PÉÆ¥Àà¼À f¯ÉèAiÀÄ°è ªÀgÀ¢AiÀiÁzÀ
¥ÀæPÀgÀtUÀ¼ÀÄ
1] ಕೊಪ್ಪಳ
ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 498(ಎ), 504, 506, 342 ಐ.ಪಿ.ಸಿ:.
09-08-2014
ರಂದು ಸಂಜೆ 06-00 ಗಂಟೆಗೆ ಫಿರ್ಯಾದಿ ಜಯಶ್ರೀ ನೀರುಗ್ಗಿ ಸಾ: ಗಂಗೂರ ಇವರು ನೀಡಿದ ಲಖಿತ ದೂರಿನ
ಸಾರಾಂಶವೇನೆಂದರೆ, ದಿ: 29-04-2010 ರಂದು ನನಗೆ ಮತ್ತು ಹುನಗುಂದ ತಾಲೂಕ ಗಂಗೂರ ಗ್ರಾಮದ
ಸಂಗಪ್ಪ ನೀರುಗ್ಗಿ ಇವರೊಂದಿಗೆ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು, ನನ್ನ ಗಂಡ ಸಂಗಪ್ಪ ಬೀಳಗಿ
ಡಿಪೋದಲ್ಲಿ ಚಾಲಕ/ನಿರ್ವಾಹಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ನಮಗೆ ಪೂರ್ಣಿಮಾ ಅಂತಾ 04
ವರ್ಷದ ಒಬ್ಬ ಮಗಳು ಇರುತ್ತಾಳೆ. ನನ್ನ ಮದುವೆಯ ನಂತರ ನಾನು ನನ್ನ ಕೆಲಸದ ನಿಮಿತ್ಯ ಕೊಪ್ಪಳದಲ್ಲಿ
ವಾಸವಾಗಿರುವಾಗ ನನ್ನ ಗಂಡನು ಬಂದು ನನಗೆ ನಾನು ಅಲ್ಲಲ್ಲಿ ಕೈಗಾಡ ಸಾಲ ಮಾಡಿಕೊಂಡಿದ್ದೇನೆ.
ಅದಕ್ಕಾಗಿ ಸಾಲ ತೀರಿಸಲು ಹಣ ಕೊಡು ಅಂತಾ ಪೀಡಿಸುವುದು, ಹಾಗೂ ಸಹೋದ್ಯೋಗಿಗಳೊಂದಿಗೆ ಮಾತನಾಡಿದರೆ
ಅವರೊಂದಿಗೆ ಇದ್ದೀಯಾ ಅಂತಾ ಸಂಶಯ ಮಾಡಿ ಹೊಡಿಬಡಿ ಮಾಡುತ್ತಿದ್ದು ಅಲ್ಲದೆ ದಿ:03-04-14 ರಂದು
ರಾತ್ರಿ 08-30 ರಿಂದ ದಿ:05-04-14 ರ ಬೆಳಗಿನ ಅವಧಿಯವರೆಗೆ ತನ್ನ ಗಂಡನು ರೂಮಿನಲ್ಲಿ ಕೂಡಿ
ಹಾಕಿ ಕೈಯಿಂದ ಹೊಡಿಬಡಿ ಮಾಡಿ ಕಿರುಕುಳ ನೀಡಿದ್ದು ಅಲ್ಲದೆ ಪ್ರಾಣ ಬೆದರಿಕೆ ಹಾಕಿರುತ್ತಾನೆ
ಕಾರಣ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಠಾಣಾ
ಗುನ್ನೆ ನಂ: 171/2014 ಕಲಂ: 498[ಎ] 504,506 342 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
2] ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದ:.
ದಿನಾಂಕ 09-08-2014 ರಂದು ಫಿರ್ಯಾದುದಾರರು ತನ್ನ ಗಂಡನಾದ ಬಸವರಾಜ ರವರ ಜೊತೆಗೆ ಗದಗಕ್ಕೆ
ಹೋಗುವ ಕುರಿತು ಬಸಾಪೂರದಿಂದ ಹುಲಗಿ ಕಡೆಗೆ ಒಂದು ನಂಬರ ಇರಲಾರದ ಆಟೋದಲ್ಲಿ ಗಂಗಾವತಿ
-ಹಿಟ್ನಾಳ ರಸ್ತೆಯ ಮೇಲೆ ಶಿವಪುರ ಸಮೀಪ ಹೊರಟಾಗ ಎದುರುಗಡೆಯಿಂದ ಅಂದರೆ ಶಿವಪುರ ಕಡೆಯಿಂದ ಒಂದು
ಟಾಟಾ ಸುಮೊ ವಾಹನ ನಂ. ಕೆಎ-25/ಎಂ.ಎ-4231 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಹಾಗೂ ಅವರ ಗಂಡ ಕುಳಿತುಕೊಂಡು ಹೊರಟಿದ್ದ
ಆಟೋಕ್ಕೆ ಎದುರುನಿಂದ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದು, ಇದರಿಂದ
ಫಿರ್ಯಾದುದಾರರ ಗಂಡ ಬಸವರಾಜ ಈತನಿಗೆ ಬಲಗಾಲ ಮೊಣಕಾಲ ಕೆಳಗೆ ಮತ್ತು ಬಲಗೈ ಎಲುಬು ಮುರಿದು ಭಾರಿ
ಗಾಯಪೆಟ್ಟುಗಳಾಗಿರುತ್ತವೆ ಮತ್ತು ಅಪಘಾತವಾದ ನಂತರ ಟಾಟಾ ಸು ಚಾಲಕನು ತನ್ನ ವಾಹನವನ್ನು ಬಿಟ್ಟು
ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 147/2014 ಕಲಂ. 279,
338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದ:.
ಈಗ್ಗೆ 08 ವರ್ಷಗಳ ಹಿಂದೆ ಆನಂದನಿಗೆ ರಸ್ತೆ
ಅಪಘಾತದಲ್ಲಿ ಗಾಯಗೊಂಡು ಬಲಗಾಲಿಗೆ ಪೆಟ್ಟಾಗಿದ್ದು, ಕುಂಟುತಿದ್ದನು. ಸದರಿಯವನಿಗೆ ರಾತ್ರಿ
ನಿದ್ದೆ ಬರದೇ ಇದ್ದುದರಿಂದ ಆಗಾಗ ನಿದ್ರೆ ಮಾತ್ರೆ ಸೇವಿಸುತಿದ್ದನು. ಇಂದು ದಿನಾಂಕ:
09-08-2014 ರಂದು ಮಧ್ಯಾಹ್ನ 02 ಗಂಟೆ ಸುಮಾರಿಗೆ ಮೃತ ಆನಂದನು ಮನೆಗೆ ಊಟಕ್ಕೆ ಬಂದಾಗ ತಾನು
ಕುಂಟುತಿದ್ದು, ಮುಂದಿನ ದಿವಸಗಳಲ್ಲಿ ತನ್ನ ಜೀವನ ಹೇಗೆ ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ
ಜೀಗುಪ್ಸೆಗೊಂಡು ಮನೆಯಲ್ಲಿದ್ದ ನಿದ್ರೆ ಮಾತ್ರೆಗಳನ್ನು
ಸೇವಿಸಿ ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು
ಇರುತ್ತದೆ. ಮೃತನ ಮರಣದ ಬಗ್ಗೆ ಯಾರ ಮೇಲೆ ಯಾವದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮುಂತಾಗಿ
ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂ. 14/2014 ಕಲಂ: 174 ಸಿ.ಆರ್.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment