Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, May 26, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 88/2016 ಕಲಂ: 78(6) Karnataka Police Act.
ದಿ: 25-05-2016 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗುಂಡಪ್ಪ ಉಡಗಿ ಪಿ.ಐ. ನಗರ ಠಾಣೆ ಕೊಪ್ಪಳ ರವರು ಆರೋಪಿ ಸಮೇತ ತಮ್ಮ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸುವ ಬಗ್ಗೆ ಮಾನ್ಯ ಸಿ.ಜೆ.ಎಂ. ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ರಾತ್ರಿ 11-30 ಗಂಟೆಗೆ ಪ್ರಕರಣ ದಾಖಲು ಮಾಡಿದ್ದು, ಸದರಿ ಫಿರ್ಯಾದಿಯಲ್ಲಿ  ದಿ: 25-05-2016 ರಂದು ರಾತ್ರಿ 9-00 ಗಂಟೆಗೆ ಕೊಪ್ಪಳ ನಗರದ ಎನ್.ಎಚ್.-63 ರಸ್ತೆಯ ಪಾರ್ಥಾ ಇಂಟರ್ ನ್ಯಾಶನಲ್ ಹೊಟೇಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಆರೋಪಿತರು ಕೂಡಿಕೊಂಡು ಈಗ ನಡೆಯುತ್ತಿರುವ ಐಪಿಎಲ್-2016 ಕ್ರಿಕೇಟ ಪಂದ್ಯಾವಳಿಗಳಲ್ಲಿ ಕಲ್ಕತ್ತಾ ನೈಟ್ ರೈಡರ್ಸ ಮತ್ತು ಹೈದ್ರಾಬಾದ್ ಸನ್ ರೈಜರ್ಸ ಟೀಮ್ ನಡುವಣ ಪಂದ್ಯದ ಮೇಲೆ ಹಣವನ್ನು ಬಿಡ್ ಮಾಡಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ದಾಳಿಯ ಕಾಲಕ್ಕೆ ಸದರಿ ಆರೋಪಿತರಿಂದ ಪಂಚರ ಸಮಕ್ಷಮ ಕ್ರಿಕ ಬೆಟ್ಟಿಂಗ್ ನಗದು ಹಣ 20,600/- ರೂ ಹಾಗೂ 06 ಮೊಬೈಲ್ ಪೋನಗಳನ್ನು, ಒಂದು ವಿಡಿಯೋಕಾನ್ ಟಿ.ವಿ. ಬೆಟ್ಟಿಂಗ್ ಚೀಟಿ, 03 ಬಾಲಪೆನ್ನು ಜಪ್ತ ಮಾಡಿಕೊಂಡು ಬಂದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 54/2016 ಕಲಂ: 3 ಸಹಿತ 25 ಆಯುಧ ಕಾಯ್ದೆ-1959 ಹಾಗೂ 9, 39, 51(ಬಿ) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972.
ದಿನಾಂಕ:25-05-2016 ರಂದು 9-00 ಎಎಂಕ್ಕೆ ಪಿರ್ಯಾದಿದಾರಾದ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ. ಕುಕನೂರ ಠಾಣೆರವರು  ಖಚಿತ ಬಾತ್ಮೀಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ ಸರ್ಕಾರದಿಂದ ಯಾವುದೇ ಲೈಸನ್ಸ್ ದಾಖಲಾತಿ ಹೊಂದದೇ ಆಯುಧ ಹೊಂದಿ,  ವನ್ಯಜೀವಗಳನ್ನು ಕೊಂದು, ಅದರ ಮಾಂಸ ತಿಂದು ಚರ್ಮವನ್ನು ಮಾರಾಟ ಮಾಡುತ್ತಿದ್ದ ಏಳು ಜನ ಆರೋಪಿತರ ಮೇಲೆ ಬೆಣಕಲ್ ಸೀಮಾಂತರದ ಕೆರೆಯಲ್ಲಿ ದಾಳಿ ಮಾಡಿ, ಸದರಿಯವರಿಂದ 1) ಒಂದು ನಾಡ ಬಂದೂಕು, 2) 20 ಚರ್ರಿ ಗುಂಡುಗಳು, 3) ಎರಡು ಮೋಟಾರ್ ಸೈಕಲ್ ಗಳು ಅಂ.ಕಿ. 20,000-00 ರೂ.  4) ಒಂದು ಜಿಂಕೆ ಚರ್ಮ,  5) ಮದ್ಯದಒಡೆದ ಬಾಟಲಿ ತುಂಡುಗಳನ್ನು, ನೀರಿನ ಬಾಟಲಿಗಳನ್ನು, ಗುಟಖಾ ಚೀಟ್, 6) ಸ್ವಲ್ಪ ಮದ್ದು ಇರುವ ಒಂದು ಡಬ್ಬಿ, ನಾಲ್ಕು ಅಟಾಂ ಪಟಾಕಿಗಳು, ನಾಲ್ಕು ಸಣ್ಣ ಪಟಾಕಿಗಳನ್ನು ಜಪ್ತ ಮಾಡಿಕೊಂಡಿದ್ದು, ಈ ಬಗ್ಗೆ ದಾಳಿ ಪಂಚನಾಮೆಯನ್ನು ಸಹ ಪೂರೈಸಿಕೊಂಡು ಬಂದಿದ್ದು,  ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ:  279, 337, 338 ಐ.ಪಿ.ಸಿ:.
