Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 21, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ. 447, 341, 504, 506 ಸಹಿತ 34 ಐ.ಪಿ.ಸಿ:

ದಿನಾಂಕ:-20-06-2017 ರಂದು ಸಾಯಂಕಾಲ 4-00 ಗಂಟೆಗೆ ಪಿರ್ಯಾದಿದಾರರಾದ ವೈ. ಮಲ್ಲಿಕಾರ್ಜುನ ತಂದೆ ನೆಟ್ಟಕಲ್ಲಪ್ಪ  ವಯಾ-30ವರ್ಷ ಜಾ. ನಾಯಕ ಉ-ಒಕ್ಕಲುತನ ಸಾ. ಉಳೆನೂರು ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ದಿನಾಂಕ:-30-07-2015 ರಂದು ಉಳೆನೂರು ಗ್ರಾಮದ ತಿಮ್ಮಣ್ಣ ತಂದಿ ಲಿಂಗಪ್ಪ ಇವರಿಗೆ ಸೇರಿದ ಉಳೆನೂರು ಸೀಮಾ ಸರ್ವೆ ನಂ 115/*/8 ನೆದ್ದರಲ್ಲಿಯ 3 .14 ಗುಂಟೆ ಜಮೀನನ್ನು ಖರೀದಿ ಮಾಡಿದ್ದು ನನ್ನ ಹೆಸರಿನಲ್ಲಿ ನೊಂದಣಿಯಾಗಿ ಪಹಣಿ ಕೂಡಾ ನನ್ನ ಹೆಸರಿನಲ್ಲಿ ಆಗಿರುತ್ತದೆ. ದಿನಾಂಕ:-11-07-2017 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಸದ್ರಿ ನನ್ನ ಹೆಸರಿನಲ್ಲಿರುವ ಜಮೀನಿನಲ್ಲಿ ನಾನು ನನ್ನ ತಂದೆ ಸಾಗುವಳಿ ಮಾಡಲು ನೋಡುವ ಸಲುವಾಗಿ ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ್ಗೆ ಉಳೇನೂರು ನಾಯಕ ಜನಾಂಗದ ನಮೂದು ಮಾಡಿದ ಆರೋಪಿತರು ನಮ್ಮ ಜಮೀನಿನಲ್ಲಿ ಅತೀ ಕ್ರಮ ಪ್ರವೇಶ ಮಾಡಿ ನಮಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೇದರಿಕೆ ಹಾಕಿ ಜಮೀನಿನಲ್ಲಿ ಬಾರದಂತೆ ತಕರಾರು ಮಾಡುತ್ತಿದ್ದಾರೆ ನಾವು ನಮ್ಮ ಊರಿಗೆ ಹೋಗಿ ಜಮೀನಿನ ದಾಖಲಾತಿಗಳನ್ನು ತೆಗೆದುಕೊಂಡು ನಮ್ಮ ಸಂಬಂದಿಕರಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದಿರುತ್ತೇನೆ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, July 20, 2017

1]  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 218/2017 ಕಲಂ. 279, 304(ಎ) ಐ.ಪಿ.ಸಿ:
ದಿನಾಂಕ:- 19-07-2017 ರಂದು 6:45 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ನಿಂಗಮ್ಮ ಗಂಡ ದುರಗಪ್ಪ, ವಯಸ್ಸು 35 ವರ್ಷ, ಜಾತಿ: ಗೊಲ್ಲರು ಸಾ: ಇಂದ್ರಗಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ನನ್ನ ಗಂಡನ ಸಹೋದರನ ಮಗನಾದ ಪಂಪಾಪತಿ ತಂದೆ ಹನುಮಂತಪ್ಪ ಗೊಲ್ಲರ, ವಯಸ್ಸು 18 ವರ್ಷ, ಉ: ದನ ಮತ್ತು ಕುರಿ ಕಾಯುವುದು ಸಾ: ರಾಮದುರ್ಗ ಈತನು ಇಂದು ದಿನಾಂಕ:- 19-07-2017 ರಂದು ಸಂಜೆ 6:00 ಗಂಟೆಗೆ ಕುರಿ ಮತ್ತು ದನಗಳನ್ನು ಮೇಯಿಸಿಕೊಂಡು ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ದಾಸನಾಳ ಬ್ರಿಡ್ಜ ದಾಟಿ ಚೆಕ್ ಪೋಸ್ಟ್ ಹತ್ತಿರ ರಸ್ತೆಯ ಎಡ ಬದಿಗೆ ನಡೆದುಕೊಂಡು ಬರುತ್ತಿರುವಾಗ ಕೊಪ್ಪಳ ಕಡೆಯಿಂದ ಬಂದ ಲಾರಿ ನಂಬರ್: ಟಿ.ಎನ್-52/ ಎಫ್-7814 ನೇದ್ದರ ಚಾಲಕ ಮುರುಘನ್ ತಂದೆ ಓಚ್ಚಾ ತೇವರ್ ಸಾ: ತಮಿಳುನಾಡು ಈತನು ಲಾರಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಪಂಪಾಪತಿಗೆ ಟಕ್ಕರ್ ಕೊಟ್ಟು ಅಪಘಾತಮಾಡಿದ್ದು, ಇದರಿಂದ ಪಂಪಾಪತಿಯ ತಲೆಗೆ ಹಾಗೂ ಹೊಟ್ಟೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.   
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 215/2017 ಕಲಂ. 379 ಐ.ಪಿ.ಸಿ ಹಾಗೂ 4(1), 4(1ಎ), 21 MMRD Act 1957:
ದಿನಾಂಕ:19-07-2017 ರಂದು ಶ್ರೀ ವಿಶ್ವನಾಥ ಹೆಚ್ ಹಿರೇಗೌಡರ ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ, ರವರು ಸರಕಾರಿ ತರ್ಪೇ ಪಿರ್ಯಾದಿಯೊಂದಿಗೆ ಮೂಲ ಪಂಚನಾಮೆ ಹಾಗೂ ಮುದ್ದೆಮಾಲು ಮತ್ತು ಮೂರು ಜನ ಲಾರಿ ಚಾಲಕರನ್ನು ಹಾಜರಪಡಿಸಿದ್ದು ಪಿರ್ಯಾದಿಯ ಸಾರಾಂಶವೆನೆಂದರೆ, ಖಚಿತ ಬಾತ್ಮಿ ಕುಷ್ಟಗಿ–ತಾವರಗೇರಾ ರೋಡಿನಲ್ಲಿ ಮಾರುತಿ ಡಾಬಾದ ಹತ್ತಿರ ತಾವರಗೇರಾ ಕಡೆಯಿಂದ ಮೂರು ಲಾರಿಗಳಲ್ಲಿ ಆರೋಪಿತರಾದ 1) ಮಲ್ಲಿಕಾರ್ಜುನ ತಂದೆ ಗೋವಿಂದ ಕಮ್ಮೂರಿ ವಯಾ 26 ವರ್ಷ ಜಾ: ಬಡಿಗೇರ, ಉ: ಲಾರಿ ಎ.ಪಿ.21-ಟಿ.ಡಬ್ಯೂ-3037  ನೇದ್ದರ ಚಾಲಕ ಸಾ: 1-43 ಎರಕುಲ ಚಿರುವು, ಮಂಡಲಂ: ಕೃಷ್ಣಗಿರಿ ತಾ:ಜಿ: ಕರ್ನೂಲ್ ರಾಜ್ಯ:ಆಂದ್ರಪ್ರದೇಶ 2) ಹನುಮಂತು ಕುರುವ, ಲಾರಿ ಎ.ಪಿ.21-ಟಿ.ಡಬ್ಯೂ-3037  ನೇದ್ದರ ಲಾರಿ ಮಾಲೀಕ 3) ವೀರೇಶ ತಂದೆ ವೀರಣ್ಣ ಕುಮ್ಮಾರಿ, ವಯಾ 40 ವರ್ಷ ಜಾ: ಕುಮ್ಮಾರಿ ಉ: ಲಾರಿ ಎ.ಪಿ-02-ಟಿ.ಬಿ-5256 ನೇದ್ದರ ಚಾಲಕ ಸಾ: ಕಂಪಾಡು, ಮಂಡಲಂ: ಸಿ.ಬೆಲಗಲ ತಾ:ಕೋಡುಮುರು ಜಿ: ಕರ್ನೂಲ ರಾಜ್ಯ: ಆಂದ್ರಪ್ರದೇಶ 4) ಮಸ್ತಾನಶೇಖ ತಂದೆ ಮೀರಾಸಾಬ ಲಾರಿ ಎ.ಪಿ-02-ಟಿ.ಬಿ-5256 ನೇದ್ದರ ಮಾಲೀಕ ಸಾ: ನೆಲ್ಲೂರು  5) ಸುಭಾನ ಬಾಷ ತಂದೆ ಮದಾರಸಾಹೇಬ ನೂರ, ವಯಾ 27 ವರ್ಷ, ಜಾತಿ: ಮುಸ್ಲಿಂ, ಉ: ಲಾರಿ .ಪಿ-26-ಟಿ.ಟಿ.7277 ನೇದ್ದರ ಚಾಲಕ, ಸಾ: ಅರ್.ಟಿ.ಸಿ. ಕಾಲೋನಿ ಆದೋನಿ 6) ಹುಸೇನ ತಂದೆ ಮದರಸಾಹೇಬ ಲಾರಿ .ಪಿ-26-ಟಿ.ಟಿ.7277 ನೇದ್ದರ ಮಾಲೀಕ ಸಾ: ಗುಡುರು. ಜಿಲ್ಲಾ: ನೆಲ್ಲೂರು ಇವರುಗಳ ಪೈಕಿ ಕ್ರ.ಸಂ 01,03,05 ನೇದ್ದವರು ಕ್ರ.ಸಂ 02,04,06 ನೇದ್ದವರ ಸೂಚನೆ ಮೇರೆಗೆ ಇವರ ಮೂರು ಲಾರಿಗಳಲ್ಲಿ ಚಾಲಕರು ಯಾವುದೇ ಪರವಾನಿಗೆಯನ್ನು ಮತ್ತು ದಾಖಲಾತಿಗಳನ್ನು ಹಾಗೂ ಇತರೇ ಕಾಗದ ಪತ್ರಗಳನ್ನು ಹೊಂದದೆ ಅನಧಿಕೃತವಾಗಿ ಆಂದ್ರಾ ಪ್ರದೇಶ ರಾಜ್ಯದ ಪತ್ತಿಕೊಂಡ ಸೀಮಾಂತರದ ಚಕ್ರಾಲಾ ವೆಂಕಟೇಶ್ವರ ರೆಡ್ಡಿ ಕ್ವಾರಿ ಎಸ್.ಕೆ.ಹೆಚ್. ಗ್ರಾನೈಟ್ ಕ್ವಾರಿಯಲ್ಲಿಂದ ಮತ್ತು ಕಲ್ಲಕುಂಟಾದ ಮನೋಹರ ಕರವ ರವರ ಕ್ವಾರಿಯಿಂದ ಕಳ್ಳತನದಿಂದ ಲೋಡಮಾಡಿಕೊಂಡು ತಮ್ಮ ಲಾಭಕೊಸ್ಕರ ಮಾರಾಟ ಮಾಡಲು  ಕುಷ್ಟಗಿ  ಶ್ರೀರಾಮ ಗ್ರಾನೈಟ ಪ್ಯಾಕ್ಟರಿಗೆ ಬರುತ್ತಿರುವಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದುಕೊಂಡು ಮೂರು ಲಾರಿಗಳಲ್ಲಿ ಇದ್ದ ಕಲ್ಲು ಗಳ ಅಂದಾಜು ಕಿಮ್ಮತ್ತು 1,65,000=00 ರೂ ಬೆಲೆಬಾಳುವುದನ್ನು ಜಪ್ತಿ ಮಾಡಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


Wednesday, July 19, 2017

ಪೊಲೀಸ್ ಪ್ರಕಟಣೆ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ (Facebook) ಫೇಸಬುಕ್, (Twitter) ಟ್ವಿಟರ್, (WhatsApp) ವಾಟ್ಸಪ್ ಇತ್ಯಾದಿಗಳಲ್ಲಿ ಯುವಕರು ಜವಾಬ್ದಾರಿಯಿಲ್ಲದೆ ಆಕ್ಷೇಪಾರ್ಹ ವಿಷಯಗಳು (Objectionable contents) ನ್ನು Forward ಮಾಡುತ್ತಿದ್ದು, ಬಹಳಷ್ಟು ಫೋಟೊ ಇತ್ಯಾದಿಗಳನ್ನು Edit ಮಾಡಿ ವಿರೂಪಗೊಳಿಸಿ ಇತರರಿಗೆ ನೋವಾಗುವಂತೆ ವ್ಯವಹರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ, 2016- 17 ನೇ ಸಾಲಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಷಯಗಳು (Objectionable contents) ಹಾಕಿರುವ ಕಾರಣಕ್ಕೆ ಒಟ್ಟು 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಯುವಕರಲ್ಲಿ ಕೊಪ್ಪಳ ಪೊಲೀಸರ ವಿನಂತಿ. ಹಾಗೂ ಇಲ್ಲವಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 217/2017 ಕಲಂ. 20(b)(ii)(A) NDPS Act 1985.
