Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, August 31, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 195/2016 ಕಲಂ: 78(3) Karnataka Police Act:.
ದಿನಾಂಕ 30-08-2016 ರಂದು 7-00 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಬಸವನಗೌಡ ತಂದಿ ನಂದಪ್ಪ ಹೊಟೇಲ್ ವಯಾ-50ವರ್ಷ ಜಾ.ಲಿಂಗಾಯತ ಸಾ. ಸಿದ್ದಾಪೂರ ತಾ. ಗಂಗಾವತಿ  2 ) ಬಸವರಾಜ ತಂದಿ ಶಂಕರಪ್ಪ ಬೇರಗಿ ವಯಾ-35 ವರ್ಷ ಜಾ. ಲಿಂಗಾಯತ ಸಾ. ಸಿದ್ದಾಪೂರ ತಾ. ಗಂಗಾವತಿ ಇತನು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತನ ಕಡೆಯಿಂದ ನಗದು ಹಣ ರೂ. 750=00 ಗಳು ಹಾಗೂ ಮಟ್ಕಾ ಸಾಮಾಗ್ರಿಗಳು ಸಿಕ್ಕಿದ್ದು ಮಟ್ಕಾ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 3  ಈಶಪ್ಪ ತಂದಿ ರಾಮಪ್ಪ ಆರ್ಯಾರ ಸಾ. ಸಿದ್ದಾಪೂರ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾರೆ ಅಂತಾ ಮುಂತಾಗಿ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 194/2016 ಕಲಂ: 279, 338 ಐ.ಪಿ.ಸಿ:
ಪಿರ್ಯಾದಿದಾರರು ಮತ್ತು ಅವರ ಸಂಬಂದಿಕ ಶರಣಬಸವ ಇಬ್ಬರು ಇಂದು ದಿನಾಂಕ:-30-08-2016 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಮಾತನಾಡುತ್ತಾ ಕಾರಟಗಿ-ಗಂಗಾವತಿ ರಸ್ತೆಯ ಪಕ್ಕದಲ್ಲಿರುವ ಮಲ್ಲಿಗೆ ಡಾಬಾದ ಹತ್ತಿರ ನಿಂತುಕೊಂಡಿದ್ದಾಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-35ಎಪ್-195 ನೆದ್ದರ ಚಾಲಕ ಪರ್ವತಗೌಡನು ತನ್ನ ಬಸ್ ನ್ನು ಅತೀ ವೇಗ ಅಲಕ್ಷತನದಿಂದ ಚಲಾಯಿಸಿಕೊಂಡು ಕಾರಟಗಿ ಕಡೆಯಿಂದ ಬಂದು ಗಂಗಾವತಿ ಕಡೆಯಿಂದ ಮೋಟಾರ್ ಸೈಕಲ್ ನಂ ಕೆ.-37ಇಎ-4197 ನೆದ್ದನ್ನು ಚಲಾಯಿಸಿಕೊಂಡು ತನ್ನ ಸೈಡಿನಲ್ಲಿ ಬರುತ್ತಿದ್ದ ಬಸವರಾಜರೆಡ್ಡಿ ತಂದಿ ಮಲ್ಲಿರ್ಜುನರೆಡ್ಡಿ ಸಾ. ಕೊಟ್ನೆಕಲ್ ಈತನಿಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಬಸವರಾಜರೆಡ್ಡಿ ಈತನಿಗೆ ಬಲಗಾಲಿಗೆ ಮೂಳೆಮುರಿತವಾದ, ಬಲಕಿವಿಯ ಹತ್ತಿರ ಹರಿತವಾದ ಗಂಭೀರ ಗಾಯ ಹಾಗು ಇತರೆ ಕಡೆಗಳಲ್ಲಿ ತೆರಚಿದಗಾಯವಾಗಿದ್ದರಿಂದ ಚಿಕಿತ್ಸೆ ಕುರಿತು 108 ವಾಹನದಲ್ಲಿ ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಮೇಲಿಂದ ಗುನ್ನೆ ದಾಖಲುಮಾಡಿಕೊಂಡಿದ್ದು ಇರುತ್ತದೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ: 143, 147, 148, 323, 324, 354, 354[ಎ], 504 506 ಸಹಿತ 149 ಐ.ಪಿ.ಸಿ ಕಾಯ್ದೆ:

