Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 28, 2017

1]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 141/2017 ಕಲಂ: 279, 337, 338 .ಪಿ.ಸಿ..
ದಿನಾಂಕ: 27-09-2017 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಫಿರ್ಯಾದಿ ಲಕ್ಷ್ಮಣ ತಂದೆ ಶಂಕರ ಕುಲಕರ್ಣಿ ವಯಾ: 70 ವರ್ಷ ಜಾ: ಬ್ರಾಹ್ಮಣ : ಒಕ್ಕಲುತನ ಸಾ: ಕಾಕನೂರ ತಾ: ಬದಾಮಿ ಜಿ: ಬಾಗಲಕೋಟ ಹಾಗೂ ಅವರ ಹೆಂಡತಿ ಲತಾ ಮತ್ತು ಅವರ ಸಂಬಂದಿಕರಾದ ಶ್ರೀದೇವಿ ರವರು ಹನಮಸಾಗರದ ಭಿನವ ತಿರುಪತಿ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಆಟೋ ನಂ: ಕೆ.-37 -7390  ನೇದ್ದರಲ್ಲಿ ಹನಮಸಾಗರ ಕಡೆಗೆ ಬರುವಾಗ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಹಾಗೂ ಅಲಕ್ಷತನಿಂದ ನಡೆಸಿಕೊಂಡು ರಸ್ತೆಯ ಸ್ಥಿತಿಗತಿಯನ್ನು ಲೆಕ್ಕಸದೆ ವೆಂಕಟೇಶ್ವರ ದೇವಸ್ಥಾನದ ಕ್ರಾಸ್ ಹತ್ತಿರ ಆಟೋವನ್ನು ತಿರಿವಿದಾಗ ಹನಮಸಾಗರ ಕಡೆಯಿಂದ ಹುಲಗೇರಿ ಕಡೆಗೆ ಹೊರಟ ಮೋಟಾರ ಸೈಕಲ ನಂ: ಕೆ.-29 ಯುವ್-7880 ನೇದ್ದರ ಸವಾರನಿಗೆ ಹಾಯಿಸಿ ಅಪಘಾತ ಪಡಿಸಿ ಆಟೋವನ್ನು ರಸ್ಥೆಯ ಕೆಳಗೆ ಕೆಡವಿ ಅಪಘಾತ ಪಡಿಸಿದ್ದು ಅಪಘಾತದಲ್ಲಿ ಫಿರ್ಯಾದಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದು ಹಾಗೂ ಅವರ ಮನೆಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹಾಗೂ ಮೋಟಾರ ಸೈಕಲ ಸವಾರ ಮಂಜುನಾಥ ರವರಿಗೆ ಬಾರಿ ಹಾಗೂ ಸಾದ ಸ್ವರೂಪದ ಗಾಯಗಳಾಗಿದ್ದು ಈಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 221/2017 ಕಲಂ. 78 (111) Karnataka Police ACT.
ದಿನಾಂಕ:-27-09-2017 ರಂದು ಸಂಜೆ 6-45 ಗಂಟೆಗೆ ಕಾರಟಗಿಯ ನಜೀರ ಕಾಲೋನಿಯ ಶರಣಪ್ಪನ ಹೊಟೇಲ್ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ಶ್ರೀ ಎಂ.ಶಿವಕುಮಾರ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ. 1] ರಸೂಲಸಾಬ ತಂದೆ ಅಬ್ದುಲ್ ಸಾಬ ಮುಲ್ಲಾ, ವಯಾ 50 ವರ್ಷ ಜಾತಿ ಮುಸ್ಲಿಂ ಉ: ಚಾಲಕ ಸಾ: ನಜೀರ ಕಾಲೋನಿ ಕಾರಟಗಿ 2] ಶರಣಪ್ಪ ತಂದೆ ಬಸಪ್ಪ ಬಂಡಿ, ವಯಾ 35 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ನಜೀರ ಕಾಲೋನಿ ಕಾರಟಗಿ ಇವರನ್ನು ಹಿಡಿದಿದ್ದು ಸಿಕ್ಕಿಬಿದ್ದವನ ಕಡೆಯಿಂದ 2640=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಸದ್ರಿ ಸಿಕ್ಕ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣ ಮಟ್ಕಾ ಆರೋಪಿ 3] ಶರಣಪ್ಪ @ ಓಂಪುರಿ ಶರಣಪ್ಪ ಸಾ: ಬುದಗುಂಪಾ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3]  ಕಾರಟಗಿ ಪೊಲೀಸ್  ಠಾಣೆ  ಯು.ಡಿ.ಆರ್. ನಂ. 26/2017 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ 27-09-2017 ರಂದು ಮುಂಜಾನೆ 10-30 ಗಂಟೆಗೆ ಫಿರ್ಯಾಧಿದಾರ ಶ್ರೀ ಸಂಗಪ್ಪ ತಂದೆ ಫಕೀರಪ್ಪ ಬಿಸರಳ್ಳಿ ವಯ 57 ವರ್ಷ ಜಾತಿ ಗಾಣಿಗ ಉ. ಒಕ್ಕಲುತನ ಸಾ. ಟಣಕನಕಲ್ ತಾ. ಕೊಪ್ಪಳ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ,  ತನಗೆ ಒಟ್ಟು 5 ಜನ ಹೆಣ್ಣು ಮಕ್ಕಳು ಮತ್ತು ಇಬ್ಬರೂ ಗಂಡು ಮಕ್ಕಳಿದ್ದು ಹೆಣ್ಣು ಮಕ್ಕಳ ಪೈಕಿ ಕೊನೆಯ ಮಗಳಾದ ಶ್ರೀಮತಿ ಶಶಿಕಲಾ ಗಂಡ ಶರಣಪ್ಪ ಪೊಲೀಸ್ ಪಾಟೀಲ್ ವಯ 24 ವರ್ಷ ಈಕೆಯನ್ನು ಈಗ್ಗೆ 3 ವರ್ಷದ ಹಿಂದೆ ಸೋಮನಾಳ ಗ್ರಾಮದ ಶರಣಪ್ಪ ತಂದೆ ಬಸಪ್ಪ ಪೊಲೀಸ್ ಪಾಟೀಲ್ ಎಂಬುವವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿಯವರಿಗೆ ಶ್ವೇ ಅಂತಾ 2 ವರ್ಷದ ಒಬ್ಬಳೇ ಮಗಳಿರುತ್ತಾಳೆ. ನನ್ನ ಮಗಳು ಶಶಿಕಲಾ ಈಕೆಗೆ ಈಗ್ಗೆ 1 ವರ್ಷದಿಂದ ಮುಟ್ಟಿನ ಸಮಯದಲ್ಲಿ ಆಗಾಗ ಹೊಟ್ಟೆನೋವು ಬರುತ್ತಿದ್ದು ಈ ಬಗ್ಗೆ ನಾವು ಮತ್ತು ನನ್ನ ಮಗಳ ಗಂಡನ ಮನೆಯವರು ಕೂಡಿಕೊಂಡು ಆಕೆಯನ್ನು ಖಾಸಗಿಯಾಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿದಾಗ್ಯೂ ಗುಣಮುಖಳಾಗದೇ ಇದ್ದು ಇದರಿಂದ ಮಾನಸಿಕ ಮಾಡಿಕೊಂಡಿದ್ದು ಇದೇ ಭಾದೇಯಿಂದ ದಿನಾಂಕ 25-09-2017 ರಂದು ಬೆಳಗಿನ 6-00 ಗಂಟೆಯಿಂದ ದಿನಾಂಕ 27-09-2017 ರ ಬೆಳಗಿನ 6-00 ಗಂಟೆ ಅವಧಿಯಲ್ಲಿ ಮುಟ್ಟಿನ ಹೊಟ್ಟೆ ನೋವಿನ ಸಂಬಂಧ ಮಾನಸಿಕ ಮಾಡಿಕೊಂಡು ತನ್ನ 2 ವರ್ಷದ ಮಗಳು ಶ್ವೇತಾಳೊಂದಿಗೆ ತುಂಗಭದ್ರ  ಎಡದಂಡೆ  ಕಾಲುವೆಗೆ ಹಾರಿ ಮೃತಪಟ್ಟದ್ದು ಸದರಿ ನನ್ನ ಮಗಳ ಮರಣದಲ್ಲಿ ನಮ್ಮದು ಯಾವುದೇ ತರಹದ ಅನುಮಾನ ಇರುವುದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, September 27, 2017

1]  ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ ನಂ. 147/2017 ಕಲಂ. 380 ಐ.ಪಿ.ಸಿ..
ದಿನಾಂಕ: 25-09-2017 ರಂದು ಮದ್ಯಾಹ್ನ 01-50 ಗಂಟೆಗೆ ಫಿರ್ಯಾದಿದಾರರಾದ ಉಮೇಶ ತಂದೆ ಗೋವಿಂದರಾವ್ ಕುರಡೇಕರ್ ಸಾ: ಬ್ಯಾಳಿ ಓಣಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶ ಏನೆಂದರೆ, ಫಿರ್ಯಾದಿದಾರರು ಹಾಗೂ ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯವರಿಂದ ಪ್ರತಿ ವರ್ಷದಂತೆ ಈ ವರ್ಷವು ನಗರದ ಗಡಿಯಾರ ಕಂಭದ ಹತ್ತಿರ ಶ್ರೀ ಪಂಡರಾಪುರ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಿದ ಗುಡಿಯಲ್ಲಿ ದುರ್ಗಾದೇವಿಯ ಮೂರ್ತಿಯ ಪ್ರತಿಷ್ಠಪನೆ ಮಾಡಿದ್ದು. ಸದರಿ ಮುರ್ತಿಯ ಮುಂದೆ ಒಂದು ಗಾಜಿನ ಕಾಣಿಕೆ ಪೆಟ್ಟಿಯನ್ನು ಇಟ್ಟಿದ್ದರು. ಸದರಿ ಕಾಣಿಕೆ ಪೆಟ್ಟಿಗೆಯನ್ನು ದಿನಾಂಕ: 25-09-2017 ರಂದು ಮದ್ಯರಾತ್ರಿ 1-27 ರಿಂದ 1-50 ಗಂಟೆಯ ಅವಧಿಯಲ್ಲಿ ಅಂದಾಜು 23-24 ವಯಸ್ಸಿನ ಯಾರೋ ಒಬ್ಬ ಗುಡಿಯೋಳಗೆ ಬಂದು ಗುಡಿಯಲ್ಲಿದ್ದ ರೂ 20,000=00 ಗಳು ಇರುವ ದೆವರ ಕಾಣಿಕೆ ಪೆಟ್ಟಿಗೆಯ್ನನು ಕಳ್ಳತನ ಮಾಡಿಕೊಂಡು ಹೋಗಿದ್ದ, ನಂತರ ಸದರಿ ಖಾಲಿ ಕಾಣಿಕೆ ಪೆಟ್ಟಿಗೆಯನ್ನು ಅಲ್ಲೆ ಇರುವ ದುರ್ಗಮ್ಮ ಗುಡಿಯ ಹತ್ತಿರದ ರಾಜ ಕಾಲುವೆಯ ಹತ್ತಿರ ಇಟ್ಟು ಹೋಗಿರುತ್ಥಾನೆ ಅದರಲ್ಲಿ ಯಾವುದೇ ರೀತಿಯ ಹಣ ಇರಲಿಲ್ಲಾ ಕಾರಣ ಮಾನ್ಯರವರು ಕಾಣಿಕೆ ಪೆಟ್ಟಿಗೆಯಲ್ಲಿನ ಹಣವನ್ನು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
2]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 131/2017 ಕಲಂ. 379 ಐಪಿಸಿ  & 4(1) 4(1A) R/W  21, 22  MMDR Act -1957.
ದಿನಾಂಕ: 26-09-2017 ರಂದು ಬೆಳಿಗ್ಗೆ 08-45 ಗಂಟೆಗೆ ಚಿಕ್ಕಬೀಡನಾಳ ಸೀಮಾದಲ್ಲಿ ಬರುವ ಸಾರ್ವಜನಿಕ ಹಳ್ಳದಲ್ಲಿಯ ಬ್ರೀಡ್ಜ್ (ಸೇತುವೆ) ಮೇಲೆ ಆರೋಪಿ ಶಂಕರಗೌಡ ತಂದೆ ನಿಂಗನಗೌಡ ಪೊಲೀಸ್ ಪಾಟೀಲ ವ: 37 ವರ್ಷ ಜಾ: ವಾಲ್ಮೀಕಿ ಉ: ಟ್ರ್ಯಾಕ್ಟರ್ ಚಾಲಕ & ಮಾಲೀಕ ಸಾ: ಚಿಕ್ಕಬೀಡನಾಳ ತಾ: ಯಲಬುರ್ಗಾ ಇತನು ತನ್ನ ನೊಂದಣಿ ಸಂಖ್ಯೆ ಇರದ ಟ್ರ್ಯಾಕ್ಟರ್ ಇಂಜೀನ್ ನಂ. S325 1F35308 ನೇದ್ದಕ್ಕೆ ಜೋಡಿಸಿರುವ ನೊಂದಣಿ ಸಂಖ್ಯೆ ಇರದ ಟ್ರೇಲರ್ ಚೆಸ್ಸಿ ನಂ. 65 ನೇದ್ದರಲ್ಲಿ ಉಸುಕು(ಮರಳು)ನ್ನು ಸಾಗಾಣಿಕೆ ಮಾಡುವ ಉದ್ದೇಶದಿಂದ ಸರ್ಕಾರದಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಕಳ್ಳತನದಿಂದ ಉಸುಕು(ಮರಳು)ನ್ನು ಲೋಡ ಮಾಡುತಿದ್ದಾಗ ಭಾತ್ಮಿ ಮೇರೆಗೆ ಗವಿಯಪ್ಪ ಎ.ಎಸ್.ಐ. ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಸುಮಾರು 1,000/-ರೂ. ಬೆಲೆಬಾಳುವ ಉಸುಕು(ಮರಳು) ತುಂಬಿದ ಟ್ರ್ಯಾಕ್ಟರ್ & ಅದರ ಚಾಲಕ ಹಾಗೂ ಮಾಲೀಕನಾದ ಶಂಕರಗೌಡನಿಗೆ ಶ್ರೀ ಗವಿಯಪ್ಪ ಎ.ಎಸ್.ಐ ಕುಕನೂರ ಠಾಣೆರವರು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆ ಯೊಂದಿಗೆ ತಮ್ಮ ದೂರು ನೀಡಿದ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3]  ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 132/2017 ಕಲಂ. 109, 151 ಸಿ.ಆರ್.ಪಿ.ಸಿ.
ದಿನಾಂಕ: 26-09-2017  ರಂದು ಎಎಸ್‍ಐ (ಜಿ) ಹಾಗೂ ಪಿಸಿ-428 ರವರು ಹಳ್ಳಿ ಪೆಟ್ರೊಲಿಂಗ ಕುರಿತು  ತಳಕಲ್‍ ಗ್ರಾಮದ ಕಡೆಗೆ ಹೋದಾಗ ಮದ್ಯಾಹ್ನ 1:30 ಗಂಟೆ ಸುಮಾರಿಗೆ ತಳಕಲ್ – ತಳಬಾಳ ಕ್ರಾಸ್ ಹತ್ತಿರ  ತಳಕಲ್ ರಸ್ತೆಗೆ ಮೂರು ಜನ  ಆರೋಪಿತರು ಆ ಕಡೆ ಈ ಕಡೆ ಹೋಗಿ ಬರುವ ಜನರನ್ನು ಕಾಯುತ್ತಾ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು. ಪೊಲೀಸ್‍ರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದಾಗ ಸದರಿಯವರಿಗೆ ಬೆನ್ನತ್ತಿ ಹಿಡಿದು  ಹೆಸರು ವಿಳಾಸ ವಿಚಾರಿಸಲು ಮೊದಲಿಗೆ ತಮ್ಮ ಹೆಸರು ವಿಳಾಸವನ್ನು ಬೇರೆ ಬೇರೆಯಾಗಿ ಹೇಳಿದ್ದು ಪುನಃ ಪುನಃ ಕುಲಕುಂಷವಾಗಿ ವಿಚಾರಿಸಿದಾಗ ತಮ್ಮ ನಿಜವಾದ ಹೆಸರು ವಿಳಾಸ ಹೇಳಿದ್ದು ಇರುತ್ತದೆ,ಸದರಿಯವರಿಗೆ ಅಲ್ಲಿದ್ದ ಬಗ್ಗೆ ವಿಚಾರಿಸಲು ಸದರಿಯವರು ತಮ್ಮ ಇರುವಿಕೆಯ ಬಗ್ಗೆ ಸಂಮಂಜಸವಾದ ತ್ತರ ನೀಡದೆ ಇದ್ದುದರಿಂದ  ಸದರಿಯವರಿಗೆ ಹಾಗೇ ಬಿಟ್ಟಲ್ಲಿ ಅವರು ಯಾವುದಾದರು ಸ್ವತ್ತಿನ ಅಪರಾಧ ಮಾಡುವ ಬಲವಾದ ಸಂಶಯ ಬಂದಿದ್ದರಿಂದ ಸದರಿ ಮೂರು ಜನರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
4]  ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 124/2017 ಕಲಂ: 317 ಐಪಿಸಿ.
ದಿನಾಂಕ: 26-09-2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಗಿಡ್ಡಪ್ಪ ತಂದೆ ಗಂಗಪ್ಪ ಯಾದವ್. ವಯ: 32 ವರ್ಷ. ಜಾತಿ: ಗೊಲ್ಲರ್. ಸಾ: ರತ್ನಪುರಹಟ್ಟಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ ಅವರ ಅಣ್ಣನ ಮಗ ಮಲ್ಲೇಶ ತಂದೆ ಪಾಮಪ್ಪ ಹಾಗೂ ಇನ್ನಿತರೆ 20 ಕ್ಕೂ ಹೆಚ್ಚಿನ ಮಕ್ಕಳು ಅಲೆಮಾರಿ ವಸತಿ ಶಾಲೆ ತಾವರಗೇರಾದಲ್ಲಿ ಮದ್ಯಾಹ್ನ ಊಟದ ನಂತರ ತೀವ್ರ ಹೊಟ್ಟೆನೋವು ಮತ್ತು ಎದೆ ಚುಚ್ಚುದಿದ್ದು ನಂತರ ಅವರನ್ನು ಕನ್ನಡ ಸೇನೆ ಕಾರ್ಯಕರ್ತರು ಕರೆದುಕೊಂಡು ಒಂದು ಆಸ್ಪತ್ರೆಗೆ ದಾಖಲು ಮಾಡಿದ್ದು ಇರುತ್ತದೆ. ಕಾರಣ ಆಹಾರ ಕಳಪೆಯಿಂದ ಮಕ್ಕಳ ಜೀವಕ್ಕೆ ತೊಂದರೆ ಬರಲು ಕಾರಣರಾದ ಅಲೆಮಾರಿ ವಸತಿ ನಿಲಯ ತಾವರಗೇರಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಅಡುಗೆದಾರರು ಮತ್ತು ಸಹಾಯಕ ಅಡುಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ಮುಂತಾಗಿ ನೀಡಿದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.
5]  ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 140/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26-09-2017 ರಂದು ಸಾಯಾಂಕಾಲ 16-10 ಗಂಟೆಗೆ ಕುಂಬಳಾವತಿ ಗ್ರಾಮದ ಅಗಸಿ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕಳಕಪ್ಪ ತಂದೆ ಈರಪ್ಪ ಗುಡಿ, ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ರವರು ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-452, 28, 168  ರವರೊಂದಿಗೆ ಠಾಣೆಯಿಂದ ಹೊರಟು ಯರಗೇರಿ ಕ್ರಾಸದಿಂದ ಎಡಕ್ಕೆ ತಿರುಗಿ, ಮದ್ನಾಳ, ಯರಗೇರಿ ಕುಂಬಳಾವತಿ ಗ್ರಾಮವನ್ನು ಸಾಯಾಂಕಾಲ 16-40 ಗಂಟೆಗೆ ತಲುಪಿ ಸಾಯಾಂಕಾಲ 16-45 ಗಂಟೆಗೆ ದಾಳಿಮಾಡಿದಾಗ ಕಳಕಪ್ಪ ತಂದೆ ಈರಪ್ಪ ಗುಡಿ ಹಾಗೂ ಲಕ್ಷ್ಮಣ ತಂದೆ ಹನಮಪ್ಪ ಹನಮಸಾಗರ ಇಬ್ಬರೂ ಸಾ: ಕುಂಬಳಾವತಿ ರವರು ಸಿಕ್ಕಿಬಿದಿದ್ದು ಕಳಕಪ್ಪನ ಹತ್ತಿರ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1519-29 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 750-00 ರೂಪಾಯಿ ಸಿಕ್ಕಿದ್ದು, ಲಕ್ಷ್ಮಣನ ಹತ್ತಿರ 180 ಎಂ.ಎಲ್. ಅಳತೆಯ 29 ಟೆಟ್ರಾ ಪಾಕೇಟಗಳು OLD TAVAREN ಪ್ರತಿಯೊಂದಕ್ಕೆ ಎಂ.ಆರ್.ಪಿ. 56-27 ಅಂತಾ ಬೆಲೆ ಇದ್ದು, ಇವುಗಳ ಒಟ್ಟು ಕಿಮ್ಮತ್ 1631-83 ರೂಪಾಯಿಗಳು ಆಗುತ್ತಿದ್ದು, ಹಾಗೂ ನಗದು ಹಣ 890-00 ರೂಪಾಯಿ ಸಿಕ್ಕಿದ್ದು, ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6]  ಬೇವೂರು ಪೊಲೀಸ್  ಠಾಣೆ  ಗುನ್ನೆ ನಂ. 123/2017 ಕಲಂ: 32, 34  ಕರ್ನಾಟಕ ಅಬಕಾರಿ ಕಾಯ್ದೆ.
ದಿನಾಂಕ: 26.09.2017 ರಂದು ಸಾಯಂಕಾಲ 4:45 ಗಂಟೆಯ ಸುಮಾರಿಗೆ ಆರೋಪಿ ಅಬ್ದುಲ್ ತಂದೆ ಚಂದುಸಾಬ ಡೇರೆದಾರ ವಯ: 20 ವರ್ಷ ಜಾತಿ: ಮುಸ್ಲಿಂ ಉ: ಚಿಕನ್ಶಾಪ್ ವ್ಯಾಪಾರಿ ಸಾ: ಕುದರಿಮೋತಿ ಇತನು ಕುದರಿಮೋತಿ ಗ್ರಾಮದ ಹನಮಂತಪ್ಪ ರ್ಯಾವಣಕಿ ಇವರ ಮನೆಯ ಹತ್ತಿರ ಮಂಗಳೂರು ಗ್ರಾಮಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ಯಾವದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಬೇವೂರ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ ಆರೋಪಿತನು ಸಿಕ್ಕಿಬಿದ್ದಿದ್ದು ಆರೋಪಿತನಿಂದ 90 ಎಂ.ಎಲ್ ಅಳತೆಯುಳ್ಳ ‘’HAYWARDS CHEERS WHISKYಎಂಬ ಲೇಬಲುಳ್ಳ ಒಟ್ಟು  ಮಧ್ಯದ ಟೇಟ್ರಾ ಪಾಕೇಟಗಳು ರೂಪಾಯಿ 843=9 ರೂಪಾಯಿ ಕಿಮ್ಮತ್ತಿನ ಮಧ್ಯವನ್ನು ಹಾಗೂ ಮಧ್ಯ ಮಾರಾಟದ ನಗದು ಹಣ 110=00 ರೂಪಾಯಿಗಳನ್ನು ಜಪ್ತ ಮಾಡಿಕೊಂಡಿದ್ದು, ಸದರಿಯವುಗಳನ್ನು ವೈಭವ ವೈನಶಾಪದಿಂದ ತೆಗೆದುಕೊಂಡು ಬಂದಿರುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ವರದಿ ಸಲ್ಲಿಸಿದ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Tuesday, September 26, 2017

1]  ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 285/2017 ಕಲಂ.  87 Karnataka Police Act.
ದಿನಾಂಕ:- 25-09-2017 ರಂದು 6-00 ಪಿ.ಎಂ.ಕ್ಕೆ. ಪಿ.ಎಸ್.ಐ ಶ್ರೀ ಪ್ರಕಾಶ ಮಾಳಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ತಮ್ಮ ವ್ಯಾಪ್ತಿಯ ಸಂಗಾಪೂರ ಸೀಮಾದ ನರೇಶ ಇವರ ತೋಟದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ, ಪಿ.ಸಿ , 358, 363, 328, 43 ರವರೊಂದಿಗೆ ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307  ನೇದ್ದರಲ್ಲಿ 6-15 ಪಿ.ಎಮ್ ಕ್ಕೆ ಹೊರಟು ಸಂಗಾಪೂರ ದಾಟಿ ಊರ ಹೊರಗೆ ಹೊಗಿ ರಸ್ತೆಯ ಮೇಲೆ ಜೀಪು ನಿಲ್ಲಿಸಿ ಸಂಗಾಪೂರ ಗ್ರಾಮದಿಂದ ಇಬ್ಬರು ಪಂಚರಾದ ರಾಮಕೃಷ್ಣ ತಂದಿ ತಿಮ್ಮಣ್ಣ  ಬೋವಿ  ವಯಾ- 32 ವರ್ಷ  ಸಾ- ಸಂಗಾಪೂರ 2) ವಿರೇಶ ತಂದಿ ವೀರಯ್ಯಸ್ವಾಮಿ  ಅಜ್ಜನಮಠ  ವಯಾ- 30 ವರ್ಷ ಸಾ- ಸಂಗಾಪೂರ ಇವರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಎಲ್ಲರೂ ನಡೆದುಕೊಂಡು ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಸಂಗಾಪೂರ ಸೀಮಾದ  ನರೇಶ ಇವರ ತೋಟದ ಹತ್ತಿರ  ಇರವು ಟವರ್ ಕಂಬದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಆಗ ಸಮಯ 6-45 ಪಿ.ಎಮ್. ಆಗಿತ್ತು. ಗಂಟೆಯಾಗಿತ್ತು. ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 9 ಜನರು ಸಿಕ್ಕಿ ಬಿದ್ದಿದ್ದುವಿಚಾರಿಸಲು ಅವರು ತಮ್ಮ ಹೆಸರುಗಳು  1)  ವಿರೇಶ ತಂದಿ ಸಂಗಪ್ಪ ವಯಾ- 28 ವರ್ಷ ಜಾ- ಲಿಂಗಾಯತ ಉ- ವ್ಯಾಪಾರ ಸಾ- ಮರ್ಲಾನಹಳ್ಳಿ ತಾ- ಗಂಗಾವತಿ 2) ಗಂಗಣ್ಣ @ ಗಂಗಾಧರ ತಂದಿ ಹುಸೇನಪ್ಪ ವಯಾ- 32 ವರ್ಷ  ಉ- ವ್ಯಾಪಾರ ಸಾ- ನೀಲಕಂಠೇಶ್ವರ ಕ್ಯಾಂಪ್ ಗಂಗಾವತಿ 3)  ಜಿಲಾನ ತಂದಿ  ಸೈಯ್ಯದಹುಸೇನ  ವಯಾ- 30 ವರ್ಷ ಜಾ- ಮುಸ್ಲಿಂ ಉ- ವ್ಯಾಪಾರ ಸಾ- ಗುಂಡಮ್ಮ ಕ್ಯಾಂಪ್  ತಾ- ಗಂಗಾವತಿ 4)  ರಾಮಣ್ಣ ತಂದಿ ಭೀರಪ್ಪ  ಲಿಂಗಾಯತ  ಉ-ವ್ಯಾಪಾರ ಸಾ- ಹಿರೆಜಂತಗಲ್ಲ 5) ಶರಣಪ್ಪ ತಂದಿ ರೇಣುಕಪ್ಪ  ಕುರಬರ ವಯಾ- 38 ವರ್ಷ ಜಾ- ಕುರಬರ ಸಾ- ಹಿರೇಜಂತಗಲ್ಲ ತಾ- ಗಂಗಾವತಿ 6)  ನಾಗರಾಜ ತಂದಿ  ಬಸವರಾಜ ಕುರಬರ ವಯಾ- 46 ವರ್ಷ ಉ- ವ್ಯಾಪಾರ ಸಾ- ಹಿರೆಜಂತಗಲ್ಲ ತಾ- ಗಂಗಾವತಿ  7) ರಾಮಣ್ಣ ತಂದಿ ಸಿದ್ದಪ್ಪ ಹಳೆಮನಿ ವಯಾ- 32 ವರ್ಷ ಜಾ-ಕುರಬರ ಉ- ಒಕ್ಕಲುತನ ಸಾ- ಯರಡೋಣಾ  8) ಈರಣ್ಣ ತಂದಿ ಸೋಮಪ್ಪ  ವಯಾ- 35 ವರ್ಷ ಜಾ-ಲಿಂಗಾಯತ ಉ- ವ್ಯಾಪಾರ ಸಾ- ಹಿರೇಜಂತಗಲ್ಲ ತಾ- ಗಂಗಾವತಿ  9) ನರಹರಿ @ ಹರಿ ತಂದಿ ಪ್ರಭಾಕರ  ವಯಾ- 40 ವರ್ಷ ಜಾ- ವೈಶ‍್ಯ  ಉ- ವ್ಯಾಪಾರ ಸಾ- ರಾಯರ ಓಣಿ ಗಂಗಾವತಿ. . ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 15,005/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಹಳೆಯ ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು ವಾಪಾಸ್ ಠಾಣೆಗೆ ಬಂದು ಸದರಿಯವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 266/2017 ಕಲಂ: : 306  ಐ.ಪಿ.ಸಿ.
ದಿನಾಂಕ: 26-09-2017 ರಂದು 00-30  ಗಂಟೆಗೆ ಫಿರ್ಯಾಧಿದಾರರಾದ ಹುಲಿಗೇಮ್ಮ ಗಂಡ ಹನುಮಪ್ಪ ಈಳಿಗೇರ, ವಯಾ 38 ವರ್ಷ, ಜಾತಿ: ಈಳಿಗೇರ, : ಕೂಲಿ ಕೆಲಸ, ಸಾ: ಹನುಮಗೇರಿ. ತಾ: ಕುಷ್ಟಗಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಿಸಿದ ದೂರನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ, ನನ್ನ ಗಂಡನಿಗೆ ಹಣದ ಅಡಚಣೆ ಇದ್ದಾಗ ಪಕ್ಕದ ಹೊಲದ ರಾಮಣ್ಣ ಜಾಧವ್ ಇತನ ಕಡೆಯಿಂದ ಹಣವನ್ನು ಪಡೆದುಕೊಂಡು ನಂತರ ಮರಳಿ ಕೊಡುತ್ತಿದ್ದು ನನ್ನ ಗಂಡನು ಮನೆಗೆ ಬಂದಾಗ ರಾಮಣ್ಣ ಜಾಧವ್ ಇತನು ನನಗೆ ಹಣವನ್ನು ಕೊಡುವಂತೆ ತೊಂದರೆಯನ್ನು ಕೊಡುತ್ತಿದ್ದಾನೆ ಅಂತಾ ಪೇಚಾಡುತ್ತಿದ್ದನು, ನಾನು ನನ್ನ ಗಂಡನಿಗೆ ಎಷ್ಟು ಹಣವನ್ನು ಪಡೆದುಕೊಂಡಿರುವಿ ಅಂತಾ ವಿಚಾರಿಸಿದ್ದಕ್ಕೆ ನನ್ನ ಗಂಡನು ನನಗೇನು ಹೇಳಲಿಲ್ಲಾ ನಾನು ನನ್ನ ಗಂಡನಿಗೆ ಟ್ರಾಕ್ಟರಿಯನ್ನು ಮಾರಿ ಅವರ ಹಣವನ್ನು ಕೊಡು ಅಂತಾ ಅನ್ನೂತ್ತಿರಲು ಅದಕ್ಕೆ ನನ್ನ ಗಂಡನು ಸುಮ್ಮನಾಗುತ್ತಿದ್ದನು. ನನ್ನ ಗಂಡನು ದಿನಾಲೂ ಮಧ್ಯಪಾನವನ್ನು ಮಾಡುತ್ತಿದ್ದನು ರಾಮಣ್ಣನು ನನ್ನ ಗಂಡನಿಗೆ ಮನವೊಲಿಸಿ ನಮ್ಮ ಹೊಲವನ್ನು ಖರೀದಿಮಾಡಬೇಕೆನ್ನುವ ಉದ್ದೇಶದಿಂದ ನನ್ನ ಗಂಡನಿಗೆ ಸಾಲವನ್ನು ಕೊಟ್ಟಿದ್ದು ಹಣವನ್ನು ಮರಳಿ ಕೊಡಲಾರದ್ದರಿಂದ ನಮ್ಮ ಮಾವನವರ ಹೊಲವನ್ನು ಖರೀದಿ ಮಾಡಿದಂತೆ ನಮ್ಮ ಹೊಲವನ್ನು ಸಹ ಖರೀದಿ ಮಾಡಿಕೊಳ್ಳತ್ತೇನೆಂದು ಹೇಳುತ್ತಿದ್ದನುನಿನ್ನೆ ದಿನಾಂಕ: 25-09-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ನಾನು ಆಡುಮರಿಯನ್ನು ಹೊಲದಲ್ಲಿ  ಮೇಯಿಸುತ್ತಿರುವಾಗ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ನಮ್ಮ ತಮ್ಮನಾದ ಪರಶುರಾಮ ಇತನು ನಮ್ಮ ಹೊಲಕ್ಕೆ ಬಂದು ಮಾವನು ಮನೆಯಲ್ಲಿ ಔಷದಿಯನ್ನು ಕುಡಿದು ಮೃತ ಪಟ್ಟಿರುತ್ತಾನೆಂದು ತಿಳಿಸಲು ನಾನು ಗಾಭರಿಗೊಂಡು ಮನೆಗೆ ಬಂದು ನೋಡಲು ಸಂಗತಿಯು ನಿಜವಿದ್ದು ನನ್ನ ಗಂಡನು ಸತ್ತಿದ್ದು ಅತನ ಮೂಗಿನಿಂದ ಬಿಳಿಯ ಬುರುಗು ಬರುತ್ತಿತ್ತು. ನನ್ನ ಗಂಡನಿಗೆ ರಾಮಣ್ಣ ಜಾಧವ್ ಈತನು ಹಣವನ್ನು ಕೊಡುವಂತೆ ತೊಂದರೆಯನ್ನು ಕೊಡುತ್ತಿದ್ದರಿಂದ ಆತನ ಕಿರುಕುಳವನ್ನು ತಾಳಲಾರದೆ ನನ್ನ ಗಂಡನು ಇಂದು ಮನೆಯಲ್ಲಿ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಹೊಲಕ್ಕೆ ಹೊಡೆಯುವ ಯಾವುದೋ ಕ್ರಿಮಿನಾಷಕ ಔಷದಿಯನ್ನು ಸೇವಿಸಿ ಮೃತಪಟ್ಟಿದ್ದು ನನ್ನ ಗಂಡನ ಸಾವಿಗೆ ರಾಮಣ್ಣ ಜಾದವ್ ಈತನೇ ಕಾರಣನಿರುತ್ತಾನೆ ಆತನ ವಿರುದ್ದ ಕಾನೂನು ರೀತಿಯ ಕ್ರಮವನ್ನು ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Sunday, September 24, 2017

1]  ಕುಕನೂರ ಪೊಲೀಸ್  ಠಾಣೆ  ಗುನ್ನೆ ನಂ. 130/2017 ಕಲಂ: : 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ಪಿರ್ಯಾದಿದಾರನ ತಂದೆಯಾದ ಯಲ್ಲಪ್ಪನು ಕುದರಿಮೋತಿ ಸೀಮಾದಲ್ಲಿರುವ ಅದೇ ಗ್ರಾಮದ ಹನುಮಂತಪ್ಪ ಚವ್ಹಾಣ ಇವರ ಹೋಲಕ್ಕೆ ಸಜ್ಜೆ ಕೊಯ್ಯುವ ಕೆಲಸಕ್ಕೆ ಅಂತಾ ಹೋಗಿದ್ದನು. ನಂತರ ಸಾಯಂಕಾಲ  5-30 ಗಂಟೆ ಸುಮಾರಿಗೆ ಯಲ್ಲಪ್ಪನು ಹನುಮಂತಪ್ಪನ ಹೊಲದಿಂದ ಊರ ಕಡೆಗೆ ಬರುವ ಕಾಲಕ್ಕೆ ಸದರಿ ಹನುಮಂತಪ್ಪ ಚವ್ಹಾಣ ಇತನು ತನ್ನ ಮೋಟಾರ್ ಸೈಕಲ್ ನಂ. ಕೆಎ-35/ಯು-1802 ನೇದ್ದರ ಮೇಲೆ ಯಲ್ಲಪ್ಪನನ್ನು ಕುಡಿಸಿಕೊಂಡು ಹೊನ್ನುಣಸಿ ಗ್ರಾಮದಿಂದ ಹಾಗೆ ಯಾವುದೋ ಕೆಲಸಕ್ಕಾಗಿ ಕಿನ್ನಾಳ ಗ್ರಾಮದ ಕಡೆಗೆ ಕರೆದುಕೊಂಡು ಹೋಗುವ ಕಾಲಕ್ಕೆ ಚಿಕ್ಕ ಬೀಡನಾಳ ಸೀಮಾದಲ್ಲಿ ಸಾಯಂಕಾಲ 6-00 ಗಂಟೆಯಿಂದ  7-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ಒಂದು ವಾಹನದ ಚಾಲಕನು ತಾನು ಚಲಾಯಿಸುತಿದ್ದ ವಾಹನವನ್ನು ಮಂಗಳೂರು ಕಡೆಯಿಂದ ಕಿನ್ನಾಳ ಕಡೆಗೆ ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಸದರಿ ಮೋಟಾರ್ ಸೈಕಲ್ಲಿಗೆ ಹಿಂದಿನಿಂದ ಬಲವಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ  ಪಿರ್ಯಾದಿದಾರನ ತಂದೆಯಾದ ಯಲ್ಲಪ್ಪ ಹಾಗೂ ಹನುಮಂತಪ್ಪ ಚವ್ಹಾಣ ಇವರಿಬ್ಬರಿಗೂ ಭಾರಿ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.     
2]  ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 251/2017 ಕಲಂ: : 279, 337, 338, 304(ಎ)  ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.

ದಿನಾಂಕ: 23-09-2017 ರಂದು ಮುಂಜಾನೆ 7-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನಂದರೆ, ನಿನ್ನೆ ದಿನಾಂಕ: 22-09-2017 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮೃತ ಸಂತೋಷಕುಮಾರ ಮತ್ತು ಗಾಯಾಳುಗಳಾದ ಮಲ್ಲಪ್ಪ ತಂದ ಶಂಕ್ರಪ್ಪ, ವೆಂಕಟೇಶ ತಂದೆ ನರಸಿಂಹಲು ಹಾಗೂ ಪೂಜಾ ವಯ: 4 ವರ್ಷ, ಶಂಕರ ವಯ: 3 ವರ್ಷ ಇವರು ಮೋಟರ ಸೈಕಲ್ ನಂ. ಕೆಎ-49/ಜೆ-5039 ನೇದ್ದರಲ್ಲಿ ಗಿಣಗೇರಿಯಿಂದ ಕುಣಕೇರಿ ತಾಂಡಾಕ್ಕೆ ಗಿಣಗೇರಿ-ಅಲ್ಲಾನಗರ ರಸ್ತೆಯಲ್ಲಿ ಸುಣ್ಣದ ಭಟ್ಟಿ ಹತ್ತಿರ ಹೋಗುತ್ತಿರುವಾಗ ಆರೋಪಿತನು ತನ್ನ ಬುಲೆರೋ ಮ್ಯಾಕ್ಸಿಟ್ರಕ್ ವಾಹನ ನಂ. ಕೆಎ-37/ಎ-8317 ನೇದ್ದನ್ನು ಅಲ್ಲಾನಗರ ಕಡೆಯಿಂದ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಮೇಲ್ಕಂಡವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯ ಪೆಟ್ಟುಗಳಾಗಿ ಸಂತೋಷಕುಮಾರನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲಕ್ಕೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

Thursday, September 21, 2017

1]  ಮುನಿರಾಬಾದ ಪೊಲೀಸ್  ಠಾಣೆ  ಗುನ್ನೆ ನಂ. 249/2017 ಕಲಂ: : 279, 337, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ: 20-09-2017 ರಂದು ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ಗಂಗಾವತಿ-ಕೊಪ್ಪಳ ರಸ್ತೆಯಲ್ಲಿ ಗುಡದಳ್ಳಿ ಗ್ರಾಮದ ಭೀಮ್ಮಮ್ಮನ ಗುಡಿ ಹತ್ತಿರ ನಮ್ಮ ಲಾರಿ ಕೆಟ್ಟಿದ್ದರಿಂದ ರಿಪೇರಿ ಮಾಡುವ ಸಲುವಾಗಿ ರಸ್ತೆಯ ಸೈಡಿನಲ್ಲಿ ನಿಲ್ಲಿಸಿ ರಿಪೇರಿ ಮಾಡುತ್ತಿರುವಾಗ ನಮ್ಮ ಲಾರಿಯಲ್ಲಿ ಬಂದಿದ್ದ ಐ.ಲಕ್ಷ್ಮಣ ತಂದೆ ವೆಂಕಟೇಶ್ವರಲು ವಯ: 40 ವರ್ಷ ಇತನು ಲಾರಿಯಿಂದ ಕೆಳಗೆ ಇಳಿದು ಬರುತ್ತಿದ್ದಾಗ ಆರೋಪಿತನು ತನ್ನ ಲಾರಿ ನಂ. ಕೆಎ-48/3667 ನೇದ್ದರ ಚಾಲಕನು ತನ್ನ ಲಾರಿಯನ್ನು ಗಂಗಾವತಿ ಕಡೆಯಿಂದ ಕೊಪ್ಪಳ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಐ.ಲಕ್ಷ್ಮಣನ್ನು ಗಮನಿಸದೇ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಐ.ಲಕ್ಷ್ಮಣ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಆದ್ದರಿಂದ ಲಾರಿ ನಂ. ಕೆಎ-48/3667 ಮತ್ತು ಅದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
2] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 209/2017 ಕಲಂ: : 279, 338  ಐ.ಪಿ.ಸಿ.

ದಿ:20-09-2017 ರಂದು ಮದ್ಯಾಹ್ನ 1-45 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರಮೇಶ ಬಾರಕೇರ. ಸಾ: ಕೋಳೂರ. ಇವರಿಗೆ ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೇಂದರೇ, ದಿ:20-09-2017 ರಂದು ಬೆಳಿಗ್ಗೆ 10-45 ಗಂಟೆಗೆ ಫಿರ್ಯಾದಿದಾರರು ಮಾದಿನೂರ ದಲ್ಲಿ ಶ‍್ರೀ ಹೊನ್ನಿನಕೇರಿ ಮಲ್ಲಯ್ಯ ದೇವರ ದರ್ಶನ ಮುಗಿಸಿಕೊಂಡು ವಾಪಾಸ್ ಊರಿಗೆ ಅಂತಾ ತಮ್ಮ ಮೋಟಾರ ಸೈಕಲ್ ನಂ: ಕೆಎ-37/ಇಎ-2997 ನೇದ್ದನ್ನು ಓಡಿಸಿಕೊಂಡು ಮಾದಿನೂರ-ಕೊಪ್ಪಳ ರಸ್ತೆಯ ಹುಚ್ಚೇಶ್ವರ ಕ್ಯಾಂಪ್ ದಾಟಿ ಬರುತ್ತಿದ್ದಾಗ ಅದೇಸಮಯಕ್ಕೆ ಎದುರುಗಡೆ ಕೊಪ್ಪಳದ ಕಡೆಯಿಂದ ಟ್ರ್ಯಾಕ್ಟರ ಇಂಜನ್ ನಂ: 3100FL73B617945F3 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕರ್ವಿಂಗನ್ನು ಗಮನಿಸದೇ ಬಂದು ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿದಾರರ ಬಲಕಾಲ ಮೊಣಕಾಲ ಕೆಳಗಡೆ ಪಾದದ ಸಮೀಪ ಭಾರಿ ರಕ್ತಗಾಯವಾಗಿ ಮೂಳೆ ಮುರಿದಿರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  

Wednesday, September 20, 2017

1]  ಮುನಿರಾಬಾದ ಪೊಲೀಸ್  ಠಾಣೆ  ಗುನ್ನೆ ನಂ. 248/2017 ಕಲಂ: : 287, 304(ಎ) ಐ.ಪಿ.ಸಿ.
ದಿನಾಂಕ: 19-09-2017 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಪಿರ್ಯಾದಿದಾರರ ಜಮೀನಿ (ಗದ್ದಿ) ನಲ್ಲಿ ತಮ್ಮ ಟ್ರ್ಯಾಕ್ಟರ ನಂ. ಕೆಎ-37/ಟಿಬಿ-2365 ರಲ್ಲಿ ಆರೋಪಿತನು ಕೆಸರು ಗದ್ದಿ ಹೊಡೆಯುತ್ತಿದ್ದಾಗ ಟ್ರ್ಯಾಕ್ಟರ ಕೆಸರಿನಲ್ಲಿ ಸಿಕ್ಕಿಕೊಂಡಿದ್ದರಿಂದ ಮೃತನು ಅದನ್ನು ಹಿಂದಿನಿಂದ ತಳ್ಳುತ್ತಿದ್ದಾಗ ಟ್ರ್ಯಾಕ್ಟರ ಚಾಲಕನಾದ ಜಗದೀಶ ತಂದೆ ಹನಮಪ್ಪ ಎಗ್ಗ ವಯ: 38 ಇತನು ಒಮ್ಮೆಲೆ ಟ್ರ್ಯಾಕ್ಟರ ಎಕ್ಸಲೇಟರನ್ನು ಕೊಟ್ಟು ಜೋರಾಗಿ ಓಡಿಸಿದ್ದರಿಂದ ಟ್ರ್ಯಾಕ್ಟರ ಹಿಂಬದಿಯಾಗಿ ಪಲ್ಟಿಯಾಗಿದ್ದರಿಂದ ಹಿಂದೆ ತಳ್ಳುತ್ತಿದ್ದ ಮೃತ ರವಿಕುಮಾರನು ಟ್ರ್ಯಾಕ್ಟರ ಕೆಳಗೆ ಸಿಕ್ಕಿ ಮೃತಪಟ್ಟಿರುತ್ತಾನೆ ಅಪಘಾತವು ಟ್ರ್ಯಾಕ್ಟರ ಚಾಲಕನಾದ ಜಗದೀಶ ಇತನಿಗೆ ರೀತಿಯಲ್ಲಿ ಟ್ರ್ಯಾಕ್ಟರ ಚಲಾಯಿಸುವುದರಿಂದ ಅಪಘಾತ ಸಂಭವಿಸುತ್ತದೆ ಎಂದು ಗೊತ್ತಿದ್ದರೂ ಸಹಿತ ಟ್ರ್ಯಾಕ್ಟರನ್ನು ನಿರ್ಲಕ್ಷತನದಿಂದ ಮತ್ತು ದುಡುಕಿನಿಂದ ಚಲಾಯಿಸಿದ್ದರಿಂದ ಸಂಭವಿಸುರತ್ತದೆಆದ್ದರಿಂದ ಸದರಿ ಟ್ರ್ಯಾಕ್ಟರ ನಂ. ಕೆಎ-37/ಟಿಬಿ-2365 ಮತ್ತು ಅದರ ಚಾಲಕನಾದ ಜಗದೀಶ ತಂದೆ ಹನಮಪ್ಪ ಎಗ್ಗ ಸಾ: ಕಂಪಸಾಗರ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.   
2] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 138/2017 ಕಲಂ: : 379 ಐ.ಪಿ.ಸಿ.

ದಿನಾಂಕ: 19-09-2017 ರಂದು ಮಧ್ಯಾಹ್ನ 13-3 ಗಂಟೆಗೆ ಫಿರ್ಯಾದಿದಾರರಾದ ಮಲ್ಲಪ್ಪ ಬದಾಮಿ ಸಾ: ಹನಮಸಾಗರ ರವರು ಠಾಣೆಗೆ ಹಾಜರಾತಿ ಲಿಖಿತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 16-09-2017 ರಂದು ತಮ್ಮ ಆಕಳು ಮತ್ತು ಕರುವನ್ನು ಸಂಜೆಯವರೆಗೆ ಮೇಯಿಸಿ ರಾತ್ರಿ 8-00 ಗಂಟೆಯ ಸುಮಾರು ತಮ್ಮ ಹೊಲದ ಶೆಡ್ಡಿನಲ್ಲಿ ಕಟ್ಟಿ ವಾಪಸ್ ಮನೆಗೆ ಬಂದು ನಂತರ ದಿನಾಂಕ: 17-9-2017 ರಂದು ಬೆಳಗಿನ ಜಾವ 5-00 ಗಂಟೆಗೆ ಹಾಲು ಕರೆಯಲು ಹೊಲಕ್ಕೆ ಹೋಗಿ ಶೆಡ್ಡಿನಲ್ಲಿ ನೋಡಲು ಆಕಳು ಮತ್ತು ಕರು ಇರಲಿಲ್ಲ ಅಲ್ಲಿ ಇಲ್ಲಿ ಹುಡುಕಲಾಗಿ ಕಾಣಲಿಲ್ಲ, ನಂತರ ಸಂಜೆ 6-0 ಗಂಟೆಯ ಸುಮಾರು ಫಿರ್ಯಾದಿದಾರರು ಮನೆಯಲ್ಲಿದ್ದಾಗ ತಮ್ಮೂರ ನಾಗಪ್ಪ ಗೊಲ್ಲರ ರವರು ಈತನು ಫೋನ್ ಮಾಡಿ ನಿಮ್ಮ ಆಕಳು ಮತ್ತು ಕರು ಮುದಗಲ್ ಸಂತೆ ಮಾರಾಟಕ್ಕೆ ತಂದಿರುವುದಾಗ ತಿಳಿಸಿ ನಂತರ ನಾಗಪ್ಪನ ವ್ಯಾಟ್ಸಪಗೆ ತರಿಸಿ ನೋಡಲಾಗಿ ಅದು ತಮ್ಮ ಆಕಳು ಮತ್ತು ಕರು ಅಂತಾ ಗೊತ್ತಾಗಿ ಯಾರೂ ತೆಗೆದುಕೊಂಡು ಬಂದಿದ್ದು ಅಂತಾ ವಿಚಾರಿಸಲಾಗಿ ತಮ್ಮೂರ ಹುಲಗಪ್ಪ ತಂದೆ ಹನಮಪ್ಪ ಗುಡಿಹೊಲ ಮತ್ತು ಆತನ ಹೆಂಡತಿ ಮಂಜವ್ವ ಗಂಡ ಹುಲಗಪ್ಪ ಗುಡಿಹೊಲ ರವರು ತೆಗೆದುಕೊಂಡ ಹೋದ ಬಗ್ಗೆ ತಿಳಿದು ಬಂದಿದ್ದು, ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

 
Will Smith Visitors
Since 01/02/2008