Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, October 19, 2016

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 78(3) Karnataka Police Act.
ದಿನಾಂಕ 18-10-2016 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಆದಾಪೂರ ಗ್ರಾಮದ ಶ್ರೀ ಹುಲಿಗೆಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಓ.ಸಿ.ಮಟಕಾ ನಡೆಸಿದ್ದಾರೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಇಂದು ದಿನಾಂಕ 18-10-2016 ರಂದು ಸಂಜೆ 7-30 ಗಂಟೆಗೆ ಆದಾಪೂರ ಗ್ರಾಮದ ಶ್ರೀ ಹುಲಿಗೆಮ್ಮ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅವರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ಎಂಬ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಾ ಮೋಸ ಮಾಡುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ಒಮ್ಮೆಲೆ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 2650=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡೆನು. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 244/2016 ಕಲಂ: 279, 338 ಐ.ಪಿ.ಸಿ:.

 ದಿನಾಂಕ:-18-10-2016 ರಂದು ರಾತ್ರಿ 8-25  ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಶ್ರೀ ಮಾರುತಿ ತಂದಿ ಲಕ್ಷಮಣ ಹುರಕಡ್ಲಿ  ವಯಾ- 23 ವರ್ಷ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,ನಾನು  ಜಿ.ಕೆ.ಸಿ. ಕನ್ಸಟ್ರಕ್ಸನ್ನಿಗೆ ಸಂಭಂದಿಸಿದಂತೆ  ಗಂಗಾವತಿ- ಸಿಂಧನೂರ  ಟೋಲ್ ಪ್ರವೇಟ ಲಿಮಿಟೆಡ್ಡಿಗೆ  ಸಂಬಂದಿಸಿದ ರಸ್ತೆಯಲ್ಲಿ  ವಾಹನ ಚಾಲಕುರಗಳಿಗೆ  ಯಾವುದೇ ರೀತಿಯ  ತೊಂದರೆಯಾಗಬಾರದೆಂಬ ಉದ್ದೇಶದಿಂದ  ನಮ್ಮ ಕಂಪನಿಯ ವತಿಯಿಂದ ಲೇಬರುಗಳನ್ನು ಕರೆದುಕೊಂಡು ರಸ್ತೆಯ ಮೇಲೆ  ಯಾವುದೇ ಕಸ ಕಡ್ಡಿ ಮಣ್ಣು ಬಿಳ್ಳದಂತೆ ಸ್ವಚ್ಚಗೊಳಿಸುವ ಸಲುವಾಗಿ ನಮ್ಮೂರಿನ  ಹನಮಮ್ಮ @ ಲಕ್ಷ್ಮಮ್ಮ ಗಂಡ ಮಹೇಶಪ್ಪ ಬೋವಿ  ವಯಾ- 33 ವರ್ಷ  ಸಾ- ಚಿಕ್ಕಬೆಣಕಲ್ಲ ಹಾಗೂ ಇತರೆ ಲೇಬರುಗಳೊಂದಿಗೆ ಕಾರಟಗಿಗೆ ಬಂದು ಇಂದು ದಿನಾಂಕ : 18-10-2016 ರಂದು ಮದ್ಯಾಹ್ನ 13-10 ಗಂಟೆಯ ಸುಮಾರಿಗೆ ಕಾರಟಗಿಯಲ್ಲಿ  ಗಂಗಾವತಿ – ಸಿಂಧನೂರ  ಹೈವೆ ರಸ್ತೆಯ ಪಕ್ಕದಲ್ಲಿ ಸ್ವಾಮಿ  ಝರಾಕ್ಸ ಅಂಗಡಿಯ ಮುಂದೆ ರಸ್ತೆಯ ಬಲಬದಿಯಲ್ಲಿ ಕೆಲಸ ಮಾಡುತ್ತಿದ್ದ   ಹನಮಮ್ಮ @ ಲಕ್ಷ್ಮಮ್ಮ  ಇಕೆಯನ್ನು ಗಮನಿಸದೆ ಗಂಗಾವತಿ ಕಡೆಯಿಂದ ಬಂದ ಒಬ್ಬ ಕಾರ್ ಚಾಲಕ ತನ್ನ ಕಾರನ್ನು  ಅತೀ ವೇಗವಾಗಿ, ಅಜಾಗರೂಕತೆಯಿಂದ ಓಡಿಸಿಕೊಂಡು ನಡೆಸಿಕೊಂಡು ಬಂದುಒಮ್ಮೆಲೆ ಟರ್ನ ಮಾಡಲು ಹೊಗಿ ಹನಮಮ್ಮ ಈಕೆಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಹನಮಮ್ಮ ಈಕೆಗೆ ಎಡಗಾಲು ಚಪ್ಪೆಗೆ ಹಾಗೂ ಬಲಮೊಣಕಾಲು ಹಾಗೂ ಕುತ್ತಿಗೆಯ ಎಡಬಾಗದಲ್ಲಿ  ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.

Tuesday, October 18, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 296/2016 ಕಲಂ: 87 Karnataka Police Act.
ದಿನಾಂಕ:- 17-10-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜೂರಿ ಕ್ಯಾಂಪ್ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಮತ್ತು  ಸಿಬ್ಬಂದಿಯವರಾದ ಸಿಪಿಸಿ- 363, 131, 323, ಎ.ಪಿ.ಸಿ. 77 ಇವರನ್ನು ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 31,600-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 97/2016 ಕಲಂ: 78(3) Karnataka Police Act.
ದಿನಾಂಕ: 17-10-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಆರೋಪಿ ಚೇನ್ನವೀರಯ್ಯ ಈತನು ಮೈನಳ್ಳಿ ಗ್ರಾಮದ ಶ್ರೀ ಬುಡ್ಡಮ್ಮ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಶ್ರೀ. ಶಂಕರಯ್ಯ ಪಿ.ಎಸ್.ಐ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 1050=00 ರೂ.ಗಳನ್ನು ಜಪ್ತ ಮಾಡಿಕೊಂಡು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 212/2016 ಕಲಂ: 279, 337, 338 ಐ.ಪಿ.ಸಿ:.

ದಿ:17-10-16 ರಂದು ರಾತ್ರಿ 9-45 ಗಂಟೆ ಸುಮಾರಿಗೆ ರಂಗನಾಥ ತಂದೆ ದ್ರುವಕುಮಾರ. ಸಾ:ಲಕ್ಷ್ಮೀಪೂರ. ತಾ:ಕೆ.ಆರ್.ಪೇಟೆ ಫಿರ್ಯಾದಿದಾರರು ತನ್ನ ಸಹೋದ್ಯೋಗಿ ಲಾರಿ ಚಾಲಕ ಜೈಕುಮಾರ ಇಬ್ಬರೂ ಕೂಡಿ ಗಿಣಿಗೇರಿ ಗ್ರಾಮದಲ್ಲಿ ಊಟ ಮಾಡಿ ವಾಪಾಸ್ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ ಯಲ್ಲಿ ಪಾರ್ಕಿಂಗ್ ಮಾಡಿದ್ದ ತಮ್ಮ ಲಾರಿಯ ಹತ್ತಿರ ಹೋಗಲು ಅಂತಾ ಕೊಪ್ಪಳ-ಗಂಗಾವತಿ ರಸ್ತೆಯ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿಯ ಗೆಸ್ಟ್ ಹೌಸ ಸಮೀಪದಲ್ಲಿ ರಸ್ತೆಯ ಎಡಬಾಜು ನಡೆದುಕೊಂಡು ಹೊರಟಿದ್ದಾಗ ಅದೇವೇಳೆಗೆ ತಮ್ಮ ಹಿಂದಿನಿಂದ ಅಂದರೆ ಗಿಣಿಗೇರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-37/ಎಸ್-0847 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ನಡೆದುಕೊಂಡು ಹೊರಟಿದ್ದ ಫಿರ್ಯಾದಿಗೆ ಹಿಂದಿನಿಂದ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಫಿರ್ಯಾದಿಗೆ ಮತ್ತು ಮೋಟಾರ ಸೈಕಲ್ ಸವಾರನಿಗೆ ಭಾರಿ ರಕ್ತಗಾಯಗಳಾಗಿದ್ದು ಅಲ್ಲದೇ ಮೋಟಾರ ಸೈಕಲ್ ಹಿಂದೆ ಕುಳಿತುಕೊಂಡು ಬಂದಿದ್ದ ಚೆನ್ನಬಸಪ್ಪ ದೊಡ್ಡಮನಿ ಎಂಬುವವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Monday, October 17, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 295/2016 ಕಲಂ: 87 Karnataka Police Act.
ದಿನಾಂಕ:- 16-10-2016 ರಂದು ಸಂಜೆ  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮುಷ್ಟೂರು ಡಗ್ಗಿ ಗ್ರಾಮದ ಮಾರೆಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ ಮತ್ತು  ಸಿಬ್ಬಂದಿಯವರಾದ ಸಿಪಿಸಿ- 429, 120, 358, 363, 43, 323, 386, 180 ಎ.ಪಿ.ಸಿ. 77 ಇವರನ್ನು ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಮಾರೆಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 3,150-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 171/2016 ಕಲಂ: 87 Karnataka Police Act.
ದಿನಾಂಕ: 16-10-2016 ರಂದು ಸಂಜೆ 5-00 ಗಂಟೆಯ ಸುಮಾರಿಗೆ ನಗರ ಹುಲಿಕೇರಿ ರಸ್ತೆಯ ವೀರಭದ್ರೇಶ್ವರ ಗುಡಿ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  11 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಪರಾರಿಯಾಗಿದ್ದು, ಉಳಿದ 10 ಜನರು ಸಿಕ್ಕಿದ್ದು,  ಸಿಕ್ಕ ಆರೋಪಿತರಿಂದ  9100=00 ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಮತ್ತು ಒಂದು ಹಾಳಿ ಚೀಲವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಅದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 16-10-2016 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಅನ್ವರ ಚಿನ್ನೂರ ಸಾ: ಗಜೇಂದ್ರಗಡ ರವರು ತನ್ನ ಮೋಟಾರ ಸೈಕಲ್ ನಂ: ಕೆ.ಎ-26 ಎಸ್-7215 ನೇದ್ದರ ಮೇಲೆ ಮುದಗಲ್ಲಿದ ಇಲಕಲ್ ಮಾರ್ಗಾವಗಿ ಹನಮಸಾಗರಕ್ಕೆ ಬಂದು ಹನಮಸಾಗರದಿಂದ ಗಜೇಂದ್ರಗಡಕ್ಕೆ ಯಲಬುಣಚಿ ಕ್ರಾಸ್ ಇನ್ನು ಅರ್ದ ಕಿ.ಮಿ. ಇರುವಾಗ ಗಜೇಂದ್ರಗಡ ಕಡೆಯಿಂದ ಮೋಟಾರ ಸೈಕಲ್ ನಂ: ಕೆ.ಎ-37 ಯು-7122 ನೇದ್ದರ ತನ್ನ ಹಿಂದೆ ಇಬ್ಬರನ್ನು ಕೂಡಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೊರಟ ಫಿರ್ಯಾದಿಗೆ ಹಾಯಿಸಿ ಅಪಘಾತಪಡಿಸಿದ್ದು ಅಪಗಾತದಲ್ಲಿ ಫಿರ್ಯಾದಿಯ ಬಲಗಾಲ ಪಾದದ ಮೇಲೆ ಹಾಗೂ ಮಂಡಿಯ ಕೆಳಗೆ, ಹಾಗೂ ಎಡಗಾಲ ಮುಂಗಾಲ ಪಾದದ ಹತ್ತಿರ ರಕ್ತಗಾಯಗಳಾಗಿದ್ದು ಇರುತ್ತದೆ.  ಅಪಘಾತ ಪಡಿಸಿದ ಮೋಟಾರ ಸೈಕಲ ಸವಾರನಾದ ಸಂಗಪ್ಪ ತಂದೆ ಹನಮಪ್ಪ ಮುರಡಿ ಸಾ: ಬೆನಕನಾಳ. ಆತನಿಗೆ ಕಾಲಿಗೆ, ತಲೆಗೆ, ಸೊಂಟ, ಕಪಾಳಕ್ಕೆ ಬಾರಿ ರಕ್ತಗಾಯಗಳಾಗಿದ್ದು. ಆತನ ಹಿಂದೆ ಕುಳಿತ ಶಿವಪ್ಪ ತಂದೆ ಬುಡ್ಡಪ್ಪ ಹಿರೇಮನಿ ಸಾ: ಬೆನಕನಾಳ ಈತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇರುತ್ತದೆ. ಇನ್ನೊಬ್ಬರಾದ ಸುರೇಶ ತಂದೆ ಯಮನಪ್ಪ ಪೂಜಾರ  ಸಾ: ಬೆನಕನಾಳ ಈತನಿಗೆ ಬಲಗಾಲು, ಎಡಗೈ, ಹಾಗೂ ತಲೆಗೆ ಬಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Sunday, October 16, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 239/2016 ಕಲಂ: 78(3) Karnataka Police Act.
ದಿನಾಂಕಃ-15-10-2016 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಕಾರಟಗಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ್ಗೆ ಖಚಿತ ಮಾಹಿತಿ ಬಂದಿದ್ದೇನೆಂದರೆ,  ಕಾರಟಗಿಯ ಎ.ಪಿ.ಎಮ್.ಸಿ. ಹತ್ತಿರ  ಮಟ್ಕಾ ಜೂಜಾಟ ನಡೆಸುತ್ತಿದ್ದಾರೆ ಅಂತಾ ಬಾತ್ಮೀ ಬಂದ ಮೇರೆಗೆ ನಮ್ಮ ಸಿಬ್ಬಂದಿಯವರಾದ ಪಿ.ಸಿ- 422,  ಮಲ್ಲಪ್ಪ ಎ.ಎಸ್.ಐ. ರವರನ್ನು ಒಂದು ಖಾಸಗಿ  ವಾಹನದಲ್ಲಿ ಕರೆದುಕೊಂಡು ಎ.ಪಿ.ಎಮ್. ಸಿ. ಹತ್ತಿರ ಹತ್ತಿರ ಹೋಗಿ ಸ್ವಲ್ಪು ದೂರದಲ್ಲಿ  ನಮ್ಮ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಪಂಚರು ನಾವು ಹೋಗಿ ಮರೆಯಲ್ಲಿ ನಿಂತು ನೊಡಲು ಒಬ್ಬನು ಕಾರಟಗಿಯ  ಹೊಟೇಲ್ ಮುಂದೆ ರೋಡಿನಲ್ಲಿ ಸಾರ್ವಜನಿಕ ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ಕೂಗಿ ಮಟ್ಕಾ ನಂಬರುಗಳನ್ನು ಬರೆಸುವವರು ಬರೆಸಿರಿ ನಿಮ್ಮ ಲಕ್ಕಿ ನಂಬರ್ ಬಂದರೆ 1-00 ರೂಪಾಯಿಗೆ 80=00 ರೂಪಾಯಿ ಕೊಡುತ್ತೇವೆ ಅಂತಾ ಕೂಗಿ ಕರೆಯುತ್ತಾ ಇದ್ದು, ಇನ್ನೊಬ್ಬನು  ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ  ಸಾರ್ವಜನಿಕರಿಂದ ಹಣ ಪಡೆದು ಯಾವುದೇ ಜವಾಬು ಕೊಡದೆ ಮಟ್ಕಾ ನಂಬರುಗಳ ಪಟ್ಟಿಯನ್ನು ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು ಒಮ್ಮೆಲೆ ದಾಳಿ ಮಾಡಲು ಸಾರ್ವಜನಿಕರು ಓಡಿ ಹೊಗಿದ್ದು,  ಕೂಗಿ ಕರೆಯುತ್ತಿದ್ದವ ಮತ್ತು ಮಟ್ಕಾ ಪಟ್ಟಿಬರೆದುಕೊಳ್ಳುವವ ಸಿಕ್ಕಿಬಿದ್ದಿದ್ದು,ಪಿ.ಎಸ್.ಐ. ರವರು  ವಿಚಾರಿಸಲು  ತನ್ನ ಹೆಸರು ವೆಂಕಟೇಶ್ವರರಾವ್ ತಂದಿ ಶಿವಶಂಕರ ಗಿರಿಶಾಲ ವಯಾ- 43 ವರ್ಷ ಜಾ- ಕಾಪು  ಉ- ಹೊಟೇಲ್ ಕೆಲಸ ಸಾ-  ಪನ್ನಾಪೂರ ಕ್ರಾಸ್ ಹತ್ತಿರ ಕಾರಟಗಿ ಅಂತಾ ತಿಳಿಸಿದ್ದು ಇವನ ಅಂಗ ಜಪ್ತಿ ಮಾಡಲು ಇತನ ಹತ್ತಿರ ಸಾರ್ವಜನಿಕರಿಂದ ಪಡೆದುಕೊಂಡಿದ್ದ ನಗದು ಹಣ ರೂ.550=00/- ಗಳು ಮತ್ತು ಒಂದು ಮಟ್ಕಾ ಪಟ್ಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿರುತ್ತವೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 240/2016 ಕಲಂ: 87 Karnataka Police Act.