ದಿನಾಂಕ: 30-08-2016 ರಂದು 22-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದೊಡ್ಡಯ್ಯ ತಂದೆ ಶಿವರುದ್ರಯ್ಯ ಸೊಪ್ಪಿಮಠ ಸಾ: ಹೂಲಗೇರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಹಾಗೂ ಆರೋಪಿತರ ಹೊಲ ಹೂಲಗೇರಿ ಸೀಮಾದಲ್ಲಿ ಹನಮಸಾಗರ ದಾರಿಯಲ್ಲಿ ಅಕ್ಕಪಕ್ಕದಲ್ಲಿದ್ದು, ಆರೋಪಿತರು ಒಡ್ಡು ಹರೆಗಡೆದು ಫಿರ್ಯಾದಿದಾರರ ಹೊಲದಲ್ಲಿ ನೀರು ಬಿಟ್ಟಿದ್ದರಿಂದ ಒಬ್ಬರಿಗೊಬ್ಬರು ಸಿಟ್ಟಾಗಿದ್ದು, ಈ ಕುರಿತು ಇಂದು ದಿನಾಂಕ: 30-08-2016 ರಂದು ರಾತ್ರಿ 21-15 ಗಂಟೆಗೆ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯ ಮನೆಯ ಹತ್ತಿರ ಬಂದು ಫಿರ್ಯಾದಿ ಮನೆಯವರು ಪಡಸಾಲಿ ಕಟ್ಟೆಯ ಮೇಲೆ ಮಲಗಿದ್ದು, ಫಿರ್ಯಾದಿಯನ್ನು ಬಸಪ್ಪ ಮತ್ತು ಮಹಾಂತೇಶ ಇವರು ಹಿಡಿದು ಎಳೆದು ಕೆಳಗೆ ಕೆಡವಿ ಅವಾಚ್ಯ ಬೈದಾಡಿ ಹಾಗೂ ಶರಣಪ್ಪ ಮತ್ತು ಸಂಗಪ್ಪ ಫಿರ್ಯಾದಿಯ ಹೆಂಡತಿಯ ಸೀರೆ ಹಿಡಿದು ಎಳೆದು ಅವಮಾನಿಸಿದ್ದು, ಹಾಗೂ ಫಿರ್ಯಾದಿಯ ಮಗ ಶ್ರೀಧರನಿಗೆ ಕಸ್ತೂರೆವ್ವ ಕೈಯಿಂದ ಹೊಡೆಬಡೆ ಮಾಡಿದ್ದು, ದೊಡ್ಡಸಂಗಪ್ಪ ಈತನು ಹಾಕರಿಲೇ ಅವರನ್ನೇನು ಕೇಳತೀರಿ ಅಂತಾ ಜೀವದ ಬೆದರಿಕೆ ಹಾಕಿದ್ದು, ಮತ್ತೆ ಬಸಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ಹಾಗೂ ಶರಣಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ಎಡರಟ್ಟೆಗೆ ಹೊಡೆದು, ಹಾಗೂ ಮಹಾಂತೇಶ ಈತನು ಫಿರ್ಯಾದಿಯ ಬಲರಟ್ಟೆಗೆ ಹೊಡೆದು ರಕ್ತಗಾಯ ಹಾಗೂ ಮುಖಪೆಟ್ಟು ಮಾಡಿದ್ದು, ಮತ್ತೆ ಶರಣಪ್ಪ ಈತನು ಕಟ್ಟಿಗೆಯಿಂದ ಫಿರ್ಯಾದಿಯ ಹೆಂಡತಿ ಪರಿಮಳ ಈಕೆಗೆ ತಲೆಗೆ ಹೊಡೆದು ರಕ್ತಗಾಯ ಮಾಡಿ ಫಿರ್ಯಾದಿಯ ತಂದೆ ಒದ್ದು ದುಖಃಪಾತಗೊಳಿಸಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ನೀಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

Tuesday, August 30, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 87/2016 ಕಲಂ: 143, 504, 448, 302, ಸಹಿತ 149 ಐ.ಪಿ.ಸಿ.
ದಿನಾಂಕ: 29-08-2016 ರಂದು ಸಂಜೆ ಹನಕುಂಟಿ ಗ್ರಾಮದಲ್ಲಿ ಮೃತ ವೀರಣ್ಣ ತಂದೆ ದೇವಪ್ಪ ರಕರಡ್ಡಿ ಹಾಗೂ ಹನುಮಂತಪ್ಪ ತಂದೆ ಶಂಕ್ರಪ್ಪ ತಳವಾರ, ಜಯವ್ವ ಗಂಡ ಹನುಮಂತಪ್ಪ ತಳವಾರ, ರೇವಕ್ಕ ಗಂಡ ಶಂಕ್ರಪ್ಪ ತಳವಾರ, ಶಂಕ್ರಪ್ಪ ತಳವಾರ, ಶಿವಮೂರ್ತಿ ತಂದೆ ಶಂಕ್ರಪ್ಪ ತಳವಾರ, ಪವಿತ್ರಾ ತಳವಾರ  ಎಲ್ಲರೂ ಸಾ: ಹನಕುಂಟಿ ಗ್ರಾಮ ಇವರ ನಡುವೆ ಕಿರಾಣಿ ಅಂಗಡಿಯ ಬಾಕಿ ಕೊಡುವ ವಿಷಯಕ್ಕೆ ಜಗಳವಾಗಿ ವೀರಣ್ಣನಿಗೆ ಭಾರಿ ಗಾಯವಾಗಿ ಚಿಕಿತ್ಸೆ ಕುರಿತು ಬೆಟಗೇರಿ ಸರಕಾರಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾನೆ. ಸದರಿ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 250/2016 ಕಲಂ. 110 (ಇ)(ಜಿ) ಸಿ.ಆರ್.ಪಿ.ಸಿ.
ದಿನಾಂಕ:- 29-08-2016 ರಂದು ಮಧ್ಯಾಹ್ನ 12:30 ಗಂಟೆಗೆ ಶ್ರೀ ಶಿವಪುತ್ರಪ್ಪ ಬಿಳೆಗುಡ್ಡ, ಪಿ.ಸಿ. ನಂ: 118 ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸಲ್ಲಿಸುವ ಸ್ವಂತ ಫಿಯರ್ಾದಿ ಸಲ್ಲಿಸಿದ್ದು, ಅದರ ಸಾರಂಶ ಈ ಪ್ರಕಾರ ಇದೆ. ಇಂದು ದಿನಾಂಕ: 29-08-2016 ರಂದು ಮಾನ್ಯ ಪಿ.ಎಸ್.ಐ. ರವರ ಆದೇಶದ ಮೇರೆಗೆ ನಾನು ಮುಂಬರುವ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಮಾಹಿತಿ ಸಂಗ್ರಹಿಸಿಕೊಂಡು ಬರಲು ಠಾಣಾ ವ್ಯಾಪ್ತಿಯ ಆನೆಗುಂದಿ, ವಿರುಪಾಪೂರಗಡ್ಡಿ, ಸಣಾಪೂರ, ಗ್ರಾಮಗಳ ಕಡೆಗೆ ಹೋದಾಗ ವಿರುಪಾಪೂರ ಗಡ್ಡಿ ಗ್ರಾಮಕ್ಕೆ ಹೋದಾಗ ರೌಡಿ ಶೀಟದಾರರಾದ 1] ಪಂಪಾ @ ಪಂಪಾಪತಿ ತಂದೆ ಹಳ್ಳಪ್ಪ, ವಯಸ್ಸು 35 ವರ್ಷ, ಜಾತಿ: ಚಲವಾದಿ ಉ: ಕೂಲಿ ಕೆಲಸ ಸಾ: ವಿರುಪಾಪೂರು ಗಡ್ಡಿ ತಾ: ಗಂಗಾವತಿ 2] ಕೆ.ಪಿ. ನಾಗೇಶ್ವರರಾವ್ @ ಭೀಮುಡು ತಂದೆ ರಾಮಕೋಟಯ್ಯ, 50 ವರ್ಷ, ಸಾ: ವಿರುಪಾಪುರು ಗಡ್ಡಿ ತಾ: ಗಂಗಾವತಿ ಇವರುಗಳ ಬಗ್ಗೆ ಗ್ರಾಮಸ್ಥರಿಂದ ಭಾತ್ಮಿ ಸಂಗ್ರಹಿಸಲಾಗಿ ಅವರು ತಮ್ಮ ಪ್ರವೃತ್ತಿಯನ್ನು ಮುಂದುವರಿಸಿದ್ದು ಅವರ ಮೇಲೆ ಈಗಾಗಲೇ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದರ ಹಿನ್ನಲೆಯಲ್ಲಿ ರೌಡಿ ಶೀಟರ ತೆರೆದಿದ್ದು ಇರುತ್ತದೆ. ಕಾರಣ ಸದ್ಯ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಅವರು ಆ ಸಂದರ್ಭದಲ್ಲಿ ಪುನ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ದಾಮರ್ಿಕ ಕಾರ್ಯಕ್ರಮ ನಡೆಯುವ ಕಾಲಕ್ಕೆ ಇತರರೊಂದಿಗೆ ಸೇರಿಕೊಂಡು ತನ್ನ ರೌಡಿ ಚಟುವಟಿಕೆಯನ್ನು ಮುಂದುವರಿಸಿ ಗ್ರಾಮದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕದಡುವ ಸಾಧ್ಯತೆಗಳು ಕಂಡು ಬಂದ ಹಿನ್ನಲೆಯಲ್ಲಿ ಬೆಳಿಗ್ಗೆ 11:30 ಗಂಟೆಗೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದಿದ್ದು, ಸದರಿ ಗೌರಿ ಗಣೇಶ ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಮತ್ತು ಶಾಂತಿ ಪಾಲನೆಗಾಗಿ ಸದರಿಯವರ ಮೇಲೆ ಮುಂಜಾಗ್ರತೆ ಕುರಿತು ಕಾನೂನು ಕ್ರಮ ಜರುಗಿಸಲು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Monday, August 29, 2016

1] ತಾವಗೇರಾ ಪೊಲೀಸ್ ಠಾಣೆ ಗುನ್ನೆ ನಂ. 101/2016 ಕಲಂ: 279, 304 (ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ
ದಿನಾಂಕ 28-08-2016 ರಂದು ರಾತ್ರಿ 7-30 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆ ಹೋಗಿ ಮೃತಳ ಗಂಡನಾದ ಶ್ರೀ ಹನುಮಂತಪ್ಪ ತಂದೆ ಬಾಲಪ್ಪ ಪೂಜಾರಿ ವಯ : 50 ವರ್ಷ, ಜಾತಿ : ಕುರುಬರು, ಉ : ಒಕ್ಕಲುತನ. ಸಾ : ಉಮಳಿ ರಾಂಪುರ. ತಾ : ಕುಷ್ಟಗಿ. ರವರ ಹೇಳಿಕೆ ಫಿರ್ಯಾಧಿಯನ್ನು  ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾಧಿಯ ಹೆಂಡತಿ ಈರಮ್ಮಳಿಗೆ ಮೈಯಲ್ಲಿ ಆರಾಮ ಇಲ್ಲದೇ ಇದ್ದುದರಿಂದ ಆಕೆಯನ್ನು ತೋರಿಸಿಕೊಂಡು ಬರಲು ತಾವರಗೇರಾಕ್ಕೆ ಫಿಯರ್ಾದಿದಾರರ ಮಗ ಬಸವರಾಜ ಈತನು ತಮ್ಮ ಹಿರೋ ಸ್ಪ್ಲೆಂಡರ್ ಪ್ರೋ ಮೋಟಾರು ಸೈಕಲ್ ನಂ: ಕೆ.ಎ-37/ವಾಯ್-7658 ನೇದ್ದನ್ನು ತೆಗೆದುಕೊಂಡು ಇಂದು ದಿನಾಂಕ: 28-08-2016 ರಂದು ಸಾಯಂಕಾಲ 7-10 ಗಂಟೆ ಮುದುಗಲ್ ತಾವರಗೇರಾ ಹೆದ್ದಾರಿಯಲ್ಲಿ ತಾವರಗೇರಾಕ್ಕೆ ರಸ್ತೆಯ ಎಡಗಡೆ ಹೋಗುತ್ತಿರುವಾಗ ವೀರಾಪುರ ಕ್ರಾಸ್ ಹತ್ತಿರ ತಾವರಗೇರಾ ಕಡೆಯಿಂದ ಎದುರಿಗೆ ಬಂದ ಯಾವುದೋ ಬಂದು ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿಯರ್ಾದಿದಾರರ ಮಗನ ಮೋಟಾರು ಸೈಕಲ್ಗೆ ಟಕ್ಕರು ಮಾಡಿ ಕೆಡವಿ ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು, ನೋಡಲು ಫಿಯರ್ಾದಿದಾರರ ಮಗ ಬಸವರಾಜ ಈತನಿಗೆ ಬಲ ಕಪಾಳಕ್ಕೆ, ಗದ್ದಕ್ಕೆ ತೆರಚಿದ ಗಾಯಗಳಾಗಿದ್ದು ಅಲ್ಲದೇ ಆತನ ಕುತ್ತಿಗೆಯ ಮದ್ಯಭಾಗದಲ್ಲಿ ಮತ್ತು ಎದೆಯ ಎಡಭಾಗದಲ್ಲಿ ತೆರಚಿದ ಗಾಯ ಮತ್ತು ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿಯರ್ಾದಿದಾರರ ಹೆಂಡತಿ ಈರಮ್ಮ ಪೂಜಾರಿ ಈಕೆಗೂ ಕೂಡ ಬಲಗೈ ಮುಂಗೈಗೆ ತೆರಚಿದ ಗಾಯ ಮತ್ತು ತಲೆಯ ಬಲಭಾಗಕ್ಕೆ ಗುಮಟಿಯಾಗಿ ಭಾರಿ ಒಳಪೆಟ್ಟಾಗಿದ್ದು ಆಕೆಯನ್ನು 108 ಅಂಬುಲೆನ್ಸ್ ವಾಹನದಲ್ಲಿ ಇಲಾಜು ಕುರಿತು ಸರಕಾರಿ ಆಸ್ಪತ್ರೆ ತಾವರಗೇರಾಕ್ಕೆ ಸೇರಿಕೆ ಮಾಡಿದ್ದು ಇಲಾಜು ನೀಡುವಷ್ಟರಲ್ಲಿ ಆಕೆಯೂ ಕೂಡ ತನಗಾದ ಗಾಯಗಳಿಂದ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ವಾಹನ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 90/2016 ಕಲಂ: 279 338, 304(A) .ಪಿ.ಸಿ. ಮತ್ತು 187 .ಎಂ.ವಿ ಕಾಯ್ದೆ
ದಿನಾಂಕ 28-08-2016 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿದಾರರು ತನಗೆ ಪರಿಚಯ ಇದ್ದ  ಪ್ರಭು ವಡ್ಡರ ಇತನ ಮೋಟಾರ ಸೈಕಲ ನಂ ಕೆಎ-23/ಯು-2523 ನೇದ್ದರ ಹಿಂದುಗಡೆ ಕುಳಿತು ಕೊಂಡು ಊರ ಕಡೆಗೆ ಹೊರಟಿದ್ದು ಸದರಿ ಮೋಟಾರ ಸೈಕಲನ್ನು ಪ್ರಭು ಈತನು ಯಲಬುರ್ಗಾ- ಚಿಕ್ಕೊಪ್ಪ ರಸ್ತೆ ಮೇಲೆ  ರಸ್ತೆಯ ಎಡಬದಿಯಲ್ಲಿ ಯಲಬುರ್ಗಾ ಸೀಮಾದಲ್ಲಿ ಬರುವ ಕೆಂಪು ಕೆರಯ ಹತ್ತಿರ ಹೊರಟಿದ್ದಾಗ ರಾತ್ರಿ 8-20 ಗಂಟೆ ಸುಮಾರಿಗೆ  ಚಿಕ್ಕೊಪ್ಪ ಕಡೆಯಿಂದ  ನಾಲ್ಕು ಚಕ್ರ ವಾಹನದ ಚಾಲಕನು ತಾನು ಚಲಾಯಿಸುತ್ತಿದ್ದ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುಗಡೆಯಿಂದ ಟಕ್ಕರ ಕೊಟ್ಟು ಅಪಘಾತ ಪಡಿಸಿ ಹೋಗಿದ್ದು ಅದೆ. ನಂತರ ಗಾಯಾಳು ಪ್ರಭು ವಡ್ಡರ ಈತನನ್ನು  ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಯಲಬುರ್ಗಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸ್ಪತ್ರೆಯ ಹತ್ತಿರ ರಾತ್ರಿ 9 ಗಂಟೆಯ ಸುಮಾರಿಗೆ ಮೃತ ಪಟ್ಟಿದ್ದು ಇರುತ್ತದೆ. ನಂತರ ಮೃತ ದೇಹವನ್ನು ಯಲಬುರ್ಗಾ ಸರಕಾರಿ ಆಸ್ಪತ್ರೆಯಲ್ಲಿ ಹಾಕಿದ್ದು ಅದೆ. ಈ ಅಪಘಾತದಲ್ಲಿ ಪಿರ್ಯಾದಿದಾರನಿಗೆ ತಲೆಮೇಲೆ, ಬಲಗಾಲ ಮೋಣಕಾಲಿಗೆ, ಬಲಗಾಲ ಪಾದದ ಬೆರಳಿಗೆ ರಕ್ತಗಾಯ, ಬಲಗೈಮುಂಗೈಗೆ ಭಾರಿಸ್ವರೂಪದ ಒಳಪೆಟ್ಟು ಬಿದ್ದು ಬಾಹುಬಂದಂತಾಗಿರುತ್ತದೆ. ಸದರಿ ಅಪಘಾತ ಪಡಿಸಿದ ವಾಹನ ಹಾಗೂ ಅದರ ಚಾಲಕನ್ನು ನೋಡಿದರೆ ಪಿರ್ಯಾದಿರಾನು ಗುರ್ತಿಸುವದಾಗಿ ಹೇಳಿದ್ದು ಅದೆ.  ಸದರಿ ಅಪಘಾತ ಪಡಿಸಿದ  ನಾಲ್ಕು ಚಕ್ರ ವಾಹನ ಹಾಗೂ ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನ ಪ್ರಕಾರ ಕ್ರಮ ಜರುಗಿಸಬೇಕು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ. ನಂ. 23/2016 ಕಲಂ: 174(ಸಿ) ಸಿ.ಆರ್.ಪಿ.ಸಿ.
