Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, March 29, 2017

1]  ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ: 61/2017 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ : 28-03-2017 ರಂದು ಬೆಳಿಗ್ಗೆ 08.30 ಗಂಟೆ ಸುಮಾರಿಗೆ ನಮ್ಮ ಊರಾದ ಗುಮಗೇರಿ ಗ್ರಾಮದಿಂದ ಅಮವಾಸೆ ಪ್ರಯುಕ್ತ ರೋಣ ತಾಲೂಕಿನ ಇಟಗಿ ಭಿಮಾಂಬಿಕಾ ದೇವಸ್ಥಾನಕ್ಕೆ ಭೇಟಿ ಮಾಡಿ ಕಾಯಿ ಹೊಡಿಯಿಸಿಕೊಂಡು ವಾಪಸ್ ಗಜೇಂದ್ರಗಡ ಮೂಲಕ ಬ್ಯಾಲಿಹಾಳ ಸೀಮಾದ ಹತ್ತಿರ ಬೆಳಿಗ್ಗೆ 11 :00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತನಾದ ಶರಣಪ್ಪ ತಂದಿ ದ್ಯಾಮಣ್ಣ ಕೊಂಡುಗುರಿ ಸಾ : ಹಿರೇಅರಳಿಹಳ್ಳಿ ಈತನು ತನ್ನ ಮೊಸೈ ಚೆಸ್ಸಿ ನಂ.ME4JC36KLD7344752 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದನು. ನಾನು ಹಿಂದೆ ಕೂಳಿತಿದ್ದು ನಮ್ಮ ಎದುರುಗಡೆಯಿಂದ ಅಂದರೆ ಕುಷ್ಟಗಿ ಕಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಎಡಗಡೆ ಹೊರಟಿದ್ದ ನಮ್ಮ ಬೈಕಿಗೆ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ ನಾವು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಇದರಿಂದ ನನಗೆ ಬಲಕೈ ಮೊಣಕೈ ಹತ್ತಿರ ರಕ್ತ ಗಾಯ, ಬಲಹಣೆ ಹತ್ತಿರ, ಬಲಕಪಾಳ ಹತ್ತಿರ ತೆರಚಿದ ಗಾಯ, ಬಲಕಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯ, ಮೊಣಕಾಲು ಮುಂಗಾಲು ಹತ್ತಿರ ಭಾರಿ ರಕ್ತಗಾಯ, ಬಲತೊಡೆಗೆ ಒಳಪೆಟ್ಟಾಗಿದ್ದು ಅದೆ. ನಂತರ ಶರಣಪ್ಪನನ್ನು ನೋಡಲಾಗಿ ಅವನಿಗೆ ಬಲಕಾಲು ಮೊಣಕಾಲು ಚಿಪ್ಪು ಕಿತ್ತು ಹೊಗಿ ಭಾರಿ ರಕ್ತಗಾಯವಾಗಿದ್ದು  ಬಲಕಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯ, ಬಲಕಾಲು ಪಾದದ ಮೇಲೆ ಭಾರಿ ರಕ್ತಗಾಯ, ತಲೆಯ ಮೇಲೆ ಹೊಡೆದು ರಕ್ತಗಾಯವಾಗಿದೆ, ಬಲಕಾಲು ಮೊಣಕಾಲಿಗೆ ತೆರಚಿದ ಗಾಯ, ಸೊಂಟಕ್ಕೆ ಮತ್ತು ಬಲಬುಜಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

Tuesday, March 28, 2017

1]  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ. ನಂ: 35/2017 ಕಲಂ: 78(3) Karnataka Police Act.
ದಿನಾಂಕ: 27-03-2017 ರಂದು ರಾತ್ರಿ 9-45 ಗಂಟೆಗೆ ನಾಗರತ್ನ ಪಿ.ಎಸ್.ಐ. ಡಿ.ಸಿ.ಬಿ. ಠಾಣೆ ಕೊಪ್ಪಳ. ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ದಿ: 27-03-2017 ರಂದು ರಾತ್ರಿ 8-20 ಗಂಟೆಗೆ ಠಾಣಾ ವ್ಯಾಪ್ತಿಯ ಕಪಾಲಿ ಓಣಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮೆಹಬೂಬಹುಸೇನ ತಂದೆ ದಾವಲಸಾಬ ಮಣ್ಣೂರು  ಈತನು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಜನರಿಗೆ ಕರೆದು ಇದು ನಶೀಬದ ಆಟ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ, ಯಾರ ಅದೃಷ್ಟ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ. ರವರು ಸಿಬ್ಬಂದಿಗಳ ಸಂಗಡ ಮಾಡಿ ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನಿಂದ ನಗದು ಹಣ ರೂ 1410=00 ರೂ, ಮಟಕಾ ನಂಬರ ಬರೆದ ಎರಡು ಚೀಟಿ, ಒಂದು ಬಾಲ್ ಪೆನ್, ಒಂದು ನೀಲಿ ಶ್ಯಾಮಸಂಗ್ ಮೊಬೈಲ್ ಅಂಕಿ: 500/- ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   


Monday, March 27, 2017

1]  ಕುಕನೂರ ಪೊಲೀಸ್ ಠಾಣೆ ಗುನ್ನೆ. ನಂ: 22/2017 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 25-03-2017 ರಂದು ಮುಂಜಾನೆ 09 ಗಂಟೆ ಸುಮಾರಿಗೆ ಭೀಮಪ್ಪ ತಂದೆ ನಿಂಗಪ್ಪ ಕಸಾಳೆ ಇತನು ತನ್ನ ಮೋಟಾರ್ ಸೈಕಲ್ ನಂ. ಕೆಎ-24/ಯು-3287 ನೇದ್ದರ ಮೇಲೆ ಸರ್ಕಾರಿ ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಹುಬ್ಬಳ್ಳಿ-ಕೊಪ್ಪಳ ಎನ್.ಹೆಚ್.-63 ರಸ್ತೆಯ ಮೇಲೆ ಹೋರಟಿದ್ದಾಗ ತಳಕಲ್ ಸೀಮಾದಲ್ಲಿ ಆರೋಪಿತನು ತಾನು ಚಲಾಯಿಸುತಿದ್ದ ವಾಹನ ನಂ. ಕೆಎ-37/6610 ನೇದ್ದನ್ನು ಕೊಪ್ಪಳ ಕಡೆಯಿಂದ ಗದಗ ಕಡೆಗೆ ಅತಿಜೋರಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ಇದರಿಂದಾಗಿ ಭೀಮಪ್ಪನಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಆರೋಪಿತನು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 59/2017 ಕಲಂ. 279, 337, 338, 283 ಐ.ಪಿ.ಸಿ:
ಫಿರ್ಯದಿದಾರರು ನಿನ್ನೆ ದಿನಾಂಕ : 25-03-2017 ರಂದು ನಾವೆಲ್ಲರೂ ತಮಿಳುನಾಡಿನಿಂದ ಮಹಾರಾಷ್ಠ್ರಕ್ಕೆ ನಮ್ಮ ಲಾರಿ ನಂ : ಟಿ.ಎನ್-34/ಎಕ್ಸ-3299 ನೇದ್ದರಲ್ಲಿ ಬೋರ್ ವೆಲ್ ಕೆಸಿಂಗ್ ಪೈಪ್ ಗಳನ್ನು ಲೋಡ ಮಾಡಿಕೊಂಡು ಹೊಸಪೇಟೆ, ಕುಷ್ಟಗಿ ಮಾರ್ಗವಾಗಿ ಸದರಿ ನಮ್ಮ ಲಾರಿಯ ಚಾಲಕನಾದ .ಸಿಂತಾಲಕುಮಾರ ತಂದೆ ಜಿ. ಆರ್ಮುಗಂ ವಯಾ : 41 ವರ್ಷ ಜಾತಿ : ಎಂ.ಪಿ.ಸಿ. ಸಾ : ಪಚ್ಚಾಪಲಯಂ ಪೊ : ಗಾಂಧಿ ಆಶ್ರಮ ತಾ : ತಿರುಚನಗೋಡೆ ಜಿ : ನಾಮಕಲ್ (ಟಿ.ಎನ್) ಇವರು ನಡೆಸಿಕೊಂಡು ಹೋಗುತ್ತಿರುವಾಗ ಇಂದು ದಿನಾಂಕ : 26-03-2017 ರಂದು ಬೆಳಗಿನ ಜಾವ 4-00 ಗಂಟೆಯ ಸುಮಾರಿಗೆ ಹೊಸಪೇಟ ಕುಷ್ಟಗಿ ರಸ್ತೆಯ ಕುರುಬನಾಳ ಹತ್ತಿರ ನಮ್ಮ ಲಾರಿಯನ್ನು ಅತೀವ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರಸ್ತೆಯ ಮೇಲೆ ನಿಂತ  ಒಂದು ಡಬ್ಬಿ ಲಾರಿಗೆ ಟಕ್ಕರ್ ಮಾಡಿ ಅಪಘಾತಪಡಿಸಿದ್ದು ಇದರಿಂದ ಸದರಿ ಲಾರಿಯಲ್ಲಿದ್ದ ನನಗೆ ಹಾಗೂ ಶ್ರೀರಾಮ ಗೋಣ, ಕುಮಾರ ಬತರಾ, ಲಾರಿಯ ಚಾಲಕನಾದ ಎ.ಸಿಂತಾಲಕುಮಾರ  ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇನ್ನೂಳಿದ ಸಂತೊಷ, ಕಾರ್ತಿಕ, ಗೋನೋ ಮತ್ತು ಅನಂತ ಇವರಿಗೆ ಯಾವುದೇ ಗಾಯ ವಗೈರಾ ಆಗಿರುವದಿಲ್ಲ. ನಂತರ ಡಬ್ಬಿ ಲಾರಿ ನಂಬರ ನೋಡಲಾಗಿ  ಲಾರಿ ನಂ : ಎಂ.ಪಿ-09/ಹೆಚ್.ಜಿ-9603 ಅಂತಾ ಇದ್ದುಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆಯ ಮೇಲೆ ಯಾವುದೇ ಸಿಗ್ನಲ್ ಹಾಕದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೇ ರಸ್ತೆಯ ಮೇಲೆ ನಿಲ್ಲಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.  
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 57/2017 ಕಲಂ. 341, 307, 504, 109 ಸಹಿತ 34 ಐ.ಪಿ.ಸಿ:
ದಿ:25-03-2017 ರಂದು ಮದ್ಯಾನ್ಹ 2-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಹೊಲದ ಸಮೀಪದ ನರೇಗಲ್-ಓಜನಹಳ್ಳಿ ರಸ್ತೆಯಲ್ಲಿರುವಾಗ, ಆರೋಪತರು ಬಂದು ಫಿರ್ಯಾದಿಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಲೇ ಸೂಳೇಮಗನೇ ನೀನು ನಮಗೆ ಎ.ಪಿ.ಎಮ್.ಸಿ ಚುನಾವಣೆ ಯಲ್ಲಿ ಬೆಂಬಲ ನೀಡಿರುವುದಿಲ್ಲ ಆದರೂ ಸಹ ಗೆದ್ದು ಬಂದಿದ್ದೆವೆ ಲೇ ಸೂಳೇಮಗನೇ ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಆರೋಪಿ ರಾಜು ಇತನು ತನ್ನ ತಂದೆಗೆ ಈ ಮುದೇ ಸೂಳೇಮಗ ಒಬ್ಬನೇ ಸಿಕ್ಕಿದ್ದಾನೆ ಹೊಡೆದು ಮುಗಿಸು ಎಂದು ಪ್ರಚೋದನೆ ಮಾಡಿದಾಗ ಆರೋಪಿ ಬಸವರಾಜನು ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ಜೋರಾಗಿ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ಬಿಡಿಸಲು ಬಂದವರಿಗೆ ಸಹ ಆರೋಪಿತರು ನೀವ್ಯಾರಲೇ ಸೂಳೇಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದು, ಅಲ್ಲದೇ ನೀವೆಲ್ಲಾ ಬರದಿದ್ದರೇ ನಿನಗೆ ತಂದ ಕೊಡ್ಲಿಯಿಂದ ಕಡಿದು ತುಂಡು ಮಾಡಿ ಸಾಯಿಸಿಬಿಡುತ್ತಿದ್ದೆವು. ಎಂದು ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಬಸವರಾಜ ಹಾಗೂ ಅವರ ಮಗ ರಾಜು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 60/2017 ಕಲಂ. 307, 504, 506  ಐ.ಪಿ.ಸಿ:

ಫಿರ್ಯಾದಿದಾರಳ ಗಂಡ ಗಂಗಾಧರ ಜೀನ ಇತನು ಮನೆಯಲ್ಲಿ ಸರಿಯಾಗಿ ಇರದೇ, ಹೊರಗಡೆ ತಿರುಗಾಡುತ್ತಾ, ವಿನಾಕಾರಣ ಸಂಸಾರಿಕ ವಿಚಾರವಾಗಿ ಫಿರ್ಯಾದಿಯೊಂದಿಗೆ ನ್ಯಾಯ ಮಾಡುತ್ತಾ ಇದ್ದನು. ನಂತರ ದಿ:25-03-2017 ರಂದು ಸಂಜೆ ಗಿಣಿಗೇರಿ ಗ್ರಾಮದಲ್ಲಿ ಆರೋಪಿತನು ತನ್ನ ಕೈಯಲ್ಲಿ ಒಂದು ಪೇಪರ ಹಿಡಿದುಕೊಂಡು ಫಿರ್ಯಾದಿದಾರಳ ಬಟ್ಟೆ ಅಂಗಡಿಗೆ ಹೋಗಿ ಅದಕ್ಕೆ ಸಹಿ ಹಾಕಿಕೊಡು ನಿನಗೆ ನನಗೆ ಇನ್ನುಮುಂದೆ ಯಾವುದೆ ಸಂಬಂಧ ಇಲ್ಲಾ ಎಂದು ಸಿಟ್ಟಿನಿಂದ ಹೇಳಿ ಜಗಳ ತೆಗೆದು ಕೊರಳಲ್ಲಿಯ ಮಾಂಗಲ್ಯ ದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಅಲ್ಲದೇ ಮನೆಯಲ್ಲಿದ್ದ ತನ್ನ ಮೂರು ಜನ ಮಕ್ಕಳಾದ, 1] ರೇಣುಕಾ, 2] ತೇಜಸ್ವಿನಿ ಹಾಗೂ 3] ಅಜಯಕುಮಾರ ಇವರಿಗೆ ಗಿಣಿಗೇರಿ ಸೀಮಾದ ತಮ್ಮ ಹೊಲದಲ್ಲಿ ಕರೆದುಕೊಂಡು ಹೋಗಿ ದಿ:25-03-2017 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಜ್ಯೂಸದಲ್ಲಿ ಯಾವುದೋ ಒಂದು ಬಿಳಿಯ ವಿಷದ ಪುಡಿ ಹಾಕಿ ಕುಡಿಯಿರಿ ಇಲ್ಲದಿದ್ದರೆ ನಿಮಗೆ ಕುತ್ತಿಗೆ ಹಿಚುಕಿ ಸಾಯಿಸುತ್ತೇನೆ ಎಂದು ಹೆದರಿಸಿ ಜ್ಯೂಸದಲ್ಲಿ ವಿಷ ಹಾಕಿ ಕುಡಿಸಿದ್ದು ಅಲ್ಲದೇ ತಾನೂ ಸಹ ವಿಷ ಸೇವಿಸಿದ್ದು ಇರುತ್ತದೆ. ಕಾರಣ ಆರೋಪಿತನು ಮಕ್ಕಳಿಗೆ ಸಾಯಿಸುವ ಉದ್ದೇಶದಿಂದಾ ತನ್ನ ಮೂರು ಮಕ್ಕಳಿಗೆ ವಿಷ ಸೇವನೆ ಮಾಡಿಸಿ ಸಾಯಿಸಲು ಪ್ರಯತ್ನಿಸಿದ್ದರಿಂದ ಸದರಿ ಗಂಗಾಧರ ಜೀನ ಸಾ:ಗಿಣಿಗೇರಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Sunday, March 26, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ: 46/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ:-25-03-2017 ರಂದು ಬೆಳಗಿನ 06-00 ಗಂಟೆಗೆ ಡೈರಿ ಹಾಲು ಹಾಕಲು ದೇವಿಕ್ಯಾಂಪ್ ಗೆ ಹೋಗಿ ವಾಫಸ್  ಇಬ್ಬರೂ ಕೂಡಿಕೊಂಡು ನಮ್ಮ ಮೋಟಾರ್ ಸೈಕಲ್ ಮೇಲೆ ಕಾರಟಗಿ ಕಡೆಗೆ ದೇವಿಕ್ಯಾಂಪ್- ಕಾರಟಗಿ ರಸ್ತೆಯ ಮೇಲೆ ಮುಂಜಾನೆ 7-45 ಗಂಟೆ ಸುಮಾರಿಗೆ ಕಾರಟಗಿಯ ಅಯ್ಯಪ್ಪ ವರ ಹೊಲದ ಹತ್ತಿರ ಬರುತ್ತಿದ್ದಾಗ ಕಾರಟಗಿ ಕಡೆಯಿಂದ ಬಬ್ಬ ಟ್ರ್ಯಾಕ್ಟರ್ ಚಾಲಕ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ನ್ನು ಕಾರಟಗಿ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ದೇವಿಕ್ಯಾಂಪ್ ಕಡೆಗೆ ನಡೆದುಕೊಂಡು ಹೋರಟಿದ್ದ ಒಬ್ಬ ವ್ಯೆಕ್ತಿಯನ್ನು ಗಮನಿಸದೇ ಆತನಿಗೆ ಠಕ್ಕರ್ ಮಾಡಿ ಅಪಘಾತಪಡಿದ್ದರಿಂದ ನಡೆದುಕೊಂಡು ಹೋಗುತ್ತಿದ್ದ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿದ್ದ 31 ನೇ ಕೇನಾಲ್ ನಲ್ಲಿ ಹೋಗಿ ಬಿದ್ದನು. ಟ್ರ್ಯಾಕ್ಟರ್ ಚಾಲಕನು ತನ್ನ ನಿಯಂತ್ರಣ ಕಾಯ್ದುಕೊಳ್ಳದೇ ಇದ್ದುದ್ದರಿಂದ ಟ್ರ್ಯಾಕ್ಟರ್ ಕೂಡ 31 ನೇ ಕೇನಾಲ್ ನಲ್ಲಿ ಬಿದ್ದಿದ್ದ ವ್ಯೆಕ್ತಿಯ ಮೇಲೆ ಹೋಗಿ ಬಿದ್ದಿತು. ಕೂಡಲೇ ನಾವು ಗಾಭರಿಯಾಗಿ ಸಮೀಪ ಹೋಗಿ ನೋಡುತ್ತಿದ್ದಂತೆ  ಸದರಿ ಟ್ರ್ಯಾಕ್ಟರ್ ಚಾಲಕ ನಾವು ಹೋಗುತ್ತಿದ್ದಂತೆ ಅಲ್ಲಿಂದ ಓಡಿ ಹೋದನು. ನಾವು ಕೇನಾಲ್ ದಲ್ಲಿ ಇಳಿದು ನೋಡಲು ಟ್ರ್ಯಾಕ್ಟರ್ ಇಂಜೀನ್ ಕೆಳಗಡೆ ಸಿಕ್ಕಿ ಹಾಕಿಕೊಂಡ ವ್ಯೆಕ್ತಿಯನ್ನು ನೋಡಲು ಆತನು ನಾಡಿಗೆಪ್ಪ ತಂದೆ ರಂಗಪ್ಪ ಹುಲ್ಲೂರು ಸಾ. ಕಾರಟಗಿ ಇದ್ದು, ಈತನು ಸ್ಥಳದಲ್ಲಿ ಮೃತಪಟ್ಟಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 58/2017 ಕಲಂ. 307 ನಂತರ 302 ಐ.ಪಿ.ಸಿ:

ದಿನಾಂಕ 25-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಎಂ.ಎಲ್.ಸಿ. ಮಾಹಿತಿ ಮೇರೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿದಾರಳಾದ ಶ್ರೀ ಮತಿ ಕಲಮಾಬಿ ಗಂಡ ಬುಡನಸಾಬ ತಾವರಗೇರಾ ಇವರ ಮರಣಪೂರ್ವ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ ಮಗಳು  ಶೈನಜಾ ಬೇಗಂ  ಈಕೆಯು ಮುದೇನೂರು ಗ್ರಾಮದಲ್ಲಿ ಎ.ಎನ್.ಎಂ ಅಂತಾ ಕೆಲಸ ಮಾಡುತ್ತಿದ್ದು, ಈ ದಿವಸ ಕುಷ್ಟಗಿಯಲ್ಲಿ ಮಿಟಿಂಗ್ ಇದ್ದರಿಂದ ಬೆಳಿಗ್ಗೆ 9-00 ಗಂಟೆ ಸುಮಾರು ಫಿರ್ಯಾದಿ ಮತ್ತು ಮಗಳು ಶೈನಜಾ ಬೇಗಂ ಕುಷ್ಟಗಿಗೆ ಹೋಗಲು ಊರ ಮುಂದೆ ನಿಂತಾಗ  ಪರಿಚಯಸ್ಥ ನಮೂದಿತ ಆರೋಪಿ ಇತನು ತನ್ನ ಮೋ.ಸೈ ಮೇಲೆ ಬಂದು ನಾನು ಕುಷ್ಟಗಿಗೆ ಹೋಗುತ್ತೇನೆ ಅಂತಾ ಹೇಳಿ ಇಬ್ಬರನ್ನು ತನ್ನ ಹೊಂಡಾ ಸೈನ್ ಮೋ.ಸೈ ನಂ: ಕೆ.-37/0916 ನೇದ್ದರಲ್ಲಿ ಕೂಡಿಸಿಕೊಂಡು ಹೊರಟು ಕುಷ್ಟಗಿ ಇನ್ನೂ ಸುಮಾರು 3 ಕಿ.