ದಿನಾಂಕ: 21-08-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ
ಶ್ರೀಮತಿ ಕಮಲಾ ಗಂಡ ರುದ್ರಪ್ಪ ಪಲ್ಲೇದ ವಯ: 32 ವರ್ಷ, ಜಾತಿ; ಲಿಂಗಾಯತ, ಉ: ಮನೆಗೆಲಸ, ಸಾ: ಕುಡ್ಲೂರು.
ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಆರೋಪಿ
ಕಂಟೇಪ್ಪನು ಫಿರ್ಯಾದಿದಾರರ ಗಂಡ ರುದ್ರಪ್ಪನಿಗೆ ಕುಲಸ್ಥರಿದ್ದು ಫಿರ್ಯಾದಿದಾರರ ಗಂಡ ರುದ್ರಪ್ಪನು
ಕುಂಟೆಪ್ಪನ ಕಡೆಯಿಂದ 1,42,000=00 ರೂ ಗಳನ್ನು ಕೈಗಡವಾಗಿ ಪಡೆದುಕೊಂಡಿದ್ದು, ಆದರೆ ಸದರಿ ಕುಂಟೆಪ್ಪನು
ಫಿರ್ಯಾದಿದಾರರ ಗಂಡನಿಗೆ ಮೋಸ ಮಾಡಿ ಕುಷ್ಟಗಿಗೆ ಕರೆದುಕೊಂಡು ಹೋಗಿ ತಮ್ಮ ಮಕ್ಕಳ ಜಾತಿ ಪ್ರಮಾಣ ಪತ್ರ
ತೆಗೆಸಿಕೊಡುತ್ತೆನೆ ಅಂತಾ ಹೇಳಿ ಜಮೀನು ಖರೀದಿ ಕಾರಾರು ಪತ್ರವನ್ನು ಬರೆಯಿಸಿಕೊಂಡಿರುತ್ತಾನೆ. ದಿನಾಂಕ:
17-08-2016 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿದಾರರು, ಅವರ ಗಂಡ ರುದ್ರಪ್ಪ, ಮೈದುನ ಕಳಕಪ್ಪ,
ಭಾವನ ಹೆಂಡತಿ ನೀಲಮ್ಮ ಹಾಗು ಮಕ್ಕಳು ಇದ್ದಾಗ ಆರೋಪಿ ಕಂಟೇಪ್ಪನು ಫಿಯರ್ಾದಿದಾರರ ಮನೆಗೆ ಬಂದು ರುದ್ರಪ್ಪನಿಗೆ
ನೀನು ರೂ. 6,27,000/- ಗಳಿಗೆ ಬಡ್ಡಿದರ 100 ರೂಪಾಯಿಗೆ ತಿಂಗಳಿಗೆ 5 ರೂಪಾಯಿ ಬಡ್ಡಿಯಂತೆ ಸೇರಿಸಿ
ನನಗೆ ದುಡ್ಡು ವಾಪಾಸು ಕೊಡಬೇಕು ಇಲ್ಲವಾದಲ್ಲಿ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂದು ಬೆದರಿಕೆ
ಹಾಕಿ ಹೋಗಿರುತ್ತಾನೆ. ಈ ಘಟನೆಗೆ ಹೆದರಿಸಿಕೊಂಡು ಫಿರ್ಯಾದಿದಾರರ ಗಂಡ ರುದ್ರಪ್ಪ ದಿನಾಂಕ:
18-08-2016 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕೊಪ್ಪಳರವರ ಮುಂದೆ ವಿಷ ಸೇವಿಸಿರುತ್ತಾನೆ. ಸದ್ಯ ಫಿರ್ಯಾದಿದಾರರ
ಗಂಡ ಕೀಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕಾರಣ ಸದರಿಯವನ ವಿರುದ್ಧ ಸೂಕ್ತ
ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಗಣಕೀಕೃತ ಫಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ
ದಾಖಲು ಮಾಡಿ ತನಿಖೆ ಕೈಕೊಂಡಿದೆ.
Our Commitment For Safe And Secure Society

This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Monday, August 22, 2016
Subscribe to:
Post Comments (Atom)
0 comments:
Post a Comment