ದಿನಾಂಕ. 28-08-2016 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ಮುಷ್ಟೂರ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ನದಿಯಲ್ಲಿ  ಮೀನು ಹಿಡಿಯುವ ಮೀನುಗಾರರು ಫಿರ್ಯಾದಿದಾರರ ಹತ್ತಿರ ಬಂದು ತುಂಗಭದ್ರಾ ನದಿಯಲ್ಲಿ ಯಾರೋ ಒಬ್ಬರು ಅಪರಿಚಿತ ವ್ಯಕ್ತಿ ಮೃತ ಪಟ್ಟಿರುತ್ತಾರೆ ಎಂದು ತಿಳಿಸಿದ ಮೇರೆಗೆ ಫೀರ್ಯಾದಿದಾರರು ಹಾಗೂ ಊರಿನ ಹಿರಿಯರು ಹೋಗಿ ನೋಡಲು ತುಂಗಭದ್ರಾ ನದಿಯಲ್ಲಿ ಸುಮಾರು 55 ರಿಂದ 60 ವರ್ಷದ ಅಪರಿಚಿತ ವ್ಯಕ್ತಿ ಇದ್ದು, ಮೃತ ದೇಹವು ತುಂಗಭದ್ರಾ ನದಿಯ ನೀರಿನಲ್ಲಿ ಕಂಡು ಬರುತ್ತದೆ. ಮೃತ ದೇಹವು ಬೋರಲಾಗಿದ್ದು ಮೈಮೇಲೆ ಒಂದು ಕೆಂಪು ಚಡ್ಡಿ ಮತ್ತು ಒಂದು ನೀಲಿ ಕಲರಿನ ಚಕ್ಸ ಲುಂಗಿ ಇರುತ್ತದೆ. ಸದರ ಮೃತ ದೇಹವು ನೋಡಲಾಗಿ ತಾಜಾ ಸ್ಥಿತಿಯಲ್ಲಿದ್ದು ನಿನ್ನೆ ರಾತ್ರಿ  ವೇಳೆಗೆ ತುಂಗಭದ್ರಾ ನದಿಯಲ್ಲಿ ಯಾವುದೋ ಕಾರಣಕ್ಕೆ ಬಿದ್ದು ಮೃತ ಪಟ್ಟಂತೆ ಕಂಡು ಬರುತ್ತಿದ್ದು, ಮೃತನ ಸಾವಿನಲ್ಲಿ ಸಂಶಯ ಕಂಡುಬರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಯು.ಡಿ.ಆರ್. ನಂ. 23/2016 ಕಲಂ. 174 (ಸಿ) ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 193/2016 ಕಲಂ. 447,341 323,  504, 506 R/w 34  IPC.

ದಿನಾಂಕ:-28-08-2016 ರಂದು ಮದ್ಯಾಹ್ನ 1-20 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್ .ಸಿ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿದ್ದು ಆಸ್ಪತ್ರೆಯಲ್ಲಿ ಜಗಳದಲ್ಲಿ ದುಖಃಪಾತಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದ ಕೆ.ಜಗದೀಶ ತಂದಿ ಹನುಮಂತಪ್ಪ ಕಟಂಬ್ಲಿ ವಯಾ-32 ವರ್ಷ ಜಾ. ಲಿಂಗಾಯತ ಉ- ಒಕ್ಕಲುತನ ಸಾ. ಯರಡೋಣ ತಾ. ಗಂಗಾವತಿ ರವರಿಗೆ ವಿಚಾರಿಸಿದ್ದು ಸದ್ರಿವಯರು ಒಂದು ಲಿಖಿತ ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು ಸಾರಾಂಶವೆನಂದರೆ, ನನ್ನ ತಂದೆ ತಾಯಿಗೆಳಿಗೆ 6 ಜನ ಗಂಡು ಮಕ್ಕಳು ಇದ್ದು ಎಲ್ಲರೂ ಕುಟುಂಬ ಸಮೇತ ಬೇರೆ ಬೇರೆಯಾಗಿ ವಾಸಮಾಡುತ್ತಿದ್ದು ಉಪಜೀವನ ಸಲುವಾಗಿ ಎಲ್ಲರಿಗೂ ಜಮೀನನ್ನು ಕೊಟ್ಟಿದ್ದು ಇರುತ್ತದೆ ಪಿರ್ಯಾದಿದಾರು ಮತ್ತು ಅವರ ತಾಯಿ, ಅಕ್ಕಗಂಗಮ್ಮ ಮತ್ತು ತಮ್ಮ ಮಂಜುನಾಥ ಇವರು ಒಂದೆ ಮನೆಯಲ್ಲಿ ವಾಸವಾಗಿದ್ದು ಪಿರ್ಯಾದಿದಾರರು ತಮ್ಮ ತಾಯಿಯ ಹೆಸರಿನಲ್ಲಿರುವ ಭೂವಿ ಸರ್ವೆ ನಂ 341 ರಲ್ಲಿರುವ 6.2 ಎಕರೆ ಜಮೀನನ್ನು ಸಾಗುವಳಿ ಮಾಡುತ್ತಿದ್ದು ಸದ್ರಿ ಜಮೀನಿಗೆ ನೀರು ಬರುವ ಸಲುವಾಗಿ ಮಾಡಿಕೊಂಡಿದ್ದ ಕಾಲೂವೆ ಸಲುವಾಗಿ ಪಿರ್ಯಾದಿದಾರರು ಅಣ್ಣಂದಿರಾದ 1) ಮುರಡಪ್ಪ ತಂದಿ ಹನುಮಂತಪ್ಪ 2) ಶರಣಪ್ಪ ತಂದಿ ಹನುಮಂತಪ್ಪ 3) ಶೇಖರಪ್ಪ ತಂದಿ ಹನುಮಂತಪ್ಪ 4) ಮಲ್ಲಿಕಾರ್ಜುನ ತಂದಿ ಹನುಮಂತಪ್ಪ ರವರು ಕೂಡಿಕೊಂಡು ದಿನಾಂಕ:-28-08-2016 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಚ್ಯವಾಗಿ ಬೈದು ಕೈಯಿಂದ ಬಡಿದು, ಕಲ್ಲಿನಿಂದ ಗುದ್ದಿ, ಸಲುಕೆಯ ಕಾವಿನಿಂದ ಹೊಡೆಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ವಾಪಾಸ ಠಾಣೆಗೆ ಮದ್ಯಾಹ್ನ 3-15 ಗಂಟೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Saturday, August 27, 2016

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 240/2016 ಕಲಂ: 279 ಐ.ಪಿ.ಸಿ.
ದಿನಾಂಕ:26-08-2016 ರಂದು ಬೆಳಿಗ್ಗೆ 9-15 ಗಂಟೆಗೆ ಪಿರ್ಯಾದಿದಾರರಾದ ಶಿವಣ್ಣ ತಂದೆ ಕೃಷ್ಣಪ್ಪ ಬಡಿಗೇರ ವಯಾ: 31 ವರ್ಷ ಜಾತಿ: ವಿಶ್ವಕರ್ಮ ಉ: ಹಿರೇವಂಕಲಕುಂಟಾ 108 ಅಂಬುಲೇನ್ಸ ನಂ: ಕೆ.-42/ಜಿ- 211 ನೇದ್ದರ ಚಾಲಕ ಸಾ: ಕೂಡಲಸಂಗಮ ತಾ: ಹುನಗುಂದ ಜಿ: ಬಾಗಲಕೋಟ  ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕರಿಸಿದ ಪಿರ್ಯಾದಿಯ ಸಾರಾಂಶವೆನೆಂದರೆ ನಿನ್ನೆ ದಿನಾಂಕ: 25-08-2016 ರಂದು ಬೆಳಗಿನ ಜಾವ 2-00 ಗಂಟೆಯ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮ ಸರಕಾರಿ ಆಸ್ಪತ್ರೆಯಿಂದ ಹೆರಿಗೆ ಪೇಶೆಂಟ್ ಕರೆದುಕೊಂಡು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ನಂತರ ಅಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಇಲಕಲಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಕುಷ್ಟಗಿ ಬಿಟ್ಟು ಟೆಂಗುಂಟಿ ಕ್ರಾಸ್ ಹತ್ತಿರ  ಇಲಕಲ್ ಕಡೆಗೆ  108 ಅಂಬ್ಯುಲೇನ್ಸ್ ನಂ: ಕೆ.-42/ಜಿ-211 ನೇದ್ದನ್ನು ತೆಗೆದುಕೊಂಡು ಹೋಗುತ್ತಿರುವಾಗ ಕುಷ್ಟಗಿ-ಟೆಂಗುಂಟಿ ಕ್ರಾಸ್ ಎನ್.ಹೆಚ್-50 ನಲ್ಲಿ ಬೆಳಗಿನ 2-45 ಗಂಟೆ ಸುಮಾರಿಗೆ ನಾನು ಕ್ರಾಸ್ ನಲ್ಲಿ ರೋಡ್ ಹಂಪ್ಸದಾಟುವಷ್ಟರಲ್ಲಿ  ಅದೇ ವೇಳೇಗೆ ಹಿಂದಿನಿಂದ ಒಂದು ಲಾರಿ ಚಾಲಕನು ತನ್ನ ಲಾರಿಯ ಅಂತರವನ್ನು ಕಾಪಾಡದೆ ಅತಿವೇಗ ಮತ್ತು ಅಲಕ್ಷತನದಿಂದ ನಡಿಸಿಕೊಂಡು ಬಂದು ನನ್ನ ಅಂಬ್ಯುಲೇನ್ಸ್ ಗೆ ಹಿಂದಿನಿಂದ ಟಕ್ಕರಕೊಟ್ಟಿದ್ದು ಆಗ ನಾನು ಅಂಬ್ಯುಲೇನ್ಸ್ ರಸ್ತೆ ಪಕ್ಕಕ್ಕೆ ನಿಲ್ಲಿಸಿ ನೋಡಲಾಗಿ ಹಿಂದಿನ ಎರಡು ಡೋರ್, ಗ್ಲಾಸ್, ಪಸ್ಟ್ ಏಡ್ ಬಾಕ್ಸ್ ನಜ್ಜುಗುಜ್ಜಾಗಿದ್ದು ನನಗೆ ಮತ್ತು ಆಬ್ಯುಂಲೆನ್ಸ ನಲ್ಲಿ ಇರುವವರಿಗೆ ಯಾವುದೇ ಗಾಯ ವಗೈರಾ ಆಗಿರುವುದಿಲ್ಲಾ. ನಂತರ ನಾನು ಟಕ್ಕರಕೊಟ್ಟ ಲಾರಿ ನೋಡಲಾಗಿ ನಂ ಎಂ.ಹೆಚ್-40/ಎಕೆ-0876 ಅಂತಾ ಇದ್ದು ಅದರ ಚಾಲಕನನ್ನು ವಿಚಾರಿಸಲಾಗಿ ಆತನ ಹೆಸರು ಮುಕೇಶ ತಂದೆ ಪರಶುರಾಮ ಡೊಂಗರೆ ವಯ: 28 ವರ್ಷ, ಜಾ: ಪವಾರ, : ಲಾರಿ ಚಾಲಕ ಸಾ: ಕಲ್ಪನಾನಗರ ನಾರಿ ರೋಡ್ ಪೋಸ್ಟ್: ಉಪ್ಪಲವಾಡಿ ತಾ:ಜಿ: ನಾಗಪೂರ  ರಾಜ್ಯ ಮಹಾರಾಷ್ಟ್ರ ಅಂತಾ ತಿಳಿಸಿದ್ದು ಇರುತ್ತದೆ.  ಕಾರಣ ಸದರಿ ಲಾರಿ ಚಾಲಕನ ವಿರುದ್ದ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 247/2016 ಕಲಂ:447, 324, 504, 506 ರಡ್ ವಿತ್ 34 ಐಪಿಸಿ.

