Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, October 31, 2017

1] ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 139/2017 ಕಲಂ 279, 337, 338, 304 (ಎ) ಐಪಿಸಿ ಮತ್ತು 187 ಐಎಂವಿ ಕಾಯ್ದೆ.
ದಿನಾಂಕ: 30-10-2017 ರಂದು ಬೆಳಿಗ್ಗೆ 11-50 ಗಂಟೆಗೆ ಫಿರ್ಯಾಧಿ ಉಮಾದೇವಿ ಗಂಡ ಶರಣಪ್ಪ ಕುಂಬಾರ ವಯ: 25 ವರ್ಷ ಸಾ: ಯತ್ನಟ್ಟಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿಯನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ: 19-10-2017 ರಂದು ಆರೋಪಿ ಬಸವರಾಜ ಹಟ್ಟಿ ಈತನು ತನ್ನ ಕಿರಾಣಿ ಅಂಗಡಿಗೆ ದೀಪಾವಳಿ ಹಬ್ಬದ ಸಾಮಾನುಗಳನ್ನು ತನ್ನ ಡಿಸ್ಕವರಿ ಮೋ. ಸೈಕಲ್ ನಂ: ಕೆ.ಎ-37/ಡಬ್ಲೂ4832 ನೇದ್ದರ ಮೇಲೆ ಮೃತ ಶರಣಪ್ಪ ಕುಂಬಾರ ಈತನನ್ನು ಕರೆದುಕೊಂಡು ಉಮಲೂಟಿಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಾಸು ಊರಿಗೆ ಬರುವಾಗ ಬಸವರಾಜನು ಮೋ.ಸೈಕಲ್ ನಡೆಸುತ್ತಿದ್ದು, ಮೃತನು ಹಿಂದೆ ಕುಳಿತಿದ್ದನು ಆಗ ಬಸವರಾಜನು ದಿನಾಂಕ: 19-10-2017 ರಂದು ಸಂಜೆ 7-00 ಗಂಟೆ ಸುಮಾರಿಗೆ ಉಮಲೂಟಿ-ಪುರಾ ರಸ್ತೆಯ ತಿಪ್ಪಣ್ಣ ವಕೀಲ ರವರ ಹೊಲದ ಹತ್ತಿರ ಮೋಟಾರು ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮಿಂದೊಮೆಲೆ ಬ್ರೇಕ್ ಹಾಕಿದ್ದರಿಂದ ಹಿಂದೆ ಕುಳಿತಿದ್ದ ಫಿಯರ್ಾದಿದಾರರ ಗಂಡ ಶರಣಪ್ಪನು ಕೆಳಗೆ ಬಿದ್ದಿದ್ದು ಆತನ ತಲೆಗೆ, ಬಲಗಾಲಿಗೆ, ಮತ್ತು ಬಲಗೈಗೆ ಭಾರಿ ಗಾತ್ರದ ಒಳಪೆಟ್ಟಾಗಿದ್ದು ಇರುತ್ತದೆ. ಗಾಯಗೊಂಡವನನ್ನು ದಾರಿಯಲ್ಲಿ ಹೋಗುವವರು ನೋಡಿ ಮನೆಗೆ ಕರೆದುಕೊಂಡು ಬಂದಿದ್ದು ನಡೆದ ವಿಷಯವನ್ನು ಫಿಯರ್ಾದಿದಾರರಿಗೆ ಆಕೆಯ ಗಂಡ ಶರಣಪ್ಪನು ತಿಳಿಸಿದ್ದು, ಫಿಯರ್ಾದಿದಾರರು ತನ್ನ ಗಂಡನನ್ನು ಇಲಾಜು ಕುರಿತು ಮಲ್ಲನಗೌಡ ಆಸ್ಪತ್ರೆ ಗಂಗಾವತಿಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿಯ ತತ್ವದಶರ್ಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಶರಣಪ್ಪ ಕುಂಬಾರ ಈತನು ಇಲಾಜು ಫಲಿಸದೇ ದಿನಾಂಕ: 29-10-2017 ರಂದು ರಾತ್ರಿ 8-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಬಸವರಾಜ ಹಟ್ಟಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ. ಫಿಯರ್ಾದಿದಾರರು ತಾವು ಮತ್ತು ತಮ್ಮ ಮನೆಯವರು ಶರಣಪ್ಪನನ್ನು ಇಲಾಜುಪಡಿಸುವ ಕುರಿತು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿದ್ದು ಈಗ ತಡವಾಗಿ ಬಂದು ಫಿಯರ್ಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದು ಫಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನಮಸಾಗರ ಪೊಲೀಸ್  ಠಾಣೆ  ಗುನ್ನೆ ನಂ. 161/2017  ಕಲಂ. 32, 34 ಕೆ.ಇ. ಕಾಯ್ದೆ.  
ದಿನಾಂಕ: 30-10-2017 ರಂದು ಮುಂಜಾನೆ 10-40 ಗಂಟೆಗೆ ಕಬ್ಬರಗಿ ಗ್ರಾಮದ ವಾಲ್ಮೀಕಿ ಸಮಾಜದ ಸಮುದಾಯ ಭವನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೃಷ್ಣೇಗೌಡ ಗೌಡರ ಸಾ: ಕಬ್ಬರಗಿ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿ.ಎಸ್.ಐ. ರವರು ಕೂಡಲೆ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-32, ಪಿ.ಸಿ-256, ರವರೊಂದಿಗೆ ಠಾಣೆಯಿಂದ ಹೊರಟು ಕಬ್ಬರಗಿ ಗ್ರಾಮದ  ಅಗಸಿ ಹತ್ತಿರ ಮುಂಜಾನೆ 11-10 ಗಂಟೆಗೆ ತಲುಪಿ ಮುಂಜಾನೆ 11-15 ಗಂಟೆಗೆ ದಾಳಿಮಾಡಿದಾಗ ಕೃಷ್ಣೇಗೌಡ ಗೌಡರ ಇವನು ಸಿಕ್ಕಿಬಿದಿದ್ದು ಅವನ ಹತ್ತಿರ 1] 180 .ಎಂ.ಎಲ್.ಅಳತೆಯ 27 ಟೆಟ್ರಾ ಪಾಕೇಟಗಳು HAYWARDS CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ. 56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1519-29 ರೂಪಾಯಿಗಳು ಆಗುತಿದ್ದು. ಹಾಗೂ ನಗದು ಹಣ 200-00 ರೂಪಾಯಿ ಸಿಕ್ಕಿದ್ದು ಸದರ ದಾಳಿ ಪಂಚನಾಮೆಯನ್ನು ಇಂದು ಮುಂಜಾನೆ 11-15 ಗಂಟೆಯಿಂದ ಮಧ್ಯಾಹ್ನ 12-45 ಗಂಟೆಯವರಗೆ ನಿರ್ವಹಿಸಿದ್ದು ಇರುತ್ತದೆ. ಸದರ ಆರೋಪಿತನು ತನ್ನ ಲಾಭಕ್ಕೋಸ್ಕರ ಯಾವುದೇ ಪರವಾನಿಗೆ ಪಡೆಯದೆ ಮಾರಾಟ ಮಾಡಿ ಅಪರಾಧ ಮಾಡಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಮೂಲ ಪಂಚನಾಮೆ, ಮುದ್ದೆಮಾಲು ಸಮೇತ ವಾಪಸ್ ಠಾಣೆಗೆ ಮಧ್ಯಾಹ್ನ 13-00 ಗಂಟೆಗೆ ಬಂದು ಸದರಿ ಆರೋಪಿ ಕೃಷ್ಣೇಗೌಡ ಗೌಡರ ಸಾ: ಕಬ್ಬರಗಿ ಈತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ..
3] ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆ  ಗುನ್ನೆ ನಂ. 328/2017 ಕಲಂ 279, 338 ಐ.ಪಿ.ಸಿ.
ದಿನಾಂಕ:- 30-10-2017 ರಂದು ಸಂಜೆ 4:30 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ ಮಲ್ಲೆಪ್ಪ ತಂದೆ ಗಣೇಶಪ್ಪ ತಾವರಗೇರಾ, ವಯಸ್ಸು 38 ವರ್ಷ, ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ: ಹುಳ್ಕಿಹಾಳ ತಾ: ಗಂಗಾವತಿ.ಹಾಜರ್ ಪಡಿಸಿದ ಲಿಖಿತ ದೂರನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ಇಂದು ದಿನಾಂಕ:- 30-10-2017 ರಂದು  ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮೂರ ಬಸವರಾಜ ತಂದೆ ಮಹಾಂತಪ್ಪ ಪೊಲೀಸ್ ಪಾಟೀಲ್, 24 ವರ್ಷ, ಸಾ: ಹುಳ್ಕಿಹಾಳ ಇಬ್ಬರೂ ಕೂಡಿಕೊಂಡು ಟಿ.ವಿ.ಎಸ್. ವಿಕ್ಟರ್ ಮೋಟಾರ ಸೈಕಲ್ ನಂ: ಕೆ.ಎ-37/ ಇ.ಜಿ-4131 ನೇದ್ದರಲ್ಲಿ ಸ್ವಂತ ಕೆಲಸದ ನಿಮಿತ್ಯ ಗಂಗಾವತಿಗೆ ಬರುತ್ತಿರುವಾಗ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಶ್ರೀರಾಮನಗರ ದಾಟಿ ನಮ್ಮ ಎದುರುಗಡೆ ಗಂಗಾವತಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆ.ಎ-42/ ಎಫ್-1238 ನೇದ್ದರ ಚಾಲಕ ಧರ್ಮರಾಜ ತಂದೆ ಜಟ್ಟೆಪ್ಪ ಕೋಳಿಹಾಳ ಗದಗ ಡಿಪೋ ಈತನು ಬಸ್ಸನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಆಟೋವನ್ನು ಓವರ್ ಟೇಕ್ ಮಾಡಲು ಹೋಗಿ ನಮ್ಮ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ನನಗೆ ಎರಡು ಮೊಣಕಾಲುಗಳಿಗೆ, ಎರಡೂಕೈಗಳಿಗೆ, ಸೊಂಟಕ್ಕೆ ಗಾಯ ಹಾಗೂ ತೀವ್ರ ಒಳಪೆಟ್ಟಾಗಿದ್ದು, ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಬಸವರಾಜನಿಗೆ ಬಲಗೈ ಮುಂಗೈಗೆ ಮತ್ತು ಎಡ ಮೊಣಕಾಲಿಗೆ ಗಂಭೀರ ಗಾಯಗಳಾಗಿರುತ್ತವೆ. ಕಾರಣ ಬಸ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ಬಂದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್  ಠಾಣೆ  ಗುನ್ನೆ ನಂ. 142/2017 ಕಲಂ 143, 147, 341, 323, 324, 354, 504 ಸಹಿತ 149 ಐ.ಪಿ.ಸಿ.
ದಿನಾಂಕ: 30-10-2017 ರಂದು ಮಧ್ಯಾಹ್ನ 1-00 ಗಂಟೆಗೆ ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾದಿಂದ ಜಗಳದಲ್ಲಿ ಗಾಯಗೊಂಡು ಗಾಯಾಳು ಶ್ರೀ ಮತಿ ಹನುಮವ್ವ ಗಂಡ ರಂಗಪ್ಪ ಬಂಗಾರಿ ಸಾ: ಲಿಂಗನಬಂಡಿ ಇವರು ಚಿಕಿತ್ಸೆ ಕುರಿತು ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಫೋನ್ ಮುಖಾಂತರ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ನಾನು ಸಿಪಿಸಿ-384 ರವರನ್ನು ಕರೆದುಕೊಂಡು ಸದರಿ ಆಸ್ಪತ್ರೆಗೆ ಬೇಟಿ ನೀಡಿ, ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಹನುಮವ್ವಳಿಗೆ ವಿಚಾರಿಸಿದ್ದು, ಅವಳು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರದಿದ್ದರಿಂದ, ಆಕೆಯ ಗಂಡನಾದ ಫಿರ್ಯಾದಿದಾರರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರರು ಹಾಗೂ ಆರೋಪಿತರಿಗೂ ಹೊಲದಲ್ಲಿಯ ಬೇವಿನ ಗಿಡಗಳನ್ನು ಕಡೆದುಕೊಳ್ಳುವ ಸಲುವಾಗಿ ಜಗಳ ಇದ್ದು, ಇದೇ ವಿಷಯವಾಗಿ ಆಗಾಗ್ಗೆ ಬಾಯಿ ಮಾತಿನ ಜಗಳ ಮಾಡುತ್ತಾ ಬಂದಿದ್ದು ಇರುತ್ತದೆ. ಇದೇ ವಿಷಯವಾಗಿ ಇಂದು ದಿನಾಂಕ: 30-10-2017 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ಪಿರ್ಯಾದಿದಾರರ ಮತ್ತು ಆತನ ಹೆಂಡತಿ ಹನುಮವ್ವ ಇಬ್ಬರು ತಮ್ಮ ಮನೆಯ ಮುಂದೆ ಇದ್ದಾಗ, ಆರೋಪಿತರೆಲ್ಲರೂ ಗುಂಪುಗಾರಿಕೆ ಕಟ್ಟಿಕೊಂಡು ಬಂದು, ಫಿರ್ಯಾದಿದಾರಿಗೆ ಹಾಗೂ ಗಾಯಾಳು ಹನುಮವ್ವಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಹನುಮವ್ವಳಿಗೆ ಮುಂದೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು, ಕಟ್ಟಿಗೆಯಿಂದ ತಲೆಗೆ ಹೊಡೆದು ಪೆಟ್ಟು ಮಾಡಿ, ಮೈ ಕೈ ಮುಟ್ಟಿ, ಎಳೆದಾಡಿ, ಕೈಯಿಂದ ಹೊಡೆ ಬಡೆ ಮಾಡಿ, ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು, ದುಖಾಃಪಾತ ಮಾಡಿದ್ದು ಇರುತ್ತದೆ.  ಕಾರಣ ತನಗೆ ಮತ್ತು ನನ್ನ ಹೆಂಡತಿಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕುಷ್ಟಗಿ ಪೊಲೀಸ್  ಠಾಣೆ  ಗುನ್ನೆ ನಂ. 296/2017 ಕಲಂ 20 [ಬಿ], [ii], [A], NDPS Act 1985.
ದಿನಾಂಕ :- 30-10-2017 ರಂದು ಮುಂಜಾನೆ 10-30 ಶ್ರೀ ಪುಂಡಲೀಕಪ್ಪ ಎ.ಎಸ್.. ಕುಷ್ಟಗಿ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ: 30-10-2017 ರಂದು ಬೆಳಿಗ್ಗೆ 8-00 ಗಂಟೆಗೆ ಮೇಣಸಗೇರಿ ಕ್ರಾಸ ಗಾಂಜಾ ಇದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದು ಮಾಹಿತಿಯನ್ನು ಮೇಲಾಧಿಕಾರಿಗಳಿ ತಿಳಿಸಿ ದಾಳಿ ಕುರಿತು ಪರವಾನಿಗೆ ಪಡೆದು ಪಂಚರ ಸಮಕ್ಷಮ ದಾಳಿ ಮಾಡಿಕೊಂಡು ಮೂಲ ಪಂಚನಾಮೆಯೊಂದಿಗೆ ಇಬ್ಬರೂ ಆರೋಪಿತರನ್ನು 6000=00 ರೂ ಬೆಲೆ ಬಾಳುವ ಗಾಂಜಾವನ್ನು ತಂದು ಹಾಜರುಪಡಿಸಿ 04 ಜನ ಆರೋಪಿ 01] ಮಹಾಂತೇಶ ತಂದೆ ಶಿವಪ್ಪ ರಾಠೋಡ, ವಯಾ 32 ವರ್ಷ, ಜಾತಿ: ಲಮಾಣಿ, : ಒಕ್ಕಲುತನ, ಸಾ: ಮೇಣಸಗೇರಿ. 02] ಶಾಂತಕುಮಾರ ತಂದೆ ಬಸವರಾಜ ಕಟ್ಟಿಮನಿ, ವಯಾ 19 ವರ್ಷ, ಜಾತಿ: ಮಾದರ, : ಕೂಲಿ ಕೆಲಸ, ಸಾ: ಅಲಾಂಪೂರ ಪೇಟೆ ಇಲಕಲ್. 03] ಪರಶುರಾಮ ತಂದೆ ಸತ್ಯಪ್ಪ ಗೌಂಡಿ, ವಯಾ 21 ವರ್ಷ, ಸಾ: ಅಲಾಂಪೂರ ಪೇಟೆ ಇಲಕಲ್. 04] ಶಿವಪ್ಪ ತಂದೆ ಧ್ಯಾಮಪ್ಪ ನರಗುಂದಿ, ವಯಾ 75 ವರ್ಷ, ಸಾ: ಮನ್ನೆರಾಳ, ತಾ: ಕುಷ್ಟಗಿ. ಇವರ ವಿರುದ್ದ ಕ್ರಮ ಕೈಕೊಳ್ಳುವಂತೆ ನೀಡಿರುವ ವರದಿಯ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
6] ತಾವರಗೇರಾ ಪೊಲೀಸ್  ಠಾಣೆ  ಗುನ್ನೆ ನಂ. 140/2017 ಕಲಂ  32, 34 ಕೆ.ಇ. ಕಾಯ್ದೆ.

ದಿನಾಂಕ: 30-10-2017 ರಂದು ಸಂಜೆ 18-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸುರೇಶ ತಳವಾರ ಸಿ.ಪಿ.ಐ ಕುಷ್ಟಗಿ ವೃತ್ತರವರು ಠಾಣೆಗೆ ಹಾಜರಾಗಿ ಒಂದು ದೂರು, ಹಾಗೂ ಒಬ್ಬ ಆರೋಪಿತನು ಅನಧೀಕೃತ, 90 ಎಮ್.ಎಲ್.ನ 65 ಅಕ್ರಮ ಮದ್ಯದ ಟೆಟ್ರಾ ಪ್ಯಾಕಗಳನ್ನು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಅದರ ಸಾರಾಶವೇನೆಂದರೆ, ಇಂದು ದಿನಾಂಕ: 30-10-2017 ರಂದು ಸಂಜೆ 16-30 ಗಂಟೆಗೆ ರಾಮಣ್ಣ ತಂದೆ ತಿಮ್ಮಪ್ಪ ಈಳಗೇರ ಸಾ: ಮುದೇನೂರು ಗ್ರಾಮ ಇತನು ದೋಟಿಹಾಳ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅನಧೀಕೃತವಾಗಿ ಮದ್ಯ ಮಾರಾಟದಲ್ಲಿ ತೊಡಗಿದ್ದರಿಂದ 65 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕಗಳನ್ನು ಅವುಗಳ ಅಂದಾಜು ಕಿಮ್ಮತ್ತು 1828.45-00 ರೂ ಬೆಲೆ ಬಾಳುವವಗಳನ್ನು ಅಕ್ರಮ ದಾಳಿ ಕಾಲಕ್ಕೆ ಪಂಚರ ಸಮಕ್ಷಮ ದಾಳಿ ಮಾಡಿ ಜಪ್ತಿಪಡಿಸಿಕೊಂಡಿದ್ದು ಇವುಗಳಲ್ಲಿ ಎಲ್ಲಾ 65 ಪ್ಯಾಕೇಟಗಳನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಜಪ್ತಿಪಡಿಸಿದ್ದು ಇರುತ್ತದೆ. ಸದರಿ ಆರೋಪಿತನು ಮದ್ಯದ ಪಾಕೇಟಗಳನ್ನು ಯಾವದೇ ಪಾಸು. ಲೈಸನ್ಸ ಪರವಾನಿಗೆ ಇಲ್ಲದೇ ಮಾರಾಟ ಮಾಡಲು ಹೊರಟಿದ್ದವುಗಳನ್ನು ಜಪ್ತಿ ಪಡಿಸಿಕೊಂಡಿದ್ದು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Monday, October 30, 2017

1] ಕಾರಟಗಿ ಪೊಲೀಸ್  ಠಾಣೆ  ಗುನ್ನೆ ನಂ.254/2017 ಕಲಂ. 380 ಐ.ಪಿ.ಸಿ.
