1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 96/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 28-04-2016 ರಂದು 5-00 ಪಿ.ಎಂ.ಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂರೆ, ದಿನಾಂಕ: 08-04-2016 ರಂದು ಬೆಳಿಗ್ಗೆ 7-45 ಗಂಟೆ ಸುಮಾರಿಗೆ ಪಿರ್ಯಾದಿದಾರರ ಮಗ ಗಾಯಾಳು ಕೆಲಸದ ನಿಮಿತ್ಯ ಪಿರ್ಯಾದಿದಾರರ ಮೋಟರ ಸೈಕಲ್ ನಂ. ಕೆಎ-37/ಆರ್-5525 ನೇದ್ದರಲ್ಲಿ ಮುನಿರಾಬಾದದಿಂದ ಹೊಸಪೇಟೆಗೆ ಕುಷ್ಟಗಿ-ಹೊಸಪೇಟೆ ಎನ್.ಹೆಚ್. ರಸ್ತೆಯ ತುಂಗಭದ್ರ 2ನೇ ಬ್ರೀಡ್ಜ ಮೇಲೆ ಹೋಗುವಾಗ ಅದೇ ವೇಳೆಗೆ ಎದುರುಗಡೆಯಿಂದ ರಾಂಗ್ ರೂಟಿನಲ್ಲಿ ಆರೋಪಿತನು ತನ್ನ ಟಾಟಾ ಎಸ್ ವಾಹನವನ್ನು ಅತೀ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಾಯಾಳುವಿನ ಮೋಟರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದ್ದರಿಂದ ಗಾಯಾಳು ಮಧುಕುಮಾರ ಇತನಿಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿದ್ದು ಇರುತ್ತದೆ. ಅಪಘಾತ ಪಡಿಸಿದ ಟಾಟಾ ಎಸ್ ವಾಹನ ಚಾಲಕನು ಅಪಘಾತ ಪಡಿಸಿದ ನಂತರ ವಾಹನವನ್ನು ನಿಲ್ಲಿಸದೇ ವಾಹನ ಸಮೇತವಾಗಿ ಓಡಿ ಹೋಗಿದ್ದು ಇರುತ್ತದೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 137/2016 ಕಲಂ: 279, 338 ಐ.ಪಿ.ಸಿ:.
ದಿನಾಂಕ:- 28-04-2016 ರಂದು ಸಂಜೆ 6:00 ಗಂಟೆಗೆ ಫಿರ್ಯಾದಿದಾರರಾದ ಹುಲಗಪ್ಪ ತಂದೆ
ಹನುಮಂತಪ್ಪ ಕಟ್ಟಿಮನಿ, ವಯಸ್ಸು 36 ವರ್ಷ, ಜಾತಿ: ಮಾದಿಗ, ಉ: ಗ್ರಾಮ ಪಂಚಾಯತಿಯಲ್ಲಿ ಬಿಲ್ ಕಲೆಕ್ಟರ್ ಸಾ: 5ನೇ ವಾರ್ಡ, ಬಸಾಪಟ್ಟಣ. ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ
ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನನ್ನ ತಮ್ಮ ಹನುಮಂತಪ್ಪ ತಂದೆ ಹನುಮಂತಪ್ಪ ವಯಸ್ಸು 30
ವರ್ಷ ಈತನು ಒಂದು ಆಪೆ ಆಟೋ ನಂಬರ್: ಕೆ.ಎ-37/ ಎ-1208 ನೇದ್ದನ್ನು ಖರೀದಿಸಿ ಅದನ್ನು ತಾನೆ
