Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, December 29, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 131/2016 ಕಲಂ 78(3) Karnataka Police Act.
ದಿನಾಂಕ: 28-12-2016  ರಂದು ಮದ್ಯಾಹ್ನ 03-05 ಗಂಟೆಯ ಸುಮಾರಿಗೆ ಆರೋಪಿ ನಂ 01 ಈತನು ಕೊನಸಾಗರ ಗ್ರಾಮದಲ್ಲಿ ಬರುವ ಬಸ್ಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 520/-ರೂ. ಹಾಗೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್  ಅ.ಕಿ ಇಲ್ಲ. ಹಾಗೂ ಒಂದು ನೋಕಿಯಾ ಕಂಪನಿಯ ಮೋಬೈಲ ಅ.ಕಿ 200/- ರೂ ಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಸದರಿ ಆರೋಪಿ ನಂ. 01 ನೇದ್ದವನು ಜನರಿಂದ ಪಡೆದ ಓ.ಸಿ ಮಟ್ಕಾ ಜೂಜಾಟದ ಹಣವನ್ನು ಮತ್ತು ಮಟಕಾ ನಂಬರ ಬರೆದ ಚೀಟಿಯನ್ನು ಆರೋಪಿ ನಂ;2 ನೇದ್ದವನಿಗೆ ಖುದ್ದಾಗಿ ಗಜೇಂದ್ರಡಕ್ಕೆ ಹೋಗಿ ಕೊಡುತ್ತಿದ್ದು, ಹಾಗೂ ಆರೋಪಿ ನಂ:2 ನೇದ್ದವನ ಮೋಬೈಲ ನಂಬರ 9945109208 ನೇದ್ದಕ್ಕೆ ಫೋನ ಮಾಡಿ  ಮಟಕಾ ನಂಬರಗಳನ್ನು ಹೇಳುತ್ತಿದ್ದು, ಮಟ್ಕಾ ಜೂಜಾಟದಿಂದ ಬಂದ ಲಾಭದ ಹಣವನ್ನು ಆರೋಪಿ ನಂ 01 & 02 ನೇದ್ದವರು ಸಮನಾಗಿ ಹಂಚಿಕೊಳ್ಳುತ್ತಿದ್ದ ಬಗ್ಗೆ ತಿಳಿಸಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 132/2016 ಕಲಂ 78(3) Karnataka Police Act.
ದಿನಾಂಕ: 28-12-2016  ರಂದು ಸಂಜೆ 06-55 ಗಂಟೆಯ ಸುಮಾರಿಗೆ ಆರೋಪಿ ನಂ 01 ಈತನು ಮುಧೋಳ ಗ್ರಾಮದಲ್ಲಿ ಬರುವ ಬಸ್ಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ  ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 310/-ರೂ. ಹಾಗೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್  ಅ.ಕಿ ಇಲ್ಲ. ಹಾಗೂ ಒಂದು ಇಂಟೇಕ್ಸ ಕಂಪನಿ ಮೋಬೈಲ ಅ.ಕಿ 300/- ರೂ ಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 152/2016 ಕಲಂ: 87 Karnataka Police Act.
ದಿನಾಂಕ:28-12-2016 ರಂದು 5-45 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಬಂದು ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 6 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:28-12-2016 ರಂದು 3.00 ಪಿಎಂಕ್ಕೆ ತೊಂಡಿಹಾಳ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-20 ಪಿಎಂಕ್ಕೆ ತೊಂಡಿಹಾಳ ಗ್ರಾಮದ ಮಸೀದಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1200=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 87 Karnataka Police Act.

ದಿನಾಂಕ:28-12-2016 ರಂದು 9-15 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಬಂದು ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 10 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ:28-12-2016 ರಂದು 6.00 ಪಿಎಂಕ್ಕೆ ತೊಂಡಿಹಾಳ ಗ್ರಾಮದ ಕೆರೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 7-30 ಪಿಎಂಕ್ಕೆ ತೊಂಡಿಹಾಳ ಗ್ರಾಮದ ಕೆರೆಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 3140=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

5] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 105/2016 ಕಲಂ 78(3) Karnataka Police Act.

ದಿನಾಂಕ: 28-12-2016 ರಂದು ಪಿ.ಎಸ್.ಐ. ರವರು ರಾತ್ರಿ 9-40 ಗಂಟೆಗೆ ಠಾಣೆಗೆ ಹಾಜರಾಗಿ ಮಟಕಾ ದಾಳಿ ಪಂಚನಾಮೆ, ಮುದ್ದೆಮಾಲು, ಇಬ್ಬರು ಆರೋಪಿತರೊಂದಿಗೆ ವರದಿ ನೀಡಿದ್ದು, ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿ ಯಾದಿಯನ್ನು ಪಿ.ಸಿ-223 ರವರ ಸಂಗಡ ಮುದ್ದಾಂ ಕಳುಹಿಸಿಕೊಟ್ಟಿದ್ದು, ಸದರಿ ಪಿ.ಸಿ ರವರು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 23-05 ಗಂಟೆಗೆ ಬಂದಿದ್ದು, ಸದರಿ ವರದಿ ಸಾರಾಂಶವೇನೆಂದರೆ, ಪಿ.ಎಸ್.ಐ. ರವರು ಹೆಚ್.ಸಿ-11 ರವರೊಂದಿಗೆ ಪೆಟ್ರೋಲಿಂಗದಲ್ಲಿದ್ದಾಗ, ಹಳೇ ಬಜಾರದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರವರು ಸಿಬ್ಬಂದಿ ಹೆಚ್.ಸಿ-11, ಪಿ.ಸಿ-223 ಹಾಗೂ ಪಂಚರಾದ 1] ಚಾಂದಪಾಷಾ ತಂದೆ ಗುಡುಸಾಬ ಹುನಗುಂದ 2] ಬಸಪ್ಪ ತಂದೆ ಚಿನ್ನಪ್ಪ ಮುಳಗುಂದ ಇಬ್ಬರು ಸಾ: ಹನಮಸಾಗರ ರವರೊಂದಿಗೆ ಹಳೇ ಬಜಾರದ ವಿರೇಶ ಟೇಲರ್ ಅಂಗಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಮಟಕಾ ಬರೆಯುವವನು ಸಿಕ್ಕಿ ಬಿದ್ದಿದ್ದು ವಿಚಾರಿಸಲು ತನ್ನ ಹೆಸರು ರಫೀಕಸಾಬ ಬದಾಮಿ ಸಾ: ಹನಮಸಾಗರ ಅಂತಾ ಹೇಳಿದ್ದು, ಆತನ ಅಂಗ ಜಪ್ತಿ ಮಾಡಲಾಗಿ ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನು, ನಗದು ಹಣ 800/- ರೂ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 250/2016 ಕಲಂ 78(3) Karnataka Police Act.

ದಿ:28-12-2016 ರಂದು ಸಂಜೆ 7-00 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಬಹದ್ದೂರಬಂಡಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ನಂ: 01 ರಾಜಾಸಿಂಗ್ ಇತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇನೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಮತ್ತು ಜನರಿಂದ ಮಟಕಾ ಬರೆದ ಹಣ ಪಡೆಯುತ್ತಿದ್ದ ಆರೋಪಿ ನಂ: 02 ನಬೀಸಾಬ ಹೀಗೆ ಇವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಶ್ರೀ ಗುರುರಾಜ. ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿ ನಂ: 01 ರಾಜಾಸಿಂಗ್ ಇತನಿಂದ ನಗದು ಹಣ ರೂ 650=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.

Wednesday, December 28, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 215/2016 ಕಲಂ 287, 304(ಎ) ಐ.ಪಿ.ಸಿ:
ದಿನಾಂಕ: 27-12-2016 ರಂದು 2-00 ಪಿ.ಎಂ.ಕ್ಕೆ. ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾಧಿಯನ್ನು ಹಾಜರ್ ಪಡಿಸಿದ್ದು ಅದರ ಸಾರಾಂಶವೇನೆಂದರೆ ಪಿರ್ಯಾಧಿದಾರರ ಮಗನಾದ ಮೃತ ಹನುಮನಾಯಕ ವಯಾ 28 ವರ್ಷ ಇವನು ಹಿರೇಕಾಸನಕಂಡಿ ಸೀಮಾದಲ್ಲಿರುವ ಹೆಚ್.ಆರ್.ಜಿ.ಆಲಾಯಸ್ ಫ್ಯಾಕ್ಟರಿಯಲ್ಲಿಯ ಬಿ.ಸಿ.ಪ್ಲಾಂಟ್ ದಲ್ಲಿ  ಸಬ್ ಕಂಟ್ರಾಕ್ಟರ ಎಲ್.ವಿ.ಮುರಳೀಧರನ್ ನಿರ್ಧೇಶಕರು ಇ.ಓ.ಎಂ. ಸರ್ವೀಸ್ ಪ್ರವೇಟ್ ಲಿಮಿಟೆಡ್ ಇವರಲ್ಲಿ ಬಿ.ಎಸ್.ಪಿ.ಅಪರೇಟರ್ ಅಂತಾ ಮೂರು ವರ್ವದಿಂದ ಕೆಲಸ ಮಾಡುತ್ತಿದ್ದು ಸದರಿಯವನು ದಿನಾಂಕ 27-12-2016 ರಂದು 07-15 ಎ.ಎಂ.ಕ್ಕೆ ಸದರ ಪ್ಲಾಂಟ್ ದಲ್ಲಿರುವ ಕನ್ವರಬೆಲ್ಟ ಮಷಿನ್ ದಲ್ಲಿ  ಅಪರೇಟರ ಕೆಲಸ ಮಾಡುತ್ತಿರುವಾಗ ಆರೋಪಿತರು ಮೃತನಿಗೆ ಮಷಿನದಲ್ಲಿ ಕೆಲಸ ಮಾಡುವ ಬಗ್ಗೆ ತಿಳುವಳಿಕೆ ಮಾಹಿತಿ ನೀಡದೆ ಮತ್ತು ಅವನ ಜೀವ ರಕ್ಷಣೆಗೆ ಹೆಲ್ಮೆಟ್ ಇತರೆ ವಸ್ತು ನೀಡದೆ ನಿಷ್ಕಾಳಜಿಯಿಂದ ಕೆಲಸ ಮಾಡಿಸಿದ್ದರಿಂದ ಮೃತನು ಸದರಿ ಬೆಲ್ಟ ಮಷಿನ್ ದಲ್ಲಿ ಬಿದ್ದು ಭಾರಿ ಗಾಯಗೊಂಡು ಅಂಬುಲೆನ್ಸದಲ್ಲಿ ಚಿಕಿತ್ಸೆಗಾಗಿ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸದರಿ ಫ್ಯಾಕ್ಟರಿಯ ಅವರಣದಲ್ಲಿ ಅಂಬುಲೆನ್ಸನಲ್ಲಿ 07-30 ಎ.ಎಂ.ಕ್ಕೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 151/2016 ಕಲಂ: 279, 337, 338 ಐಪಿಸಿ
ದಿನಾಂಕ:27-12-2016 ರಂದು 7.30 ಪಿಎಂಕ್ಕೆ ಫಿರ್ಯಾದಿದಾರು ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತಾನು ಹಾಗೂ ತಮ್ಮೂರ ಜನರೊಂದಿಗೆ ಹುಲಿಗಿ ಹತ್ತಿರ ದನಕರುಗಳಿಗೆ ನೆಲ್ಲು(ಭತ್ತದ)ಹುಲ್ಲು ತರಲು ತಮ್ಮೂರ ಟ್ರ್ಯಾಕ್ಟರ್ ನಂ.ಕೆ.ಎ.26 ಟಿ.ಎ.9852 ನೇದ್ದನ್ನು ಬಾಡಿಗೆ ಮಾಡಿಕೊಂಡು ತಮ್ಮೂರಿನಿಂದ ಇಂದು ಬೆಳಿಗ್ಗೆ 6.00 ಗಂಟೆಗೆ ಹುಲಿಗಿಗೆ ಹೋಗಿ ಅಲ್ಲಿ ಭತ್ತದ ಹುಲ್ಲನ್ನು ಖರೀದಿಮಾಡಿಕೊಂಡು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಲೋಡ್ ಮಾಡಿಕೊಂಡು ಹುಲಿಗಿಯಿಂದ ಮದ್ಯಾಹ್ನ 12.00 ಗಂಟೆಗೆ ಹೊರಟು ತಳಕಲ್ ದಾಟಿ ಮದ್ಯಾಹ್ನ 2.40 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್ ಸಮೀಪ ಬನ್ನಿಕೊಪ್ಪ ಕಡೆಗೆ ಹೊರಟಾಗ ತಮ್ಮ ಟ್ರ್ಯಾಕ್ಟರ್ ಹಿಂದುಗಡೆಯಿಂದ ಲಾರಿಯನ್ನು ಅದರ ಚಾಲಕ ಅತೀವೇಗವಾಗಿ ನಡೆಸಿಕೊಂಡು ಬಂದು ತನ್ನ ವಾಹನದ ಮುಂದೆ ಹೊರಟ ಟ್ರ್ಯಾಕ್ಟರ್ ನ್ನು ಗಮನಿಸದೇ ಅಲಕ್ಷ್ಯತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಗೆ ಟಕ್ಕರುಕೊಟ್ಟು ಅಪಘಾತ ಮಾಡಿದ್ದು, ಘಟನೆಯಿಂದ ಟ್ರ್ಯಾಕ್ಟರ್ ಟ್ರ್ಯಾಲಿಯ ಹುಲ್ಲಿನ ಮೇಲಿದ್ದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 339/2016 ಕಲಂ 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ:- 27-12-2016 ರಂದು ಮಧ್ಯಾಹ್ನ ನಮ್ಮ ಹೊಲದ ಹತ್ತಿರ ಇರುವ ಮದ್ದಾನಮ್ಮ ಎಂಬುವವರ ಜಮೀನಿನಲ್ಲಿರುವ ಟ್ರಾನ್ಸಫರ್ಮರನ ಫ್ಯೂಜ್ ಹೋಗಿದ್ದರಿಂದ ನಾನು ಫ್ಯೂಜ್ ಹಾಕಲು ನಾಲಾ ರಸ್ತೆಯಲ್ಲಿ ಹೋಗುತ್ತಿರುವಾಗ ಬೆಟದಪ್ಪನ  ಮಗ ಶಿವಲಿಂಗಪ್ಪನು ಇಲ್ಲಿಂದ ಯಾಕೆ ತಿರುಗಾಡುತ್ತಿಯಾ ಅಂತಾ ನನ್ನೊಂದಿಗೆ ಜಗಳ ಮಾಡಿದನು.  ಇದರಿಂದ ನಾನು ವಾಪಸ್ ಬಂದೆನು.  ಸಂಜೆ 6:00 ಗಂಟೆಯ ಸುಮಾರಿಗೆ ನಾನು ಮನೆಯ ಹತ್ತಿರ ಇರುವಾಗ (1) ಬೆಟದಪ್ಪ ತಂದೆ  ಉಲ್ತೆಪ್ಪ ಜಲ್ಲಿ,- 55 ವರ್ಷ (2) ಶರಣಪ್ಪ ತಂದೆ ಬೆಟದಪ್ಪ ಜಲ್ಲಿ-30 ವರ್ಷ (3) ಮದ್ದಾನೆಪ್ಪ ತಂದೆ ರುದ್ರಪ್ಪ ಜಲ್ಲಿ-40 ವರ್ಷ (4) ಯಲ್ಲಮ್ಮ ಗಂಡ ಮದ್ದಾನಪ್ಪ-32 ವರ್ಷ, (5) ದೇವಮ್ಮ ಗಂಡ ಯಮನೂರಪ್ಪ-40 ವರ್ಷ (6) ಸೂರ್ಯಪ್ಪ ತಂದೆ ಕರಿಯಪ್ಪ ಜಲ್ಲಿ-25 ವರ್ಷ (7) ಕರಿಯಪ್ಪ ತಂದೆ ಚಂದ್ರಪ್ಪ ಜಲ್ಲಿ-50 ವರ್ಷ (8) ದುರಗಮ್ಮ ಗಂಡ ಶಿವಲಿಂಗಪ್ಪ-30 ವರ್ಷ (9) ಶಿವಲಿಂಗಪ್ಪ ತಂದೆ ಬೆಟದಪ್ಪ-35 ವರ್ಷ ಎಲ್ಲರೂ ಜಾತಿ: ಕುರುಬರು ಸಾ: ಮುಕ್ಕುಂಪಿ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ಬಂದು ನನಗೆ “ ಲೇ ಸೂಳೇ ಮಗನೇ ನಿನಗೆ ಎಷ್ಟು ತಿಂಡಿಲೇ, ನಮ್ಮ ಹೊಲದ ದಾರಿಯಲ್ಲಿ ತಿರುಗಾಡಬೇಡಾ ಅಂದರೆ ಅಲ್ಲಿಯೇ ತಿರುಗಾಡುತ್ತೀಯೇನಲೇ” ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಾಡಿ ನನಗೆ ಕೈಗಳಿಂದ ಹೊಡಿ-ಬಡಿ ಮಾಡಿದರು. ದೇವಮ್ಮಳು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದಿದ್ದು, ಇದರಿಂದ ಒಳಪೆಟ್ಟಾಯಿತು.  ಆಗ ಇದನ್ನು ನೋಡಿ ಬಿಡಿಸಲು ಬಂದ ನನ್ನ ತಮ್ಮನಾದ (1) ನಿಂಗಪ್ಪ ತಂದೆ ಚಂದ್ರಪ್ಪ-38 ವರ್ಷ, (2) ಶ್ರೀಮತಿ ಸುನೀತಾ ಗಂಡ ಶರಣಪ್ಪ ಜಮಾಪೂರು, ವಯಸ್ಸು 19 ವರ್ಷ,   (3) ಹನುಮಮ್ಮ ಗಂಡ ಚಂದ್ರಪ್ಪ-60 ವರ್ಷ,  (4) ಶರಣಮ್ಮ ಗಂಡ ಮರಿಯಪ್ಪ-32 ವರ್ಷ,   (5) ಗಾದೆಮ್ಮ ಗಂಡ ನಿಂಗಪ್ಪ, 35 ವರ್ಷ ಇವರುಗಳಿಗೂ ಸಹ ಎಲ್ಲರೂ ಕೂಡಿಕೊಂಡು ಕೈಗಳಿಂದ ಹಾಗೂ  ಕಟ್ಟಿಗೆಯಿಂದ ಹೊಡಿ-ಬಡಿ ಮಾಡಿ   ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಕಾರಣ  ಮೇಲ್ಕಂಡ 9 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ” ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Tuesday, December 27, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 299/2016 ಕಲಂ ಮನುಷ್ಯ ಕಾಣೆ.   
ದಿನಾಂಕ 26-12-2016 ರಂದು ರಾತ್ರಿ 2000 ಗಂಟೆಗೆ ಫಿರ್ಯಾದಿ  ಧಶರತಕುಮಾರ ತಂದೆ ಭವರಲಾಲ್ ಜೀ ವಯಸ್ಸು 34 ವರ್ಷ ಜಾ:ರಾಜ ಪುರೋಹಿತ ಉ: ವ್ಯಾಪಾರ ಸಾ: ಬಂಬು ಬಜಾರ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಅಣ್ಣನ ಮಗನಾದ ಮನೀಷ್ ಕುಮಾರ ವಯಾ 19 ವರ್ಷ ಇತನು. ದಿನಾಂಕ: 22-12-2016 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಸಿನಿಮಾವನ್ನು ನೋಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.  ಕಾರಣ ಕಾಣೆಯಾದ ಮನೀಷಕುಮಾರ ಎತ್ತರ 5-9 ಅಡಿ, ತೆಳ್ಳನೆಯ ಮೈಕಟ್ಟು, ಕೆಂಪು ಮೈಬಣ್ಣ, ಉದ್ದನೆಯ ಮುಖ ಮುಖ, ಕನ್ನಡ, , ಹಿಂದಿ, ಇಗ್ಲೀಷ ಭಾಷೆಗಳನ್ನು ಮಾತನಾಡುತ್ತಾನೆ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಇರುತ್ತದೆ, ಸದರಿಯವನಿಗೆ ಎಡ ಕುತ್ತಿಗೆಯ ಹತ್ತಿರ  ಮನೀಷ ಅಂತಾ ಅಚ್ಚೆ ಹಾಕಿಸಿಕೊಂಡಿರುತ್ತಾನೆ ಇತನನ್ನು ಪತ್ತೆ ಹಚ್ಚಿಕೊಡಬೇಕೆಂದು ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 337/2016 ಕಲಂ: 279, 338, 304(ಎ) ಐಪಿಸಿ
ದಿನಾಂಕ: 26-12-2016 ರಂದು ಬೆಳಗಿನ ಜಾವ 3:30 ಗಂಟೆಯ ಸುಮಾರಿಗೆ ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮದಿಂದ ಆರ್.ಟಿ.ಎ. ಬಗ್ಗೆ ಪೋನ್ ಮುಖಾಂತರ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಶ್ರೀ ತಾಯಪ್ಪ ತಂದೆ ದೇವಪ್ಪ ಹೂಗಾರ, ವಯಸ್ಸು: 38 ವರ್ಷ ಜಾತಿ: ಹೂಗಾರ, ಉ: ಪರ್ಟಿಲೈಸರ್ ಕೆಲಸ ಸಾ: ಮರಳಿ ತಾ: ಗಂಗಾವತಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನಿನ್ನೆ ದಿನಾಂಕ: 25-12-2016 ರಂದು ರಾತ್ರಿ 11:30 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ಫಿರ್ಯಾದಿ ಸಂಭಂದಿ ದೇವಪ್ಪ ತಂದೆ ಕಂತೆಪ್ಪ ಹೂಗಾರ ಅವರ ದೊಡ್ಡಮ್ಮಳಾದ ಶ್ರೀಮತಿ ಹನುಮಂತಮ್ಮ ಗಂಡ ಅಯ್ಯಪ್ಪ ಹೂಗಾರ 65 ವರ್ಷ ಮೂರು ಜನರು ಕೂಡಿಕೊಂಡು ತಮ್ಮ ಕಾರ್ ನಂ: ಕೆ.ಎ-28/ಎಂ-4031 ನೇದ್ದರಲ್ಲಿ ಬೆಲ್ಲದಮಡಿ ಗ್ರಾಮದಿಂದ ವಾಪಸ್ಸು ಮರಳಿ ಗ್ರಾಮಕ್ಕೆ ಸಿಂಧನೂರ - ಗಂಗಾವತಿ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಪ್ರಗತಿನಗರ ಗ್ರಾಮ ಸೀಮಾದಲ್ಲಿ ಪೆಟ್ರೊಲ್ ಬಂಕ ಹತ್ತಿರ ಕಾರ್ ನಡೆಸುತ್ತಿದ್ದ ದೇವಪ್ಪ ಈತನು ಕಾರ್ ನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ಎದುರುಗಡೆಯಿಂದ ಬರುತ್ತಿದ್ದ ವಾಹನಗಳ ಲೈಟಿನ ಬೆಳಕಿಗೆ ರಸ್ತೆ ಕಾಣದೇ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಪಕ್ಕ ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಇದರಿಂದಾಗಿ ಫಿರ್ಯಾದಿಗೆ ಹಾಗೂ ಹನುಮಂತಮ್ಮ ಮತ್ತು ಕಾರ ಚಾಲಕ ದೇವಪ್ಪನಿಗೆ ತೀವ್ರ ಸ್ವರೂಪದ ಗಾಯ ಹಾಗೂ ಒಳಪೆಟ್ಟಾಗಿದ್ದು ಚಿಕಿತ್ಸೆ ಕುರಿತು ಟೋಲ್ ಗೇಟ ಅಂಬ್ಯುಲೆನ್ಸ್ ವಾಹನದಲ್ಲಿ ಗಂಗಾವತಿಯ ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಬಂದು ದಾಖಲಾಗಿದ್ದು ಇರುತ್ತದೆ. ನಂತರ ಗಾಯಾಳು ಹನುಮಂತಮ್ಮಳು ಚಿಕಿತ್ಸೆ ಪಡೆಯುತ್ತಿರುವಾಗ ಇಂದು ದಿನಾಂಕ: 26-12-2016 ರಂದು ಬೆಳಗಿನ ಜಾವ 2:30 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ 20 (b) (II) (B)  NDPS Act 1985
ಆರೋಪಿ ದುರುಗಪ್ಪ ಹರಿಜನ ಇವನು ಮರಕಟ್ ಗ್ರಾಮದಲ್ಲಿ ತನ್ನ ಮನೆಯ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಗಿಡಗಳನ್ನು ಬೆಳಸಿದ್ದು ದಿನಾಂಕ: 25.12.2016 ರಂದು ಪಿಎಸ್ಐ ಯಲಬುರ್ಗಾ ರವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಮತ್ತು ಬೇವೂರ ಠಾಣೆಯ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಬಾತ್ಮಿ ಪ್ರಕಾರ ಮರಕಟ್ ಗ್ರಾಮದಲ್ಲಿ ಆರೋಫಿತನು ತನ್ನ ಮನೆಯ ಮುಂದೆ ಬೇಳೆಸಿದ ಗಾಂಜಾ ಗಿಡಿಗಳು ಪಂಚರ ಸಮಕ್ಷಮ ಕಿತ್ತಿದ್ದು ಅವುಗಳು ತೂಕ 2 ಕೆ.ಜಿ 10 ಗ್ರಾಂ, ಇದ್ದು  ಅ.ಕಿ. 5000/- ರೂ, ಕಿಮ್ಮತ್ತಿನ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಪಿರ್ಯಾಧಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, December 26, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 248/16 ಕಲಂ 87 Karnataka Police Act.
ದಿ :25.12.2016 ರಂದು 11-00 ಎ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀ ಹಮ್ಮಿಗೇಶ್ವರ ದೇವಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 07 ಜನರು ಸಿಕ್ಕಿಬಿದ್ದಿದ್ದು, ಸದರಿಯವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ. 1370=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 150/16 ಕಲಂ 87 Karnataka Police Act.
ದಿನಾಂಕ:25-12-2016 ರಂದು 4-30 ಪಿಎಂಕ್ಕೆ ಪಿ.ಎಸ್.. ಕುಕನೂರ ಠಾಣೆರವರು ಠಾಣೆಗೆ ಬಂದು ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು, ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ದಿನಾಂಕ:25-12-2016 ರಂದು 2.30 ಪಿಎಂಕ್ಕೆ ಬಳಗೇರಿ ಗ್ರಾಮದ ಬಳ್ಳೇಶ್ವರ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದ ನಡೆದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿ.ಪಿ.ಐ.ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-15 ಪಿಎಂಕ್ಕೆ ಬಳಗೇರಿ ಗ್ರಾಮದ ಬಳ್ಳೇಶ್ವರ ಗುಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1480=00 ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 86/16 ಕಲಂ 20(ಬಿ)(2)(ಬಿ) ಎನ.ಡಿ.ಪಿ.ಎಸ್. ಕಾಯ್ದೆ 1985.

ಆರೋಪಿ ದುರುಗಪ್ಪ ಹರಿಜನ ಇವನು ಮರಕಟ್ ಗ್ರಾಮದಲ್ಲಿ ತನ್ನ ಮನೆಯ ಮುಂದೆ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡಲು ಗಾಂಜಾ ಗಿಡಗಳನ್ನು ಬೆಳಸಿದ್ದು ದಿನಾಂಕ: 25.12.2016 ರಂದು ಪಿಎಸ್ಐ ಯಲಬುರ್ಗಾ ರವರಿಗೆ ಈ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಮತ್ತು ಬೇವೂರ ಠಾಣೆಯ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಬಾತ್ಮಿ ಪ್ರಕಾರ ಮರಕಟ್ ಗ್ರಾಮದಲ್ಲಿ ಆರೋಫಿತನು ತನ್ನ ಮನೆಯ ಮುಂದೆ ಬೇಳೆಸಿದ ಗಾಂಜಾ ಗಿಡಿಗಳು ಪಂಚರ ಸಮಕ್ಷಮ ಕಿತ್ತಿದ್ದು ಅವುಗಳು ತೂಕ 2 ಕೆ.ಜಿ 10 ಗ್ರಾಂ, ಇದ್ದು  ಅ.ಕಿ. 5000/- ರೂ, ಕಿಮ್ಮತ್ತಿನ ಗಾಂಜಾ ಗಿಡಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದು ಇರುತ್ತದೆ.  

Sunday, December 25, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 247/16 ಕಲಂ 87 Karnataka Police Act.
ದಿ :24.12.2016 ರಂದು 4.00 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಹಿರೇಸೂಳಿಕೇರಿ ಗ್ರಾಮ ಸೀಮಾದ ಗುಡ್ಡದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 07 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು  ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 04 ಜನರು ಸಿಕ್ಕಿಬಿದ್ದಿದ್ದು, 03 ಜನರು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ. 1750=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 04 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 211/16 ಕಲಂ 143, 147, 148, 456, 363, 323, 506(2), 511 ಸಹಿತ 149 ಐ.ಪಿ.ಸಿ:.
ದಿನಾಂಕ 24-12-2016 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ: 22-12-2016 ರಂದು ರಾತ್ರಿ ವೇಳೆ ಫಿರ್ಯಾದಿದಾರರು ಕಾಸನಕಂಡಿ ಗ್ರಾಮದ ಸೀಮಾದಲ್ಲಿರುವ ಶ್ರೀ ಹೆಚ್.ಆರ್.