ದಿನಾಂಕ:-29-10-2017 ರಂದು ಮುಂಜಾನೆ 9-45 ಗಂಟೆಗೆ ಫಿರ್ಯಾಧಿದಾರನ ಶ್ರೀ ಮಹಾಂತಗೌಡ ತಂದೆ ಶಿವನಗೌಡ ಪಾಟೀಲ್ ಸಾ: ಕಾರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ  ಫಿರ್ಯಾಧಿ ಕೊಟ್ಟದ್ದು, ಅದರ ಸಾರಾಂಶವೇನೆಂದರೆ,  ದಿನಾಂಕ 28-10-2017 ರಂದು ನಾನು ಹಾಗೂ ನನ್ನ ಅಕ್ಕ ಡಾ: ಸುಜತಾ ಪಾಟೀಲ್ ಜಿಲ್ಲಾ ಆಯುಷ ಅಧಿಕಾರಿಗಳು  ಗದಗ ಹಾಗೂ ನನ್ನ ತಾಯಿ ಲಲಿತಾ ರವರೊಂದಿಗೆ ಊಟ ಮಾಡಿ ಕೌಟುಂಬಿಕ ವಿಷಯಗಳನ್ನು ರಾತ್ರಿ ಸುಮಾರು 1-00 ಗಂಟೆಯವರೆಗೆ ಮಾತನಾಡಿ ಮಲಗಿದೆವು. ದಿನಾಂಕ 29-10-2017 ರಂದು ಬೆಳಗಿನ ಜಾವ 3-45 ಕ್ಕೆ ಎಚ್ಚರವಾಗಿ ನನ್ನ ಅಕ್ಕನ ವ್ಯಾನಿಟಿ ಬ್ಯಾಗ್ ನ್ನು ಯಾರೋ ಚೆಕ್ ಮಾಡುತ್ತಿರುವದುನ್ನು ಗಮನಿಸಿ, ನನ್ನ ಅಕ್ಕ ಮತ್ತು ತಾಯಿಗೆ ತಿಳಿಸಿದೆನು ನಂತರ ನಾವೆಲ್ಲರೂ ಗಾಬರಿಯಾಗಿ ಜೋರಾಗಿ ಕಿರುಚಿಕೊಂಡು ಮನೆಯಿಂದ ಹೊರ ಬಂದು ಸುತ್ತಲಿನ ಜರನ್ನು ವಿಚಾರಿಸಲಾಗಿ, ಹಾಗೂ ನಮ್ಮ ಮನೆಯ ವಸ್ತುಗಳನ್ನು ಪರೀಕ್ಷಿಸಲಾಗಿ ನಮ್ಮ ಮನೆಯಲ್ಲಿ ಕಳ್ಳತನವಾಗಿರುವದು ಗೊತ್ತಾಗಿರುತ್ತದೆ. ನಮ್ಮ ಮನೆಯ ಸಮೀಪವಿರುವ ಶ್ರೀದೇವಿ ಪೆಟ್ರೋಲ್ ಬಂಕ್ ನ ವಾಚಮ್ಯಾನ ನ್ನು ವಿಚಾರಿಸಲಾಗಿ ಸುಮಾರು 3 ರಿಂದ 4 ಜನ ಕಳ್ಳರು TATA ACE  ವಾಹನದಲ್ಲಿ ಬಂದಿರುವುದು ತಿಳಿದು ಬಂದಿರುತ್ತದೆ ಹಾಗೂ ಒಬ್ಬನು ಮನೆಯ ಒಳಗೆ ಬಂದಿರುವದು ತಿಳಿದು ಬಂದಿರುತ್ತದೆ. ಹಾಗೂ  TATA ACE ವಾಹನ ಹಳೆಯ ಬಸ್ ನಿಲ್ದಾಣದ ಕಡೆಗೆ ಕಳ್ಳನು ನಮ್ಮ ಮನೆಯ ಹಿಂದೆ  ಓಡಿ ಹೋಗಿರುತ್ತಾನೆ. ಕಳ್ಳರು ನಮ್ಮ ಮನೆಯಿಂದ  ಈ ಕೆಳ ಕಾಣಿಸಿದ ವಸ್ತುಗಳನ್ನು ದೋಚಿರುತ್ತಾರೆ.1)    3 ತೊಲೆ ಬಂಗಾರದ ಬಳೆಗಳು ಮೊತ್ತ ಸುಮಾರು ರೂ.76,000/-2)    ನಗದು ಹಣ ರೂ. 