Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 1, 2017

1]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 254/2017 ಕಲಂ: 279, 337, 304(ಎ) .ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 30-09-2017 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಎನ್.ಎಚ್-50 ರಸ್ತೆಯಲ್ಲಿ ಶಹಪೂರ ಕ್ರಾಸ್ ಹತ್ತಿರ ಮೃತ ಬಸಪ್ಪ ತಂದೆ ಸಂಗಪ್ಪ ತೋಟದ ಮತ್ತು ಆತನ ಮಗನಾದ ಬಸಲಿಂಗಪ್ಪ ತಂದೆ ಬಸಪ್ಪ ತೋಟದ ಇಬ್ಬರು ತಮ್ಮ ಮೋಟರ ಸೈಕಲ್ ನಂ. ಕೆಎ-37/ಇಬಿ-0203 ನೇದ್ದರಲ್ಲಿ ಹುಲಗಿಯಿಂದ ಕ್ಯಾದಗುಂಪಾಕ್ಕೆ ಬರುತ್ತಿರುವಾಗ ಹಿಂದಿನಿಂದ ಆರೋಪಿತನು ತನ್ನ ಲಾರಿ ನಂ. ಹೆಚ್.ಆರ್-55/ಎಂ-9978 ನೇದ್ದನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಬಸಪ್ಪ ತಂದೆ ಸಂಗಪ್ಪ ತೋಟದ ಇತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಸಲಿಂಗಪ್ಪ ತಂದೆ ಬಸಪ್ಪ ತೋಟದ ಇತನು ಗಾಯಗೊಂಡಿದ್ದು ಇರುತ್ತದೆ.  ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಲಾರಿ ನಂ. ಹೆಚ್.ಆರ್-55/ಎಂ-9978 ಮತ್ತು ಅದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಮುಂತಾಗಿದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 
2]  ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 126/2017 ಕಲಂ. 32, 34 Karnataka Excise Act.
ದಿನಾಂಕ : 30-09-2017 ರಂದು ಸಾಯಂಕಾಲ 6-50 ಗಂಟೆ ಸುಮಾರಿಗೆ ಆರೋಪಿತನು ಕೋನಸಾಗರ ಗ್ರಾಮದಿಂದ ಚಿಕ್ಕಬನ್ನಿಗೋಳ ಗ್ರಾಮಕ್ಕೆ ಹೋಗುವ ರಸ್ತೆಯ ಪಶ್ಚಿಮಭಾಗದಲ್ಲಿರುವ ಶುದ್ದಕುಡಿಯುವ ನೀರಿನ ಘಟಕದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಧ್ಯಸಾರ ಮಾರಾಟ ಮಾಡಲು ಯಾವುದೇ ಪರವಾನಿಗೆ ಪಡೆದುಕೊಳ್ಳದೆ ಅನಧೀಕೃತವಾಗಿ ಮಧ್ಯಸಾರದ ಟ್ರೇಟ್ರಾ ಪಾಕೀಟಗಳನ್ನು ಜನರಿಗೆ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ಯಲಬುರ್ಗಾ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1] 90 ML ನ HAYWARDS CHEERS WHISKY -ಒಟ್ಟು 64 (ಅರವತ್ತು ನಾಲ್ಕು] ಟೇಟ್ರಾ ಪಾಕೀಟಗಳು. ಪ್ರತಿಯೊಂದಕ್ಕೆ -28.13 ರೂ. ಗಳಂತೆ ಒಟ್ಟು 1800.32 ರೂ. 2] ಒಂದು ಪ್ಲಾಸ್ಟಿಕ್ ಚೀಲ ಅ.ಕಿ.ಇಲ್ಲ 3] ಮಧ್ಯಾಸಾರ ಮಾರಾಟದಿಂದ ಬಂದ ನಗದು ಹಣ : 130/- ರೂಗಳು. ಹೀಗೆ ಎಲ್ಲಾ ಸೇರಿ ಒಟ್ಟು 1950.32/- ರೂ ಸಿಕ್ಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 150/2017 ಕಲಂ. 392  ಐ.ಪಿ.ಸಿ:.
ದಿನಾಂಕ: 30-09-2017 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಶಾಂತಾ ಗಂಡ ಶಿವಾಜಿ ಮುಂಡರಗಿ ಸಾ: ಅಭಿಷೆಕ ಬಡಾವಣೆ ಭಾಗ್ಯನಗರ ಕೊಪ್ಪಳ ಇವರು ದೂರಿನ್ನು ನೀಡಿದ್ದು, ರಾತ್ರಿ 8-30 ಗಂಟೆಯ ಸುಮಾರಿಗೆ ತಾನು ಮತ್ತು ತನ್ನ ಮಗಳು ಕೂಡಿಕೊಂಡು ತಮ್ಮ ಓಣಿಯಲ್ಲಿ ತಮಗೆ ಪರಿಚಯವಿರು ಹನುಮಂತಗೌಡ ಇವರ ಮನೆಗೆ ಬನ್ನಿ ಕೋಡಲು ಹೋಗುತ್ತಿದ್ದಾಗ ಯಾರೊ ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ಮೋಟಾರ ಸೈಕಲ್ ಮೆಲೆ ಬಂದು ಫೀರ್ಯಾದಿದಾರರ ಕೋರಳಲ್ಲಿದ್ದ ಬಂಗಾರದ ಮಾಂಗಲ್ಯ ಸರ ಅಂ.ತೂ 45 ಗ್ರಾಂ ನೇದ್ದನ್ನು ಬಲವಂತವಾಗಿ ಕಿತ್ತುಕೊಂಡು ಮುಂದಿನಿಂದ ಹೋಗಿದ್ದು ಇರುತ್ತದೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದವನು ಸ್ವಲ್ಪ ದಪ್ಪಗೆ ಇದ್ದನು, ಆದರೆ ಮೋಟಾರ ಸೈಕಲ್ ಬಣ್ಣ ಗೊತ್ತಿರುವುದಿಲ್ಲಾ, ಹಾಗೂ ಅವನು ಮುಖಕ್ಕೆ ಬಟ್ಟೆಯನ್ನು ಕಟ್ಟಿದ್ದನು. ಕಾರಣ ಮಾನ್ಯರವರು ನನ್ನ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಹೋದವನನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ. ನಂ. 226/2017 ಕಲಂ. 87 Karnataka Police Act.

ದಿನಾಂಕ 30-09--2017 ರಂದು ರಾತ್ರಿ 11-45 ಗಂಟೆಯ ಸುಮಾರಿಗೆ ಕಾರಟಗಿಯ ದಲಾಲಿ ಬಜಾರದ ಮಾತೃಮಂದಿರ ಶಾಲೆಯ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 14  ಜನ ಆರೋಪಿ ನೇದ್ದವರು ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 22,550/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.    

Saturday, September 30, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 212/2017 ಕಲಂ: 279, 338  .ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿ:29-09-2017 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಪ್ರಶಾಂತ ಹೈದ್ರಾಬಾದ. ಸಾ: ಅಲ್ಲಾನಗರ, ತಾ: ಕೊಪ್ಪಳ.  ಕಿನ್ನಾಳದಲ್ಲಿ ತಮ್ಮ ವೈಯಕ್ತಿಕ ಕೆಲಸ ಮುಗಿಸಿಕೊಂಡು ವಾಪಾಸ್ ಕೊಪ್ಪಳಕ್ಕೆ ಅಂತಾ ಆರೋಪಿ ನಂ: 01 ನೇದ್ದವರ ಆಟೋದಲ್ಲಿ ಕುಳಿತುಕೊಂಡು ಮಾರ್ಗದ ಚಿಲವಾಡಗಿ ದಾಟಿ ಟೈಲ್ಸ ಫ್ಯಾಕ್ಟರಿ ಸಮೀಪ ಬರುವಾಗ ಸದರಿ ಆಟೋ ಚಾಲಕ ಮತ್ತು ಎದುರುಗಡೆ ಬಂದ ಆರೋಪಿ ನಂ: 02 ಟಿ.ವಿ.ಎಸ್ ಮೋಟಾರ ಸೈಕಲ್ ನಂ:ಕೆಎ-37/ಇಸಿ-3053 ನೇದ್ದರ ಚಾಲಕ ಹೀಗೆ ಇಬ್ಬರೂ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅಪಘಾತ ಮಾಡಿದ್ದರಿಂದ, ಆಟೋದಲ್ಲಿದ್ದ ಫಿರ್ಯಾದಿದಾರರಿಗೆ ಹಾಗೂ ಆರೋಪಿ ನಂ: 02 ನೇದ್ದವರಿಗೆ ಭಾರಿಗಾಯಗಳಾಗಿದ್ದು ಇರುತ್ತದೆ. ಅಪಘಾತ ಮಾಡಿದ ಆಟೋ ಚಾಲಕನು ತನ್ನ ವಾಹನ ಸಮೇತ ಹೋಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 225/2017 ಕಲಂ. 32, 34 Karnataka Excise Act.
ದಿನಾಂಕ : 29-09-2017 ರಂದು ರಾತ್ರಿ 9-30 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ, ದಿನಾಂಕ 29-09-2017 ರಂದು ರಾತ್ರಿ 8-10  ಗಂಟೆಗೆ ಕಾರಟಗಿ ನಗರದ ಕಾರಟಗಿ-ನವಲಿ ರಸ್ತೆಯ  ಪಕ್ಕದಲ್ಲಿ ಇರುವ ವೈಟ್ ಹಾರ್ಸ್ ಡಾಬಾದಲ್ಲಿ  ಮೇಲ್ಕಂಡ ಆರೋಪಿತನು  ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು  ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಆ ಕಾಲಕ್ಕೆ ಆರೋಪಿತನು ಪೊಲೀಸ್ ರನ್ನು ನೋಡಿ ಓಡಿ ಹೋಗಿರುತ್ತಾನೆ. ಸದ್ರಿ ಆರೋಪಿತನ ಡಾಬಾದಿಂದ ಒಟ್ಟು 21 ಮದ್ಯದ ಬಾಟಲಿಗಳು ಅಂದಾಜು ಕಿಮ್ಮತ್ತು ರೂ. 2595=00 ಬೆಲೆ ಬಾಳುವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 148/2017 ಕಲಂ. 143, 147 ,148, 341, 354, 355, 324, 323, 448, 404, 506 ಸಹಿತ 149  ಐ.ಪಿ.ಸಿ:.
ದಿನಾಂಕ: 29-09-2017 ರಂದು 7-00 ಗಂಟೆಗೆ ಫಿರ್ಯಾದಿ ಮಂಜುಳಾ ಮುದೋಳ ಸಾ: ಬೆಂಕಿನಗರ ಕೊಪ್ಪಳ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಮ್ಮ ಅಕ್ಕನಾದ ಶಿಲ್ಪಾ ಇವಳಿಗೆ ಬೆಂಕಿನಗರದ ನಿವಾಸಿಯಾದ ಬಸವರಾಜ ವಣಗೇರಿ ಈತನ ಅಳಯನಾದ ಮಂಜುನಾಥ ಈತನು 03 ದಿನಗಳ ಹಿಂದೆ ಅಪಹರಣ ಮಾಡಿಕೊಂಡು ಹೋಗಿದ್ದಾನೆಂದು ತಿಳಿದು ಆತನ ಮೇಲೆ ದೂರು ನೀಡಲು ಅನವಟ್ಟಿಗೆ ಹೋಗಿದ್ದು, ಅದನ್ನೆ ನಮ್ಮ ಮೇಲೆ ಸಿಟ್ಟು ಮಾಡಿಕೊಂಡು ಮುಂಜಾನೆ 06-30 ಗಂಟೆಗೆ ಆರೋಪಿತರೆಲ್ಲರೂ ನಮ್ಮ ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ ನನ್ನ ತಾಯಿಗೆ ಮನೆಯ ಹೊರಗಡೆ ಎಳೆದುಕೊಂಡು ಬಂದು ಅವಳಿಗೆ ಕಟ್ಟಿಗೆಯಿಂದ ಕೈಯಿಂದ ಹೊಡಿಬಡಿ ಮಾಡಿ ಸಾರ್ವಜನಿಕರ ಮುಂದೆ ಅವಮಾನ ಮಾಡಿದ್ದು ಅಲ್ಲದೆ ಬಿಡಿಸಲು ಹೋದ ನನಗೆ ಮತ್ತು ನನ್ನ ಅಜ್ಜಿಗೆ ಚೆಪ್ಪಲಿಯಿಂದ ಹೊಡೆದು ದುಖಾಪತ್ ಗೊಳಿಸಿದ್ದು ಅಲ್ಲದೆ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ  ಹಾಕಿದ್ದಾರೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್  ಠಾಣೆ  ಗುನ್ನೆ. ನಂ. 149/2017 ಕಲಂ. 341, 324, 323, 504, 506  ಸಹಿತ 34  ಐ.ಪಿ.ಸಿ ಮತ್ತು 3[1][10][11] ಎಸ್.ಸಿ/ಎಸ್.ಟಿ. ಕಾಯ್ದೆ:.

ದಿನಾಂಕ: 29-09-2017 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಫಿರ್ಯಾದಿ ವಿಜಯಶ್ರೀ ಸಾ: ವಣಗೇರಿ ಹಾಲಿ: ಬೆಂಕಿನಗರ ಕೊಪ್ಪಳ ನಮ್ಮ ದೊಡ್ಡಪ್ಪನ ಮನೆಯ ಹತ್ತಿರ ಇರುವ ಶಿಲ್ಪಾ ಇವರ ತಾಯಿ ಮತ್ತು ಅವಳ ತಂಗಿ, ಮತ್ತು ಅಜ್ಜಿ ಹಾಗೂ ಶಿಲ್ಪಾಳ ಮಾವ ಪರಶುರಾಮ ಇವರು ಇದ್ದಾಗ ನಾನು ಅವರಿಗೆ ನನ್ನ ಸಂಸಾರ ಹಾಳು ಮಾಡಿದಿರಿ ನಾನು ಏನು ಅನ್ಯಾಯ ಮಾಡಿದ್ದೆನು. ಅಂತಾ ಕೇಳಿದ್ದರಿಂದ ಶಿಲ್ಪಾಳ ತಾಯಿ ಮತ್ತು ತಂಗಿ ನನ್ನ ಮೇಲೆ ಏರಿ ಬಂದು ಬೋಸೂಡಿ ವಡ್ಡರ ಸೂಳೆಯರ ನಮಗೇನು ಗೊತ್ತು ನೀನು ಏನ ಮಾಡತೀಯಾ ಮಾಡಿಕೋ ನಿಮ್ಮ ಮನೆಯವರನ್ನು ನೋಡಿಕೊಳ್ಳುತ್ತೇನೆ, ಮಂಜುಳಾ ನನ್ನ ಬಲತೊಡೆಯನ್ನು ಕಚ್ಚಿದ್ದಾಳೆ. ಅವರ ಅಜ್ಜಿ ಮತ್ತು ತಾಯಿ ಇಬ್ಬರು ನಮ್ಮ ತಾಯಿಯನ್ನು ಗಟ್ಟಿಯಾಗಿ ಹಿಡಿದಿದ್ದು, ಪರಶುರಾಮ ಈತನು ಕುಂಡಲವನ್ನು ತೆಗೆದುಕೊಂಡು ನನ್ನ ತಾಯಿ ಮೇಲೆ ಎತ್ತಿ ಹಾಕಿದನು. ಅವರ ತಾಯಿ ಮತ್ತು ಅಜ್ಜಿ ಸೇರಿ ನನ್ನ ಬಟ್ಟೆಗಳನ್ನು ಹರಿದು ತಾಳಿ ಹರಿದರು ನಮ್ಮ ಹುಡುಗಿಗೆ ನಾವೇ ಮದುವೆ ಮಾಢಿದ್ದೀವಿ ನೀವು ಏನ್ ಮಾಡಿಕೊಳ್ಳುತ್ತೀರಿ ಅಂತಾ ಕುದಲು ಹಿಡಿದು ಬಡಿದರು. ಕಾರಣ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಮಾನ ಅಪಮಾನ ಮಾಡಿ ಗಾಯಗೊಳಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.

Friday, September 29, 2017

1]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 222/2017 ಕಲಂ: 379,  .ಪಿ.ಸಿ ಮತ್ತು ಕೆ.ಎಂ.ಎಂ.ಸಿ. ರೂಲ್ಸ್ 3, 36 ಮತ್ತು 42 44 ಹಾಗೂ ಎಂ.ಎಂ.ಆರ್.ಡಿ ಕಾಯ್ದೆ 1957 ರೂಲ್ 4, 4(1), 4(a)ಸಹಿತ 21(4), 21.
ದಿನಾಂಕ 28-09-2017 ರಂದು ಬೆಳಗಿನ 10-30 ಗಂಟೆಗೆ ಟಿಪ್ಪರ್ ನಂ ಕೆಎ-51/ಎಎ-4277 ನೇದ್ದರ  ಚಾಲಕ ಮರಳನ್ನು ತನ್ನ ಟಿಪ್ಪರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ ಸದರ್ ಟಿಪ್ಪರ್ ನ್ನು ಪಂಚರ ಸಮಕ್ಷಮದಲ್ಲಿ ಟಿಪ್ಪರ್ ಮತ್ತು ಅದರಲ್ಲಿ ಒಟ್ಟು 6,500=00 ಬೆಲೆಬಾಳವು ಮರಳನ್ನು ಶ್ರೀ ಎಂ. ಶಿವಕುಮಾರ ಜಪ್ತುಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿ ಸದರಿ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ಮೇಲಿನ ಟಿಪ್ಪರ್ ಮಾಲೀಕ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
2]  ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 223/2017 ಕಲಂ. ಕಲಂ: 379,  .ಪಿ.ಸಿ ಮತ್ತು ಕೆ.ಎಂ.ಎಂ.ಸಿ. ರೂಲ್ಸ್ 3, 36 ಮತ್ತು 42, 44 ಹಾಗೂ ಎಂ.ಎಂ.ಆರ್.ಡಿ ಕಾಯ್ದೆ 1957 ರೂಲ್ 4, 4(1), 4(a)ಸಹಿತ 21(4), 21.
ದಿನಾಂಕ 28-09-2017 ರಂದು ಸಂಜೆ 5-00 ಗಂಟೆಗೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ್, ಮೂಲ ವರದಿ ಹಾಗೂ ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 28-09-2017 ರಂದು ಸಂಜೆ 4-00 ಗಂಟೆಗೆ ಟಿಪ್ಪರ್ ನಂ GA-09/U-2911  ನೇದ್ದರ  ಚಾಲಕ ಮರಳನ್ನು ತನ್ನ ಟಿಪ್ಪರ್ ದಲ್ಲಿ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದಾಗ ಸದರ್ ಟಿಪ್ಪರ್ ನ್ನು ಪಂಚರ ಸಮಕ್ಷಮದಲ್ಲಿ ಟಿಪ್ಪರ್ ಮತ್ತು ಅದರಲ್ಲಿ ಒಟ್ಟು 6,500=00 ಬೆಲೆ ಬಾಳವು ಮರಳನ್ನು ಜಪ್ತುಪಡಿಸಿಕೊಂಡು ಠಾಣೆಗೆ ತಂದು ಹಾಜರುಪಡಿಸಿ ಸದರಿ ಮರಳನ್ನು ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ಮೇಲಿನ ಟಿಪ್ಪರ್ ಮಾಲೀಕ ಮತ್ತು ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
3] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ. ನಂ. 125/2017 ಕಲಂ. 205, 419, 420, 465, 468, 504, 506 ಸಹಿತ 149 ಐ.ಪಿ.ಸಿ:.

ಸನ್-2007 ರಲ್ಲಿ ಫಿರ್ಯಾದಿದಾರಳ ಗಂಡ ಮೃತ ಪಟ್ಟಿದ್ದು, ಆತನು ಮೃತ ಪಟ್ಟ ನಂತರ ಆತನ ಹೆಸರಿನಲ್ಲಿರುವ ಲಿಂಗನಬಂಡಿ ಸೀಮಾದ ಜಮೀನು ಸರ್ವೇ ನಂ: 84/ಆ ನೇದ್ದನ್ನು ತಾನೇ ಸಾಗುವಳಿ ಮಾಡಿಕೊಂಡು ವಾಸವಾಗಿರುತ್ತಾಳೆ. ಸನ್-2010-11 ನೇ ಸಾಲಿನಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿದಾರಳ ಹೆಸರಿನಲ್ಲಿರುವ ಜಮೀನನ್ನು ಫಿರ್ಯಾದಿದಾರನ ಗಂಡನ ಹೆಸರನ್ನು ಖೊಟ್ಟಿ ಸಹಿ ಮಾಡಿ, ನಕಲಿ ಪೋಟೋ ತೆಗೆದು, ಯಲಬುರ್ಗಾ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಫಿರ್ಯಾದಿದಾರರ ಹೆಸರಿನಲ್ಲಿರುವ ಜಮೀನುನ್ನು ಖರೀದಿ ನೊಂದಣಿ ಮಾಡಿಕೊಂಡು, ಫಿರ್ಯಾದಿದಾರರಿಗೆ ಮೋಸ ವಂಚನೆ, ಆಸ್ತಿ ಕಬಳಿಸುವ ಹುನ್ನಾರ ಮಾಡಿರುತ್ತಾರೆ. ಮತ್ತು ಮಾರಾಟ ಮಾಡಿದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಲಿಂಗನಬಂಡಿ ಗ್ರಾಮದಲ್ಲಿ ಫಿರ್ಯಾದಿದಾರಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008