Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, August 4, 2017

1]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ. 78(3) Karnataka Police Act.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಸಾಯಾಂಕಾಲ 17-15 ಗಂಟೆಗೆ ಠಾಣೆಯಲ್ಲಿದ್ದಾಗ ಬೆನಕನಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಹೋಗಿ ದಾಳಿ ಮಾಡಲಾಗಿ ಮಟಕಾ ಬರೆದುಕೊಂಡು ಹಣ ಪಡೆದುಕೊಳ್ಳುವವನು ಸಿಕ್ಕಿಬಿದಿದ್ದು, ಮಟಕಾ ಚೀಟಿ ಬರೆದುಕೊಡುವವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಬಸವರಾಜ ತಂದೆ ಮಹಾಂತಪ್ಪ ಅಂಗಡಿ, ವಯ: 30 ವರ್ಷ ಜಾ: ಲಿಂಗಾಯತ, ಸಾ: ಬೆನಕನಾಳ ಅಂತಾ ತಿಳಿಸಿದ್ದು ಅವನ ಹತ್ತಿರ ಮಟಕಾ ಚೀಟಿ, 1730=00 ರೂಪಾಯಿ ನಗದು ಹಣ ಹಾಗೂ ಒಂದು ಬಾಲಪೆನ್ನ ಜಪ್ತಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಗಿರುತ್ತದೆ.
2]  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 03-08-2017 ರಂದು ಬೆಳೆಗ್ಗೆ 11:30 ಗಂಟೆ ಸುಮಾರಿಗ ಬಳಿಗೇರಿ ಗ್ರಾಮದಲ್ಲಿಯ ಯಡಿಯಾಪೂರ ರಸ್ತೆಯ ಪಕ್ಕದಲ್ಲಿ ಆರೋಪಿತಳು ತನ್ನ ಮುಂದುಗಡೆ  ಒಂದು ಗೊಬ್ಬರದ ಚೀಲದಲ್ಲಿ ಮದ್ಯದ ಟ್ರೆಟ್ರಾ ಪ್ಯಾಕಗಳನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತ ಮದ್ಯ ಮಾರಾಟ ಮಾಡುತಿದ್ದಾಗ ಪಿ.ಎಸ್.ಐ. ರವರು ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತಳಿಂದ ಒಟ್ಟು 1519/- ರೂ. ಮೌಲ್ಯದ  90 M.L. HAYWARDS CHEERS WHISKY ಕಂಪನಿಯ ಒಟ್ಟು  54   ಮದ್ಯದ ಟೇಟ್ರಾ ಪ್ಯಾಕ್(ಪಾಕೇಟ್)ಗಳನ್ನು ಹಾಗೂ ಮದ್ಯ ಮಾರಾಟದ ನಗದು ಹಣ 80 /- ರೂ. ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ. 279, 338, 304(ಎ) ಐ.ಪಿ.ಸಿ:

ದಿನಾಂಕ :-03-08-2017 ರಂದು ಬೆಳಿಗ್ಗೆ ನಮ್ಮ ಎಕ್ಷ್ ಎಲ್ ಸೂಪರ್ ಮೋಟಾರ್ ಸೈಕಲ್ ತೆಗೆದುಕೊಂಡು ಗಂಗಾವತಿಗೆ ಹೋಗಿ ತಕರಾರಿ ತೆಗೆದುಕೊಂಡು ನಂತರ ನಮ್ಮ ಸಿದ್ದಿಕೇರಿಗೆ ಹೋಗಿ ನಮ್ಮ ತಾಯಿಯನ್ನು ಕರೆದುಕೊಂಡು ಹೋಗಬೇನ್ನುವಾಗಿ ನಮ್ಮ ತಾಯಿಯ ತಮ್ಮ ಸಂಜಿವ್ ಮೂರ್ತಿ ತಂದಿ ಲಕ್ಷ್ಮಣ ಶೆಟ್ಟಿ ಈತನು ತಾನೆ ಬಂದು ಬಿಟ್ಟು ಬರುತ್ತೇನೆ ಅಂತಾ ಹೇಳಿದ್ದರಿಂದ ನಾನು ನನ್ನ ಎಕ್ಸ್.ಎಲ್ ಸುಪರ್ ಮೋಟಾರ್ ಸೈಕಲ್ ಮೇಲೆ ತರಕಾರಿ ಇಟ್ಟುಕೊಂಡು ನಂತರ ನಮ್ಮ ಮಾವ ಸಂಜೀವ್ ಮೂರ್ತಿ ಈತನು ತನ್ನ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲ ನಂ ಕೆ.-37 ಆರ್-8300 ನೆದ್ದರಲ್ಲಿ ನಮ್ಮ ತಾಯಿಯನ್ನು ಕೂಡಿಸಿಕೊಂಡು ಗಂಗಾವತಿಯಿಂದ ಬಂದೆವು ನಾವು ಸಿದ್ದಾಪೂರ ದಾಟಿ ನಮ್ಮ ಸೈಡಿನಲ್ಲಿ ಹಿಂದೆ ಮುಂದೆ ಬರುತ್ತಿದ್ದೇವು ರವಿನಗರದ ಹತ್ತಿರ ನಮ್ಮ ಇಂದಿನಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀ ವೇಗವಾಗಿ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್ ಸೈಕಲ್ ಗಳನ್ನು ಓಒರ್ ಟೇಕ್ ಮಾಡಿ ಮುಂದೆ ವೇಗವಾಗಿ ಚಲಾಯಿಸಿಕೊಂಡು ಹೋಗಿ, ಬೆಳಿಗ್ಗೆ 10-15 ಗಂಟೆಗೆ ಹಿಂದೆ ಹೋರಟಿದ್ದ ನಮ್ಮ ಮಾವ ಸಂಜಿವ್ ಮೂರ್ತಿ ಈತನಿಗೆ ಲಾರಿ ಚಾಲಕ ಯಾವುದೇ ರೀತಿಯ ಸಿಗ್ನಲ್ ಕೊಡದೇ ಒಂದೆ ಸಲ ಬ್ರೇಕ್ ಹಾಕಿ ರವಿನಗರದಲ್ಲಿರುವ ಮೀಲ್ ಒಳಗಡೆ ಹೋಗಲು ಲಾರಿಯನ್ನು ಕಟ್ ಮಾಡಿಕೊಂಡಿದ್ದರಿಂದ ಹಿಂದೆ ಹೋರಟಿದ್ದ ನಮ್ಮ ಮಾವನ ಮೋಟಾರ್ ಸೈಕಲ್ ಲಾರಿಗೆ ಟಕ್ಕರ್ ಆಗಿ ಅಪಘಾತವಾಗಿದ್ದರಿಂದ ನಮ್ಮ ಮಾವನ ಮೋಟಾರ್ ಸೈಕಲ್ ಮೇಲೆ ಇದ್ದ ನಮ್ಮ ಮಾವ ಸಂಜೀವ್ ಮೂರ್ತಿಗೆ ಮುಖಕ್ಕೆ, ಬುಜಕ್ಕೆ ಕೈಕಾಲುಗಳಿಗೆ ಗಂಭೀರ ಸ್ವಾರೂಪದ ಗಾಯವಾಗಿದ್ದು ಹಿಂದೆ ಕುಳಿತ್ತಿದ್ದ ನಮ್ಮ ತಾಯಿ ನರಸಮ್ಮಳಿಗೆ ತಲೆಗೆ ಗಂಭೀರ ಸ್ವಾರೂಪದ ಗಾಯವಾಗಿದ್ದರಿಂದ ಚಿಕಿತ್ಸೆ ಕುರಿತು ಕಾರಟಗಿ ಆಸ್ಪತ್ರೆಗೆ ನಂತರ ಬಂದು ತಡಮಾಡದೇ ಗಂಗಾವತಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋರಟಿದ್ದಾಗ್ಗೆ ಗಂಗಾವತಿಯಲ್ಲಿ ಮದ್ಯಾಹ್ನ 12-15 ಗಂಟೆಗೆ ನಮ್ಮ ತಾಯಿ ನರಸಮ್ಮಳು ತೆಲೆಗೆ ಆಗಿದ್ದ ಗಂಭೀರ ಸ್ವರೂಪದ ಗಾಯದಿಂದ ಮೃತಪಟ್ಟಿರುತ್ತಾಳೆ.  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Thursday, August 3, 2017

1]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 02-08-2017 ರಂದು ಮುಂಜಾನೆ 8-20 ಗಂಟೆಗೆ ಠಾಣೆಯಲ್ಲಿದ್ದಾಗ ನಿಲೋಗಲ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-168, 192  ರವರೊಂದಿಗೆ ನಿಲೋಗಲ ಗ್ರಾಮಕ್ಕೆ ತಲುಪಿ ಅಲ್ಲಿ ಹೋಸ್ಕೂಲ ಹತ್ತಿರ ಮುಂಜಾನೆ 9-20 ಗಂಟೆಗೆ ತಲುಪಿ ಮುಂಜಾನೆ 9-25 ದಾಳಿಮಾಡಿದಾಗ ಉಮೇಶ ತಂದೆ ಶರಣಪ್ಪ ಹುಗಾರ ಸಾ: ನಿಲೋಗಲ ಸಿಕ್ಕಿಬಿದಿದ್ದು ಅವನ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು OLD TAVERN   ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಟ್ಟು ಅಂ:ಕಿ: 1,851-12 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 550-00  ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮುಂಜಾನೆ 9-25 ಗಂಟೆಯಿಂದ ಮುಂಜಾನೆ 10-45 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.  
