Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, October 31, 2016

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 168/2016 ಕಲಂ: 279, 337, 338 ಐ.ಪಿ.ಸಿ:.
ಫಿರ್ಯಾಧಿ ಪಂಪಾಪತಿ ಮತ್ತು ನಮ್ಮ ಗ್ರಾಮದ ಸುಮಾರು 19 ಜನರು ಕೂಡಿಕೊಂಡು ಈಗ್ಗೆ ಸುಮಾರು 15 ದಿವಸಗಳ ಹಿಂದೆ ವಿಜಯಪುರ ಹತ್ತಿರ ಬಬಲೇಶ್ವರ ಗ್ರಾಮಕ್ಕೆ ಸೋಲಾರ ಕರೆಂಟ್ ವೈರ ಎಳೆಯುವ ಸಲುವಾಗಿ ಕೂಲಿಕೆಲಸಕ್ಕೆ ಹೋಗಿದ್ದೇವು, ಅಲ್ಲಿ ನಾವೆಲ್ಲರೂ ಕೂಲಿಕೆಲಸ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ದೀಪಾವಳಿ ಹಬ್ಬದ ಸಲುವಾಗಿ ನಾನು ಮತ್ತು ನನ್ನ ಸಂಗಡ ಕೂಲಿಕೆಲಸಕ್ಕೆ ಬಂದಿದ್ದ ಇನ್ನೂ 19 ಜನರು ಕೂಡಿಕೊಂಡು ನಾವು ತಂದಿದ್ದ ನಮ್ಮೂರ ಸ್ವರಾಜ ಟ್ರಾಕ್ಟರಿ ನಂ.ಕೆಎ-36/ಟಿಎ-9628, ಟ್ರಾಲಿಗೆ ನಂಬರ ಇರುವದಿಲ್ಲ ಅದರಲ್ಲಿ ನಿನ್ನೆ ದಿನಾಂಕ 29-10-2016 ರಂದು ಮದ್ಯಾಹ್ನ 2-00 ಗಂಟೆಗೆ ಬಬಲೇಶ್ವರ್ ಹಳ್ಳಿಯನ್ನು ಬಿಟ್ಟು ತಾವರಗೇರಾ ಮಾರ್ಗವಾಗಿ ಸೂಳೇಕಲ್ಗೆ ಕನಕಗಿರಿ-ಗಂಗಾವತಿ ರಸ್ತೆಯ ಮೇಲೆ ಹೋಗುತ್ತಿದ್ದೇವು. ಸದ್ರಿ ಟ್ರಾಕ್ಟರಿಯನ್ನು ನಮ್ಮೂರ ಬಸವರಾಜ ತಂದೆ ಯಮನಪ್ಪ ಅಡವಿಭಾವಿ ಈತನು ನಡೆಸುತ್ತಿದ್ದು, ನಾವೆಲ್ಲರೂ ಟ್ರಾಲಿಯಲ್ಲಿ ಕುಳಿತುಕೊಂಡಿದ್ದೆವು. ನಾವು ರಾತ್ರಿ 11-30 ಗಂಟೆಯ ಸುಮಾರಿಗೆ ಕನಕಗಿರಿ ದಾಟಿ ಸೂಳೇಕಲ್ ಸೀಮಾದ ಮರಿಯಪ್ಪ ಹರಿಜನ ರವರ ಹೊಲದ ತಿರುವಿನಲ್ಲಿ ಹೋಗುತ್ತಿದ್ದಾಗ ಟ್ರಾಕ್ಟರಿಯ ಡಿಜೈಲ್ ಖಾಲಿಯಾಗಿದ್ದರಿಂದ ಚಾಲಕ ಬಸವರಾಜನು ಎಡಗಡೆ ರಸ್ತೆಯ ಪಕ್ಕದಲ್ಲಿ ಟ್ರಾಕ್ಟರಿಯನ್ನು ನಿಲ್ಲಿಸಿ ಡೀಜೈಲ್ ತರಲು ಸೂಳೇಕಲ್ ಗ್ರಾಮಕ್ಕೆ ಹೋದನು. ಸ್ವಲ್ಪ ಹೊತ್ತಿನಲ್ಲಿ ಅಂದಾಜ ರಾತ್ರಿ 11-45 ಗಂಟೆಯ ಸುಮಾರಿಗೆ ಕನಕಗಿರಿ ಕಡೆಯಿಂದ ಒಂದು ಶಿವುಕುಮಾರ ಈತನು ಹೊಸಪೇಟ್ ಡೀಫೋದ ಹೊಸ ಬಸ್ (ನಂಬರ ಬಂದಿರುವದಿಲ್ಲ) ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಮ್ಮ ಟ್ರಾಕ್ಟರಿಯ ಟ್ರಾಲಿಗೆ ಜೋರಾಗಿ ಹಿಂದಿನಿಂದ ಟಕ್ಕರ್ ಕೊಟ್ಟನು. ಇದರಿಂದ ನನಗೆ ಎಡಗೈ ರಟ್ಟೆಗೆ, ಎಡಗಾಲ ಮೊಣಕಾಲಿಗೆ ಒಳ ಪೆಟ್ಟಾಗಿದ್ದು, ದೊಡ್ಡನಗೌಡನಿಗೆ ತಲೆಗೆ ಭಾರಿ ಪೆಟ್ಟಾಗಿ ರಕ್ತ ಬಂದಿದ್ದು, ಎಡಗಾಲಿಗೆ, ಎದೆಗೆ ಒಳ ಪೆಟ್ಟಾಗಿರುತ್ತದೆ. ಸೋಮರಾಜನಿಗೆ ತಲೆಗೆ ಭಾರಿ ಪೆಟ್ಟಾಗಿ ರಕ್ತ ಗಾಯ, ಬಲಗಾಲ ಪಾದದ ಹತ್ತಿರ ರಕ್ತ ಗಾಯ ಹಾಗೂ ಉಳಿದ 10 ಜನರಿಗೆ ಸಾಧಾ ಹಾಗೂ ಭಾರಿ ಸ್ವರೂಪದ ಗಾಯವಾಗಿರುತ್ತದೆ, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 143, 147, 323, 324, 504, 506 ಸಹಿತ 149 ಐ.ಪಿ.ಸಿ:

ಫಿರ್ಯಾದಿ ಮತ್ತು ಆತನ ಅಣ್ಣನ ಮಗನಾದ ಕರಿಯಪ್ಪ ಬಳ್ಳಾರಿ ಇಬ್ಬರೂ ಸೇರಿ ಕವಲೂರು ಸೀಮಾದಲ್ಲಿ ಬರುವ ತಮ್ಮ ಜಮೀನಿಗೆ ನೀರು ಬಿಡಲು ಕಾಲುವೆಗೆ ಪೈಪ್ ಹಾಕಲು ಹೋದಾಗ ಕರಿಯಪ್ಪನು ಬೈಕ್ ತಗೆದುಕೊಂಡು ಆರೋಪಿ ಭರಮಪ್ಪನು ಸಹ ಹಾಕಿದ್ದ ಪೈಪ್ ಮೇಲೆ ಹೋಗಿದ್ದರಿಂದ ಕರಿಯಪ್ಪನೊಂದಿಗೆ ಜಗಳ ಮಾಡಿದ್ದರಿಂದ ಬುದ್ದಿವಾದ ಹೇಳಿ ಕಳುಹಿಸಿದಾಗ ಸಂಜೆ 6:30 ಘಂಟೆಯ ಸುಮಾರಿಗೆ ಆರೋಪಿ ಭರಮಪ್ಪ ಹಾಗೂ ಇತರೆ 4 ಜನರು ಆಕ್ರಮ ಕೂಟ ರಚಿಸಿಕೊಂಡು ಬಂದು ಫಿರ್ಯಾದಿಗೆ ಮತ್ತು ಆತನ ಅಣ್ಣನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಗಾಯಗೊಳಿಸಿ ನಂತರ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಆಗ ಅಲ್ಲಿಯೇ ಇದ್ದ ಸುರೇಶ ಎಂಬುವರು ಜಗಳ ಬಿಡಿಸಿರುತ್ತಾರೆ. ನಂತರ ಮನೆಗೆ ಬಂದು ಮನೆಯಲ್ಲಿ ಚೆರ್ಚಿಸಿ ಗಾಯಗೊಂಡ ಇಬ್ಬರೂ ಯಾವುದೋ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಈ ದಿವಸ ತಡವಾಗಿ ಈ ನುಡಿ ಹೇಳಿಕೆ ದೂರನ್ನು ಸಲ್ಲಿಸಿದ್ದು ಇರುತ್ತದೆ. 

Saturday, October 29, 2016

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 120/2016 ಕಲಂ: 78(3) Karnataka Police Act
ದಿನಾಂಕ: 28-10-2016 ರಂದು ರಾತ್ರಿ ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾಗ ಪಿ.ಎಸ್.ಐ. ತಾವರಗೇರಾ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಆರೋಪಿ ತಳುಜಣ್ಣ @ ತಳುಜಪ್ಪ ತಂದೆ ದೊಡ್ಡಾಸಾ ಮಿಸ್ಕಿನ್ ವಯ: 40 ವರ್ಷ ಸಾ: ಟೆಂಗುಂಟಿ  ಹಿಡಿದಿದ್ದು ಹಾಗೂ ಜೂಜಾಟದ ಒಟ್ಟು ನಗದು ಹಣ ರೂ. 1130-00, ಜಪ್ತ ಮಾಡಿಕೊಂಡಿದ್ದು, ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ಜಾಲಿಹಾಳ ಸಾಹೇಬ  ಇವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ.
2] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ: 174/2016 ಕಲಂ: 279, 304(ಎ) ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ 28-10-2016 ರಂದು 11-30 ಪಿ.ಎಂ.ಕ್ಕೆ ಪಿರ್ಯಾದು ಲಕ್ಷ್ಮಪ್ಪ ತಂದೆ ಹನಮಂತಪ್ಪ ಮ್ಯಾಗಳಮನಿ ಸಾ: ಅಗಳಕೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ, ಮೃತ ರಾಮಪ್ಪ ತಂದೆ ಶಂಕ್ರಪ್ಪ ಮ್ಯಾಗಳಮನಿ ವಯ: 24 ವರ್ಷ ಜಾ: ಕುರುಬರ ಉ: ಕಿರ್ಲೋಸ್ಕರ ಕಂಪನಿಯಲ್ಲಿ ಲೇಬರ ಸಾ: ಅಗಳಕೇರಿ ಇತನು ಪಿರ್ಯಾದಿದಾರರ ಅಣ್ಣನ ಮಗನಿರುತ್ತಾನೆ, ಸದರಿ ಮೃತ ರಾಮಪ್ಪನು ಕಿರ್ಲೋಸ್ಕರ ಕಂಪನಿಯಿಂದ ಕೆಲಸ ಮುಗಿಸಿಕೊಂಡು ಆರ್.ಟಿ.ಓ. ಪಾಯಿಂಟ ಮುಖಾಂತರ ಅಗಳಕೇರಿ-ಕೆರಳ್ಳಿ ರಸ್ತೆಯಲ್ಲಿ ಕರ್ನಾಟಕ ಕೋಳಿ ಫಾರಂ ಹತ್ತಿರ ದಿನಾಂಕ: 28-10-2016 ರಂದು ರಾತ್ರಿ 8-30 ಗಂಟೆಯಿಂದ 8-45 ಗಂಟೆ ಅವಧಿಯಲ್ಲಿ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅಗಳಕೇರಿ ಕಡೆಯಿಂದ ಕೆರಳ್ಳಿ ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಹೋಗಿ ಬಜಾಜ ಡಿಸ್ಕವರಿ ಮೋಟರ ಸೈಕಲ ನಂ. ಕೆಎ-36/ಇಬಿ-9465 ನೇದ್ದರಲ್ಲಿ ಅಗಳಕೇರಿ ಕಡೆಗೆ ಬರುತ್ತಿದ್ದ ಮೃತ ರಾಮಪ್ಪನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ಲಾರಿ ಸಮೇತವಾಗಿ ಓಡಿ ಹೋಗಿರುತ್ತಾನೆ.  ರಾಮಪ್ಪನಿಗೆ ತೆಲೆಗೆ, ಹಣೆಗೆ ಭಾರಿ ಸ್ವರೂಪದ ರಕ್ತಗಾಯಗಳಾಗಿ, ಬಲಗೈ ಮುರಿದು, ಬಲಗಾಲ ಮೊಣಕಾಲಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ನೀಡಿದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 256/2016 ಕಲಂ: 143, 147,448, 341, 323, 354, 504, 506 R/w 149 IPC.

ದಿನಾಂಕ : 28-10-20116 ರಂದು  ರಾತ್ರಿ 10-45 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀಮತಿ ಗಂಗಮಾಳಮ್ಮ ತಂದೆ ಭೀಮಪ್ಪ ಮತ್ತೂರ ವಯಾ- 50 ವರ್ಷ ಜಾ- ಚಲವಾದಿ  ಸಾ- ಸಿದ್ದಾಪೂರ ತಾ- ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆದಿನಾಂಕ : 27-10-2016 ರಂದು ರಾತ್ರಿ 9-00 ಗಂಟೆಯ ಸಮಯದ ಸುಮಾರಿಗೆ ತಿಮ್ಮಣ್ಣ ತಾಯಿ ಕೆಂಚಮ್ಮ  2) ಹನಮಪ್ಪ ತಾಯಿ ಕೆಂಚಮ್ಮ  3) ಸ್ವಾರೇಮ್ಮ ತಾಯಿ ಕೆಂಚಮ್ಮ 4) ಹುಚ್ಚಮ್ಮ ತಾಯಿ ಹುಲಿಗೇಮ್ಮ 5) ಪರಸಪ್ಪ ತಾವರಗೇರಿ 6) ಬಸವರಾಜ ಬಳಿಗೇರ 7) ಬಸವರಾಜ ರಾಜೂರ  8) ಲಚಮಪ್ಪ ವಣಗೇರಿ ಸಾ- ಎಲ್ಲರೂ ಸಿದ್ದಾಪೂರ ತಾ- ಗಂಗಾವತಿ  ಇವರುಗಳು ನಮ್ಮ ಮನೆಗೆ ಬಂದು ನನ್ನ ಮಗನನ್ನು  ಕೇಳಿದರು ಆಗ ನನ್ನ ಮಗನು ಹಾಗೂ ನಾನು ನನ್ನ ಹೆಣ್ಣು ಮಕ್ಕಳು  ಊಟ ಮಾಡುತ್ತಿದ್ದೇವು. ಅವರುಗಳು  ಏಕಾಏಕಿ ಮನೆಯೊಳಗೆ ನುಗ್ಗಿ ನನ್ನ ಮಗಳನ್ನು ಬಡಿದು ಆಗ ನಾನು ನನ್ನ ಮಗಳು ಅಂದರೆ ಸುಮಿತ್ರಾ  ಬಿಡಿಸಲು ಹೊದೇವು. ಅವರುಗಳು ನನ್ನ ಮತ್ತು ನನ್ನ ಮಗಳನ್ನು ಬಡಿದರು. ಮತ್ತು ಮೈಮೇಲಿನ  ಬಟ್ಟೆಗಳನ್ನು ಹರಿದು ಅವಾಚ್ಯ ಶಬ್ದಗಳಿಂದ ಬೈಯ್ಯುವದು ನನ್ನ ಮಗನನ್ನು  ಕೊಲೆ ಮಾಡುತ್ತೇನೆಂದು ಹೇಳಿದರು. ಅವರುಗಳಿಂದ ನನಗೆ  ಜೀವ ಬೆದರಿಕೆ ಇರುತ್ತದೆ. ಆಗ ನಾವು ಕಂಪ್ಲೆಂಟ್ ಕೊಡಲು ಸ್ಷೇಷನ್ನಿಗೆ ಬರುತ್ತಿದ್ದೇವು. ಆಗ ಸಮಾಜದ ಹಿರಿಯರು ಗಂಗಪ್ಪ, ಕೆಂಚಪ್ಪಮೈಲಪ್ಪಮರಿಯಪ್ಪ, ಹಾಗೂ ಪರಸಪ್ಪ ಇತರರು ಬೆಳಗಿನ ಜಾವಾ ರಾಜಿ ಮಾಡುವದಾಗಿ ಹೇಳಿದರು. ಅದಕ್ಕೆ  ಪೀರ್ಯಾದಿ ಕೊಡಲು ವಿಳಂಬವಾಗಿದ್ದು ಆದಕಾರಣ ಅವರುಗಳ ವಿರುದ್ದ ಕಠಿಣ ಕ್ರಮ ಜರುಗಿಸಿ ನನಗೆ ರಕ್ಷಣೆ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಅಂತಾ ಮುಂತಾಗಿ ಫಿರ್ಯಾಧಿ ಕೊಟ್ಟ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, October 28, 2016

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 72/2016 ಕಲಂ: 78(3) Karnataka Police Act.
ದಿನಾಂಕ 27-10-2016 ರಂದು ಬೆಳೆಗ್ಗೆ 11:30 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಒಂದು ಸೆತುವೆ ಮೇಲೆ ಕುಳಿತುಕೊಂಡು ಜನರಿಂದ ಹಣ ಪಡೆದುಕೊಂಡು ಓಸಿ ಚೀಟಿಗಳನ್ನು ಬರೆದು ಕೊಡುತ್ತಾ ಇದು ನಸೀಬದ ಜೂಜಾಟ ಓ/ಸಿ ಹಚ್ಚಿರಿ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಕೂಗಿ ಕರೆಯುತ್ತಾ ಓಸಿ ಜೂಜಾಟದಲ್ಲಿ ತೊಡಗಿದ್ದಾಗ ಸದರಿ ಭಾತ್ಮಿ ಮೇರೆಗೆ ಪಿಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಆರೋಪಿತನು ಸಿಕ್ಕಿ ಬಿದ್ದಿದ್ದು ಇವನ ಮುಂದೆ ಒಂದು ಕರವಸ್ತ್ರದಲ್ಲಿದ್ದ ಓಸಿ ಜೂಜಾಟದ ನಗದು ಹಣ 450 ರೂ ಒಂದು ಬಾಲ ಪೆನ್ ಒಂದು ಓಸಿ ಪಟ್ಟಿ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ  ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 306/2016 ಕಲಂ: 323, 324, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 27-10-2016 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿದಾರರಾದ ರಾಮಕೃಷ್ಣ ತಂದೆ ತಿಮ್ಮಣ್ಣ, ವಯಸ್ಸು 31 ವರ್ಷ, ಜಾತಿ: ಬೋವಿ ಉ: ಸಂಗಾಪೂರು ಗ್ರಾಮ ಪಂಚಾಯತ ಉಪಾಧ್ಯಕ್ಷರು, ಸಾ: ಸಂಗಾಪೂರು. ತಾ. ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಈಗ್ಗೆ ಸುಮಾರು    4-5  ತಿಂಗಳದ ಹಿಂದೆ ನಮ್ಮೂರ ಗಂಗಾಧರ ನಾಯ್ಕ ತಂದೆ ತಿಪ್ಪಣ್ಣ ಲಮಾಣಿ, 35 ವರ್ಷ, ಸಾ: ಸಂಗಾಪೂರು ಈತನ ಅಣ್ಣ ಹುಸೇನ್ ನಾಯ್ಕನು ಗ್ರಾಮದಲ್ಲಿ ಕಳಪೆ ಶೌಚಾಲಯಗಳನ್ನು ನಿರ್ಮಾಣ ಮಾಡಿ   ಬಿಲ್ಲುಗಳನ್ನು ತೆಗೆದುಕೊಂಡಿದ್ದರು. ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆಂದು ನಾನು ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ತಕರಾರು ಮಾಡಿದ್ದೆನು. ಆಗಿನಿಂದ   ಅವರು  ವಿನಾ: ಕಾರಣ  ನನ್ನೊಂದಿಗೆ ಜಗಳ ಮಾಡುತ್ತಿದ್ದರು. ನಮ್ಮೂರ ಶ್ರೀ ರಾಮ ದೇವರ ಗುಡಿಯ ಹತ್ತಿರ ನಿಂತುಕೊಂಡಾಗ ಗಂಗಾಧರ ನಾಯ್ಕ ತಂದೆ ತಿಪ್ಪಣ್ಣ ಇವನು ನಾನು ಇದ್ದಲ್ಲಿಗೆ ಬಂದು ಅಲ್ಲಿದ್ದ ತಮ್ಮ ಹುಡುಗರಿಗೆ “ ಲೇ ನೀವು ಯಾವ ಸೂಳೇ ಮಗನಿಗೂ ಹೆದರುವುದು ಬೇಡಾ, ನೀವು ಉಸುಗನ್ನು ಹೊಡೆಯಿರಿ (ಸಾಗಿಸಿ), ಯಾರು ಏನು ಮಾಡುತ್ತಾರೆ ನೋಡಿಕೊಳ್ಳುತ್ತೇನೆ ” ಅಂತಾ ಜಗಳವಾಡಿ ಹೊಡಬಡೆ ಮಾಡಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.


Thursday, October 27, 2016

1] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 165/2016 ಕಲಂ: 78(3) Karnataka Police Act.
ದಿನಾಂಕ 26-10-2016 ರಂದು ಸಂಜೆ 7-30 ಗಂಟೆಯ ಸುಮಾರಿಗೆ ಜೀರಾಳ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಹಾಂತೇಶ ತಂದೆ ವಿರುಪಾಕ್ಷಪ್ಪ ಭಾವಿ ಸಾ: ಜೀರಾಳ ಇತನು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ನಸೀಬದ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ಬಿ. ತಿಪ್ಪೆಸ್ವಾಮಿ, ಪಿ.ಎಸ್.ಐ. ಹಾಗೂ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ.660=00 ಹಾಗೂ ಅದಕ್ಕೆ ಸಂಬಂದಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಮಾಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡೆನು.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 217/2016 ಕಲಂ: 279, 337, 338 ಐ.ಪಿ.ಸಿ:.