ದಿನಾಂಕ:- 26-08-2016 ರಂದು ರಾತ್ರಿ 10:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೃಷ್ಣರಾವ್ ತಂದೆ ಲಚ್ಚಯ್ಯ ವಯಸ್ಸು: 42 ವರ್ಷ ಜಾತಿ: ಕಮ್ಮಾ, ಉ: ಒಕ್ಕಲತನ ಸಾ: ಬರಗೂರ ಕ್ಯಾಂಪ್, ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಿನ್ನೆ ದಿನಾಂಕ: 25-08-2016 ರಂದು ಮುಂಜಾನೆ 10:30 ಗಂಟೆಯ ಸುಮಾರಿಗೆ ನಾನು ಶ್ರೀರಾಮನಗರದ ಭೂಮಿ ಸರ್ವೆ ನಂ: 129/39/ಅಪಿ5 ವಿಸ್ತ್ರೀರ್ಣ 1 ಎಕರೆ 35 ಗುಂಟೆ ಜಮೀನಿನಲ್ಲಿ ಸಸಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾಗ ಅಲ್ಲಿಗೆ ಬಂದ 1] ಸತ್ಯನಾರಾಯಣ ತಂದೆ ವೆಂಕಟರತ್ನಂ ವಯಸ್ಸು: 50 ವರ್ಷ 2] ಶ್ರೀಮತಿ ಮದ್ದಿಕೂರಿ ಮಾಣಿಕ್ಯಂ ಗಂಡ ಈರಣ್ಣ ವಯಸ್ಸು: 50 ವರ್ಷ 3] ಚುಂಡ್ರು ಗೋಪಿ ತಂದೆ ಸತ್ಯಂ 35 ವರ್ಷ ಸಾ: ಎಲ್ಲರೂ ಶ್ರೀರಾಮನಗರ ಇವರು ಎಕೊದ್ದೇಶದದಿಂದ ಆಕ್ರಮ ಕೂಟ ರಚಿಸಿಕೊಂಡು ಅತೀಕ್ರಮ ಪ್ರವೇಶ ಮಾಡಿ ದುರುದ್ದೇಶ ಪೂರಿತವಾಗಿ ಕೈಯಲ್ಲಿ ಬಡಿಗೆ ಖಾರದ ಪುಡಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು “ ಏನಲೇ ಸೂಳೆ ಮಗನೇ ಕೋರ್ಟ ನಲ್ಲಿ ಆದ ಕೇಸಿನ ವಿರುದ್ದ ಅಪೀಲು ಹಾಕುತ್ತೀಯಾ ನಿನ್ನದು ಎಷ್ಟಲೇ ತಿಂಡಿ ಬೊಸುಡಿ ಸೂಳೆ ಮಗನೇ ” ಅಂತಾ ತೆಲಗು ಭಾಷೆಯಲ್ಲಿ ಬೈಯುತ್ತಾ ನನ್ನನ್ನು ಕೆಸರಿನಲ್ಲಿ ದೂಕಿದರು. ನಂತರ ಚುಂಡ್ರು ಗೋಪಿ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಜೋರಾಗಿ ಬಡಿದನು. ಆಗ ಮದ್ದಿಕೋರಿ ಮಾಣಿಕ್ಯಂ ಈಕೆಯು ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಖಾರದ ಪುಡಿಯನ್ನು ನನ್ನ ಕಣ್ಣಿನಲ್ಲಿ ತೂರಿದಳು, ನನಗೆ ಕಣ್ಣು ಕಾಣದಂತಾಗಿ ಉರಿ ತಾಳಲಾರದೇ ಜೋರಾಗಿ ಚೀರತೊಡಗಿದೆ. ಅಷ್ಟರಲ್ಲಿ ಸತ್ಯನಾರಾಯಣ ಈತನು ತನ್ನ ಕೈಯಲ್ಲಿ ಹಿಡಿ ಗಾತ್ರದ ಕಲ್ಲಿನಿಂದ ನನ್ನ ಎದೆ ಹೊಟ್ಟೆ ಮತ್ತು ಬೆನ್ನಿಗ ಜೋರಾಗಿ ಗುದ್ದತೊಡಗಿದನು. ಇದರಿಂದಾಗಿ ನನಗೆ ಸಾಧಾ ಸ್ವರೂಪದ ಗಾಯವಾಗಿ ಮೈಕೈ ನೊಯುತ್ತಿದ್ದವು. ಆಗ ಅಲ್ಲಿಯೇ ನನ್ನ ಪಕ್ಕದ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಎನ್. ಶ್ರೀನಿವಾಸ ತಂದೆ ಸುಬ್ಬರಾವ್ ಸಾ: ಬರಗೂರ ಕ್ಯಾಂಪ್ ಈತನು ಓಡುತ್ತಾ ಬಂದು ನನ್ನನ್ನು ಬಿಡಿಸಿಕೊಂಡನು. ಆಗ ಸದರಿ ಎಲ್ಲರೂ ಇಂದು ನೀನು ಉಳಿದುಕೊಂಡಲೇ ಮಗನೇ ಇಂದಿಲ್ಲಾ ನಾಳೆ ನಿನ್ನನ್ನು ಇದೇ ಭೂಮಿಯಲ್ಲಿ ಹೂತು ಹಾಕಿ ಹುಟ್ಟಿಲ್ಲಾ ಎನಿಸಿಬಿಡುತ್ತೇವೆ ಎನ್ನುತ್ತಾ ಹೊರಟು ಹೋದರು. ಈಗ್ಗೆ ಸುಮಾರು 4 ವರ್ಷಗಳಿಂದ ಸದರಿ ಭೂಮಿಯನ್ನು ನಾನೇ ಸಾಗುವಳಿ ಮಾಡುತ್ತಿದ್ದು ಮಾಲಿಕನೂ ಮತ್ತು ಉಳುಮೆದಾರನು ಇರುತ್ತೇನೆ. ಈ ಜಮೀನಿನ ಸಂಭಂದವಾಗಿ ಮಾನ್ಯ ಹಿ. ಶ್ರೇ ನ್ಯಾಯಲಯದಲ್ಲಿ ಸಿವಿಲ್ ದಾವೆ ಹೂಡಿದ್ದೆನು. ಅವುಗಳ ಓ.ಎಸ್. ಸಂ: 132/13 ಮತ್ತು 133/2013 ಇರುತ್ತವೆ. ಹಿರಿಯ ಸಹೋದರ ಮತ್ತು ಹಿರಿಯವರಲ್ಲಿ ವಿಚಾರಿಸಿ ದೂರು ನೀಡಲು ತಡವಾಗಿದೆ. ಕಾರಣ ಮಾನ್ಯರು ಏಕಾಏಕಿ ಹಲ್ಲೆ ಮಾಡಿ ನನ್ನ ಭೂಮಿಯಲ್ಲಿ ಅತೀಕ್ರಮ ಪ್ರವೇಶ ಮಾಡಿ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆಬಡೆ ಮಾಡಿ ಕಣ್ಣಿನಲ್ಲಿ ಖಾರದ ಪುಡಿ ಉಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ " ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, August 25, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 190/2016 ಕಲಂ: 87 Karnataka Police Act.