ಚೆನ್ನಕೇಶವ ಫಾರ್ಮಹೌಸದಲ್ಲಿ ಕಾವಲು ಕಾಯತ್ತಿರುವಾಗ ದಿನಾಂಕ 23/12/2016 ರಂದು ಮದ್ಯರಾತ್ರಿ    2-00 ಗಂಟೆಯಿಂದ 3-00 ಗಂಟೆಯ ಅವದಿಯಲ್ಲಿ ಸುಮಾರು 15 ರಿಂದ 20 ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಚಾಕು ಬಡಿಗೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸದರ ಫಾರ್ಮ ಹೌಸಿಗೆ ಬಂದು ಫಿರ್ಯಾದಿದಾರರಿಗೆ ಬೇರೆಕಡೆಗೆ ಗಮನ ಸೆಳೆದು ಕೆಲವರು ಫಿರ್ಯಾದಿದಾರನಿಗೆ ಹಿಂದಿನಿಂದ ಬಂದು ಹಿಡಿದು ಮಾತನಾಡದಂತೆ ಬಾಯಿ ಮುಚ್ಚಿ ಕೈಗಳನ್ನು ಹಗ್ಗದಿಂದ ಕಟ್ಟಿ ಸದರ ಫಾರ್ಮ ಹೌಸದಲ್ಲಿಯ ರೂಮಗಳಲ್ಲಿ ಹೊಕ್ಕು ಹುಡುಕಾಡಿದ್ದು ಏನು ಸಿಗದ್ದಕ್ಕೆ  ನಂತರ ಫಿರ್ಯಾದಿಗೆ ಹಣ, ಬಂಗಾರ ಎಲ್ಲಟ್ಟಿರುವಿರಿ ಎಂದು ಕಿರಿ, ಕಿರಿ ಮಾಡಿ ಫಿರ್ಯಾದಿಗೆ ಕೈ ಯಿಂದ ಹೊಡಿ ಬಡಿ ಮಾಡಿದ್ದು ಅಲ್ಲದೆ, ಅಲ್ಲಿಂದ ಫಿರ್ಯಾದಿಗೆ ಸುಮಾರು ಒಂದು ಕಿ: ಮೀಟರ ದೂರದವರೆಗೆ  ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ನಾವು ಬಂದ ಬಗ್ಗೆ ನೀನು ಯಾರಿಗಾದರೂ ಹೇಳಿದರೆ ನಿನಗೆ ಬಿಡುವದಿಲ್ಲ ಸಾಯಿಸುತ್ತೇವೆ ಎಂದು ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಪ್ರಕರರಣ ದಾಖಲ್ ಮಾಡಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 303/16 ಕಲಂ 379 ಐ.ಪಿ.ಸಿ:

ದಿನಾಂಕ: 24-12-2016 ರಂದು ರಾತ್ರಿ 8-45 ಗಂಟೆಗೆ  ಕುಷ್ಟಗಿ ಪಿ.ಎಸ್.ಐ ಠಾಣೆಗೆ ಹಾಜರಾಗಿ ತಮ್ಮದೊಂದು ವರದಿ, ಹಾಗೂ ಜಪ್ತಿ ಪಂಚನಾಮೆ ಒಂದು ಗ್ರಾನೈಟ್ ಕಲ್ಲು ಲೋಡ್ ಇದ್ದ  ಒಪನ್ ಟವರಸ್ ಲಾರಿ ನಂ: ಕೆ.ಎ-25/ಸಿ-2799 ನೇದ್ದನ್ನು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ  ತಾವು ಮತ್ತು ಠಾಣೆಯ ಸಿಬ್ಬಂದಿಯವರಾದ ಪಿ.ಸಿ-109, ಅಮರೇಶ ಪಿ.ಸಿ-116, ಸಂಗಮೇಶ ಪಿ.ಸಿ-117 ಶ್ರೀಧರ ಮತ್ತು ಪಿ.ಸಿ-161 ಪ್ರಶಾಂತ ಮತ್ತು ಪಿಸಿ-24 ಬಸವರಾಜ ರವರನ್ನು ಹಾಗೂ ಪಂಚರಾದ 1] ಮಲ್ಲೇಶಗೌಡ ತಂದೆ ಚನ್ನನಗೌಡ ಪೊಲೀಸ್ ಪಾಟೀಲ್ ವಯಾ: 65 ವರ್ಷ ಜಾತಿ: ಲಿಂಗಾಯತ ಉ:ಟೇಲರ್ ಕೆಲಸ ಸಾ: ಹಳೇ ಬಜಾರ ಕುಷ್ಟಗಿ  2] ಮಹ್ಮದ ರಫಿಕ್ ತಂದೆ ಖಾಸಿಂಸಾಬ ಗೈಬಣ್ಣನವರ ವಯಾ: 25 ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ ಕೆಲಸ ಸಾ: ಮುಲ್ಲಾರ ಓಣಿ ಕುಷ್ಟಗಿ ರವರನ್ನು ಬರಮಾಡಿಕೊಂಡು ಅವರಿಗೆ ಬಾತ್ಮಿ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿ ನಮ್ಮ ಸರ್ಕಾರಿ ಜೀಪ ನಂ. ಕೆ.ಎ-37 ಜಿ-292 ನೇದ್ದರಲ್ಲಿ ಅಡವಿಭಾವಿ ಸೀಮಾದಲ್ಲಿ ಹೋಗಿ ಕಾಯುತ್ತಾ ನಿಂತಾಗ ರಾತ್ರಿ 7-30 ಗಂಟೆ ಸುಮಾರಿಗೆ ಒಂದು ಲಾರಿಯು ಮೆಣಸಗೇರಿ ತಾಂಡಾ ಕಡೆಯಿಂದ ಬಂದಿದ್ದು ಆಗ ನಾವು ರಸ್ತೆಯಲ್ಲಿ ಹೋಗಿ ಸದರಿ ಲಾರಿಗೆ ಕೈ ಮಾಡಿ ನಿಲ್ಲಿಸಲಾಗಿ ಸದರಿ ಲಾರಿ ಚಾಲಕನು ಲಾರಿಯನ್ನು ನಮಗಿಂತ ಸುಮಾರು  100 ಮೀಟರ್ ದೂರದಲ್ಲಿಯೇ ನಿಲ್ಲಿಸಿ ಲಾರಿಯಿಂದ ಇಳಿದು ಕತ್ತಲಲ್ಲಿ ಓಡಿ ಹೋದನು. ಆಗ ನಾವು ಸದರಿ ಲಾರಿಯ ಹತ್ತಿರ ಹೋಗಿ ನೋಡಲಾಗಿ ಇದು ಓಪನ್ ಟವರಸ್ ಲಾರಿಯಾಗಿದ್ದು ಸದರಿ ಲಾರಿಯಲ್ಲಿ 2 ಗ್ರಾನೈಟ್ ಕಲ್ಲುಗಳ ಲೋಡ ಇದ್ದು ಸದರಿ ಲಾರಿಯ ನಂ: ಕೆ.ಎ-25/ಸಿ-2799 ಇದ್ದು ಲಾರಿಯ ಮುಂದೆ ಮಾಲತೇಶ ಅಂತಾ ಇಂಗ್ಲೀಷ ಅಕ್ಷರದಲ್ಲಿ ಬರೆದಿದ್ದು ಲಾರಿಯು ಚಾಕಲೇಟ್ ಮತ್ತು ಹಳದಿ ಬಣ್ಣದ್ದು ಇರುತ್ತದೆ. ಸದರಿ ಲಾರಿಯಲ್ಲಿದ್ದ ಗ್ರಾನೈಟ್ ಕಲ್ಲುಗಳನ್ನು ಪರಿಶೀಲಿಸಿ ನೋಡಲಾಗಿ ಮೊದಲನೇ ಕಲ್ಲು ಸುಮಾರು 1 ½ ಮೀಟರ್ ಅಗಲ, ಸುಮಾರು 2 ಮೀಟರ್ ಉದ್ದ, ಸುಮಾರು 1 ½ ಮೀಟರ್ ಎತ್ತರ ಇರುತ್ತದೆ. ಇದರ ಅಂ. ಕಿ. ಅಂದಾಜು ಕಿಮ್ಮತ್ತು 15,000=00 ರೂ. ಗಳಾಗಬಹುದು. ಎರಡನೇ ಗ್ರಾನೈಟ್ ಕಲ್ಲನ್ನು ಪರಿಶೀಲಿಸಿ ನೋಡಲಾಗಿ ಸುಮಾರು ಸುಮಾರು 1 ½ ಮೀಟರ್ ಅಗಲ, ಸುಮಾರು 3 ಮೀಟರ್ ಉದ್ದ, ಸುಮಾರು 1 ½ ಮೀಟರ್ ಎತ್ತರ ಇರುತ್ತದೆ. ಇದರ ಅಂ. ಕಿ. ಅಂದಾಜು ಕಿಮ್ಮತ್ತು 20,000=00 ರೂ. ಗಳಾಗಬಹುದು. ಸದರಿ ಲಾರಿಯ ಚಾಲಕನು ಗ್ರಾನೈಟ್ ಕಲ್ಲುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾಗ ನಮ್ಮನ್ನು ನೋಡಿ ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ  ಸದರಿ ಲಾರಿಯನ್ನು ಅದರಲ್ಲಿನ ಗ್ರಾನೈಟ್ ಕಲ್ಲುಗಳ ಸಮೇತ  ಇಂದು ದಿನಾಂಕ: 24-12-2016 ರಂದು ರಾತ್ರಿ 7-45 ಗಂಟೆಯಿಂದ 8-15 ಗಂಟೆಯವರೆಗೆ ವಿವರವಾದ ಪಂಚನಾಮೆಯನ್ನು ತಯಾರಿಸಿಕೊಂಡು ಜಪ್ತುಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದೆ.

Saturday, December 24, 2016

1] ಯಲಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 129/16 ಕಲಂ 87 Karnataka Police Act.
ದಿನಾಂಕ: 23-12-2016 ರಂದು ಮದ್ಯಾಹ್ನ 03-05 ಗಂಟೆಯ ಸುಮಾರಿಗೆ ಹಿರೇಮ್ಯಾಗೇರಿ ಸೀಮಾದ ಶರಣಪ್ಪ ತಂದೆ ಬಸವಂತಪ್ಪ ಉಳ್ಳಾಗಡ್ಡಿ ಈವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳ ನಾಲಾದಲ್ಲಿ (ಸರುವು) ನಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು ಸಿಕ್ಕಿ ಬಿದ್ದಿದ್ದು 03 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 720=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ  ಸಿಕ್ಕಿದ್ದು ಇರುತ್ತದೆ. ಇದಕ್ಕೆ ಮೂಲ ಇಸ್ಪೀಟ ದಾಳಿ ಪಂಚನಾಮೆಯನ್ನು ಲಗತ್ತಿಸಿ ನಿವೇದಿಸಿಕೊಳ್ಳಲಾಗಿದೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 120/16 ಕಲಂ 78(3) Karnataka Police Act.
ದಿನಾಂಕ: 23-12-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಆರೋಪಿತನು ಬೆಟಗೇರಿ ಗ್ರಾಮದ ಬಿ.ಎಸ್.ಎನ್.ಎಲ್ ದೂರವಾಣಿ ಕೇಂದ್ರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಪಿಯರ್ಾದಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 900=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಆರೋಪಿತನಿಗೆ ಮಟಕಾ ನಂಬರ ಬರೆದ ಪಟ್ಟಿಯನ್ನು ಯಾರಿಗೆ ಕೋಡುತ್ತಿಯಾ ಅಂತಾ ವಿಚಾರಿಸಿದಾಗ ಪಟ್ಟಿಯನ್ನು ತನ್ನ ಹತ್ತಿರವೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 335/2016 ಕಲಂ 9(B)(1)(b) ಸ್ಪೋಟಕ ವಸ್ತುಗಳ ಕಾಯ್ದೆ 1884:
ದಿನಾಂಕ:- 23-12-2016 ರಂದು ಸಂಜೆ 6:30 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸ್ವಂತ ಫಿರ್ಯಾದಿಯೊಂದಿಗೆ ಮೂಲ ಪಂಚನಾಮೆ, ಆರೋಪಿ, ಮುದ್ದೇಮಾಲನ್ನು ಸಲ್ಲಿಸಿದ್ದು, ದಿನಾಂಕ:- 23-12-2016 ರಂದು ಠಾಣೆ ವ್ಯಾಪ್ತಿಯ ವೆಂಕಟಗಿರಿ ಗ್ರಾಮದ ಸರಕಾರಿ ಜಮೀನು ಸರ್ವೆ ನಂ: 24 ರಲ್ಲಿ ಕ್ವಾರಿಯನ್ನು ಗುತ್ತಿಗೆ ಮಾಡುವ ಕಮಲ್ ಕುಮಾರ ಇವರು ಮಾಹಿತಿ ನೀಡಿದ ಪ್ರಕಾರ ಸದರಿ ಕ್ವಾರಿಯಲ್ಲಿ ಅನಧಿಕೃತವಾಗಿ ಇಬ್ಬರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸ್ಪೋಟಕ ವಸ್ತುಗಳನ್ನು ಉಪಯೋಗಿಸಿ ಕಲ್ಲುಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಅಂತಾ ನೀಡಿದ ಮಾಹಿತಿ ಮೇರೆಗೆ ಕಮಲಕುಮಾರ ಹಾಗೂ ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂಜೆ 4:30 ಗಂಟೆಗೆ ಸ್ಥಳದ ಮೇಲೆ ದಾಳಿ ಮಾಡಿ ಸ್ಪೋಟಕ ವಸ್ತುಗಳನ್ನು ಇಟ್ಟುಕೊಂಡಿದ್ದಂತಹ [1] ಪರಸಪ್ಪ ತಂದೆ ಫಕೀರಪ್ಪ ಬುನ್ನಟ್ಟಿ, 42 ವರ್ಷ ಜಾತಿ: ನಾಯಕ, ಉ: ಒಕ್ಕಲತನ ಸಾ: ಉಡುಮಕಲ್ ತಾ: ಗಂಗಾವತಿ [2] ಹನುಮೇಶ ತಂದೆ ಫಕೀರಪ್ಪ ಹಿರೆಕುರುಬರ, 25 ವರ್ಷ ಜಾತಿ: ಕುರುಬರ, ಉ: ಒಕ್ಕಲತನ ಸಾ: ವೆಂಕಟಗಿರಿ, ತಾ: ಗಂಗಾವತಿ ಇವರನ್ನು ಹಿಡಿದು ಅವರಿಂದ ಸುಮಾರು 3 ಕೆ.