Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, October 8, 2017

1]  ಬೇವೂರ ಪೊಲೀಸ್  ಠಾಣೆ  ಗುನ್ನೆ ನಂ. 128/2017 ಕಲಂ.  87 Karnataka Police Act.
ತರಲಕಟ್ಟಿ ಗ್ರಾಮದ ದುರ್ಗಾ ದೇವಸ್ಥಾನದ ಮುಂದೆ ಇರುವ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 05 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸದರಿ ದಾಳಿಯ ಕಾಲಕ್ಕೆ 2 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸದರಿ ಸಿಕ್ಕಿಬಿದ್ದ ಆರೋಪಿತರಿಂದ 8120=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
2]  ಬೇವೂರ ಪೊಲೀಸ್  ಠಾಣೆ  ಗುನ್ನೆ ನಂ. 129/2017 ಕಲಂ.  87 Karnataka Police Act.
ಹಿರೇವಂಕಲಕುಂಟಾ-ಚಿಕ್ಕವಂಕಲಕುಂಟಾ ರಸ್ತೆಯ ಅಮರೇಶ ಇವರ ಸಿಮೇಂಟ್ ಇಟ್ಟಂಗಿ ಭಟ್ಟಿ ಹತ್ತಿರ ರಸ್ತೆಯ ಪಕ್ಕಕ್ಕೆ ಇರುವ ವಿಧ್ಯುತ್ ಕಂಬದ ಬೆಳಕಿನ ಕೆಳಗೆ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 06 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, ಸದರಿ ಸಿಕ್ಕಿಬಿದ್ದ ಆರೋಪಿತರಿಂದ 1400=00 ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
3] ಕೊಪ್ಪಳ  ಗ್ರಾಮೀಣ  ಪೊಲೀಸ್  ಠಾಣೆ   ಗುನ್ನೆ ನಂ. 223/2017 ಕಲಂ. 32, 34 Karnataka Excise Act.
ದಿ:07-10-2017 ರಂದು ಸಂಜೆ 6-00 ಗಂಟೆಗೆ ಠಾಣಾ ವ್ಯಾಪ್ತಿಯ ಹಾಲವರ್ತಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಶ್ರೀ. ಗುರುರಾಜ ಪಿ.ಎಸ್.ಐ. ರವರಿಗೆ ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಸಂಜೆ 6-30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90 ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ 1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 234/2017 ಕಲಂ. 379 ಐ.ಪಿ.ಸಿ :.

ದಿನಾಂಕ: 07-10-2017 ರಂದು ಮುಂಜಾನೆ 8-30 ಗಂಟೆಗೆ ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ್ದು ಅದರ ಸಾರಾಂಶದಲ್ಲಿ ದಿನಾಂಕ 05-10-2017 ರಂದು ಮುಂಜಾನೆ 9-00 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ ಕಾರಟಗಿಯ ಪಟ್ಟಣದ ನಾಡ ಕಚೇರಿಯ ಹತ್ತಿರ ನನ್ನ ಮಗನ ಮನೆಯ ಮುಂದೆ ಇಟ್ಟ ಮ್ಮ ಹಿರೋ ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ.ಕೆಎ-36/ಎಕ್ಸ್-8529 ಅದರ ಚಾಸ್ಸಿ ನಂ MBLHA10EWBGF16560 ಮತ್ತು ಇಂಜಿನ್ ನಂ. HA10EDBGF38242 .ಕಿ.ರೂ.20,000/-ನೇದ್ದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಬಗ್ಗೆ ನಾವು ಸುತ್ತ-ಮುತ್ತಲಿನ ಊರುಗಳಿಗೆ ಹೋಗಿ ಹುಡುಕಾಡಿದರೂ ಕಳುವಾದ ಮೋ.ಸೈ. ಸಿಗದೆ ಇದ್ದುದ್ದರಿಂದ ದಿವಸ ತಡವಾಗಿ ಠಾಣೆಗೆ ಬಂದು ದೂರ ನೀಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Saturday, October 7, 2017

1]  ಮುನಿರಾಬಾದ  ಪೊಲೀಸ್  ಠಾಣೆ  ಗುನ್ನೆ ನಂ. 256/2017 ಕಲಂ.  353 ಐ.ಪಿ.ಸಿ:
ದಿನಾಂಕ: 06-10-2017 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ. ಜಯಪ್ರಕಾಶ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದೂರನ್ನು ನೀಡಿದ್ದು ಅದರ ಸಾರಾಂಶವೇನಂದರೆ, ಕಾಸನಕಂಡಿ -ಹಿರೇಬಗನಾಳ ಗ್ರಾಮದ ರಸ್ತೆ ರಿಪೇರಿ ಕಾಮಗಾರಿ ಸಮಯದಲ್ಲಿ ಆರೋಪಿತನು ತಕರಾರು ಮಾಡುತ್ತಾನೆ, ಆ ಸಮಯದಲ್ಲಿ ಪಿರ್ಯಾದಿದಾರರು ಹಾಜರಿದ್ದು ಆತನಿಗೆ ತಿಳಿ ಹೇಳಲು ವಿನಂತಿ ಎಂದು ಪಿ.ಡಿ.. ಹಿರೇಬಗನಾಳ ಇವರು ನೀಡಿದ ಅರ್ಜಿಯ ಮೇರೆಗೆ ಪಿರ್ಯಾದಿದಾರರು ಇಂದು ದಿನಾಂಕ: 06-10-2017 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಕಾಸನಕಂಡಿ-ಹಿರೇಬಗನಾಳ ರಸ್ತೆಯಲ್ಲಿ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಹೋಗಿದ್ದ ಸಮಯದಲ್ಲಿ ಆರೋಪಿ ಆನಂದಪ್ಪನು ಏಕಾಏಕಿ ಬಂದವನೇ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದಾಡಿ ಕರ್ತವ್ಯ ನಿರ್ವಹಿಸದಂತೆ ಅಡತಡೆ ಮಾಡಿ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೇನೆ.
