Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 28, 2017

1] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 252/2017 ಕಲಂ.  341, 323, 354, 504, 506 r/w 34 IPC & The SC/ST (prevention of atrocities) Amendment act-2015 U/s 3 (1) (r), (s), 3 (2) V
ದಿನಾಂಕ:-27-10-2017 ರಂದು ಮದ್ಯಾಹ್ನ 3-15  ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜಯಶ್ರೀ ಗಂಡ ಧೀರಲಾಲ ಜಾದವ್ ವಯಾ-29ವರ್ಷ ಒಂದು ಲಿಖಿತ ದೂರು ನೀಡಿದ್ದುದಿನಾಂಕ:-26-10-2017 ರಂದು ರಾತ್ರಿ 8-20 ಗಂಟೆಯ ಸುಮಾರಿಗೆ ನಮ್ಮ ಚಿಕನ್ ಅಂಗಡಿ ಮುಚ್ಚಿಕೊಂಡು ಮನೆಯ ಕಡೆಗೆ ಹೋಗಬೆನ್ನುವಾಗ ಸಿದ್ದಾಪೂರ ಗ್ರಾಮದ ಶಾಕೀರ್ ತಂದೆ ಅಬ್ದುಲ್ ಹಮೀದ, ಯಾಸೀನ್ ತಂದೆ ಮೋದಿನ್ ಸಾಬ ಇವರು ಇಬ್ಬರು ಬಂದು ಚಿಕನ್ ಕೊಡುವಂತೆ ಕೇಳಿದ್ದರಿಂದ  ನಾನು ಈಗ ರಾತ್ರಿ ತಡವಾಗಿದೆ ಚಿಕನ್ ಖಾಲಿಯಾಗಿದೇ ಅಂತಾ ಅಂದಿದ್ದಕ್ಕೆ ಇಬ್ಬರು ಕೂಡಿ ನಮಗೆ ಚಿಕನ್ ಬೇಕೆ ಬೇಕು ಅಂತಾ ಅಂದು ಶಾಕೀರ್ ಈತನು ಇಲ್ಲಿ ಅಂಗಡಿಯನ್ನು ಸೆಂಟಾ ಹರಿಯಾಕ ಇಟ್ಟಿಯನ ಲೇ ಲಂಬಾಣಿ ಸೂಳೆ ಅಂತಾ ಜಾತಿ ಎತ್ತಿ ಬೈದನು. ನಾನು ಜಾತಿ ಎತ್ತಿ ಬೈಯಬೇಡಿರಿ ಅಂತಾ ಅನ್ನುತ್ತಾ ಮನೆಯ ಕಡೆಗೆ ಹೋಗುತ್ತಿದ್ದಂತೆ ಯಾಸೀನ್ ಈತನು ನನಗೆ ಅಡ್ಡ ಬಂದು ನಿಂತು ಮೈಮೇಲಿನ ಬಟ್ಟೆ ಹಿಡಿದು ಹರಿದು ಕೈಹಿಡಿದು ದಬ್ಬಾಡಿ, ಕೈಯಿಂದ ಕಪಾಳಕ್ಕೆ ಹೊಡೆದಿದ್ದರಿಂದ ನಾನು ರಸ್ತೆಗೆ ಬಿದ್ದೆನು. ಅಷ್ಟರಲ್ಲಿ ಅಲ್ಲಿ ಮನೆಗೆ ಬರುತ್ತಿದ್ದ ಸಲ್ಮಾನ್ ತಂದೆ ಎಮ್ ಎ ಗಣಿ ಈತನು ಪ್ರತ್ಯೇಕ್ಷವಾಗಿ ಘಟನೆಯನ್ನು ನೋಡಿ ಕೆಳಗೆ ಬಿದ್ದ ನನಗೆ ಮೇಲೆತ್ತಿದನು ಅಷ್ಟರಲ್ಲಿ ನನಗೆ ಕರೆದುಕೊಂಡು ಹೋಗಲು