10,000/-3)    Redmi Note (4) Mobile ( Ph No.9448263181) ರೂ.14000/-4)    HTC Desire (626) Mobile  (Ph No.9738834935 ) ರೂ.13000/-5)    Fastrack Watch ರೂ.10,000/-6)    H.P. Pen drive ರೂ.1000/-ಇವೆಲ್ಲವುಗಳ  ಒಟ್ಟು ಮೌಲ್ಯ ರೂ.1,24,000/- ಆಗುತ್ತದೆ. ಕಾರಣ ನಮ್ಮ ಮನೆಯಿಂದ ಕಳುವಾದ ವಸ್ತುಗಳನ್ನು ಪತ್ತೆ ಹಚ್ಚಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಸಂಚಾರಿ ಪೊಲೀಸ್  ಠಾಣೆ  ಗುನ್ನೆ ನಂ. 46/2017  ಕಲಂ. 279, 338 ಐ.ಪಿ.ಸಿ.
ದಿನಾಂಕ. 29-10-2017 ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ ಶ್ರೀ ರಾಮಣ್ಣ ಮಸೂತಿ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದು ಅವರ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ: 29-10-2017 ರಂದು ಸಂಜೆ 4-00 ಗಂಟೆ ಸುಮಾರು ಗಂಗಾವತಿಗೆ ಟ್ರಿಪ್ ಹೋಗುವ ಕುರಿತು ಕೊಪ್ಪಳ ಬಸ್ ನಿಲ್ದಾಣ ಮುಂದೆ ಗಂಗಾವತಿಗೆ ಹೋಗುವ ಪ್ರಯಾಣಿಕನನ್ನು ಹತ್ತಿಸಿಕೊಂಡು ಕೊಪ್ಪಳ ನಗರದ ಕೊಪ್ಪಳ-ಹೊಸಪೇಟೆ ಎನ್.ಹೆಚ್.63 ರಸ್ತೆಯ ಮೇಲೆ   ವಿಜಯಾ ಬ್ಯಾಂಕ ಮುಂದೆ  ಬಸವೇಶ್ವರ ಸರ್ಕಲ್ ಟ್ರಾಫಿಕ್ ಸಿಗ್ನಲ ಲೈಟ್ ನಿಲ್ಲುವ ಸೂಚನೆ ಬಂದಿದ್ದರಿಂದ  ಕ್ರಷರ್ ವಾಹನವನ್ನು ನಿಲ್ಲಿಸಿದ್ದು, ಆಗ ಕ್ರಷರ್ ವಾಹನದಲ್ಲಿದ್ದ ಕ್ಲೀನರ್ ಸಲೀಮಪಾಶಾ ಈತನು ಹಿಂದಿನ ಬಾಗಿಲು ತೆಗೆದು ಇಳಿಯುತ್ತಿರುವಾಗ ಅದೇ ವೇಳೆಗೆ ಹಿಂದಿನಿಂದ ಒಂದು ಬಿಳಿ ಬಣ್ಣದ ಮಾರುತಿ ಸಿಪ್ಟ್ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತನದಿಂದ ನಡೆಸಿ ವಾಹನ ನಡುವಿನ ಅಂತರವನ್ನು ಕಾಯ್ದುಕೊಳ್ಳದೆ ಬಂದು ನಮ್ಮ ಕ್ರಷರ್ ವಾಹನಕ್ಕೆ ಹಿಂದಿನ ಬಾಗಿಲಿಗೆ ಬಂದು ಟಕ್ಕರ್ ಕೊಟ್ಟಿದ್ದುಇದರಿಂದ ಕ್ರಷರ್ ಹಿಂದಿನ ಬಾಗಿಲು ನಮ್ಮ ಗಾಡಿ ಕ್ಲೀನರ್ ಸಲೀಮಪಾಶಾ ಈತನ ಬಲಗಾಲಿಗೆ ಜೋರಾಗಿ ಬಡಿದಿದ್ದು ಇದರಿಂದ ಅವನ ಬಲಗಾಲಿನ ಮೊಣಕಾಲು ಕೆಳಗೆ  ಭಾರಿ ರಕ್ತಗಾಯವಾಗಿ ಎಲುಬು ಮುರಿದಂತಾಗಿದ್ದು ಇರುತ್ತದೆ. ನಂತರ ಗಾಯಾಳು ಸಲೀಮಪಾಶಾ ಈತನನ್ನು ಚಿಕಿತ್ಸೆ ಕುರಿತು ಕ್ರಶರ್ ವಾಹನದಲ್ಲಿ ಕೊಪ್ಪಳದ ಕಿಮ್ಸ ಕುರಿತು ಕರೆದುಕೊಂಡು ಹೋಗಿ ದಾಖಲುಮಾಡಿರುತ್ತೆವೆ. ಅಂತಾ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೂಕನೂರು ಪೊಲೀಸ್  ಠಾಣೆ  ಗುನ್ನೆ ನಂ. 147/2017  ಕಲಂ. 457, 380 ಐ.ಪಿ.ಸಿ.

ದಿನಾಂಕ: 28-10-2017 ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 29-10-2017 ಮಂಜಾನೆ 05 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ ಮಲ್ಲಿಕಾರ್ಜುನ ಇವರ ವಾಸದ ಬಾಡಿಗೆ ಮನೆಯ ಬಾಗಿಲಿಗೆ ಹಾಕೀದ ಬೀಗ ಮುರಿದು ಮನೆಯಲ್ಲಿಯ ಟ್ರಜರಿಯಲ್ಲಿಟ್ಟಿದ್ದ 97 1/2 ಗ್ರಾಂ ( 09 ತೊಲೆ 7 1/2 ಗ್ರಾಂ) ಬಂಗಾರದ ಆಭರಣಗಳು ಅಂ.ಕಿ. 2,46,000/-ರೂ. & 70 ಗ್ರಾಂ (07 ತೊಲೆ) ಬೆಳ್ಳಿ ಸಾಮಾನುಗಳು ಅಂ.ಕಿ. 2,800/-ರೂ. ಹಾಗೂ ನಗದು ಹಣ 1,11,000/- ರೂ ಹೀಗೆ ಒಟ್ಟು 3,59,800/-ರೂ. ಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಕಳ್ಳರನ್ನು ಹಾಗೂ ಕಳ್ಳತನವಾದ ಬಂಗಾರ, ಬೆಳ್ಳಿಯ ಆಭರಣಗಳು, ನಗದುಹಣವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008