1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 190/2017 ಕಲಂ. 20 (b) (ii) (A) NDPS act 1985:.
ದಿನಾಂಕ:- 04-07-2017 ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.
ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ
ವ್ಯಾಪ್ತಿಯ ಬಸಾಪಟ್ಟಣ ಗ್ರಾಮದಲ್ಲಿ ದ್ಯಾಮಮ್ಮ ಗುಡಿ ಹತ್ತಿರ ಒಂದು ಮನೆಯ ಮುಂದೆ ಸಾರ್ವಜನಿಕರಿಗೆ
ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ. ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ಮಾನ್ಯ
ತಹಸೀಲ್ದಾರ ಗಂಗಾವತಿ ಹಾಗೂ ಸಿಬ್ಬಂದಿಯವರಾದ ಸಿ.ಹೆಚ್.ಸಿ. 173, 191, ಸಿ.ಪಿ.ಸಿ. 364,
354 ಎ.ಪಿ.ಸಿ. 15, ರವರು ಹಾಗೂ ಪಂಚರನ್ನು ಕರೆದುಕೊಂಡು ಹೋಗಿ ನೋಡಲು ರಸ್ತೆಯಲ್ಲಿ ಒಂದು ಮನೆಯ ಮುಂದೆ
ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಪೇಪರ ಚೀಟಿಗಳನ್ನು ಕೊಡುತ್ತಿದ್ದನು. ನಾವು ನೋಡಿ
ಸಂಶಯ ಬಂದು ಇಂದು ಮದ್ಯಾನ್ಹ 03-30 ಗಂಟೆ ಸುಮಾರಿಗೆ ಎಲ್ಲರು ಕೂಡಿಕೊಂಡು ದಾಳಿ ಮಾಡಿ ಸಾರ್ವಜನಿಕರು
ಓಡಿ ಹೋಗಿದ್ದು, ಚೀಟಿ ಕೊಡುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಚಾರಿಸಲು ವಿರುಪಣ್ಣ ತಂದೆ
ಹನಮಂತ ರಾಂಪುರ ವಯಾ 55 ವರ್ಷ, ಜಾ. ಕುರುಬರು ಸಾ. ದ್ಯಾಮಮ್ಮ ಗುಡಿ ಹತ್ತಿರ ಬಸಾಪಟ್ಟಣ ಎಂದು ತಿಳಿಸಿದ್ದು
ಅವನ ಹತ್ತಿರ ಗಾಂಜಾ ಇದ್ದ ಎರಡು ಚೀಟಿಗಳು ಸಿಕ್ಕಿದ್ದು ಮತ್ತು ತಮ್ಮ ಮನೆಯ ಮುಂದೆ ಮೂಲೆಯಲ್ಲಿ ಒಂದು
ಪ್ಲಾಸ್ಟಿಕ ಚೀಲದಲ್ಲಿದ್ದ ಗಾಂಜಾವನ್ನು ತೋರಿಸಿದ್ದು ಇದನ್ನು ಪೇಪರದಲ್ಲಿ ಸಣ್ಣ ಸಣ್ಣ ಚೀಟಿಗಳನ್ನು
ಮಾಡಿ ಮಾರಾಟ ಮಾಡುತ್ತೇನೆ ಎಂದು ತಿಳಿಸಿದನು. ನಂತರ ತೂಕ ಮಾಡಿಸಲಾಗಿ 350 ಗ್ರಾಂ. ಗಾಂಜಾ ಅಂದಾಜ
ಕಿಮ್ಮತ್ತು ರೂ. 1000=00 ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 141/2017 ಕಲಂ. 78(3) Karnataka Police Act.
ದಿನಾಂಕ:-04-07-2017 ರಂದು
ಸಂಜೆ 7-00 ಗಂಟೆಗೆ
ಕಾರಟಗಿಯ ಹಳೇ ಬಸ್ ನಿಲ್ದಾಣದ ಹತ್ತಿರ ಗುರುಪ್ರಸಾದ್ ಹೋಟೆಲ್ ಮುಂದೆ ಗಂಗಾವತಿ-ಸಿಂಧನೂರ
ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ನಮೂದು ಮಾಡಿದ ಆರೋಪಿತನು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದಾಗ್ಗೆ ಪಂಚರ ಸಮಕ್ಷಮದಲ್ಲಿ ಯಲ್ಲಪ್ಪ ಕಟ್ಟಿಮನಿ ಪಿ.ಎಸ್.ಐ ರವರು ಮತ್ತು ಸಿಬ್ಬಂದಿಯವರು ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದ ಆರೋಪಿತನಿಂದ ರೂ. 3240=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು
ಇರುತ್ತದೆ. ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 73/2017 ಕಲಂ. 87 Karnataka Police Act.
ದಿನಾಂಕ:-03.07.2017 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ಕುದರಿಮೋತಿ
ಗ್ರಾಮದ ಪಂಚಾಯತಿ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ
ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 05
ಜನ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 500=00 ರೂ ನಗದು ಹಣ
ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
4] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ. 32, 34 Karnataka Excise Act.
ದಿನಾಂಕ: 04-07-2017 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ
ಆರೋಪಿತನು ಬಿಸರಳ್ಳಿ ಗ್ರಾಮದಲ್ಲಿ ಬರುವ ಗಾಂಧಿ ಸರ್ಕಲ್ದಿಂದ ಬಜಾರ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ
ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಮಧ್ಯವನ್ನು ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿ
ಮತ್ತು ದಾಖಲಾತಿ ಇಲ್ಲದೇ ಮಧ್ಯವನ್ನು ಮಾರಾಟ ಮಾಡುತ್ತಿದ್ದಾಗ, ಫಿರ್ಯಾದಿದಾರರು ತಮ್ಮ ಸಿಬ್ಬಂದಿ
ಮತ್ತು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ 1] 8 P M WHISKY 180 ML ನ 4 ಟೆಟ್ರಾ ಪಾಕೇಟ್ಗಳು. ಅಂ.ಕೀ-274.24 ರೂ.ಗಳು. 2] HAYWARDS
CHEERS WHISKY 90 ML ನ
33 ಟೆಟ್ರಾ ಪಾಕೇಟ್ಗಳು. 928.29 ರೂ.ಗಳು. 3] OLD TAVERN WHISKY 180 ನ
01 ಟೆಟ್ರಾ ಪಾಕೇಟು ಅಂ.ಕೀ 68.56 ರೂಗಳಂತೆ ಅಂ.ಕೀ-1271.09 ರೂ.ಗಳು. ಬೆಲೆಯುಳ್ಳ ಟೆಟ್ರಾ ಪಾಕೇಟಗಳನ್ನು
ಹಾಗೂ ಮಧ್ಯ ಮಾರಾಟದಿಂದ ಬಂದ ನಗದು ಹಣ 200-00 ರೂ. ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment