Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, August 12, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ. 379 IPC & KMMC Role 3, 36 & 42 R/w 44 ºÁUÀÆ MMRD Act 1957 Role 4, 4(1), 4(a) R/w 21(4), 21:.
ಶ್ರೀ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ದಿನಾಂಕ 11-08-2017 ರಂದು ಬೆಳಗಿನ ಜಾವ 5-35 ಗಂಟೆಗೆ ತಮ್ಮ ಠಾಣಾ ವ್ಯಾಪ್ತಿಯ 5 ಟ್ರ್ಯಾಕ್ಟರ್ ಚಾಲಕರು ಮರಳನ್ನು ಕಳ್ಳತನ ಮಾಡಿಕೊಂಡು ತಮ್ಮ ಟ್ರ್ಯಾಕ್ಟರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ 5 ಟ್ರ್ಯಾಕ್ಟರ್ ಟ್ರೇಲರ್ ಮತ್ತು ಅದರಲ್ಲಿ ಒಟ್ಟು 7,500=00 ಬೆಲೆಬಾಳವು ಮರಳನ್ನು ಜಪ್ತುಪಡಿಸಿಕೊಂಡು ಠಾಣೆಗೆ ತಂದು ಟ್ರ್ಯಾಕ್ಟರ್ ಮಾಲೀಕರು ಮತ್ತು ಚಾಲಕರುಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 420 ಐ.ಪಿ.ಸಿ.
ದಿನಾಂಕ 11-08-2017 ರಂದು 08-00 ಪಿ.ಎಂ.ಕ್ಕೆ ಪಿರ್ಯಾದು ವೆಂಕಟೇಶ ತಂದೆ ಲಚ್ಚಪ್ಪ ವಯ: 35 ವರ್ಷ ಜಾ: ವಾಲ್ಮೀಕಿ ಉ: ಚಾಲಕ ಸಾ: 4 ನೇ ವಾರ್ಡ ಮುನಿರಾಬಾದ  ಇವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿಯ ಸಾರಾಂಶವೆನೆಂದರೆ , ದಿನಾಂಕ 09-08-2017 ರಂದು ಮದ್ಯಾನ 3-10 ಗಂಟೆಗೆ ಯಾರೋ ಅಪರಿಚಿತರು ಪಿರ್ಯಾದಿಗೆ ಕರೆಮಾಡಿ ಅವರಿಗೆ .ಟಿ.ಎಂ. ಲಾಕ್ ಆಗಿದ್ದು ಅದನ್ನು ತೆಗೆದುಕೊಡುತ್ತೇವೆ ಎಂದು ಹೇಳಿದ್ದು ಪಿರ್ಯಾದುದಾರರು ಹೊಸಪೇಟೆಗೆ ಹೋಗಿದ್ದು ಅವರು ವಾಪಾಸ್ ಮನೆಗೆ ಬಂದ ಮೇಲೆ ರಾತ್ರಿ 9-10  ಗಂಟೆ ಸುಮಾರಿಗೆ ಅವರ ಮೋಬೈಲ್ ಪೋನ್ ಗೆ ಕರೆ ಮಾಡಿದ್ದು ಪಿರ್ಯಾದುದಾರರು ಅವರ .ಟಿ.ಎಂ. ಮೇಲೆ ಇರುವ ಸಂಖ್ಯೆಗಲನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದ್ದು ಕೂಡಲೆ ಅವರ ಬ್ಯಾಂಕ ಖಾತೆಯಲ್ಲಿದ್ದ ಹಣವನ್ನು ಮೋಸ ಮಾಡಿ ಡ್ರಾ ಮಾಡಿಕೊಂಡಿರುತ್ತಾರೆ ಎಂದು ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ,
3]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 107/2017 ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ.  
ದಿನಾಂಕ: 11-08-2017 ರಂದು ರಾತ್ರಿ 9-10 ಗಂಟೆ ಸುಮಾರಿಗೆ ಆರೋಪಿ ಶರಣಯ್ಯ ತಂದೆ ಸಿದ್ದರಾಮಯ್ಯ ಸಸಿಮಠ ವ;28 ವರ್ಷ ಜಾ;ಜಂಗಮ ಉ;ಒಕ್ಕಲುತನ ಸಾ|| ಚಿಕ್ಕಮ್ಯಾಗೇರಿ ತಾ: ಯಲಬುರ್ಗಾ ಇತನು ಯಾವುದೇ ಪರವಾನಿಗೆ ಇಲ್ಲದೇ  ಮಧ್ಯಸಾರ ಟೆಟ್ರಾ ಪಾಕೀಟಗಳನ್ನು ತಮ್ಮ ಗ್ರಾಮದಲ್ಲಿ ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಒಂದು ಪ್ಲಾಸ್ಟೀಕ ಚೀಲ [ಕ್ಯಾರಿ] ಬ್ಯಾಗ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೀಟುಗಳನ್ನು ಹಾಕಿಕೊಂಡು ಯಲಬುರ್ಗಾ –ಮಲಕಸಮುದ್ರ ರಸ್ತೆಯ ಮೇಲೆ ಯಲಬುರ್ಗಾ ಪಟ್ಟಣದ ಶ್ರೀ ಭಗೀರಥ ಸರ್ಕಲ ಹತ್ತಿರ  ಹೋಗುತ್ತಿದ್ದಾಗ ಪಿ.ಎಸ್.ಐ. ಯಲಬುರ್ಗಾ ಹಾಗೂ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ, ಸದರಿ ಆರೋಪಿತನಿಂದ 90 ML ನ HAYWARDS CHEERS WHISKY- ಒಟ್ಟು 60 (ಅರವತ್ತು) ಟೇಟ್ರಾ ಪಾಕೀಟಗಳು ಇದ್ದು. ಪ್ರತಿಯೊಂದಕ್ಕೆ 28.13 ರೂಗಳಂತೆ ಒಟ್ಟು 1687.8 ರೂ. ಬೆಲೆವುಳ್ಳಗಳನ್ನು ಜಪ್ತಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 188/2017 ಕಲಂ. 279 ಐ.ಪಿ.ಸಿ..
ದಿ:11-08-2017 ರಂದು ಮದ್ಯಾಹ್ನ 3-15 ಗಂಟೆಗೆ ಫಿರ್ಯಾದಿದಾರರಾದ ಆನಂದ ಶಿವಂಗಿ. ಸಾ: ವಿಜಯಪೂರ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ, ದಿ:11-08-2017 ರಂದು ಬೆಳಗಿನಜಾವ 04-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಮಾಲೀಕತ್ವದ ಲಾರಿ ನಂ: ಕೆಎ-28/ಸಿ-1939 ನೇದ್ದನ್ನು ಆರೋಪಿತ ಚಾಲಕನು ಬಾಗಲಕೋಟೆ ಕಡೆಯಿಂದ ತೋರಣಗಲ್ ಜಿಂದಾಲ್ ಫ್ಯಾಕ್ಟರಿಯ ಕಡೆಗೆ ಅಂತಾ ಎನ್.ಹೆಚ್-50 ರಸ್ತೆಯ ಜಿನ್ನಾಪೂರ ತಾಂಡಾ ಕ್ರಾಸ್ ದಾಟಿ ಹೊಸಪೇಟೆಯ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಬರುವಾಗ ವಾಹನ ನಿಯಂತ್ರಿಸದೇ ಅಪಘಾತ ಮಾಡಿದ್ದರಿಂದ ರಸ್ತೆಯ ಡಿವೈಡರ್ ಗೆ ಬಡಿದು ಲಾರಿಯ ಕೆಳಗಡೆ ಭಾಗವು ಜಖಂ ಆಗಿದ್ದು ಇರುತ್ತದೆ. ಕಾರಣ ಸದರಿ ಲಾರಿಯ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ಸಲ್ಲಿಸಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 110/2017 ಕಲಂ. 143, 147, 148, 323, 324, 504, 506 ಸಹಿತ 149 ಐ.ಪಿ.ಸಿ..
ದಿನಾಂಕ : 11-08-2017 ರಂದು ರಾತ್ರಿ 9-30 ಗಂಟೆಗೆ ಫಿರ್ಯಾಧಿ ಪಕ್ಕೀರಪ್ಪ ತಂದೆ ರಂಗಪ್ಪ ತಳವಾರ. ವಯ: 42 ವರ್ಷ. ಜಾತಿ: ವಾಲ್ಮೀಕಿ. ಉ: ಒಕ್ಕಲುತನ. ಸಾ: ಕೆ. ಹೋಸುರು ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೆನೆಂದರೆ ಆರೋಪಿತರು ಈ ಹಿಂದೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಮತ್ತು ಎನ್.ಆರ್.ಇ.ಜಿ ಯಲ್ಲಿ ಅಕ್ರಮಗಳನ್ನು ಮಾಡುತ್ತಿದ್ದು ಇವಗಳನ್ನು ಫಿಯರ್ಾದಿದಾರರು ತಡೆದಿದ್ದು ಇದೇ ಕಾರಣಕ್ಕೆ ಫಿರ್ಯಾಧಿದಾರರ ಕಡೆಯವರಿಗೂ ಮತ್ತು ಆರೋಪಿತರ ಕಡೆಯವರಿಗೂ ದ್ವೇಷ ಇತ್ತು.  ಇಂದು ದಿನಾಂಕ : 11-08-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಫಿಯರ್ಾದಿದಾರರು ತಮ್ಮ ಮನೆಯಲ್ಲಿದ್ದಾಗ ಆರೋಪಿತರ ಪೈಕಿ 1) ಪಕ್ಕೀರಪ್ಪ ತಂದೆ ರಂಗಪ್ಪ ತಳವಾರ 2) ಗ್ಯಾನಪ್ಪ ತಂದೆ ರಂಗಪ್ಪ ತಳವಾರ 3) ಬಸವರಾಜ ತಂದೆ ಪಕ್ಕೀರಪ್ಪ ತಳವಾರ 4) ಮಂಜುನಾಥ ತಂದೆ ಪಕ್ಕೀರಪ್ಪ ತಳವಾರ ರವರುಗಳು ಕೂಡಿ ಫಿರ್ಯಾಧಿದಾರರ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು, ಆಗ ಫಿರ್ಯಾಧಿದಾರರು ಹೊರಗೆ ಬಂದು ಯಾಕೇ ಬೈಯ್ಯದು ಅಂತಾ ಕೇಳಿದ್ದಕ್ಕೆ ಬಸವರಾಜನು ಫಿರ್ಯಾಧಿದಾರನನ್ನು ಕೆಳಗೆ ನೂಕಿ, ಕಾಲಿನಿಂದ ಎಡಕಪಾಳಕ್ಕೆ ಒದ್ದನು. ಆಗ ಮಂಜುನಾಥನು ಬಲಗಾಲನ್ನು ಹಿಡಿದು ನೆಲಕ್ಕೆ ಹಚ್ಚಿ ಬರಬರನೆ ಎಳೆದಾಡಿದ್ದು ಇದರಿಂದ ಬಲಗಾಲ ತೊಡೆಗೆ ತೆರಚಿದ ಗಾಯವಾಗಿದ್ದು, ಪಕ್ಕೀರಪ್ಪನು ಕೆಳಗೆ ಬಿದ್ದಿದ್ದ ಫಿಯರ್ಾದಿದಾರರ ಎಡ ಕಪಾಳದ ಮೇಲೆ ಕಾಲು ಇಟ್ಟು ಕುತ್ತಿಗೆ ಹಿಚುಕಲು ಪ್ರಯತ್ನ ಮಾಡಿದನು. ಫಿರ್ಯಾಧಿದಾರರ ಎದ್ದು ನಿಂತ ನಂತರ ಗ್ಯಾನಪ್ಪ ಎರಡು ಏಟು ಬೆನ್ನಿಗೆ ಹೊಡೆದನು. ಆಗ ಜಗಳ ಬಿಡಿಸಲು ಬಂದ ಫಿರ್ಯಾಧಿದಾರರ ತಂದೆ ಭೀಮಪ್ಪನಿಗೆ ಬಸವರಾಜನು ಎಡಕಪಾಳಕ್ಕೆ ಹೊಡೆದಿದ್ದು ಮತ್ತು ಮಂಜುನಾಥನು ಹೊಟ್ಟೆಗೆ ಒದ್ದನು. ಉಳಿದ ಆರೋಪಿತರು ಕೂಡ ಫಿರ್ಯಾಧಿದಾರರ ತಾಯಿಗೆ, ತಂಗಿಗೆ ಕೈಯಿಂದ ಹೊಡೆಬಡೆ ಮಾಡಿದ್ದು ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ. 143, 147, 148, 323, 324, 504,506 ರೆ/ವಿ 149  ಐಪಿಸಿ.
ಇಂದು ದಿನಾಂಕ : 11-08-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರರಯ ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೆನೆಂದರೆ ನನ್ನ ಹೆಂಡತಿ ಈ ಹಿಂದೆ ಸುಮಾರು 2.5 ವರ್ಷಗಳ ಹಿಂದೆ ಜರುಗಿದ ಗ್ರಾಮ. ಪಂಚಾಯತಿ ಚುನಾವಣೆಯಲ್ಲಿ ನನ್ನ ಹೆಂಡತಿ ದುರುಗಮ್ಮ ಈಕೆಯು ನನ್ನ ಅಳಿಯನಾದ ಯಮನೂರಪ್ಪ ತಂದೆ ಭೀಮಣ್ಣ ತಳವಾರ ಈತನ ವಿರುದ್ಧ ಗೆದ್ದಿದ್ದಳು. ಸೋತ ನನ್ನ ಅಳಿಯ ಯಮನೂರಪ್ಪನು ಗ್ರಾಮದಲ್ಲಿ ನನ್ನ ಹೆಂಡತಿ  ಪಂಚಾಯತಿ ಕಡೆಯಿಂದ ಮಾಡುವ ಪ್ರತಿಯೊಂದು ಸರಕಾರಿ ಅಭಿವೃದ್ದಿ ಕಾರ್ಯಗಳಿಗೆ ತಕರಾರು ಮಾಡುತ್ತಾ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ, ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಬಂದಿದ್ದನು. ಇಂದು ದಿನಾಂಕ: 11-08-2017 ರಂದು ಸಂಜೆ 7-30 ಗಂಟೆ ಸುಮಾರಿಗೆ ನಮ್ಮೂರಿನ ಶಾಲೆ ಹತ್ತಿರ ರಸ್ತೆಯ ಮೇಲೆ ನಾನು ನಿಂತುಕೊಂಡಿದ್ದಾಗ ಅಲ್ಲಿಗೆ ನಮ್ಮ ಅಳಿಯ ಯಮನೂರಪ್ಪನು ಬಂದಿದ್ದು, ಆಗ ನಾನು ಆತನಿಗೆ ಯಾಕೇ ನನ್ನ ಹೆಂಡತಿ ಪಂಚಾಯತಿಯಿಂದ ಮಾಡಿಸುವ ಕೆಲಸಗಳಿಗೆ ತಕಾರಾರು ಮಾಡುತ್ತಿರುವಿ ಅಂತಾ ಕೇಳಿದ್ದು, ಅದಕ್ಕೆ ಆತನು ಒಮ್ಮೇಲೆ ಸಿಟ್ಟಿಗೆ ಬಂದು ಹೌದು ಲೇ ನಾನು ಜಯ ಕನರ್ಾಟಕ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷನಿದ್ದು ನನಗೆ ಜನಬೆಂಬಲವಿದೆ. ನಿನ್ನ ಹೆಂಡತಿ ಗ್ರಾಮ ಪಂಚಾಯತಿ ಮೇಂಬರ್ ಇದ್ದರೆ. ನಾನು ಸಂಘಟನೆಯ ಅಧ್ಯಕ್ಷನಿದ್ದೆನೆ ನಿನೇನು ಸೆಂಟಾ ಮಾಡಕಾಗಾಲ್ಲ. ಅಂತಾ ಅವಾಚ್ಯವಾಗಿ ಬೈದು. ಜಗಳ ತೆಗೆದು ಬಾಯಿ ಮಾಡಹತ್ತಿದ್ದು, ಆಗ ನಾವು ಬಾಯಿ ಮಾಡುವ ವಿಷಯ ಕೇಳಿ ಅಲ್ಲಿಗೆ ನನ್ನ ಮಕ್ಕಳಾದ ಬಸವರಾಜ, ಮಂಜುನಾಥ, ಅಳಿಯ ಯಮನೂರಪ್ಪ, ಹಾಗೂ ಅಣ್ಣನ ಮಕ್ಕಳಾದ ದೇವಪ್ಪ, ದೇವಮ್ಮ ರವರುಗಳು ಬಂದರು. ಹಾಗೂ ಯಮನೂರಪ್ಪನ ತಂದೆ ಭೀಮಪ್ಪ, ತಾಯಿ ಕನಕಮ್ಮ, ಅಳಿಯ ಕನಕಪ್ಪ, ತಂಗಿಯರಾದ ಶಂಕ್ರಮ್ಮ, ಚಿನ್ನಮ್ಮ, ಗೌರಮ್ಮ ರವರುಗಳು ಬಂದಿದ್ದು. ನನ್ನ ಮಕ್ಕಳು ನನ್ನನ್ನು ಬಿಡಿಸಿಕೊಳ್ಳಲು ಬಂದಾಗ ನನ್ನ ಮಗ ಬಸವರಾಜನಿಗೆ ಯಮನೂರನು ತನ್ನ ಮೊಣಕೈಯಿಂದ ತಲೆಯ ಮೇಲೆ ಗುದ್ದಿದನು. ನನ್ನ ಅಳಿಯ ಯಮನೂರಪ್ಪನಿಗೆ ಕನಕಪ್ಪನು ಕಾಲಿನಿಂದ ಒದ್ದಿದ್ದು ಇದರಿಂದ ಆತನ ಎಡಗಾಲಿನ ಕೆಳಗೆ ರಕ್ತಗಾಯವಾಗಿದ್ದು, ದೇವಮ್ಮಳಿಗೆ ಕನಕಮ್ಮಳು ಕೈಯಿಂದ ತಲೆಯ ಹಿಂಭಾಗದಲ್ಲಿ ಹೊಡೆದಳು. ನಂತರ ದೇವಪ್ಪನಿಗೆ ಚಿನ್ನಮ್ಮಳು ಬಲಗಣ್ಣಿಗೆ ಕೈಯಿಂದ ಹೊಡೆದಳು. ನಂತರ ಉಳಿದ ಭೀಮಣ್ಣ, ಶಂಕ್ರಮ್ಮ, ಗೌರಮ್ಮ ರವರುಗಳು ನಮಗೆ ಅವಾಚ್ಯ ಶಬ್ದಗಳಿಂದ ಬೈದು. ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ಕಾರಣ ಈ ಮೇಲ್ಕಾಣಿಸಿದವರು ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ, ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು, ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
7]  ಕನಕಗಿರ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 32, 34, ಕರ್ನಾಟಕ ಅಬಕಾರಿ ಕಾಯ್ದೆ.
ಶ್ರೀ ಶಾಂತಪ್ಪ ಬೆಲ್ಲದ ಎ.ಎಸ್.ಐ ಕನಕಗಿರಿ ಠಾಣೆ ರವರಿಗೆ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ ಬಂದ ಮೇರೆಗೆ ಕೂಡಲೇ ಪಂಚರಿಗೆ ಬರಮಾಡಿಕೊಂಡು ಸಿಬ್ಬಂದಿಗಳೊಂದಿಗೆ ಠಾಣೆಯಿಂದ ಸಂಜೆ 6-00 ಗಂಟೆಗೆ ಮೋಟಾರ್ ಸೈಕಲ್ ಗಳಲ್ಲಿ ಹೊರಟು ಕನಕಗಿರಿ-ಗಂಗಾವತಿ ರಸ್ತೆಯಲ್ಲಿ ಅರಳಹಳ್ಳಿ ಕ್ರಾಸ್ ಹತ್ತಿರ ನಿಲ್ಲಿಸಿ ಸ್ವಲ್ಪ ಮುಂದೆ ಸಾಗಿ ನೋಡಲು ಅಲ್ಲಿ ಎಡಗಡೆಯಲ್ಲಿ ಆರೋಪಿತನು ಒಂದು ಟಿ,.ವ್ಹಿ.ಎಸ್. ಎಕ್ಸ್.ಎಲ್.ಸೂಪರ್ ಮೇಲೆ ಒಂದು ಚೀಲವನ್ನಿಟ್ಟುಕೊಂಡು ನಿಂತಿರುವುದು ಕಂಡು ಕೂಡಲೇ ಧಾಳಿ ಮಾಡಲು ಆರೊಪಿತನು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೇ ಅವನಿಗೆ ಹಿಡಿಕೊಂಡು ಆರೋಪಿತನಿಂದ 01] ಓರಿಜೀನಲ್ ಚಾಯ್ಸ ವಿಸ್ಕಿ ಮದ್ಯದ 90 ಎಂಎಲ್. ಅಳತೆಯ ಒಟ್ಟು 90 ಟೆಟ್ರಾ ಪಾಕೇಟಗಳು ಇದ್ದು ಪ್ರತಿ ಪ್ಯಾಕೇಟ್ ಬೆಲೆ ರೂಪಾಯಿ 28.13 ಒಟ್ಟು ಮೌಲ್ಯ 2,531=00 ರೂಪಾಯಿ. 02] ನಗದು ಹಣ 460=00 ರೂಪಾಯಿ ಹಾಗೂ 03] ಟಿವಿಎಸ್ ಎಕ್ಸೆಲ್ ಸುಪರ್ ಮೋ/ಸೈ ನೊಂದಣಿ ಸಂಖ್ಯೆ ಇರುವುದಿಲ್ಲ ಚಾಸ್ಸಿ ಸಂ. ಪಿ3003ಎಫ್243853 ಅಂ.ಕಿ 5000=00 ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಆರೋಪಿತನಿಂದ ಜಪ್ತ ಮಾಡಿದ್ದು, ನಂತರ ಆರೋಪಿ, ಇತರೇ ಸಾಮಾಗ್ರಿಗಳೊಂದಿಗೆ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

Friday, August 11, 2017

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 96/2017 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ 10-08-2017 ರಂದು ಬೆಳಗಿನ ಜಾವ 05:00 ಗಂಟೆಯ ಸುಮಾರಿಗೆ ಫಿರ್ಯಾದಿದಾರನು ತನ್ನ ಲಾರಿಯನ್ನು ಎಮ್.ಹೆಚ್.-12/ಎಫ್.ಡಿ-777 ನೇದ್ದನ್ನು ಬೆಂಗಳೂರಿನಿಂದ ಕೆಮಿಕಲ್ ಪೌಡರ್ ತುಂಬಿಕೊಂಡು ಹೊಸಪೇಟೆ ಮಾರ್ಗವಾಗಿ ಪೂನಾಕ್ಕೆ ಉಪ್ಪಲದಿನ್ನಿ ಕ್ರಾಸ್ ಹತ್ತಿರ ಚಲಾಯಿಸಿಕೊಂಡು ಹೋಗುವಾಗ ರೋಡ್ ಹಂಪ್ಸ್ ಇರುವುದನ್ನು ಗಮನಿಸಿ ತನ್ನ ಲಾರಿಗೆ ಇಂಡಿಕೇಟರ್ ಹಾಕಿ ಕೈ ಸನ್ನೆಯನ್ನು ಮಾಡುತ್ತಾ ನಿಧಾನವಾಗಿ ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಸದರಿ ಲಾರಿ ಹಿಂದುಗಡೆಯಿಂದ ಅಂದರೆ ಹೊಸಪೇಟೆ ಕಡೆಯಿಂದ ಕುಷ್ಟಗಿ ಕಡೆಗೆ ಒಂದು ಕಂಟೇನರ್ ಲಾರಿ ನಂ ಆರ್.ಜೆ-14/ಜಿಜಿ-6792 ನೇದ್ದರ ಚಾಲಕನು ತನ್ನ ಲಾರಿಯ ಅಂತರವನ್ನು ಕಾಯ್ದುಕೊಳ್ಳದೆ ಅತೀ ಜೋರಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವನೇ ಫಿರ್ಯಾದಿದಾರನ ಲಾರಿಯ ಹಿಂದಿನ ಎಡಭಾಗಕ್ಕೆ ಜೋರಾಗಿ ಠಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಇದರಿಂದ ಆರೋಪಿತನಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಇದೆ ಅಂತಾ ಮುಂತಾಗಿ ಹೇಳಿಕೆ ನುಡಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ. ಮನುಷ್ಯ ಕಾಣೆ.

ಫಿರ್ಯಾಧಿದಾರರಾದ ಶ್ರೀಮತಿ ಅನಿತಾ ಗಂಡ ಉದಯಕುಮಾರ ಬಿಸೆ ಸಾ: ಕುವೆಂಪು ನಗರ ಕೊಪ್ಪಳ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 07-08-2017 ರಂದು ಬೆಳಿಗ್ಗೆ 09-45 ಗಂಟೆ ಸುಮಾರಿಗೆ ನನ್ನ ಗಂಡ ಉದಯಕುಮಾರ  ವಯ: 30 ವರ್ಷ, ಈತನು  ಮನೆಯಿಂದ ತನ್ನ ಸರ್ಟಿಫಿಕೇಟಗಳನ್ನು ತೆಗೆದುಕೊಂಡು ಶಾಲೆ ಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದು, ನಂತರ ನಾನು ಪೋನ್ ಮಾಡಿದರೆ ಸ್ವಿಚ್ ಆಫ್ ಆಗಿದೆ ನಂತರ ನನ್ನ ಗಂಡನಿಗೆ ಪರಿಚಯದ ಶಕೀರಾ ಇವಳಿಗೆ ಪೋನ್ ಮಾಡಲು ಅವಳ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಕಾರಣ ನನ್ನ ಗಂಡ ಉದಯಕುಮಾರ ಈತನು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಪತ್ತೇ ಮಾಡಿ ಕೊಡಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಗೊಂಡಿದ್ದು ಅದೆ.

Thursday, August 10, 2017

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ. 420, 506 ಐ.ಪಿ.ಸಿ:.
ದಿನಾಂಕ: 09-08-2017 ರಂದು ರಾತ್ರಿ 08-30 ಗಂಟೆಗೆ ಫಿರ್ಯಾದಿದಾರರಾದ ವೀರಭದ್ರಯ್ಯ ತಂದೆ ಮಹಾಲಿಂಗಯ್ಯ ಸೊಪ್ಪಿಮಠ, ಸಾ: ಹೂಲಗೇರಿ, ಹಾ/: ಹಿರೇಮನ್ನಾಪೂರ, ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ತಾವು ತಮ್ಮ ತಂದೆ ತಾಯಿಗೆ 6 ಜನ ಗಂಡು ಮಕ್ಕಳಿದ್ದು, ನಮ್ಮ ಸಹೋದರರಿಗೆ ಸಂಬಂಧಪಟ್ಟಂತೆ ಕುಷ್ಟಗಿ ತಾಲೂಕ ಹೂಲಗೇರಿ ಸೀಮಾದ ಜಮೀನು ಸರ್ವೆ ನಂ: 374/1 ನೇದ್ದರಲ್ಲಿ 5 ಎಕರೆ ಜಮೀನು ಇದ್ದು, ಈ ಜಮೀನು ನಮ್ಮ ಸಹೋದರರ ಹೆಸರಿಗೆ ಜಂಟಿಯಾಗಿ ನಮೂದಿರುತ್ತದೆ. ಹಾಗೂ ಈ ಜಮೀನು ಎಲ್ಲರೂ ಜಂಟಿಯಾಗಿ ಸ್ವಾದೀನ ಇರುತ್ತದೆ. ನನ್ನ ಅಣ್ಣನಾದ ಸಿದ್ದರಾಮಯ್ಯ ಈತನು ಸನ್-2003 ನೇ ಸಾಲಿನ ಜನೇವರಿ ತಿಂಗಳಿನ 7 ನೇ ತಾರೀಖಿನಂದು ಮೃತಪಟ್ಟಿದ್ದು ಇರುತ್ತದೆ. ನಮ್ಮ ಅಣ್ಣತಮ್ಮಂದಿರಿಗೆ ಸಂಬಂಧಪಟ್ಟ ಜಮೀನಿನಲ್ಲಿ ಬೆಲೆಬಾಳುವ ಗ್ರೈನೆಟ್ ಕಲ್ಲು ಬರುತ್ತದೆ ಎಂದು ತಿಳಿದು ನನ್ನ ಅಣ್ಣ ಶಿವಮೂರ್ತಯ್ಯ ಈತನು ನಮ್ಮ ಅಣ್ಣತಮ್ಮಂದಿರಿಗೆ ಎಲ್ಲರಿಗೂ ಗೊತ್ತಾಗದಂತೆ ದಿನಾಂಕ: 05-10-2006 ರಂದು 1] ಶರಣಪ್ಪ ತಂದೆ ಯಲ್ಲಪ್ಪ ಹುಲ್ಲೂರ, ಸಾ: ಹನಮಸಾಗರ, 2] ನಾಗರಾಜ ತಂದೆ ಹನಮಪ್ಪ ಮೇಲಿನಮನಿ, ಸಾ: ಕುಷ್ಟಗಿ ಇವರಿಗೆ ಗುತ್ತಿಗೆ ಆಧಾರದ ಮೇಲೆ ತನ್ನ ಮನೆಯಲ್ಲಿ ಕುಳಿತುಕೊಂಡು ಅವರಿಗೆ 4 ವರ್ಷಗಳ ವರೆಗೆ ಕರಾರು ಒಪ್ಪಂದ ಮಾಡಿಕೊಂಡಿದ್ದು ಹಾಗೂ ಒಂದು ಕ್ಯೂಬಿಕ್ ಮೀಟರಿಗೆ 2500/- ರೂ ಹಾಗೂ ಪ್ರತಿ ಒಂದು ಖಂಡಾ ಕಲ್ಲಿಗೆ ರೂ 70 ರೂಪಾಯಿಯಂತೆ ಈ ಹಣವನ್ನು ಪ್ರತಿ ತಿಂಗಳು ತಮಗೆ ರಾಯಲ್ಟಿ ಹಣವನ್ನು ಕೊಡಬೇಕೆಂದು ತಮ್ಮಷ್ಟಕ್ಕೆ ತಾವೇ ಕರಾರು ಮಾಡಿಕೊಂಡು ಇದಕ್ಕೆ ಶಾಂತಗೌಡ ಪಾಟೀಲ್, ಸಾ: ಚೆನ್ನಪಟ್ಟಣ, ಹಾಗೂ ಎಂ.ಸಿ. ಚೌಡ್ಕಿ, ಸಾ: ಹನಮಸಾಗರ, ಮತ್ತು ನಾಗರಾಜ ಹಕ್ಕಿ, ಸಾ: ಹನಮಸಾಗರ, ಇವರುಗಳು ಸಾಕ್ಷಿ ಸಹಿ ಮಾಡಿಸಿ ಈ ಕರಾರು ಪತ್ರದ ಹಿಂದೆ ಪ್ರತಿಜ್ಞಾಧಾರಕರು ಅಂತಾ ನನ್ನ ಮತ್ತು ಇನ್ನೂಳಿದ ಸಹೋದರರ ಹೆಸರನ್ನು ಬರೆದು ಅದರಲ್ಲಿ ಮೃತಪಟ್ಟ ಸಿದ್ರಾಮಯ್ಯನ ಸಹಿಯನ್ನು ಖೊಟ್ಟಿ ಮಾಡಿ ತನ್ನ ಸಹಿ ಮಾಡಿ ಲೀಜ್ ಕರಾರು ಮಾಡಿದ್ದು, ಗೊತ್ತಾಗಿ ಈ ವಿಷಯವನ್ನು ನನ್ನ ಅಣ್ಣ ಶಿವಮೂರ್ತಯ್ಯ ಈತನಿಗೆ ಕೇಳಲಾಗಿ ನಾನು ಮಾಡಿನಿ ನೀವೇನ್ ಮಾಡ್ಕೊಂತೀರಿ ಮಾಡ್ಕೊರಿ ಇನ್ನೊಂದು ಸಲ ಬಂದರೆ ನಿಮ್ಮ ಕೊಲೆ ಮಾಡಲು ಹೇಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ 2003 ರಲ್ಲಿ ಮೃತಪಟ್ಟ ನನ್ನ ಅಣ್ಣ ಸಿದ್ರಾಮಯ್ಯನ ಸಹಿಯನ್ನು ತಾನೇ ಮಾಡಿ ಹಾಗೂ ತನ್ನ ಸಹಿ ಮಾಡಿ ಇನ್ನೂಳಿದವರ ಹೆಸರನ್ನು ಮಾತ್ರ ಬರೆದು ಸಹಿ ಮಾಡಿಸದೇ ನಮಗೆ ಮೋಸ ಮಾಡುವ ಉದ್ದೇಶದಿಂದ ಲೀಜಗೆ ಕೊಟ್ಟ ಹೊಲದ ಹಣವನ್ನು ತಾನೇ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಂಡು ಸಹೋದರರಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ


Wednesday, August 9, 2017

1] ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 22/2017 ಕಲಂ. 279, 337, 338, 283,  304(ಎ) ಐ.ಪಿ.ಸಿ:.
ದಿನಾಂಕ 08-08-2017 ರಂದು ಬೆಳಗ್ಗೆ 10-00 ಗಂಟೆಗೆ ನಾನು ಮನೆಯಲ್ಲಿ ಇರುವಾಗ ನನ್ನ ತಂದೆ ನನಗೆ ಪೊನ್ ಮಾಡಿ ನೀಲಕಂಠಶ್ವೇರ ಸರ್ಕಲ್ ಹತ್ತಿರ ತನಗೆ ಬಸ್ ಅಪಘಾತ ಮಾಡಿದೆ ಕೂಡಲೇ ಬಾ ಅಂತಾ ಹೇಳಿ ಪೊನ್ ಮಾಡಿದನು ನಾನು ಕೂಡಲೇ ನೀಲಕಂಠಶ್ವೇರ ಸರ್ಕಲ್ ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ನೀಲಕಂಠ ಗುಡಿ ಎದರುಗಡೆ ಇರುವ ಬಸ್ ನಿಲ್ದಾಣದ ಹತ್ತಿರ ರಸ್ತೆ ಮೇಲೆ ಮಲಗಿದ್ದು ನಾನು ನನ್ನ ತಂದೆಗೆ ವಿಚಾರಿಸಲಾಗಿ ನನ್ನ ತಂದೆ ತಿಳಿಸಿದ್ದೇನೆಂದರೆ ನಾನು ಜಿಎಂಎಸ್ ಕೋರಿಯರ್ ಸವರ್ಿಸ್ ಆಫೀಸ್ದಿಂದ ಪಾರ್ಸಲ್ ತೆಗೆದುಕೊಂಡು ನೀಲಕಂಠ ಸರ್ಕಲ್ ಹತ್ತಿರ ಬಂದು ಬಳ್ಳಾರಿ ಹೋಗುವ ಬಸ್ಗೆ ಕಾಯುತ್ತಿರುವಾಗ ಬೆಳಗ್ಗೆ 09-45 ಗಂಟೆಗೆ ಬಸ್ ನಿಲ್ದಾಣದ ಕಡೆಯಿಂದ ಕುಷ್ಟಗಿ -ಬಳ್ಳಾರಿ  ಬಸ್ ಕೆಎ 37 ಎಫ್ 0467 ಬಂದಿದ್ದು ನಾನು ಸದರಿ ಬಸ್ನ ಡ್ರೈವರ್ಗೆ ಪಾರ್ಸಲ್ ಕೊಡುವಾಗ ಒಮ್ಮೇಲೆ ನೀಲಕಂಠ ಸರ್ಕಲ್ ಕಡೆಯಿಂದ ಇನ್ನೂಂದು ಬಸ್ ಅತಿ ಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಓವರ್ ಟೇಕ್ ಮಾಡಿಕೊಂಡು ಬಂದಾಗ ಬಸ್ ನಿಯಂತ್ರಣ ತಪ್ಪಿ ನನಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿರುತ್ತಾನೆ ಅಂತಾ ಹೇಳಿದನು ಸ್ಥಳದಲ್ಲಿದ್ದ ಅಪಘಾತ ಮಾಡಿದ ಬಸ್ ನಂಬರ್ ನೋಡಲಾಗಿ ಕೆಎ 36 ಎಫ್ 1239 ಅಂತಾ ಇದ್ದು ನನ್ನ ತಂದೆ ನೋಡಲಾಗಿ ಹಣೆಗೆ ಭಾರಿ ಒಳಾಪೆಟ್ಟಾಗಿದ್ದು ಮೂಗಿಗೆ ಒಳಪೆಟ್ಟಾಗಿ ಮೂಗಿನಿಂದ ರಕ್ತ ಶ್ರಾವವಾಗಿದ್ದು ಹಾಗೂ ಎದೆಗೆ ತೆರಚಿದ ಗಾಯ ವಾಗಿದ್ದು ಎರಡು ಪಕ್ಕಾಡಿಗೆ ಒಳಪೆಟ್ಟಾಗಿದ್ದು ಇರುತ್ತದೆ. ಗಂಗಾವತಿ ಸರಕಾರಿ ಆಸ್ಪತ್ರೆಯಿಂದ  ಹೆಚ್ಚಿನ ಇಲಾಜು ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಇಲಾಜು ಕುರಿತು ಹೋಗಿದ್ದು ಇರುತ್ತದೆ ಸದರಿ ನೀಲಕಂಠರಾವ್ ತಂದೆ ಚಿದಂಬರ್ರಾವ್ ಕುಲಕಣರ್ಿ ವ:50 ಸಾ: ಗಂಗಾವತಿ ಇತನು ಚಿಕಿತ್ಸೆ ಪಡೆಯುತ್ತಿರುವಾಗ ಗುಣಮುಖವಾಗದೆ 12-05 ಪಿಎಂ ಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2]  ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ: 08-08-2017 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ: ಕೆಎ-25/ಯು-1776 ನೇದ್ದರ ಮೇಲೆ ಫಿರ್ಯಾದಿದಾರರನ್ನು ಕೂಡಿಸಿಕೊಂಡು ತುಮ್ಮರಗುದ್ದಿಯಿಂದ ಯಲಬುರ್ಗಾಕ್ಕೆ ಬರುತ್ತಿದ್ದಾಗ, ತಾನು ನಡೆಸುತ್ತಿದ್ದ ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ರಸ್ತೆಯ ಬದಿಗೆ ಹೋಗುತ್ತಿದ್ದ ಬಂಡಿಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿ, ಮೋಟಾರ್ ಸೈಕಲ್ ನೊಂದಿಗೆ ರಸ್ತೆಯ ಮೇಲೆ ಬಿದ್ದಾಗ, ಫಿರ್ಯಾದಿದಾರರಿಗೆ ಎಡಗಾಲಿ, ಮೋಣಕಾಲ ಹತ್ತಿರ, ಎಡಗಾಲಿನ ಕಿರುಬೆರಳಿನ ಹತ್ತಿರ, ಎಡ ಭುಜಕ್ಕೆ ತೆರಚಿದ ಗಾಯವಾಗಿದ್ದು, ಆರೋಪಿತನಿಗೆ ತಲೆಯ ಮೇಲೆ, ಎಡಮೋಣಕಾಲ ಕೆಳಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು, ಬಲಗೈ ಮುಂಗೈ ಮೇಲೆ, ಬಲ ಕಿವಿಯ ಹತ್ತಿರ, ಎಡಗಾಲ ಹಿಮ್ಮಡಿಗೆ ತೆರೆಚಿದ ಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ. 353, 323, 504, 506 ಐ.ಪಿ.ಸಿ:

ಫಿರ್ಯಾದಿದಾರರಾದ ಶ್ರೀ ಮಲಿಯಪ್ಪ ತಂದೆ ಮಲ್ಲಪ್ಪ, ವಯಸ್ಸು 29 ವರ್ಷ, ಉ: ಕಂಪ್ಯೂಟರ್ ಆಪರೇಟರ್, ಗ್ರಾಮ ಪಂಚಾಯತ ಮಲ್ಲಾಪೂರು ಸಾ: ಮಲ್ಲಾಪೂರು ತಾ: ಗಂಗಾವತಿ, ಫಿರ್ಯಾದಿಯನ್ನು ನೀಡಿದ್ದು, ದಿನಾಂಕ:- 08-08-2017 ರಂದು ಮಧ್ಯಾಹ್ನ 12:10 ಗಂಟೆಯ ಸುಮಾರಿಗೆ ಪಂಚಾಯತಿಯ ಪಿ.ಡಿ.ಓ. ರವರು ನನಗೆ ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿ & ಕೋಡ್ ಸಂಖ್ಯೆಯು ಜಿ.ಪಿ.ಎಸ್. ಮಾಡಲಾಗಿದೆಯೋ ಅಥವಾ ಇಲ್ಲವೆಂದು ಪ್ರಶ್ನಿಸಿದಾಗ, ನಾನು ಈಗಾಗಲೇ ಜಿ.ಪಿ.ಎಸ್. ಮಾಡಲಾಗಿದೆ ತಾಂತ್ರಿಕ ಹಾಗೂ ಇಂಟರ್ ನೆಟ್ ಸೌಲಭ್ಯ ಸರಿಯಾಗಿ ಇಲ್ಲದಿರುವದರಿಂದ ಕೆಲವೊಂದು ಅಪಲೋಡ್ ಆಗಿಲ್ಲವೆಂದು ಹೇಳಿದೆನು.  ಆಗ ಅಲ್ಲಿಯೇ ಇದ್ದ ಪಂಚಾಯತಿ ಸದಸ್ಯರಾದ ಜೆ.ಪಿ. ನಾರಾಯಣಗೌಡ ಇವರು ನನಗೆ ಏಕಾಏಕಿಯಾಗಿ ಈ ಸೂಳೇ ಮಗ ತನಗೆ ಬೇಕಾದ ಫಲಾನುಭವಿಗಳನ್ನು ಬೇರೆ ಒಬ್ಬ ಸದಸ್ಯರ ಮಾತು ಕೇಳಿ ಅಪ್ ಲೋಡ್ ಮಾಡಿಸಿದ್ದಾನೆಂದು ಹೇಳಿ ಮೈಮೇಲಿನ ಶರ್ಟ ಹಿಡಿದು ಎಳೆದಾಡಿ ಹಿಗ್ಗಾ ಮುಗ್ಗಾ ತಳಿಸಿ ಹೊಡಿ-ಬಡಿ ಮಾಡಿದನು.  ಅಲ್ಲದೇ ಲೇ ಸೂಳೇ ಮಗನೇ ನೀ ಯಾವನಲೇ ಯಾರಲೇ ನಿನಗೆ ಕೆಲಸ ಮಾಡಲು ಹೇಳಿರುತ್ತಾರೆ ಅಲ್ಲದೇ ನನ್ನ ಮನೆಯವರೆಲ್ಲರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಮತ್ತು ಇನ್ನು ಮುಂದೆ ನೀನು ಕೆಲಸ ಹೇಗೆ ಮಾಡುತ್ತೀಯಾ ಮಾಡಲೇ ನೀನೇನಾದರೂ ಇಲ್ಲಿ ಬಂದು ಕೆಲಸ ಮಾಡಿದ್ದಲ್ಲಿ ನಿನಗೆ ಜೀವ ಸಹಿತ ಉಳಿಸುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ.  ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, August 8, 2017

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 109/2017 ಕಲಂ. 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರ ಮಗ ಮೃತ ಭೀರಲಿಂಗ ಮತ್ತು ಅವರ ಸಹೋದರನ ಮಗ ಭೀಮಣ್ಣ ಇಬ್ಬರೂ ಕೂಡಿ ತಮ್ಮ ತಮ್ಮ ಸೈಕಲ್ಗಳನ್ನು ತೆಗೆದುಕೊಂಡು ಕೆಲಸದ ಸಲುವಾಗಿ ಉ.ರಾಂಪುರಕ್ಕೆ ಹೋಗುತ್ತಿರುವಾಗ ಸಂಜೆ 3-40 ಗಂಟೆಗೆ ಹಾಗಲ್ದಾಳ ಇನ್ನೂ ಸ್ವಲ್ಪ ದೂರ ಇದ್ದಾಗ ಸರಕಾರಿ ಬಸ್ ನಂ : ಕೆ.ಎ-37/ಎಫ್-490 ನೇದ್ದರ ಚಾಲಕ ಹನುಮಪ್ಪ ತಂದೆ ಶರಣಪ್ಪ ಚೌರಿ ಈತನು ತಾನು ನಡೆಸುತ್ತಿದ್ದ ಬಸ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರಸ್ತೆಯಲ್ಲಿ ಸೈಕಲ್ ತೆಗೆದುಕೊಂಡು ಮುಂದೆ ಹೋಗುತ್ತಿದ್ದ ಫಿರ್ಯಾದಿದಾರರ ಮಗ ಭೀರಲಿಂಗನ ಮೇಲೆ ಹಿಂದಿನಿಂದ ಬಸ್ ಹಾಯಿಸಿದ್ದು ಇದರಿಂದ ಭೀರಲಿಂಗನ ತಲೆ ಪೂರ್ತಿ ಜಜ್ಜಿ ಹೋಗಿ ಮೇದುಳು ಹೊರ ಚೆಲ್ಲಿ, ಬಲಗೈ ರಟ್ಟೆಗೆ ತೀವ್ರಗಾಯವಾಗಿ ಎಲುಬು ಕಿತ್ತಿದಂತೆ ಕಾಣುತ್ತಿದ್ದು, ಎಡತೊಡೆ ಸೊಂಟದಿಂದ ಮೊಣಕಾಲ ತನಕ ತೀವ್ರಗಾಯವಾಗಿ ಮಾಂಸಖಂಡ ಕಿತ್ತಿದೆ. ಬಲಗಡೆಯ ತೊಡೆಯ ಒಳಭಾಗ ತೀವ್ರಗಾಯವಾಗಿ ಚರ್ಮ ಕಿತ್ತಿದೆ. ಶಿಶ್ನ ಭಾಗ ಪೂತರ್ಿ ಜಜ್ಜಿ ಹೋಗಿ ತೀವ್ರಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ. 323, 324, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್/ಟಿ. ಕಾಯ್ದೆ
ದಿನಾಂಕ 08-08-2017 ರಂದು 00-15 ಗಂಟೆಗೆ ಫಿರ್ಯಾದಿ ರಮೇಶ ತಂದೆ ಎ. ಪಾಮಣ್ಣ, ವಯಾ: 19 ವರ್ಷ, ಸಾ: ಅಂಬೇಡ್ಕರ್ ನಗರ ಗಂಗಾವತಿ. ಇವರು ಫಿರ್ಯಾದಿಯನ್ನು ಹಾಜರುಪಡಿಸಿದ್ದು, ದಿನಾಂಕ: 07-08-2017 ರಂದು ರಾತ್ರಿ 10-15 ಗಂಟೆ ಸುಮಾರಿಗೆ ಫಿರ್ಯಾದಿಯು ಊಟ ಮಾಡಿ ನಮ್ಮ ಓಣಿಲ್ಲಿ ನಿಂತುಕೊಂಡಿದ್ದಾಗ ಆರೋಪಿತರು ಬಂದಿದ್ದು ಸದರಿ ಆರೋಪಿತರಿಗೆ ಫಿರ್ಯಾದಿಯು ನೋಡಿದ್ದರಿಂದ ಯಾಕಲೇ ನಮಗೆ ಗುರಾಯಿಸ್ತಿಯಾ, ಮಾದಿಗ ಸೂಲೇಮಕ್ಕಳ ತಿಂಡಿ ಬಾಳಾ ಆಗಿದೆ ಈ ಮಾದಿಗ ಸೂಳೇಮಗನ್ನ ಬಿಡಬಾಡ್ರಿ ಅಂತಾ ಫಿರ್ಯಾದಿಗೆ ಆರೋಪಿ ರಾಘವೇಂದ್ರನು ತಲೆಯಿಂದ ಮೂಗಿಗೆ ಗುದ್ದಿ ರಕ್ತಗಾಯ ಮಾಡಿದ್ದು ಹಾಗೂ ಆರೋಪಿ ಶಿವು ಬಲೀಸ್ ನಿಂದ ಹೊಡೆ-ಬಡೆ ಮಾಡಿದ್ದು ಅಲ್ಲದೆ ಉಳಿದ ಆರೋಪಿತರು ಸಹ ಹೊಡೆ-ಬಡೆ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 32, 34  Karnataka Excise Act.

ದಿನಾಂಕ: 07-08-2017 ರಂದು ಮದ್ಯಾಹ್ನ 12-15 ಗಂಟೆಗೆ ಕೊಪ್ಪಳದ, ಸಿಂದೋಗಿ ರಸ್ತೆಯ, ಆದರ್ಶ ಲಾಡ್ಜ್ ಹತ್ತಿರ, ಸಾರ್ವಜನಿಕ ರಸ್ತೆಯಲ್ಲಿ ಆರೋಪಿತಳು ಅನಧೀಕೃತವಾಗಿ ಯಾವುದೇ ಲೈಸನ್ಸ ವಗೈರೆ ಇಲ್ಲದೇ ಅಕ್ರಮವಾಗಿ ಸುಮಾರು 1012.68=00 ರೂ. ಬೆಲೆಬಾಳುವ ಹೈವಾರ್ಡ್ಸ್ ಕಂಪನಿಯ ಮಧ್ಯದ 36 ಟೆಟ್ರಾ ಪಾಕೇಟಗಳ ಮಧ್ಯವನ್ನು ರೇಣುಕಾ ಬಾರ್ ಕೊಪ್ಪಳದಿಂದ ತೆಗೆದುಕೊಂಡು ಸಾಗಾಟ ಮಾಡುತ್ತಿದ್ಧಾಗ ಶ್ರೀ ರವಿ.ಸಿ.ಉಕ್ಕುಂದ ಪಿ.ಐ. ನಗರ ಠಾಣೆ ರವರು ದಾಳಿ ಮಾಡಿದ್ದು ಸದರಿ ಮದ್ಯವನ್ನು ಆರೋಪಿತಳಿಂದ ಜಪ್ತ ಮಾಡಿಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Monday, August 7, 2017

ದಿನಾಂಕ. 06-08-2017 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ಫಿರ್ಯಾದಿದಾರರು ಠಾನೆಗೆ ಹಾಜರಾಗಿ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 06-08-2017 ರಂದು ಫಿರ್ಯಾದಿದಾರರು ವಾಸಮಾಡು ಸದಾಶಿವ ನಗರದ ಚಂದಾಲಿಂಗಪ್ಪ ಯಲಿಗಾರ ಇವರ ಮಗಳ ಮನೆಯ ಪೂಜೆ ನಿಡಗುಂದಿ ಗ್ರಾಮದಲ್ಲಿ ಇರುವ ಕಾರಣ ಅವರು ಮನೆ ಪೂಜೆಗೆ ಹೋಗಲು ತಮ್ಮ ಸಂಭಂದಿಕರಿಗೆ ಮತ್ತು ನಗರದ ಪರಿಚಯದವರನ್ನು ಕರೆದುಕೊಂಡು 407 ಟೆಂಪೋ ವಾಹನ ನಂಬರ. KA-26/5551  ನೆದ್ದರಲ್ಲಿ ಸುಮಾರು 25 ರಿಂದ 30 ಜನರು ಕುಳಿತುಕೊಂಡರು. ಚಾಲಕನು ವಾಹನವನ್ನು ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೋಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಶರ್ಮಾ ಪೆಟ್ರೋಲ್ ಬಂಕ್ ಸಮೀಪ ಗದಗ ಕಡೆಗೆ ಹೋಗುತ್ತಿರುವಾಗ ಗದಗ ಕಡೆಯಿಂದ ಟಿಪ್ಪರ ನಂಬರ. KA-22/C-3957 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದಲ್ಲಿರುವ ರೋಡ ಡಿವೈಡರ ಮೇಲೆ ಹತ್ತಿಸಿ ಪೀರ್ಯಾದಿದಾರರು ಕುಳಿತುಕೊಂಡು ಹೋರಟಿದ್ದ 407 ವಾಹನಕ್ಕೆ ಟಕ್ಕರ್ ಮಾಡಿ ಅಪಘಾತಮಾಡಿದ್ದರಿಂದ 407 ವಾಹನದ ಚಾಲಕ ಮಾಲತೇಶ ತಳವಗೇರಿ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುಮಾರು 24 ರಿಂದ 26 ಜನರಿಗೆ ಸಾದಾ ಮತ್ತು ಗಂಬೀರ ಸ್ವರೂಪದ ಗಾಯಗಳು ಆಗಿರುತ್ತವೆ. ಗಂಬೀರವಾಗಿ ಗಾಯಗೊಂಡ ಮೀನಾಕ್ಷಿ ಗಂಡ ಮಂಜುನಾಥ ಅಬ್ಬಿಗೇರಿ ವಯ. 45 ವರ್ಷ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿರುತ್ತಾರೆ ಅಪಘಾತಮಾಡಿದ ಟಿಪ್ಪರ ಚಾಲಕನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 38/2017 ಕಲಂ. 279, 337, 338, 304 (ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Sunday, August 6, 2017

1]  ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 112/2017 ಕಲಂ. 447, 427, 341, 323, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ 05-08-2017 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಹಿರೇಖೇಡ ಸೀಮೇಯ ಫಿರ್ಯಾದಿಯ  ಹೊಲದಲ್ಲಿ ಸಜ್ಜೆ ಬೆಳೆ ಇದ್ದುದನ್ನು ಆರೋಪಿತರಾದ ಕಮಲಾಕ್ಷೀ ಗಂಡ ವಿರುಪಾಕ್ಷಪ್ಪ ಹಾಗೂ ಆಕೆಯ ಗಂಡ ವಿರುಪಾಕ್ಷಪ್ಪ ಮತ್ತು ಟ್ರ್ಯಾಕ್ಟರ್  ಡ್ರೈವರ್  ಇವರು ಕೂಡಿಕೊಂಡು ಹೊಲವನ್ನು ಅತೀಕ್ರಮ ಪ್ರವೇಶ ಮಾಡಿ  ಬೆಳೆ ನಾಶ  ಮಾಡುತ್ತಿದ್ದಾಗ ಫಿರ್ಯಾದಿ ತಡೆಯಲು ಹೋದಾಗ ಕಮಲಾಕ್ಷಿ ಇವಳು ಫಿರ್ಯಾದಿಯ ಕುತ್ತಿಗೆ ಹಿಡಿದು ಮತ್ತು ಆಕೆಯ ಗಂಡನು ಕೈಗಳಿಂದ ಹಲ್ಲೆ ಮಾಡಿದ್ದು ಮತ್ತು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಮುಂಜಾನೆ 9-05 ಗಂಟೆಗೆ ಠಾಣೆಯಲ್ಲಿದ್ದಾಗ, ಜಹಗೀರಗುಡದೂರ ಗ್ರಾಮದಲ್ಲಿ ಬಶೆಟ್ಟೆಪ್ಪ ತಂದೆ ರಾಚಪ್ಪ ನರೇಗಲ ಸಾ: ಜಹಗೀರಗುಡದೂರ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-244, 398  ರವರೊಂದಿಗೆ ಠಾಣೆಯಿಂದ ಹೊರಟು ಜಹಗೀರಗುಡದೂರ ಗ್ರಾಮದಲ್ಲಿ ಸಮುದಾಯ ಭವನದ ಹತ್ತಿರ ಮುಂಜಾನೆ 9-50 ಗಂಟೆಗೆ ತಲುಪಿ ಮುಂಜಾನೆ 9-55 ಗಂಟೆಗೆ ದಾಳಿಮಾಡಿದಾಗ ಬಶೆಟ್ಟೆಪ್ಪ ತಂದೆ ರಾಚಪ್ಪ ನರೇಗಲ್ ಸಾ: ಜಹಗೀರಗುಡದೂರ ಇವನು ಸಿಕ್ಕಿಬಿದಿದ್ದು ಅವನ 1] 90 .ಎಂ.ಎಲ್.ಅಳತೆಯ 53 ಟೆಟ್ರಾ ಪಾಕೇಟಗಳು HAYWARDS   ಪ್ರತಿಯೊಂದಕ್ಕೆ ಎಂ.ಆರ್.ಪಿ. 28.13 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1,490-53 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 300-00 ರೂಪಾಯಿ ಸಿಕ್ಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 6-00 ಗಂಟೆಗೆ ನಮೂದಿತ ಆರೋಪಿತರು ಮುದೇನೂರು ಗ್ರಾಮದ ದೋಟಿಹಾಳ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದಾಗ ಶ್ರೀ ಈರಣ್ಣ ಎ.ಎಸ್.ಐ, ರವರು ಸಿಬ್ಬಂದಿ ಸಮೇತ ದಾಳಿ ಆರೋಪಿತರಿಂದ ಆರೋಪಿ ನಂ 1 ಶಿವಪ್ಪ ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ ನಂ 2 ಸುಭಾಸ ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಿಗೇ 48 ಪ್ಯಾಕೇಟಗಳ ಅಂದಾಜು ಕಿಮ್ಮತ್ತು 3264-00 ರೂ ಬೆಲೆ ಬಾಳುವವಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 19-00 ಗಂಟೆಗೆ ನಮೂದಿತ ಆರೋಪಿತನು ಮುದೇನೂರ ಗ್ರಾಮದ ಲಂಡಖೇನ ಹಳ್ಳದ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ಶೇಖಪ್ಪ ಇತನಿಂದ 24 ಟೆಟ್ರಾ ಒರಿಜನಲ್ ಚಾಯ್ಸ ಡಿಲಕ್ಸ ವಿಸ್ಕಿ ಒಟ್ಟು 1632-00 ಬೆಲೆ ಬಾಳುವವಗಳನ್ನು ಶ್ರೀ ದೊಡ್ಡಪ್ಪ ಎ.ಎಸ್., ರವರು ಅಕ್ರಮ ದಾಳಿ ಕಾಲಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5]  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 32, 34 Karnataka Excise Act.
ದಿನಾಂಕ: 05-08-2017 ರಂದು ಸಂಜೆ 6-00 ಗಂಟೆಗೆ ನಮೂದಿತ ಆರೋಪಿತರು ಮುದೇನೂರು ಗ್ರಾಮದ ದೋಟಿಹಾಳ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದ ಆರೋಪಿ ನಂ 1 ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಾಗೂ ಆರೋಪಿ ನಂ 2 ರವರಿಂದ 24 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಹಿಗೇ 48 ಪ್ಯಾಕೇಟಗಳ ಅಂದಾಜು ಕಿಮ್ಮತ್ತು 3264-00 ರೂ ಬೆಲೆ ಬಾಳುವವಗಳನ್ನು ಶ್ರೀ ಈರಣ್ಣ ಎ.ಎಸ್.ಐ, ರವರು ಅಕ್ರಮ ದಾಳಿ ಕಾಲಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.        
6]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 182/2017 ಕಲಂ. 279, 338 ಐ.ಪಿ.ಸಿ:.
ದಿ:05-08-2017 ರಂದು ಸಂಜೆ 5-20 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕೊಪ್ಪಳದಿಂದ ಹಾಲವರ್ತಿಗೆ ತಮ್ಮ ಮೋಟಾರ ಸೈಕಲ್ ದಲ್ಲಿ ಹೋಗುವಾಗ ಮಾರ್ಗದ ಕೃಷ್ಣ ಇಟ್ಟಂಗಿ ಇವರ ಕಡಿ ಕ್ರಷರ್ ಮಿಷನ್ ಹತ್ತಿರ ತನ್ನ ಮುಂದೆ ಹೊರಟಿದ್ದ ಮೋಟಾರ ಸೈಕಲ್ ನಂ: ಕೆಎ-37/ಇಬಿ-2676 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ಹೋಗುವಾಗ ತನ್ನ ವಾಹನ ನಿಯಂತ್ರಿಸದೇ ಪಲ್ಟಿ ಮಾಡಿಕೊಂಡು ಬಿದ್ದಿದ್ದರಿಂದ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
7]  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ. 87 Karnataka Police Act.

ದಿನಾಂಕ: 05-08-2017 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ಆರೋಪಿತರು ಮಂಡಲಗೇರಿ ಗ್ರಾಮದ ಊರೊಳಗೆ ಹೋಗುವ ರಸ್ತೆಯ ಪಕ್ಕದ ಹುಣಸಿಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ ಮೇಲೆ ದಾಳಿ ಮಾಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಇಸ್ಪೇಟ್ ಜೂಜಾಟದ ಕಣದಿಂದ ಒಂದು ಟಾವೆಲ್ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2700=00 ರೂ.ಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Saturday, August 5, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ. 279, 283, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ: 04-08-2017 ರಾತ್ರಿ 9-45 ಗಂಟೆ ಸುಮಾರಿಗೆ ಹೊಸನಿಂಗಾಪೂರ-ಮುನಿರಾಬಾದ ಸರ್ವಿಸ್ ರಸ್ತೆಯಲ್ಲಿ ಪೋಚಮ್ಮ ದೇವಿ ಗುಡಿಯ ಮುಂದೆ ತಮ್ಮ ಕ್ಲಬನಲ್ಲಿ ಕ್ಲಬ್ ಬಾಯ್ ಕೆಲಸ ಮಾಡಿಕೊಂಡಿದ್ದ ಅರುಣ ತಂದೆ ಜಡಿಯಪ್ಪ ನೇಕಾರ ವಯ: 21, ಜಾತಿ: ನೇಕಾರ, ಉ: ಕ್ಲಬ್ ಬಾಯ್ ಸಾ: ಹೊಸಪೇಟೆ ಇತನು ತನ್ನ ಮೋಟರ ಸೈಕಲ್ ನಂ. ಕೆಎ-36/ಜೆ-3824 ನೇದ್ದನ್ನು ಹೊಸನಿಂಗಾಪೂರ ಕಡೆಯಿಂದ ನಿರ್ಲಕ್ಷತನದಿಂದ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು, ಇಂಡಿಕೇಟರ್ ಇಲ್ಲದೇ ರಸ್ತೆಯಲ್ಲಿ ತಿರುಗಾಡುವ ವಾಹನಗಳಿಗೆ ಅಡತಡೆಯಾಗಿ ತೊಂದರೆಯಾಗುವಂತೆ ನಿಲ್ಲಿಸಿದ್ದ ಟಿಪ್ಪರ ಲಾರಿ ನಂ. ಕೆಎ-37/6579 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿಕೊಂಡು ಅರುಣ ನೇಕಾರ ಇತನು ಮೃತಪಟ್ಟಿರುತ್ತಾನೆ.  ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಟಿಪ್ಪರ ಲಾರಿ ನಂ. ಕೆಎ-37/6579 ಮತ್ತು ಅದರ ಚಾಲಕನ ಮೇಲೆ ಮತ್ತು ಅರುಣ ತಂದೆ ಜಡಿಯಪ್ಪ ನೇಕಾರ ಸಾ: ಹೊಸಪೇಟೆ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.  ಟಿಪ್ಪರ ಲಾರಿ ನಂ. ಕೆಎ-37/6579 ನೇದ್ದರ ಚಾಲಕನು ತನ್ನ ಟಿಪ್ಪರ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದರಿಂದ ಆತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ ಎಂದು ಮುಂತಾಗಿ ಪಿರ್ಯಾದಿಯ ಸಾರಾಂಶ ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2]  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ. 32, 34 Karnataka Excise Act.
ದಿನಾಂಕ: 04-08-2017 ರಂದು ಸಾಯಾಂಕಾಲ 19-15 ಗಂಟೆಗೆ ಠಾಣೆಯಲ್ಲಿದ್ದಾಗ, ಹನಮಸಾಗರ ಎ.ಪಿ.ಎಂ.ಸಿ. ಹತ್ತಿರ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-244, 398  ರವರೊಂದಿಗೆ ಠಾಣೆಯಿಂದ ಹೊರಟು ಜಿ.ಬಿ. ಸರ್ಕಲ್ ಹತ್ತಿರ ಸಾಯಾಂಕಾಲ 19-30 ಗಂಟೆಗೆ ತಲುಪಿ ಸಾಯಾಂಕಾಲ 19-35 ಗಂಟೆಗೆ ದಾಳಿಮಾಡಿದಾಗ ಅಣ್ಣಪ್ಪ ತಂದೆ ಯಲ್ಲಪ್ಪ ಬದಾಮಿ ಸಾ: ಹನಮಸಾಗರ ಸಿಕ್ಕಿಬಿದಿದ್ದು ಅವನ 1] 90 .ಎಂ.ಎಲ್.ಅಳತೆಯ 52 ಟೆಟ್ರಾ ಪಾಕೇಟಗಳು HAYWARDS   ಪ್ರತಿಯೊಂದಕ್ಕೆ ಎಂ.ಆರ್.ಪಿ. 28.13 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1,462-76 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 220-00 ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಸಾಯಾಂಕಾಲ 19-35 ಗಂಟೆಯಿಂದ ಸಾಯಾಂಕಾಲ 20-45  ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಬಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾದ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 181/2017 ಕಲಂ. 34 ಕರ್ನಾಟಕ ಅಬಕಾರಿ ಕಾಯ್ದೆ:
ದಿ:04-08-2017 ರಂದು ಬೆಳಿಗ್ಗೆ 10-10 ಗಂಟೆಗೆ ಠಾಣಾ ವ್ಯಾಪ್ತಿಯ ಯಲಮಗೇರಿ ತಾಂಡಾದಲ್ಲಿ ಓರ್ವ ಮಹಿಳೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಸಂಗಡ ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಬೆಳಿಗ್ಗೆ 10-50 ಗಂಟೆಗೆ ದಾಳಿ ಮಾಡಿ ಆರೋಪಿತಳನ್ನು ವಶಕ್ಕೆ ತೆಗೆದುಕೊಂಡು, ವಿಂಡ್ಸರ ಡೀಲಕ್ಸ ವಿಸ್ಕಿ. 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂ.ಕಿ. 28=13 ರೂ. ಹೀಗೆ ಒಟ್ಟು 35 ಟೆಟ್ರಾಪಾಕೇಟಗಳು ಅಂ.ಕಿ. 984=55. ರೂ. ಬೆಲೆಬಾಳುವವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.


 
Will Smith Visitors
Since 01/02/2008