Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, November 30, 2015

ದಿ:29-11-2015 ರಂದು ಬೆಳಿಗ್ಗೆ 07-00 ಗಂಟೆಗೆ ಫಿರ್ಯಾದಿದಾರರಾದ, ಶ್ರೀ ಪ್ರದೀಪ ತಂದೆ ಹನುಮಂತಸಾ ಮೇಘರಾಜ ಸಾ: ಭಾಗ್ಯನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೆ, ನಿನ್ನೆ ದಿನಾಂಕ: 28-11-2015 ರಂದು ಸಂಜೆ ಮರಿಯಮ್ಮನಹಳ್ಳಿಯಲ್ಲಿ ನಮ್ಮ ಸಂಬಂಧಿಕರನ್ನು ಕಂಡು ಮಾತನಾಡಿಸಿ ಅಲ್ಲಿಂದ ವಾಪಾಸ್ ಊರಿಗೆ ಬರುತ್ತಿದ್ದೆನು. ನಂತರ ಹೊಸಪೇಟೆ-ಕೊಪ್ಪಳ ಎನ್.ಹೆಚ್-63 ರಸ್ತೆಯ ಕಲ್ಯಾಣಿ ಫ್ಯಾಕ್ಟರಿಯ ಸಮೀಪದಲ್ಲಿ ಕೊಪ್ಪಳ ಕಡೆಗೆ ಬರುತ್ತಿದ್ದಾಗ ರಾತ್ರಿ 9-00 ಗಂಟೆಯ ಸುಮಾರಿಗೆ ನನ್ನ ಮುಂದೆ ರಸ್ತೆಯ ಎಡಬಾಜು ಒಂದು ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ನ್ನು ಓಡಿಸಿಕೊಂಡು ಹೊರಟಿದ್ದನು. ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಯಾವುದೋ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ನನ್ನ ಮುಂದೆ ಹೊರಟಿದ್ದ ಮೋಟಾರ ಸೈಕಲ ಗೆ ಟಕ್ಕರ ಕೊಟ್ಟಾಗ ಮೋಟಾರ ಸೈಕಲ್ ಸವಾರನು ಮೋಟಾರ ಸೈಕಲ್ ಸಮೇತ ತನ್ನ ಪಕ್ಕದಲ್ಲಿ ಸೈಕಲ್ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಗೆ ಬಡಿದು ಇಬ್ಬರೂ ಕೆಳಗಡೆ ಬಿದ್ದರು. ಆಗ ನಾನು ನನ್ನ ಮೋಟಾರ ಸೈಕಲ್ ನಿಲ್ಲಿಸಿ ಹತ್ತಿರ ಹೋದೆನು. ಟಕ್ಕರ ಕೊಟ್ಟ ಲಾರಿ ಚಾಲಕನು ಸಹ ಲಾರಿಯನ್ನು ನಿಲ್ಲಿಸಿ ಹತ್ತಿರ ಬಂದು ಕೆಳಗಡೆ ಬಿದ್ದವರನ್ನು ಮತ್ತು ನನ್ನನ್ನು ನೋಡಿ ಲಾರಿ ಚಾಲಕನು ತನ್ನ ಲಾರಿಯನ್ನು ತೆಗೆದುಕೊಂಡು ಹೊಸಪೇಟೆ ಕಡೆಗೆ ಹೋದನು. ಈ ಅಪಘಾತದಲ್ಲಿ ಕೊಪ್ಪಳ ಗ್ರಾಮೀಣ ಠಾಣೆಯ ಅಂದಪ್ಪ ಪೊಲೀಸರಿಗೆ ಎರಡೂ ಮೊಣಕಾಲ ಹತ್ತಿರ ತೆರೆಚಿದ ಗಾಯಗಳಾಗಿದ್ದವು. ಮತ್ತು ಬಲಗಡೆ ಕಣ್ಣಿನ ಪಕ್ಕದಲ್ಲಿ ತೆರೆಚಿದ ಗಾಯವಾಗಿತ್ತು. ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಲ್ಲದೇ ಸೈಕಲ್ ತೆಗೆದುಕೊಂಡು ಹೊರಟಿದ್ದ ವ್ಯಕ್ತಿಗೆ ಸಹ ನೋಡಲಾಗಿ ಆತನ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೈ ಕೈ ಗಳಿಗೆ ತೆರೆಚಿದ ರಕ್ತಗಾಯಗಳಾಗಿದ್ದು ಆತನು ಸಹ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಪಘಾತದಲ್ಲಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯ ಹೆಸರು ಕೊಟ್ರೇಶ ಮ್ಯಾಳಿ. ಕಲ್ಯಾಣಿ ಫ್ಯಾಕ್ಟರಿಯ ಕೆಲಸಗಾರ, ಸಾ: ಹೊಸಕನಕಾಪೂರ ಅಂತಾ ಗೊತ್ತಾಯಿತು. ಕಾರಣ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ನಿಲ್ಲಿಸದೇ ಹೋದ ಲಾರಿ ಮತ್ತು ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 277/2015 ಕಲಂ: 279,338 ಐಪಿಸಿ ಹಾಗೂ ಕಲಂ: 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 342/2015  ಕಲಂ. 279, 338 ಐ.ಪಿ.ಸಿ:.
ದಿನಾಂಕ:- 29-11-2015 ರಂದು ಸಂಜೆ 6:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಿವಪುತ್ರಪ್ಪ ತಂದೆ ಸಣ್ಣ ನಿಂಗಪ್ಪ ಕುದರಿಕೊಟಗಿ, ವಯಸ್ಸು 31 ವರ್ಷ, ಜಾತಿ: ಗಾಣಿಗ ಉ: ಗುಮಾಸ್ತ ಸಾ: ಗುಡ್ಡದ ಕ್ಯಾಂಪ್ ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. "ನಾನು ಗುಡ್ಡದ ಕ್ಯಾಂಪಿನ ನಿವಾಸಿ ಇದ್ದು ಖಾಸಗಿ ಗುಮಾಸ್ತ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕ್ಯಾಂಪ್ ನಲ್ಲಿ ನನ್ನ ಸಂಬಂಧಿಕರಾದ ಚಂದಪ್ಪನ ಮಗಳು ಋತುಮತಿಯಾಗಿದ್ದರಿಂದ ಇಂದು ದಿನಾಂಕ:- 29-11-2015 ರಂದು ಅವರ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದಕ್ಕಾಗಿ ಊರಿನಿಂದ ಸಂಬಂಧಿಕರುಗಳು ಬಂದಿದ್ದರು.  ಅದರಂತೆ ನಮ್ಮ ಸಂಬಂಧಿಕರಾದ  (1) ಹೆಚ್.ದ್ಯಾಮಣ್ಣ ತಂದೆ ನಿಂಗಪ್ಪ ಹೊಸಳ್ಳಿ, ವಯಸ್ಸು 36 ವರ್ಷ, ಜಾತಿ: ಗಾಣಿಗ ಉ: ಒಕ್ಕಲುತನ ಸಾ: ಮ್ಯಾದನೇರಿ ತಾ: ಯಲಬುರ್ಗಾ  (2) ರಾಮಣ್ಣ ತಂದೆ ದ್ಯಾಮಣ್ಣ ಹೊಸಳ್ಳಿ, ವಯಸ್ಸು 33 ವರ್ಷ, ಜಾತಿ: ಗಾಣಿಗ ಉ: ಒಕ್ಕಲುತನ ಸಾ: ಮ್ಯಾದನೇರಿ ತಾ: ಯಲಬುರ್ಗಾ ಇವರುಗಳು ಸಹ ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ದ್ಯಾಮಣ್ಣ ಮತ್ತು ರಾಮಣ್ಣ ಇವರಿಬ್ಬರೂ ಕೂಡಿಕೊಂಡು ಸಂಜೆ ಬಜಾಜ್ ಸಿ.ಟಿ. 100 ಮೋಟಾರ ಸೈಕಲ್ ನಂಬರ್: ಕೆ.ಎ-34/ ಆರ್-4469 ನೇದ್ದರಲ್ಲಿ ವಾಪಸ್ ಮ್ಯಾದನೇರಿಗೆ ಹೊರಟರು. ದ್ಯಾಮಣ್ಣನು ಮೋಟಾರ ಸೈಕಲ್ ನಡೆಯಿಸುತ್ತಿದ್ದನು.  ಅವರ ಹಿಂದೆಯೇ ರುದ್ರಪ್ಪ ತಂದೆ ಕಳಕಪ್ಪ ವದ್ನಾಳ, 40 ವರ್ಷ, ಸಾ: ಮ್ಯಾದನೇರಿ ಈತನು ಸಹ ಮೋಟಾರ ಸೈಕಲ್ ನಡೆಯಿಸಿಕೊಂಡು ಊರಿಗೆ ಹೊರಟನು. ಅವರು ಹೋದ ಸ್ವಲ್ಪ ಸಮಯದ ನಂತರ  ಅಂದರೆ ಸಂಜೆ 4:15 ಗಂಟೆಯ ಸುಮಾರಿಗೆ ರುದ್ರಪ್ಪನು ಫೋನ್ ಮಾಡಿ  ದ್ಯಾಮಣ್ಣ ಮತ್ತು ರಾಮಣ್ಣ ಇವರಿಗೆ ದಾಸನಾಳ ಬ್ರಿಡ್ಜನಲ್ಲಿ ಲಾರಿ ಅಪಘಾತವಾಗಿ ಇಬ್ಬರೂ ಗಾಯಗೊಂಡಿರುತ್ತಾರೆ ಅಂತಾ ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ದ್ಯಾಮಣ್ಣನಿಗೆ ಹಣೆಯ ಎಡಗಡೆ ತೀವ್ರ ಪೆಟ್ಟಾಗಿ ಎಡಕಿವಿಯಲ್ಲಿ ರಕ್ತ ಬಂದಿದ್ದು, ತಲೆಯ ಹಿಂಭಾಗ ತೀವ್ರ ಒಳಪೆಟ್ಟಾಗಿ ಎಡ ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ರಾಮಣ್ಣನಿಗೆ ಎಡ ಮುಂಗೈ ಹತ್ತಿರ ತೀವ್ರ ಒಳಪೆಟ್ಟಾಗಿ, ಎಡಗಾಲು ಮೊಣಕಾಲು ಕೆಳಗೆ ಒಳಪೆಟ್ಟಾಗಿ, ಎಡ ಹಣೆ ಹತ್ತಿರ ಗಾಯವಾಗಿತ್ತು. ಸ್ಥಳದಲ್ಲಿ ಅವರ ಮೋಟಾರ ಸೈಕಲ್ ಬಿದ್ದಿದ್ದು, ಅಲ್ಲಿದ್ದ ರುದ್ರಪ್ಪನಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ, “ ಸಂಜೆ 4:00 ಗಂಟೆಯ ಸುಮಾರಿಗೆ ದ್ಯಾಮಣ್ಣ ಮತ್ತು ರಾಮಣ್ಣ ಇವರು ಮೋಟಾರ ಸೈಕಲ್ ಮೇಲೆ ದಾಸನಾಳ ಬ್ರಿಡ್ಜ್ ಮೇಲೆ ಹೋಗುತ್ತಿದ್ದರು. ತಾನು ಅವರಿಂದ ಸ್ವಲ್ಪ ಅಂತರದಲ್ಲಿ ಹಿಂದೆ ಹಿಂದೆ ಹೋಗುತ್ತಿದ್ದೆನು.  ಆಗ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಲಾರಿ ಚಾಲಕನು ಲಾರಿಯನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ದ್ಯಾಮಣ್ಣ ಮತ್ತು ರಾಮಣ್ಣ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ಇಬ್ಬರೂ ಮೋಟಾರ ಸೈಕಲ್ ಸಮೇತ ಬಿದ್ದು ತೀವ್ರವಾಗಿ ಗಾಯಗೊಂಡರು. ಅಪಘಾತ ಮಾಡಿದ ಲಾರಿ ಸ್ಥಳದಲ್ಲಿಯೇ ಇದೆ ಅಂತಾ ತೋರಿಸಿದನು. ನೋಡಲಾಗಿ ಲಾರಿ ನಂಬರ್: ಎ.ಪಿ-37/ ಟಿ.ಎ-2233 ಅಂತಾ ಇದ್ದು, ಅದರ ಚಾಲಕನ ಹೆಸರು ವಿಚಾರಿಸಲು ರಮೇಶ.ಜಿ ತಂದೆ ವೆಂಕಟರಾವ್, 49 ವರ್ಷ, ಸಾ: ಅಗರ್ತಿಪಾಲೆಂ, ಪಾಲಕೊಲ್ಲು ಮಂಡಲಂ, ಪಶ್ಚಿಮ ಗೋದಾವರಿ ಜಿಲ್ಲೆ ಅಂತಾ ತಿಳಿಸಿದನು. 108 ಗೆ ಫೋನ್ ಮಾಡಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ಗಾಯಗೊಂಡ ದ್ಯಾಮಣ್ಣ ಮತ್ತು ರಾಮಣ್ಣ ಇವರನ್ನು ಕರೆದುಕೊಂಡು ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ  ದಾಖಲು ಮಾಡಿದ್ದು, ವೈದ್ಯರು ಪರೀಕ್ಷೆ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಕರೆದುಕೊಂಡ ಹೋಗಲು ತಿಳಿಸಿದ್ದರಿಂದ ರುದ್ರಪ್ಪನೊಂದಿಗ ಕೊಪ್ಪಳಕ್ಕೆ ಕಳುಹಿಸಿಕೊಟ್ಟು ಈಗ ನಾನು ಪೊಲೀಸ್ ಠಾಣೆಗೆ ಹಾಜರಾಗಿ ಈ ಹೇಳಿಕೆ ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ  ಈ ಅಪಘಾತ ಮಾಡಿದ ಲಾರಿ ಚಾಲಕ ರಮೇಶ. ಜಿ ಈತನ ವಿರುದ್ಧ  ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಳ್ಳಲಾಯಿತು.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 343/2015  ಕಲಂ. 279, 338 ಐ.ಪಿ.ಸಿ:.
ದಿನಾಂಕ:- 29-11-2015 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಂಗಪ್ಪ ತಂದೆ ಮಲ್ಲಪ್ಪ ಮೇಟಿ, ವಯಸ್ಸು 40 ವರ್ಷ, ಜಾತಿ: ಲಿಂಗಾಯತ, ಉ: ಒಕ್ಕಲುತನ ಸಾ: ಆರಾಳ ತಾ: ಗಂಗಾವತಿ ಇವರು ಬರೆಯಿಸಿಕೊಟ್ಟ ಲಿಖಿತ ದೂರನ್ನು ಈಶಪ್ಪ ತಂದೆ ಚೆನ್ನಪ್ಪ ಬಿಜಕಲ್ ಸಾ: ಆರಾಳ ಇವರು ತಂದು ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ:- 29-11-2015 ರಂದು ಸಂಜೆ ನನ್ನ ಮಕ್ಕಳಾದ ಶಾಂತಾ-15 ವರ್ಷ, ಪಂಪಾಪತಿ-10 ವರ್ಷ ಇವರಿಗೆ ಸ್ವರ್ಣ ಬಿಂದು ಲಸಿಕೆಯನ್ನು ಹಾಕಿಸಿಕೊಂಡು ಬರುವ ಸಲುವಾಗಿ ನನ್ನ ಹಿರೋಹೋಂಡಾ ಸಿ.ಡಿ. ಡಿಲಕ್ಸ್ ಮೋಟಾರ ಸೈಕಲ್ ನಂಬರ್: ಕೆ.ಎ-37/ ಯು-5068 ನೇದ್ದರಲ್ಲಿ ಮೂವರು ಕೂಡಿಕೊಂಡು ಆರಾಳದಿಂದ ಬಸಾಪಟ್ಟಣಕ್ಕೆ ಬರುತ್ತಿದ್ದೆವು. ರಾತ್ರಿ 7:00 ಗಂಟೆಯ ಸುಮಾರಿಗೆ ನಾನು ಆರಾಳ-ಬಸಾಪಟ್ಟಣ ರಸ್ತೆಯ ಬಸಾಪಟ್ಟಣ ಸೀಮಾದ ಪಚ್ಚೇದ ಹಳ್ಳದ ಹತ್ತಿರ ಮೋಟಾರ ಸೈಕಲ್ ನಡೆಯಿಸಿಕೊಂಡು ನಿಧಾನವಾಗಿ ರಸ್ತೆಯ ಎಡಗಡೆ ಬರುತ್ತಿರುವಾಗ ನಮ್ಮ ಎದುರುಗಡೆ ಬಸಾಪಟ್ಟಣ ಕಡೆಯಿಂದ ಬಂದ ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲ್ ನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ಎಲ್ಲರೂ ಮೋಟಾರ ಸೈಕಲ್ ಗಳ ಸಮೇತ ಕೆಳಗೆ ಬಿದ್ದೆವು. ಅಪಘಾತದಿಂದ ನನಗೆ ಎಡಗಾಲ ಮೊಣಕಾಲಿಗೆ ತೀವ್ರ ರಕ್ತಗಾಯವಾಯಿತು. ನನ್ನ ಮಗಳು ಶಾಂತಾಳಿಗೆ ಎಡಗಾಲು ಮೊಣಕಾಲಿಗೆ ತೀವ್ರ ರಕ್ತಗಾಯವಾಯಿತು, ನನ್ನ ಮಗ ಪಂಪಾಪತಿಗೆ ಬಲಗೈ ಮೊಣಕೈ ಹತ್ತಿರ ತೆರೆಚಿದ ಗಾಯವಾಯಿತು. ಅಪಘಾತ ಮಾಡಿದ ಮೋಟಾರ ಸೈಕಲ್ ನೋಡಲು ಹಿರೋ ಹೋಂಡಾ ಸಿ.ಡಿ. ಡಿಲಕ್ಸ್ ನಂಬರ್: ಕೆ.ಎ-37/ ಆರ್-1231 ಅಂತಾ ಇದ್ದು, ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕನಿಗೆ ವಿಚಾರಿಸಲು ಆತನ ಹೆಸರು ಶಂಕರ ತಂದೆ ಹನುಮಪ್ಪ ಕುದ್ರಿಮೋತಿ ವಯಸ್ಸು: 24 ವರ್ಷ ಸಾ: ಕರೆಕಲ್ಲಪ್ಪ ಕ್ಯಾಂಪ್ ಅಂತಾ ತಿಳಿಸಿದ್ದು, ಆತನಿಗೆ ಅಲ್ಪಸ್ವಲ್ಪ ಪೆಟ್ಟಾಗಿದ್ದವು. ಆತನ ಸಂಗಡ ಮೋಟಾರ ಸೈಕಲ್ ನ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಗೆ ಎಡಗೈ ಮುಂಗೈ ಹತ್ತಿರ ತೀವ್ರ ರಕ್ತಗಾಯವಾಗಿದ್ದು, ವಿಚಾರಿಸಲು ಆತನ ಹೆಸರು ರಮೇಶ ತಂದೆ ತಿಮ್ಮಣ್ಣ, ವಯಸ್ಸು 30 ವರ್ಷ, ಜಾತಿ: ವಡ್ಡರು ಉ: ಕಲ್ಲು ಒಡೆಯುವುದು ಸಾ: ಸಿದ್ದಿಕೇರಿ ತಾ: ಗಂಗಾವತಿ ಅಂತಾ ತಿಳಿಯಿತು. ನಂತರ ಯಾವುದೋ ಒಂದು ಆಟೋದಲ್ಲಿ ಗಾಯಗೊಂಡವರೆಲ್ಲರೂ ಕೂಡಿಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿದ್ದು ಚಿಕಿತ್ಸೆ ಮಾಡಿದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಬಂದು ಸೇರಿಕೆಯಾಗಿ ಚಿಕಿತ್ಸೆ ಪಡೆದ ನಂತರ ಈಗ ತಡವಾಗಿ ಈ ನನ್ನ ದೂರನ್ನು ಬರೆಯಿಸಿ ಕೊಟ್ಟಿರುತ್ತೇನೆ. ಕಾರಣ ಈ ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕ ಶಂಕರ ತಂದೆ ಹನುಮಪ್ಪ ಸಾ: ಕರೆಕಲ್ಲಪ್ಪ ಕ್ಯಾಂಪ್ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ" ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.  
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 267/2015  ಕಲಂ. 143, 147, 341, 323, 324, 354, 504, 506 ಸಹಿತ 149 ಐ.ಪಿ.ಸಿ:.

ದಿನಾಂಕ 29-11-2015 ರಂದು 22-30 ಗಂಟೆಗೆ ಶ್ರೀಮತಿ ಲಕ್ಷ್ಮೀ ಗಂಡ ವೀರೇಶ ಪೂಜಾರ, ವಯಸ್ಸು 30 ವರ್ಷ, ಜಾ: ಕುರುಬರ,   ಉ: ಮನೆಗೆಲಸ, ಸಾ: ಲಿಂಗರಾಜ ಕ್ಯಾಂಪ್-ಗಂಗಾವತಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 29-11-2015 ರಂದು ನನ್ನ ತಮ್ಮನಾದ ವೀರೇಶ ತಂದೆ ಸಿದ್ದಪ್ಪ ಪೂಜಾರ ಇವನು ಬೈಕ್ ನಡೆಸಿಕೊಂಡು ಬರುವಾಗ ಪ್ರಶಾಂತನಗರದ  ಅನ್ನು ತಂದೆ ಕಾಲಿಯಾಸಾಬ ಹಾಗೂ ಜುಬೇರ ಇವರಿಬ್ಬರೂ ಸೇರಿಕೊಂಡು ಬಾಯಿ ಮಾತಿನ ಜಗಳಾ ಮಾಡಿಕೊಂಡಿದ್ದು, ಜಗಳವನ್ನು ನನ್ನ ಇನ್ನೊಬ್ಬ ಖಾಸ ತಮ್ಮ ಮಲ್ಲಿಕಾರ್ಜುನ ಇವನು ಬಿಡಿಸಿದ್ದನು.  ಇದೇ ವಿಷಯವಾಗಿ ರಾತ್ರಿ 8-30 ಗಂಟೆ ಸುಮಾರಿಗೆ ಪ್ರಶಾಂತನಗರದ (1) ಅನ್ನು ತಂದೆ ಕಾಲಿಯಾಸಾಬ ಇವನು ತನ್ನ ತಮ್ಮನಾದ (2) ದಾದಾಪೀರ ತಂದೆ ಕಾಲಿಯಾಸಾಬ ಇವರು ತಮ್ಮ ಸಂಗಡಿಗರಾದ (3) ಜುಬೇರ (4) ಇಬ್ರಾಹಿಂ @ ಸೊಂಡಿ  (5) ರಂಜಾನ್ @ ವಡಕಾ (6) ಮಹ್ಮದ್ ಮತ್ತು ಸಂತೇಬಯಲಿನ  (7) ಅಜ್ಜು ತಂದೆ ಮುಸ್ತಫಾ ಹಾಗೂ ಲಿಂಗರಾಜ ಕ್ಯಾಂಪಿನ  (8) ರಹೀಮ ತಂದೆ ಕುತುಬುದ್ದೀನ್ ಮತ್ತಿತರರು ಇವರೆಲ್ಲರೂ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದು ಲೇ ಸೂಳೇಮಕ್ಕಳ ಹೊರಗ್ ಬರ್ರಿಲೇ ಅಂತಾ ಕೂಗಾಡುತ್ತಿದ್ದು, ಆಗ ನಾನು, ನಮ್ಮ ಮನೆಯಿಂದ ಹೊರಗೆ ಬಂದು ಯಾಕ್ರಪ್ಪಾ ಏನಾಯ್ತು ಅಂತಾ ಕೇಳುವಷ್ಟರಲ್ಲಿ ಎಲ್ಲಿ ಅದರಾ ಆ ಸೂಳೇ ಮಕ್ಕಳ, ಇವತ್ ಅವ್ರನ್ನ  ಮುಗಿಸಿಬಿಡ್ತಿವಿ ಅಂತಾ ಅನ್ನುತ್ತಾ ನನ್ನನ್ನು ತಡೆದು ನಿಲ್ಲಿಸಿ ದಬ್ಬಿಕೊಂಡು ಮುಂದೆ ಬಂದರು.  ಆಗ ನಾನು, ನನ್ನ ತಮ್ಮಂದಿರು ಮನೆಯಲ್ಲಿಲ್ಲ ಅಂತಾ ಹೇಳುತ್ತಾ ಮುಂದೆ ಹೋದಾಗ ಮಹ್ಮದ್ ಇವನು ನನ್ನ ಎಡಗೈಯನ್ನು ಹಿಡಿದು ತಿರುವಿ ಕೈಯಿಂದ ಬೆನ್ನಿಗೆ ಗುದ್ದಿ,  ಹಾಕ್ರಲೇ ಈಕಿಗೆ ಅಂತಾ ಅಂದಾಗ ಉಳಿದವರು ನನ್ನನ್ನು ಹಿಡಿದು ದೂಕಾಡಿ ಕೈಯಿಂದ ಹೊಡೆಬಡೆ ಮಾಡಿದ್ದು, ಅಲ್ಲದೇ ನನ್ನ ಸೀರೆ ಹಿಡಿದು ಎಳೆದು ಅಪಮಾನ ಮಾಡಿದರು.  ನಂತರ ಅವರೆಲ್ಲರೂ ಇವತ್ ಇವರ್ ಬಂದ್ರ ಅಂತ ಉಳಕೊಂಡಿ, ನಮ್ಮ ತಂಟೆಗೆ ಬಂದರ್ನೆಲ್ಲಾ ಸಾಯಿಸಿ ಬಿಡ್ತಿವಿ ಹುಷಾರ್ ಅಂತಾ ಅನ್ನುತ್ತಾ ಅಲ್ಲಿಂದ ಹೊರಟು ಹೋದರು. ಕಾರಣ ಸದರಿ 8 ಜನರು ಹಾಗೂ ಮತ್ತಿತರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Sunday, November 29, 2015

ದಿನಾಂಕ: 28.11.2015 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಹಿರೆವಂಕಲಕುಂಟಾ ಸೀಮಾದಲ್ಲಿ ಒಬ್ಬ ಲಾರಿ ಚಾಲಕನು ಕುಷ್ಟಗಿ ಕಡೆಯಿಂದ ಹೊಸಪೇಟ ಕಡೆಗೆ ತನ್ನ ಲಾರಿಯನ್ನು ಅತಿ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಎನ್ ಹೆಚ್ 50 ರಸ್ತೆಯ ಮೇಲೆ ಹೊಸಪೇಟ ಕಡೆಗೆ ಹೋಗಲು ಲಾರಿಗಳಿಗೆ ಕೈ ಮಾಡಿ ನಿಲ್ಲಿಸುತ್ತಿದ್ದ ಮಂಜಮ್ಮ ಇವಳಿಗೆ ಬಲವಾಗಿ ಟಕ್ಕರ ಕೊಟ್ಟು ಅಪಘಾತ ಮಾಡಿ ತನ್ನ ಲಾರಿಯನ್ನು ನಿಲ್ಲಿಸದೇ ಅದೇ ವೇಗದಲ್ಲಿ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮಂಜಮ್ಮ ಇವಳಿಗೆ ಭಾರಿ ರಕ್ತಗಾಯವಾಗಿ ಇವಳಿಗೆ ಚಿಕಿತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಚಿಕಿತ್ಸೆ ಮಾಡುವಷ್ಟರಲ್ಲಿ ರಾತ್ರಿ 9:45 ಗಂಟೆಗೆ ಗಾಯಾಳು ಮಂಜಮ್ಮ ಗಂಡ ಮಲ್ಲಿಕಾರ್ಜುನ ಇವಳು ಮೃತಪಟ್ಟಿದ್ದು ಇರುತ್ತದೆ ಅಂತಾ ಇತ್ಯಾದಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 158/2015  ಕಲಂ. 498(ಬಿ) & (ಸಿ) ಸಹಿತ 34 ಐ.ಪಿ.ಸಿ:.
ದಿನಾಂಕ:28-11-2015 ರಂದು 11-15 ಪಿಎಂಕ್ಕೆ ಬಾನಾಪುರದಿಂದ ಪಿರ್ಯಾದಿದಾರನು ಫೋನ್ ಮುಖಾಂತರ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ 11-45 ಪಿಎಂಕ್ಕೆ ಭೇಟಿ ನೀಡಿದಾಗ ಪಿರ್ಯಾದಿದಾರನು ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ಬಾನಾಪುರ ಕ್ರಾಸ್ ದಲ್ಲಿ ಬೀಡಿ ಅಂಗಡಿ ಮತ್ತು ಹೋಟಲ್ ಮಾಡಿಕೊಂಡಿದ್ದು, ಆರೋಪಿತರು ದಿ:28-11-2015 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರನ ಅಂಗಡಿಗೆ ಹೋಗಿ ಒಂದು ಪ್ಯಾಕ್ ಸಿಗರೇಟು ಮತ್ತು ಒಂದು ಲೀಟರ್ ನೀರಿನ ಬಾಟಲ್ ಕೇಳಿದ್ದು, ಕೊಟ್ಟಾಗ ಆರೋಪಿತ ಲವರಾಜ ಇವನು 500-00 ರೂ. ಮುಖಬೆಲೆಯ ನೋಟನ್ನು ಕೊಟ್ಟಿದ್ದು, ಅದನ್ನು ನೋಡಿದಾಗ ಪಿರ್ಯಾದಿದಾರನಿಗೆ ಅದು ಖೋಟಾ ನೋಟು ಅಂತಾ ಕಂಡುಬಂದಿದ್ದರಿಂದ ಅವನು ಆರೋಪಿತ ಲವರಾಜನಿಗೆ ಇದು ಖೋಟಾ ನೋಟು ಬೇರೆ ನೋಟು ಕೊಡಿರಿ ಅಂತಾ ಅಂದಾಗ ಆರೋಪಿತ ಬಾಯಿಮಾಡಹತ್ತಿದ್ದು, ಅದನ್ನು ಕೇಳಿದ ಆಜು-ಬಾಜು ಅಂಗಡಿಯವರು ಬಂದು ನೋಟು ನೋಡಿ ಖೋಟಡಾ ನೋಟು ಅಂತಾ ಗುರುತಿಸಿದಾಗ ಆರೋಪಿ ದತ್ತಾತ್ರೇಯ ಇವನು ಮೋಟಾರ್ ಸೈಕಲ್ ತೆಗೆದುಕೊಂಡು ಪರಾರಿಯಾಗಿದ್ದು, ನಂತರ ಪಿರ್ಯಾದಿದಾರನು ಆರೋಪಿತನನ್ನು ಆಜು-ಬಾಜುದವರ ಸಹಾಯದಿಂದ ಹಿಡಿದು ಕೂಡ್ರಿಸಿಕೊಂಡಿದ್ದು, ಕಾರಣ, ಆರೋಪಿತರು ಖೊಟ್ಟಿ ನೋಟನ್ನು ನಿಜವಾದ ನೋಟು ಎಂಬಂತೆ ಚಲಾವಣೆ ಮಾಡಲು ಬಂದಿದ್ದು, ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ ಇಂದು ದಿನಾಂಕ:29-11-2015 ರಂದು 1-00 ಎಎಂಕ್ಕೆ ಬಂದು, ಸದರ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


Saturday, November 28, 2015

ದಿನಾಂಕ:27-11-2015 ರಂದು 8-00 ಪಿ ಎಂಕ್ಕೆ ಪಿರ್ಯಾದಿದಾರ   ಯಮನಪ್ಪ ತಂದಿ ದುರಗಪ್ಪ ಪುಜಾರ್ ವಯಾ:35 ವರ್ಷ, ಜಾ: ಮಾದರ್, ಉ:ಕೂಲಿ ಸಾ:ವೀರಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರಪಡಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ತನ್ನ ಹೆಂಡತಿ ದೇವಕ್ಕ ಹಾಗೂ ಮಗಳು ಈರಮ್ಮ ವ:6ವರ್ಷ, ಇವರೊಂದಿಗೆ ವೀರಾಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದು ಇರುತ್ತದೆ.  ಪಿರ್ಯಾದಿದಾರನು ದಿನಾಂಕ:23-11-2015 ರಂದು ಮುಂಜಾನೆ 9-00 ಗಂಟೆಗೆ ಕೆಲಸಕ್ಕೆ ಕೊಪ್ಪಳಕ್ಕೆ ಹೋಗಿ ಸಾಯಂಕಾಲ 7-00 ಗಂಟೆಗೆ ವಾಪಸ್ ಮನೆಗೆ ಹೋಗಿದ್ದು, ಆದರೆ, ಮನೆಯಲ್ಲಿ ತನ್ನ ಹೆಂಡತಿ ಮತ್ತು ಮಗಳು ಮನೆಯಲ್ಲಿ ಇರದೇ ಇದ್ದುದರಿಂದ ಸುತ್ತಮುತ್ತಲಿನವರಿಗೆ ಹಾಗೂ ತನ್ನ ಸಂಬಂಧಿಕರಲ್ಲಿ ವಿಚಾರಿಸಿದ್ದು, ಆದರೆ, ಅವರ ಇರುವಿಕೆಯ ಬಗ್ಗೆ ಪತ್ತೆಯಾಗದೇ ದಿನಾಂಕ: 23-11-2015 ರಂದು  9-00 ಎಎಂ ದಿಂದ 7-00 ಪಿಎಂ ಅವಧಿಯಲ್ಲಿ ತನ್ನ ಹೆಂಡತಿ ಮಗಳು ಕಾಣೆಯಾಗಿದ್ದು, ಕಾರಣ, ಸದರಿಯವರನ್ನು ಹುಡುಕಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 124/2015  ಕಲಂ 107 ಸಿ.ಆರ್.ಪಿ.ಸಿ:.
ದಿನಾಂಕ: 27-11-2015 ರಂದು ಮದ್ಯಾಹ್ನ 12-00 ಗಂಟೆಗೆ ನಾನು ಗ್ರಾಮ ಭೇಟಿ ಕುರಿತು ಠಾಣೆಯಿಂದ ಹೋರಟು ಮುದೊಳ, ಕರಮೂಡಿ ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ವಾಪಸ್ ಯಲಬುರ್ಗಾ ಪಟ್ಟಣದಲ್ಲಿ ಪೆಟ್ರೋಲಿಂಗ ಮಾಡುತ್ತಾ ಯಲಬುರ್ಗಾ ಠಾಣೆಯ ರೌಡಿ ಶೀಟ ದಾರರಾದ 01] ಮುತ್ತುರಾಜ ತಂದೆ ಬಾಳಪ್ಪ ಚಲುವಾದಿ ವಯ : 32 ವರ್ಷ ಜಾತಿ : ಚಲುವಾದಿ ಸಾ: ಮೀನಾಕ್ಷಿ ನಗರ ಯಲಬುರ್ಗಾ ಹಾಗೂ 02] ಬಸವರಾಜ ತಂದೆ ಕರಬಸಪ್ಪ ಹೊಸಳ್ಳಿ ವಯ : 29 ವರ್ಷ ಜಾತಿ : ಲಿಂಗಾಯತ  ಸಾ: ಯಲಬುರ್ಗಾ  ರವರ ಬಗ್ಗೆ ಸ್ಥಾನಿಕವಾಗಿ ವಿಚಾರಣೆ ಮಾಡಲಾಗಿ ಸದರಿಯವರು ಮುಂಬರುವ ವಿಧಾನ ಪರಿಷತ್ ಚುನಾವಣೆ ಇದ್ದು, ಸದರಿ ರೌಡಿಶೀಟ್ದಾರರು ಹಳೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಶಾಂತತಾ ಭಂಗ ಮತ್ತು ಗಲಭೆ ಉಂಟು ಮಾಡುವ ಸಾಧ್ಯತೆ ಇರುತ್ತದೆ ಅಂತಾ ಖಚಿತವಾದ ಭಾತ್ಮಿ ಬಂದಿದ್ದು ಇರುತ್ತದೆ. ಸದರಿ ರೌಡಿ ಶೀಟ ದಾರರಲ್ಲಿ 01] ಮುತ್ತುರಾಜ ತಂದೆ ಬಾಳಪ್ಪ ಚಲುವಾದಿ ವಯ : 32 ವರ್ಷ ಜಾತಿ : ಚಲುವಾದಿ ಸಾ: ಮೀನಾಕ್ಷಿ ನಗರ ಯಲಬುರ್ಗಾ ಇತನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 09/2012 ಕಲಂ  324,353,354,355,504,506 .ಪಿ.ಸಿ. ಹಾಗೂ 78/2013 ಕಲಂ 394 .ಪಿ.ಸಿ. ಪ್ರಕರಣ ಗಳು ಧಾಖಲಾಗಿದ್ದು ಹಾಗೂ 02] ಬಸವರಾಜ ತಂದೆ ಕರಬಸಪ್ಪ ಹೊಸಳ್ಳಿ ವಯ : 29 ವರ್ಷ ಜಾತಿ : ಲಿಂಗಾಯತ  ಸಾ: ಯಲಬುರ್ಗಾ ಈತನ ವಿರುದ್ಧ ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ 128/2014 ಕಲಂ 355,353,332,504 ಐ.ಪಿ.ಸಿ ಧಾಖಲಾಗಿದ್ದು ಇರುತ್ತದೆ.  ಸದರಿ ರೌಡಿಶೀಟ್ ದಾರರು ಹಳೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಯಾವುದಾದರೊಂದು ಪಕ್ಷದಲ್ಲಿದ್ದುಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡಿ, ಗಲಭೆ ಉಂಟು ಮಾಡುವ ಸಾಧ್ಯತೆ ಕಂಡುಬಂದಿದ್ದರಿಂದ ಮತ್ತು ಖಚಿತವಾದ ಭಾತ್ಮಿ ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತೆ ಕ್ರಮ ಕುರಿತು ಕೈಕೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 227/2015  ಕಲಂ 107 ಸಿ.ಆರ್.ಪಿ.ಸಿ:.
ಚುನಾವಣಾ ಆಯೋಗ ವಿಧಾನ ಪರಿಷತ್ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ನಗರದಲ್ಲಿ ಅಬ್ಯಥರ್ಿಗಳು ಹಾಗೂ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತಯಾಚಿಸುತ್ತಿದ್ದು, ಅಲ್ಲದೆ ನಗರದಲ್ಲಿ ಸಂಭದಪಟ್ಟ ಮತದಾರರಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ತಮ್ಮ ಬೆಂಬಲಿತ ಅಬ್ಯಥರ್ಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭ ದಲ್ಲಿ ಕೊಪ್ಪಳ ನಗರದ ರೌಡಿ ಶೀಟ್ದಾರನಾದ ಮಹ್ಮದ ಹುಸೇನ್ @ ಗೋಲಿ ತಂದಿ ಅಬ್ದುಲ್ ರಹಿಮಾನ ಸಾಬ ಮಂಡಲಗೇರಿ ಸಾ: ಹಟಗಾರ ಪೇಟೆ ಕೊಪ್ಪಳ ಇವನು ತಮ್ಮ ರೌಡಿ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂಧರ್ಬದಲ್ಲಿ ಬೇರೆ ಬೇರೆ ಅಬ್ಯಥರ್ಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ನಗರದಲ್ಲಿ ಶಾಂತಿ ಕದಡಿ ಅಶಾಂತತೆ ನೆಲಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಇರುತ್ತದೆ. ಕಾರಣ ಮುಂಬರುವ ವಿಧಾನಪರಿಷತ್ ಚುನಾವಣೆ ಶಾಂತಿಯುತವಾಗಿ ನೆಡೆಯುವ ಸಲುವಾಗಿ ಮತ್ತು ಸದರಿಯವನ ರೌಡಿ ಚಟುವಟಿಕೆಯ ನಿಯಂತ್ರಣಕ್ಕಾಗಿ ಸದರಿಯವನ ಮೇಲೆ ಮುಂಜಾಗ್ರತಾ ಕ್ರಮ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 92/2015  ಕಲಂ 110 (ಇ) & (ಜಿ) ಸಿ.ಆರ್.ಪಿ.ಸಿ:.

1] ಶರಣಪ್ಪ ತಂದೆ ಅಮರಪ್ಪ ಚೌಹ್ಹಾನ್  ವಯ:28 ವರ್ಷ ಜಾತಿ ಲಮಾಣೀ ಉ:ಕೂಲಿಕೆಲಸ ಸಾ:ಹುಣಸಿಹಾಳ ತಾ: ಯಲಬುರ್ಗಾ 2]ಶರಣಪ್ಪ ತಂದೆ ನಿಂಗಪ್ಪ ಹುಳ್ಳಿ ವಯ: 41 ವ. ಜಾತಿ:  ಲಿಂಗಾಯತ ಉ: ಒಕ್ಕಲುತನ ಸಾ: ಕಟಗಿಹಳ್ಳಿ ಸದರಿ ಮೇಲ್ಕಂಡ ಆರೋಪಿತರು ಠಾಣೆಯ ರೌಡಿ ಶೀಟರದಾದ್ದು ಇಂದು ದಿ: 27.11.2015 ರಂದು ಮದ್ಯಾಹ್ನ 12:10 ಗಂಟೆಯಿಂದ 16:00 ಗಂಟೆ ಸುಮಾರಿಗೆ ಹುಣಸಿಹಾಳ ಮತ್ತು ಕಟಗಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರನ್ನು ಭೇಟಿ ಮಾಡಿದ್ದು ವಿಚಾರಿಸಲಾಗಿ ಸದರಿ ರೌಡಿಶೀಟರದಾರರು ಗ್ರಾಮದಲ್ಲಿ ಮುಂಬರುವ ವಿಧಾನಪರಿಷತ್ ಮತ್ತು ಜಿಲ್ಲಾ ಮತ್ತು ತಾಲೂಕಾ ಪಂಚಾಯತ್  ಚುನಾವಣೆ ಸಂಭಂದ ಒಂದೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾ ಒದರಾಡುತ್ತಾ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುವಂತೆ  ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು ಇರುತ್ತದೆ. ಮೇಲೆ ನಮೂದಿಸಿದ ಇಬ್ಬರು  ವ್ಯಕ್ತಗಳು ನಮ್ಮ ಪೊಲೀಸ್  ಠಾಣೆಯ ರೌಡಿಶಿಟದಾರರಿದ್ದು ಗ್ರಾಮದಲ್ಲಿ ಸಾರ್ವಜನಿಕರಿಗೆ ಬೈದಾಡುತ್ತಾ ತಮ್ಮ ದೇಹವನ್ನು ತೋರಿಸುತ್ತಾ ಇವರಿಂದ ಗ್ರಾಮದಲ್ಲಿ ಅಶಾಂತತೆ ಹಾಗೂ ಕಾನೂನು ಸುವ್ಯವ್ಸವಸ್ಥಿತ ಕದಡಿ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗುವ ಸಾದ್ಯತೆ ಇರುತ್ತದೆ. ಕಾರಣ ಸದರಿ ರೌಡಿಶೀಟದಾರರಿಂದ ಗ್ರಾಮದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸುವ  ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ಸರಕಾರಿ ತರ್ಫೆಯಿಂದ ಪ್ರಕರಣದ ದಾಖಲಿಸಿಕೊಂಡಿದ್ದು ಇರುತ್ತದೆ.

Thursday, November 26, 2015

1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 110/2015 ಕಲಂ. 78(3) Karnataka Police Act:.
ದಿನಾಂಕ: 25-11-2015 ರಂದು ಸಂಜೆ 7-10 ಗಂಟೆಗೆ ಶ್ರೀ. ಸಿ.ಗಣೇಶ ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆರವರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ವಾಪಸ್ ಠಾಣೆಗೆ ಬಂದು ಒಂದು ವರದಿ ಮತ್ತು ಮುದ್ದೇಮಾಲು ಹಾಗೂ ಒಬ್ಬ ಆರೋಪಿತನನ್ನು ಮುಂದಿನ ಕ್ರಮ ಜರುಗಿಸುವ ಕುರಿತು ಒಪ್ಪಿಸಿದ್ದು, ಸದರಿ ವರದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲಾಗಿ, ಇಂದು ದಿನಾಂಕ: 25-11-2015 ರಂದು ಸಾಯಂಕಾಲ 5-30 ಗಂಟೆಗೆ ಆರೋಪಿತನಾದ ಹೊನ್ನಕೇರಪ್ಪ ತಂದೆ ಮುದುಕಪ್ಪ ಮೇಟಿ, ವಯಾ: 44 ವರ್ಷ, ಜಾ: ಕುರುಬರ ಉ: ಕಿರಾಣಿ ಅಂಗಡಿ ವ್ಯಾಪರ, ಸಾ: ಬೋಚನಹಳ್ಳಿ ಈತನು ತಮ್ಮ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರ ಚಟುವಟಿಕೆಯಾದ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ  ಶ್ರೀ ಸಿ.ಗಣೇಶ ಪಿ.ಎಸ್.ಐ ಅಳವಂಡಿರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 2,300=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ವಾಪಸ್ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಕುರಿತು ಹಾಜರಪಡಿಸಿದ್ದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 156/2015 ಕಲಂ. 279, 338, 283 ಐ.ಪಿ.ಸಿ:.  
ದಿನಾಂಕ:26-11-2015 ರಂದು 6-00 ಎಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಪಿರ್ಯಾಧಿದಾರನ ಹೇಳಿಕೆ ಪಿರ್ಯಾದಿಯನ್ನು 6-10 ಎಎಂದಿಂದ 6-40 ಎಎಂ ದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ತನ್ನ ಮಗಳ ಗಂಡನಾದ ಶಂಕರ್ ಇವನು ಇಂದು ದಿನಾಂಕ:26-11-2015 ರಂದು 5-30 ಎಎಂಕ್ಕೆ ಕುಕನೂರ ದಿಂದ  ಮಂಡಲಗೇರಿಗೆ ಹೋಗುವ  ರಸ್ತೆಯಲ್ಲಿ, ಮಂಡಲಗೇರಿ ಸೀಮಾದ ಗೊರ್ಲೆಕೊಪ್ಪ ಕ್ರಾಸ್ ಹತ್ತಿರ ತಾನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ನ್ನು ಕುಕನೂರ ಕಡೆಯಿಂದ ಮಂಡಲಗೇರಿ ಕಡೆಗೆ ಗದಗಗೆ ಹೋಗುವ ಕುರಿತು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ, ಸ್ಕೀಡ್ಡಾಗಿ ಬಿದ್ದು, ಭಾರೀ ಗಾಯಗೊಂಡಿದ್ದು, ಘಟನೆ ನೋಡಿದ ಗವಿಶಿದ್ದಪ್ಪ ಹಿರೇಮನಿ ಎನ್ನುವವರು ತಮಗೆ ಫೋನ್ ಮಾಡಿ ತಿಳಿಸಿ, 108 ದಲ್ಲಿ ಹಾಕಿ ಕಳುಹಿಸಿದ್ದರ ಬಗ್ಗೆ ತಿಳಿಸಿದ ಮೇರೆಗೆ ತಾವು ಬಂದು ನೋಡಿದ್ದು ಸ್ಥಿತಿ ನಿಜವಿರುತ್ತದೆ.  ಕಾರಣ, ಕಾನೂನು ರೀತಿಯ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ದೂರನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 122/2015  ಕಲಂ 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.

ದಿನಾಂಕ: 25-11-2015 ರಂದು ಮಧ್ಯಾನ್ಹ 2 ಗಂಟೆಯ ಸುಮಾರಿಗೆ ಆರೋಪಿನು ತಾನು ನಡೆಯಿಸುತ್ತಿದ್ದ 3 ಗಾಲಿಯ ಟಂ. ಟಂ. ವಾಹನ ಸಂಖ್ಯೆ: ಕೆ.ಎ-37/8272 ನೇದ್ದನ್ನು ಮಂಡಲಮರಿ-ಯಲಬುರ್ಗಾ ರಸ್ತೆಯ ಮೇಲೆ ಅತೀಜೋರಾಗಿ ಹಾಗೂ ಅಲಕ್ಷತನದಿಂಡ ನಡೆಯಿಸಿಕೊಂಡು ಬರುತ್ತಿರುವಾಗ ಮಂಡಲಮರಿ ಗ್ರಾಮದ ಸೀಮಾದಲ್ಲಿ ಬರುವ ದುರಗಪ್ಪ ಹನಮಾಪೂರ ಇವರ ಹೊಲದ ಹತ್ತಿರ ಇರುವ ರಸ್ತೆ ತಿರುವನ್ನು ಲೇಕ್ಕಿಸದೇ ಹಾಗೆಯೇ ಜೋರಾಗಿ ನಡೆಯಿಸಿಕೊಂಡು ರಸ್ತೆಯ ಬಲಮಗ್ಗಲು ಇರುವ ತೆಗ್ಗಿನಲ್ಲಿ ಪಲ್ಟಿ ಹೊಡೆಯಿಸಿದ್ದರಿಂದ ಅನುಕ್ರಮ ನಂ: 9 ರಲ್ಲಿ ನಮೂದಿಸಿದ ಅನುಕ್ರಮ ನಂ: 1 ರಿಂದ 9 ನೇದ್ದವರಿಗೆ ತಲೆಗೆ, ಕೈ ಕಾಲುಗಳಿಗೆ, ಸೊಂಟಕ್ಕೆ ಹಾಗೂ ಇನ್ನಿತರ ಕಡೆಗಳಲ್ಲಿ ಸಾಧಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.  ಸದರಿ ಆರೋಪಿತನು ಅಪಘಾತ ಮಾಡಿದ ನಂತರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದರಿಂದ ಚಾಲಕನ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ.  ಕಾರಣ ಸದರಿ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, November 25, 2015

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 262/2015 ಕಲಂ. 78(3) Karnataka Police Act:.
ದಿನಾಂಕ: 24-11-2015 ರಂದು ರಾತ್ರಿ 7-30 ಗಂಟೆಗೆ ಶ್ರೀ ರಾಮಣ್ಣ ನಾಯ್ಕ, ಪಿ.ಎಸ್.ಐ.(ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆ ರವರು ಮಟಕ ಜೂಜಾಟದಲ್ಲಿ ತೊಡಗಿದ ಆರೋಪಿತರಿಬ್ಬರೊಂದಿಗೆ ಮೂಲ ಪಂಚನಾಮೆ, ಮುದ್ದೆಮಾಲು ಹಾಗೂ ವರದಿಯನ್ನು ಸಲ್ಲಿಸಿದ್ದು  ಸದರಿ ವರದಿಯ ಸಾರಂಶವೇನೆಂದರೆ, ಇಂದು ದಿನಾಂಕ 24-11-2015 ರಂದು 18-00 ಗಂಟೆಗೆ ಆರೋಪಿತರಾದ (01) ಫಾರೂಕ ತಂದೆ ಹುಸೇನಪೀರಾ ಮತ್ತು (02) ಹಸೇನ ತಂದೆ ಖಾಲೇಸಾಬ ಸಾ: ಗಂಗಾವತಿ ರವರು ನಗರದ ಶಿವೆ ಟಾಕೀಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಅವರಿಗೆ ಮಟಕಾ ನಂಬರ ಬರೆದ ಚೀಟಿ ಬರೆದುಕೊಡುತ್ತಿರುವಾಗ ಸದರಿಯವರ ಮೇಲೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ  ಒಟ್ಟು ಮಟಕ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ ರೂ. 6,740-00. (02) ಮಟಕಾ ನಂಬರ ಬರೆದ ಮೂರು ಚೀಟಿಗಳು. (03) ಎರಡು ಬಾಲ್ ಪೆನ್ನು ಹಾಗೂ (04) ಒಂದು ನೋಕಿಯಾ ಕಂಪನಿಯ ಮೊಬೈಲ್ ಹಾಗೂ (05) ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್ ದೊರೆತಿರುತ್ತದೆ. ಸದರಿ ಮುದ್ದೇಮಾಲನ್ನು ಜಪ್ತಿ ಪಡಿಸಿದ ಬಗ್ಗೆ 18-00 ಗಂಟೆಯಿಂದ 19-00 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡಿದ್ದು, ಹಾಗೂ ಸದರಿ ಮಟಕ ಪಟ್ಟಿಗಳನ್ನು ಮಾರ್ಕಂಡಯ್ಯ ಸಾ: ಗಂಗಾವತಿ ಇವನು ತೆಗೆದುಕೊಳ್ಳುವ ಬುಕ್ಕಿ ಆಗಿರುತ್ತಾನೆ. ಸದರಿಯವರ ಮೇಲೆ ಕ್ರಮ ಜರುಗಿಸಬೇಕೆಂದು ವರದಿ ನೀಡಿದ್ದು. ಸದರಿ ಕೃತ್ಯವು ಕಲಂ: 78 (3) ಕೆ.ಪಿ.ಆ್ಯಕ್ಟ್ ಅಡಿಯಲ್ಲಿ ಬರುತ್ತಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಈ ಬಗ್ಗೆ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 246/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:
ದಿನಾಂಕ 24-11-2015 ರಂದು ಬೆಳಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನೀರುಪಾದಿ ತಂದಿ ಹನಂತಪ್ಪ ನಾಯಕ ವಯಾ- 27 ವರ್ಷ ಜಾ- ನಾಯಕ - ಒಕ್ಕಲುತನ ಸಾ- ಗುಡದೂರ ತಾ- ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನನ್ನ ಹೆಂಡತಿ ತವರು ಮನೆ ಕಾರಟಗಿಯ ರಾಜೀವಗಾಂಧೀನಗರ ಇರುತ್ತದೆ. ನಿನ್ನೆ ದಿನಾಂಕ- 23-11-2015 ರಂದು ನಾನು ನನ್ನ ತಂದೆ ಹನಮಂತಪ್ಪ ಇಬ್ಬರೂ ಕೂಡಿಕೊಂಡು ನಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂಬರ್- ಕೆ.- 37 / ಎಲ್- 8773 ನೇದ್ದರ ಮೇಲೆ ನಮ್ಮೂ ಊರಿನಿಂದ ಕಲಗುಡಿಗೆ ಹೊಗಿ ಸಾಯಂಕಾಲ ವಾಪಾಸ್ ಕಾರಟಗಿಗೆ ಚಳ್ಳೂರ ಕ್ಯಾಂಪ್ ಹತ್ತಿರ ನನ್ನ ಮೊಟಾರ್ ಸೈಕಲ್ ನಂ- ಕೆ.- 37 / ಎಲ್- 8773 ನೇದ್ದನ್ನು ನಾನು ನಿಧಾನವಾಗಿ ನನ್ನ ತಂದೆಯನ್ನು ಮೊಟಾರ್ ಸೈಕಲ್ ಹಿಂದುಗಡೆ ಕೂಡ್ರಿಸಿಕೊಂಡು ರಸ್ತೆಯ ಎಡಬದಿಗೆ ಬರುತ್ತಿರುವಾಗ್ಗೆ ಎದುರುಗಡೆಯಿಂದ ಒಂದು ಹೊಸ ಕುಬೋಟಾ ಟ್ರ್ಯಾಕ್ಟರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಜೋರಾಗಿ ಬಂದು ನಮ್ಮ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿ ಟ್ರ್ಯಾಕ್ಟರ್ ಅಲ್ಲಿಯೇ ಬಿಟ್ಟು ಓಡಿಹೊದನು. ಅಪಘಾತದಿಂದ ನನ್ನ ಕೈಗೆ ಮತ್ತು ಕಾಲಿಗೆ ಗಂಭೀರ ಗಾಯವಾಗಿದ್ದು ಹಾಗೂ ನನ್ನ ತಂದೆ ಹನಮಂತಪ್ಪನಿಗೆ ಬಲಗಾಲಿಗೆ ಭಾರಿ ಘಾಯ ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ. ಅಪಘಾತವಾದಾಗ್ಗೆ ಸಾಯಂಕಾಲ 6-30 ಗಂಟೆಯಿಂದ 6-45 ಗಂಟೆ ಆಗಿತ್ತು. ನಮಗೆ ಅಪಘಾತಪಡಿಸಿದ ಟ್ರ್ಯಾಕ್ಟರ ನೋಡಲು ಕೆಂಪು ಬಣ್ಣದ ಕುಬೋಟ ಕಂಪನಿಯದಿದ್ದು ಅದರ ಚಾಸ್ಸಿಸ್ ನಂಬರ್ ನೋಡಲು --519827JG .ಇಂಜಿನ್- 7ES3383 ಅಂತಾ ಇದ್ದು ಗಾಯಗೊಂಡ ನಾವು ಕಾರಟಗಿ ಆಸ್ಪತ್ರೆಗೆ ಬಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಯಲ್ಲಿ ನಮ್ಮ ತಂದೆಗೆ ಸೇರಿಕೆ ಮಾಡಿ ನಾನು ಚಿಕಿತ್ಸೆ ಪಡೆದುಕೊಂಡು ನಂತರ ಈಗ ತಡವಾಗಿ ತಮ್ಮಲ್ಲಿಗೆ ಬಂದು ಫಿರ್ಯಾದಿ ನೀಡಿರುತ್ತೇನೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 121/2015  ಕಲಂ 224 ಐ.ಪಿ.ಸಿ:.

ದಿನಾಂಕ: 24-11-2015 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಪಿರ್ಯಾದಿದಾರ ಹಾಗೂ ಹೆಚ್.ಜಿ-1229 ಇವರಿಬ್ಬರೂ ಆರೋಪಿತ ಶರಣಪ್ಪನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿ ನಂತರ ಸದರಿ ಆರೋಪಿತ ಶರಣಪ್ಪನಿಗೆ ಜಿಲ್ಲಾ ಕಾರಾಗೃಹ ಕೊಪ್ಪಳಕ್ಕೆ ಕರೆದುಕೊಂಡು ಹೋಗಲು ಯಲಬುರ್ಗಾದ ತಹಶೀಲ ಕಾರ್ಯಾಲಯ ಹತ್ತಿರ ಇರುವ ಮಂಜುನಾಥ ಹೊಟೇಲ್ ಮುಂದುಗಡೆ ಕರೆದುಕೊಂಡು ಹೋಗಿ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದು, ಆಗ ಯಾವುದೋ ಒಂದು ಖಾಸಗಿ ವಾಹನ ಕೊಪ್ಪಳ ಕಡೆಗೆ ಹೋರಟಿದ್ದು ಅದನ್ನು ಪಿರ್ಯಾದಿದಾರನು ನಿಲ್ಲಿಸುತಿದ್ದಾಗ ಆರೋಪಿತ ಶರಣಪ್ಪನು ಹೆಚ್.ಜಿ-1229 ರವರಿಂದ ಕೋಸರಿಕೊಂಡು ಕೊಪ್ಪಳ ಕಡೆಗೆ ಹೋಗುವ ರಸ್ತೆಯ ಮೇಲೆ ಓಡಿ ಹೋಗಿದ್ದು ಇರುತ್ತದೆ. ಆಗ ಪಿರ್ಯಾದಿದಾರ ಹಾಗೂ ಅವರ ಸಂಗಡ ಇದ್ದ ಹೆಚ್.ಜಿ-1229 ಇಬ್ಬರೂ ಕೂಡಿಕೊಂಢು ಆರೋಪಿತನಿಗೆ ಹಿಂಬಾಲಿಸಿಕೊಂಡು ಓಡಿ ಹೋಗಲು ಆರೋಪಿತನು ಬುದ್ದ ಬಸವ ಅಂಬೇಡ್ಕರ ಭವನದ ಹಿಂದುಗಡೆ ಜಾಲಿಯ ಕಡೆಗೆ ಓಡಿ ಹೋಗಿ ಮರೆಯಾಗಿ ತಪ್ಪಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, November 24, 2015