ದಿ:25-05-2016 ರಂದು ಸಾಯಂಕಾಲ 5-45 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಯಾದಿ ಸ್ವೀಕೃತವಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸೋಮನಾಥ ಕಲಾಲ. ಸಾ: ಹುಲಿಗಿ ತಾ: ಕೊಪ್ಪಳ ಇವರನ್ನು ವಿಚಾರಿಸಿ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ದೂರಿನ ಸಾರಾಂಶವೇನೆಂದರೇ, ಇಂದು ದಿ:25-05-16 ರಂದು ಮಧ್ಯಾಹ್ನ ನಾನು ಮತ್ತು ನಮ್ಮ ಕುಲಸ್ಥನಾದ ಮೃತ್ಯುಂಜಯ ಕಲಾಲ ಇಬ್ಬರೂ ವೈಯಕ್ತಿಕ ಕೆಲಸ ನಿಮಿತ್ತ ಮೃತ್ಯುಂಜಯ ಇತನ ಮೋಟಾರ ಸೈಕಲ್ ನಂ: ಕೆಎ-36/ಎಲ್-4708 ನೇದ್ದರಲ್ಲಿ ಕುಕನೂರಿಗೆ ಹೋಗಿದ್ದೆವು. ನಂತರ ಅಲ್ಲಿಂದ ವಾಪಾಸ್ ಊರಿಗೆ ಅಂತಾ ಬರುತ್ತಿದ್ದಾಗ ಗದಗ-ಕೊಪ್ಪಳ ರಸ್ತೆಯ ಎನ್,ಹೆಚ್-63 ರಸ್ತೆಯ ಮಿಲೇನಿಯಮ್ ಕಾಲೇಜ ಹತ್ತಿರ ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತ್ಯುಂಜಯ ಇತನು ತನ್ನ ಮೋಟಾರ ಸೈಕಲ್ ನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರ ವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ನಡೆಸುತ್ತಾ ಗಾಡಿಯನ್ನು ನಿಯಂತ್ರಿಸದೇ ಸ್ಕಿಡ್ ಮಾಡಿ ಬಿದ್ದಿದ್ದು ಇರುತ್ತದೆ. ಈ ಅಪಘಾತದಲ್ಲಿ ನನಗೆ ಬಲಗೈ ಮತ್ತು ಎಡಗೈ, ಹಣೆಗೆ, ಎಡಗಣ್ಣಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿದ್ದು, ಅಲ್ಲದೇ ಎಡತೊಡೆಯ ಹತ್ತಿರ ಸೈಲೆನ್ಸ ಬಡಿದು ಸುಟ್ಟಗಾಯವಾಗಿದ್ದು ಇರುತ್ತದೆ. ಅಪಘಾತ ಮಾಡಿದ ಮೃತ್ಯಂಜಯನಿಗೆ ತಲೆಗೆ ಭಾರಿ ಪೆಟ್ಟಾಗಿ ಕಿವಿಯಿಂದ ರಕ್ತ ಬಂದಿರುತ್ತದೆ. ಮತ್ತು ಹಣೆ, ಬಲಕಣ್ಣು, ಮೂಗಿಗೆ ತೆರೆಚಿದ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಮೊಟಾರ ಸೈಕಲ್ ಸವಾರ ಮೃತ್ಯುಂಜಯ ತಂದೆ ತುಕಾರಾಮ ಕಲಾಲ. ವಯ: 35, ಜಾ: ಕಲಾಲ. ಉ: ಐಸಕ್ರೀಂ ವ್ಯಾಪಾರ, ಸಾ: ಹುಲಿಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Wednesday, May 25, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 337 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 23-05-2016 ರಂದು 08-00 ಪಿ.ಎಂ.ಕ್ಕೆ ಫಿರ್ಯಾದಿದಾರರ ಅಣ್ಣನಾದ ಬಸಟ್ಟೆಪ್ಪ ಮತ್ತು ಅವರ ಕಾರ ಚಾಲಕ ಸುರೇಶ ಕೂಡಿಕೊಂಡು ಇನೋವಾ ಕಾರ ನಂ. ಕೆ.ಎ.37/ಎಂ.9922 ನೇದ್ದರಲ್ಲಿ ಗಿಣಿಗೇರಾದಿಂದ ಗಂಗಾವತಿಗೆ ಬರುತ್ತಿರುವಾಗ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ಗಂಗಾವತಿ ಕಡೆಯಿಂದ ಅವರ ಎದುರಿಗೆ ಲಾರಿ ನಂ. ಕೆ.ಎ.26/5138 ನೇದ್ದರ ಚಾಲಕನು ಲಾರಿಯನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಮುಂದೆ ಇರುವ ಲಾರಿಗೆ ಓವರಟೇಕ್ ಮಾಡಿಕೊಂಡು ಕಾರಿನ ಎದುರಿಗೆ ಬಂದು ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿ ಅಣ್ಣ ಬಸಟ್ಟೆಪ್ಪ, ಚಾಲಕ ಸುರೇಶ ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈ ಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 44/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾಧಿದಾರರಾದ ಚಂದ್ರು ತಂದಿ ರಾಮಲಿಂಗಪ್ಪ ಗೋನಾಳ ಸಾ: ಮುದುಟಗಿ ಮತ್ತು ಪರಶುರಾಮ ಸೂಡಿ ರವರು ಕೂಡಿಕೊಂಡು ಮುದುಟಗಿ ಗ್ರಾಮದಿಂದ ಹನಮಸಾಗರಕ್ಕೆ ಫಿರ್ಯಾದಿದಾರರಿಗೆ ಸಂಬಂಧಿಸಿದ ಹಿರೋಹೊಂಡ ಮೋಟರ ಸೈಕಲ್ ನಂ: ಕೆ.ಎ-37- ಎಲ್-1317 ನೇದ್ದರಲ್ಲಿ ಹಿಂದುಗಡೆ ಫಿರ್ಯಾದಿದಾರರನ್ನು ಕೂಡಿರಿಸಿಕೊಂಡು ಗಾಯಾಳು ಪರಶುರಾಮನು ಮೋಟರ ಸೈಕಲನ್ನು ನಡೆಸುತ್ತಾ ಡಿಸೈಲ್ ತರಲು ಹನಮಸಾಗರಕ್ಕೆ ಬರುತ್ತಿರುವಾಗ ಹನಮಸಾಗರ ಇನ್ನು ಒಂದು ಕೀ.ಮೀ. ಅಂತರ ಇರುವಾಗ ಅದೇ ವೇಳೆಗೆ ಹನಮಸಾಗರ ಕಡೆಯಿಂದ ಒಂದು ಲಾರಿ ನಂ: ಎ.ಎಪಿ-29 / ಯು-9513 ನೇದ್ದರ ಚಾಲಕನು ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎದುರುಗಡೆಯಿಂದ ಮೋಟರ ಸೈಕಲ್ ಸವಾರರಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಸೈಕಲ್ ಮೋಟರ ಸವಾರರು ವಾಹನ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಅಪಘಾತದಿಂದ ಮೋಟರ ಸೈಕಲ್ ಹಿಂದೆ ಕುಳಿತ ಫಿರ್ಯಾದಿದಾರರಿಗೆ ಎದೆಗೆ, ತೆರಚಿದ ಗಾಯ ಮತ್ತು ಬಲ ಬುಜಕ್ಕೆ ಒಳಪೆಟ್ಟು ಮತ್ತು ಬಲಗಾಲ ಮಂಡಿಗೆ ತೆರಚಿದ ಗಾಯ ಮತ್ತು ಒಳ ಪೆಟ್ಟಾಗಿದ್ದು ಮೋಟರ ಸೈಕಲ್ ನಡೆಸುತ್ತಿದ್ದ ಪರಶುರಾಮ ಸೂಡಿ ಈತನಿಗೆ ತಲೆಯ ಹಿಂಭಾಗ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಅದೇ ವೇಳೆಗೆ ಲಕ್ಷ್ಮಣ ನಾಯಕ ರವರು ಬಂದಿದ್ದು ಗಾಯಾಳುಗಳಿಗೆ ಎಬ್ಬಿಸಿದ್ದು  ಅಪಘಾತದಿಂದ ಮೋಟರ ಸೈಕಲ್ ಮುಂದಿನ ಲೈಟಿನ ಡೂಮ,  ಇಂಡಿಕೇಟರ ಲೈಟ ಒಡೆದಿದ್ದು ಪೆಟ್ರೋಲ ಟ್ಯಾಂಕ ನೆಗ್ಗಿದ್ದು ಮುಂದಿನ ಬಂಪರ, ಮಟಗಾರ್ಡ ಬೆಂಡಾಗಿರುತ್ತದೆ. ಹಿಂದಿನ ರಿಮ್ ಬೆಂಡಾಗಿರುತ್ತದೆ. ಸಲೈನ್ಸರ ಪೈಪ ಬೆಂಡಾಗಿರುತ್ತದೆ, ನಂತರ ಅಪಘಾತಪಡಿಸಿದ ಲಾರಿಯನ್ನು ಅದರ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು ಅದರ ನಂಬರ ಎ.ಪಿ-29/ಯು-9513 ಅಂತಾ ಇರುತ್ತದೆ ನಂತರ ಗಾಯಾಳು ಪರಶುರಾಮನಿಗೆ ಮೂರ್ಚೆ ಬಂದಂತಾಗಿದ್ದರಿಂದ ಅವನು ನೆಲಕ್ಕೆ ಮಲಗಿಕೊಂಡನು ಆಗ ಆಲಾರಿಯ ಚಾಲಕನು ಗಾಭರಿಗೊಂಡು ಲಾರಿಯನ್ನು ನಡೆಯಿಸಿಕೊಂಡು ಹಾಗೆಯೇ ಹೋದನು, ಪ್ರಕರಣ ದಾಖಲಿಸಿಕೊಂಡು ತನಿಕೆ ಕೈ ಗೊಂಡಿರುತ್ತಾರೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ:  341, 323, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ : 24-05-2016 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ  ಹಿರೇಬಸಮ್ಮ ಗಂಡ .ಬಸನಗೌಡ  ಕಾಸರಡ್ಡಿ  ಸಾ- ಕೊಟ್ನೆಕಲ್  ನಿವಾಸಿಯಾಗಿದ್ದು ನನ್ನ ಮನೆ ಪಕ್ಕದಲ್ಲಿ ನನ್ನ ತಮ್ಮನದು ಇದ್ದು, ದಿನಾಂಕ : 22-05-2016 ರಂದು  ಇವರು ಊರಿಗೆ ಹೊಗಿದ್ದರು ಅಂದು ಪಬ್ಲಿಕ್ ನಳ ಹರಿದು ನೀರು ಪ್ಲಾಸ್ಟಿಕ್ ಸೇರಿ ನಮ್ಮ ಬಾತ್ ರೂಮಿ  ಪೈಪ್ ಬ್ಲಾಕ್ ಆಗಿದ್ದು ಆದ ಕಾರಣ ನಾವು ಅವರ ಮನೆ ಮುಂದೆ ಇರುವ ಪಬ್ಲಿಕ್ ಟ್ಯಾಪ್  ಬಂದು ಮಾಡಿದ್ದೇವು.  ದಿನಾಂಕ : 23-05/2016 ರಂದು ಊರಿನಿಂದ ಬಂದು  ನನ್ನ   ತಮ್ಮನ ಹೆಂಡತಿ  ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದರು.  ನಾನು ಅದನ್ನು  ವಿರೋದಿಸಿದಾಗ  ಅವರು ಸುಮ್ಮನಿದ್ದು,  ರಾತ್ರಿ 9-30 ಗಂಟೆಗೆ ಅವರ ತಮ್ಮನಾದ  1) ಬಸವರಾಜ ತಂದಿ ಲಿಂಗಪ್ಪ, 2) ಶರಣಮ್ಮ ಗಂಡ ವೀರನಗೌಡ ವರು ಕೂಡಿಕೊಂಡು ನ್ನ ತಲೆಗೂದಲು ಹಿಡಿದು ಎಳೆದುಕೊಂಡು ನನ್ನನ್ನು ಬಿಡಿದು ಮತ್ತು ನನ್ನ ಮಕ್ಕಳನ್ನು ಬಡಿದಿರುತ್ತಾರೆ. ಈ ಜಗಳ ಮುಗಿದ  ನಂತರ  ರಾತ್ರಿ 12-30 ಕ್ಕೆ ಇಬ್ಬರೂ ಅಣ್ಣ ತಮ್ಮಂದಿರು ಕೂಡಿಕೊಂಡು ಬಂದು ಹೊರಗೆ  ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ನಾವು ಇದಕ್ಕೆ  ಯಾವುದೇ ಪ್ರತಿರೋದ ತೋರಿಸಲಿಲ್ಲ. ಅವರು ತಮ್ಮ ಬಸವರಾಜ ತಂದಿ ಲಿಂಗಪ್ಪ ಸಾ- ಮೈಲಾಪೂರ  2) ಶರಣಮ್ಮ ಗಂಡ ವೀರನಗೌಡ ಕೊಟ್ನೆಕಲ್ 3) ಶರಣಪ್ಪ   ಮೈಲಾಪೂರ  4) ರೇಖಮ್ಮ ಗಂಡ ಕರಿಬಸಪ್ಪ ಸಾ. ಕುರಕುಂದಿ 5) ಮಲ್ಲಮ್ಮ ಬಸವರಾಜ ನಡುವಿ ಸಾ. ಸಿದ್ರಾಂಪೂರ 6) ಚನ್ನಮ್ಮ ಗಂಡ ಲಿಂಗಪ್ಪ ಗುಡಿತಾಳ ಸಾ. ಮಲಾಪೂರಇವರೆಲ್ಲರೂ ಸೇರಿ ಜಗಳಾ ತೆಗೆದು ಕೈಯಿಂದ ಹೊಡೆಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಸಿರೇ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 115/2016 ಕಲಂ:  143, 147, 341, 323, 354, 506 ಸಹಿತ 149 ಐ.ಪಿ.ಸಿ:.

ದಿನಾಂಕ : 24-05-2016 ರಂದು ರಾತ್ರಿ 9-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ ಶರಣಮ್ಮ ಗಂಡ ವೀರನಗೌಡ ರಡ್ಡಿ ವಯಾ- 28 ವರ್ಷ- ಒಕ್ಕಲುತನ ಸಾ- ಕೊಟ್ನೆಕಲ್ ತಾ- ಗಂಗಾವತಿಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆಫಿರ್ಯಾದಿದಾರರ ಮನೆಯ ಮುಂದೆ ಇರುವ ನೀರಿನ ಕೊಳಯಿಗೆ  ಕಟ್ಟಿಗೆ ಹೊಡೆದಿದ್ದರಿಂದ  ಫಿರ್ಯಾದಿದಾರರು ಜಗಳಾ ಮಾಡಿದ್ದು, ನಂತರ ರಾತ್ರಿ 8-00 ಗಂಟೆಯ ಸುಮಾರಿಗೆ  ಆರೋಪಿತರಾದ ಬಸಮ್ಮ ಗಂಡ ಬಸನಗೌಡ ಕಾಸರಡ್ಡಿ  2)  ಹಿರೇಬಸವರಾಜಪ್ಪ  ಕೊಟ್ನೆಕಲ್ 3)  ಸಣ್ಣಬಸವರಾಜ  ಕೊಟ್ನೆಕಲ್ 4)  ಶಿವು 5)  ಅಮರೇಶ  6)  ಶರಣಬಸವ 7)  (ಅಮರಮ್ಮ) ಪಲ್ಲವಿ ಗಂಡ ಕುಮಾರ  8)  ಅಮರೇಶ ತಂದಿ ಹಿರೇಬಸವರಾಜಪ್ಪ ಎಲ್ಲರೂ ಸಮಾನ ಉದ್ದೇಶದಿಂದ ಬಂದು ಫಿರ್ಯಾದಿದಾಳಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಕೈಯಿಂದ ಹೊಡೆಬಡಿ ಮಾಡಿ ಜಡೆ ಹಿಡಿದು ಎಳೆದಾಡಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ  ಜೀವ ಭಯ ಹಾಕಿ ಊರು ಬಿಟ್ಟು ಹೊಗಿರಿ ಅಂತಾ ಮುಂತಾಗಿ  ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Tuesday, May 24, 2016




1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾದಿದಾರರಾದ ಶ್ರೀ ಭರಮಪ್ಪ ತಂದೆ ಹನುಮಂತಪ್ಪ ಪುಜಾರಿ 40 ವರ್ಷ ಫಿರ್ಯಾದಿಯನ್ನು ನೀಡಿದ್ದುನಿನ್ನೆ ದಿನಾಂಕ: 23-05-2016 ರಂದು ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ನಾನು ಮತ್ತು 1] ಜಗದೀಶ ತಂದೆ ಯಲ್ಲಪ್ಪ ಪುಜಾರಿ 30 ವರ್ಷ ಸಾ: 15 ನೇ ವಾರ್ಡ ಮುಚಿಗೇರ ಓಣಿ ಗಂಗಾವತಿ 2] ಸಕ್ರಪ್ಪ ತಂದೆ ಲಕ್ಷಮಪ್ಪ 55 ವರ್ಷ ಸಾ: 15 ನೇ ವಾರ್ಡ ಮುಚಿಗೇರ ಓಣಿ ಗಂಗಾವತಿ 3] ರಾಜಸಾಬ ತಂದೆ ದಾದೇಸಾಬ ನಡಗುಂದಿ, 53 ವರ್ಷ ಸಾ: ಬನ್ನಿಗಿಡದ ಕ್ಯಾಂಪ್ ಗಂಗಾವತಿ 4] ಹಜಮತ್ ಅಲಿ ತಂದೆ ಖಾಸೀಮಸಾಬ ವ್ಯಾಪಾರ, 48 ವರ್ಷ ಸಾ: ಲಕ್ಷ್ಮಿಕ್ಯಾಂಪ್ ಗಂಗಾವತಿ ಹಾಗೂ ಇತರರೊಂದಿಗೆ ಮಾವಿನಹಣ್ಣು ಪ್ಯಾಕ ಮಾಡಲು ಇಸ್ಮಾಯಿಲ್ ಸಾಬ ಎಂಬುವರ ಮೇಸ್ತ್ರಿ ಸಂಗಡ ಕೊಪ್ಪಳ ತಾಲೂಕಿನ ಕಲ್ ತಾವರಗೇರಿಗೆ ಬುಲೆರೋ ಫಿಕಪ್ ವಾಹನ ನಂ: ಎಂ.ಹೆಚ್.-45/ಟಿ-2818 ನೇದ್ದರಲ್ಲಿ ಹೋಗಿದ್ದೆವು. ನಂತರ ಕೆಲಸ ಮುಗಿಸಿಕೊಂಡು ಅದೇ ವಾಹನದಲ್ಲಿ ಕೊಪ್ಪಳ ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿರುವಾಗ ರಾತ್ರಿ 9:30 ಗಂಟೆಯ ಸುಮಾರಿಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಚಿಕ್ಕ ಬೆಣಕಲ್ ಕ್ರಾಸ ಹತ್ತಿರ ನಾವು ಕುಳಿತು ಬರುತ್ತಿದ್ದ ಬುಲೆರೋ ಫಿಕಿಪ್ ವಾಹನ ಚಾಲಕನು ವಾಹನವನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರೋಡ್ ಹಂಪ್ಸ್ ನ್ನು ಜೋರಾಗಿ ದಾಟಿದ್ದರಿಂದ ಹಿಂಭಾಗದಲ್ಲಿ ಕುಳಿತುಕೊಂಡಿದ್ದು ನಾವುಗಳು ವಾಹನದಿಂದ ಪುಟಿದು ರಸ್ತೆಯ ಮೇಲೆ ಬಿದ್ದಿದ್ದು ಇದರಿಂದಾಗಿ ನನಗೆ ಬಲಗಡೆ ಸೊಂಟಕ್ಕೆ ಒಳಪೆಟ್ಟು ಹಾಗೂ ಬಲ ಮೊಣಕೈಗೆ ಗಾಯವಾಗಿದ್ದು, ಇತರರಿಗೂ ಸಹ ಸಣ್ಣ ಪುಟ್ಟ ಗಾಯ ಹಾಗೂ ತೀವ್ರ ಒಳಪೆಟ್ಟಾಗಿದ್ದವು. ಜಗದೀಶ ಈತನಿಗೆ ತಲೆಯ ಹಿಂಭಾಗ ತೀವ್ರ ರಕ್ತಗಾಯವಾಗಿ ಎರಡು ಕಿವಿಯಲ್ಲಿ ರಕ್ತ ಬಂದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಅಪಘಾತದ ನಂತರ ನಾವು ಕುಳಿತು ಬರುತ್ತಿದ್ದ ಬುಲೆರೋ ಫಿಕಪ್ ವಾಹನದ ಚಾಲಕ ಅಲ್ಲಿಂದ ಓಡಿ ಹೋಗಿದ್ದನು. ನೋಡಿದಲ್ಲಿ ಅವನನ್ನು ಗುರುತಿಸುತ್ತೇವೆ. ಕೂಡಲೇ ಯಾರೋ ಟೋಲ್ ಗೇಟ್ ಅಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದ್ದು ಅದರಲ್ಲಿ ನಾವು ಎಲ್ಲರೂ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಬರುತ್ತಿರುವಾಗ 10:00 ಗಂಟೆಯ ಸುಮಾರಿಗೆ ಬಸಾಪಟ್ಟಣದ ಹತ್ತಿರ ಜಗದೀಶ ಈತನು ಮೃತಪಟ್ಟಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 146/2016 ಕಲಂ: 279, 337  ಐ.ಪಿ.ಸಿ
ದಿನಾಂಕ :-23-05-2016 ರಂದು ರಾತ್ರಿ 08-45 ಗಂಟೆಗೆ ಸರಕಾರಿ  ಆಸ್ಪತ್ರೆ ಕುಷ್ಟಗಿಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಚನ್ನಬಸಪ್ಪ ತಂದೆ ಮರಿಯಪ್ಪ ಪರಕಿ ಸದರಿ ಹೇಳಿಕೆಯ ಪಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ: 23-05-2016 ರಂದು ಪಿರ್ಯಾದಿದಾರರು ಮದ್ಯಾಹ್ನ ಕೆಲಸದ ನಿಮತ್ಯ ಕುಷ್ಟಗಿ ಬಂದು ಕೆಲಸ ಮುಗಿಸಿಕೊಂಡು ರಾತ್ರಿ 08-15 ಗಂಟೆ ಸುಮಾರಿಗೆ ಕುಷ್ಟಗಿಯಿಂದ ವಾಪಸ್ ಮದಲಗಟ್ಟಿಗೆ ತನ್ನ ಮೋ/ಸೈ ನಂ ಕೆಎ-37-ವೈ-9237 ನೇದ್ದನ್ನು ತೆಗೆದುಕೊಂಡು ಹೋಗುತ್ತಿರುವಾಗ ಕುಷ್ಟಗಿ – ಗಜೇಂದ್ರಗಡ  ರೋಡ್ ಜವಾರಿ ಡಾಬಾದ ಹತ್ತಿರ ರೋಡ್ ಹಮ್ಸ್ ಇದ್ದಿದ್ದು ಆಗ ಆತನು ಮೋ/ಸೈ ನಿದಾನಗೊಳಿಸಿದ್ದು ಅದೇ ವೇಳೆಗೆ ಎದರುಗಡೆಯಿಂದ ಗಜೇಂದ್ರಗಡ ಕಡೆಯಿಂದ ಕುಷ್ಟಗಿ ಕಡೆಗೆ ಮೋ/ಸೈ ನಂ ಕೆಎ-27-ಇಡಿ-5586 ನೇದ್ದರ ಸವಾರನಾದ ಶಿವಕುಮಾರ ಇತನು ಅತಿವೇಗ ಮತ್ತು ಅಲಕ್ಷತನದಿಂದ ಬಂದು ರೋಡ್ ಹಮ್ಸ್ ಲೆಕ್ಕಿಸದೇ ನಡೆಸಿದ್ದು ಅದರಿಂದ ಸದರಿಯವನು ನಿಯಂತ್ರಣ ತಪ್ಪಿ ಪಿರ್ಯಾದಿ ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿಗೆ ಮತ್ತು ಶಿವಕುಮಾರನಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ.  ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 22-05-2016
1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ 22-05-2016 ರಂದು ಆರೋಪಿತನು ತನ್ನ ನ್ಯಾನೋ ಕಾರ ನಂ ಕೆ.-37, ಎಂ-4918 ನೇದ್ದನ್ನು ಚಲಾಯಿಸಿಕೊಂಡು ಕನಕಗಿರಿಯಿಂದ ನವಲಿ ಕಡೆಗೆ ಹೋಗುವ ರಸ್ತೆಯ ಮೇಲೆ ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಕಾರನ್ನು ನಡೆಯಿಸಿ ರಸ್ತೆಯ ತಿರುವಿನಲ್ಲಿ ಕಾರನ್ನು ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದು, ಇದರಿಂದ ಆರೋಪಿತನಿಗೆ ತಲೆಗೆ ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿ, ಕಿವಿ, ಮೂಗು ಮತ್ತು ಬಾಯಿ ಯಿಂದ ರಕ್ತ ಬಂದು ಸ್ಥಳದಲ್ಲಿಯೇ ಆರೋಪಿ ರಂಗಸುಬ್ಬಣ್ಣ ರಾತ್ತಿ 9-20 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 43/2016 ಕಲಂ: 87 Karnataka Police ACT. 