ಮಿ. ದೂರ ಇರುವಾಗ ಆರೋಪಿ ಉತ್ತರದ ಕಡೆಗೆ ಬಂಡಿ ರಸ್ತೆಯಲ್ಲಿ ತಿರುಗಿಸಿ ಒಂದು ಹೊಲದಲ್ಲಿ ಹೋಗಿ ನಿಲ್ಲಿಸಿ ಫಿರ್ಯಾದಿ ಮಗಳಿಗೆ ಆರೋಪಿ ನನ್ನನ್ನು ಮದುವೆಯಾಗು ನಿನ್ನನ್ನು ಪ್ರೀತಿಸುತ್ತೇನೆ ಅಂತಾ ಕೇಳಿದ್ದು ಆಗ ಫಿರ್ಯಾದಿ ಮಗಳು ನಿನಗೆ ಮದುವೆಯಾಗಿದೆ ಹೆಂಡತಿ ಮಕ್ಕಳು ಇದ್ದು ಮದುವೆಯಾಗುವದಿಲ್ಲ ಅಂತಾ ಹೇಳಿದ್ದು ಆಗ ಆರೋಪಿ ಒಮ್ಮೆಲೆ ಸಿಟ್ಟಿಗೆ ಬಂದು ಲೇ ಬೋಸುಡಿ ನೀನು ನನ್ನ ಮದುವೆಯಾಗುವದಿಲ್ಲ ನೀನು ಹೆಗೆ ಬದುಕುತ್ತಿಯಾ ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಕೊಂಡು ಬಿಡುತ್ತೇನೆ ಅಂತಾ ಅಂದವನೇ ತನ್ನ ಹತ್ತಿರ ಇದ್ದ ಸೆವಿಂಗ ಮಾಡುವ ಕತ್ತಿಯನ್ನು ತೆಗೆದು ಶೈನಜಾ ಈಕೆಯನ್ನು ಗಟ್ಟಿಯಾಗಿ ಹಿಡಿದು ಬಲ ಕುತ್ತಿಗೆಗೆ ಕೊಯ್ದನು ಆಗ ಆಕೆ ನೊವಿನಿಂದ ಕೆಳಗೆ ಬಿದ್ದಳು ಆಗ ತನ್ನ ಮೊ.ಸೈ ನಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಪೆಟ್ರೋಲನ್ನು ಶೈನಾಜ ಬೇಗಂ ಆಕೆಯ ತಲೆಯ ಮೇಲೆ ಸುರಿದಿದ್ದು ಫಿರ್ಯಾದಿಯು ಬಿಡಿಸಲು ಹೋದಾಗ ಆಕೆಗೂ ಮೈಮೇಲೆ ಪೆಟ್ರೋಲ್ ಸುರಿದು ಅವರುಗಳು  ಬೇಡ ಅಂದರೂ ಬೆಂಕಿ ಹಚ್ಚಿ ಮೊ.ಸೈ ತೆಗೆದುಕೊಂಡು ಹೊರಟು ಹೋಗಿದ್ದು ಇದರಿಂದ ಫಿರ್ಯಾದಿಗೆ ಗದ್ದಕ್ಕೆ, ಎಡಗಡೆ ಎದೆಗೆ ಎಡಗಡೆ ಹೊಟ್ಟೆಗೆ, ಎಡತಲೆಗೆ, ಎಡಗೈಗೆ ಸುಟ್ಟು ಗಾಯಗಳಾಗಿ ಎದೆಯ ಮತ್ತು ಹೊಟ್ಟೆಯ ಚರ್ಮ ಕಿತ್ತಿದಂತೆ ಆಗಿದ್ದು ಇರುತ್ತದೆ. ಮತ್ತು ಫಿರ್ಯಾದಿ ಮಗಳಿಗೆ  ಕುತ್ತಿಗೆಗೆ ಭಾರಿ ರಕ್ತಗಾಯ, ಮುಖಕ್ಕೆ, ಕೈಗಳಿಗೆ, ಎದೆಗೆ, ಹೊಟ್ಟೆಗೆ, ಎರಡೂ ಕೈಗಳಿಗೆ ಸುಟ್ಟಗಾಯಗಳಾಗಿದ್ದು, ನಂತರ ರೋಡಿಗೆ ಬಂದಾಗ ಯಾರೋ 108 ಅಂಬುಲೇನ್ಸಗೆ ಪೋನ್ ಮಾಡಿದ್ದು ಚಿಕಿತ್ಸೆ ಕುರಿತು ಇಲ್ಲಿಗೆ ಸೇರಿಕೆಯಾಗಿದ್ದು ಘಟನೆಯಾದಾಗ ಬೆಳಗಿನ 9-30 ಗಂಟೆಯಾಗಿರಬಹುದು ಅಂತಾ ವಗೈರಾ ಫಿರ್ಯಾದಿಯ ಪ್ರಕರಣ ದಾಖಲಿಸಿದ್ದು ಇರುತ್ತದೆ.  ನಂತರ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

 
Will Smith Visitors
Since 01/02/2008