Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, January 23, 2017

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 07/2017 ಕಲಂ : 87 Karnataka Police Act.
ದಿನಾಂಕ: 22-01-2017 ರಂದು ಸಾಯಂಕಾಲ 5-05 ಗಂಟೆಯ ಸುಮಾರಿಗೆ ಚಿಕ್ಕಬನ್ನಿಗೋಳ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 5 ಜನರು ಸಿಕ್ಕಿ ಬಿದ್ದಿದ್ದು 02 ಜನ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3570=00 ರೂಪಾಯಿ ನಗದು ಹಣ,52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಬರ್ಕಾ ಸಿಕ್ಕಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 11/2017 ಕಲಂ : 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ 22-01-2017 ರಂದು 06-40 ಪಿಒ.ಎಂ.ಸುಮಾರಿಗೆ ಪಿರ್ಯಾದುದಾರರು ಬೂದಗುಂಪಾ ಸರ್ವಿಸ್ ತಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯ ಮೇಲೆ ಪಿರ್ಯಾದುದಾರರ ಅಳಿಯನಾದ ಗಾದಿಲಿಂಗಪ್ಪನು ತನ್ನ ಮೋ.ಸೈ ನಂ,ಕೆ,,37/ಇ.ಸಿ.1762 ನೇದ್ದರಲ್ಲಿ ಹೋಗುತ್ತಿರುವಾಗ ಟಾಟಾ ಮ್ಯಾಜಿಕ ವಾಹನ ನಂ.ಕೆ.ಎ.48/5454 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಅಳಿಯನ ಮೋ.ಸೈ.ಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಪಿರ್ಯಾದುದಾರರ ಅಳಿಯನು ಮೋ.ಸೈ. ಸಮೇತವಾಗಿ ಕೆಳಗೆಬಿದ್ದಿದ್ದರಿಂದ ತಲೆಗೆಗ,ಮುಖಕ್ಕೆ ಬಾರಿ ರಕ್ತಯವಾಗಿದ್ದು ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಾಗ ಮೃತಪಟ್ಟರುತ್ತಾನೆ, ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 06/2017 ಕಲಂ : 337, 338 ಐ.ಪಿ.ಸಿ:.

ದಿನಾಂಕ: 22.01.2017 ರಂದು ರಾತ್ರಿ 9:15 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕೊಪ್ಪಳದಿಂದ ಎಮ್.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಪರಿಶೀಲಿಸಿ ಗಾಯಾಳು ಹೇಳಿದಂತೆ ಬರೇದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ: 22.01.2017 ರಂದು ರಾತ್ರಿ 8:00 ಗಂಟೆಗೆ ಫಿರ್ಯಾದಿದಾರರು ಹಾಗೂ ಅವರ ಮಗಳು ಮತ್ತು ಸಂಭಂದಿಕರು ಕೂಡಿಕೊಂಡು ಕೊಪ್ಪಳದ ಶ್ರೀ ಗವಿ ಮಠದ ಜಾತ್ರೆಯಲ್ಲಿ ಹಾಕಿದ ಗಾಲಿ ತೊಟ್ಟಿಲಿನಿಂದ ಕೆಳಗೆ ಇಳಿಯುತ್ತಿರುವಾಗ ಅದರ ಚಾಲಕ ಮತ್ತು ಅದರ ಮಾಲೀಕರು ಫಿರ್ಯಾದಿದಾರರು ಹಾಗೂ ಅವರ ಮಗ ತೊಟ್ಟಿಲಿನಿಂದ ಕೆಳಗೆ ಇಳಿಯುವುದನ್ನು ಗಮನಿಸದೇ ಒಮ್ಮೇಲೆ ತಿರುಗಿಸಿದ್ದರಿಂದ ಅವರು ತೊಟ್ಟಿಲಿನಿಂದ ಕೆಳಗೆ ಬಿದ್ದು ಸಾದಾ ಮತ್ತು ಭಾರಿಗಾಯಗೊಂಡಿದ್ದು ಇರುತ್ತದೆ. ಕಾರಣ ಸದರಿ ಗಾಲೀಯ ಚಾಲಕ ಮತ್ತು ಮಾಲೀಕರು, ಆಡಳಿತ ಮಂಡಳಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008