Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, August 24, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 161/2015 ಕಲಂ 87 Karnataka Police Act.     
ದಿ: 23-08-2015 ರಂದು 9-30 ಗಂಟೆಗೆ ಶ್ರೀ ಅಶೋಕ. ಎ.ಎಸ್.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರನ್ನು ನೀಡಿದ್ದು ಸದರಿ ದೂರಿನಲ್ಲಿ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ರಾತ್ರಿ 8-00 ಗಂಟೆಯ ಸುಮಾರಿಗೆ ಭಾಗ್ಯನಗರದ ಕೆ.ಎಚ್.ಡಿ.ಸಿ. ಕಾಲೋನಿಯ ಕೈಮಗ್ಗದ ಗುಡೌನ ಹತ್ತಿರ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  7300=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಪಿರ್ಯಾಧಿಯನ್ನು ನೀಡಿದ್ದು ಇದು ಅಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ಸಿ.ಜೆ.ಎಮ್ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು 10-00 ಪಿ.ಎಮ್ ಗಂಟೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2015 ಕಲಂ. 143, 147, 323, 504, 506 ಸಹಿತ 149 ಐ.ಪಿ.ಸಿ ಹಾಗೂ 3(1)(10) ಎಸ್.ಎಸಿ/ಎಸ್.ಟಿ. ಕಾಯ್ದೆ.
ದಿ:23-08-2015 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಉಡಚಪ್ಪ ತಂದೆ ಯಮನಪ್ಪ ಭೋವಿ. ವಯ: 36 ವರ್ಷ, ಜಾ: ವಡ್ಡರ [ಭೋವಿ], ಉ: ಮೇಸ್ತ್ರಿ ಕೆಲಸ, ಸಾ: ಟಣಕನಕಲ್ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿನಾಂಕ: 23.08.2015 ರಂದು ಬೆಳಿಗ್ಗೆ 8.30 ಗಂಟೆಗೆ ನಮ್ಮೂರ ಸೀಮಾದ ದನಕಾಯರ ಮಲ್ಲಣ್ಣ ಇವರ ಹೊಲದಲ್ಲಿರುವ ಕಲ್ಲು ಬಂಡೆಗಳಿಗೆ ತೂತು ಹಾಕುವ ಕೆಲಸಕ್ಕೆ ನಮ್ಮ ಕೆಲಸಗಾರರಾದ  ನಾಗರಾಜ ಹಾಗೂ ಇನ್ನೊಬ್ಬ ರುದ್ರೇಶ ಕೋಳೂರು ಕೂಡಿಕೊಂಡು ಹೋಗಿದ್ದರು. ಆಗ ಅಲ್ಲಿ ಕಲ್ಲುಬಂಡೆಗಳಿಗೆ ತೂತು ಹಾಕದಂತೆ ಅಲ್ಲಿದ್ದ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಇವರುಗಳು ಬಂದು ತಡೆಹಿಡಿದಿರುತ್ತಾರೆಂದು ಜಮೀನು ಮಾಲೀಕರಾದ ಮಲ್ಲಣ್ಣ ಇವರು ನನಗೆ ಪೋನ್ ಮಾಡಿ ತಿಳಿಸಿದರು. ಆಗ ನಾನು ನಮ್ಮೂರಿನ ಆಂಜನೇಯ ಸಣ್ಣಗೌಡರ ಹಾಗೂ ಕೃಷ್ಣ ಇವರೊಂದಿಗೆ ಮಲ್ಲಣ್ಣನವರ ಜಮೀನು ಹತ್ತಿರ ಹೋಗುವ ಮಾರ್ಗ ಮಧ್ಯದಲ್ಲಿ ಗವಿಸಿದ್ದಪ್ಪ ಹಾಗೂ ಹನುಮಂತಪ್ಪ ಕಟ್ಟಿ ನನ್ನ ಎದುರಿಗೆ ಬಂದಾಗ ಅವರಿಗೆ ನಾನು ಗವಿಸಿದ್ದಪ್ಪನಿಗೆ ಯಾಕೇ ಕೆಲಸ ಬಂದು ಮಾಡಿಸಿದ್ದಿರಿ ಎಂದು ಕೇಳಿದಾಗ ಆತನು ಏನೂ ಹೇಳದೇ ಊರಿನ ಕಡೆಗೆ ಹೊದರು. ಆಗ ನಾನು ಮಲ್ಲಣ್ಣನ ಹೊಲಕ್ಕೆ ಮುಂದೆ ಹೊಗುತ್ತಾ ಮತ್ತೇ ದಾರಿಯಲ್ಲಿ ರುದ್ರಗೌಡ ಹಾಗೂ ಮಂಜಪ್ಪ ಇವರುಗಳು ಗಾಡಿಯಲ್ಲಿ ಬಂದರು. ಆಗ ನಾನು ಅವರಿಗೆ ನಿಲ್ಲಿಸಿ ಯಾಕೋ ಈ ರೀತಿ ಕೆಲಸ ಬಂದು ಮಾಡಿಸಿರಿ ಅಂತ ಕೇಳಿದೆನು. ಆಗ ಅವರು ತಮ್ಮ ಹೊಲದ ಬಾಜು ನಮ್ಮ ಸಜ್ಜಿ ಹೊಲದಲ್ಲಿಯ ಬೆಳೆ ಲುಕ್ಸಾನ್ ಆಗುತ್ತದೆ ಅಂತ ಹೇಳಿದರು. ಆಗ ನಾನು ಹಾಗೇಯೇ ಮಲ್ಲಣ್ಣನವರ ಹೊಲಕ್ಕೆ ಹೋಗಿ ನೋಡಿದಾಗಿ ಕೆಲಸ ಬಂದಾಗಿತ್ತು. ನಂತರ ಮಲ್ಲಣ್ಣನವರಿಗೆ ಪೋನ್ ಮೂಲಕ ನಾನು ಜಾಗೆಯಲ್ಲಿ ನೊಡಿದ ಬಗ್ಗೆ ತಿಳಿಸಿದಾಗ ಅವರು ತಕರಾರು ಮಾಡುವವರು ಯಾರು ಇಲ್ಲ ಅಂದ್ರೆ ಕೆಲಸ ಚಾಲೂ ಮಾಡುವಂತೆ ಹೇಳಿದರು. ಆಗ ನಾನು ನಾಗರಾಜ ಹಾಗೂ ರುದ್ರೇಶ ಕೋಳೂರು ಇವರಿಂದ ಕಲ್ಲುಗಳಿಗೆ ತೂತು ಹಾಕುವ ಕೆಲಸ ಪ್ರಾರಂಭಿಸಿದೆನು. ನಂತರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಹಾಗೂ ಬಸವರಾಜ ಬಿಸನಳ್ಳಿ ಹೀಗೆ ಐದು ಜನ ಕೂಡಿ ಬಂದರು. ನೀವು ಯಾರನ್ನ ಕೇಳಿ ಕೆಲಸ ಚಾಲೂ ಮಾಡಿರಿ ಅಂತ ಬಾಯಿ ಮಾಡಿದರು. ಆಗ ಅಲ್ಲಿಯೇ ಕಟ್ಟಿಗೆ ಆರಿಸಲು ಬಂದಿದ್ದ ಹನುಮಂತ ಭೋವಿ ಬಂದು ಯಾಕ ಬಾಯಿ ಮಾಡುತ್ತೀರಿ ಅಂದಾಗ ಅವರೆಲ್ಲ ನಮಗೆ ಮೊದಲು ಕೆಲಸ ಮುಗಿಸಿ ಊರಾಗ ಬರ್ಲೇ ಮಾತನಾಡುತ್ತೇವೆೆ ಅಂತ ಹೇಳಿ ಹೋದರು. ನಂತರ ನಾವು ಮಧ್ಯಾಹ್ನ ಕೆಲಸ ಮುಗಿಸಿಕೊಂಡು ಎಲ್ಲರೂ ಊಟಕ್ಕೆ ಊರಿಗೆ ಬಂದೇವು. ನಂತರ ಸಾಯಂಕಾಲ 4.30 ಗಂಟೆಯ ಸುಮಾರಿಗೆ ನಾನು ಮತ್ತು ನಾಗರಾಜ, ರುದ್ರೇಶ ಕೋಳೂರು, ಆಂಜನೇಯ ಸಣ್ಣಗೌಡರ, ಕೃಷ್ಣ, ಬಸವರಾಜ ಭೋವಿ, ಮಾರುತಿ ಭೋವಿ, ದುರುಗಪ್ಪ ಭೋವಿ, ವೆಂಕಟೇಶ ಭೋವಿ, ಕಲ್ಲಪ್ಪ ಭೋವಿ, ಹನುಮಪ್ಪ ಭೋವಿ, ಮಾರುತೆಪ್ಪ ಭೋವಿ, ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ, ಈರಪ್ಪ ಭೋವಿ, ಭೀಮಪ್ಪ ಭೋವಿ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ಯಮನೂರಪ್ಪ ನಾಯಕ ಹೀಗೆ ಎಲ್ಲರೂ ನಮ್ಮೂರಿನ ಶಂಕ್ರಪ್ಪ ಬೊಮ್ಮನಾಳ ಇವರ ಹೋಟೆಲ್ ಮುಂದೆ ಮಾತನಾಡುತ್ತಾ ನಿಂತಿರುವಾಗ ಗವಿಸಿದ್ದಪ್ಪ, ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ, ಬಸವರಾಜ ಬಿಸನಳ್ಳಿ ಸಂಗಪ್ಪ ಬಿಸನಳ್ಳಿ, ಭೀಮಪ್ಪ ಬಿಸನಳ್ಳಿ, ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ, ದೇವಪ್ಪ ಪೊಲೀಸ್ ಪಾಟೀಲ್, ಪಕ್ಕೆಪ್ಪ ಬಿಸನಳ್ಳಿ ಹಾಗೂ ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಹೀಗೆ ಎಲ್ಲರೂ ಗುಂಪು ಕೂಡಿಕೊಂಡು ಬಂದವರೇ ಈ ವಡ್ಡ ಸೂಳೇ ಮಕ್ಕಳದು ನಮ್ಮೂರಾಗ ತಿಂಡಿ ಜಾಸ್ತಿಯಾಗಿದೆ ಅಂತ ಜಾತಿ ಎತ್ತಿ ಬೈಯುತ್ತಾ ಒಮ್ಮೆಲೇ ನನಗೆ ಮತ್ತು ನಮ್ಮ ಹನುಮಂತ, ವೆಂಕಟೇಶ ಹೀಗೆ ಮೂವರಿಗೆ ಎಲ್ಲರೂ ತೆಕ್ಕೆ ಬಡಿದು ಅಂಗಿ ಹಿಡಿದು ಜಗ್ಗಾಡಿ ಕೈಗಳಿಂದ ಮೈ ಕೈಗೆ ಬಡಿದರು. ಆಗ ಯಮನೂರಪ್ಪ ನಾಯಕ ಹಾಗೂ ಇತರ ಹಿರಿಯರು ಜಗಳ ಬಿಡಿಸುವಾಗ ಅವರೆಲ್ಲ ನಮಗೆ ಈ ದಿನ ಉಳಿದುಕೊಂಡಿರ್ಲೇ ವಡ್ಡ ಸೂಳೇ ಮಕ್ಕಳೇ ಇಲ್ಲದಿದ್ದರೆ ಹೊಡೆದುಸಾಯಿಸುತ್ತಿದ್ದೇವು ಅಂತ ಜೀವದ ಬೆದರಿಕೆ ಹಾಕಿ ಹೋದರು. ಕಾರಣ 1] ಗವಿಸಿದ್ದಪ್ಪ ತಂದೆ ಸಂಗಪ್ಪ ಬಿಸನಳ್ಳಿ 2] ಮಂಜಪ್ಪ @ ಮಂಜುನಾಥ ತಂದೆ ವೀರೇಶಪ್ಪ ಮೆಳ್ಳಕೇರಿ 3] ಹನುಮಂತಪ್ಪ ಕಟ್ಟಿ, 4] ರುದ್ರಗೌಡ ಪೊಲೀಸ್ ಪಾಟೀಲ್ 5] ಬಸವರಾಜ ಬಿಸನಳ್ಳಿ 6] ಸಂಗಪ್ಪ ಬಿಸನಳ್ಳಿ 7] ಭೀಮಪ್ಪ ಬಿಸನಳ್ಳಿ 8] ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ 9] ದೇವಪ್ಪ ಪೊಲೀಸ್ ಪಾಟೀಲ್ 10] ಪಕ್ಕೆಪ್ಪ ಬಿಸನಳ್ಳಿ ಹಾಗೂ 11] ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಎಲ್ಲರೂ ಜಾತಿ ಗಾಣಿಗೇರ ಲಿಂಗಾಯತ ಎಲ್ಲರೂ ಸಾ: ಟಣಕನಕಲ್ ಗ್ರಾಮ ಇವರುಗಳು ನಮಗೆ ಮಲ್ಲಣ್ಣ ಇವರ ಹೊಲದಲ್ಲಿ ಕಲ್ಲಬಂಡೆಗಳಿಗೆ ತೂತು ಹಾಕುವ ವಿಷಯವಾಗಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿರುವ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ  ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 219/2015 ಕಲಂ. 143, 147, 323, 324, 504, 506 ಸಹಿತ 149 ಐ.ಪಿ.ಸಿ:
ದಿ:23-08-2015 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರಾದ ಗವಿಸಿದ್ದಪ್ಪ ತಂದೆ ಸಂಗಪ್ಪ ಬಿಸನಳ್ಳಿ. ಸಾ: ಟಣಕನಕಲ್. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಇಂದು ದಿನಾಂಕ: 23.08.2015 ರಂದು ಬೆಳಿಗ್ಗೆ 10.00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ ಹೀಗೆ ಎಲ್ಲರೂ ನಮ್ಮ ಮೋಟಾರ ಸೈಕಲ್ಗಳಲ್ಲಿ ಆಜು ಬಾಜು ಇರುವ ನಮ್ಮೂರ ಸೀಮಾದ ದನಕಾಯರ ಮಲ್ಲಣ್ಣ ಇವರ ಹೊಲದಲ್ಲಿರುವ ಕಲ್ಲು ಬಂಡೆಗಳಿಗೆ ತೂತು ಹಾಕುತ್ತಿರುವ ಸುದ್ದಿ ಕೇಳಿ ಹೋದೆವು. ಮಲ್ಲಣ್ಣ ಇವರ ಹೊಲದಲ್ಲಿ ನಮ್ಮೂರ ವಡ್ಡರ ಉಡಚಪ್ಪ ಮೇಸ್ತ್ರಿ ಇವರ  ಕೆಲಸಗಾರರಾದ ನಾಗರಾಜ ಹಾಗೂ ಇನ್ನೊಬ್ಬ ರುದ್ರೇಶ ಕೋಳೂರು ಇದ್ದರು. ಆಗ ನಾವು ಅವರಿಗೆ ಇಲ್ಲಿ ಕಲ್ಲುಬಂಡೆಗಳಿಗೆ ತೂತು ಹಾಕ ಬೇಡರಿ ಆಮೇಲೆ ಬ್ಲಾಸ್ಟ ಮಾಡಿದರೆ ನಮ್ಮ ಬೆಳೆಗಳಿಗೆ ಲುಕ್ಸಾನ ಆಗುತ್ತದೆ ಅಂತ ಹೇಳಿ ಅವರಿಗೆ ಕೆಲಸ ಮಾಡದಂತೆ ಬಿಡಿಸಿದೆವು. ನಂತರ ಅಲ್ಲಿಂದ ನಾವು ವಾಪಸ್ ಗಾಡಿಗಳ ಮೇಲೆ ಬರುವಾಗ ದಾರಿಯ ಮಧ್ಯದಲ್ಲಿ ಉಡಚಪ್ಪ ಮೇಸ್ತ್ರಿ ಬಂದು ನಮಗೆ ನಿಲ್ಲಿಸಿ ಕೆಲಸ ಯಾಕೆ ಬಂದ ಮಾಡಿಸಿರಿ ಅಂತ ಕೇಳಿದನು ಆಗ ನಾವು ಏನು ಮಾತನಾಡದೇ ಊರಿಗೆ ಬಂದೆವು. ನಂತರ ಸಾಯಂಕಾಲ 4.30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಉಡಚಪ್ಪ ಬಿಸನಳ್ಳಿ ಇಬ್ಬರೂ ನಮ್ಮ ಮನೆಯ ಹತ್ತಿರದ ಶಂಕ್ರಪ್ಪ ಬೊಮ್ಮನಾಳ ಇವರ ಹೋಟೆಲ್ ಹತ್ತಿರ ಮಾತನಾಡುತ್ತಾ ಇರುವಾಗ ನಮ್ಮೂರಿನ ಉಡಚಪ್ಪ ಭೋವಿ, ದುರುಗಪ್ಪ ಭೋವಿ, ಬಸವರಾಜ ಭೋವಿ, ವೆಂಕಟೇಶ ಭೋವಿ, ಕಲ್ಲಪ್ಪ ಭೋವಿ, ಹನುಮಪ್ಪ ಭೋವಿ, ಮಾರುತೆಪ್ಪ ಭೋವಿ, ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ, ಈರಪ್ಪ ಭೋವಿ, ಭೀಮಪ್ಪ ಭೋವಿ ಹಾಗೂ ಯಮನೂರಪ್ಪ ನಾಯಕ ಹೀಗೆ ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ಲೇ ಗವ್ಯಾ ಸೂಳೇ ಮಗನೇ ಇವತ್ತು ನಮ್ಮ ಕೆಲಸ ಬಂದ ಮಾಡಿ ನಮಗೆ ತೊಂದರೆ ಕೊಟ್ಟಿಯಲ್ಲಲೇ ಮಗನೇ ಊರಾಗಿದ್ದು ಯ್ಯಾಂಗ ಬಾಳೇವು ಮಾಡುತ್ತಿ ನೋಡುತ್ತಿವಲೇ ಅಂತ ಜಗಳ ತೆಗೆದು ದಬ್ಬಾಡಿದರು. ಆಗ ನೀವೇಲ್ಲ ಬಂದು ದೌರ್ಜನ್ಯ ಮಾಡುತ್ತಿರೇನು ಅಂದಾಗ ಅವರುಗಳು ಏಕಾ ಏಕೀ ನನಗೆ ಮತ್ತು ಉಡಚಪ್ಪ ಬಿಸನಳ್ಳಿ ಈತನಿಗೆ ತಮ್ಮ ಕೈಯಿಂದ ಎಲ್ಲರೂ ನಮ್ಮ ಮೈ ಕೈಗೆ ಬಡಿದರು. ಅಲ್ಲದೇ ನನ್ನ ಎದೆ ಮೇಲಿನ ಅಂಗಿಯನ್ನು ಹಿಡಿದು ಉಡಚಪ್ಪ ಭೋವಿ ಇತನು ತನ್ನ ಕೈ ಮುಷ್ಠಿ ಮಾಡಿ ಗುದ್ದಿದನು. ಆಗ ನಾನು ಸತ್ತೇನೆಪ್ಪೋ ಕಾಪಾಡಿರಿ ಅಂತ ಕೂಗಾಡಿದಾಗ ನಮ್ಮ ತಂದೆ ಸಂಗಪ್ಪ ಬಿಸನಳ್ಳಿ ಮತ್ತು ಮೇನ್ ರೋಡಿನಲ್ಲಿದ್ದ ನಮ್ಮೂರಿನ ಮಂಜಪ್ಪ, ಹನುಮಂತಪ್ಪ ಕಟ್ಟಿ, ರುದ್ರಗೌಡ, ಬಸವರಾಜ ಬಿಸನಳ್ಳಿ, ಭೀಮಪ್ಪ ಬಿಸನಳ್ಳಿ, ನಿಂಗಪ್ಪ ತಂದೆ ಭೀಮಪ್ಪ ಬಿಸನಳ್ಳಿ, ದೇವಪ್ಪ ಪೊಲೀಸ್ ಪಾಟೀಲ್, ಪಕ್ಕೆಪ್ಪ ಬಿಸನಳ್ಳಿ ಹಾಗೂ ನಿಂಗಪ್ಪ ತಂದೆ ರುದ್ರಪ್ಪ ಬಿಸನಳ್ಳಿ ಇವರೆಲ್ಲರೂ ಬಂದು ಜಗಳ ಬಿಡಿಸಿದರು. ಆಗ ಅವರು ನಮಗೆ ನಿಮ್ಮನೆಲ್ಲ ಹೊಡೆದು ಇದೇ ರೋಡಿನ ಮೇಲೆ ಸಾಯಿಸಿ ಬಿಡುತ್ತೇವೆಲೇ ಸೂಳೇ ಮಕ್ಕಳೇ ಅಂತ ಜೀವ ಬೆದರಿಕೆ ಹಾಕಿದರು. ಸದರಿ 1] ಉಡಚಪ್ಪ ಭೋವಿ 2] ದುರುಗಪ್ಪ ಭೋವಿ 3] ಬಸವರಾಜ ಭೋವಿ 4] ವೆಂಕಟೇಶ ಭೋವಿ 5] ಕಲ್ಲಪ್ಪ ಭೋವಿ 6] ಹನುಮಪ್ಪ ಭೋವಿ 7] ಮಾರುತೆಪ್ಪ ಭೋವಿ 8] ಮಾರುತೆಪ್ಪ ತಂದೆ ಕಲ್ಲಪ್ಪ ಭೋವಿ 9] ಈರಪ್ಪ ಭೋವಿ 10] ಭೀಮಪ್ಪ ಭೋವಿ ಹಾಗೂ 11] ಯಮನೂರಪ್ಪ ನಾಯಕ ಎಲ್ಲರೂ ಸಾ: ಟಣಕನಕಲ್ ಗ್ರಾಮ ಇವರುಗಳು ನಮಗೆ ಕಲ್ಲಬಂಡೆಗಳಿಗೆ ತೂತು ಹಾಕುವ ವಿಷಯವಾಗಿ ಅಕ್ರಮ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ, ಹೊಡಿಬಡಿ ಮಾಡಿದ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 190/2015 ಕಲಂ. 279, 337, 338 ಐ.ಪಿ.ಸಿ:.

ದಿನಾಂಕಃ-23-08-2015 ರಂದು ಮದ್ಯಾಹ್ನ 2-00 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತವಾದ ಬಗ್ಗೆ ಎಮ್.ಎಸ್.ಸಿ ಮಾಹಿತಿ ಬಂದ ಕೂಡಲೇ ಗಂಗಾವತಿ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಜೈಕಿಸಾನ ಈತನಿಗೆ ವಿಚಾರಿಸಿದ್ದು ನಂತರ ಸದರಿ ಜೈಕಿಸಾನ ಈತನ ಜೊತೆಯಲ್ಲಿದ್ದ ಪ್ರತ್ಯಕ್ಷ ಸಾಕ್ಷಿದಾರರಾದ ಮಂಜುನಾಥ ತಂದಿ ಮಲ್ಲಿಕಾರ್ಜನ ಮಸ್ಕಿ ಸಾ. ಇಸ್ಲಾಂಪೂರ ಗಂಗಾವತಿ ರವರು ಒಂದು ಲಿಖಿತ ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಗಂಗಾವತಿಯ ಮಂಜುನಾಥ ರೈಸ್ ಮಿಲ್ ದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು ಸದರಿ ರೈಸ್ ಮೀಲ್ ದಲ್ಲಿ ಬಿಹಾರ ರಾಜ್ಯದ ಲೇಬರಗಳು ಕೆಲಸ ಮಾಡಿಕೊಂಡಿರುತ್ತಾರೆ ಅದರಂತೆ ಜೈಕಿಸಾನ ಈತನು ಸದರಿ ರೈಸ್ ಮೀಲ್ ದಲ್ಲಿ ಹಮಾಲಿ ಕೆಲಸಕ್ಕೆ ಬಂದಿರುತ್ತಾನೆ ಇಂದು ದಿನಾಂಕಃ 23-08-2015 ರಂದು ಬೆಳಿಗ್ಗೆ ಸದರಿ ಜೈಕಿಸಾನ್ ಈತನು ರೈಸ್ ಮೀಲ್ ದಲ್ಲಿ ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ತನ್ನ ಕೆಲಸದ ಸಲುವಾಗಿ ರಾಯಚೂರುಗೆ ಹೋಗಲೆಂದು ಬಸ್ ನಿಲ್ದಾಣಕ್ಕೆ ಹೋದನು ಪಿರ್ಯಾದಿ ಮಂಜುನಾಥನದು ಕಾರಟಗಿಯಲ್ಲಿ ಕೆಲಸ ವಿದ್ದುದರಿಂದ ಆತನ ಜೊತೆಯಲ್ಲಿ ಹೋಗಿ ಇಬ್ಬರು ಕೂಡಿ KSRTC Bus no KA42F1025 ನೆದ್ದರಲ್ಲಿ ಕುಳಿತುಕೊಂಡು ಹೋರಟಾಗ ಮದ್ಯಾಹ್ನ 12-00 ಗಂಟಯ ಸುಮಾರಿಗೆ ಗಂಗಾವತಿ ರಾಯಚೂರು ರಸ್ತೆ ಗುಂಡೂರು ಕ್ರಾಸ್ ದಲ್ಲಿ ಸದರಿ ಬಸ್ ಚಾಲಕ ತನ್ನ ಬಸನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು  ಅದೇ ರೀತಿಯಾಗಿ ಕಾರಟಗಿ ಕಡೆಯಿಂದ KSRTC Bus no KA36F1340 ಬಸ್ ಚಾಲಕ ತನ್ನ ಬಸನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ನಿಯಂತ್ರಣ ಕಾಯ್ದುಕೊಳ್ಳದೇ ಪರಸ್ಪರ ಟಕ್ಕರ ಕೊಟ್ಟುಕೊಂಡು ಅಪಘಾತವಾಗಿದ್ದರಿಂದ ಬಸ್ ನಲ್ಲಿ ಕುಳಿತಿದ್ದ ಜೈಕಿಸಾನ ಈತನಿಗೆ ಬಲಗೈಗೆ ಮೂಳೆ ಮುರಿತವಾದ ಗಂಭೀರ ಸ್ವರೂಪದ ಗಾಯವಾಗಿದ್ದು ಮತ್ತು ಬಸ್ಸಿನಲ್ಲಿ ಕುಳಿತಿದ್ದ ಈತರೆ ಮೂರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಅಪಘಾತವಾದ ನಂತರ ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲು ಮಾಡಿರುತ್ತೇನೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ ಠಾಣೆಗೆ ಸಾಯಂಕಾಲ 7-55 ಗಂಟೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Sunday, August 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 107/2015 ಕಲಂ 87 Karnataka Police Act.           
ದಿನಾಂಕ:22-08-2015 ರಂದು 4-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಇಸ್ಪೇಟ್ ಜೂಜಾಟದ ಖಚಿತ ಮಾಹಿತಿ ಬಂದ ಪ್ರಕಾರ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-25 ಪಿಎಂಕ್ಕೆ ಕುಕನೂರಿನ ಎ.ಪಿ.ಎಂ.ಸಿ.  ಯಲ್ಲಿ ಸರಕಾರಿ ಗೋದಾಮಿನ ಮುಂದಿನ ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ, ಸದರಿಯವರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಪ್ಲಾಸ್ಟಿಕ್ ಚಾಪೆ, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ   2410-00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ:107/2015 ಕಲಂ:87 ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 147/2015 ಕಲಂ 78(3) Karnataka Police Act & 420 IPC.     
ದಿನಾಂಕ: 22-08-2015 ರಂದು 11-00 ಎ.ಎಂ.ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ಬೆಳಿಗ್ಗೆ 9-00 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಕನಕದಾಸ ಸರ್ಕಲ್ ಹತ್ತಿರ ಮಟ್ಕಾ ಜೂಜಾಟ  ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸವರಾಜ ತಂದೆ ರುದ್ರಪ್ಪ ಗುಗ್ಗರಿ ವಯಾ 44 ವರ್ಷ ಜಾ:ಹಿಂದೂ ಲಿಂಗಾಯತ ಉ : ಟೇಲರಿಂಗ್ ಕೆಲಸ ಸಾ: ಕೊರಡಕೇರಾ  2] ಅಕ್ಬರಸಾಬ ತಂದೆ ಯಮನೂರಸಾಬ ನದಾಫ ವಯಾ 30 ವರ್ಷ ಜಾ: ಮುಸ್ಲಿಂ ಉ :ಕಿರಾಣಿ ಅಂಗಡಿ ಸಾ: ನೆರಬೆಂಚಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-108 ಹೀರಪ್ಪ, ಹೆಚ್.ಸಿ-63 ನೀಲಕಂಠಪ್ಪ, ಪಿ.ಸಿ-344 ಸಂಗಪ್ಪ ಪಿ.ಸಿ-116 ಸಂಗಮೇಶ, ಪಿ.ಸಿ.109 ಅಮರೇಶ, ಪಿಸಿ-24 ಬಸವರಾಜ, ಪಿಸಿ-105 ಶರಣಪ್ಪ ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 09-15 .ಎಂ ಗೆ ಹೊರಟು ಕನಕದಾಸ ಸರ್ಕಲ್ ಹತ್ತಿರ  ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಮೋತಿಲಾಲ ತಂದೆ ಚಟ್ಟುಸಾ ಸಿಂಗ್ರಿ ವಯಾ 58 ವರ್ಷ ಜಾ: ಸಾವಜಿ  ಉ: ಖಾನಾವಳಿ ಸಾ: ಕನಕದಾಸ ಸರ್ಕಲ್ ಹತ್ತಿರ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಸದರಿಯವನು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದು, ಹಾಗೂ ತಾನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2,450=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಒಂದು ನೋಕಿಯೋ ಮೊಬೈಲ್ ಅಂ:ಕಿ:300=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ತಾನು ಬರೆದ ಮಟಕಾ ಪಟ್ಟಿಯನ್ನು ರಾಘು ಸಿಂಗ್ರಿ ಸಾ.ಗಜೇಂದ್ರಗಡ ಇತನಿಗೆ ಕೊಡುವದಾಗಿ ತಿಳಿಸಿದನು. ಸದರಿ ವರದಿ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 148/2015 ಕಲಂ 78(3) Karnataka Police Act.

ದಿನಾಂಕ: 22-08-2015 ರಂದು ಮದ್ಯಾಹ್ನ 1-45 ಗಂಟೆಗೆ  ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು  ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಇಂದು ಬೆಳಿಗ್ಗೆ 11-30 ಗಂಟೆಗೆ ಕುಷ್ಠಗಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಷ್ಟಗಿ ಪಟ್ಟಣದ ಗಜೇಂದ್ರಗಡ ಕ್ರಾಸ್ ಹತ್ತಿರ ಮಟ್ಕಾ ಜೂಜಾಟ  ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ಬಸವರಾಜ ತಂದೆ ರುದ್ರಪ್ಪ ಗುಗ್ಗರಿ ವಯಾ 44 ವರ್ಷ ಜಾ:ಹಿಂದೂ ಲಿಂಗಾಯತ ಉ : ಟೇಲರಿಂಗ್ ಕೆಲಸ ಸಾ: ಕೊರಡಕೇರಾ  2] ಅಕ್ಬರಸಾಬ ತಂದೆ ಯಮನೂರಸಾಬ ನದಾಫ ವಯಾ 30 ವರ್ಷ ಜಾ: ಮುಸ್ಲಿಂ ಉ :ಕಿರಾಣಿ ಅಂಗಡಿ ಸಾ: ನೆರಬೆಂಚಿ ರವರನ್ನು ಠಾಣೆಗೆ ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ನಮ್ಮ ಠಾಣೆಯ ಸಿಬ್ಬಂದಿಯವರಾದ  ಪುಂಡಪ್ಪ ಎ.ಎಸ್.ಐ, ಹೆಚ್.ಸಿ-63 ನೀಲಕಂಠಪ್ಪ, ಪಿ.ಸಿ-344 ಸಂಗಪ್ಪ ಪಿ.ಸಿ.109 ಅಮರೇಶ, ಪಿಸಿ-24 ಬಸವರಾಜ ಪಿ.ಸಿ-116 ಸಂಗಮೇಶ, ,ಪಿಸಿ-105 ಶರಣಪ್ಪ ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ  ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ ಬೆಳಿಗ್ಗೆ 11-45  ಎ.ಎಂ ಗೆ ಹೊರಟು ಗಜೇಂದ್ರಗಡ ಕ್ರಾಸ್ ಹತ್ತಿರ  ಜೀಪ್ ನಿಲ್ಲಿಸಿ ದೂರದಲ್ಲಿ ನಿಂತು ನೋಡಲು ಅಲ್ಲಿ ಒಬ್ಬ ಜನರಿಗೆ ಮಟಕಾ ಬರೆಯಿಸಿರಿ ಒಂದು ರೂಪಾಯಿಗೆ 80-00 ರೂ. ಕೊಡುವದಾಗಿ ಹೇಳುತ್ತಿದ್ದ ಇನ್ನೊಬ್ಬ ಜನರಿಗೆ ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯಿಸಿರಿ ಅಂತಾ ಹೇಳುತ್ತಿದ್ದವನು ಮತ್ತು ಬರೆದುಕೊಳ್ಳುವವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವರನ್ನು ಹಿಡಿದು ವಿಚಾರಿಸಿದಾಗ ಬರೆಯಿಸಿರಿ ಅಂತಾ ಹೇಳುತ್ತಿದ್ದವನ ಹೆಸರು ಬಸವರಾಜ ತಂದೆ ಶಂಕರಗೌಡ ಮಾಲಿ ಪಾಟೀಲ್ ವಯಾ 55 ವರ್ಷ ಜಾ: ಲಿಂಗಾಯತ ಉ:ಟೇಲರ್ ಕೆಲಸ ಸಾ: ಪಂಚಂ ಲೇ ಔಟ್ ಕುಷ್ಟಗಿ ಅಂತಾ ಹೇಳಿದ್ದು ಹಾಗೂ ಬರೆಯುವವನನ್ನು ವಿಚಾರಿಸಲಾಗಿ ಅವನ ಹೆಸರು ನರಸಪ್ಪ ತಂದೆ ಶಿವಪ್ಪ ನೇಕಾರ ವ: 42 ವರ್ಷ ಜಾತಿ: ನೇಕಾರ : ಬಿ.ಎಸ್.ಎನ್.ಎಲ್. ಆಫೀಸ್ ನಲ್ಲಿ ದಿನಗೂಲಿ ನೌಕರ ಸಾ: ಕಟ್ಟೆ ದುರಗಮ್ಮನ ಗುಡಿ ಹತ್ತಿರ ಕುಷ್ಟಗಿ ಅಂತಾ ಹೇಳಿದ್ದು ಸದರಿಯವರು ಜನರಿಂದ ಪಣವಾಗಿ ಹಣ ಪಡೆದು ಅವರಿಗೆ ಹೆಚ್ಚಿನ ಹಣ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುತ್ತಿದ್ದು, ಹಾಗೂ ತಾವು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡರು. ಸದರಿಯವರನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 2,650=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಹಾಗೂ ಎರಡು ನೋಕಿಯೋ ಮೊಬೈಲ್ ಅಂ:ಕಿ:900=00 ರೂ:ಗಳಷ್ಟು ಆಗಬಹುದು ಇವುಗಳನ್ನು ಜಪ್ತ ಪಡಿಸಿದ್ದು ತಾವು ಬರೆದ ಮಟಕಾ ಪಟ್ಟಿಯನ್ನು ಮಲ್ಲಪ್ಪ ಮಡಿವಾಳರ ಸಾ: ಕುಷ್ಟಗಿ ಇತನಿಗೆ ಕೊಡುವದಾಗಿ ತಿಳಿಸಿದರು.  ಸದರಿ ವರದಿ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

Saturday, August 22, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 214/2015 ಕಲಂ 78(3) Karnataka Police Act.       
ದಿನಾಂಕ: 21-08-2015 ರಂದು ಸಾಯಂಕಾಲ 5-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಕಿನ್ನಾಳ ಗ್ರಾಮದ ಬಸ್ ನಿಲ್ಧಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ಚಿನ್ನಪ್ಪ ಸಾ: ಮುತ್ತಾಳ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 500=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 215/2015 ಕಲಂ 279, 338, 304(ಎ) ಐ.ಪಿ.ಸಿ & 187 ಐ.ಎಂ.ವಿ. ಕಾಯ್ದೆ:    
ದಿ:21-08-2015 ರಂದು ರಾತ್ರಿ 9-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಫಿರ್ಯಾದಿದಾರರಾದ [ಗಾಯಾಳು] ಹನಮಪ್ಪ ಹಿಟ್ನಾಳ. ಸಾ: ವರತಟ್ನಾಳ ತಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:21-08-2015 ರಂದು ಮಧ್ಯಾಹ್ನ 3-45 ಗಂಟೆಯ ಸುಮಾರಿಗೆ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ದದೇಗಲ್ ಗ್ರಾಮದ ಹತ್ತಿರ ಕರ್ವಿಂಗ್ ದಲ್ಲಿ ಗದಗ ಕಡೆಯಿಂದ ಆಟೋ ನಂ: ಕೆಎ-37/ಎ5816 ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದಾ ಓಡಿಸಿಕೊಂಡು ಕೊಪ್ಪಳ ಕಡೆಗೆ ಬರುವಾಗ ಎದರುಗಡೆಯಿಂದ ಬರುತ್ತಿದ್ದ ಮೋಟಾರ ಸೈಕಲ್ ನಂ: ಕೆಎ-31/ಆರ್-6706 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ಆಟೋವನ್ನು ಬಿಟ್ಟು ಅದರ ಚಾಲಕ ಓಡಿ ಹೋಗಿದ್ದು, ಈ ಅಪಘಾತದಲ್ಲಿ ಫಿರ್ಯಾದಿ ಹಾಗೂ ಆಟೋದಲ್ಲಿದ್ದ ಇತರೆ ಹನುಮಗೌಡ, ಅಂಜಿನಪ್ಪ ವಡ್ಡರ, ಹಾಗೂ ದೇವಪ್ಪ ಹುಯಿಲಗೋಳ ಇವರಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ನಂತರ ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ಗುರುಶಾಂತಪ್ಪ ಉಮಚಗಿ ಸಾ:ಶೇಲ್ಯೂಡಿ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಆತನಿಗೆ 108 ಅಂಬುಲೆನ್ಸ ದಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಯಂಕಾಲ 4-45 ಗಂಟೆಗೆ ತಂದು ಸೇರಿಕೆ ಮಾಡಿದಾಗ ಮಾರ್ಗದಲ್ಲಿ ಮೃತಪಟ್ಟ ಬಗ್ಗೆ ವೈದ್ಯರಿಂದ ಗೊತ್ತಾಗಿರುತ್ತದೆ. ಕಾರಣ ಅಪಘಾತ ಮಾಡಿ ಆಟೋ ಬಿಟ್ಟು ಓಡಿ ಹೋದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರನ್ನು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 233/2015  ಕಲಂ 341, 323, 504, 506, 306 ಐ.ಪಿ.ಸಿ:.

ದಿನಾಂಕ: 30-07-2015 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ತಿಮ್ಮಣ್ಣ ತಂದೆ ಸೋಮಪ್ಪ ವಾರಿ ವಯಸ್ಸು: 45 ವರ್ಷ ಜಾತಿ: ಕುರುಬರ, ಉ: ಒಕ್ಕಲತನ ಸಾ: ವೆಂಕಟಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ಕೊಟ್ಟಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.ಇಂದು ದಿನಾಂಕ:- 30-07-2015 ರಂದು ಸಂಜೆ 7:00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಶಿವಮ್ಮ ಇಬ್ಬರೂ ಗಂಗಾವತಿಯಲ್ಲಿದ್ದಾಗ ನಮ್ಮ ಹೊಲದ ಹತ್ತಿರ ಬೇರೆ ಹೊಲ ಗುತ್ತಿಗೆ ಮಾಡುವ ಮಹೇಶಪ್ಪ ಪೊಲೀಸ್ ಪಾಟೀಲ್ ತಂದೆ ವೀರನಗೌಡ 45 ವರ್ಷ, ಜಾತಿ: ಕುರುಬರು ಸಾ: ಭಂಡ್ರಾಳ ಈತನು ನನಗೆ ಫೋನ್ ಮಾಡಿ ನಿನ್ನ ಮಗ ಗಣೇಶ ನಮ್ಮ ಹೊಲದಲ್ಲಿನ ಮೆಣಸಿನ ಸಸಿಗಳನ್ನು ಕಿತ್ತಿಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಆತನಿಗೆ ಗಂಗಾವತಿಯಿಂದ ಬರುತ್ತಿದ್ದೇನೆ, ನೀನೇನು ಗಲಾಟೆ ಮಾಡಬೇಡಾ ನಾನು ಬಂದು ಮಾತನಾಡುತ್ತೇನೆ ಅಂತಾ ಹೇಳಿ ಕೂಡಲೇ ನಾನು ವೆಂಕಟಗಿರಿಗೆ ನಮ್ಮ ಮನೆಯ ಹತ್ತಿರ ರಸ್ತೆಯಲ್ಲಿ ಹೋಗುತ್ತಿರುವಾಗ ರಾತ್ರಿ 8:00 ಗಂಟೆಯ ಸುಮಾರಿಗೆ ಮಹೇಶಪ್ಪನು ಅಲ್ಲಿಗೆ ಬಂದು ನನ್ನನ್ನು ಅಕ್ರಮವಾಗಿ ಅಡ್ಡಗಟ್ಟಿ ತಡೆದು ನಿಲ್ಲಿಸಿ ಲೇ ಲಂಗಾ ಸೂಳೇಮಗನೇ ಎಲ್ಲಿದ್ದಾನೆ ನಿನ್ನ ಮಗ ಅವನನ್ನು ಕರೆ, ಅವನಿಗೆ ಬುದ್ದಿ ಹೇಳಲು ಆಗುವುದಿಲ್ಲವೇನು ಅಂತಾ ಜೋರಾಗಿ ಬಾಯಿ ಮಾಡಲು ಪ್ರಾರಂಭಿಸಿದನು. ಆಗ ನಾನು ಆತನಿಗೆ ಕಾಲು ಬಿದ್ದು ಕ್ಷಮೆ ಕೇಳುತ್ತೇನೆ, ನನ್ನ ಮಗ ಸಸಿಗಳನ್ನು ಕಿತ್ತಿದ್ದರೆ ಅವುಗಳನ್ನು ಪುನ: ಹೊಲದಲ್ಲಿ ಹಚ್ಚಿಸಿಕೊಡುತ್ತೇನೆ ದಯವಿಟ್ಟು ಗಲಾಟೆ ಮಾಡಬೇಡಾ, ಈ ಬಗ್ಗೆ ನನ್ನ ಮಗನಿಗೆ ವಿಚಾರ ಮಾಡುತ್ತೇನೆ ಅಂತಾ ಹೇಳಿದರೂ ಸಹ ಕೇಳಲಿಲ್ಲಾ. ಆತನಿಗೆ ಹಿರಿಯರನ್ನು ಕರೆಯಿಸಿ ಪಂಚಾಯತಿ ಮಾಡು ನಾನು ದಂಡವನ್ನು ಕಟ್ಟುತ್ತೇನೆ ಅಂತಾ ಕೇಳಿದರೂ ಸಹ ಕೇಳದೇ ಮಹೇಶಪ್ಪನು ನನ್ನ ಮೈಮೇಲೆ ಏರಿ ಅಂಗಿಯನ್ನು ಹಿಡಿದು ಎಳೆದಾಡಿ ಕೈಗಳಿಂದ ಬಡಿದನು. ನಾನು ಎಷ್ಟು ಅಂಗಲಾಚಿ ಬೇಡಿದರೂ ಸಹ ಮಹೇಶಪ್ಪನು ಕೇಳದೇ  ಇವತ್ತು ನಿನ್ನ ಮಗನನ್ನು ಉಳಿಸುವುದಿಲ್ಲಾ ಅಂತಾ ಬೆದರಿಕೆ ಹಾಕಿದ್ದರಿಂದ ಅವನ ಈ ವಿಪರೀತ ಒದರಾಟ ಮತ್ತು ಕಿರುಕುಳವನ್ನು ಕಂಡು ಅಲ್ಲಿದ್ದ ನನ್ನ ಮಗ ಗಣೇಶನು ಹೆದರಿಕೊಂಡು ಮನೆಯಲ್ಲಿ ಓಡಿ ಹೋಗಿ ಮೈಮೇಲೆ ಸೀಮೆ ಎಣ್ಣೆ ಸುರಿವಿಕೊಂಡು ಬೆಂಕಿ ಹಚ್ಚಿಕೊಂಡು ಚೀರಾಡುತ್ತಾ ಹೊರಗಡೆ ಓಡಿ ಬಂದನು. ಇದನ್ನು ನೋಡಿ ಪಕ್ಕದ ಮನೆಯವರಾದ ಯಂಕಪ್ಪ ತಂದೆ ಬಸಪ್ಪ, ಕುರುಬರು, 38 ವರ್ಷ ಈತನು ಬಂದು ಗಣೇಶನಿಗೆ ನೀರನ್ನು ಹಾಕಿ ಬೆಂಕಿಯನ್ನು ಆರಿಸಿದನು. ನೋಡಲಾಗಿ ಗಣೇಶನಿಗೆ ತಲೆಯಿಂದ ಪಾದದವರೆಗೆ ಸಂಪೂರ್ಣ ತೀವ್ರ ಸುಟ್ಟು ಗಾಯಗಳಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಕೂಡಲೇ ಅವನನ್ನು ಒಂದು ಆಟೋದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದೆವು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅಂಬ್ಯುಲೆನ್ಸ್ನಲ್ಲಿ ಬಳ್ಳಾರಿ ಕಳುಹಿಸಿ ಈಗ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ.  ಕಾರಣ ಈ ಘಟನೆಗೆ ಕಾರಣನಾದ ಮತ್ತು ನನ್ನ ಮೇಲೆ ಹಲ್ಲೆ ಮಾಡಿ, ಬೈದು, ಬೆದರಿಕೆ ಹಾಕಿರುವ ಮಹೇಶಪ್ಪ ಪೊಲೀಸ್ ಪಾಟೀಲ್ ತಂದೆ ವೀರನಗೌಡ 45 ವರ್ಷ, ಜಾತಿ: ಕುರುಬರು ಸಾ: ಭಂಡ್ರಾಳ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:  233/2015 ಕಲಂ: 341, 323, 504, 506 ಐಪಿಸಿ ಅಡಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

Friday, August 21, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಠಾಣೆ ಗುನ್ನೆ ನಂ. 191/2015 ಕಲಂ 78(3) Karnataka Police Act.
ದಿನಾಂಕ: 20-08-2015 ರಂದು ರಾತ್ರಿ 8-30 ಗಂಟೆಗೆ ಶ್ರೀ ರಾಮಣ್ಣ ನಾಯ್ಕ್ ಪಿ.ಎಸ್.ಐ ಅಪರಾಧ ವಿಭಾಗ  ನಗರ ಪೊಲೀಸ್ ಠಾಣೆ  ಗಂಗಾವತಿ. ಇವರು ಒಬ್ಬ ಆರೋಪಿತನೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ,  ದಿನಾಂಕ 20-08-2015  ರಂದು 19-00 ಗಂಟೆಗೆ ಆರೋಪಿತನಾದ (01) ಹುಸೇನ್ ತಂದೆ ಅಲಿಸಾಬ್  ಮತ್ತು (02) ಶಾಮೀದ್ ಇವರು ಗಂಗಾವತಿ ನಗರದ ಬಸವಣ್ಣ ಸರ್ಕಲ್ ದ ಕಾಳಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ತನ್ನ ಮೋಬೈಲ್ ದಲ್ಲಿ ಮೆಸೇಜ್ ಮುಖಾಂತರ ಮಟಕಾ ಜೂಜಾಟವನ್ನು ಆಡುತ್ತಿರುವಾಗ ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿ ಹುಸೇನ್ ಇವರಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 720-00. (02) ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿರುತ್ತದೆ.  ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 7-00 ಪಿ.ಎಂ. ದಿಂದ 8-00 ಪಿ.ಎಂ.ದ ವರೆಗೆ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿ ಸಂ 2 ನೇದವನಾದ ಶಾಮೀದ ಈತನು ಅಲ್ಲಿಂದ ಓಡಿ ಹೋಗಿದ್ದು ಕಾರಣ ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 212/2015 ಕಲಂ 78(3) Karnataka Police Act.        
ದಿನಾಂಕ: 20-07-2015 ರಂದು ಸಾಯಂಕಾಲ 5-45 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಗಿಣಿಗೇರಾ ಗ್ರಾಮದ ಗಂಗಾವತಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ದೇವೇಂದ್ರ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಕೂಗುತ್ತಾ ಮಟಕಾ ನಶಿಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 3250=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 85/2015  ಕಲಂ 78(3) Karnataka Police Act.

ದಿನಾಂಕ: 20-08-2015 ರಂದು ರಾತ್ರಿ 10-00 ಗಂಟೆಗೆ ಶ್ರೀಮತಿ ನಾಗರತ್ನಾ ಆರ್ ಪಿ.ಎಸ್.. ತಾವರಗೇರಾ ರವರು ಠಾಣೆಗೆ ಹಾಜರಾಗಿ ತಮ್ಮ ಒಂದು ವರದಿ, ಹಾಗು ಮಟಕಾ ದಾಳಿ ಪಂಚನಾಮೆ,ಮಟಕಾ ಜೂಜಾಟದ ಹಣ 490-00 ರೂಪಾಯಿ,ಒಂದು ಮಟಕ ಪಟ್ಟಿ,ಒಂದು ಬಾಲ್ ಪೆನ್ ಹಾಗು ಒಬ್ಬ ಆರೋಪಿ ಮರಿಸ್ವಾಮಿ ತಾಯಿ ಸುಂಕಮ್ಮ ಉರಿಜಾಳ :-37 ವರ್ಷ,ಜಾ:-ಮಾದರ್,:-ಒಕ್ಕಲುತನ ಸಾ:-ಹರಿಜನ ವಾಡ ತಾವರಗೇರಾ ಈತನನ್ನು ತಂದು ಹಾಜರ ಪಡಿಸಿದ್ದು ಸಾರಾಂಶವೆನೆಣದರೆ ತಾವು ಠಾಣೆಯಲ್ಲಿದ್ದಾಗ ಖಚಿತ ಬಾತ್ಮಿ ಮೇರೆಗೆ ಪಂಚರಾದ  (1) ನಾರಾಯಣಸಿಂಗ್ ತಂದೆ ವೆಮಕಟಸಿಂಗ್ ಗುಡಿಸಲಿ ಜಾ:-ರಜಪುತ :- ಕೂಲಿ ಸಾ:- ತಾವರಗೇರಾ ರವರನ್ನು ಹಾಗು 2)ಕನಾಲಪ್ಪ ತಂದೆ ಹಿರೇಶಾಮಣ್ಣ ಗುಳೇದರ್ ವಯ: 28 ವರ್ಷ, ಜಾತಿ: ವಾಲ್ಮೀಕಿ : ಕೂಲಿ ಕೆಲಸ ಸಾ.ಮೆಣೇದಾಳ ರವರುಗಳನ್ನು ಪಂಚರು ಅಂತಾ ಬರ ಮಾಡಿಕೊಂಡು, ಪಂಚರಿಗೆ ಮತ್ತು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಪಿ.ಸಿ-179,394,194,.ಪಿ.ಸಿ-74 ರವರುಗಳಿಗೆ ಬಾತ್ಮಿ ಬಂದ ವಿಷಯ ತಿಳಿಸಿ, ಪಂಚರನ್ನು ಹಾಗೂ ಸಿಬ್ಬಂದಿಯವರನ್ನು ಠಾಣೆಯ ಸರಕಾರಿ ಜೀಪಿನಲ್ಲಿ ಹೋಗಿ ತಾವರಗೇರಾ ಗ್ರಾಮದ  ಮರಿಯಮ್ಮನ ಗುಡಿಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಬೀದಿ ದೀಪದ ಕೆಳಗೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರ್ಗಳನ್ನು ಬರುದುಕೊಡುತ್ತಿದ್ದು, ಮಟ್ಕಾ ನಂಬರ್ ಬಂದಲ್ಲಿ ಒಂದು ರೂಪಾಯಿಗೆ 80-00 ರೂಪಾಯಿ ಕೊಡುತ್ತೆನೆ ಅಂತಾ ಕೂಗೂತ್ತಾ ಮಟ್ಕಾ ನಂಬರ್ಗಳನ್ನು ಬರೆದುಕೊಳ್ಳುತ್ತಿರುವ ಕಾಲಕ್ಕೆ ನಾನು ಹಾಗೂ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ರಾತ್ರಿ 08-15 ಗಂಟೆಗೆ ದಾಳಿ ಮಾಡಲು ಮಟ್ಕಾ ನಂಬರ್ ಬರೆಸುತ್ತಿದ್ದವರು ಓಡಿ ಹೋಗಿದ್ದು, ಮಟ್ಕಾ ನಂಬರ್ಗಳನ್ನು ಬರದುಕೊಡುತ್ತಿದ್ದನು ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದವನಿಗೆ ವಿಚಾರಿಸಲು ಆತನು ತನ್ನ ಹೆಸರು ಮರಿಸ್ವಾಮಿ ತಾಯಿ ಸುಂಕಮ್ಮ ಉರಿಜಾಳ ವಯ: 37 ವರ್ಷ, ಜಾತಿ; ಮಾದರ್ :ಒಕ್ಕಲುತನ, ಸಾ: ತಾವರಗೇರಾ  ಅಂತಾ ತಿಳಿಸಿದ್ದು, ಅವನ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ಒಂದು ಮಟ್ಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ 490=00 ರೂ. ಗಳು ಸಿಕ್ಕಿದ್ದು,  ಸದರಿಯವನ ಹತ್ತಿರ ಸಿಕ್ಕ ವಸ್ತುಗಳಾದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ ರೂ. 490-00 ಗಳನ್ನು ಪಂಚರ ಸಮಕ್ಷಮದಲ್ಲಿ ವಿವರವಾದ ಪಂಚನಾಮೆ ಮೂಲಕ ಜಪ್ತ ಮಾಡಿಕೊಂಡಿದ್ದು, ನಂತರ ಸಿಕ್ಕಿ ಬಿದ್ದ ಆರೋಪಿತನಿಗೆ ದಸ್ತಗಿರಿ ಮಾಡಿಕೊಂಡಿದ್ದು ಇರುತ್ತದೆ.ಸದರಿಯವನು ಜನರಿಂದ ಹಣ ಪಡೆದು ಮೋಸ ಮಾಡುವ ಪ್ರವರತ್ತಿಯವನು ಇರುತ್ತಾನೆ. ಪಂಚನಾಮೆ ಮೂಲಕ ಜಪ್ತಿ ಮಾಡಿದ ವಸ್ತು ಮತ್ತು ಪಂಚನಾಮೆಯೊಂದಿಗೆ, ಸಿಕ್ಕಿ ಬಿದ್ದ ಆರೋಪಿತನನ್ನು ಕರೆದುಕೊಂಡು ವಾಪಸ್ ಠಾಣೆಗೆ ರಾತ್ರಿ 10-00 ಗಂಟೆಗೆ ಬಂದು ದೂರು ನೀಡಿದ್ದು, ಸಿಕ್ಕಿಬಿದ್ದ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲು ಅಂತಾ ಮುಂತಾಗಿ ಫಿರ್ಯಾಧಿಯ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದೆ.

 
Will Smith Visitors
Since 01/02/2008