ಚಲಾಯಿಸಿಕೊಂಡಿದ್ದನು. ಇಂದು ದಿನಾಂಕ:-28-04-2016 ರಂದು ಮಧ್ಯಾಹ್ನ 3:45 ಗಂಟೆಯ ಸುಮಾರಿಗೆ
ನಾನು ಬಸಾಪಟ್ಟಣದ ಬಸ್ ನಿಲ್ದಾಣದ ಹತ್ತಿರ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಪಕ್ಕದಲ್ಲಿ
ನಿಂತುಕೊಂಡಿದ್ದೆನು. ಆಗ ನನ್ನ ತಮ್ಮ ಹನುಮಂತಪ್ಪನು ತನ್ನ ಆಟೋವನ್ನು ಬಸಾಪಟ್ಟಣದಿಂದ ದಾಸನಾಳ
ಕಡೆಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿದ್ದನು. ಬಸ್ ಸ್ಟ್ಯಾಂಡ್ ನಿಂದ ಸುಮಾರು 200
ಮೀಟರ್ ಅಂತರದಲ್ಲಿ ಕೊಪ್ಪಳ ಕಡೆಗೆ ನಡೆಯಿಸಿಕೊಂಡು ಹೋಗುತ್ತಿರುವಾಗ ಆತನ ಎದುರುಗಡೆ ಕೊಪ್ಪಳ
ಕಡೆಯಿಂದ ಒಂದು ಟ್ರ್ಯಾಕ್ಸ್ ಕ್ರ್ಯೂಷರ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು
ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನನ್ನ
ತಮ್ಮನ ಆಟೋಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಕೂಡಲೇ ನಾನು ಹೋಗಿ ನೋಡಲಾಗಿ
ಆಟೋ ಜಖಂಗೊಂಡಿದ್ದು, ಆಟೋ ಚಲಾಯಿಸುತ್ತಿದ್ದ ನನ್ನ ತಮ್ಮ ಹನುಮಂತಪ್ಪನಿಗೆ ತಲೆಯ ಎಡಭಾಗಕ್ಕೆ ತೀವ್ರ
ರಕ್ತಗಾಯವಾಗಿ, ಬಲಗೈ, ಎಡಗೈಗೆ ಗಾಯಗಳಾಗಿದ್ದು, ಎರಡೂ ಕಾಲುಗಳಿಗೆ ತೆರೆಚಿದ ಗಾಯಗಳಾಗಿದ್ದವು. ಆಟೋದಲ್ಲಿದ್ದ
ಪ್ರಯಾಣಿಕ ಕೃಷ್ಣಾ ತಂದೆ ಸವಾರಪ್ಪ, ವಯಸ್ಸು 25ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಬಸಾಪಟ್ಟಣ ಎಂಬಾತನಿಗೆ ತಲೆಯ ಎಡಭಾಗಕ್ಕೆ ಭಾರೀ ರಕ್ತಗಾಯ, ಎಡಗಾಲಿಗೆ ಸಂಪೂರ್ಣ ತೆರೆಚಿದ ಗಾಯ, ಎಡಭುಜಕ್ಕೆ ಗಾಯವಾಗಿ, ಎದೆಗೆ ಒಳಪೆಟ್ಟಾಗಿತ್ತು. ಆಟೋದಲ್ಲಿದ್ದ ಉಳಿದ ಪ್ರಯಾಣಿಕರು
ಇಳಿದು ಹೊರಟು ಹೋದರು. ಅಪಘಾತ ಮಾಡಿದ ಟ್ರ್ಯಾಕ್ಸ್ ಕ್ರ್ಯೂಸರ್ ವಾಹನವನ್ನು ನೋಡಲು ಅದರ ನಂಬರ್:
ಕೆ.ಎ-35/ 7457 ಅಂತಾ ಇದ್ದು, ಚಾಲಕನ ಹೆಸರು ವಿಚಾರಿಸಲು ಮಾರ್ಕಂಡೆಪ್ಪ ತಂದೆ ಹನುಮಂತಪ್ಪ ಗುಡೇಕಾರ, 28 ವರ್ಷ, ಸಾ: ಗಿಣಿಗೇರಾ ತಾ: ಕೊಪ್ಪಳ ಅಂತಾ ತಿಳಿಯಿತು. ನಂತರ ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ
ಟೋಲ್ ಗೇಟ್ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ
ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಗಾಯಾಳು ಕೃಷ್ಣ ಈತನಿಗೆ ವೈದ್ಯರು ಹೆಚ್ಚಿನ
ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಆತನಿಗೆ ಬಳ್ಳಾರಿಗೆ ಕಳುಹಿಸಿ
ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ ಫಿರ್ಯಾದಿಯನ್ನು
ನೀಡಿರುತ್ತೇನೆ. ಕಾರಣ ಈ ಅಪಘಾತವನ್ನು ಮಾಡಿದಂತಹ
ಟ್ರ್ಯಾಕ್ಸ್ ಕ್ರ್ಯೂಸರ್ ವಾಹನ ನಂಬರ್: ಕೆ.ಎ-35/ 7457 ನೇದ್ದರ ಚಾಲಕ ಮಾರ್ಕಂಡೆಪ್ಪ ಸಾ:
ಗಿಣಿಗೇರಾ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ
ಹೇಳಿಕೆ ಆಧಾರದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 143, 147, 148, 341, 323, 324, 504, 506 ಸಹಿತ
149 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ 1989:
ದಿನಾಂಕ 28-04-2016 ರಂದು
ರಾತ್ರಿ 10-15 ಗಂಟೆಗೆ ಫಿರ್ಯಾದಿಯು ತನ್ನ ಸಂಗಡಿಗನಾದ ಶಂಕರ ಐಲಿ ಇತನೊಂದಿಗೆ ಮೋಟಾರ ಸೈಕಲ್ ದಲ್ಲಿ
ಜುಲೈನಗರದಲ್ಲಿಯ ಇಂದಿರಾ ಸರ್ಕಲ್ ಹತ್ತಿರ ಬರುತ್ತಿರುವಾಗ ಆರೋಪಿತರಾದ ಆನಂದ, ಬಸುವ
ಮತ್ತು ಶರಣಪ್ಪ ಪೂಜಾರಿ ಈ ಮೂರು ಜನರು ಕೂಡಿಕೊಂಡು ಸದರಿ ಮೋಟಾರ ಸೈಕಲ್ ಗೆ ಅಡ್ಡ ಬಂದು ಇವರಲ್ಲಿ
ಶರಣಪ್ಪ ಇತನು ಲೇ ಸೂಳೇಮಕ್ಕಳೆ ಹೆಂಗ ಬರುತ್ತೀರಿ ಅಂತಾ ಅಂದಾಗ ಫಿರ್ಯಾದಿಯು ಸರಿಯಾಗಿ ಬರುತ್ತಿದ್ದೇವೆ
ಅಂತಾ ಹೇಳಿದ್ದಕ್ಕೆ ಆರೋಪಿತರು ಸಣ್ಣ ಜಾತಿ ವಡ್ಡರ ಸೂಳೇಮಕ್ಕಳೆ ನೀವೇನು ಈಗ ಜಗಳ ಮಾಡುತ್ತೀರಾ ಅಂತಾ
ಜಾತಿ ಎತ್ತಿ ಬೈದಾಡುತ್ತಾ ಮೂರು ಜನರು ಕೂಡಿಕೊಂಡು ಫಿರ್ಯಾದಿ ಮತ್ತು ಆತನ ಸಂಗಡಿಗನಿಗೆ ಕೈಯಿಂದ ಬಡಿದಿದ್ದು
ಅಲ್ಲದೇ ಆರೋಪಿ ಶರಣಪ್ಪ ಇತನು ಫೋನ ಮಾಡಿ ತನ್ನ ಸ್ನೇಹಿತರಿಗೆ ಕರೆಸಿದ್ದರಿಂದ ಸುಮಾರು 05 ಜನರು ಅಲ್ಲಿಗೆ
ಬಂದು ಅವರು ಸಹ ವಡ್ಡರ ಸೂಳೇಮಗನೆ ನಿಮ್ಮದು ಏನಲೇ ಬಹಳ ಆಗಿದೆ, ನಮ್ಮ ಹುಡುಗರಿಗೆ ಎದುರು ಆಗ್ತೀರಾ
ಅಂತಾ ಬೈದಾಡುತ್ತಾ ಕೈಯಿಂದ ಬಡಿದಿದ್ದು ಅಲ್ಲದೇ ಫಿರ್ಯಾದಿಯು ಅಲ್ಲಿಂದ ದುರುಗಮ್ಮ ದೇವಸ್ಥಾನದ ಮುಖಾಂತರವಾಗಿ
ಮನೆಗೆ ಹೋಗುತ್ತಿರುವಾಗ ಆರೋಪಿತರು ಅವರನ್ನು ಹಿಂಬಾಲಿಸುತ್ತಾ ದುರುಗಮ್ಮ ದೇವಸ್ಥಾನದ ಹತ್ತಿರ ಬಂದು
ಸೂಳೇಮಕ್ಕಳೆ ನೀವು ನಮಗೆ ಎದುರಾಗ್ತೀರಾ ನಿಮ್ಮನ್ನು ಉಳಿಸುವುದಿಲ್ಲ ನಿಮಗೆ ಒಂದು ಗತಿ ಕಾಣಿಸುತ್ತೇವೆ
ಅಂತಾ ಬೈದಾಡುತ್ತಾ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಅಡ್ಡ ಬಂದು ಮುಂದೆ
ಹೋಗದಂತೆ ತಡೆದು ನಿಲ್ಲಿಸಿ ಇವರಲ್ಲಿ ಶರಣಪ್ಪ ಪೂಜಾರಿಯು ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲಿನಿಂದ
ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಹಾಗೂ ಇನ್ನುಳಿದವರು ಫಿರ್ಯಾದಿಗೆ ಮತ್ತು ಶಂಕರ
ಇತನಿಗೆ ಕೈಯಿಂದ ಹೊಡಿ-ಬಡಿ ಮಾಡುತ್ತಾ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲವೆಂದು
ಜೀವದ ಬೆದರಿಕೆ ಹಾಕಿರುತ್ತಾರೆಂದು ವಗೈರೆ ಆಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು
4] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ. 100/2016 ಕಲಂ 143, 147, 341, 323, 324, 504, 506 ಸಹಿತ 149 ಐ.ಪಿ.ಸಿ
ದಿ 28-04-16 ರಂದು 12-35 ಗಂಟೆಗೆ ಪಿರ್ಯಾದಿದಾರರಾದ ಬಸವರಾಜ ತಂದಿ ಶಿವಪ್ಪ ಕಟಾಂಬ್ಲಿ ವಯಾ-30 ವರ್ಷ್ ಜಾ. ಲಿಂಗಾಯತ ಉ– ವ್ಯಾಪಾರ ಸಾ. ಕಟಾಂಬ್ಲಿ ಓಣಿ ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಸವೆನಂದರೆ ದಿನಾಂಕ:-27-04-2016 ರಂದು ಕಾರಟಗಿಯ ಪುರಸಭೆಯ ಚುನಾವಣೆಯ ಫಲಿತಾಂಶಗಳು ಘೋಷಣೆಯಾಗಿದ್ದು ಇದರಲ್ಲಿ ನನ್ನ ತಾಯಿ ಶ್ರೀಮತಿ ಪಾರ್ವತೆಮ್ಮ ಇವರು ಕಾಂಗ್ರೇಸ್ ಪಕ್ಷದಿಂದ ಕಾರಟಗಿ 1 ನೇ ವಾರ್ಡಿಗೆ ಸ್ಪರ್ದಿಸಿ ಸೋತಿದ್ದು ನಂತರ ನಾವು ಗಂಗಾವತಿಯಿಂದ ವಾಪಾಸ ಮನೆಗೆ ಬಂದು ನಾನು ನಮ್ಮ ತಾಯಿ ಮನೆಯ ಮುಂದೆ ಮಾತನಾಡುತ್ತಾ ನಿಂತಿದ್ದಾಗ್ಗೆ ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ನಮ್ಮ ವಿರುದ್ದ ಗೆದ್ದ ಬಿಜೆ.