ದಿನಾಂಕ:-15-10-2016 ರಂದು ರಾತ್ರಿ 7-10 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ವರದಿಯನ್ನು ಹಾಜರುಪಡಿಸಿದ್ದ ಸದ್ರಿ ವರದಿಯ ಸಾರಾಂಶದಲ್ಲಿ ದಿನಾಂಕ:-15-10-2016 ರಂದು ಸಾಯಂಕಾಲ 5-45 ಗಂಟೆಗೆ ಕಾರಟಗಿಯ ಅಮೃತ ಲಾಡ್ಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಕಲ್ಲಪ್ಪ ತಂದೆ ನಾಗಪ್ಪ ಕೊರವರ ವಯ 25 ವರ್ಷ ಜಾತಿ ಕೊರವರ ವಯ 25 ವರ್ಷ ಜಾತಿ ಕೋರವರ ಉ. ಕೂಲಿಕೆಲಸ ಸಾ. 7 ನೇ ವಾರ್ಡ ಹಳೇ ಸಂತೆ ಮಾರ್ಕೆಟ್ ಕಾರಟಗಿ ಮತ್ತು ಇತರೆ 08 ಜನರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 09 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ ಮತ್ತು ಖಣದಲ್ಲಿ ಸೇರಿ ಒಟ್ಟು ನಗದು ಹಣ ರೂ. 8385=00 ಗಳನ್ನು ಮತ್ತು ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:15-10-2016 ರಂದು 9-30 ಪಿಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಆರೋಪಿತನು ಇಂದು ಮುಂಜಾನೆ 10.30 ಗಂಟೆ ಸುಮಾರಿಗೆ ಪಿರ್ಯಾದಿದಾರನ ಮನೆ ಮುಂದೆ ಬಂದು ಫಿರ್ಯಾದಿಗೆ “ನಿಮ್ಮ ಕೈಯಲ್ಲಿ ಒಂದು ಸಾವಿರ ರೂಪಾಯಿ ಕೂಲಿ ಹಣ ಕೊಡಲು ಆಗೋದಿಲ್ಲ ಅಂದ್ರೆ ಯಾಕೆ ದುಡಿಸಿಕೊಳ್ಳಬೇಕು ಸೂಳೆ ಮಕ್ಕಳೆ ‘’ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿದಾಗ ಫಿರ್ಯಾದಿಯ ಅಣ್ಣ ಬಿಡಿಸಲು ಅಡ್ಡ ಬಂದಾಗ ಆತನಿಗೆ ಆರೋಪಿತನು ಕಲ್ಲಿನಿಂದ ಹೊಡೆದಿದ್ದು, ಆರೋಪಿ ದೇವವ್ವಳು ಫಿರ್ಯಾದಿಗೆ ಗಟ್ಟಿಯಾಗಿ ಹಿಡಿದು ನಿಲ್ಲಿಸಿ ಬಾಯಿಂದ ಎದೆಗೆ ಕಚ್ಚಿದ್ದು, ನಂತರ ಇಬ್ಬರೂ ಆರೋಪಿತರು ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
4] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 93/2016 ಕಲಂ: 323, 324, 504, 506 ಸಹಿತ 34 ಐ.ಪಿ.ಸಿ.

ದಿನಾಂಕ: 12-10-2016 ರಂದು ರಾತ್ರಿ 08-30 ಗಂಟೆಯ ಸುಮಾರಿಗೆ ತಮ್ಮೂರ ಮದ್ನಾಳ ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಹೆಜ್ಜೆ ಆಡುವಾಗ ಆರೋಪಿ ಮೈಲಾರಪ್ಪನಿಗೆ ಕೈ ತಾಗಿದ್ದಕ್ಕೆ ಸಿಟ್ಟಿಗೆ ಬಂದು ಯಾಕಲೇ ಮಗನ ಸೊಕ್ಕು ಬಂದೈತನಲೇ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದಾಡ ಹತ್ತಿದಾಗ, ರಾಘವೇಂದ್ರಗೌಡ ಈತನು ಯಾಕ ಬೈತಿ ಅಂತಾ ಕೇಳಲು ಅದನ್ನೇನ್ ಕೇಳತಿಲೇ ಮಗನ ರಾಘ ಅಂತಾ ಅಲ್ಲೆ ಇದ್ದ ಪ್ರದಾನಪ್ಪ ತಂದೆ ಶಿವಲಿಂಗಪ್ಪ ಹರಿಜನ ಈತನು ರಾಘವೇಂದ್ರಗೌಡ ಕೈಯಿಂದ ಹೊಡೆಬಡೆ ಮಾಡಿದನು, ಆಗ ಮಹಾಂತೇಶಗೌಡನು ಬಿಡಿಸಲು ಹೋದಾಗ ಮೈಲಾರಪ್ಪನು ಅಲ್ಲೆ ಇದ್ದ ಕಟ್ಟಿಗೆ ಬಡಿಗೆಯಿಂದ ಮಹಾಂತೇಶಗೌಡನಿಗೆ ತಲೆಗೆ ಹೊಡೆದು ರಕ್ತ ಗಾಯ ಮಾಡಿದನು. ಪ್ರದಾನೆಪ್ಪನು ರಾಘವೇಂದ್ರಗೌಡ ಕಾಲಿನಿಂದ ಒದ್ದು, ಕೈಯಿಂದ ಹೊಡೆಬಡೆ ಮಾಡಿದಾಗ, ಎಡಗಾಲ ಹಿಂಬಡದ ಹತ್ತಿರ ಒಳಪೆಟ್ಟಾಗಿದ್ದು, ಆಗ ಮಹಾಂತೇಶಗೌಡನಿಗೆ ಪ್ರದಾನೆಪ್ಪ ಕೈಯಿಂದ ಹೊಡೆಬಡೆ ಮಾಡಿದಾಗ ಎದೆಗೆ, ಎಡಗೈ ರಟ್ಟೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇರುತ್ತವೆ. ಆಗ ಅಲ್ಲೆ ಇದ್ದ ಫಿರ್ಯಾದಿ ಮತ್ತು ಬಸಪ್ಪ ತಂದೆ ಅಯ್ಯಪ್ಪ ಮಾಶೆಟ್ಟಿ, ಹನಮಂತಪ್ಪ ತಂದೆ ಮುತ್ತಪ್ಪ ಮೇಟಿ ರವರು ಜಗಳ ಬಿಡಿಸಿ ಕಳುಹಿಸಿದಾಗ ಮಕ್ಕಳ ಇವತ್ತು ಉಳಕಂಡ್ರಿ ಇನ್ನೊಂದು ಸಿಕ್ಕಾಗ ನಿಮ್ಮನ್ನ ಜೀವ ಸಹಿತ ಬಿಡಂಗಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನಂತರ ಗಾಯಾಳುಗಳನ್ನು ಉಪಚಾರ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಪಡಿಸಿ ಹೆಚ್ಚಿನ ಉಪಚಾರ ಕುರಿತು ಬಾಗಲಕೋಟ ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಸದರಿಯವರು ಪುನಃ ನಮ್ಮ ಜೊತೆ ಜಗಳ ಮಾಡಬಹುದು ಅಂತಾ ತಿಳಿದು ಇಂದು ತಡವಾಗಿ ಠಾಣೆಗೆ ಬಂದು ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

Friday, October 14, 2016

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 92/2016 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ: 13-10-2016 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಕಡೂರ ಸೀಮಾದಲ್ಲಿಯ ಶಶಿಕಿರಣ ಕ್ವಾರಿಯಲ್ಲಿ ರವಿ ಬಿಸಲದಿನ್ನಿ ಸಾ: ಕಲ್ಲಗೋನಾಳ ಈತನು ಟ್ರ್ಯಾಕ್ಟರ್ ನಂ: ಕೆ.ಎ-29/3857 ನೇದ್ದರ ಚಾಲಕನು ಕ್ವಾರಿಯಲ್ಲಿಯ ತೆಗ್ಗಿನಲ್ಲಿಂದ ಟ್ರ್ಯಾಕ್ಟರನನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಮೇಲೆ ಹೋಗುವಾಗ ಟ್ರ್ಯಾಕ್ಟರ್ ಹತೋಟಿ ತಪ್ಪಿ ಹಿಂದಕ್ಕೆ ಬರುವಾಗ ಚಾಲಕ ರವಿ ಭಯಪಟ್ಟು  ಹಿಂದಕ್ಕೆ ಜಿಗಿದಾಗ ಟ್ರ್ಯಾಕ್ಟರ್ ಆತನ ತಲೆಯ ಮೇಲೆ ಹಾಯ್ದು ಅಪಘಾತವಾಗಿದ್ದು, ರವಿ ಈತನಿಗೆ ತಲೆಗೆ ಒಳಪೆಟ್ಟಾಗಿ ಬಾವು ಬಂದು ಕಿವಿ ಹಾಗೂ ಮೂಗಲ್ಲಿ ಮತ್ತು ಎಡಗೈ ಹಾಗೂ ಮುಖಕ್ಕೆ ರಕ್ತಗಾಯವಾಗಿ ಉಪಚಾರ ಕುರಿತು ಇಲಕಲ್ ಜೆ.ಬಿ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಧ್ಯಾಹ್ನ 12-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 105/2016 ಕಲಂ: 323, 324, 355, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ 13-10-2016 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಪಿರ್ಯಾದಿಯು ಹಾಗೂ ಆತನ ತಮ್ಮ ಮಾಟರಂಗಿ ಸೀಮಾದಲ್ಲಿಯ ತಮ್ಮ ಹೊಲದಲ್ಲಿ ಕೆಲಸ ಮಾಡಿಕೊಂಡಿರುವಾಗ ಪಿರ್ಯಾದಿದಾರನ ತಮ್ಮನ ಮಗನಾದ ರಾಘವೆಂದ್ರನು ತಮಗೆ ಆರೋಪಿ ನಂ 01 ಈತನಿಂದ ಬರಬೇಕಾದ 3000/- ರೂ. ಹಣವನ್ನು ಕೇಳುವ ಕುರಿತು ಮೋ.ಸೈ ನಂ ಕೆ.ಎ-37/ಯು-0699 ನೇದ್ದರಲ್ಲಿ ಆರೋಪಿ ನಂ 01 ನೇದ್ದವನ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬಂದಾಗ ಆರೋಪಿತರೆಲ್ಲರೂ ರಾಘವೆಂದ್ರನನ್ನು ತಡೆದು ನಿಲ್ಲಿಸಿ ನಿಮ್ಮ ತಂದೆ ಹೋಲದಲ್ಲಿ ರೂಟರ್ ಹೊಡೆದು ಹಾಳು ಮಾಡಿರುತ್ತಾನೆ. ನೀನು ಈಗ ನಮಗೆ ಹಣ ಕೇಳಲು ಬಂದಿಯಾ ಸೂಳೆ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ ಯಾಕೆ ಬೈದಾಡುತ್ತೀರಿ ಅಂತಾ ಕೇಳಲು ಹೋದ ಪಿರ್ಯಾದಿ ಹಾಗೂ ಆತನ ತಮ್ಮನಿಗೆ ಈ ಸೂಳೆ ಮಕ್ಕಳ ಸೋಕ್ಕು ಜಾಸ್ತಿ ಆಗೈತಿ, ಅಂತಾ ಅನ್ನುತ್ತಾ ಆರೋಪಿ ನಂ 02 ಇವನು ಪಿರ್ಯಾದಿಯ ತಲೆಯ ಮುಂಬಾಗಕ್ಕೆ ಕಟ್ಟಿಗೆ ಬಡಿಗೆಯಿಂದ ಹೋಡೆದು ರಕ್ತ ಗಾಯ ಮಾಡಿದ್ದು ಅದೆ. ಹಾಗೂ ಆರೋಪಿ ನಂ 01 ನೇದ್ದವನು ಅಲ್ಲೆ ಬಿದ್ದಿದ್ದ ಇನ್ನೊಂದು ಕಟ್ಟಿಗೆ ಬಡಿಗೆಯಿಂದ ಪಿರ್ಯಾದಿಯ ತಮ್ಮನಾದ ರಮೇಶನ ತಲೆಗೆ ಹೊಡೆದು ರಕ್ತಗಾಯ ಮಾಡಿ ಕೈಯಿಂದ ಅವನ ಎದೆಗೆ ಬೆನ್ನಿಗೆ ಹೊಡೆದಿದ್ದು, ಹಾಗೂ ಆರೋಪಿ ನಂ 04 ಈಕೆಯು ರಮೇಶನ ಮೊಣಕಾಲಿಗೆ ಹಾಗೂ ಬೆನ್ನಿಗೆ ಕಟ್ಟಿಗೆ ಬಡಿಗೆಯಿಂದ ಬಡಿದು ಒಳಪೆಟ್ಟು ಮಾಡಿದ್ದು, ಹಾಗೂ ಆರೋಪಿ ನಂ 03 ನೇದ್ದವನು ನನ್ನ ಪಿರ್ಯಾದಿದಾರನ ತಮ್ಮನ ಮಗನಾದ ರಾಘವೆಂದ್ರನ ಹೊಟ್ಟೆಗೆ ಕೈಮುಷ್ಟಿ ಮಾಡಿ ಗುದ್ದಿ ಅಲ್ಲೇ ಬಿದ್ದಿದ್ದ ಒಂದು ಕಟ್ಟಿಗೆ ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ನಿಮ್ಮನ್ನು ಇಷ್ಟಕ್ಕೆ ಬಿಡುವದಿಲ್ಲ ನಿಮ್ಮ ಜೀವ ತೆಗೆಯುತ್ತೇವೆ ಅಂತಾ ಎಲ್ಲರೂ ಜೀವದ ಭಯವನ್ನು ಹಾಕಿರುತ್ತಾರೆ.   ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ. 
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 106/2016 ಕಲಂ: 323, 324, 355, 504, 506 ಸಹಿತ 34 ಐ.ಪಿ.ಸಿ:.

ದಿನಾಂಕ 13-10-2016 ರಂದು  ಪಿರ್ಯಾದಿದಾರನು ತನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ತನ್ನ ಮನೆಯಲ್ಲಿ  ಇರುವಾಗ ಆರೋಪಿ ನಂ 01 ನೇದ್ದವನು  ಮೋ.ಸೈ ನಂ ಕೆ.ಎ-37/ಯು-0699 ನೇದ್ದರಲ್ಲಿ  ಪಿರ್ಯಾದಿಯ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ನಿಂತು ನಾವು ನಮ್ಮ ಹೋಲದಲ್ಲಿ ಏನು ಬೇಕಾದರೂ ಮಾಡ್ಕೋತಿವಿ ಅದನ್ನ ಎನು ಕೇಳ್ತಿರೋ ಸೂಳೇ ಮಕ್ಕಳ ಅಂತಾ ಬೈಯುತ್ತಿದ್ದು, ಆಗ ಪಿರ್ಯಾದಿ ಹಾಗೂ ಆತನ ಕುಟುಂಬವರು ಮನೆಯಿಂದ ಹೊರಬಂದು ಯಾಕೆ ಬೈದಾಡುತ್ತಿ ಅಂತಾ ಕೇಳಿದ್ದಕ್ಕೆ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಇರುವಾಗ ಅಲ್ಲಿಗೆ ಉಳಿದ ಆರೋಪಿತರು ಬಂದು ನಮ್ಮ ಹೊಲದ ಉಸಾಬರಿ ನಿಮಗ್ಯಾಕೆ ನೀವು ಜೀವಸಹಿತ ಇರಬೇಕಾದರೇ ನಮ್ಮ ತಂಟೆಗೆ ಬರಬೇಡಿ ಸುಳೆಮಕ್ಕಳಾ ನಮ್ಮ ತಂಟೆಗೆ ಬಂದರೇ ನಿಮ್ಮ ಜೀವಾ ತಗಿತೀವಿ ಅಂತಾ ಹೇಳುತ್ತಾ ಒಮ್ಮೆಲೆ ಆರೋಪಿ ನಂ 02 ಇವನು ಅಲ್ಲಿಯೆ ಬಿದ್ದಿದ್ದ ಬಡಿಗೆಯಿಂದ ಪಿರ್ಯಾದಿ ತೆಲೆಯ ಮೇಲೆ ಬೆನ್ನಿಗೆ, ಕೈಗೆ ಬಡಿದಿದ್ದರಿಂದ ತಲೆಗೆ ರಕ್ತಗಾಯವಾಗಿ, ಬೆನ್ನಿಗೆ & ಕೈಗೆ ಒಳಪೆಟ್ಟು ಆಗಿದ್ದು, ಆರೋಪಿ ನಂ 04 ಇವಳು ತನ್ನ ಬಲಗಾಲ ಚಪ್ಪಲಿಯಿಂದ ಪಿರ್ಯಾದಿಯ ಎಡ ಕಪಾಳಕ್ಕೆ ಬಡಿದು  ಕೈಯಿಂದ ಪಿರ್ಯಾದಿಯ ಎದೆಗೆ ಬೆನ್ನಿಗೆ ಬಡಿದಿದ್ದು ಅದೆ. ಪಿರ್ಯಾದಿಯ ಮಗನಾದ ಹನುಮಂತನಿಗೆ ಆರೋಪಿ ನಂ 03 ಇವನು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದರಿಂದ ರಕ್ತಗಾಯ ಮಾಡಿ ಹನುಮಂತನ ಬೆನ್ನಿಗೆ ತನ್ನ ಬಾಯಿಯಿಂದ ಕಚ್ಚಿ ರಕ್ತ ಗಾಯಗೊಳಿದ್ದು ಅದೆ. ಪ್ರಕರಣ ಧಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   

Thursday, October 13, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 208/2016 ಕಲಂ: 341, 504, 323, 324, 354, 506 ಸಹಿತ 34 ಐ.ಪಿ.ಸಿ:.
ಟಣಕನಕಲ್ ಗ್ರಾಮದ ಮಸೀದಿ ಮುಂದೆ ಅಲಾಯಿ ದೇವರ ಕುಣಿಯ ಹತ್ತಿರ ಫಿರ್ಯಾದಿದಾರರ ಮಗ ಹನುಮಂತಪ್ಪ ಮತ್ತು ಅಳಿಯ ಗುರುರಾಜ ಇವರು ಮೊಹರಂ ಹಬ್ಬದ ಪ್ರಯುಕ್ತ ಕುಣಿಯಲ್ಲಿ ಕಟ್ಟಿಗೆ ಹಾಕಲು ಹೋದಾಗ ಕುಣಿಯ ಸುತ್ತ ಕೋಲಾಟದಲ್ಲಿದ್ದ ಆರೋಪಿ ಗವಿಸಿದ್ದಪ್ಪ ಮತ್ತು ದೇವಪ್ಪ ಇವರು ಇಬ್ಬರಿಗೆ ಕುಣಿಯ ಕಡೆಗೆ ಹೋಗದಂತೆ ತಡೆದು ನಿಲ್ಲಿಸಿ ಈ ಗಾಣಿಗ ಸೂಳೇಮಕ್ಕಳಿಗೆ ಕುಣಿಯಲ್ಲಿ ಕಟ್ಟಿಗೆ ಹಾಕಲು ಬಿಡಬಾರದು ಎಂದು ಜಗಳ ತೆಗೆದು ಜಾಲಿ ಕಟ್ಟಿಗೆಯಿಂದ ಗವಿಸಿದ್ದಪ್ಪನು ಗುರುರಾಜನಿಗೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲದೇ ಅದೇ ಕಟ್ಟಿಗೆಯಿಂದ ದೇವಪ್ಪನು ಹನುಮಂತನ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು’ ಅಲ್ಲದೇ ನೀವೆಲ್ಲೇ ಹೋದರು ನಿಮ್ಮನ್ನು ಹೊಡೆದು ಸಾಯಿಸುತ್ತೇವೆ. ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ನಂತರ ನಿನ್ನೆ ರಾತ್ರಿ 11-30 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಗಂಡ ಮತ್ತು ಮಗ ಹನುಮಂತ ಹೀಗೆ ತಮ್ಮ ಮನೆಯಲ್ಲಿ ಇದ್ದಾಗ ಆರೋಪಿ ದೇವಪ್ಪ ಮತ್ತು ಆರೋಪಿ ಶಾಂತವ್ವ ಇವರುಗಳು ಬಂದು ಫಿರ್ಯಾದಿಯ ಮನೆಯ ಬಾಗಿಲು ಹೊಡೆದಾಗ ಫಿರ್ಯಾದಿ ಮತ್ತು ಅವಳ ಗಂಡ ಉಡಚಪ್ಪ ಹೊರಗಡೆ ಬಂದಾಗ ಆರೋಪಿತರು ಅವರಿಗೆ ನಿಮ್ಮ ಮಗ ಎಲ್ಲಿದ್ದಾನೆ ಹೇಳ್ರಿ ಎಂದು ದಬ್ಬಾಡಿ ಕೇಳಿದ್ದು ಅಲ್ಲದೇ ಆರೋಪಿ ದೇವಪ್ಪನು ಫಿರ್ಯಾದಿಗೆ ಮೈ ಕೈ ಮುಟ್ಟಿ ಎಳೆದಾಡಿ ಅವಮಾನ ಮಾಡಿ ಲೇ ಭೋಸೂಡಿ ನಿನ್ನ ಮಗನಿಗೆ ಎಲ್ಲಿ ಬಚ್ಚಿಟ್ಟೀರಿ ಎಂಧು ದೌರ್ಜನ್ಯ ಮಾಡಿದ್ದು ಅಲ್ಲದೇ ಆರೋಪಿ ಶಾಂತವ್ವಳು ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಕೈಗಳಿಂದ ಹಲ್ಲೆ ಮಾಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 209/2016 ಕಲಂ: 143, 147, 148, 324, 504, 354, 506 ಸಹಿತ 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:.
ಟಣಕನಕಲ್ ಗ್ರಾಮದಲ್ಲಿ ಮಸೀದಿ ಮುಂದೆ ಅಲೆ ಹಬ್ಬದ ನಿಮಿತ್ತ ಕೊಂಡ ಮಾಡಿದ್ದು ಅದರಲ್ಲಿ ಕಟ್ಟಿಗೆಗಳನ್ನು ಹಾಕುವ ಸಮಯದಲ್ಲಿ ಆರೋಪಿ ಶರಣಪ್ಪ ಹಂದ್ರಾಳ ಹಾಗೂ ಇತರರು ಹಸಿ ಕಟ್ಟಿಗೆಗಳನ್ನು ಹಾಕುತ್ತಿದ್ದರು. ಇದನ್ನು ನೋಡಿದ ಫಿರ್ಯಾಧಿಯ ಸಂಬಂಧಿಕರಾದ ದೇವಪ್ಪ ಮತ್ತು ಗವಿಸಿದ್ದಪ್ಪ ಇವರುಗಳು ಆರೋಪಿತರಿಗೆ ಹಸಿ ಕಟ್ಟಿಗೆಗಳನ್ನು ಹಾಕಿದರೆ ಬೆಂಕಿಯು ಚೆನ್ನಾಗಿ ಹತ್ತುವುದಿಲ್ಲವೆಂದು ಹೇಳಿದ್ದಕ್ಕೆ ಆರೋಪಿತರು ಪ್ರತಿಕ್ರಿಯೆ ಕೊಡದೇ ದೇವಪ್ಪ ಮತ್ತು ಗವಿಸಿದ್ದಪ್ಪ ಇವರೊಂದಿಗೆ ಏಕಾಏಕೀ ಜಗಳ ತೆಗೆದು ಆರೋಪಿತರು ಕಟ್ಟಿಗೆ ಮತ್ತು ಕಲ್ಲಿನಿಂದ ತಲೆಗೆ, ಕೈಗೆ, ಬೆನ್ನಿಗೆ ಹೊಡಿಬಡಿ ಮಾಡಿರುತ್ತಾರೆ. ಮತ್ತು ಕೊಂಡದಲ್ಲಿ ಕಟ್ಟಿಗೆಗಳನ್ನು ತುಂಡು ಮಾಡಲು ತಂದಿದ್ದ ಕೊಡ್ಲಿಯಿಂದ ಶರಣಪ್ಪನು ದೇವಪ್ಪನಿಗೆ ಬೀಸಿದಾಗ ಕೊಡಲಿ ಏಟಿನಿಂದ ಪಾರಾಗಿರುತ್ತಾನೆ. ಆರೋಪಿತರು ಫಿರ್ಯಾದಿಗೆ ಕೈಯಿಂದ ಹೊಡೆದಿದ್ದಲ್ಲದೇ ಬ್ಯಾಡ್ರ ಸೂಳೆ ನೀನೇನು ಬಿಡಿಸಲಿಕ್ಕೆ ಬಂದೆ ಎಂಧು ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ. ಮತ್ತು ಈ ಗ್ರಾಮದಲ್ಲಿ ಹೇಗೆ ಇರುತ್ತಿರಿ ಹೇಗೆ ಜೀವನ ಮಾಡುತ್ತೀರಿ, ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈ ಗೊಂಡಿರುತ್ತಾರೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 169/2016 ಕಲಂ: 143, 147, 148, 341, 354, 504, 506 ಸಹಿತ 149 ಐ.ಪಿ.ಸಿ ಮತ್ತು 3(1)(10)(11) ಎಸ್.ಸಿ/ಎಸ್.ಟಿ. ಕಾಯ್ದೆ:.
ದಿನಾಂಕ: 12.10.2016 ರಂದು ಸಾಯಂಕಾಲ 6:30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ: 11.10.2016 ರಂದು ರಾತ್ರಿ 11:00 ಗಂಟೆಗೆ ಟಣಕನಕಲ್ ಗ್ರಾಮದಲ್ಲಿ ಆಲೆ ಹಬ್ಬದ ಕುಣಿಗೆ ಕಟ್ಟಿಗೆ ಹಾಕುವ ಸಂಭಂದ ಜಗಳವಾಗಿದ್ದು ಜಗಳದಲ್ಲಿ ಗಾಯಗೊಂಡ ತನ್ನ ಗಂಡ ಹಾಗೂ ಇತರನ್ನು ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂಭಂದ ಕೊಪ್ಪಳದ ಗಾಣಿಗೇರ ಭವನದ ಹತ್ತಿರ ಬರುತ್ತಿರುವಾಗ ಆರೋಪಿತರು ತಮ್ಮ ಕೈಯಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ವಾಹನವನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಹಿಡಿದು ಜಗ್ಗಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ಎತ್ತಿ ಬೈದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 114/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ 11-10-2016 ರಂದು ಸಾಯಂಕಾಲ :17-15  ಗಂಟೆಯ ಸುಮಾರು ತನ್ನ ಗೇಳೆಯನಾದ ರಾಘವೇಂದ್ರಸಿಂಗ್ ಗುಡಸಲಿ ಈತನ ಬೈಕ ನಂ: ಕೆ.ಎ-37 / ವಾಯ್-2945 ನೇದ್ದರ ಪಲ್ಸರ್ ಬೈಕನ ಮೇಲೆ ಹಿಂದೆ ಕುಳಿತು ಇಲಕಲ್ಲ ದರ್ಗಾಗೆ ಸಕ್ಕರೆ ಹೋಯಿಸಲು ತಾವರಗೇರಾ-ಮುದೇನೂರ ರಸ್ತೆಯ ಮೇಲೆ ಜುಮಲಾಪುರ ಸೀಮಾಂತರ ರಸ್ತೆಯ ತಿರುವಿನಲ್ಲಿ ಹೊರಟಾಗ ರಾಘವೇಂದ್ರಸಿಂಗ್ ಗುಡಸಲಿ ಈತನು ಬೈಕನ್ನು ಅತೀವೇಗ ಹಾಗೂ ಅಲಕ್ಷ್ಯತನದಿಂದ ನಡೆಯಿಸಿ ಅಫಘಾತ ಮಾಡಿ ಪಿರ್ಯಾದಿ ಮಗನಾದ ಶರಣಪ್ಪ ಗಾಂಜಿ ಈತನು ರಸ್ತೆಯ ಮೇಲೆ ಪುಟಿದು ಬಿದ್ದು ಆತನಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯಪಡಿಸಿದ್ದು ಸದರಿ  ಶರಣಪ್ಪ ಗಾಂಜಿ ಈತನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವದರಿಂದ ಸದರಿಯವನನ್ನು ಮೊದಲು ಮುದೇನೂರ ಸರಕಾರಿ ಆಸ್ಪತ್ರಗೆ ದಾಖಲು ಮಾಡಿ, ನಂತರ ಅಲ್ಲಿಂದ ಹೆಚ್ಚಿನ ಇಲಾಜಿಗೆ ಇಲಕಲ್ಲ ಮಹಾಂತೇಶ ಆಸ್ಪತ್ರೆ ದಾಖಲು ಮಾಡಿ , ನಂತರ ಇನ್ನು ಹೆಚ್ಚಿನ ಇಲಾಜಿಗೆ ಬಾಗಲಕೋಟ್ ಕೆರೂಡಿ ಆಸ್ಪತ್ರೆಗೆ ದಾಖಲು ಮಾಡಿ ತಡವಾಗಿ ಬಂದು ಪಿರ್ಯಾದಿಯನ್ನು ಸಲ್ಲಿಸಿಸರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
5] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 169/2016 ಕಲಂ: 323, 307, 504 ಐ.ಪಿ.ಸಿ:.

ದಿನಾಂಕ: 12-10-2016 ರಂದು ಸಂಜೆ 5-00 ಗಂಟೆ ಸುಮಾರಿಗೆ ಪಿರ್ಯಾದಿ ಬಸವರಾಜ ತಂದೆ ಚಂದಪ್ಪ ಮತ್ತು ಆತನ ಗೆಳೆಯನಾದ ಗೋಣೆಪ್ಪ ಇಬ್ಬರು ಆನಂದ ಪಾನ್ ಶಾಫ್ ಹತ್ತಿರ ನಿಂತುಕೊಂಡಿದ್ದಾಗ, ಅದೇ ಸಮಯಕ್ಕೆ ಆರೋಪಿ ರಾಮಪ್ಪನು ಅಲ್ಲಿಗೆ ಬಂದಿದ್ದು, ಪಿರ್ಯಾದಿ ಕೆಳಗೆ ಏನೋ ಬಿದ್ದಿದ್ದನ್ನು ತೆಗೆದುಕೊಳ್ಳಲು ಕೆಳಗೆ ಬಗ್ಗಿದಾಗ ಆರೋಪಿತನು ಪಿರ್ಯಾದಿಗೆ ಕೈಯಿಂದ ವಿನಾ: ಕಾರಣ ಹೊಡೆದಿದ್ದು, ನಂತರ ರಾತ್ರಿ 8-30 ಗಂಟೆ ಸುಮಾರಿಗೆ ಪಿರ್ಯಾದಿಯ ಮನೆ ಹತ್ತಿರ ಆರೋಪಿತನು ಪುನಃ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿದಾಗ ಪಿರ್ಯಾದಿದಾರರ ತಮ್ಮ, ತಂಗಿ, ತಂದೆ ಎಲ್ಲರೂ ಬೈದಿದ್ದರಿಂದ ಆರೋಪಿತನು ಅಲ್ಲಿಂದ ಹೋಗಿ ತಮ್ಮ ಮನೆಯಿಂದ ಕೊಡಲಿ ಹಿಡಿದುಕೊಂಡು ಬಂದವನೆ ರಾತ್ರಿ 8-45 ಗಂಟೆ ಸುಮಾರಿಗೆ ಪಿರ್ಯಾದಿದಾರನು ತಮ್ಮ ಮನೆಯ ಮುಂದೆ ಇದ್ದಾಗ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ದುಖಾಃಪಾತಗೊಳಿಸಿದ್ದಾನೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.

 
Will Smith Visitors
Since 01/02/2008