ಬರುತ್ತಿದ್ದ ನನ್ನ ಗಂಡ ದೀರುಲಾಲ್ ಮತ್ತು ನಮ್ಮ ಅಣ್ಣ ಜಯರಾಮ ರವರು ಬಂದು ಏನು ಏನು ಅಂತಾ ಕೇಳಿದ್ದಕ್ಕೆ ನನ್ನ ಗಂಡನಿಗೆ ಶಾಕೀರ ಈತನು ದಬ್ಬಾಡಿ ನಾವು ಕೇಳಿದರೆ ಚೀಕನ್ ಕೊಡುವುದಿಲ್ಲಾ ಬೆಳಿಗ್ಗೆ ಬಂದು ನೋಡಿಕೊಳ್ಳುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 158/2017  ಕಲಂ.  143, 147, 447, 427, 323, 354, 354(A)(1)(v), 504, 506 ಸಹಿತ 149 .ಪಿ.ಸಿ
ದಿನಾಂಕ: 27-10-2017 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ನೀಲಮ್ಮ ದೂರಣ್ಣವರ, ಸಾ: ಕಾಟಾಪೂರ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 22-10-2017 ರಂದು ಸಾಯಾಂಕಾಲ 17-00 ಗಂಟೆಗೆ ತಮ್ಮ ಹೊಲಕ್ಕೆ ಹೋದಾಗ ಆರೋಪಿ ಶರಣವ್ವ ತಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಬೆಳೆಯನ್ನು ನಾಶ ಮಾಡಿದ್ದು, ಆಗ ಫಿರ್ಯಾದಿದಾರರು ಹೊಲದಲ್ಲಿ ಯಾಕೆ ಅಡ್ಡಾಡುತ್ತೀರಿ ಅಂತಾ ಕೇಳಿದಾಗ ಸದರಿ ಆರೋಪಿ ಶರಣವ್ವಳು ಅವಾಚ್ಯ ಅಶ್ಲೀಲ ಬೈದಾಡಿದಾಗ, ಉಳಿದ ಆರೋಪಿತರು ಲೇ ಸೂಳೆ ಹಡಸಲಿ ನಿನ್ನ ನೋಡಕೊಳ್ಳಾಕ ನಾವು ಬಂದಿವಿ ನಿನಗ ಮುಗಿಸ್ತೀವಿ ಒಂದ ಕೈ ನೋಡ್ಕೊಂತೀವಿ ಅಂತಾ ತಮ್ಮ ಗುಪ್ತಾಂಗಗಳನ್ನು ಪ್ರದರ್ಶಿಸಿ ಅಣಕ ಮಾಡಿದ್ದಲ್ಲದೇ ಫಿರ್ಯಾದಿಯನ್ನು ಎಳೆದಾಡಿ, ಕೈಯಿಂದ ಹೊಡೆಬಡೆ ಮಾಡಿದ್ದು, ಆಗ ಪಕ್ಕದ ಹೊಲದ ಹನಮವ್ವ ಗಂಡ ಚಂದಪ್ಪ ವಾಲಿಕಾರ ರವರು ಜಗಳ ಬಿಡಿಸಿಕೊಂಡಿದ್ದು ಆಗ ಬಿಟ್ಟು ಹೋಗುವಾಗ ಮತ್ತೆ ಬೈದಾಡುತ್ತಾ ಅವಾಚ್ಯ ಇಲ್ಲಿಗೆ ಮುಗಿಲಿಲ್ಲ ನಿನ್ನ ಒಂದ ಕೈ ನೋಡಕ್ಕೊಂತೀವಿ ಅಂತಾ ಜೀವದ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 159/2017  ಕಲಂ. 87 Karnataka Police Act.
