ್ದು, ವಿಷಯ ತಿಳಿದು ಬಂದು ನೋಡಿ ದೂರು ನೀಡಿರುತ್ತೇನೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 56/2017 ಕಲಂ: 341, 323, 324, 355, 504, 506 ಸಹಿತ 34 .ಪಿ.ಸಿ:.

ಫಿರ್ಯಾದಿದಾರರಾದ ಶ್ರೀ ಮಲ್ಲಿಕಾರ್ಜುನ ತಂದೆ ಚಂದ್ರಶೇಖರಪ್ಪಯತ್ನಟ್ಟಿ ವಯ 34 ವರ್ಷ ಜಾತಿ ಲಿಂಗಾಯತ ಸಾ. ಹುಳ್ಕಿಹಾಳ ತಾ. ಗಂಗಾವತಿ ಇವರು ಫಿರ್ಯಾದಿ ನೀಡಿದ್ದು ಮಲ್ಲಮ್ಮ ಗಂಡ ಪಂಪಾಪತಿ ಲಾದುಂಚಿ ಇವರು ಫಿರ್ಯಾದಿದಾರರ ಮನೆಯ ಮುಂದೆ ನೀರು ಚೆಲ್ಲುವ ಮತ್ತು ದನಗಳನ್ನು ಕಟ್ಟಿ ಗಲೀಜು ಮಾಡುವ ವಿಷಯವಾಗಿ ಫಿರ್ಯಾದಿ ಮತ್ತು ಓಣಿಯ ಜನರು ಬುದ್ದಿವಾದ ಆಕೆಗೆ ಬುದ್ದಿವಾದ ಹೇಳಿದರೂ ಕೇಳದೇ ಅದನ್ನೆ ಮುಂದುವರಿಸಿದ್ದು ಇರುರತ್ತದೆ. ಇದೇ ವಿಷವಾಗಿ ನಿನ್ನೆ ದಿವಸ ದಿನಾಂಕ 04-04-2017 ಮದ್ಯಾಹ್ನ 3-00 ಗಂಟೆ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮನೆಯವರೊಂದಿಗೆ ತಮ್ಮ ಮನೆಯ ಮುಂದೆ ಕುಳಿತುಕೊಂಡಿದ್ದಾಗ ನಮೂದು ಮಾಡಿದ  ಆರೋಪಿತರಾದ 1) ನಾಗರಡ್ಡೆಪ್ಪ ತಂದೆ ಈಶಪ್ಪ ಕನ್ಯಾಳ ಹಾಗೂ 2) ಶರಣಪ್ಪ ತಂದೆ ಪಂಪಾಪತಿ ಹಾಗೂ 3) ಮಲ್ಲಮ್ಮ ಗಂಡ ಪಂಪಾಪತಿ ಲಾದುಂಚಿ ರವರು ಪಿರ್ಯಾದಿದಾರರೊಂದಿಗೆ ಜಗಳ ತಗೆದು ಶರಣಪ್ಪ ಲಾದುಂಚಿ ಈತನು ಫಿರ್ಯಾದಿದಾರರು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎಲ್ಲರೂ ಕೂಡಿ ಅವಾಚ್ಯವಾಗಿ ಬೈದುನಾಗರಡ್ಡೆಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿ ತಲೆಗೆ ಹೋಡೆದು ಗಾಯಗೊಳಿಸಿದ್ದು ಅಲ್ಲದೆ ಜಗಳ ಬಿಡಿಸಲು ಬಂದು ಫಿರ್ಯಾದಿ ಹೆಂಡತಿ ರೂಪಾ ಇವರಿಗೆ ಮಲ್ಲಮ್ಮ ಈಕೆಯು ಕೈಯಿಂದ ಹೊಡೆದಿದ್ದು ಅಲ್ಲದೆ ಚಪ್ಪಲಿಯಿಂದ ಹೊಡೆಬಡಿ ಮಾಡಿ ದುಖಃಪಾತಗೊಳಿಸಿದ್ದು, ಸದರಿ ಘಟನೆಯ ನಂತರ ಕಾರಟಗಿ ಸರಕಾರಿ ಆಸ್ಪತ್ರೆಗೆ ಬಂದು ಇಲಾಜುಪಡಿಸಿಕೊಂಡು ಊರಿನ ಗುರುಹಿರಿಯರೊಂದಿಗೆ ವಿಚಾರಿಸಿ ಈಗ ಬಂದು ಸದರಿ ಮೇಲ್ಕಾಣಿಸಿದ 3 ಜನರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

 
Will Smith Visitors
Since 01/02/2008