Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Tuesday, September 12, 2017
1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 207/2017 ಕಲಂ: 78(3) Karnataka Police Act.
ದಿನಾಂಕ 11-09-2017
ರಂದು 8-15 ಪಿ.ಎಮ್ ಗಂಟೆಯ ಸುಮಾರಿಗೆ
ಆರೋಪಿತನಾದ ಖಾಸಿಂ
ಅಲಿ ತಂದೆ ಬುಡನ್ ಸಾಬ ಕಡದಾಲ್ @ ತೌಡ್ ವಯಾ: 48 ವರ್ಷ, ಜಾ: ಮುಸ್ಲಿಂ, ಉ: ತೌಡ ವ್ಯಾಪಾರ, ಸಾ:
ಗುಂಡಮ್ಮ ಕ್ಯಾಂಪ್ ಗಂಗಾವತಿ ಈತನು ಗಂಗಾವತಿ ನಗರದ ಗುಂಡಮ್ಮ ಕ್ಯಾಂಪಿನ
ಆಂಜಿನೇಯ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು
1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ
ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ
ಪಂಚರ ಸಮಕ್ಷಮ ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ ಸಿಬ್ಬಂದಿಯೊಂದಿಗೆ ದಾಳಿ
ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 890-00. 02] ಮಟಕಾ ನಂಬರ ಬರೆದ 2 ಮಟ್ಕಾ ಪಟ್ಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ
00-00 ದೊರೆತಿದ್ದು. ಸದರಿ ಆರೋಪಿತನ ಹತ್ತಿರ
ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರತ್ಯೇಕವಾಗಿ ಪಂಚನಾಮೆಯನ್ನು ಬರೆದು ಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ: 457, 380 ಐ.ಪಿ.ಸಿ:
ದಿನಾಂಕ: 11-09-2017 ರಂದು ಸಂಜೆ 6-45 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ
ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಹುಲಗಿ ಗ್ರಾಮದಲ್ಲಿರುವ ತಮ್ಮ ಮೊಬೈಲ್ ಅಂಗಡಿ ರಿಹಾನ್ ಮೊಬೈಲ್ ಶಾಪ್ ನಲ್ಲಿ ದಿನಾಂಕ: 10-09-2017 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 11-09-2017 ರಂದು ಬೆಳಗಿನ ಜಾವ 5-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಸದರಿ ಅಂಗಡಿಯ ಶೆಟ್ರಸ್ ನ್ನು ಮುರಿದು ಒಳ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ 1] HP ಕಂಪನಿಯ 1 ಲ್ಯಾಪ್ ಟಾಪ್ ಅಂ.ಕಿ. 10,000-00 ರೂ., 2] ಒಂದು ಸ್ಯಾಮಸಂಗ್ ಜೆ-7 ಮೊಬೈಲ್ ಪೋನ್ ಅಂ.ಕಿ. 5000-00 ರೂ., 3] ಒಂದು ಏಸಸ್ ಜೆನ್-3 ಮೊಬೈಲ್ ಪೋನ್ ಅಂ.ಕಿ. 5000-00 ರೂ., 4] ಒಂದು ಏಸಸ್ ಮ್ಯಾಕ್ಸ್ ಮೊಬೈಲ್ ಪೋನ್ ಅಂ.ಕಿ. 4900-00 ರೂ. ಒಟ್ಟು 24,900-00 ರೂ. ಮೌಲ್ಯದ ಲ್ಯಾಪಟಾಪ್ ಮತ್ತು ಮೊಬೈಲ್ ಪೋನಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪ್ರಕರಣ ದಾಖಲಸಿಕೊಂಡು ತನಿಖೆ
ಕೈಕೊಂಡಿರುತ್ತದೆ.
Posted by Koppal District Police at 10:05 AM 0 comments
Monday, September 11, 2017
1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 242/2017 ಕಲಂ: 279, 304(ಎ) 283 ಐ.ಪಿ.ಸಿ ಸಹಿತ 187 ಐ.ಎಂ.ವಿ.
ಕಾಯ್ದೆ:
ದಿನಾಂಕ: 10-09-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮೃತ ಪರಶುರಾಮ ತಂದೆ ವೀರಬಸಪ್ಪ ಜಂತ್ಲಿ ವಯ: 42, ಜಾತಿ: ಮೋಚಿ, ಉ: ವಿ.ಎನ್.ಸಿ. ಹೈಸ್ಕೂಲ್ ಶಿಕ್ಷಕರು ಸಾ: ಅಳವಂಡಿ ಹಾ/ವ ಮುನಿರಾಬಾದ ಇವರು ತಮ್ಮ ಮೋಟರ ಸೈಕಲ್ ನಂ. ಕೆಎ-37/ಇಇ-7884 ನೇದ್ದರಲ್ಲಿ ಮುನಿರಾಬಾದಿಂದ ಹುಲಗಿ ಕಡೆಗೆ ಹೋಗುವಾಗ ಎನ್.ಎಚ್-50 ರಸ್ತೆಯನ್ನು ದಾಟುತ್ತಿರುವಾಗ ಆರೋಪಿತನು ತನ್ನ ಲಾರಿ ನಂ. ಟಿ.ಎನ್-39/ಸಿಝಡ್-5268 ನೇದ್ದನ್ನು ಹಿಟ್ನಾಳ ಟೋಲ್ ಗೇಟ ಕಡೆಯಿಂದ ಹೊಸಪೇಟೆ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಪರಶುರಾಮ ಇವರು ಮೃತಪಟ್ಟಿರುತ್ತಾರೆ. ಮತ್ತು ಈ ಅಪಘಾತಕ್ಕೆ ಎನ್.ಎಚ್-50 ರಸ್ತೆಯನ್ನು ಜಂಕ್ಷನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ಇದನ್ನು ನಿರ್ಮಾಣ ಮಾಡಿದ ಎನ್.ಎಚ್-50 ಇದರ ಪ್ರಾಧಿಕಾರದ ಅಭಿಯಂತರರು ಕಾರಣರಾಗಿರುತ್ತಾರೆಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
Posted by Koppal District Police at 9:59 AM 0 comments
Sunday, September 10, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 208/2017 ಕಲಂ: 279, 337, 338 ಐ.ಪಿ.ಸಿ:
ದಿನಾಂಕ:-09-09-2017
ರಂದು ಪಿರ್ಯಾದಿದಾರರು ಮತ್ತು ಮಂಗಳಗೌರಮ್ಮ, ವಿಕಾಸ್, ಅಮೃತಾ, ತೇಜಸ್ ಮತ್ತು ಕಾರ್ ನಂ ಕೆ.ಎ-36/ಬಿ
1765 ನೆದ್ದರ ಚಾಲಕ ವಿಶ್ವನಾಥ ರವರು ಕೂಡಿ ಸದ್ರಿ ಕಾರಿನಲ್ಲಿ ರಾಯಚೂರನಿಂದ ತೊರಣಗಲ್ ಕಡೆಗೆ ಕಾರಟಗಿ
ಮುಖಾಂತರ ಸಿದ್ದಾಪೂರ ದಾಡಿ ಕಾರ್ ಚಲಾಯಿಸುತ್ತಿದ್ದ ವಿಶ್ವನಾಥ ಇವರು ಬೆಳಿಗ್ಗೆ 10-30 ಗಂಟೆಗೆ ಕಾರನ್ನು
ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ್ಗೆ ಬರಗೂರು ಕ್ರಾಸ್ ಹತ್ತಿರ ಯಾವುದೋ ಬೀದಿ ನಾಯಿ ರಸ್ತೆಗೆ
ಅಡ್ಡ ಬಂದಿದ್ದರಿಂದ ಕಾರ್ ಚಾಲಕ ವಿಶ್ವನಾಥ ರವರು ಕಾರಿನ ವೇಗದ ನಿಯಂತ್ರಣ ಕಾಯ್ದುಕೊಳ್ಳದೇ ನಾಯಿಯನ್ನು
ತಪ್ಪಿಸಲು ರಸ್ತೆಯ ಎಡಕ್ಕೆ ತೆಗೆದುಕೊಂಡಿದ್ದರಿಂದ ಕಾರ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ
ಗದ್ದೆಯಲ್ಲಿ ಹೋಗಿ ಪಲ್ಟಿಯಾಗಿ ಬಿದ್ದು ಕಾರಿನಲ್ಲಿದ್ದ ಮಂಗಳಗೌರಮ್ಮ ರವರಿಗೆ ಬುಜಕ್ಕೆ ಗಂಭೀರ ಒಳಪೆಟ್ಟು
ರಕ್ತಗಾಯವಾಗಿ ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಮಂಗಳಗೌರಮ್ಮ ಇವರಿಗೆ ಹೆಚ್ಚಿನ ಚಿಕಿತ್ಸೆ
ಕುರಿತು ಮಲ್ಲಿಕಾರ್ಜುನ ನರ್ಸಿಂಗ್ ಹೋಮ್ ದಲ್ಲಿ ದಾಖಲು ಮಾಡಿ ಬಂದು ದೂರು ಕೊಟ್ಟಿರುತ್ತವೆ
ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂಗ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
Posted by Koppal District Police at 10:44 AM 0 comments
Saturday, September 9, 2017
1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ: 87 Karnataka Police Act.
ದಿನಾಂಕ 08-09-2017 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ಪಿ.ಎಸ್.ಐ ಶ್ರೀ ವೀರಭದ್ರಪ್ಪ ಪಿ.ಎಸ್.ಐ
ರವರು ಠಾಣೆಯಲ್ಲಿದ್ದಾಗ ಕನಕಗಿರಿ ಪಟ್ಟಣದಲ್ಲಿ ನೀರಲೂಟಿ ರಸ್ತೆೆಯಲ್ಲಿರುವ ಹನುಮೇಶಪ್ಪ ಭತ್ತದ ಇವರ
ಕಾಂಪ್ಲೆಕ್ಸ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆದಿರುವುದಾಗಿ ಭಾತ್ಮಿ ಬಂದ ಮೇರೆಗೆ ರಾತ್ರಿ 7-30 ಗಂಟೆಯಿಂದ
8:30 ಗಂಟೆಯ ಅವಧಿಯಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ
ಪೊಲೀಸ್ರು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ ಆಡುತ್ತಿದ್ದ 08 ಜನರು ಸಿಕ್ಕಿದ್ದು,
ಸಿಕ್ಕ ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ. 10,180=00 ಗಳನ್ನು ಮತ್ತು ಜೂಜಾಟಕ್ಕೆ
ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 123/2017 ಕಲಂ: 457, 380 ಐ.ಪಿ.ಸಿ:
ದಿನಾಂಕ: 07-09-2017 ರಂದು
ಮುಂಜಾನೆ 10-30 ಗಂಟೆಯಿಂದ ಸಾಯಂಕಾಲ 5-00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರನ
ಮನೆಯ ಹಿಂದಿನ ಬಾಗಿಲದ ಚೀಲಕದ ಕೊಂಡಿ ಮೀಟಿ ಮನೆಯಲ್ಲಿಯ ಅಲಮಾರದಲ್ಲಿಟ್ಟಿದ್ದ ಸುಮಾರು
5,65,300/-ರೂ. ಬೆಲೆ ಬಾಳುವ ಬಂಗಾದ & ಬೆಳ್ಳಿಯ ಆಭರಣಗಳನ್ನು ಹಾಗೂ ನಗದು ಹಣ 4,000/-ರೂ.
ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಹಾಗೂ ಕಳ್ಳತನವಾದ ಬಂಗಾರ, ಬೆಳ್ಳಿಯ
ಆಭರಣಗಳನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ
ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
Posted by Koppal District Police at 10:45 AM 0 comments
Friday, September 8, 2017
1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ: 87 Karnataka Police Act.
ದಿ:07-09-2017 ರಂದು 04-35 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಲೇಬಗೇರ ಗ್ರಾಮದ ಶ್ರೀ ಆಂಜನೆಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ
ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಹೋಗಿ ಪಂಚರ ಸಮಕ್ಷಮ
ದಾಳಿ ಮಾಡಿದ್ದು 03 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 630=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ
ನಂ. 114/2017 ಕಲಂ:
32 , 34 Karnataka Excise Act.
ದಿನಾಂಕ : 07-09-2017 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ಆರೋಪಿತನು ಲಿಂಗನಬಂಡಿ ಗ್ರಾಮದಿಂದ
ಕಲಕಬಂಡಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಪೂರ್ವಭಾಗದಲ್ಲಿ ಹನಮಪ್ಪ ಹುಡೇದ ಇವರ ಹೊಲದ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು
ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮಧ್ಯಸಾರದ ಟ್ರೇಟ್ರಾ ಪಾಕೀಟಗಳನ್ನು
ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ
ಮಾಡಿ ಆರೋಪಿತನಿಂದ 1] 90 ML ನ HAYWARDS
CHEERS WHISKY -ಒಟ್ಟು 70 (ಎಪ್ಪತ್ತು) ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ -28.13 ರೂ.
ಗಳಂತೆ ಒಟ್ಟು 1969.1 ರೂ. 2] ಒಂದು ಪ್ಲಾಸ್ಟಿಕ್ ಚೀಲ ಅ.ಕಿ.ಇಲ್ಲ 3] ಮಧ್ಯಾಸಾರ ಮಾರಾಟದಿಂದ ಬಂದ
ನಗದು ಹಣ : 150/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು 2119.1/-ರೂ ಸಿಕ್ಕಿದ್ದು ಇರುತ್ತದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ: 78(3) Karnataka Police Act.
ದಿನಾಂಕ 07-09-2017 ರಂದು ಸಂಜೆ 6-45 ಗಂಟೆಯಿಂದ 7-45 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ
ಸ್ಥಳೀಯ ಕನಕಗಿರಿ ಪಟ್ಟಣದ ಬಜಾರದಲ್ಲಿರುವ ಶೇಖರಪ್ಪ ಚಹದ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಸ್ಥಳದಲ್ಲಿ ಆರೋಪಿತರು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಮಟಕಾ ನಂಬರಗಳನ್ನು ಬರೆದು ಕೊಡುತ್ತಿದ್ದಾಗ
ಶ್ರೀ ಶಶಿಕಾಂತ ರಾಠೋಡ ಸಿಹೆಚ್ಸಿ-01 ಸಿಬ್ಬಂದಿ ಹಾಗೂ ಪಂಚರ ಸಮೇತ ದಾಳಿ ಮಾಡಿ ಹಿಡಿದು ಇಬ್ಬರೂ ಆರೋಪಿತರಿಂದ
ಒಟ್ಟು ನಗದು ಹಣ ರೂ.1510/- 02 ಮಟಕಾ ಪಟ್ಟಿ, 02 ಬಾಲ್ ಪೆನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು
ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕೊಪ್ಪಳ
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 204/2017 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:07-09-2017 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಕಿನ್ನಾಳ ಗ್ರಾಮದ ಅಂಬೇಡ್ಕರ
ಸರ್ಕಲ್ ಹತ್ತಿರ ತಮ್ಮ ಮೋಟಾರ ಸೈಕಲ್ ನಂ: ಕೆ.ಎ: 35/ಎಕ್ಸ: 1018 ನೇದ್ದರಲ್ಲಿ ಹೋಗುವಾಗ ತನ್ನ ಹಿಂದೆ
ಬರುತ್ತಿದ ಟಾಟಾ ಎ,ಸಿ ನಂ: ಕೆಎ-37/6654 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ಬಂದು
ಅಪಘಾತ ಮಾಡಿದ್ದು ಇರುತ್ತದೆ. ಇದರಿಂದ ಎಡಗಾಲಿಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಮತ್ತು ಟಾ,ಟಾ
ಎ,ಸಿ ವಾಹನಂ: ಕೆ.ಎ: 37 /6654 ನೇದ್ದರ ಸವಾರನು ಸ್ವಲ್ಪ ಮುಂದೆ ಹೋಗಿ ರಸ್ತೆಯ ಮೇಲೆ ನಡೆದುಕೊಕಂಡು
ಹೋಗುತ್ತಿದ್ದ ಶರಣಪ್ಪ ಮಲ್ಲಪ್ಪ ಹಳ್ಳಿ ಇವರಿಗೆ ಕೂಡ ಟಕ್ಕರ ಕೊಟ್ಟಿದ್ದರಿಂದ ಬಲಕಪಾಳಕ್ಕೆ, ಬಲಗಣ್ಣಿನ
ಹುಬ್ಬಿನ ಮೇಲೆ ತರಚಿದ ಗಾಯ ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ. ಅಪಘಾತಪಡಿಸಿದ ಸವಾರನು ಸ್ಥಳದಿಂದ
ಓಡಿ ಹೋಗಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು,
ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ
Posted by Koppal District Police at 10:09 AM 0 comments
Wednesday, September 6, 2017
1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ : 05-09-2017 ರಂದು
ಮುಂಜಾನೆ 11-15 ಗಂಟೆಯ
ಸುಮಾರಿಗೆ ನನ್ನ ಹೆಂಡತಿ ಈರಮ್ಮ ವಯಾ 44 ವರ್ಷ ಇವಳು ಕಿರಾಣಿ ಸಾಮಾನು ತರಲು ಹನಮಸಾಗರಕ್ಕೆ ಕಾಲ್ನಡಿಗೆಯಲ್ಲಿ
ನಡೆದುಕೊಂಡು ಜುಂಜಲಕೊಪ್ಪ ಸೀಮಾದ ಶೇಖರಯ್ಯ ಹಿರೇಮಠ ಇವರ ಹೊಲದ ಹತ್ತಿರ ರಸ್ತೆಯ ಎಡಬಾಜು
ಹೊರಟಿದ್ದಾಗ ಹನಮಸಾಗರ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ
ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ನನ್ನ ಹೆಂಡತಿಗೆ ಟಕ್ಕರ್ ಕೊಟ್ಟು
ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ಈ ಅಪಘಾತದಲ್ಲಿ ನನ್ನ ಹೆಂಡತಿಯು ತಲೆ ಹಚ್ಚಿ ರಸ್ತೆಯ ಮೇಲೆ
ಬಿದ್ದಿದರಿಂದ ತಲೆಯ ನೆತ್ತಿಗೆ ಭಾರಿ ರಕ್ತಗಾಯವಾಗಿ, ಇಲಾಜು ಪಡೆಯುವಾಗ ಗುಣಮುಖಳಾಗದೇ ಮದ್ಯಾಹ್ನ 12-45 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಕಾರಣ ನನ್ನ
ಹೆಂಡತಿಗೆ ಅಪಘಾತಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಹಾಗೆಯೇ ಚಲಾಯಿಸಿಕೊಂಡು ಹೋದ ಯಾವುದೋ
ಒಂದು ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ
ನಂ. 202/2017 ಕಲಂ:
143, 147, 341, 323, 354, 504, 506 ಸಹಿತ 149 ಐ.ಪಿ.ಸಿ:
ದಿನಾಂಕ05-09-2017 ರಂದು
ರಾತ್ರಿ ಸಮಯದಲ್ಲಿ ನಮ್ಮಮ ಊರಿನಲ್ಲಿ ವಿಪರಿತ ಮಳೆ ಬಂದಿತ್ತು ಇದರಿಂದ ನಮ್ಮ ಮನೆಯ ಪಕ್ಕದ ಮೇಲೆ
ಹೇಳಿದವರು ನನಗೆ ತೊಂದರೆ ಕೊಡುವ ಉದ್ದೆದಿಂದ ರಸ್ತೆಗುಂಟಾ ಹೋಗುವ ಮಳೆ ನೀರನ್ನು ನನ್ನ ಮನೆಯ
ಒಳಗಡೆ ಬರುವ ಹಾಗೆ ರಸ್ತೆಗೆ ಮರಮ್ ಹಾಕಿ ಒಡ್ಡಿ ಮಾಡಿದ್ದರು ಇದರಿಂದ ನನ್ನ ಮನೆಯಲ್ಲಿ ಮಳೆ ನೀರು
ಬರುತ್ತಿದ್ದರಿಂದ ರಾತ್ರಿ ಅದೇ ಊರಿನಲ್ಲಿ ವಾಸವಾಗಿರುವ ನನ್ನ ತಂದೆ ದೇಸು ತಂದೆ ಮೋಹನ್ ಈತನಿಗೆ ಫೋನ್
ಮಾಡಿದ್ದರಿಂದ ಅವರು ಬಂದಿದ್ದರಿಂದ ಇಂದು ದಿನಾಂಕ-05-09-2017 ರಂದು ಬೆಳಗಿನ ಜಾವ 2-00 ಗಂಟೆಯ
ಸಮಯದಲ್ಲಿ ನಾನು ನನ್ನ ತಂದೆ ರಸ್ತೆಗೆ ಹಾಕಿದ್ದ ಒಡ್ಡಿಯನ್ನು ಕಿತ್ತಿ ಹಾಕುತ್ತಿದ್ದಾಗ್ಗೆ ಮೇಲೆ
ಹೇಳಿದ ಎಲ್ಲಾರೂ ನನಗೆ ಹೊಡೆಯಬೇಕಂತ ಕೂಡಿಕೊಂಡು ಬಂದು ನನಗೆ ಲೇ ಸೂಳೆ ಆ ಒಡ್ಡು ನಾವು ಹಾಕಿವಿ
ನಾವು ಹಾಕಿದ ಒಡ್ಡನ್ನು ತೆಗೆದು ಹಾಕುತ್ತಿರಾ ಅಂತಾ ಅಸ್ಲಿವಾಗಿ ಬೈದಾಡುತ್ತಾ ಬಂದ್ದಿದ್ದರಿಂದ
ವಯಸ್ಸಾದ ನನ್ನ ತಂದೆ ಅವರಿಗೆ ನೋಡಿ ನನ್ನ ಜೋಪಡಿಗೆ ಓಡಿ ಹೋದನು ಆಗ ಹನುಮಂತಪ್ಪನು ಲೇ ಅಗ್ಗದ
ಸೂಳೆ ಅಂತಾ ನನ್ನ ತಲೆಯ ಕೂದಲು ಹಿಡಿದುಕೊಂಡು ಎಳೆದಾಡಿದನು ಪಾಂಡು ಈತನು ನನಗೆ ಕಾಲಿನಿಂದ
ಒದ್ದನು ಚಾಂದುಬಾಯಿ ಈಕೆಯು ಕೆಟ್ಟ ಕೆಟ್ಟ ಶಬ್ದಗಳಿಂದ ನನಗೆ ನಿಂದಿಸಿ ಕೈಯಿಂದ ನನ್ನ ಬೆನ್ನಿಗೆ
ಹೊಡೆದಳು ಊಳಿದವರು ಕೂಡಾ ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದರು ಆಗ ನಮ್ಮ ತಂದೆ ಮತ್ತು ಈ
ಘಟನೆಯನ್ನು ನೋಡುತ್ತಿದ್ದ ನನ್ನ ಮಕ್ಕಳು ಅಳುವುದು ಚೀರಾಡುವುದು ಮಾಡಿದ್ದರಿಂದ ನಮ್ಮ ಅಣ್ಣ ರಾಮು
ತಂದೆ ದೇಸು ಈತನು ಓಡಿ ಬರುತ್ತಿದ್ದಂತೆ ಅವರು ಈ ಸೂಳಿಯನ್ನು ಈಗ ಬಿಟ್ಟು ಬಿಡಿ ಜನರು ಎದ್ದು
ಬರುತ್ತಾರೆ ಯಾರು ಇಲ್ಲದ ಸಮಯದಲ್ಲಿ ಇವಳನ್ನು ಮತ್ತು ಮಕ್ಕಳನ್ನು ಮುಗಿಸಿ ಗುಡಸಲಿ ಖಾಲಿ
ಮಾಡಿಸಿಬಿಡೋಣ ಅಂತಾ ನನಗೆ ನನ್ನ ಮಕ್ಕಳಿಗೆ ಪ್ರಾಣದ ಬೆದರಿಕೆ ಹಾಕುತ್ತಾ ನನಗೆ ಬಿಟ್ಟು ತಮ್ಮ
ಮನೆಯಲ್ಲಿ ಹೋದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
Posted by Koppal District Police at 10:41 AM 0 comments
Tuesday, September 5, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 201/2017 ಕಲಂ: 32, 34 Karnataka Excise Act.
ದಿನಾಂಕಃ 04-09-2017 ರಂದು ರಾತ್ರಿ 10-30 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ.
ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ,
ದಿನಾಂಕ 04-09-2017 ರಂದು ರಾತ್ರಿ 8-30 ಗಂಟೆಗೆ ಕಾರಟಗಿ ಪಟ್ಟಣದ ಹೊರ ವಲಯದ ರೆಡ್ ಚಿಲ್ಲಿ ರೆಸ್ಟೋರೆಂಟ್
ದ ಮಾಲೀಕನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು
ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು,
ಆ ಕಾಲಕ್ಕೆ ಆರೋಪಿತನು ಪೊಲೀಸ್ ರು ಬರುವದನ್ನು ನೋಡಿ ಓಡಿ ಹೋಗಿದ್ದು, ಸದ್ರಿ ರೆಸ್ಟೋರೆಂಟ್ ದಲ್ಲಿದ್ದ
1] 05 ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಮದ್ಯದ ಬಾಟಲಿಗಳು, 650 ಎಂ.ಎಲ್. 2] 09 ಕಿಂಗ್ ಪಿಷರ್
ಸ್ಟ್ರಾಂಗ್ ಬಿಯರ್ ಮದ್ಯದ ಬಾಟಲಿಗಳು 330 ಎಂ.ಎಲ್ 3) 07
8 ಪಿ.ಎಂ. ವಿಸ್ಕಿ ಟೆಟ್ರಾ ಮದ್ಯದ ಬಾಟಲಿಗಳು 180 ಎಂ.ಎಲ್. 4) 03 ಓಲ್ಡ್ ಟಾವರ್ ವಿಸ್ಕಿ
ಟೆಟ್ರಾ ಮದ್ಯದ ಬಾಟಲಿಗಳು 180 ಎಂ.ಎಲ್. 5) 02 ಮ್ಯಾಗಡೋಲ್ ವಿಸ್ಕಿ ರಮ್ ಮದ್ಯದ ಬಾಟಲಿಗಳು 180
ಎಂ.ಎಲ್. 6) 02 ಬ್ಯಾಗಪೇಪರ್ ವಿಸ್ಕಿ ಪೇಪರ್ ಬಾಟಲಿಗಳು
180 ಎಂ.ಎಲ್. 7) 03 ಮ್ಯಾಗಡೋಲ್ ಮದ್ಯದ ಬಾಟಲಿಗಳು 90 ಎಂ.ಎಲ್. 8) 05 08 ಪಿ.ಎಂ. ವಿಸ್ಕಿ ಮದ್ಯದ ಬಾಟಲಿಗಳು 90 ಎಂ.ಎಲ್. 9)
06 ಓರಿಜನಿಲ್ ಟ್ರಾವಲರ್ ವಿಸ್ಕಿ ಮದ್ಯದ ಬಾಟಲಿಗಳು 90 ಎಂ.ಎಲ್. ಈಗ್ಗೆ ಒಟ್ಟು 42 ಮದ್ಯದ ಬಾಟಲಿಗಳು
ಅ.ಕಿ.ರೂ. 3037=0 ವಿವಿಧ ಮದ್ಯದ ಬಾಟಲಿಗಳನ್ನು ಪಂಚರ
ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 201/2017 ಕಲಂ: 32, 34 Karnataka Excise Act.
ಫಿರ್ಯಾದಿದಾರರು ದಿ:04-09-2017
ರಂದು ಸಂಜೆ 5-30 ಗಂಟೆಗೆ ಠಾಣೆಗೆ ಹಾಜರಾಗಿ
ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:04-09-2017
ರಂದು ಮದ್ಯಾಹ್ನ 3-10 ಗಂಟೆಗೆ ಠಾಣಾ ವ್ಯಾಪ್ತಿಯ ಬಹೂದ್ದೂರುಬಂಡಿ
ರಸ್ತೆಯ ಡಾಬಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ
ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ
ಭೇಟಿ ನೀಡಿ ಮದ್ಯಾಹ್ನ
3-45 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90
ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ
1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡಿದ್ದು ಇರುತ್ತದೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಿ ಅಂತಾ ಫಿರ್ಯಾದಿ ನೀಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ
ನಂ. 122/2017 ಕಲಂ: 279, 337 ಐ.ಪಿ.ಸಿ:
ದಿನಾಂಕ:
03-09-2017 ರಂದು ಸಾಯಂಕಾಲ 5 ಸುಮಾರಿಗೆ ಕೊಪ್ಪಳ-ಗದಗ ರಸ್ತೆಯ ಮೇಲೆ ತಳಕಲ್ ಬಸ್
ನಿಲ್ದಾಣದ ಮುಂದುಗಡೆ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: KA 37
EB 5781 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ
ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ನಡೆಸಿಕೊಂಡು ಬಂದವನೇ ರಸ್ತೆ ಎಡಬದಿಗೆ ನಿದಾನವಾಗಿ
ಬರಿತ್ತಿದ್ದ ಫಿರ್ಯಾದಿದಾರನ ಕಾರ್ ನಂ : KA
29 M 4633 ನೇದ್ದರ ಬಲಭಾಗಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಆರೋಪಿತನು ತನ್ನ ಮೋಟಾರ್ ಸೈಕಲ್ ಸಮೇತ
ಬಲವಾಗಿ ಬಿದ್ದು ಗಾಯಗೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
Posted by Koppal District Police at 12:40 PM 0 comments
Sunday, September 3, 2017
1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 246/2017 ಕಲಂ: 87 Karnataka Police Act.
ದಿನಾಂಕ : 02-09-2017 ರಂದು ಚಳಗೇರಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಂದರ
ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಶ್ರೀ. ಪುಂಡಪ್ಪ ಎ.ಎಸ್.ಐ
ಮತ್ತು ಸಿಬ್ಬಂದಿಯವರಾದ,
PC-109 ಅಮರೇಶ,
PC-116 ಸಂಗಮೇಶ , PC-117 ಶ್ರೀಧರ,
PC-426 ಮಹಾಂತೇಶ, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಅದರ ಚಾಲಕ ಶ್ರೀನಾಥ ಎ.ಪಿ.ಸಿ-180 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 03 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ 04 ಜನ
ಆರೋಪಿತರು ಓಡಿಹೋಗಿರುತ್ತಾರೆ.
ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 2330=00 ರೂ, 52 ಇಸ್ಪೆಟ್
ಎಲೆಗಳು, ಹಾಗೂ ಒಂದು ಹಳೆ
ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ. 269/2017 ಕಲಂ: 87
Karnataka Police Act..
ದಿನಾಂಕ:- 03-09-2017
ರಂದು 00-15 ಎ.ಎಂ.ಕ್ಕೆ. ಶ್ರೀ
ಪ್ರಕಾಶ ಮಾಳಿ, ಪಿ.ಎಸ್.ಐ. ರವರು
ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಗ್ರಾಮದ ಬೀರಣ್ಣ
ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ
ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದು ಸಿಬ್ಬಂದಿಯವರಾದ ಮ.ಎ.ಎಸ್.ಐ ಶಾರವ್ವ, ಹೆಚ್.ಸಿ.
29, 44, 191 ಪಿ.ಸಿ 363, 328, 80 ಹಾಗೂ 2 ಇಬ್ಬರು ಪಂಚರೊಂದಿಗೆ ಹೋಗಿ ಮುಷ್ಟೂರು ಗ್ರಾಮದ
ಬೀರಪ್ಪ ದೇವಸ್ಥಾನದ ಮುಂದೆ ದೇವಸ್ಥಾನದ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು
ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ
ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ 00-45
ಎ.ಎಂ. ಗಂಟೆಯಾಗಿತ್ತು.
ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 8 ಜನರು ಸಿಕ್ಕಿ ಬಿದ್ದಿದ್ದು,
ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 20,500/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ
ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್
ಬರಕಾ ಸಿಕ್ಕಿದ್ದು ಇರುತ್ತವೆ.
ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂ. 199/2017 ಕಲಂ: 34 Karnataka Excise Act..
ಫಿರ್ಯಾದಿದಾರರು ದಿ:02-09-2017
ರಂದು ಸಂಜೆ 4-50 ಗಂಟೆಗೆ ಠಾಣೆಗೆ ಹಾಜರಾಗಿ
ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:02-09-2017
ರಂದು ಮದ್ಯಾಹ್ನ 2-00 ಗಂಟೆಗೆ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದ ಚಿತ್ರಗಾರ ಓಣಿಯ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ
ಖಚಿತ ಮಾಹಿತಿ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ
ಭೇಟಿ ನೀಡಿ ಮದ್ಯಾಹ್ನ
2-45 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90
ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ
1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡಿದ್ದು ಇರುತ್ತದೆ.
Posted by Koppal District Police at 12:08 PM 0 comments
Saturday, September 2, 2017
1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 194/2017 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ,:.
ದಿನಾಂಕಃ 01-09-2017 ರಂದು ಸಂಜೆ 7-15 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ. ಕಾರಟಗಿ
ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿ, ಆರೋಪಿತನನ್ನು ಹಾಜರ ಪಡಿಸಿದ್ದು, ಸದ್ರಿ ವರದಿಯ
ಸಾರಾಂಶವೇನೆಂದರೆ, ದಿನಾಂಕ 01-09-2017 ರಂದು ಸಂಜೆ 5-30 ಗಂಟೆಗೆ ಕಾರಟಗಿ ಪಟ್ಟಣದ ಹೊರ ವಲಯದ ಸಮರ್ಥ
ಹೊಟೇಲ್ ದಲ್ಲಿ ಆರೋಪಿ ಅಮರೇಶ ತಂದೆ ಹನುಮಂತಪ್ಪ ಛತ್ರ ವಯ: 23 ವರ್ಷ ಜಾ: ಕುರುಬರ ಸಾ: ಚನ್ನಳ್ಳಿ
ಕ್ರಾಸ್ ಕಾರಟಗಿ ಈತನು ಯಾವುದೇ ಅಧಿಕೃತವಾದ
ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನು ಸಮರ್ಥ
ಹೊಟೇಲ್ ದಲ್ಲಿ ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು
ಮಾರಾಟ ಮಾಡುತ್ತಿದ್ದಾಗ ವಿವಿಧ ಒಟ್ಟು 59 ಮದ್ಯದ ಬಾಟಲಿಗಳು ಅಂದಾಜು ರೂ 6575=00 ಬೆಲೆಯುಳವನ್ನು
ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ವಾಪಸ್ ಠಾಣೆಗೆ
ಬಂದು ವರದಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 245/2017 ಕಲಂ: 341,354,
504, 506 ಐಪಿಸಿ.
ದಿನಾಂಕ : 01-09-2017 ರಂದು ರಾತ್ರಿ 8-15
ಗಂಟೆಗೆ
ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಮ್ಮ ಗಂಡ ಭೀಮಣ್ಣ ತೆಗ್ಗಿಹಾಳ ಇವರು ಠಾಣೆಗೆ ಹಾಜರಾಗಿ ನೀಡಿದ
ಗಣಕೀಕೃತ ಪಿರ್ಯಾದಿಯ ಸಾರಾಂಶವೆನೆಂದರೆ, ಪಿರ್ಯಾದಿಯ ಮನೆಯ ಬಾಜು ಮಲ್ಲಪ್ಪ ತಂದೆ ಬಸಪ್ಪ ಮಡಿವಾಳರ ಇವರ ಮನೆ ಇದ್ದು
ಈತನು ನನ್ನ ಸಂಗಡ ವಿನಾಃಕಾರಣ ನೀರು ಚೆಲ್ಲುವ, ಕಸ ಗೂಡಿಸುವ ವಿಷಯವಾಗಿ ಆಗಾಗ ಬಾಯಿ ಮಾತಿನಿಂದ ಜಗಳ ಮಾಡುತ್ತಿದ್ದನು. ನಾನು ಸಹಿಸಿಕೊಂಡು ಸುಮ್ಮನಿರುತ್ತಿದ್ದೇನು. ನಿನ್ನೆ ದಿನಾಂಕ :31-08-2017 ರಂದು ಮುಂಜಾನೆ 07-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ
ಅಂಗಳ ಗಸ ಹೊಡೆಯುತ್ತಿರುವಾಗ ಮಲ್ಲಪ್ಪ ಮಡಿವಾಳರ ಈತನು ನಮ್ಮ ಮನೆಯ ಕಡೆ ಕಸ ಹೊಡಿಬೇಡ ಅಂದನು ಆಗ
ನಾನು ನಿಮ್ಮ ಮನೆ ಕಡೆ ಕಸ ಹೊಡಿದಿಲ್ಲಾ ಅಂತಾ ಅನ್ನುತ್ತಿದ್ದಾಗ ಮಲ್ಲಪ್ಪನು ಒಮ್ಮಿಂದೊಮ್ಮಲೇ
ಸಿಟ್ಟಿಗೆ ಬಂದು ಲೇ ಭೋಸುಡಿ ರಂಡಿ ನಿನಗೆ ಎಷ್ಟು ಸಾರಿ ಹೇಳಬೇಕು ನೀನು ನಮ್ಮ ಮನೆ ಕಡೆ ಕಸ, ನೀರು ಚೆಲ್ಲಾಬೇಡ ಅಂತಾ ಅನ್ನುತ್ತಲೇ
ನನ್ನನ್ನು ಮನೆಯ ಕಡೆಗೆ ಹೋಗದಂತೆ ಅಡ್ಡಗಟ್ಟಿ ತೆಡೆದು ನಿಲ್ಲಿಸಿ ನನ್ನ ಸೀರೆಯ ಸೆರಗನ್ನು
ಹಿಡಿದು ಎಳೆದಾಡಿ ಮಾನಭಂಗ ಮಾಡಿದನು. ಇನ್ನೊಮ್ಮೆ ನಮ್ಮ ಮನೆ ಕಡೆ ಕಸಪಸ ಹೊಡಿದಿ ಅಂದರಾ ನಿನ್ನ ಜೀವ ಸಹಿತ
ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 237/2017 ಕಲಂ: 498(A), 307,323,324,504 IPC
ದಿನಾಂಕ 01-09-2017 ರಂದು 4-00 ಪಿ.ಎಂ,ಕ್ಕೆ
ಪಿರ್ಯಾದು ಶ್ರೀಮತಿ ನಾಗವೇಣಿ ತಂದೆ ಭೀಮಣ್ಣ ಎಲಗಾರ ವಯ: 25 ವರ್ಷ ಜಾ: ಕುರುಬರ ಉ: ಮನೆಗೆಲಸ ಸಾ:
ಹೊಸಲಿಂಗಾಪೂರ ಇವರು ಠಾಣೆಗೆ ಬಂದು ನೀಡಿದ ಗಣಕಿಕೃತ
ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ 31-08-2017 ರಾತ್ರಿ 11-00 ಗಂಟ ಸುಮಾರಿಗೆ ಪಿರ್ಯಾದುದಾರರ
ಗಂಡ ಭೀಮಪ್ಪ ಇವನು ಮನೆಗೆ ಬಂದು ಕುಡಿದ ಅಮಲಿನಲ್ಲಿ ಮನೆಗೆ ಬಂದು ಹೆಂಡತಿಗೆ ಮಕ್ಕಳಾಗದಿದ್ದುದರಿಂದ
ಅವಳಿಗೆ ಅವಾಚ್ಯವಾಗಿ ಬೈದಾಡುತ್ತಾ ನೀನು ನನಗೆ ಇಷ್ಟವಿಲ್ಲಾ ಎಂದು ಅವಳಿಗೆ ತವರು ಮನೆಗೆ ಹೋಗಿ ಎಂದು
ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಕಬ್ಬಣದ
ರಾಡಿನಿಂದ ಹೊಡಿ ಬಡಿ ಮಾಡಿರುತ್ತಾನೆ ಸದರಿ ಭೀಮಪ್ಪನ ಮೇಲೆ ಕಾನೂನುನಕ್ರಮ ಕೈಗೊಳ್ಳಿ ಅಂತಾ ಮುಂತಾಗಿದ್ದ
ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
4] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 152/2017 ಕಲಂ: 279,
304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 30-08-2017 ರಂದು ಸಾಯಂಕಾಲ 4-30 ಗಂಟೆಗೆ ಜಿಲ್ಲಾ ಆಸ್ಪತ್ರೆ
ಕೊಪ್ಪಳದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ವಿಚಾರಣೆ ಕುರಿತು ಆಸ್ಪತ್ರೆಗೆ
ಬೇಟಿ ಕೊಟ್ಟು ಗಾಯಾಳು ಸಂಭಂದಿ ಶ್ರೀ ಹನುಮಂತಪ್ಪ ತಂದೆ ಸಿದ್ದಪ್ಪ ದೊಡ್ಡಮನಿ, 48 ವರ್ಷ ಜಾತಿ: ಪರಿಶಿಷ್ಟ ಜಾತಿ, ಉ:ಸಮಾಜ ಸೇವಕ, ಸಾ:ಹಿರೇಸಿಂದೋಗಿ, ತಾ:ಜಿ:ಕೊಪ್ಪಳ ಇವರು ಹಾಜರಪಡಿಸಿದ ಲಿಖಿತ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಏನಂದರೆ, ದಿನಾಂಕ: 30-08-2017 ರಂದು ಬೆಳಿಗ್ಗೆ 10-15 ಗಂಟೆಯ ಸುಮಾರಿಗೆ ಫಿರ್ಯಾದಿ ದೊಡ್ಡಪ್ಪನಾದ ಮಳ್ಳಪ್ಪ ತಾಯಿ ಮರಿಯಮ್ಮ 70 ವರ್ಷ ಇವರು ವೈಯಕ್ತಿಕ ಕೆಲಸದ ನಿಮಿತ್ಯ ಮುಂಡರಗಿ-ಹಿರೇಸಿಂಧೋಗಿ ಮುಖ್ಯ ರಸ್ತೆಯಲ್ಲಿ
ಕಾತರಕಿ ಕ್ರಾಸದಿಂದ ಬಸ್ ನಿಲ್ದಾಣದ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ
ಮುಂಡರಗಿ ಕಡೆಯಿಂದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನು ಅತೀವೇಗ ಮತ್ತು
ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ದೊಡ್ಡಪ್ಪನಿಗೆ ಟಕ್ಕರು ಕೊಟ್ಟು ಅಪಘಾತ ಪಡಿಸಿ
ತೀವ್ರವಾಗಿ ಗಾಯಗೊಳಿಸಿದ ನಂತರ ಅಲ್ಲಿಂದ ಹೊರಟು ಹೋಗಿದ್ದು ಅಪಘಾತದ ನಂತರ ಗಾಯಾಳನ್ನು
ಹಿರೇಸಿಂಧೋಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ಅಲ್ಲಿಂದ ಹೆಚ್ಚಿನ
ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು
ಇರುತ್ತದೆ. ಕಾರಣ ಮಾನ್ಯರು ಅಪಘಾತ ಪಡಿಸಿ ಹೊರಟು ಹೋದ ಕ್ರೂಷರ್ ವಾಹನ ನಂ: ಕೆ.ಎ-22/ಎನ್-7435 ರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು
ಪಡೆದುಕೊಂಡು ರಾತ್ರಿ 8:15 ಗಂಟೆಗೆ ವಾಪಸ್ಸು ಠಾಣೆಗೆ ಬಂದಿದ್ದು ಅದರ ಸಾರಾಂಶದ ಮೇಲಿಂದ ಠಾಣೆಯ ಎ.ಎಸ್.ಐ. ಶ್ರೀ ಮಲ್ಲಪ್ಪ ರವರು ಅಳವಂಡಿ ಠಾಣಾ ಗುನ್ನೆ ನಂ: 152/2017 ಕಲಂ: 279, 338 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ. ನಂತರ ಪ್ರಕರಣದ ತನಿಖಾಧಿಕಾರಿ ಶ್ರೀ ಮಲ್ಲಪ್ಪ
ಎ.ಎಸ್.ಐ. ರವರು ರವರು ಘಟನಾ ಸ್ಥಳಕ್ಕೆ ಬೇಟಿ ಕೊಟ್ಟು ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ನಿರ್ವಹಿಸಿ
ಸಾಕ್ಷಿದಾರರ ಹೇಳಿಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಸದರಿ ಪ್ರಕರಣದ ಮುಂದಿನ ತನಿಖೆ ಕುರಿತು
ಕಡತವನ್ನು ತಗೆದುಕೊಂಡು ಪರಿಶೀಲಿಸಿ ತನಿಖೆಯನ್ನು ಮುಂದುವರಿಸಿದಾಗ ಇಂದು ದಿನಾಂಕ: 01-09-2017 ರಂದು
ಮುಂಜಾನೆ 7:30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ನಿಸ್ತಂತು ಮುಖಾಂತರ ಪ್ರಕರಣದಲ್ಲಿಯ ಗಾಯಾಳು
ಮಳ್ಳಪ್ಪ ತಾಯಿ ಮರಿಯಮ್ಮ ಇವರು ಚಿಕಿತ್ಸೆ ಪಡೆಯುವ ಕಾಲಕ್ಕೆ ಇಂದು ದಿನಾಂಕ: 01-09-2017 ರಂದು ಮುಂಜಾನೆ
7 ಗಂಟೆಯ ಸುಮಾರಿಗೆ ಮೃತ ಪಟ್ಟ ಬಗ್ಗೆ ಎಮ್.ಎಲ್.ಸಿ ಸ್ವೀಕೃತವಾಗಿದ್ದು ಇರುತ್ತದೆ. ಕಾರಣ
ಈ ಪ್ರಕರಣದಲ್ಲಿಯ ಗಾಯಾಳು ಮಳ್ಳಪ್ಪ ತಾಯಿ ಮರಿಯಮ್ಮ ದೊಡ್ಡಮನಿ, 70 ವರ್ಷ ಸಾ: ಹಿರೇಸಿಂದೋಗಿ ಈತನು
ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
5] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 133/2017 ಕಲಂ: 379,
ಐ.ಪಿ.ಸಿ
ದಿನಾಂಕ 01-09-2017 ರಂದು ಸಂಜೆ 6-30 ಗಂಟೆಗೆ
ಫಿರ್ಯಾದಿದಾರರಾದ ಕೃಷ್ಣಾಜಿ ತಂದೆ ನಾನಪ್ಪ ನಾಯಕ ಸಾ: ಬಿಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ
ಹಾಜರಾಗಿ ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶವೇನೆಂದರೆ. ಫಿರ್ಯಾದಿದಾರರಿಗೆ ತಾವು ಕೆಲಸ ಮಾಡುವ
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದಿಂದ ನೀಡಿದ್ದ ಹೋಂಡಾ ಶೈನ್ ಮೋಟಾರ ಸೈಕಲ್ ನಂ KA 37/G 0426 ನೇದ್ದನ್ನು ಅವರು ತಮ್ಮ ದಿನನೀತ್ಯದ ಕರ್ತವ್ಯಕ್ಕೆ
ಉಪಯೋಗಿಸುತ್ತಿದ್ದರು. ದಿನಾಂಕ: 30-08-2017 ರಂದು ಮದ್ಯಾಹ್ನ 2-45 ಗಂಟೆಗೆ ತಾವು ತಮ್ಮ
ಇಲಾಖೆಯು ನೀಡಿದ್ದ ಹೊಂಡಾ ಶೈನ್ ಮೋಟಾರ ಸೈಕಲ್ ನ್ನು ಜಿಲ್ಲಾ ಆಸ್ಪತ್ರಗೆ ತೆಗೆದುಕೊಂಡು ಹೋಗಿ
ಅದನ್ನ ಆಸ್ಪತ್ರೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ತಮ್ಮ ಆಫೀಸ್ ಗೆ ಹೋಗಿ
ಕರ್ತವ್ಯ ಮುಗಿಸಿಕೊಂಡು ವಾಪಸು ಮದ್ಯಾಹ್ನ 4-30 ಗಂಟೆಗೆ ಆಸ್ಪತ್ರೆಯ ಹೊರಗಡೆ ಬಂದು ನೋಡಿದಾಗ
ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ, ಕೂಡಲೇ
ತಾನು ಅಲ್ಲಿ ಸುತ್ತಾಮುತ್ತ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ
Posted by Koppal District Police at 10:37 AM 0 comments
Subscribe to:
Posts (Atom)