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 223/2015 ಕಲಂ. 78(3) Karnataka Police Act.
ದಿನಾಂಕ: 23-11-2015 ರಂದು ಶ್ರೀ ಸತೀಶ ಪಾಟೀಲ ಪಿ.ಐ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶದಲ್ಲಿ ದಿನಾಂಕ 23.11.2015 ರಂದು ಸಾಯಂಕಾಲ 7:30 ಗಂಟೆಗೆ ಕೊಪ್ಪಳ ನಗರದ ಬಸ್ ನಿಲ್ದಾಣದ ಹತ್ತಿರ ವರ್ಣೇಕರ್ ಕಾಂಪ್ಲೆಕ್ಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ವಿರೇಶ ಹಿರೇಮಠ, 2] ಶಂಕ್ರಪ್ಪ ಜಲ್ಲಿ ಇವರು ಕೂಡಿಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು ಹಣ 870=00 ರೂ, ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ಯಿದ್ದು ಇರುತ್ತದೆ. ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯು ಅಂಸಜ್ಞಯ ಅಪರಾಧ ವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 239/2015 ಕಲಂ. 87 Karnataka Police Act.
ದಿನಾಂಕ. 23-11-2015 ರಂದು 04-30 ಪಿ.ಎಂ.ಕ್ಕೆ ಮುನಿರಾಬಾಧ ತುಂಗಭದ್ರ ನದಿಯ ಹಿನ್ನಿರಿನ ಬಯಲುಜಾಗೆಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಫಿರ್ಯಾದಿದಾರರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 3500=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
3) ಕನಕಗಿರಿ ಪೊಲೀಸ್ ಠಾಣಾ ಗುನ್ನೆ ನಂ. 179/2015 ಕಲಂ. 166, 167, 171 (ಬಿ), 182, 189, 190, 219, 409, 420, 421 ಐ.ಪಿ.ಸಿ.  
ದಿನಾಂಕ 23-11-2015 ರಂದು ರಾತ್ರಿ 9-15 ಗಂಟೆಗೆ ಮಾನ್ಯ ಜೆ.ಎಂ.ಎಪ್.ಸಿ. ಕೋರ್ಟ ಗಂಗಾವತಿ ನ್ಯಾಯಾಲಯದಿಂದ ಕೋರ್ಟ ರವರ ಮೂಲಕ ನ್ಯಾಯಾಲಯದ ಖಾಸಗಿ ಫಿರ್ಯಾಧಿ ನಂ.217/2015 ನೇದ್ದು ವಸೂಲಾಗಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾಧಿದಾರನು ತನ್ನ ಮನೆಯ ಕಟ್ಟಡಗೊಸ್ಕರ ಸಾಲವನ್ನು ಪಡೆಯಲು ಮೂಲ ದಾಖಲೆಗಳನ್ನು ಪ್ರಗತಿ ಕೃಷ್ಟಾ ಬ್ಯಾಂಕಿನಲ್ಲಿ ನೀಡಿ ಮ್ಯಾನೇಜರ ರವರು ರೂ.5,00,000/-ಗಳನ್ನು ಕಟ್ಟಡ ಕಟ್ಟಲು ಮಂಜೂರು ಮಾಡಿದ್ದು, ಸದ್ರಿ ಹಣವನ್ನು 5 ಕಂತಿನಂತೆ ಪ್ರತಿ ಕಂತಿಗೆ ರೂ.1,00,000/- ಗಳನ್ನು ಕೊಡುವುದಾಗಿ ತಿಳಿಸಿ 2 ಖಾಲಿ ಬಾಂಡಿನ ಮೇಲೆ & ಖಾಲಿ ಮುದ್ರಿತ ಫಾರ್ಮಗಳ ಮೇಲೆ ಸಹಿ ಮಾಡಿಸಿಕೊಂಡು ಅಂದೇ ಸಾಲವನ್ನು ಕೊಡುವುದಾಗಿ ತಿಳಿಸಿ   ರೂ.5000/- ಗಳನ್ನು ಸಾಲ ಮಂಜೂರು ಮಾಡಿದ ಖರ್ಚು ಎಂದು ಹಣ ಪಡೆದಿದ್ದು, ದಿನಾಂಕ 23-02-2015 ರಂದು ಮೊದಲನೇ ಕಂತಿನ ಹಣ ರೂ.1,00,000/- ಗಳನ್ನು ಕೊಡುವ ಬದಲಾಗಿ ನನಗೆ ಹೆದರಿ ಖಾಲಿ ಮುದ್ರಿತ ಪೇಪರ್ ಮತ್ತು ರಸೀದಿ ಮೇಲೆ ಸಹಿ ಮಾಡಿಸಿಕೊಂಡು ರೂ.40,000/- ಗಳನ್ನು ಕೊಟ್ಟಿರುತ್ತಾರೆ. ಇದರ ಬಗ್ಗೆ ಮ್ಯಾನೇಜರಿಗೆ ಕೇಳಿದಾಗ ನನಗೆ ವಂಚಿಸುವ ದೃಷ್ಟಿಯಿಂದ ನನಗೆ ಮಂಜೂರಾದ ರೂ.5,00,000/- ಗಳಲ್ಲಿ ರೂ.40,000/- ಗಳನ್ನು ನೀಡಿ ಉಳಿದ ಹಣವನ್ನು ನನಗೆ ತಇಳಿಸದೇ ನನಗೆ ಪರವಾನಗಿ ಪಡೆಯದೇ ಇನ್ನೊಬ್ಬರ ಹೆಸರಿನಲ್ಲಿರುವ ಹೇರೂರ ಪ್ರಗತಿ ಕೃಷ್ಟಾ ಬ್ಯಾಂಕಿನ ಯಾರ ಖಾತೆಯಲ್ಲಿ 4,50,000/- ಗಳನ್ನು ವರ್ಗಾವಣೆ ಮಾಡಿರುತ್ತಾರೆ. ದಿನಾಂಕ 28-10-2015 ರಂದು ಪುನ : ನಾನು ಬ್ಯಾಂಕಿನಲ್ಲಿ ಹೋಗಿ ಸಾಲದ ಬಗ್ಗೆ ವಿಚಾರಿಸಲು ಆರೋಪಿತನು ನನ್ನನ್ನು ಬ್ಯಾಂಕಿನಿಂದ ಹೊರಗೆ ಹಾಕಿ ನೀನು ಬ್ಯಾಂಕಿನ ಒಳಗೆ ಬಂದರೆ ನಿನ್ನ ವಿರುದ್ದ ಕ್ರಿಮಿನಲ್ ಕೇಸ್ ಮಾಡಿ ಒಳಗೆ ಹಾಕಿಸುತ್ತೇನೆ ನೀನು ಮಾಡಿದ ಸಾಲಕ್ಕೆ ಬಡ್ಡಿಗೆ ಬಡ್ಡಿ ಸೇರಿಸಿ ನೀನು ಕೊಟ್ಟ ಖಾಲಿ ಭಾಂಡಿನಲ್ಲಿ ಮತ್ತು ಖಾಲಿ ಮುದ್ರಿತ ಕಾಗದಗಳ ಮೇಲೆ ಸಹಿ ಮಾಡಿದ್ದು ಅದನ್ನು ತುಮಬಿ ನಿನ್ನ ವಿರುದ್ದ ಹಣ ವಸೂಲತೆಗಾಗಿ ಕ್ರಮ ಕೈಕೊಂಡು ನಿನ್ನ ಮನೆಯನ್ನು ಹರಾಜು ಮಾಡಿ ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ಬೀದಿ ಪಾಲು ಮಾಡುತ್ತೇನೆ ಅಂತಾ ಹೇಳಿರುತ್ತಾನೆ ಅಂತಾ ಮುಂತಾಗಿ ನೀಡಿದ ಖಾಸಗಿ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ. 155/2015 ಕಲಂ. 279, 337, 338, 304(ಎ) ಐ.ಪಿ.ಸಿ:
ದಿನಾಂಕ:23-11-2015 ರಂದು 8-00 ಪಿಎಂಕ್ಕೆ ಫೋನ್ ಮುಖಾಂತರ ಸಾರ್ವಜನಿಕರು ತಳಕಲ್ ಹತ್ತಿರ ಎನ್.ಹೆಚ್. ರಸ್ತೆಯ ಮೇಲೆ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ತಿಳಿಸಿದ ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ, ಪರಿಶೀಲಿಸಿ, ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಬಗ್ಗೆ ತಿಳಿದು ಆಸ್ಪತ್ರೆಗೆ ಭೇಟಿ, ಅಲ್ಲಿ ಗಾಯಾಳು ಪಿರ್ಯಾದಿದಾರನ ಹೇಳಿಕೆ ಪಿರ್ಯಾದಿಯನ್ನು 9-30 ಪಿಎಂದಿಂದ 10-30 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಇಂದು ರಾತ್ರಿ 7-45 ಗಂಟೆಯ ಸುಮಾರು ನಾಗರಾಜ ಗಡಾದ ಈತನು ಚಲಾಯಿಸುತ್ತಿದ್ದ  ಹೋಂಡಾ ಸ್ಕೂಟಿ ನಂ:ಕೆಎ-37 ಎಕ್ಸ್-4298 ರಲ್ಲಿ ಹಿಂದೆ ಕುಳಿತು ಪಿರ್ಯಾದಿದಾರನು ಕೆಲಸ ಕುರಿತು ತಳಕಲ್ ಕಡೆಯಿಂದ ಬಾನಾಪುರ ಕಡೆಗೆ ಹೊರಟಾಗ ನಾಗರಾಜ ಈತನು ತನ್ನ ಮೋ.ಸೈ.ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಅದೇ ವೇಳೆಗೆ ಎದುರುಗಡೆಯಿಂದ ಸುನೀಲ್ ರಾಯರೆಡ್ಡಿ ಇವನು ಮೋ.ಸೈ. ನಂ:ಕೆಎ-37 ಅರ್-1171 ನೇದ್ದನ್ನು ಬಾನಾಪುರ ಕಡೆಯಿಂದ ತಳಕಲ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಎರಡು ಮೋ.ಸೈ.ಗಳ ಸವಾರರು ಪರಸ್ಪರ ಮುಖಾಮುಖಿ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ನಾಗರಾಜ ಮತ್ತು ಸುನಿಲ್ ಇವರಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಘಟನೆ ನೋಡಿದ ಮಲ್ಲಿಕಾರ್ಜುನ ಮತ್ತು ಇತರರು ಸದರಿ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಹೊರಟಾಗ ಸುನಿಲ್ ಇವನು ಮಾರ್ಗ ಮಧ್ಯೆ ಮೃತಪಟ್ಟಿದ್ದು, ಘಟನೆಗೆ ಎರಡು ವಾಹನಗಳ ಸವಾರರ ಅತೀವೇಗ ಮತ್ತು ಅಲಕ್ಷ್ಯತನದ ಚಾಲನೆಯೇ ಕಾರಣ ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, November 23, 2015

1) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 202/2015 ಕಲಂ. 87 Karnataka Police Act.
ದಿನಾಂಕ 22-11-2015 ರಂದು ರಾತ್ರಿ 1-00 ಗಂಟೆಗೆ ಪಿ.ಎಸ್. ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನೆಂದರೆ ಖಚಿತ ಬಾತ್ಮೀ ಮೇರೆಗೆ ಶ್ರೀ ಆರ್.ವಾಯ್ ಜಲಗೇರಿ ಪಿ.ಎಸ್.. ಕುಷ್ಟಗಿ ಮತ್ತು ಸಿಬ್ಬಂದಿಯವರಾದ .ಎಸ್. ಪುಂಡಪ್ಪ, ಹೆಚ್.ಸಿ-36, 63 ಪಿ.ಸಿ-109, 116, 117,92,161,407,426, ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಅದರ ಚಾಲಕ ಶಿವಕುಮಾರ .ಪಿ.ಸಿ-38 ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 13 ಜನ ಆರೋಪಿತರನ್ನು ಹಾಗೂ ಇಸ್ಪೆಟ್  ಜೂಜಾಟದ ಒಟ್ಟು ಹಣ 4,14,000-00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಇತರೇ ಜೂಜಾಟದ ಸಾಮಗ್ರಿಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇದರಲ್ಲಿ ಜಾಕೀರಹುಸೇನ ವಯಾ: 40 ವರ್ಷ ಸಾ: ನಾಗರಬೆಟ್ಟ ಹಾಗೂ ಇತರೇ 7 ಜನರು ಓಡಿ ಹೋಗಿದ್ದು ಇರುತ್ತದೆ ಅಂತಾ ಬಂದು ಪಂಚನಾಮೆಯೊಂದಿಗೆ ವರದಿಯನ್ನು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 119/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 22-11-2015 ರಂದು ಮದ್ಯಾಹ್ನ 2-45 ಗಂಟೆ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ್ ಸೈಕಲ ಚೆಸ್ಸಿ ನಂ : MD2DDDZZZVWB10092 ಮತ್ತು ಇಂಜೀನ ನಂ : DZMBVB59445 ನೇದ್ದನ್ನು ಯಲಬುರ್ಗಾ ಪಟ್ಟಣದ ಕನಕದಾಸ ವೃತ್ತದ ಕಡೆಯಿಂದ ಕುದ್ರಿಕೊಟಗಿ ಗ್ರಾಮದ ಕಡೆಗೆ ಅತಿ ಜೋರಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಯಲಬುರ್ಗಾ ಪಟ್ಟಣದ ಪ್ರವೀಣ ಚಿತ್ರ ಮಂದಿರದ ಮುಂದೆ ರಸ್ತೆಯ ಎಡಮಗ್ಗಲು ಮೀನಾಕ್ಷಿ ನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರನಿಗೆ ಹಿಂದಿನಿಂದ ಜೋರಾಗಿ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರನಿಗೆ ಹಣೆಗೆ, ಮೂಗಿಗೆ, ಬಲಗಣ್ಣಿನ ಹತ್ತಿರ, ಹಾಗೂ ಬಲಗೈ ಮೊಣಕೈ ಕೆಳಗೆ ತೆರಚಿದ ಗಾಯ, ತೆಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು ಹಾಗೂ ಎಡಗಾಲ ಹಿಂಬಡಕ್ಕೆ ಭಾರಿ ಸ್ವರೂಪದ ಪೆಟ್ಟು ಬಿದ್ದಿದ್ದು ಇರುತ್ತದೆ. ಹಾಗೂ ಸದರ ಅಪಘಾತದಲ್ಲಿ ಆರೋಪಿತನಿಗೆ ಎಡಗಣ್ಣಿನ ಹತ್ತಿರ, ಎಡಬುಜದ ಮೇಲೆ ತೆರಚಿದ ನಮೂನೆಯ ಸಾದಾ ಸ್ವರೂಪದ ಗಾಯವಾಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 120/2015 ಕಲಂ. 279, 337, 338 ಐ.ಪಿ.ಸಿ:
ದಿನಾಂಕ: 22-11-2015 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಆರೋಪಿನು ತಾನು ನಡೆಯಿಸುತ್ತಿದ್ದ ಕಾರ ನಂ: ಕೆ.ಎ-25/ಎನ್-9719 ನೇದ್ದನ್ನು ಕುಷ್ಟಗಿ-ಕೊಪ್ಪಳ ರಸ್ತೆಯ ಮೇಲೆ ಅತೀಜೋರಾಗಿ ಹಾಗೂ ಅಲಕ್ಷತನದಿಂಡ ನಡೆಯಿಸಿಕೊಂಡು ಹೋಗುತ್ತಿರುವಾಗ ಮಂಡಲಮರಿ ಗ್ರಾಮದ ಸೀಮಾದಲ್ಲಿ ಬರುವ ಉಮೇಶ ಜೂಲಕಟ್ಟಿ ಇವರ ಹೊಲದ ಹತ್ತಿರ ಕಾರಿನ ಮುಂದಿನ ಬಲಗಾಲಿ ಬಸ್ಟ ಆಗಿದ್ದರಿಂದ ಸದರಿ ಕಾರ ರಸ್ತೆಯ ಪೂರ್ವ ಭಾಗದಲ್ಲಿ ಪಲ್ಟಿಯಾಗಿ ಬಿದ್ದಿದ್ದರಿಂದ ಕಾರಿನಲ್ಲಿದ್ದ ಬಸವರಾಜ ಬೇಲೇರಿ ಈತನ ತಲೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಮತ್ತು ಆರೋಪಿ ಜಗದೀಶ ಮಂತ್ರಿ ಈತನ ಬಲ ಚೆಪ್ಪೆಗೆ, ಬಲಗಾಲ ಮೊಣಕಾಲ ಚಿಪ್ಪಿನ ಮೇಲ್ಬಾಗದಲ್ಲಿ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4) ಹನುಮಸಾಗರ ಪೊಲೀಸ್ ಠಾಣಾ ಗುನ್ನೆ ನಂ. 120/2015 ಕಲಂ. 279, 337, 338 ಐ.ಪಿ.ಸಿ:

ದಿನಾಂಕ: 22-11-2015 ರಂದು ಮುಂಜಾನೆ 09-30 ಗಂಟೆಗೆ ಫಿರ್ಯಾದಿ ಹಾಗೂ ಆತನ ತಂಗಿ ತಂಗಿಯ ಮಗ ಮತ್ತು ಇತರರು ಗಜೇಂದ್ರಗಡದಿಂದ ಬಾದಿಮನನಾ: ನೀರಲಕೊಪ್ಪಕ್ಕೆ ಹೊಗುವ ಕುರಿತು ಗಡಾದಲ್ಲಿ ಒಂದು ಟ್ರ್ಯಾಕ್ಸದಲ್ಲಿ ಕುಳಿತು ಅಲ್ಲಿಂದ ಹೊರಟು ಹಾಬಲಕಟ್ಟಿ ಕ್ರಾಸ್ ದಾಟಿ ತುಮರಿಕೊಪ್ಪ ಕ್ರಾಸ್ ಹತ್ತಿರ ಮುಂಜಾನೆ 10-00 ಗಂಟೆಯ ಸುಮಾರಿಗೆ ಬಾದಮಿನಾಳ ಕಡೆಗೆ ಬರುವಾಗ ಟ್ರ್ಯಾಕ್ಸ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ ಆಗುವಂತೆ ನಡೆಸಿಕೊಂಡು ಬಂದು ರೋಡಿನ ಎಡಬಾಜು ತೆಗ್ಗಿನಲ್ಲಿ ಇರುವ ಗಿಡಕ್ಕೆ ಟಕ್ಕರ ಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಈ ಮೇಲಿನ ಗಾಯಾಳುಗಳಿಗೆ ಸಾದಾ ಹಾಗೂ ಬಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ 108 ಆಬುಲೈನ್ಸದಲ್ಲಿ ಎಲ್ಲರೂ ಹನಮನಾಳ ಸರಕಾರಿ ಆಸ್ಪತ್ರೆಗೆ ಹೊಗಿ ಅಲ್ಲಿ ಡಾಕ್ಟರ ಇಲ್ಲದ್ದರಿಂದ ಅಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿಕೊಂಡು ಇಲಕಲ ಕಠಾರೆ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಇಲಾಜು ಮಾಡಿಸಿಕೊಂಡು ವಾಪಾಸ್ ಠಾಣೆಗೆ ತಡವಾಗಿ  ಠಾಣೆಗೆ ಬಂದು. ಟ್ರ್ಯಾಕ್ಟ ನಂ: ಕೆ.ಎ-26-7366 ನೇದ್ದರ ಚಾಲಕ ಕಿರಣ ತಂದೆ ಕೃಷ್ಣಪ್ಪ ಲಮಾಣಿ ಸಾ: ಗಜೇಂದ್ರಗಡ ಈತನ ಮೇಲೆ ಕಾನೂನನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.

 
Will Smith Visitors
Since 01/02/2008