2]  ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ   ಗುನ್ನೆ ನಂ. 302/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ :  06-10-2017 ರಂದು ನವೀನಕುಮಾರ ತಂದಿ ಸುಬ್ಬಾರಾವ್ ಶೇಷಯ್ಯ ವಯಾ- 30 ವರ್ಷ ಈತನು  ತನ್ನ ವೈಯಕ್ತಿಕ ಕೆಲಸದ ಸಲುವಾಗಿ ತನ್ನ ಯಮಹ ಮೋಟಾರ್ ಸೈಕಲ್ ನಂ : ಕೆ.ಎ- 35 / ಯು- 3860 ನೇದ್ದರಲ್ಲಿ ಗಂಗಾವತಿಯಲ್ಲಿ ಕೆಲಸವಿದೆ ಅಂತಾ ನಮ್ಮೂರಿನಿಂದ ಗಂಗಾವತಿಗೆ ಬೆಳಗ್ಗೆ ಬಂದಿದ್ದನು. ಮದ್ಯಾಹ್ನ- 3-30 ಗಂಟೆಯ ಸುಮಾರಿಗೆ ಬಕಾರ್ ತಂದಿ  ಗುಲಾಮ ಸಮದಾನಿ  ಸಾ-ವಡ್ಡರಹಟ್ಟಿಕ್ಯಾಂಪ್ ಇವರು  ನವೀನಕುಮಾರ ಈತನ ಮೊಬೈಲನಿಂದ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ,  ನವೀನಕುಮಾರ ಈತನು  ಗಂಗಾವತಿಯಲ್ಲಿ ಕೆಲಸ ಮುಗಿಸಿಕೊಂಡು ಕಂಪ್ಲಿಗೆ ಹೋಗಲೆಂದು ಗಂಗಾವತಿ-ಕಂಪ್ಲಿ ರಸ್ತೆಯಲ್ಲಿ ದೇವಿನಗರ ಹತ್ತಿರ ತನ್ನ ಮೊಟಾರ್ ಸೈಕಲ್ ಮೇಲೆ  ರಸ್ತೆಯ ಎಡಬದಿಗೆ ಮಧ್ಯಾಹ್ನ 3-15 ಗಂಟೆಯ ಸುಮಾರಿಗೆ  ಹೊರಟಿದ್ದಾಗ್ಗೆ ಕಂಪ್ಲಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ- 37 / ಎಫ್- 0427 ರ ಚಾಲಕ ಮಲ್ಲಪ್ಪ ದಳವಾಯಿ-ಗಂಗಾವತಿ ಡಿಪೋ ಈತನು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನವೀನಕುಮಾರನ ಮೋಟಾರ ಸೈಕಲಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ  ನವೀನಕುಮಾರನಿಗೆ ತಲೆಗೆ ಮುಖಕ್ಕೆ, ಕೈಕಾಲುಗಳಿಗೆ  ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 278/2017 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 06-10-2017 ರಂದು ಪ್ರತಿದಿನದಂತೆ ಪ್ರಶಾಂತ ಇತನು ಯಲಬುರ್ತಿಯಿಂದ ಕೊರಡಕೇರಾಕ್ಕೆ ಶಾಲೆಗೆ ಸೈಕಲ್ ನ್ನು ತೆಗೆದುಕೊಂಡು ಶಾಲೆಗೆ ಬೆಳಿಗ್ಗೆ ಹೋಗಿ ವಾಪಾಸ್ ಸಾಯಂಕಾಲ 4-30 ಗಂಟೆಗೆ ಶಾಲೆ ಬಿಟ್ಟ ನಂತರ ಸೈಕಲ್ ನ್ನು ತೆಗೆದುಕೊಂಡು ತಮ್ಮೂರಾದ ಯಲಬುರ್ತಿಗೆ ಹೋಗುತ್ತಿರುವಾಗ ಸಾಯಂಕಾಲ 4-45 ಗಂಟೆಯ ಸುಮಾರಿಗೆ ಯಲಬುರ್ತಿ ಕೊರಡಕೇರಾ ರಸ್ತೆಯ ಮಹಾಂತಮ್ಮ ಬಳೂಟಗಿ ಇವರ ಹೊಲದ ಹತ್ತಿರ ಹೋಗುತ್ತಿದ್ದಾಗ ಮೊ.ಸೈ ನಂ: ಕೆ.-37/ಇಎ-9416 ನೇದ್ದರ ಸವಾರನಾದ ಲಕ್ಷ್ಮಪ್ಪ ತಂದೆ ಹೊನ್ನಪ್ಪ @ ಗೌಡಪ್ಪ ಪೂಜಾರಿ ಸಾ: ಯಲಬುರ್ತಿ ಇತನು ಮೊ.ಸೈ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರ ಮಾಡಿ ಮೊ.ಸೈ ನ್ನು ಬಿಟ್ಟು ಓಡಿ ಹೋಗಿದ್ದು ಇದ್ದರಿಂದ ಸದರಿ ಪ್ರಶಾಂತನ ತಲೆಯ ಹಿಂದುಗಡೆ ಎಡಗಡೆಗೆ ಭಾರಿ ರಕ್ತ ಗಾಯವಾಗಿ ಕಿವಿಯಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4]  ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 303/2017 ಕಲಂ. 87 Karnataka Police Act.

ದಿನಾಂಕ: 06-10-2017 ರಂದು ಸಂಜೆ ನಾನು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಸೀಮಾದ ತಾಯಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ, ಹೆಚ್.ಸಿ. 44, ಪಿ.ಸಿ 363, 180, 60, ಎ.ಪಿ.ಸಿ. 15 ರವರು ಮತ್ತು ಪಂಚರನ್ನು ಕರೆದುಕೊಂಡು ಹೋಗಿ ಭಾತ್ಮೀ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ತಾಯಮ್ಮನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ  (1) ಬಸವರಾಜ ಕೋರಿ ತಂದೆ ರುದ್ರಪ್ಪ, ವಯಸ್ಸು 35 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಆರಾಳ ಹಾಗೂ ಇತರೆ 4 ಜನರು ಸಿಕ್ಕಿ ಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,590/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಖಾಲಿ ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, October 6, 2017

1]  ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 277/2017 ಕಲಂ.  87 Karnataka Police Act.
ದಿನಾಂಕ : 05-10-2017 ರಂದು ಸಾಯಂಕಾಲ 5-00 ಗಂಟೆಗೆ  ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಪ್ರಕರಣವನ್ನು ದಾಖಲು ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೇಳಿದ್ದು ಸದರಿ ಪರವಾನಿಗೆಯು ಸಾಯಂಕಾಲ 5-15 ಗಂಟೆಗೆ ಸ್ವೀಕೃತವಾಗಿದ್ದು ಸಾರಾಂಶವೆನಂದರೆ ಹಿರೇಮನ್ನಾಪೂರ ಗ್ರಾಮದ ಗುಡದೂರು ರಸ್ತೆಯ ರಮಜಾನಸಾಬ ಅಳ್ಳಳ್ಳಿ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ  5 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3580-00 ರೂಪಾಯಿ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಸಂಚಾರಿ  ಪೊಲೀಸ್  ಠಾಣೆ  ಕೊಪ್ಪಳ   ಗುನ್ನೆ ನಂ. 43/2017 ಕಲಂ. 279, 337, 338 ಐ.ಪಿ.ಸಿ:
ದಿನಾಂಕ. 05-10-2017 ರಂದು ಸಂಜೆ 6-00 ಗಂಟೆಗೆ ಹೊಸಪೇಟೆ ರಸ್ತೆಯ ಹೊರವಲಯದಲ್ಲಿರುವ ತಮ್ಮ ಕಾಮಗಾರಿ ನಡೆದ ಮನೆಯಿಂದ ತಮ್ಮ ಟ್ರಾಕ್ಟರ ಚಾಲಕ ಭಿಮಪ್ಪ ತಳವಾರ ಇತನನ್ನು ಮನೆಗೆ ಬಿಟ್ಟು ಬರಲು ತನ್ನ ಮೋಟಾರ್ ಸೈಕಲ್ ನಂಬರ. KA-37/EA-8473 ವಾಹನವನ್ನು ಕೊಟ್ಟು ಅವರ ಆತನ ಸಂಗಡ ತನ್ನ ಅಣ್ಣನ ಮಗ ರಾಜೇಸಾಬ ಮುಜಾವರ ವಯ. 16 ವರ್ಷ ಇತನನ್ನು ಕೂಹಿಸಿದನು. ಬೀಮಪ್ಪ ಇತನು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಕೊಪ್ಪಳ ನಗರದ ಎನ್.ಹೆಚ್.63 ಹೊಸಪೇಟೆ ರಸ್ತೆಯ ಮೇಲೆ ಮಾತಾ ಹೊಟೆಲ್ ಸಮೀಪ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ವಾಹನವನ್ನು ಸ್ಕಿಡ್ ಮಾಡಿ ಅಪಘಾತಮಾಡಿದ್ದರಿಂದ ಭಿಮಪ್ಪ ತಳವಾರ ಇತನಿಗೆ ತಲೆಯ ಎಡಭಾಗಕ್ಕೆ ರಕ್ತಗಾಯ ಮತ್ತು ಕಾಲುಗಳಿಗೆ ತೆರಚಿದ ಗಾಯಗಳು ಆಗಿದ್ದು ಮೋಟಾರ್ ಸೈಕಲ್ ಹಿಂದೆ ಕುಳಿತ ರಾಜೇಸಾಬ ಇತನಿಗೆ ಸಾದಾ ಸ್ವರೂಪದ ಗಾಯಗಳು ಆಗಿರುತ್ತವೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಯಲಬುರ್ಗಾ  ಪೊಲೀಸ್  ಠಾಣೆ  ಗುನ್ನೆ ನಂ. 111/2017 ಕಲಂ. 279, 304(ಎ) ಐ.ಪಿ.ಸಿ:

ದಿನಾಂಕ; 05-10-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮೃತನು ತಮ್ಮ ಸಜ್ಜೆಯನ್ನು ಕೊಪ್ಪಳದಲ್ಲಿ ಮಾರಾಟ ಮಾಡವ ಸಲುವಾಗಿ ಅದೇ ಗ್ರಾಮದ ಆರೋಪಿತನಿಗೆ ಸಂಬಂದಿಸಿದ ಟಾ ಟಾ ಎಸ ನಂ: ಕೆಎ-37/7156 ನೇದ್ದರಲ್ಲಿ ಸಜ್ಜೆಯ ಚೀಲಗಳನ್ನು ಹಾಕಿಕೊಂಡು ಕೊಪ್ಪಳಕ್ಕೆ ಹೋಗುತ್ತಿದ್ದಾಗ, ಚಿಕ್ಕಮ್ಯಾಗೇರಿ ದಾಟಿ, ಬೇವೂರು-ಯಲಬುರ್ಗಾ ರಸ್ತೆಯ ಮೇಲೆ ಆರೋಪಿತನು ತಾನು ನಡೆಸುತ್ತಿದ್ದ ಮೇಲ್ಕಂಡ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನವನ್ನು ನಡೆಸಿಕೊಂಡು ಬಂದು ಚಿಕ್ಕಮ್ಯಾಗೇರಿ ಸೀಮಾದಲ್ಲಿ ಬರುವ ತೆರಪಿನ ಹಳ್ಳದ ಬ್ರಿಜ್ಡ್ ಮೇಲಿದ್ದ ತೆಗ್ಗನ್ನು ಹಾರಿಸಿದ್ದರಿಂದ ವಾಹನವು ಒಮ್ಮಲೇ ಜಂಪ್ ಆಗಿದ್ದರಿಂದ ಸದರಿ ವಾಹನದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿಯ ಮಗನಾದ ಮೃತ ಮುತ್ತಪ್ಪ ತಂದೆ ಸಿದ್ಧಪ್ಪ ದೇಸಾಯಿ, ವಯ: 19 ವರ್ಷ ಜಾತಿ: ಗಾಣಿಗ ಉ: ಕೂಲಿಕೆಲಸ ಸಾ: ಚಿಕ್ಕಮ್ಯಾಗೇರಿ ತಾ: ಯಲಬುರ್ಗಾ ಈತನು ಒಮ್ಮಲೇ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನಿಗೆ ತಲೆಗೆ ಭಾರಿ ಸ್ವರೂಪದ ರಕ್ತಗಾಯ ವಾಗಿ, ಕಿವಿಯಲ್ಲಿ, ಬಾಯಿಯಲ್ಲಿ, ಮೂಗಿನಿಂದ ರಕ್ತ ಬಂದು, ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, October 4, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 229/2017 ಕಲಂ. 279, 337, 304(ಎ) ಐ.ಪಿ.ಸಿ
ದಿನಾಂಕ:- 03-10-2017 ರಂದು ಮುಂಜಾನೆ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸೈಯದ್ ಅಬ್ದುಲ್ ರಹಿಮಾ ತಂದೆ ಸೈಯದ್ ಮಹ್ಮದ ವಯಾ 45 ವರ್ಷ ಜಾತಿ ಮುಸ್ಲಿಂ ಉ; ಒಕ್ಕಲುತನ ಸಾ: ಮಹಿಬೂಬ ಕಾಲೋನಿ ಸಿಂದನೂರ ತಾ. ಸಿಂಧನೂರ ರವರು  ಠಾಣೆಗೆ  ಹಾಜರಾಗಿ ತಮ್ಮದೊಂದು ಗಣಕೀಕೃತ ದೂರನ್ನು ಕೊಟ್ಟಿದ್ದು ಅದರ ಸಾರಾಂಶವೆನಂದರೆ, ನನ್ನ ಅಣ್ಣನ ಮಗನಾದ ಸೈಯದ್ ಶಫೀ ಹಾಗೂ ನನ್ನ ಅಳಿಯನಾದ ಸೈಯದ್ ರಿಯಾಜ್ ಇವರು ನಿನ್ನೆ ದಿನಾಂಕ 02-10-2017 ರಂದು ಕಾರಟಗಿ ಕಡೆ ಅಗರಭತ್ತಿ ವ್ಯಾಪಾರಕ್ಕೆ ಹೋಗಿದ್ದರು. ನಂತರ ರಾತ್ರಿ 8-30 ಗಂಟೆಯ ಸುಮಾರಿಗೆ ಕಾರಟಗಿ ಪಟ್ಟಣದ ನಮ್ಮ ಪರಿಚಯದವರಾದ ಶ್ರೀ ಎಂ. ಯುಸುಪ್ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಅಣ್ಣನ ಮಗನಾದ ಸೈಯದ್ ಶಫೀ ಈತನು ತನ್ನ ಟಿ,ವಿ.ಎಸ್. ಎಕ್ಸ್ ಎಲ್ ಮೋ.ಸೈ, ಚಸ್ಸಿ ನಂ,MD621BD13E1P83992 ಇಂಜಿನ್ ನಂ.ODIPE1028656 ನೇದ್ದರಲ್ಲಿ ತನ್ನ ಹಿಂದೆ ಸೈಯದ್ ರಿಯಾಜ್ ಇವರನ್ನು ಕೂಡಿಸಿಕೊಂಡು ಸಿಂದನೂರ-ಕಾರಟಗಿ ರಸ್ತೆಯ ಮೇಲೆ ದುಡುಕುತನದಿಂದ ಹಾಗೂ ಅಲಕ್ಷತನದಿಂದ ಕಾರಟಗಿ ಕಡೆ ನಡೆಸಿಕೊಂಡು ಬಂದು ಕಾರಟಗಿ ಎ.ಪಿ.ಎಂ.ಸಿ. ಹತ್ತಿರ ರಸ್ತೆಗೆ ಹಂದಿಯು ಬಂದಿದ್ದರಿಂದ ತನ್ನ ಮೊ.ಸೈ.ನ್ನು ನಿಯಂತ್ರಣ ಮಾಡಲಾಗದೇ ಸ್ಕೀಡ್ ಆಗಿ ನೆಲಕ್ಕೆ ಬಿದ್ದಿದ್ದರಿಂದ ಶಫೀಗೆ ತಲೆಗೆ ಬಾರಿ ಪೆಟ್ಟಾಗಿ ರಕ್ತ ಬರುತ್ತಿದ್ದು, ಮಾತಾನಾಡುವ ಸ್ಥಿತಿಯಲ್ಲಿ ಇರುವುದಿಲ್ಲ, ಅವನ ಹಿಂದೆ ಕುಳಿತ್ತಿದ್ದ ಸೈಯದ ರಿಯಾಜ್ ಈತನ ಹಣೆಗೆ, ಕಪಾಳಕ್ಕೆ ತೆರಚಿದ ಗಾಯವಾಗಿದ್ದು ಇಬ್ಬರಿಗೂ ಚಿಕಿತ್ಸೆ ಕುರಿತು ಕಾರಟಗಿಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದುಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಅಳಿಯ ಸೈಯದ್ ಸಾಧಿಕ ರವರೊಂದಿಗೆ ಕಾರಟಗಿ ಸರಕಾರಿ ಆಸ್ಪತ್ರೆ ಬಂದಿದ್ದು ನಂತರ ಗಾಯಗೊಂಡ ಇಬ್ಬರನ್ನೂ ಕಾರಟಗಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದಿವಸ 03-10-2017 ರಂದು ಮದ್ಯರಾತ್ರಿ 1-00 ಗಂಟೆಯ ಸುಮಾರಿಗೆ ಸೈಯದ್ ಶಫಿ ಈತನು ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾನೆ.
2]  ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 273/2017 ಕಲಂ. 87 Karnataka Police Act.
ದಿನಾಂಕ : 03-10-2017 ರಂದು 6-30 ಪಿ.ಎಂ. ಕ್ಕೆ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಪ್ರಕರಣವನ್ನು ದಾಖಲು ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೇಳಿದ್ದು ಸದರಿ ಪರವಾನಿಗೆಯು 6-45 ಗಂಟೆಗೆ ಸ್ವೀಕೃತವಾಗಿದ್ದು ಸಾರಾಂಶವೆನಂದರೆ ತೋಪಲಕಟ್ಟಿ ಗ್ರಾಮದ ಕನಕದಾಸ ದೇವಸ್ಥಾನದ ಬಯಲು ಜಾಗೆಯ ಸಾರ್ವ ಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ  3 ಜನ ಆರೋಪಿತರು ಸಿಕ್ಕಿದ್ದು 4 ಜನ ಆರೋಪಿತರು ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3750-00 ರೂಪಾಯಿ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು 3 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 151/2017 ಕಲಂ.  379 ಐ.ಪಿ.ಸಿ:

ದಿನಾಂಕ: 03-10-2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾಧಿದಾರರಾದ ದಾದಾಫೀರ ತಂದೆ ಚಂದುಸಾಬ ಕುಷ್ಟಗಿ : 50 ಸಾ: ನಿರ್ಮಿತಿ ಕೇಂದ್ರ ಕೊಪ್ಪಳ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 23-09-2017 ರಂದು ಬೆಳಿಗ್ಗೆ 11-00 ಗಂಟೆಗೆ ಗಂಟೆಯ ಸುಮಾರಿಗೆ ತಮ್ಮ ಹೆಸರಿನಲ್ಲಿರುವ ಸೂಪರ್ ಸ್ಪ್ಲೆಂಡರ್ ಮೋಟಾರ ಸೈಕಲ್ ನಂ KA-37 R-4672 ನೇದ್ದನ್ನು ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ಎದುರುಗಡೆ ನಿಲ್ಲಿಸಿ ತಾವು ಒಳಗಡೆ ಹೋಗಿ ತಮ್ಮ ಮಗನನ್ನು ರೈಲ್ವೆಗೇ ಹತ್ತಿಸಿ ವಾಪಾಸ್ ಬೆಳಿಗ್ಗೆ 11-45 ಗಂಟೆಗೆ ಹೊರಗಡೆ ಬಂದು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ ಯಾರೋ ಕಳ್ಳರು ಕಳ್ಲತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನನ್ನ ಮೋಟಾರ ಸೈಕಲ್ ನ್ನು ಕಳ್ಳತನ ಮಾಡಿದ ಕಳ್ಳರನ್ನ ಪತ್ತೇ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನ ಮೋಟಾರ ಸೈಕಲ್ ನ್ನು ಮರಳಿಸಬೇಕಾಗಿ ವಿನಂತಿ ಹಾಗು ನಾನು ಇಲ್ಲಿಯವರೆಗೂ ಹುಡುಕಿದರೂ ಸಿಗದೇ ಇದ್ದುದ್ದರಿಂದ ಇಂದು ತಡವಾಗಿ ಬಂದು ದೂರನನ್ನ ಸಲ್ಲಿಸಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಠಾಣಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, October 3, 2017

1]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 227/2017 ಕಲಂ. 78(3) Karnataka Police Act.
ದಿನಾಂಕ:-02-10-2017 ರಂದು ಮದ್ಯಾಹ್ನ 12-00 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ಮತ್ತು 2 ನೇದ್ದವರು ಕಾರಟಗಿಯ ಶ್ರೀ ವೆಂಕಟೇಶ್ವರ್ ರೈಸ್ ಮಿಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ 1 ಮತ್ತು 2 ರವರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ 1130=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದ್ರಿ ಸಿಕ್ಕ ಆರೋಪಿತರು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 3 ಸೋಮಶೇಖರ್ ಸಾ:ಸಿರಗುಪ್ಪಾ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ  
2]  ಕಾರಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 228/2017 ಕಲಂ. 78(3) Karnataka Police Act.
ದಿನಾಂಕ:-02-10-2017 ರಂದು ಸಂಜೆ 6-50 ಗಂಟೆಗೆ  ನಮೂದು  ಮಾಡಿದ ಆರೋಪಿ ನಂ.1 ನೇದ್ದವನು ಸಿದ್ದಾಪೂರ ಗ್ರಾಮದ ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನು   ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವನ  ಕಡೆಯಿಂದ 2640=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಸದ್ರಿ ಸಿಕ್ಕ ಆರೋಪಿತನು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಚಂದ್ರಯ್ಯ ತಂದೆ ಪಂಪಯ್ಯ ಸಾ. ಸಿದ್ದಾಪೂರ ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 215/2017 ಕಲಂ. 457, 380 ಐ.ಪಿ.ಸಿ:
ದಿ:02-10-2017 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಅಮಿತ್. ಜಾನಾ. ಸಾ: ಗಿಣಿಗೇರಿ ತಾ:ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:01-10-2017 ರಂದು ರಾತ್ರಿ 9-30 ಗಂಟೆಯಿಂದ ದಿ:02-10-2017 ರಂದು ಬೆಳಿಗ್ಗೆ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗಿಣಿಗೇರಿ ಗ್ರಾಮದಲ್ಲಿರುವ ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯ ಬಾಜು ಇರುವ ಫಿರ್ಯಾದಿದಾರರ ಮಾರುತಿ ಮೆಡಿಕಲ್ಸ ಬೀಗವನ್ನು ಮುರಿದು ಶೆಟರ್ಸ ತೆಗೆದು ಒಳಗಡೆ ಪ್ರವೇಶ ಮಾಡಿ ಸದರಿ ಅಂಗಡಿಯ ಕ್ಯಾಷ್ ಟೇಬಲ್ ಡ್ರಾದಲ್ಲಿದ್ದ ಸಣ‍್ಣ ಟ್ರಂಕ್ ದಲ್ಲಿನ ನಗದು ಹಣ 5,34,000=00 ರೂ.  ಗಳನ್ನು ಟ್ರಂಕ್ ಸಮೇತ ಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 216/2017 ಕಲಂ. 143, 147, 341, 323, 504, 506, 447, 355  ಸಹಿತ 149 ಐ.ಪಿ.ಸಿ ಹಾಗೂ 3(1)(10) ಮತ್ತು 3(2)(5) 3, 2, 5[ಎ] ಎಸ್.ಸಿ/ಎಸ್.ಟಿ. ಕಾಯ್ದೆ:
ದಿ:02-10-2017 ರಂದು ಸಂಜೆ 6-45 ಗಂಟೆಗೆ ಫಿರ್ಯಾದಿದಾರರಾದ ಹನುಮಂತಪ್ಪ ವಾಲ್ಮಿಕಿ. ಸಾ:ಕುಟುಗನಹಳ‍್ಳಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ಬರುವ ಶ್ರೀ ವಾಲ್ಮಿಕಿ ಮಹರ್ಷಿ ಯವರ ಜಯಂತಿಯ ಪ್ರಯುಕ್ತ ಇಂದು ದಿ:02-10-2017 ರಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ಕುಟುಗನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಆಸ್ತಿ ನಂ:36 ರಲ್ಲಿಯ ಖುಲ್ಲಾಜಾಗೆಯಲ್ಲಿ ಫಿರ್ಯಾದಿತರು ಶ್ರೀ ಮಹರ್ಷಿ ವಾಲ್ಮಿಕಿ ಯವರ ಭಾವಚಿತ್ರದ ಪ್ಲೆಕ್ಸ ಅಳವಡಿಸುವಾಗ, ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಏಕೋದ್ದೇಶದಿಂದಾ ಅತೀಕ್ರಮ ಪ್ರವೇಶ ಮಾಡಿ ಫಿರ್ಯಾದಿತರಿಗೆ ಈ ಜಾಗೆಯಲ್ಲಿ ಫೋಟೋವನ್ನು ಹಾಕಬೇಡಿರಿ ಸೂಳೇಮಕ್ಕಳೆ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಫೋಟೋವನ್ನು ಹರಿದು ಹಾಕಿ, ಚಪ್ಪಲಿಯಿಂದ ಫೋಟೋಕ್ಕೆ ಹೊಡೆದು ಅವಮಾನ ಮಾಡಿ ಅವರ ಸಮಾಜದ ಭಾವನೆಗಳಿಗೆ ಧಕ್ಕೆ ತಂದು ಘಾಸಿಯನ್ನುಂಟು ಮಾಡಿದ್ದಲ್ಲದೇ ಫಿರ್ಯಾದಿತರಿಗೆ ಕೈಗಳಿಂದ ಹಲ್ಲೆ ಮಾಡಿ, ಹೊಡೆದು ಸಾಯಿಸುವುದಾಗಿ ಪ್ರಾಣದ ಬೆದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.
5] ಗಂಗಾವತಿ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 295/2017 ಕಲಂ. 32, 34 Karnataka Excise Act.

ದಿನಾಂಕ:- 02-10-2017 ರಂದು ಸಂಜೆ ಠಾಣೆ ವ್ಯಾಪ್ತಿಯ ದಾಸನಾಳ ಬ್ರಿಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಭಾತ್ಮೀ ಬಂದ ಮೇರೆಗೆ  ಸಿಬ್ಬಂದಿಯವರಾದ ಶರಣಪ್ಪ ಪಿ.ಸಿ. 180, ಮರಿಶಾಂತಗೌಡ ಪಿ.ಸಿ. 363, ಅಮರೇಶ ಹೆಚ್.ಸಿ. 80, ಎ.ಪಿ.ಸಿ. 15 ನೀಲಪ್ಪ ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು  ದಾಸನಾಳ ಬ್ರಿಡ್ಜ್ ಹತ್ತಿರ ಹೋಗಿ ವಾಹನವನ್ನು ನಿಲ್ಲಿಸಿ ಎಲ್ಲರೂ ಮಾಹಿತಿ ಇದ್ದ ಪ್ರಕಾರ ಕಾಲ್ನಡಿಗೆಯಲ್ಲಿ ದಾಸನಾಳ ಬ್ರಿಡ್ಜ ಹತ್ತಿರ ಇರುವ ವೆಂಕಟಗಿರಿಗೆ ಹೋಗುವ ಕ್ರಾಸ್ ನಲ್ಲಿ ರಸ್ತೆಯ ಬಲಗಡೆ ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟಿನ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮಧ್ಯದ ಟೆಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಜನರು ಬಂದು ಅವನ ಹತ್ತಿರ ಇದ್ದ ಮಧ್ಯದ ಪಾಕೇಟಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದು ಕಂಡು ಬಂದಿತು. ಕೂಡಲೇ ಸದರಿ ಮಧ್ಯ ಮಾರಾಟ ಮಾಡುತ್ತಿದ್ದವನ ಮೇಲೆ ದಾಳಿ ಮಾಡಲಾಗಿ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದಿದ್ದು,  ವಿಚಾರಿಸಲು ಅವನು ತನ್ನ ಹೆಸರು ಶರಣಪ್ಪ ತಂದೆ ಬೆಟದಪ್ಪ ಊರಮುಂದಲ, ವಯಸ್ಸು 32 ವರ್ಷ, ಜಾತಿ: ಈಡಿಗರು ಉ: ಕೂಲಿ ಕೆಲಸ ಸಾ: ದುರಗಮ್ಮನ ಗುಡಿಯ ಹತ್ತಿರ, ದಾಸನಾಳ ತಾ: ಗಂಗಾವತಿ. ಜಿ-. ಕೊಪ್ಪಳ ಅಂತಾ ತಿಳಿಸಿದನು ಅವನಿಗೆ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಯಾವುದಾದರೂ ಅಧಿಕೃತ ಪರವಾನಿಗೆ / ಲೈಸೆನ್ಸ್ ಇದೆಯೇ ? ಅಂತಾ ವಿಚಾರಿಸಲು ಅವನು ತನ್ನ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ತಾನು ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡನು. ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿದ್ದ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ ಮಧ್ಯದ ಟೆಟ್ರಾ ಪಾಕೇಟ್ ಗಳನ್ನು ಪರಿಶೀಲಿಸಲಾಗಿ ಅದರಲ್ಲಿ  1]  Original Choise 90 ml. 47 ಟೆಟ್ರಾ ಪಾಕೀಟ್ ಗಳು ಒಟ್ಟು 4230 ml  (ಪ್ರತಿಯೊಂದರ ಬೆಲೆ ರೂ. 28.13) ಅಂ.ಕಿ. ರೂ. 1,322.11 ಇರುತ್ತದೆಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ ರೂ. 150-00 ಗಳು ಸಿಕ್ಕವು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Monday, October 2, 2017

1]  ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 143/2017 ಕಲಂ. 32, 34 Karnataka Excise Act.
ದಿನಾಂಕ: 01-10-2017 ರಂದು ಸಾಯಾಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರದ ಎ.ಪಿ.ಎಂ.ಸಿ. ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪರಶುರಾಮ ತಂದೆ ಚಂದಪ್ಪ ಗುಡಗಲದಿನ್ನಿ ಸಾ: ಹನಮಸಾಗರ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-32, ಪಿ.ಸಿ-398, 168 ರವರೊಂದಿಗೆ ಠಾಣೆಯಿಂದ ಹೊರಟು ಗೊಣ್ಣಾಗರ ಆಸ್ಪತ್ರೆಯ ಕಂಪೌಂಡ ಹತ್ತಿರ ಸಾಯಾಂಕಾಲ 17-15 ಗಂಟೆಗೆ ತಲುಪಿ ಸಾಯಾಂಕಾಲ 17-20 ಗಂಟೆಗೆ ದಾಳಿಮಾಡಿದಾಗ ಪರಶುರಾಮ ತಂದೆ ಚಂದಪ್ಪ ಗುಡಗಲದಿನ್ನಿ ರವರು ಸಿಕ್ಕಿಬಿದಿದ್ದು ಅವನ ಹತ್ತಿರ 1] 180 .ಎಂ.ಎಲ್.ಅಳತೆಯ 26 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1463.02 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 170-00 ರೂಪಾಯಿ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಅಳವಂಡಿ  ಪೊಲೀಸ್  ಠಾಣೆ  ಗುನ್ನೆ ನಂ. 158/2017 ಕಲಂ. 504, 323, 506 ಸಹಿತ 149 ಐ.ಪಿ.ಸಿ ಹಾಗೂ 3(1)(10) ಮತ್ತು 3(2)(5) ಎಸ್.ಸಿ/ಎಸ್.ಟಿ. ಕಾಯ್ದೆ:

ದಿನಾಂಕ: 01-10-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಮೇಶ ತಂದೆ ಹನಮಪ್ಪ ದೊಡ್ಡಮನಿ. ವಯಸ್ಸು: 24 ವರ್ಷ ಜಾತಿ: ಮಾದಿಗ ಉ: ಕೂಲಿಕೆಲಸ ಸಾ: ಬೇಳೂರ ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಏನಂದರೆ, ಇಂದು ದಿನಾಂಕ: 01-10-2017 ರಂದು ಸಂಜೆ 6:30 ಗಂಟೆಯ ಸುಮಾರಿಗೆ ಬೇಳೂರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ಯ ಹೆಜ್ಜೆ ಹಾಕುವ ಸಮಯದಲ್ಲಿ ಕಾಲು ಬಡಿದ ನೆಪ ಮಾಡಿಕೊಂಡು 1] ರವಿಕುಮಾರ ತಂದೆ ದೇವಪ್ಪ ಬಾರಕೇರ ಹಾಗೂ 15 ಜನರನ್ನು ಕರೆದುಕೊಂಡು ಫಿರ್ಯಾದಿ ಮನೆ ಹತ್ತಿರ ಹೋಗಿ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜಾತಿ ನಿಂಧನೆ ಮಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.                                             

 
Will Smith Visitors
Since 01/02/2008