ಕುಷ್ಟಗಿ ಸಿ.ಪಿ.ಐ ರವರು ಹನಮಸಾಗರ ಠಾಣೆಯಲ್ಲಿದ್ದಾಗ ಬಂಡರಗಲ್ ಸೀಮಾದ ಹಳ್ಳದ ಹತ್ತಿರ ಸಾರ್ವನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಎ.ಎಸ್.ಐ ದೊಡ್ಡಪ್ಪ ತಾವರಗೇರಿ ಪಿ.ಎಸ್. ಹೆಚ್.ಸಿ-83, ಪಿ.ಸಿ-162, ಹನಮಸಾಗರ ಪಿ.ಎಸ್. ಮತ್ತು ಪಿ.ಸಿ-381, 426, 407 ಕುಷ್ಟಗಿ ಠಾಣೆರವರು ಹಾಗೂ ಇಬ್ಬರು ಪಂಚರಾದ 1] ಚಂದ್ರಶೇಖರ ತೋಪಲಕಟ್ಟಿ 2] ಚಂದ್ರಪ್ಪ ರಾಠೋಡ ಸಾ: ಹೂಲಗೇರಿ ರವರೊಂದಿಗೆ ಬಂಡರಗಲ್ ಸೀಮಾದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಲ್ಲಿ ಜನರು ದುಂಡಾಗಿ ಕುಳಿತು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು, ನಾವೆಲ್ಲರೂ ಒಮ್ಮೆಲೆ ರೇಡ್ ಮಾಡಲು ಇಸ್ಪೀಟ್ ಆಡುತ್ತಿದ್ದ ಜನರೆಲ್ಲರೂ ಓಡ ಹತ್ತಿದ್ದು, ಆಗ ನಮ್ಮ ಸಿಬ್ಬಂದಿಯವರ ಕೈಗೆ ಮೂರು ಜನ ಸಿಕ್ಕಿ ಬಿದ್ದಿದ್ದು, ಅವರ ತಮ್ಮ ಹೆಸರು 1] ದೊಡ್ಡಬಸಪ್ಪ ಸಾ: ಮ್ಯಾಗಲಪೇಟೆ ಹುನಗುಂದ ಈತನ ವಶದಲ್ಲಿ 16700/- ರೂ ಒಂದು ಸ್ಯಾಮಸಾಂಗ್ ಮೋಬೈಲ್, 2] ಗೋಪಾಲ ಸಾ: ಹೂಲಗೇರಿ ತಾಂಡಾ, ಈತನ ವಶದಲ್ಲಿ 9900/- ರೂ ಹಾಗೂ ಒಂದು ಇಂಟೆಕ್ಸ್ ಮೋಬೈಲ್ ಸಿಕ್ಕಿದೆ, ಮತ್ತು ಇನ್ನೊಬ್ಬನ ಹೆಸರು 3] ನಾಗರಾಜ @ ನಾಗಪ್ಪ ಸಾ: ಹುನಕುಂಟಿ, ತಾ: ಹುನಗುಂದ ಈತನ ವಶದಲ್ಲಿ 4000/ ರೂ ಮತ್ತು ಒಂದು ಮೈಕ್ರೋಮ್ಯಾಕ್ಸ್ ಮೋಬೈಲ್ ಸಿಕ್ಕಿರುತ್ತದೆ. ಕಣದಲ್ಲಿ ನೋಡಲು 18000/- ರೂ ನಗದು ಹಣ ಸಿಕ್ಕಿರುತ್ತದೆ. ಹೀಗೆ ಒಟ್ಟು ಹಣ 48,600/- ರೂ ನಗದು ಹಣ ಸಿಕ್ಕಿರುತ್ತದೆ. ಅಲ್ಲದೇ ಆ ಸ್ಥಳದ ಆಜು ಬಾಜು 10 ಮೋಟಾರ್ ಸೈಕಲಗಳು ಸಿಕ್ಕಿದ್ದು, ಅವುಗಳನ್ನು ಜಪ್ತು ಪಡಿಸಿದೆ.  ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 108/2016 ಕಲಂ: 87 Karnataka Police ACT. 
22-05-2016 ರಂದು ಸಾಯಂಕಾಲ 4-45  ಗಂಟೆಯ ಸುಮಾರಿಗೆ ಗುಂಡೂರು ಸೀಮಾದ ಶಿವಣ್ಣ ಸಹುಕಾರ ಇವರ ಹೊಲದ ಹತ್ತಿರ ಹಳ್ಳಿದ ದಂಡೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಶ್ರೀ. ನಿಂಗಪ್ಪ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 7 ಜನರು ತಮ್ಮ ಮೋಟಾರ್ ಸೈಕಲ್ ಬಿಟ್ಟು ಓಡಿ ಹೋಗಿದ್ದು ಒಬ್ಬನು ಸಿಕ್ಕಿಬಿದ್ದಿದ್ದು,. ಸಿಕ್ಕಿ ಬಿದ್ದ ಆರೋಪಿತಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 3000=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಮತ್ತು ಆರೋಪಿತರ 8 ಮೋಟಾರ್ ಸೈಕಲ್ ಗಳನ್ನು  ಜಪ್ತ ಮಾಡಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 117/2016 ಕಲಂ: 78(6) Karnataka Police ACT. 
ದಿನಾಂಕ 22-05-2016 ರಂದು ಸಂಜೆ 6-00 ಗಂಟೆಗೆ ಶ್ರೀ ಸಾಬಯ್ಯ, ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆ ರವರು  ಸ್ವಂತ ವರದಿಯನ್ನು ಪಂಚನಾಮೆ, ಆರೋಪಿ ಮತ್ತು ಮಾಲಿನೊಂದಿಗೆ ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ಈ ದಿವಸ ದಿನಾಂಕ 22-05-2016 ರಂದು ಸಂಜೆ 4-30 ಗಂಟೆಗೆ ಗುಡದೂರ ಸೀಮಾದ ಹನುಮಂತಪ್ಪ  ಮಂತ್ರಿಕೀ ರವರ ಹೊಲದ ಪಕ್ಕದಲ್ಲಿರುವ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 2 ಹುಂಜಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಅದೃಷ್ಟದ ಕೋಳಿ ಪಂದ್ಯಾಟದ ಜೂಜಾಟದ ತೊಡಗಿದ ಸಮಯದಲ್ಲಿ ಪಂಚರ ಮತ್ತು ಸಿಬ್ಬಂದಿರವರೊಂದಿಗೆ ದಾಳಿ ಮಾಡಿ ಅವರಿಂದ ನಗದು ಹಣ ರೂ.1200/- ಮತ್ತು ಪಂದ್ಯಾಟಕ್ಕೆ ಬಳಸಿದ 2 ಹುಂಜಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
5] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 454, 457, 380 ಐ.ಪಿ.ಸಿ:.
ದಿನಾಂಕ: 22-05-2016 ರಂದು ಮದ್ಯಾಹ್ನ 1-00 ಗಂಟೆಗೆ ವೀರಭದ್ರಪ್ಪ ತಂದೆ ಬಸಪ್ಪ ಅಂಗಡಿ ಸಾ: ಮರಿಶಾಂತವೀರ ನಗರ ಕೊಪ್ಪಳ ಇವರು ಫಿರ್ಯಾದಿ ನೀಡಿದ್ದು ದಿನಾಂಕ: 20-05-2016 ರಂದು ರಾತ್ರಿ 8-45 ಗಂಟೆಯಿಂದ ದಿನಾಂಕ: 21-05-2016 ರಂದು ಮದ್ಯಾಹ್ನ 2-00 ಗಂಟೆಯ ನಡುವಿನ ಅವಧಿಯಲ್ಲಿ  ಫಿರ್ಯಾದಿದಾರರು ಮತ್ತು ಅವರ ಹೆಂಡತಿ ಹಾಗೂ ಅವರ ಮಕ್ಕಳೊಂದಿಗೆ ಹಲಗೇರಿಗೆ ಮತ್ತು ಹುಬ್ಬಳ್ಳಿಗೆ ಹೋಗಿದ್ದಾಗ ಯಾರೋ ಕಳ್ಳರು ಫಿರ್ಯಾದಿದಾರರ ಮನೆಯ ಮುಂದಿನ ಬಾಗಿಲಿನ ಸೆಂಟರ್ ಲಾಕ್ ಮುರಿದು ಒಳ ಪ್ರವೇಶ ಮಾಡಿ ಮನೆಯ ಬೆಡ್ ರೂಮ್ನಲ್ಲಿದ್ದ ಅಲಮಾರವನ್ನು ತೆರೆದು ಅದರ ಸೇಫ್ ಲಾಕರ್ನ್ನು ಮೀಟಿ ತೆರೆದು ಅದರಲ್ಲಿದ್ದ 1] ಎರಡು ಜೋತೆ ಕಿವಿ ರಿಂಗ್ ಅಂದಾಜು ತೂಕ 8 ಗ್ರಾಂ ಅಂ.ಕಿ.ರೂ: 17,600=00 ಮತ್ತು ನಗದು ಹಣ ರೂ 6000 ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 23,600=00 ಬೆಲೆ ಬಾಳುವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

  


 
Will Smith Visitors
Since 01/02/2008