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 117/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 02-08-2017 ರಂದು ಮುಂಜಾನೆ 11-50 ಗಂಟೆಗೆ ಹನಮಸಾಗರದ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲಿಂಗದಲ್ಲಿದ್ದಾಗ ನಿಲೋಗಲ ಗ್ರಾಮದಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ  ಖಚಿತ ಬಾತ್ಮೀ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-83 ಪಿ.ಸಿ-28, 452  ರವರೊಂದಿಗೆ ನಿಲೋಗಲ ಗ್ರಾಮಕ್ಕೆ ತಲುಪಿ ನಿಲೋಗಲದಿಂದ 1/2 ಕಿ.ಮಿ ಅಂತರದಲ್ಲಿ  ಶ್ಯಾಡ್ಲಗೇರಿ ರಸ್ತೆಯ ಬಾಜು ಹೊಲದಲ್ಲಿಯ ಮನೆಯ ಹತ್ತಿರ ಮದ್ಯಾಹ್ನ 12-30 ಗಂಟೆಗೆ ತಲುಪಿ ಮದ್ಯಾಹ್ನ 12-35 ಗಂಟೆಗೆ ದಾಳಿಮಾಡಿದಾಗ ಮಲ್ಲಪ್ಪ ತಂದೆ ಹನಮಪ್ಪ ಭಂಡಾರಿ ಸಾ: ನಿಲೋಗಲ ಸಿಕ್ಕಿಬಿದಿದ್ದು ಅವನ 1] 180 .ಎಂ.ಎಲ್.ಅಳತೆಯ 30 ಟೆಟ್ರಾ ಪಾಕೇಟಗಳು OLD TAVERN   ಪ್ರತಿಯೊಂದಕ್ಕೆ ಎಂ.ಆರ್.ಪಿ. 68.56 ಅಂತಾ ಬೆಲೆ ಇರುತ್ತದೆ. ಇವುಗಳ ಟ್ಟು ಅಂ:ಕಿ: 2,056-08 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 430-00 ರೂಪಾಯಿ ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 240/2017 ಕಲಂ. 78(3) Karnataka Police Act.
02-08-2017 ರಂದು ಮಧ್ಯಾಹ್ನ ಪಿ.ಎಸ್.ಐ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಬರುವ ಶ್ರೀರಾಮನಗರ ಗ್ರಾಮದ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ. ನಂ: 358, 328, ಎ.ಪಿ.ಸಿ. 15 ನೀಲಪ್ಪ ಇವರು ಮತ್ತು ಇಬ್ಬರು ಪಂಚರು ಕೂಡಿಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗ್ರಾಮ ಪಂಚಾಯತ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅದೃಷ್ಟದ ಮಟಕಾ ಅಂಕಿಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗಿ ಜನರನ್ನು ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಮಧ್ಯಾಹ್ನ 3:30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ದುರಗಪ್ಪ ತಂದೆ ಹನುಮಂತ, ವಯಸ್ಸು 35 ವರ್ಷ, ಜಾತಿ: ಮಾದಿಗ ಉ: ಹಮಾಲಿ ಕೆಲಸ ಸಾ: 5ನೇ ವಾರ್ಡ, ರಾಘವೇಂದ್ರ ಕಾಲೋನಿ, ಶ್ರೀರಾಮನಗರ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,380/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
4]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 174/2017 ಕಲಂ. 87 Karnataka Police Act.
ದಿನಾಂಕ 02-08--2017 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಕಾರಟಗಿಯ ಲಕ್ಷ್ಮೀ ಲಾಡ್ಜ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಯಲ್ಲಪ್ಪ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 7 ಜನ ಆರೋಪಿಗಳು ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 1180/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ. 
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 179/2017 ಕಲಂ. 287, 304(ಎ) ಸಹಿತ 34 ಐ.ಪಿ.ಸಿ:.