ದಿನಾಂಕ: 27-10-2017 ರಂದು ಮಧ್ಯಾಹ್ನ 14-40 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶರಣವ್ವ ಗಂಡ ಮುತ್ತಪ್ಪ ದೂರಣ್ಣವರ್, ಸಾ: ಕಾಟಾಪೂರ ರವರು ಫಿರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ದಿನಾಂಕ: 22-10-2017 ರಂದು ಸಾಯಾಂಕಾಲ 17-00 ಗಂಟೆಗೆ ತಮ್ಮ ಹೊಲಕ್ಕೆ ಹೋದಾಗ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು  ಪಿರ್ಯಾದಿ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ,ಅವಾಚ್ಯ ಶಬ್ದಗಳಿಂದ ನಿಂದಿಸಿ  ಉಳಿದ ಆರೋಪಿತರು ಲೇ ಸೂಳೆ ಹಡಸಲಿ ನಿನ್ನ ಹಡತಿನಿ, ನೋಡಕೊಳ್ಳಾಕ ನಾವು ಬಂದಿವಿ ನಿನಗ ಮುಗಿಸ್ತೀವಿ ಒಂದ ಕೈ ನೋಡ್ಕೊಂತೀವಿ ಅಂತಾ,ದೂರಪ್ಪ  ತನು ಫಿರ್ಯಾದಿಯನ್ನು ಎಳೆದಾಡಿ,ಸೀರೆಯನ್ನು ಬಿಚ್ಚಿ,ಕೆಳಕ್ಕೆ ಹಾಕಿ ಪಿರ್ಯಾದಿಯ ಮರ್ಮಾಂಗಕ್ಕೆ ಒದ್ದನು ಹಾಗೂ ನೀಲವ್ವಳು ಇವಳನ್ನು ಬಿಡಬ್ಯಾಡ ಮಾನಭಂಗ ಮಾಡು ಅಂತಾ ಪ್ರಚೊದಿಸಿದಳು ನಂತರ ಉಳಿದ ಆರೋಪಿತರು, ಕೈಯಿಂದ ಹೊಡೆಬಡೆ ಮಾಡಿದ್ದು, ಆಗ ಪಿರ್ಯಾದಿಯ ಹೊಲಕ್ಕೆ ಕೋಲಿ ಕೆಲಸಕ್ಕೆ ಬಂದ ಬಸಪ್ಪ ತಂದೆ ಕಳಕಪ್ಪ ಹೂಲಗೇರಿ ಹಾಗೂ ಪ್ರವೀಣ ಅಂಗಡಿ ಸೇರಿ ಜಗಳ ಬಿಡಿಸಿಕೊಂಡಿದ್ದು ಆಗ ಬಿಟ್ಟು ಹೋಗುವಾಗ ಮತ್ತೆ ಬೈದಾಡುತ್ತಾ ಅವಾಚ್ಯ ವಾಗಿ ಬೈದಾಡಿ ಇಲ್ಲಿಗೆ ಮುಗಿಲಿಲ್ಲ ನಿನ್ನ ಒಂದ ಕೈ ನೋಡಕ್ಕೊಂತೀವಿ ಅಂತಾ ಜೀವದ ಬೆದರಿಕೆ ಹಾಕಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 242/2017 ಕಲಂ. 279, 338 ಐ.ಪಿ.ಸಿ:.
ದಿ: 27-10-2017 ರಂದು 00-45 ಎ.ಎಮ್ ಕ್ಕೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ: 26.10.2017 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಮಗ ಫಕೀರಪ್ಪ ಇವರ ಮೋಟಾರ ಸೈಕಲ್ ನಂ: ಕೆಎ-36/ಡಬ್ಲ್ಯೂ-1361 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಿಂದಾ ವಾಪಾಸ್ ಊರಿಗೆ ಅಂತಾ ಕೊಪ್ಪಳ-ಗಂಗಾವತಿ ರಸ್ತೆಯ ಬಸಾಪೂರ ದಾಟಿ ಕೊಟ್ರಬಸಯ್ಯ ಇವರ ಇಟ್ಟಂಗಿಭಟ್ಟಿ ಹತ್ತಿರ ಹೋಗುವಾಗ ರಸ್ತೆಯ ಕರ್ವಿಂಗ್ ದಲ್ಲಿ ಫಿರ್ಯಾದಿಯ ಮಗನು ಹಾಗೂ ಅದೇ ಸಮಯಕ್ಕೆ ಎದುರುಗಡೆ ಗಿಣಿಗೇರಿ ಕಡೆಯಿಂದ ಬಂದ ಇನ್ನೊಂದು ಮೋಟಾರ ಸೈಕಲ್ ನಂ: ಕೆಎ-36/ಇಎಫ್-5467 ನೇದ್ದರ ಚಾಲಕ ಬಸಪ್ಪ ಸುಕಾಲಪೇಟೆ ಹೀಗೆ ಇಬ್ಬರೂ ಚಾಲಕರು ತಮ್ಮ ತಮ್ಮ ವಾಹನಗಳನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಹೋಗುವಾಗ ಒಂದಕ್ಕೊಂದು ಟಕ್ಕರ ಕೊಟ್ಟು ಅಪಘಾತ ಮಾಡಿಕೊಂಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿ ಮತ್ತು ಎರಡೂ ಮೋಟಾರ ಸೈಕಲ್ ಚಾಲಕರುಗಳಿಗೆ ಭಾರಿಪೆಟ್ಟುಗಳಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 243/2017 ಕಲಂ. 279, 338 ಐ.ಪಿ.ಸಿ:.

ದಿ: 27-10-2017 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ದಿ:14-10-2017 ರಂದು ರಾತ್ರಿ 9-15 ಗಂಟೆಗೆ ಆಪಾದಿತರಾದ ಪಿ.ಆರ್. ಕುಲಕರ್ಣಿ ಇವರು ತಮ್ಮ ಮೋಟಾರ ಸೈಕಲ್ ನಂ: ಕೆಎ-37/ಇಸಿ-1539 ನೇದ್ದನ್ನು ಗಿಣಿಗೇರಿ ಕಡೆಯಿಂದ ಕೊಪ್ಪಳದ ಕಡೆಗೆ ಅಂತಾ ಬರುವಾಗ ಬಸಾಪೂರ ದಾಟಿ ತಮ್ಮ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬರುವಾಗ ವಾಹನ ನಿಯಂತ್ರಿಸದೇ ಅಪಘಾತ ಮಾಡಿಕೊಂಡು ಬಿದ್ದು ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಸದರಿ ಪಿ.ಆರ್. ಕುಲಕರ್ಣಿ ಮೋಟಾರ ಸೈಕಲ್ ಸವಾರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ನೀಡಿದ ದೂರಿನ ಸಾರಾಂಶದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, October 27, 2017

1] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 294/2017 ಕಲಂ. 78(3) Karnataka Police Act.
ದಿನಾಂಕ 25-10-2017 ರಂದು ರಾತ್ರಿ 9-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಗೂ ಆರೋಪಿತರನ್ನು ಹಾಜರು ಪಡಿಸಿದ್ದು ಸಾರಾಂಶವೆನಂದರೆ ಕುಷ್ಟಗಿ ಪಟ್ಟಣದ ಗೌರಿ ನಗರದ ಮಲ್ಲಿಕಾರ್ಜುನ ತಳಕಲ್ ರವರ ಮನೆಯ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮೀ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿ ಆರೋಪಿ  ಶಂಕ್ರಪ್ಪ ತಂದೆ ರಾಜಪ್ಪ ಈಳಿಗೇರ ವಯಾ: 46 ವರ್ಷ ಜಾತಿ: ಈಳಿಗೇರ ಉ: ಡ್ರೈವರ್ ಕೆಲಸ ಸಾ: ವಣಗೇರಿ ಹಾಲಿ ವಸ್ತಿ: ಗೌರಿ ನಗರ ಕುಷ್ಟಗಿ ಇತನನ್ನು ಹಾಗೂ ಜೂಜಾಟದ ಒಟ್ಟು ಹಣ 3500=00 ರೂ, ಒಂದು ಬಾಲ್ ಪೆನ್ನು, ಒಂದು ಮಟಕಾ ಚೀಟಿ ಹಾಗೂ ಒಂದು ಮೊಬೈಲ್ ನ್ನು ಜಪ್ತಿ ಮಾಡಿಕೊಂಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ  ಪೊಲೀಸ್  ಠಾಣೆ  ಗುನ್ನೆ ನಂ. 240/2017 ಕಲಂ. 279, 304(ಎ) ಐ.ಪಿ.ಸಿ:
ದಿ:26-10-2017 ರಂದು ಬೆಳಿಗ್ಗೆ 08-10 ಗಂಟೆಗೆ ಹಲಿಗೇರಿ ಸಮೀಪ ವಾಹನ ಅಪಘಾತವಾದ ಬಗ್ಗೆ ಬಾತ್ಮಿ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಭರಮಗೌಡ ಪಾಟೀಲ. ಸಾ: ಗೌರಿಅಂಗಳ ಕೊಪ್ಪಳ ಇವರ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ದಿ:26-10-2017 ರಂದು 04-30 ಎ.ಎಮ್ ದಿಂದಾ ಬೆಳಿಗ್ಗೆ 07-00 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಚಿಕ್ಕಪ್ಪನ ಮಗ ಪ್ರಭು ತಂದೆ ಬಸನಗೌಡ ಪಾಟೀಲ. ಸಾ: ಕೊಪ್ಪಳ ಇವರು ಗದಗ ಕಡೆಯಿಂದ ತಮ್ಮ ಕಾರ್ ನಂ: ಕೆಎ-37/ಎಮ್-9120 ನೇದ್ದನ್ನು ಓಡಿಸಿಕೊಂಡು ವಾಪಾಸ್ ಕೊಪ್ಪಳದ ಕಡೆಗೆ ಅಂತಾ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಕಾವೇರಿ ಪೆಟ್ರೋಲಬಂಕ್ ಸಮೀಪ ತಮ್ಮ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬರುವಾಗ ತನ್ನ ವಾಹನವನ್ನು ನಿಯಂತ್ರಿಸದೇ ಅಪಘಾತ ಮಾಡಿಕೊಂಡು ಬಿದ್ದಿದ್ದರಿಂದ ಆತನಿಗೆ ಭಾರಿಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಅಳವಂಡಿ ಪೊಲೀಸ್  ಠಾಣೆ  ಗುನ್ನೆ ನಂ. 173/2017 ಕಲಂ. 87 Karnataka Police Act.
ದಿನಾಂಕ: 26-10-2017 ರಂದು ಮಧ್ಯಾಹ್ನ 1-45 ಗಂಟೆಗೆ ಠಾಣಾ ವ್ಯಾಪ್ತಿಯ ಬೇಟಗೇರಿ ಗ್ರಾಮದ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ಪಿ.ಎಸ್.ಐ ರವರು ಸಿಬ್ಬಂದಿ ಸಮೇತ ದಾಳಿ ಮಾಡಿದ್ದು, 05 ಜನ ಆರೋಪಿತರು ಸಿಕ್ಕಿದ್ದು, ದಾಳಿಯಲ್ಲಿ ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ ರೂ. 730=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟಿಕ್ ಬರಕಾವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಬಂದು ಐದು ಜನ ಆರೋಪಿತರೊಂದಿಗೆ ಮೂಲ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಹಾಜರುಪಡಿಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
4] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 157/2017 ಕಲಂ. 32, 34 Karnataka Excise Act.

ದಿನಾಂಕ: 26-10-2017 ರಂದು ಸಾಯಂಕಾಲ 4-10 ಗಂಟೆಗೆ ಠಾಣೆಯಲ್ಲಿದ್ದಾಗ ಕಬ್ಬರಗಿ ಗ್ರಾಮದ ಕಾಟಾಪೂರ ರಸ್ತೆಯ ಕಪಾಟಿನ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನೀಲಮ್ಮ ಗುರಿಕಾರ ಸಾ: ಕಬ್ಬರಗಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಪಿ.ಎಸ್.ಐ. ರವರಿಗೆ ಬಂದ ಮೇರೆಗೆ ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಪಿ.ಸಿ-28, ಪಿ.ಸಿ-256, ಮ.ಪಿ.ಸಿ-241  ರವರೊಂದಿಗೆ ಠಾಣೆಯಿಂದ ಹೊರಟು ಕಬ್ಬರಗಿ ಗ್ರಾಮದ  ಹತ್ತಿರ ಸಾಯಂಕಾಲ 4-40 ಗಂಟೆಗೆ ತಲುಪಿ ಸಾಯಂಕಾಲ 4-45 ಗಂಟೆಗೆ ದಾಳಿಮಾಡಿದಾಗ ನೀಲಮ್ಮ ಗುರಿಕಾರ ಇವಳು ಸಿಕ್ಕಿಬಿದಿದ್ದು ಅವಳ ಹತ್ತಿರ 1] 180 .ಎಂ.ಎಲ್.ಅಳತೆಯ 6 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 337-62 ರೂಪಾಯಿಗಳು ಆಗುತಿದ್ದು. 2] 180 .ಎಂ.ಎಲ್.ಅಳತೆಯ 11 ಟೆಟ್ರಾ ಪಾಕೇಟಗಳು OLD TAVAREN ಪ್ರತಿಯೊಂದಕ್ಕೆ ಎಂ.ಆರ್.ಪಿ. 68-56 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 754-16 3] 180 ml THREE ACES WHISKY mÉmÁæ MlÄÖ 9 ¥ÁPÉÃlUÀ¼ÀÄ ¥ÀæwAiÉÆAzÀPÉÌ gÀÆ: 47-75 gÀÆ¥Á¬ÄUÀ¼ÀAvÉ MlÄÖ 729-75 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 500-00 ರೂಪಾಯಿ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Wednesday, October 25, 2017

APC written exam fixed on 29-10-2017




1] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 155/2017 ಕಲಂ. 379 ಐ.ಪಿ.ಸಿ:
ದಿನಾಂಕ: 21-10-2015 ರಂದು ರಾತ್ರಿ 10-00 ಗಂಟೆಗೆ ನಾನು ಊಟ ಮಾಡಿ ನಮ್ಮ ಮೋಟಾರ ಸೈಕಲನ್ನು ತೆಗೆದುಕೊಂಡು ನಮ್ಮ ಪಂಚರ ಶಾಪಗೆ ಹೋಗಿ ಶಾಪ್ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿ ಹ್ಯಾಂಡಲಾಕ ಮಾಡಿ ನಾನು ಮಲಗಿಕೊಂಡಿದ್ದು, ನಂತರ ದಿನಾಂಕ: 22-10-2017 ರಂದು ಬೆಳಗಿನ ಜಾವ 2-00 ಗಂಟೆಗೆ ಮೂತ್ರ ವಿಸರ್ಜನೆ ಮಾಡಲು ಎದ್ದಾಗ ನಮ್ಮ ಮೋಟಾರ್ ಸೈಕಲ್ ಇದ್ದು, ನಂತರ ಮೂತ್ರ ವಿಸರ್ಜನೆ ಮಾಡಿ ಮಲಗಿ ಬೆಳಗಿನ ಜಾವ 5-30 ಗಂಟೆಗೆ ಎದ್ದು ನೋಡಲು ನಮ್ಮ ಮೋಟಾರ್ ಸೈಕಲ್ ಇರಲಿಲ್ಲ. ಆಗ ನಾನು ಅಕ್ಕಪಕ್ಕದಲ್ಲಿ ಹುಡುಕಾಡಿ, ನಮ್ಮ ಅಣ್ಣ ಅನ್ವರನನ್ನು ವಿಚಾರಿಸಲು ತೆಗೆದುಕೊಂಡು ಹೋಗಿರುವುದಿಲ್ಲ ಅಂತಾ ತಿಳಿಸಿದರು. ನಂತರ ಅಲ್ಲಿ ಇಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೂ ನಮ್ಮ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲ. ನಮ್ಮ ಮೋಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಮೋಟಾರ್ ಸೈಕಲ್ ವಿವರ 1] ಕಪ್ಪು ಮತ್ತು ಸಿಲ್ವರ ಬಣ್ಣದ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರ್ ಸೈಕಲ್ ನಂ: ಕೆ.-37/ಇಎ-2373, 2] ಚೆಸ್ಸಿ ನಂ: MBLHA10BFFHB15888 3] ಇಂಜನ್ ನಂ: HA10ERFHB30227 ಇದರ ಅಂದಾಜು ಕಿಮ್ಮತ್ತು 35,000/- ರೂಪಾಯಿ ಆಗುತ್ತಿದ್ದು, ಅದರ ಡೂಮಿಗೆ ತಲ್ವಾರ ರೇಡಿಯಮ್ ಕಟಿಂಗ್ ಚಿತ್ರ ಅಂಟಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 239/2017 ಕಲಂ. 379 ಐ.ಪಿ.ಸಿ:

ದಿನಾಂಕ 24-10-2017 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ ಕುಮಾರ.ಪಿ ತಂದೆ ಪಟ್ಟಾಬಿರಾಮಣ್ಣ  ವಯಾ: 40 ವರ್ಷ ಜಾ: ಬಲಿಜ ಉ: ಗೃಹ ರಕ್ಷಕ ಸಾ: ಅಂಗಡಿ ಸಂಗಣ್ಣ ಕ್ಯಾಂಪ, ಗಂಗಾವತಿ ರವರು ಫಿರ್ಯಾದಿ ನೀಡಿದ್ದು    ದಿ: 30-09-2017  ರಂದು ಮಧ್ಯರಾತ್ರಿ 12-30  ಗಂಟೆಯಿಂದ ಬೆಳಗಿನ 6-00 ಗಂಟೆಯ ಮಧ್ಯದ ಅವಧಿಯಲ್ಲಿ. ಯಾರೋ ಕಳ್ಳರು ಗಂಗಾವತಿ ಕೆಇಬಿ ಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ  ಪಿರ್ಯಾಧಿದಾರರ ಹೊಂಡ್ ಸಿಬಿಶೈನ್ ಸೈಕಲ್ ಮೋಟಾರ ನಂ ಕೆ,ಎ 37 ವಿ 5037  ಚಾಸ್ಸಿ ನಂ ME4JC36JBD7325823 ಇಂಜಿನ್ ನಂ. JC36E77500151 ಇದ್ದು  ಕಪ್ಪು ಬಣ್ಣದ್ದು ಇರುತ್ತದೆ. ಅಂ.ಕಿ 30,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Monday, October 23, 2017

1] ಹನುಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 153/2017 ಕಲಂ. 87 Karnataka Police Act.
ಪಿ.ಎಸ್.. ಹಾಗೂ ಸಿಬ್ಬಂದಿಯವರು ಇಂದು 05-25 ಗಂಟೆಗೆ ಠಾಣೆಯಲ್ಲಿದ್ದಾಗ ಹನಮಸಾಗರ ಚೆನ್ನಮ್ಮ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನೇದ್ದರಲ್ಲಿ ಹೊರಟು ಹನಮಸಾಗರದ ಚೆನ್ನಮ್ಮ ಸರ್ಕಲ ಹತ್ತಿರ 5-40 ಗಂಟೆಗೆ ತಲುಪಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಚಾಲಕನನ್ನು ಜೀಪ್ ಹತ್ತಿರ ಬಿಟ್ಟು. ಅಲ್ಲಿಯೇ ಕೀರಾಣಿ ಅಂಗಡಿಯ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಸೆನ್ನಮ್ಮ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 9 ಜನರು ಆರೋಪಿತರು ಸಿಕ್ಕಿಬಿದಿದ್ದು ಅವರಿಂದ ಸದರಿ ಆಪಾದಿತರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳು ಹಾಗೂ 11070/- ನಗದು ಒಂದು ಪ್ಲಾಸ್ಟಿಕ್ ಬರ್ಕಾ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ. 248/2017 ಕಲಂ. 87 Karnataka Police Act.

ದಿನಾಂಕ 22-10-2017 ರಂದು ರಾತ್ರಿ 9-30 ಗಂಟೆಯಿಂದ 10-30 ಗಂಟೆಯ ಅವಧಿಯಲ್ಲಿ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನ ಚಿತ್ರಮಂದಿರದ ಮುಂದುಗಡೆ   ಲೈಟಿನ ಬೆಳಕಿನಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಂದರ-ಬಾಹರ ಎಂಬ ನಸೀಬದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಆರೋಪಿತರ ಮೇಲೆ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಹಾಗೂ ಪಂಚರ ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ 05  ಜನ ಸಿಕ್ಕಿಬಿದ್ದಿದ್ದು ಉಳಿದವರು ಓಡಿ ಹೋಗಿದ್ದು, ಸದ್ರಿ ಸಿಕ್ಕ ಆರೋಪಿತರ ವಶದಿಂದ ರೂ.9110/- ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.

 
Will Smith Visitors
Since 01/02/2008