ದಿನಾಂಕ:- 18-07-2017 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವಿರುಪಾಪೂರು ಗಡ್ಡಿಯ ಹಳೆಯ ಸೇತುವೆಯ ಕೆಳಗೆ  ಸಾರ್ವಜನಿಕರಿಗೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಡಾ|| ಸೋಮಪ್ಪ, ಪಶು ವೈದ್ಯಾಧಿಕಾರಿಗಳು ಮತ್ತು ಸಹಾಯ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಗಂಗಾವತಿ ಮತ್ತು ಶ್ರೀ ದೀಪಕ ಬೂಸರೆಡ್ಡಿ ಸಿ.ಪಿ.ಐ. ಹಾಗೂ ಸಿಬ್ಬಂದಿಯವರಾದ  ಪಿ.ಸಿ. 358, 363, ಸಿ.ಹೆಚ್.ಸಿ. 80, 173, 191, ಎ.ಪಿ.ಸಿ. 211 ಬಸವರಾಜ ಮತ್ತು ನೋಟಿಸ್ ಮೂಲಕ ಬರಮಾಡಿಕೊಂಡ ಇಬ್ಬರು ಪಂಚರಾದ (1) ಶ್ರೀ ಆನಂದರೆಡ್ಡಿ  ಸಾ: ಹನುಮನಹಳ್ಳಿ   (2) ಶ್ರೀ ಮಲ್ಲೇಶ ಸಾ: ಹನುಮನಹಳ್ಳಿ ಇವರನ್ನು ಕರೆದುಕೊಂಡು ಸರಕಾರಿ ಜೀಪ್ ಗಳಲ್ಲಿ ಮಧ್ಯಾಹ್ನ 3:00 ಗಂಟೆಗೆ ಗಂಗಾವತಿಯಿಂದ ಹೊರಟು ಮಾಹಿತಿ ಇದ್ದ ಪ್ರಕಾರ ವಿರುಪಾಪೂರು ಗಡ್ಡಿ ಸೇತುವೆಯಿಂದ ಸ್ವಲ್ಪ ದೂರದಲ್ಲಿ ಜೀಪುಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲು ಹಳೆಯ ಸೇತುವೆಯ ಕೆಳ ಭಾಗದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು ಪೇಪರನ ಸಣ್ಣ ಸಣ್ಣ ಪೊಟ್ಟಣಗಳನ್ನು ಕೊಡುತ್ತಿದ್ದರು. ನಾವು ನೋಡಿ ಸಂಶಯ ಬಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಎಲ್ಲರು ಕೂಡಿಕೊಂಡು ದಾಳಿ ಮಾಡಿ ಸಾರ್ವಜನಿಕರು ಓಡಿ ಹೋಗಿದ್ದು, ಪೊಟ್ಟಣಗಳನ್ನು ಕೊಡುತ್ತಿದ್ದ ವ್ಯಕ್ತಿಗಳು ಸಿಕ್ಕಿಬಿದ್ದಿದ್ದು, ಅವರ ಹೆಸರು ವಿಚಾರಿಸಲು (1) ಪಂಪಾ ತಂದೆ ಹಳ್ಳಪ್ಪ, ವಯಸ್ಸು 30 ವರ್ಷ, ಜಾತಿ: ಚಲವಾದಿ ಉ: ಆಟೋ ಚಾಲಕ ಸಾ: ವಿರುಪಾಪೂರ ಗಡ್ಡಿ (2) ಕುಮಾರ ತಂದೆ ಶಿವಪ್ಪ ವಯಸ್ಸು 24 ವರ್ಷ, ಜಾತಿ: ಚಲವಾದಿ ಉ: ಡ್ರೈವರ್ ಸಾ: ವಿರುಪಾಪೂರು ಗಡ್ಡಿ ಎಂದು ತಿಳಿಸಿದ್ದು ಗೆಜೆಟೆಡ್ ಅಧಿಕಾರಿಗಳಾದ ಡಾ|| ಸೋಮಪ್ಪ ಇವರ ಸಮಕ್ಷಮ ಅವರಿಗೆ ಜಡ್ತಿ ಮಾಡಿ ಪರಿಶೀಲನೆ ಮಾಡಿ ನೋಡಲು ಪಂಪಾ ಇವನ ಹತ್ತಿರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಪೇಪರನ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಎಲೆಯ ಹಾಗೂ ಹೂವಿನ ಒಣಗಿದ ಪುಡಿ ಪುಡಿಯಾದ ಒಣಗಿದ ಗಾಂಜಾ ಇದ್ದು,   ಕುಮಾರನ ಹತ್ತಿರ ಗಾಂಜಾ ಮಾರಾಟದಿಂದ ಬಂದ ಹಣ ರೂ. 150-00 ಗಳು ಸಿಕ್ಕವು.  ತೂಕ ಮಾಡಿಸಲಾಗಿ  ಒಟ್ಟು 146 ಗ್ರಾಂ ಗಾಂಜಾ  ಅಂದಾಜ ಕಿಮ್ಮತ್ತು ರೂ. 500-00 ಇದ್ದು, ಪೊಟ್ಟಣ ಕಟ್ಟಿದ ಖಾಲಿ ಹಾಳೆಗಳನ್ನು ತೂಕ ಮಾಡಲು ಅವು ಒಟ್ಟು 74 ಗ್ರಾಂ ಇರುತ್ತವೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 214/2017 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ :17-07-2017 ರಂದು ಬಸಪ್ಪ ಇವರ ಸ್ಪ್ಲೇಂಡರ್ ಮೋಟಾರ ಸೈಕಲ್ ನಂ : ಕೆ.-17-ಆರ್-644 ನೇದ್ದರ ಮೇಲೆ ಹುಲ್ಲಪ್ಪ ತಂದೆ ಹನುಮಪ್ಪ ಹಿಂದೆ ಕುಳಿತುಕೊಂಡು ಕುಷ್ಟಗಿಗೆ ಬಂದು ತಹಶೀಲ ಕಛೇರಿಯಲ್ಲಿ ಪಹಣಿ ಪತ್ರಿಕೆ ತೆಗೆಯಿಸಿಕೊಂಡು ಹನುಮಸಾಗರ ಮಾರ್ಗವಾಗಿ ನಮ್ಮೂರಿಗೆ ಹೋಗುತ್ತಿರುವಾಗ ತಳುವಗೇರಿ ದಾಟಿದ ನಂತರ ಎದುರುಗಡೆಯಿಂದ  ಒಂದು ವಾಹನವನ್ನು ಅದರ ಚಾಲಕನು ಅಲಕ್ಷ್ಯತನದಿಂದ ಅತಿವೇಗವಾಗಿ ನಡೆಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ ನಡೆಸುತ್ತಿದ್ದ ಬಸಪ್ಪನ ಮೋಟಾರ ಸೈಕಲಗೆ ಡಿಕ್ಕಿಕೊಟ್ಟಿದ್ದರಿಂದ ನಾವಿಬ್ಬರೂ ಕೆಳಗೆ ಬಿದ್ದೇವು. ಸದರಿ ವಾಹನ ನಿಲ್ಲಿಸಿದೇ ಕುಷ್ಟಗಿ ಕಡೆಗೆ ಹೊರಟು ಹೋಯಿತು ಸದರೊ ವಾಹನ ನೋಡಲಾಗಿ ಮೋಟರ ಎತ್ತುವ ವಾಹನವಿದ್ದು ಅದರ ನಂಬರ ವಗೈರೆ ನೋಡಿರುವುದಿಲ್ಲಾ. ಸದರಿ ಘಟನೆಯಿಂದ ನನ್ನ ಬಲತೊಡೆ ಮುರಿದಿದ್ದು ನನ್ನ ಮುಂಗೈ ಹಿಂದೆ ಮುರಿದಿದೆ. ಬಸಪ್ಪ ಗುಡದೂರ ಇತನಿಗೆ ಎಡ ಹಣೆಗೆ ಮತ್ತು ಬಲಹಣೆಗೆ ಗಾಯಗಳಾಗಿದ್ದು ಮೂಗಿನ ಮೇಲೆ ಮತ್ತು ಕೆಳಗೆ ತೆರಚಿದ ರಕ್ತಗಾಯವಾಗಳಾಗಿ, ಎಡಕಪಾಳಕ್ಕೆ ತೆರಚಿದ ಗಾಯ ಗದ್ದಕ್ಕೆ ರಕ್ತಗಾಯವಾಗಿ, ಬಲಗೈ ತೋರಬೆರಳು, ಹೆಬ್ಬೇರಳು, ಎಡಗೈ ಮುಂಗೈ ಹತ್ತಿರ ಮತ್ತು ಬೆರಳುಗಳಿಗೆ ತೆರಚಿದ ರಕ್ತಗಾಯಗಳಾಗಿದ್ದು, ಬಲಗಾಲು ಮೊಣಕಾಲು ಕೆಳಗೆ ಭಾರಿ ರಕ್ತಗಾಯವಾಗಿ ಮೊಣಕಾಲು ಚಿಪ್ಪು ಕಿತ್ತಿ ಭಾರಿ ರಕ್ತ ಗಾಯವಾಗಿರುತ್ತದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 191/2017 ಕಲಂ. 279, 337 ಐ.ಪಿ.ಸಿ:

ದಿನಾಂಕ 23-01-2017 ರಂದು ಸಂಜೆ 6-30 ಪಿ.ಎಂ ಸುಮಾರಿಗೆ ಪಿರ್ಯಾದುದಾರರು ಕಾಸನಕಂಡಿ – ಬಗನಾಳ ರಸ್ತೆಯೆ ಮೇಲೆ ಹರೆಕೃಷ್ಣ ಫ್ಯಾಕ್ಟರಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ  ಲಾರಿ ನಂ ಕೆ.ಎ.35/ ಬಿ 7606 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಬಲಗಾಲಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದುದಾರರ ಬಲಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

Monday, July 17, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ. 87  Karnataka Police Act.
ದಿನಾಂಕ 16-07-2017 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ಕೊಟ್ನೇಕಲ್ ಗ್ರಾಮದ ಚಂದ್ರೇಗೌಡ ಹಿರೇಬಸನಗೌಡ ರವರ ಮನೆಯ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ. ಹಾಗೂ  ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 11 ಜನ ಆರೋಪಿಗಳು ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 3740/- ಹಾಗೂ  ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.               
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 166/2017 ಕಲಂ. 498(ಎ), 323, 504, 506 ಐ.ಪಿ.ಸಿ:
ದಿ:16-07-2017 ರಂದು ಮದ್ಯಾಹ್ನ 2-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರಿಗೆ ಕಳೆದ 14 ವರ್ಷಗಳಿಂದೆ ಜುಮ್ಲಾಪೂರ ಗ್ರಾಮದ ಲಕ್ಷ್ಮಣ ಎಂಬುವವರೊಂದಿಗೆ ಮದುವೆಯಾಗಿದ್ದು, ಅವರಿಗೆ 03 ಜನ ಮಕ್ಕಳಿದ್ದಾರೆ, ಮದುವೆಯಾದ 02 ವರ್ಷಗಳ ನಂತರ ತನ್ನ ಗಂಡನು ಹಿರೇಸೂಳಿಕೆರಿ ಗ್ರಾಮಕ್ಕೆ ಕರೆತಂದು ಕುಟುಂಬದೊಂದಿಗೆ ವಾಸವಾಗಿದ್ದು, ನಂತರ ಕಳೆದ 02 ವರ್ಷಗಳಿಂದ ತನ್ನ ಗಂಡನು ತನಗೆ ಸರಿಯಾಗಿ ನೋಡಿಕೊಳ‍್ಳದೇ ಮತ್ತು ಕೆಲಸಕ್ಕೆ ಸಹ ಸರಿಯಾಗಿ ಹೋಗದೇ ತನ್ನ ನಡತೆಯ ಮೇಲೆ ಸಂಶಯ ಮಾಡುತ್ತಾ ದೈಹಿಕ ಮಾನಸಿಕ ಕಿರುಕುಳ ನೀಡಿದ್ದು, ಅಲ್ಲದೇ ದಿ:08-07-2017 ರಂದು ಬೆಳಿಗ್ಗೆ 10-00 ಗಂಟೆಗೆ ತನ್ನ ಗಂಡನು ಮನೆಯಲ್ಲಿ ಜಗಳ ತೆಗೆದು ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ತನ್ನ ಗಂಡ ಲಕ್ಷ್ಮಣ ಆನೆಗುಂದಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 143, 147, 323, 504, 506, 341, ಸಹಿತ 149 ಐ.ಪಿ.ಸಿ:

ದಿನಾಂಕ: 16-07-2017 ರಂದು ಬೆಳಿಗ್ಗೆ 6-45 ಗಂಟೆಗೆ ಫಿರ್ಯಾದಿದಾರರಾದ ಸೈಯದ್ ನಾಸೀರ ತಂದೆ ಎಸ್.ಎಮ್. ಜೀಲಾನಿ ಸಾ: ಕೊಪ್ಪಳರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪೀರ್ಯಾದಿದಾರರು ನಿನ್ನೆ ದಿನಾಂಕ: 15-07-2017 ರಂದು ಮದ್ಯಾಹ್ನ 4-00 ಗಂಟೆಯ ಸುಮಾರಿಗೆ ತಾನು ತಮ್ಮ ಮನೆಯ ಮುಂದೆ ತನ್ನ ಸ್ನೇಹಿತನಾದ ಆರೀಫ್ ನೊಂದಿಗೆ ಮತ್ತು ನಗರ ಸಭೆಯ ಆರ್.ಓ ಮತ್ತು ಆರ್.ಐ ರವರೊಂದಿಗೆ ಮಾತನಾಡುತ್ತಿದ್ದಾಗ ಈರಣ್ಣ ಬಂಡಾನವರ ಮತ್ತು ಅವರ ಮಕ್ಕಳು ಹಾಗೂ ಅವರ ಹೆಂಡತಿಯರು ಬಂದು ಫಿರ್ಯಾದಿದಾರಿಗೆ ಏನ ಲೇ ಸೂಳೇಮಗನೆ ಅವರಿಗೆ ಏನು ಮಾತನಾಡುತ್ತಿಯಾ ಎಂದು ಏಕ ವಚನದಲ್ಲಿ ಮಾತನಾಡುತ್ತಾ ಎಲ್ಲಾರು ಫಿರ್ಯಾದಿದಾರರ ಮೇಲೆ ಹಲ್ಲೆ ಮಾಡಿ ಒಡಿ ಬಡಿದು ಅವಾಚ್ಯಶಬ್ದಗಳಿ ಬೈಯ್ದು ಮತ್ತು ಮಾಕೆ ಲೌಡೆ, ಮಾಕಿ ಚೂತ, ದಗಡಾಂಕೆ ನಿನಗೆ ನೋಡಿಕೊಳ್ಳುತ್ತೇನೆ ನಿನ್ನ ಮನೆಗೆ ಬೆಂಕಿ ಹಚ್ಚುತ್ತೆನೆ, ಮತ್ತು ಅವನ ಮಗ ಚೆನ್ನವೀರ ಇತನು ನಿನಗೆ ಮರ್ಡರ್ ಮಾಡುತ್ತೆನೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

Sunday, July 16, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 189/2017 ಕಲಂ. 78(3)  Karnataka Police Act.
ದಿನಾಂಕ: 15-07-2017 ರಂದು 9-30 ಪಿ.ಎಂ. ಸುಮಾರಿಗೆ ಹುಲಗಿ ಗ್ರಾಮದನಂದಿ ಸರ್ಕಲ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಅಜಿಂ ಅಹಮದ ತಂ/ ರಸೂಲ್ ಸಾಬ ಮುನಿರಾಬಾದ ಆರ್ ಎಸ್.2] ಕಾಜಾಹುಸೇನ್ ತಂ/ ಸರ್ದಾರ್ ಪಾಷಾ ಇಬ್ಬರು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್. ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 2500-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು 2ಬಾಲ್ ಪೆನ್ ಹಾಗೂ 2 ಚೀಟಿಯನ್ನು ಜಪ್ತ ಪಡಿಸಿಕೊಂಡಿರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.  
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 190/2017 ಕಲಂ. 78(3)  Karnataka Police Act.
ದಿನಾಂಕ: 15-07-2017 ರಂದು 10-15 ಎ.ಎಂ. ಸುಮಾರಿಗೆ ಹುಲಗಿ ಗ್ರಾಮದ ಬನ್ನಿಕಟ್ಟೆಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಮರಿಯಪ್ಪ ತಂ/ ಹೊನ್ನಪ್ಪ ಸಿಳ್ಳಿಕ್ಯಾತರ ಇವನು  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 2530-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.  
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 156/2017 ಕಲಂ. 78(3) Karnataka Police Act.
ದಿನಾಂಕ:-14-07-2017 ರಂದು ಸಂಜೆ 7-00 ಗಂಟೆಗೆ ಹುಳ್ಕಿಹಾಳ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ .ಎಸ್. ರವರು ಮತ್ತು ಪಿ.ಸಿ 254 ರವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ -2 ಓಡಿಹೋಗಿದ್ದು ಆರೋಪಿ ನಂ 1 ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 610=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಮಟಕಾ ಪಟ್ಟಿ ಮತ್ತು ಹಣವನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಲು ಪಟ್ಟಿ ಮತ್ತು ಹಣವನ್ನು ಆರೋಪಿ ನಂ 3 ವಿಶ್ವನಾಥಸ್ವಾಮಿ ತಂದೆ ಸಂಗಯ್ಯಸ್ವಾಮಿ ಸಾ. ಕನಕಗಿರಿ ಈತನು ತೆಗೆದುಕೊಳ್ಳುತ್ತಾನೆ ಅಂತಾ ತಿಳಿಸಿರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 157/2017 ಕಲಂ. 78(3) Karnataka Police Act.
ದಿನಾಂಕ:-14-07-2017 ರಂದು ರಾತ್ರಿ 8-30 ಗಂಟೆಗೆ ಹುಳ್ಕಿಹಾಳ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಪಿ.ಎಸ್. ರವರು ವೆಂಕಟೇಶ .ಎಸ್. ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ನಂ 1 ಸಿಕ್ಕಿಬಿದ್ದದ್ದು ಸಿಕ್ಕಿಬಿದ್ದವನಿಂದ ರೂ. 2650=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಮತ್ತು ಆರೋಪಿ ನಂ 2 ಈತನು ಮಟ್ಕಾ ಪಟ್ಟಿ ಮತ್ತು ಹಣ ತೆಗೆದುಕೊಳ್ಳುತ್ತಾನೆ ಅಂತಾ ತಿಳಿಸಿರುತ್ತಾನೆ ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ. 87 Karnataka Police Act.
ದಿನಾಂಕ 15-07-2017 ರಂದು ರಾತ್ರಿ 6-30 ಗಂಟೆಯ ಸುಮಾರಿಗೆ ಹುಳ್ಕಿಹಾಳ ಕ್ಯಾಂಪ್ದ ಮರ್ಲಾನಹಳ್ಳಿ- ಹುಳ್ಕಿಹಾಳ ರಸ್ತೆಯ ಪಕ್ಕ ಕೇನಾಲ್ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ಶ್ರೀ ಯಲ್ಲಪ್ಪ, ಪಿ.ಎಸ್..  ಹಾಗೂ ಸಿಬ್ಬಂದಿಯವರು ಹಾಗೂ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 4 ಜನ ಸಿಕ್ಕಿಬಿದ್ದಿದ್ದು ಸದರ್ ಸಿಕ್ಕಿಬಿದ್ದಿರುವ ಆರೋಪಿತರ ವಶದಿಂದ ರೂ. 3650/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
6] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 279, 304(ಎ) ಐ.ಪಿ.ಸಿ. ಮತ್ತು 187 ಐ.ಎಂವಿ. ಕಾಯ್ದೆ:

ದಿ:15-07-17 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ತಂದೆ ವಹಿದುದ್ದೀನ್ ಇವರು ತಮ್ಮ ಸುಜುಕಿ ಮೋಟಾರ ಸೈಕಲ್ ನಂ: ಕೆಎ-37/ವಾಯ್-2597 ನೇದ್ದನ್ನು ಓಡಿಸಿಕೊಂಡು ಕೊಪ್ಪಳದಿಂದಾ ಹೊಸಪೇಟೆ ಕಡೆಗೆ ಹೋಗುವಾಗ ಗಿಣಿಗೇರಿ ಗ್ರಾಮದ ಬೈಪಾಸ್ ಎನ್.ಹೆಚ್-63 ರಸ್ತೆಯ ಬಗನಾಳ ಕ್ರಾಸ್ ಹತ್ತಿರ ಹೊಸಪೇಟೆ ಕಡೆಯಿಂದ ಲಾರಿ ನಂ: ಕೆಎ-25/-ಬಿ-5390 ನೇದ್ದರ ಚಾಲಕ ಹಾಗೂ ಕೊಪ್ಪಳದ ಕಡೆಯಿಂದ ಟಿಪ್ಪರ ನಂ: ಕೆಎ-35/9140 ನೇದ್ದರ ಚಾಲಕ ಹೀಗೆ ಎರಡೂ ವಾಹನಗಳ ಚಾಲಕರುಗಳು ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬಂದವರೆ ರಸ್ತೆಯಲ್ಲಿ ಹೊರಟಿದ್ದ ವಹಿದುದ್ದೀನ್ ಇವರ ಮೋಟಾರ ಸೈಕಲ್ ಗಮನಿಸದೇ ಟಕ್ಕರ ಕೊಟ್ಟು ಅಪಘಾತ ಮಾಡಿ ತಮ್ಮ ವಾಹನಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದರಿಂದ ಮೋಟಾರ ಸೈಕಲ್ ಸವಾರ ವಹಿದುದ್ದೀನ್ ಇವರಿಗೆ ತಲೆಗೆ, ಮುಖಕ್ಕೆ, ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ. 

 
Will Smith Visitors
Since 01/02/2008