ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ. 101/2015 ಕಲಂ 279, 338 ಐ.ಪಿ.ಸಿ:.
ದಿನಾಂಕ 04.05.2015 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ
ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕೊಪ್ಪಳ-ಕುಷ್ಟಗಿ ರಸ್ತೆ ಟಣಕನಕಲ್ ಗ್ರಾಮದ ಹತ್ತಿರ
ಗಾಳೇಮ್ಮ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಆರೋಪಿತನಾದ ಮಹಾಂತೇಶ ತನ್ನ ಮೋ,ಸೈ ನಂ ಕೆ.ಎ-53/ಜೆ-2278
ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು
ಬಂದು ಮೋ.ಸೈ ಮೇಲೆ ತನ್ನ ನಿಯಂತ್ರಣ ಸಾಧಿಸದೇ ಸ್ಕೀಡ್ ಆಗಿ ಕೆಳಗೆ ಬಿದ್ದು ಭಾರಿ ಸ್ವರೂಪದ ಗಾಯಗೊಂಡಿದ್ದು
ಇರುತ್ತದೆ. ಕಾರಣ ಆರೋಪಿ ಮಹಾಂತೇಶ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ
ಪಿರ್ಯಾದಿ ಸಾರಾಂಶ ಇರುತ್ತದೆ.
2) ಸಂಚಾರಿ ಪೊಲೀಸ್ ಠಾಣೆ
ಗಂಗಾವತಿ ಗುನ್ನೆ ನಂ. 18/2015 ಕಲಂ 279, 338 ಐ.ಪಿ.ಸಿ:
ದಿನಾಂಕ 05-05-2015 ರಂದು
ರಾತ್ರಿ 12-05 ಗಂಟೆಗೆ ಪಿರ್ಯಾಧಿದಾರನು ಲಾರಿಯ ಹತ್ತಿರದಲ್ಲಿ ನಿಂತುಕೊಂಡು ರಿವರ್ಸ್
ತೆಗೆದುಕೊಳ್ಳಲು ಹೇಳುತ್ತಿರುವಾಗ ಸದರಿ ಲಾರಿ ಚಾಲಕ ಆರೊಪಿತನು ತನ್ನ ಲಾರಿ ನಂ ಕೆ.ಎ25-9090 ನೇದ್ದನ್ನು
ನಿರ್ಲಕ್ಷತನದಿಂದ ಒಮ್ಮೆಲೇ ಹಿಂದಕ್ಕೆ ಜೊರಾಗಿ ಲಾರಿಯನ್ನು ರಿವರ್ಸ್ ತೆಗೆದುಕೊಂಡು ಲಾರಿಯ
ಹಿಂದೆ ನಿಂತಿದ್ದ ಪಿರ್ಯಾಧಿದಾರನಾದ ಲಾರಿಯ ಕ್ಲೀನರ್ ಈತನಿಗೆ ಟಕ್ಕರ್ ಕೊಟ್ಟು ಅಪಘಾತ
ಮಾಡಿದ್ದರಿಂದ ಲಾರಿಯ ಹಿಂದಿನ ಎಡ ಗಾಲಿಗೆ ಬಿದ್ದಾಗ ಲಾರಿಯ ಗಾಲಿಯು ಪಿರ್ಯಾಧಿದಾರನ ಎಡಕಾಲಿನ
ಮೇಲೆ ಹಾಯ್ದಿದ್ದರಿಂದ ಎಡಕಾಲಿಗೆ ಭಾರೀ ರಕ್ತ ಗಾಯ ಮತ್ತು ಒಳಪೆಟ್ಟಾಗಿದ್ದು ಇರುತ್ತದೆ. ಕಾರಣ
ಸದರಿ ಆರೋಪಿತನ ವಿರುದ್ದ ಠಾಣಾ ಗುನ್ನೆ ನಂ 18/2015 ಕಲಂ 279, 338 ಐಪಿಸಿ
ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿಡ್ಡು ಅದೆ.
0 comments:
Post a Comment