ದಿ:03-08-2017 ರಂದು 01-00 ಎ.ಎಮ್ ಕ್ಕೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತ ಸರೋಜ ಇವರ ಪೈಕಿ ಶಾಲಿನಿ ಚವ್ಹಾಣ ಸಾ: ಗಿಣಿಗೇರಿ ತಾಂಡಾ ಇವರು ನೀಡಿದ ಲಿಖಿತ ದೂರಿನ ಸಾರಂಶವೇನೆಂದರೆ, ದಿ:02-08-2017 ರಂದು ಸಂಜೆ 4-30 ಗಂಟೆಗೆ ಆಪಾದಿತರಾದ ಪಾಲಾಕ್ಷಗೌಡ ಪೊಲೀಸ್ ಪಾಟೀಲ ಸಾ: ಕೊಪ್ಪಳ ಇವರ ಮಾಲೀಕತ್ವದ ಗಿಣಿಗೇರಿ-ಭೀಮನೂರ ರಸ್ತೆಯ ನಡುವೆ ಬರುವ ಕರಿ ಬೂದಿ ಸ್ಲ್ಯಾಗ್ ಪ್ಲಾಂಟ್ ದಲ್ಲಿ ಫಿರ್ಯಾದಿ ಮತ್ತು ಸಂಗಡ ರೇಣುಕಮ್ಮ ರಾಠೋಡ ಹಾಗೂ ಸರೋಜ ರಾಠೋಡ ಇವರು ಕೆಲಸ ಮಾಡುವಾಗ ಸ್ಲ್ಯಾಗ್ ಯಂತ್ರದಿಂದ ಒಂದು ಕಲ್ಲು ಪುಟಿದು ಸರೋಜಾ ರಾಠೋಡ ಇವರ ತಲೆಗೆ ಜೋರಾಗಿ ಬಡಿದು ತಲೆಗೆ ಭಾರಿ ರಕ್ತಗಾಯವಾಗಿದ್ದು, ನಂತರ ಅವಳನ್ನು ಕೊಪ್ಪಳದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಂಜೆ 5-15 ಕ್ಕೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಬ್ರಾಟ್ ಡೆಡ್ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 192/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:

ದಿನಾಂಕ: 02-07-2017 ರಂದು ರಂದು ಶ್ರೀ ಆರ್.ಎಸ್.ಉಜ್ಜನಕೊಪ್ಪ, ಪಿ.ಐ. ಡಿಸಿಬಿ ಘಟಕ ಕೊಪ್ಪಳ, ಪ್ರಭಾರ:- ಗಂಗಾವತಿ ನಗರ ಪೊಲೀಸ್ ಠಾಣೆ ರವರು ಗಂಗಾವತಿ ನಗರದ ರಾಯಚೂರು ಸರ್ಕಲ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಾ ಐ.ಎಂ.ವಿ. ಕೇಸುಗಳನ್ನು ದಾಖಲಿಸುತ್ತಿರುವಾಗ ಆರೋಪಿತನಾದ ಉಮೇಶ ತಂದೆ ಮುದಿಯಪ್ಪ ಕಕ್ಕರಗೋಳ ವಯಸ್ಸು 24 ವರ್ಷ ಜಾ: ನಾಯಕ ಸಾ: ಹೊಸಕೇರಾ ಡಗ್ಗಿ ಇವನು ತನ್ನ ಬಜಾಜ್ ಡಿಸ್ಕವರಿ ವಾಹನ ನಂ. ಕೆ.ಎ.-35/ವಿ-0248 ನೇದ್ದನ್ನು ಚಲಾಯಿಸಿಕೊಂಡು ಬಂದಿದ್ದು, ಸದರಿಯವನ ವಾಹನವನ್ನು ನಿಲ್ಲಿಸಿ ವಿಚಾರಿಸಿದ್ದು ನಂತರ ಸದರಿಯವನ ಹತ್ತಿರ (01) 180 ಎಂ.ಎಲ್.ನ ಓಲ್ಡ್ ಟವರಿನ 10 ಮಧ್ಯದ ಟೆಟ್ರೋ ಪಾಕೆಟಗಳು ಪ್ರತಿಯೊಂದರ ಬೆಲೆ ರೂ. 68-56 ಇದ್ದು, ಒಟ್ಟು ರೂ. 685-00. (02) 180 ಎಂ.ಎಲ್.ನ 10 ಓರಿಜಿನಲ್ ಚಾಯಿಸ್ ಮಧ್ಯದ ಟೆಟ್ರೋ ಪಾಕೇಟಗಳು ಪ್ರತಿಯೊಂದರ ಬೆಲೆ ರೂ. 56-27 ಒಟ್ಟು ರೂ. 567-70. ಮತ್ತು (03) 90 ಎಂ.ಎಲ್.ನ ಓರಿಜಿನಲ್ ಚಾಯಿಸ್ ನ ಮಧ್ಯದ 10 ಟೆಟ್ರೋ ಪಾಕೇಟಗಳು. ಪ್ರತಿಯೊಂದರ ಬೆಲೆ ರೂ. 28-13. ಒಟ್ಟು ರೂ. 281-30 ಆಗುತ್ತದೆ. ಸದರಿ ಮಧ್ಯದ ಬಾಟಲಿಗಳನ್ನು ಹಾಗೂ ಬಜಾಜ್ ಡಿಸ್ಕವರಿ ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

Wednesday, August 2, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ. 87 Karnataka Police Act.
ದಿನಾಂಕ:- 01-08-2017 ರಂದು ಮಧ್ಯಾಹ್ನ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಸೀಮಾ ಗಾಳೆಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ರವರು ಇಬ್ಬರು ಪಂಚರು ಸಿಬ್ಬಂದಿ ಸಮೇತ ಹೋಗಿ ಗಾಳೆಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿ ಬಿದ್ದಿದ್ದುಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 15,340/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ. 78(3) Karnataka Police Act.
ದಿನಾಂಕ: 01-08-2017 ರಂದು ಸಾಯಾಂಕಾಲ 5 ಗಂಟೆಯ ಸುಮಾರಿಗೆ ಆರೋಪಿತನು ಕವಲೂರ ಗ್ರಾಮದಲ್ಲಿ ಬರುವ ಹಳೆಯ ಗ್ರಾಮ ಪಂಚಾಯತಿ ಹತ್ತಿರ ಇರುವ ಮಸೀದಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿರ್ಯಾದಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 620=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಸಾಯಾಂಕಾಲ 6-30 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಜರುಗಿಸುವ ಕುರಿತು ಒಂದು ವರದಿ ಮತ್ತು ಆರೋಪಿತನನ್ನು ಹಾಜರಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 21/2017 ಕಲಂ. 279, 336 ಐ.ಪಿ.ಸಿ:
ದಿನಾಂಕ 01-08-2017 ರಂದು ಬೆಳಗ್ಗೆ 9-00 ಗಂಟೆಯಿಂದ ಸಂಚಾರಿ ನಿಯಂತ್ರಣ ಪಾಯಿಂಟ್ ಕರ್ತವ್ಯ ಕುರಿತು ಪಿಎಸ್ಐ ರವರು ಪೆಟ್ರೊಲಿಂಗ್ ಮಾಡುತ್ತಿರುವಾಗ , ಪೆಟ್ರೊಲಿಂಗ್ ಮಾಡುತ್ತಾ ಜಯನಗರದ ಮೂಲಕ ಬೈಪಾಸ್ ರಸ್ತೆಯಲ್ಲಿ ಮದ್ಯಾನ್ನ 12-00 ಗಂಟೆ ಸುಮಾರು ಹರಿಹಂತ ಕಾಲೋನಿ ಹತ್ತಿರ ಸರಕಾರಿ ಜೀಪನಲ್ಲಿ  ಹೊರಟಿರುವಾಗ ಜಯನಗರ ಕಡೆಯಿಂದ ಒಂದು ಟ್ರಾಕ್ಟರ , ಟ್ರಾಲಿ ಚಾಲಕ ತನ್ನ ಟ್ರಾಕ್ಟರನಲ್ಲಿ ಉಸುಕುಲೋಡ್ ತುಂಬಿಕೊಂಡು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಬಂದವನೇ ಒಮ್ಮೆಲೆ ಕ್ರಾಸನ್ನು ಕಟ್ ಮಾಡಿದ್ದರಿಂದ ಎದುರುಗೆ ಬರುತ್ತಿರುವ ವಾಹನಗಳಿಗೆ ಅಪಘಾತ ವಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದಿದ್ದರಿಂದ  ಪಿಎಸ್ಐ ಮತ್ತು ಜೀಪ್ ಚಾಲಕ ಪ್ರಭುಗೌಡ ಎಪಿಸಿ. ಜೀಪ ದಿಂದ ಇಳಿದು ಸದರ ಟ್ರಾಕ್ಟರನ್ನು ನಿಲ್ಲಿಸಿ ಟ್ರಾಕ್ಟರ ನಂಬರ ನೋಡಲಾಗಿ ಕೆ.ಎ.35-ಟಿಎ 4989 ಅಂತಾ ಇದ್ದು ಟ್ರೈಲರ ನಂಬರ ನೋಡಲಾಗಿ ನಂಬರ ಇರುವುದಿಲ್ಲಾ ಸದರ ಟ್ರೈಲರನಲ್ಲಿ ಉಸುಕು ಲೋಡ್ ಮಾಡಿಕೊಂಡು ಅದರ ಮೇಲೆ ಬರಕಾ ಹಾಕಿಕೊಂಡು ಬಂದಿದ್ದು ಇರುತ್ತದೆ. ಟ್ರಾಕ್ಟರ್, ಟ್ರಾಲಿ ಚಾಲಕನ ಹೆಸರು ಕೇಳಲಾಗಿ ರುದ್ರಪ್ಪ ತಂದೆ ಈರಪ್ಪ ವಯಸ್ಸು 40 ಜಾ: ಗಂಗಾಮತ ಸಾ: ಉಳೆನೂರು ತಾ: ಗಂಗಾವತಿ ಅಂತಾ ಹೇಳಿದನು.  ಸದರಿ ರುದ್ರಪ್ಪ ತಂದೆ ಈರಪ್ಪ ಸಾ:ಉಳೇನೂರು  ಇತನು ತನ್ನ  ಟ್ರಾಕ್ಟರ ನಂ ಕೆ.