ದಿನಾಂಕ:-24-8-2016 ರಂದು ಸಾಯಂಕಾಲ 5-45 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ, ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ದಿನಾಂಕ 24-08-2016 ರಂದು ಸಾಯಂಕಾಲ 4-15 ಗಂಟೆಯ ಸುಮಾರಿಗೆ ಕಾರಟಗಿಯ ಕೆ..ಬಿ ಹಿಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 4 ಜನರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ಒಟ್ಟು ರೂ. 2410=00 ಗಳನ್ನು ಮತ್ತು ಇಸ್ಪೀಟ್  ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ವರದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 176/2016  ಕಲಂ: 78(3) Karnataka Police Act.
ದಿನಾಂಕ: 24-08-2016 ರಂದು ಸಂಜೆ 18-30 ಗಂಟೆಗೆ ಶ್ರೀ ಬೀಮನಗೌಡ. ಎ. ಬಿರಾಧರ  ಪಿ.ಐ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಮಟಕ ಜೂಜಾಟದಲ್ಲಿ ತೊಡಗಿದ ಒಬ್ಬ ವ್ಯಕ್ತಿಯೊಂದಿಗೆ ಮಟಕ ದಾಳಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ತಮ್ಮದೊಂದು ವರದಿಯೊಂದಿಗೆ ಸಲ್ಲಿಸಿದ್ದು ದಿನಾಂಕ 24-08-2016 ರಂದು 17-00 ಗಂಟೆಯ ಸುಮಾರಿಗೆ ಆರೋಪಿತನಾದ ಹುಸೇನ ತಂದೆ ರಾಜಮಹ್ಮದ್ ಸಾಬ ವಯಾ: 29 ವರ್ಷ ಜಾ; ಮುಸ್ಲಿಂ ಉ: ಕಾಯಿಪಲ್ಯ ವ್ಯಾಪಾರ ಸಾ: ಇಸ್ಲಾಂಪುರ, ಗಂಗಾವತಿ ಈತನು  ಗಂಗಾವತಿ  ಶಹರದ ಮಹೆಬೂಬ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು   ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವ ಮೇಲೆ ಪಿ ಐ ನಗರ ಠಾಣೆ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ಹಣ ರೂ. 650-00 02 ] ಒಂದು ಮಟಕಾ ನಂಬರ ಬರೆದ ಚೀಟಿ ಅಂ. ಕಿ 00 03] ಒಂದು ಕಾರ್ಬನ್ ಕಂಪನಿಯ ಮೊಬೈಲ್ ಅಂ.ಕಿ 300  04] 01 ಬಾಲ್ ಪೆನ್ ಅಂ.ಕಿ 00 ದೊರೆತಿದ್ದುಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 141/2016  ಕಲಂ: 78(3) Karnataka Police Act.
ದಿನಾಂಕ: 24-08-2016 ರಂದು ರಾತ್ರಿ 09-15 ಗಂಟೆಗೆ ಶ್ರೀ ರುದ್ರೇಶ ಉಜ್ಜನಕೊಪ್ಪ. ಪಿ.. ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ದಿ: 24-08-2016 ರಂದು ರಾತ್ರಿ 7-35 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಏರಿಯಾದ ವಾರಕಾರ ಓಣಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ: 01 ಮಂಜುನಾಥ ಗೋಪಾಳಿ ಈತನು ಸಾರ್ವಜನಿಕರಿಗೆ ಕರೆದು ಇದು ನಶೀಬದ ಆಟ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ, ಯಾರ ಅದೃಷ್ಟ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ. ರವರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 3020=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್, 02 ಮೊಬೈಲ್ ಪೋನಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ಹಾಜರುಪಡಿಸಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 239/2016  ಕಲಂ: 87 Karnataka Police Act.

ದಿನಾಂಕ 24-08-2016 ರಂದು ರಾತ್ರಿ 10-05 ಗಂಟೆಗೆ ಮಾನ್ಯ ನ್ಯಾಯಾಲಯದ ಅನುಮತಿ ಸ್ವೀಕೃತವಾದ ಮೇರೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ನೀಡಿದ ಒಂದು ವರದಿ ಮತ್ತು ಪಂಚನಾಮೆಯ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಜುಂಜಲಕೊಪ್ಪ ಗ್ರಾಮದ ಹಾದಿ ಉಸುಕಿನ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಹೆಚ್.ಸಿ-108, ಪಿ.ಸಿ-117, 161, 116, 426, 105,407,393  ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 07 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 5,400=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ಪ್ಲಾಸ್ಟೀಕ್ ಬರ್ಕಾ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008