ಪಿ ಅಭ್ಯಾರ್ಥಿಗಳ ಬೆಂಗಲಿಗರಾ. ಗುಡಿಬಸವರಾಜ ತಂದಿ ಗುಡಿಗುಂಡಪ್ಪ, ಬಸವಲಿಂಗಮ್ಮ ಗಂಡ ಗುಡಿ ಗುಂಡಮ್ಮ, ಅನೀತಾ ಗಂಡ ಗುಡಿ ಬಸವರಾಜ, ಮೋನಾಕ್ಷಿ ಗಂಡ ಶಿವಕುಮಾರ, ವಿರುಪಣ್ಣ ತಂದಿ ಗುಡಿಗುಂಡಪ್ಪ ಅಮರೇಶ ತಂದಿ ಶಿವಮೂರ್ತೆಪ್ಪ, ಅಮರೇಶ ತಂದಿ ಗುಡಿ ಸಿದ್ದಪ್ಪ, ಗುಡಿ ದೊಡ್ಡಬಸವ ತಂದಿ ಶಿವಮೂರ್ತೆಪ್ಪ, ಚನ್ನಮ್ಮ ಗಂಡ ಗುಡಿ ಅಮರೇಶ, ಶರಣಪ್ಪ ತಂದಿ ಶಿವಮೂರ್ತೆಪ್ಪ ಎಲ್ಲರೂ ಸಾ. ಕಾರಟಗಿ ಎಲ್ಲರೂ ಸೇರಿ ನಮ್ಮ ಮನೆಯ ಮುಂದೆ ಬಂದು ನಮ್ಮ ಮನೆಯ ಮುಂದೆ ಪಟಾಕಿ ಹೊಡೆಯುತ್ತಿರುವುದನ್ನು ಕೇಳಿದ್ದಕ್ಕೆ ನನಗೆ ಮತ್ತು ನಮ್ಮ ತಾಯಿಗೆ ಅವಚ್ಯವಾಗಿ ಬೈದಾಡಿ, ಕೈಯಿಂದ ಹೊಡೆ ಬಡೆ ಮಾಡಿ, ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 91/2016 ಕಲಂ 447, 504, 323, 341, 506
ಸಹಿತ 34 ಐ.ಪಿ.ಸಿ:.
ದಿ: 28-04-16 ರಂದು ರಾತ್ರಿ 8-00 ಗಂಟೆಗೆ
ಫಿರ್ಯಾದಿದಾರರಾದ ಶ್ರೀಮತಿ ಶ್ಯಾವಂತ್ರೆವ್ವ ಗಂಡ ಬಸಪ್ಪ ವಕ್ಕರ ಸಾ: ಚಿಕ್ಕಬೊಮ್ಮನಾಳ ಇವರು
ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಇಂದು ದಿ:28-04-2016 ರಂದು ಮಧ್ಯಾಹ್ಮ 12-00 ಗಂಟೆಗೆ ಫಿರ್ಯಾದಿದಾರರ ಚಿಕ್ಕಬೊಮ್ಮನಾಳ
ಸೀಮಾದ ಜಮೀನು ಸರ್ವೇ ನಂ: 103 ರ 4 ಎ 8 ಗುಂ ಜಮೀನುದಲ್ಲಿ ಆರೋಪಿತರು ಅತೀಕ್ರಮ ಪ್ರವೇಶ ಮಾಡಿ
ಸದರ ಹೊಲದಲ್ಲಿ ನಾವು ಸಾಗುವಳಿ ಮಾಡುತ್ತೇವೆ ಅಂತಾ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯ
ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡೆಬಡಿ ಮಾಡಿದ್ದು ಅಲ್ಲದೇ ಜೀವದ
ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.