ಎ.35-ಟಿಎ 4989 ಹಾಗೂ ನಂಬರ ಇಲ್ಲದ ಟ್ರೈಲರ್ ನೇದ್ದನ್ನು  ಜಯನಗರ  ಕಡೆಯಿಂದ ಅತೀಜೋರಾಗಿ ಮತ್ತು ಅಲಕ್ಷತನದಿಂದ  ಮಾನವ ಜೀವಕ್ಕೆ ಅಪಾಯವಾಗುವಂತೆ ಮತ್ತು ಗಂಡಾಂತರವನ್ನುಂಟುವಾಡುವ ಹಾಗೆ ದುಡುಕಿನಿಂದ ಮತ್ತು ನಿರ್ಲಕ್ಷತನದಿಂದ ಟ್ರಾಕ್ಟರ, ಟ್ರೈಲರನ್ನು ಚಾಲನೆ ಮಾಡಿಕೊಂಡು ಬಂದಿರುತ್ತಾನೆ. ಕಾರಣ ಸದರಿಯವನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:
ದಿನಾಂಕ: 01-08-2017 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರು ಹಂಚಿನಾಳ ಕ್ರಾಸ್ ನ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ, ಮದ್ಯದ ಬಾಟಲಿಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅದರ ಸಾರಾಶವೇನೆಂದರೆ, ಇಂದು ದಿನಾಂಕ: 01-08-2017 ರಂದು ಮದ್ಯಾಹ್ನ 3-00 ಗಂಟೆಗೆ ಆರೋಪಿತನು ಹಂಚಿನಾಳ ಕ್ರಾಸ್ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಭರಮಪ್ಪ ತಂದೆ ದುರುಗಪ್ಪ ಬಂಡಿ ಸಾ: ಹಂಚಿನಾಳ. ಇವನ ಮೇಲೆ  ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ  ಅಂದಾಜು 1176=00 ರೂ  ಬೆಲೆ ಬಾಳುವ 90 ಎಂ.ಎಲ್. ಅಳತೆಯ ಓರಿಜಿನಲ್ ಚಾಯ್ಸ ಡಿಲಕ್ಸ್ ಮಿಸ್ಕಿ ಮದ್ಯದ 42 ಟೆಟ್ರಾ ಪ್ಯಾಕ್ ಗಳಿದ್ದು ಒಂದು ಪರೀಕ್ಷೆ ಕುರಿತು ಜಪ್ತಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 100/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ:

ದಿನಾಂಕ: 01-08-2017 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೊಡ್ಡಪ್ಪ ಎ.ಎಸ್.ಐ, ರವರು ಠಾಣೆಗೆ ಹಾಜರಾಗಿ ಒಂದು ದೂರು, ಹಾಗೂ ಇಬ್ಬರೂ ಆರೋಪಿತರು ಅನಧೀಕೃತ, 80 ಅಕ್ರಮ ಮದ್ಯದ ಟೆಟ್ರಾ ಪ್ಯಾಕಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅದರ ಸಾರಾಶವೇನೆಂದರೆ, ಇಂದು ದಿನಾಂಕ: 01-08-2017 ರಂದು ಸಾಯಂಕಾಲ 17-00 ಗಂಟೆಗೆ ನಮೂದಿತ ಆರೋಪಿತರು ಜುಮಲಾಪುರ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ನಂ 1 ರವರಿಂದ 42 ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ ನಂ 2 ರವರಿಂದ 40 ಟೆಟ್ರಾ ಪ್ಯಾಕಗಳನ್ನು ಹಿಗೇ 82 ಪ್ಯಾಕೇಟಗಳನ್ನು ಒಟ್ಟು 2296-00 ಬೆಲೆ ಬಾಳುವವಗಳನ್ನು ಅಕ್ರಮ ದಾಳಿ ಕಾಲಕ್ಕೆ  ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿಪಡಿಸಿಕೊಂಡಿದ್ದು ಇವುಗಳಲ್ಲಿ 2 ಪ್ಯಾಕೇಟಗಳನ್ನು ಪರೀಕ್ಷೆ ಕುರಿತು ಜಪ್ತಿಪಡಿಸಿದ್ದು ಇರುತ್ತದೆ. ಸದರಿಯವರು ಮದ್ಯದ ಪಾಕೇಟಗಳನ್ನು ಯಾವದೇ ಪರವಾನಿಗೆ ಲೈಸೆನ್ಸ ಪರವಾನಿಗೆ ಇಲ್ಲದೇ ಮಾರಾಟ ಮಾಡಲು ಹೊರಟಿದ್ದವುಗಳನ್ನು  ಜಪ್ತಿ ಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.   

Tuesday, August 1, 2017

In kuknoor ps briefing session of beat implementation.












In gangavati town beat meeting






1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 167/2017 ಕಲಂ. 78(3) Karnataka Police Act.
ದಿನಾಂಕ:-31-07-2017 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ನಮೂರು ಮಾಡಿದ ಆರೋಪಿ ನಂ 1 ರವರು  ನಂದಿಹಳ್ಳೀ ಗ್ರಾಂದ ಶಾಲೆಯ ಸಾರ್ವಜನಿಕರ ರಸ್ತೆಯಲ್ಲಿ  ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಮೋನಯ್ಯ ಎ.ಎಸ್.ಐ ಮತ್ತು ಪಿ.ಸಿ 334, 164, 413 ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು ಆರೋಪಿ ನಂ 1 ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 710=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ 
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 168/2017 ಕಲಂ. 78(3) Karnataka Police Act.
ದಿನಾಂಕ:-31-07-2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಆರೋಪಿಯು ಕಾರಟಗಿಯ ಉಪ್ಪಾರ ಓಣಿಯಲ್ಲಿರುವ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಶ್ರೀ. ಯಲ್ಲಪ್ಪ ಪಿ.ಎಸ್.ಐ ರವರು ವೆಂಕಟೇಶ ಎ.ಎಸ್.ಐ ಮತ್ತು ಪಿ.ಸಿ 331, 367 ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ  ಆರೋಪಿತನ ಮೇಲೆ ದಾಳಿ ಮಾಡಲು ಆರೋಪಿ ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 1470=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 32, 34 ಅಬಕಾರಿ ಕಾಯ್ದೆ:
ದಿನಾಂಕ: 31-07-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದರರಾದ ಶ್ರೀ ರವಿ.ಸಿ.ಉಕ್ಕುಂದ ಪಿ... ನಗರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿನಾಂಕ: 31-07-17 ರಂದು ರಾತ್ರಿ 10-00 ಗಂಟೆಗೆ ಕೊಪ್ಪಳದ, ಕುವೆಂಪು ನಗರದ ರಸ್ತೆಯಲ್ಲಿ ಆರೋಪಿತನು ಅನಧೀಕೃತವಾಗಿ ಯಾವುದೇ ಲೈಸನ್ಸ ವಗೈರೆ ಇಲ್ಲದೇ ಅಕ್ರಮವಾಗಿ ಸುಮಾರು 928=90 ರೂ. ಬೆಲೆಬಾಳುವ ಹೈವಾರ್ಡ್ಸ್ ಕಂಪನಿಯ ಮಧ್ಯದ 35 ಟೆಟ್ರಾ ಪಾಕೇಟಗಳ ಮಧ್ಯವನ್ನು ಸಂಗ್ರಹಿಸಿಕೊಂಡು ಸಾಗಾಟ ಮಾಡುತ್ತಿದ್ಧಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ಸದರಿ ಆರೋಪಿತನಿಂದ ಜಪ್ತ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 457, 380 ಐ.ಪಿ.ಸಿ:
ದಿನಾಂಕ:-28-07-2017 ರಂದು ಮದ್ಯಾಹ್ನ 3-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಪತಿ  ತಂದೆ ಪುಂಡರಿಕಾಕ್ಷಿ ಉಪಾಧ್ಯ ವಯ 59 ವರ್ಷ ಜಾತಿ ಬ್ರಾಹ್ಮಣ ಉ. ಕಿರಾಣಿ ವ್ಯಾಪಾರ ಸಾ. 4 ನೇ ವಾರ್ಡ ಕಾರಟಗಿ, ದಿನಾಂಕ 31-07-2017 ರಂದು ಬೆಳಿಗ್ಗೆ  9-00 ಗಂಟೆಗೆ ತಮ್ಮ ಕಿರಾಣಿ ಅಂಗಡಿ ವ್ಯಾಪಾರ ಮಾಡುವ ಸಲುವಾಗಿ ತಮ್ಮ ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋದ ವೇಳೆಯಲ್ಲಿ  ಯಾರೋ ಕಳ್ಳರು ಈ ದಿನ  ದಿನಾಂಕ 31-07-2017 ರಂದು ಮುಂಜಾನೆ 9-00 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಮನೆಯ ಮುಖ್ಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ  ಅಲಮಾರ್ ನ ಬಾಗಿಲಿನ್ನು ಮೀಟಿ ಅದರಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ ನಗದು ಹಣ ರೂ.5 ಲಕ್ಷ, 50 ಸಾವಿರ ಗಳನ್ನು ಹಾಗೂ ಇನ್ನೊಂದು ಅಲಮಾರ್ ದಲ್ಲಿದ್ದ 1 ಬೆಳ್ಳಿಯ  ಪ್ಲೆಟ್, ಒಂದು ಬೆಳ್ಳಿ ಲೋಟ್ ಹಾಗೂ ಕೆಲವೊಂದು ಬೆಳ್ಳಿ ಕ್ವಾನಿ ಎಲ್ಲಾ ಸೇರಿ ಅಂದಾಜ 300 ಗ್ರಾಂ ಬೆಲೆ ಬಾಳುವ  .ಕಿ.ರೂ.12000/- ಗಳು ಹಿಗೆ ಒಟ್ಟು ಎಲ್ಲಾ ಸೇರಿ 5,62,000=00 ರೂ ಬೆಲೆಭಾಳುವ ನಗದು ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅವುಗಳನ್ನು ಪತ್ತೆ ಮಾಡಿ ಕಳುವು ಮಾಡಿ ಹೋದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ
5] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 31-07-2017 ರಂದು ಸಾಯಾಂಕಾಲ 19-10 ಗಂಟೆಗೆ ಫಿರ್ಯಾದಿದಾರರಾದ ಮಾಬುಬಿ ಬೇನಾಳ ಸಾ: ಶಾಂತಗೇರಿ, ಹಾ/: ನೈನಾಪೂರ ರವರು ಠಾಣೆಗ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ: 28-07-2017 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರು ಹನಮನಾಳಗೆ ಹೋಗಿ ಅಕ್ಕಿ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ  ತಮ್ಮ ಮೋಟಾರ್ ಸೈಕಲ್ ನಂ: ಕೆ.-37/ಹೆಚ್.-5948 ನೇದ್ದನ್ನು ತೆಗೆದುಕೊಂಡು ಹೋದನು. ನಂತರ ತಾನು ದಿನಾಂಕ: 28-07-2017 ರಂದು ಸಾಯಾಂಕಾಲ 16-30 ಗಂಟೆಯ ನೈನಾಪೂರ ಗ್ರಾಮದಲ್ಲಿ ಇದ್ದಾಗ, ತಮ್ಮ ಚಿಕ್ಕಪ್ಪ ಫೋನ್ ಮಾಡಿ ತಿಳಿಸಿದ್ದೇನೆಂದರೆ, ತನ್ನ ಗಂಡನಿಗೆ ಪಟ್ಟಲಚಿಂತಿ ಹತ್ತಿರ ರಸ್ತೆ ಅಪಘಾತವಾಗಿದೆ ಬದಾಮಿ ಆಪ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ತಾನು ಬದಾಮಿ ಕಾರೂಡಗಿಮಠ ಆಸ್ಪತ್ರೆಗೆ ಬಂದು ನೋಡಲು ವಿಷಯ ನಿಜವಿದ್ದು, ಅಪಘಾತದದಲ್ಲಿ ತನ್ನ ಗಂಡನಿಗೆ ಬಲಗಾಲ ಹಣೆ, ಮೊಣಕೈ, ಹಾಗೂ ಬಲಗಾಲ ತೊಡೆಗೆ, ಹಾಗೂ ಬಲಗಾಲ ಮೊಣಕಾಲ ಕೆಳಗೆ ಭಾರಿ ರಕ್ತಗಾವಾಗಿದ್ದು, ಅಪಘಾತದ ಬಗ್ಗೆ ತನ್ನ ಗಂಡನಿಗೆ ವಿಚಾರಿಸಲು ಹನಮನಾಳ ದಿಂದ ಅಕ್ಕಿ ತೆಗೆದುಕೊಂಡು ತಮ್ಮ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದಾಗ ಪಟ್ಟಲಚಿಂತಿ ಕಡೆಯಿಂದ ಎದುರುಗಡೆ ಒಬ್ಬ ಶಾಲಾ ಬಸ್ ಚಾಲಕ ಅತೀವೇಗ ಹಾಗೂ ಆಲಕ್ಷತನದಿಂದ ಶಾಲಾ ಬಸ್ ಚಾಲನೆ ಮಾಡಿಕೊಂಡು ಮೋಟಾರ್ ಸೈಕಲಗೆ ಟಕ್ಕರಕೊಟ್ಟು ಅಪಘಾತಪಡಿಸಿದ ಆಗ ತನಗೆ ಮೂರ್ಛೆ ಹೋಗಿದ್ದು, ನಂತರ ಸ್ವಲ್ಪ ಸುದಾರಿಸಿಕೊಂಡು ಅಪಘಾತ ಪಡಿಸಿದ ಶಾಲಾ ಬಸ್ ವಾಹನ ನಂಬರ ನೋಡಲು ಅದರ ನಂ: ಕೆ.-ಕೆ.-37/7775 ಇರುತ್ತದೆ.

 
Will Smith Visitors
Since 01/02/2008