ಜಿ. ಯಷ್ಟು ಅಮೋನಿಯಮ್ ನೈಟ್ರೀಟ್ ಹಾಗೂ ಒಂದು ಹಿಡಿಯಷ್ಟು ಜಿಲಿಟಿನ್ ವೈರ್ ಹಾಗೂ 3 ಸಲಿಕೆಗಳು, 3 ಸುತ್ತಿಗೆಗಳು, 3 ಕಬ್ಬಿಣದ ಹಾರಿಗಳು ಮತ್ತು ಟ್ರಾಕ್ಟರ್ ನಂಬರ್ ಕೆ.ಎ-37/ಟಿ.ಬಿ-1499 ಹಾಗೂ ಟ್ರಾಲಿ ನಂ: ಕೆ.ಎ-37/ಟಿ.ಬಿ-1500 ಸಿಕ್ಕಿದ್ದು ಸದರಿ ಇಬ್ಬರು ವ್ಯಕ್ತಿಯಗಳ  ಅವರ ಹತ್ತಿರ ಸಿಕ್ಕ ಸ್ಪೋಟಕ ವಸ್ತುಗಳ ಬಗ್ಗೆ ಯಾವುದಾದರೂ ಅಧಿಕೃತವಾದ ಪರವಾನಿಗೆ ಅಥವಾ ದಾಖಲಾತಿ ವಿಚಾರಿಸಲು ಅವರು ತಮ್ಮ ಹತ್ತಿರ ಯಾವುದೇ ಅಧಿಕೃತ ಪರವಾನಿಗೆ ಇರುವುದಿಲ್ಲಾ. ಇವುಗಳನ್ನು ಅನಧಿಕೃತವಾಗಿ ಉಪಯೋಗಿಸುತ್ತಿರುವುದಾಗಿ ತಿಳಿಸಿದರು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 107/2016 ಕಲಂ: 279, 304(ಎ), 283 ಐ.ಪಿ.ಸಿ:.

ದಿನಾಂಕ: 23-12-2016 ರಂದು ಸಾಯಾಂಕಾಲ 19-30 ಗಂಟೆಗೆ ಆರೋಪಿ ಮಂಜುನಾಥ @ ಮಂಜಪ್ಪ ಈತನು ತನ್ನ ಹೊಂಡಾ ಶೈನ್ ಮೋಟಾರ್ ಸೈಕಲ್ ಚೆಸ್ಸಿ ನಂ: ME4JC36JDET041659, ಹಾಗೂ ಇಂಜನ್ ನಂ: JC36ET7070018 ನೇದ್ದನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಹನಮಸಾಗರದ ಕುಷ್ಟಗಿ ಸರ್ಕಲ್ ಈಚೆ ಕುಷ್ಟಗಿ ಕಡೆಗೆ ಲಾರಿ ಚಾಲಕನು ತನ್ನ ಲಾರಿ ನಂ: ಎ.ಪಿ-04/ವಾಯ್-2708 ನೇದ್ದನ್ನು ರಸ್ತೆಯ ಎಡಬದಿಗೆ ಅರ್ಧ ರೋಡಿನಲ್ಲಿ ಲಾರಿ ನಿಂತಿದ್ದು, ಅದಕ್ಕೆ ಯಾವುದೇ ಲೈಟ್ ವಗೈರೆ ಹಾಕದೇ ನಿಲ್ಲಿಸಿದ್ದು, ಹಾಗೂ ಯಾವುದೇ ಮುನ್ಸೂಚನೆ, ಸುರಕ್ಷತಾ ಕ್ರಮಗಳಮನ್ನು ಕೈಗೊಳ್ಳದೇ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದು, ಹಿಂದಿನಿಂದ ಮಂಜುನಾಥ @ ಮಂಜಪ್ಪನು ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಆಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯಲ್ಲಿ ನಿಲ್ಲಿಸಿದ ಲಾರಿಯನ್ನು ಗಮನಿಸದೇ ಹಿಂದಿನಿಂದ ಲಾರಿಗೆ ಟಕ್ಕರಕೊಟ್ಟು ಅಪಘಾತಪಡಿಸಿ ರೋಡಿನಲ್ಲಿ ಬಿದ್ದಿದ್ದು, ಆತನಿಗೆ ಎದೆಗೆ ಹಾಗೂ ಬಾಯಿಗೆ ಪೆಟ್ಟಾಗಿದ್ದು, ನಾಲಿಗೆ ಕಚ್ಚಿ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನಂತರ ಮಂಜುನಾಥ @ ಮಂಜಪ್ಪನನ್ನು ಫಿರ್ಯಾದಿ ಹಾಗೂ ಫಿರ್ಯಾದಿಯ ಮಗ ಪರಸಪ್ಪನು ಕೂಡಿ ಒಂದು ಖಾಸಗಿ ವಾಹನದಲ್ಲಿ ಹನಮಸಾಗರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈಧ್ಯರು ಇಲ್ಲದ ಕಾರಣ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಮಂಜುನಾಥ @ ಮಂಜಪ್ಪನನ್ನು ಆಸ್ಪತ್ರೆಗೆ ಸೇರಿಕೆ ಮಾಡಲು ವೈಧ್ಯರು ಪರೀಕ್ಷಿಸಿ ಮಂಜುನಾಥ @ ಮಂಜಪ್ಪ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು, ನಂತರ ಫಿರ್ಯಾದಿದಾರರು ತಮ್ಮ ಮಗನನ್ನು ಅಲ್ಲಿಯೇ ಬಿಟ್ಟು ಠಾಣೆಗೆ ಬಂದಿದ್ದು, ಕಾರಣ ಲಾರಿಯನ್ನು ರಸ್ತೆಯಲ್ಲಿ ನಿಲ್ಲಿಸಿ ಅದಕ್ಕೆ ನಿಲುಗಡೆಯ ಲೈಟ್ ಹಾಕದೇ ರಸ್ತೆ ನಿಯಮಗಳನ್ನು ಪಾಲಿಸದೇ ನಿಲ್ಲಿಸಿದ ಮತ್ತು ಮಂಜುನಾಥ @ ಮಂಜಪ್ಪನು ತನ್ನ ವಾಹನವನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ಅಪಘಾತ ಪಡಿಸಿ ಮೃತಪಟ್ಟಿದ್ದು ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಅದೆ.

 
Will Smith Visitors
Since 01/02/2008