ದಿ:26-10-16 ರಂದು ಸಂಜೆ 7-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತಮ್ಮ ಗ್ರಾಮದ ಮಹಿಬೂಬಪಾಷ ಕಾರ್ ಮೇಸ್ತ್ರಿ ಇವರ ಸ್ಕೂಟಿ ನಂ: ಕೆಎ-37/ಇಬಿ-6665 ನೇದ್ದರ ಹಿಂದೆ ಕುಳಿತುಕೊಂಡು ಹುಲಿಗಿಗೆ ಅಂತಾ ಹೋಗುವಾಗ ಕೊಪ್ಪಳ-ಹೊಸಪೇಟೆ ಎನ್,ಹೆಚ್-63 ರಸ್ತೆಯ ಆರ್.ಟಿ.ಓ ಕ್ರಾಸ್ ಹತ್ತಿರ ಸದರಿ ಸ್ಕೂಟಿ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಹೋಗುವಾಗ ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ರಿಹಾನ್ ಖಾನ್ ಸಾ: ಕೊಪ್ಪಳ ಎಂಬುವವರಿಗೆ ಹಿಂದೆ ಹೋಗಿ ಅವರಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಸ್ಕೂಟಿ ಚಾಲಕ ಮತ್ತು ಪಾದಚಾರಿ ರಿಹಾನ್ ಖಾನ್ ಇತನಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಹಿಂಬದಿ ಸವಾರ ಫಿರ್ಯಾದಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಕಾರಣ ಸ್ಕೂಟಿ ನಂ: ಕೆಎ-37/ಇಬಿ-6665 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ಫಿರ್ಯಾದಿಯ ಮೆಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 173/2016 ಕಲಂ: 447, 379, 307 ಸಹಿತ 34 ಐ.ಪಿ.ಸಿ:.


ಈ ದಿವಸ ದಿನಾಂಕ: 26-10-2016 ರಂದು ಮುಂಜಾನೆ 6-00 ಗಂಟೆ ಸುಮಾರಿಗೆ ಸುಲ್ತಾನಪೂರ ಸೀಮಾದಲ್ಲಿರುವ ಪಿರ್ಯಾದಿದಾರರ ಹೊಲ ಸವರ್ೆ ನಂ. 14/01, 14/03, 14/04 ರಲ್ಲಿ ಆರೋಪಿತರು ಅತೀ ಕ್ರಮಣ ಪ್ರವೇಶ ಮಾಡಿ 6 ಲಾರಿಗಳನ್ನು ತೆಗೆದುಕೊಂಡು ಬಂದು ಅಲ್ಲಿರುವಂತಹ ಜಲ್ಲಿ ಕಲ್ಲುಗಳನ್ನು ಮತ್ತು ಪುಡಿಯನ್ನು ಕಳ್ಳತನ ಮಾಡುತ್ತಿದ್ದು, ಆ ಕಾಲಕ್ಕೆ ಪಿರ್ಯಾದಿದಾರರ ಅಣ್ಣನಾದ ವೆಂಕಟರತ್ನಂ ಮತ್ತು ಕಾಂತ ಇವರು ತಡೆಯಲು ಹೋಗಿದ್ದು, ಆಗ ಆರೋಪಿತರೆಲ್ಲರೂ ಸೇರಿಕೊಂಡು ವೆಂಕಟರತ್ನಂ ಇವರ ಕುತ್ತಿಗೆ ಹಿಚುಕಿ, ಮರ್ಮಾಂಗವನ್ನು ಹಿಚುಕಿ ಒದ್ದು ಪ್ರಾಣಾಂತಿಕ ಹಲ್ಲೆ ಮಾಡಿರುತ್ತಾರೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.

Wednesday, October 26, 2016

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 78(3) Karnataka Police Act.
ತಾವರಗೇರಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಪಿ.ಎಸ್.ಐ. ತಾವರಗೇರಾ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 440-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ದಶರಥಸಿಂಗ್ ದೇವದುಗರ್ಾ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ಅಪರಾಧವು ಅಸಂಜ್ಞೆಯವಾಗಿದ್ದರಿಂದ ಮಾನ್ಯ ನ್ಯಾಯಾಲಯದ ಪಾರವಾನಿಗೆಯನ್ನು ಪಡೆದುಕೊಂಡು ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 251/2016 ಕಲಂ: 279, 337 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ಫಿರ್ಯಾದಿದಾರರಾದ ಶ್ರೀ ರವಿಕುಮಾರ ತಂದೆ ಕಿಷ್ಟಪ್ಪ ರವರು ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಈ ದಿವ ದಿನಾಂಕ : 25-10-2016 ರಂದು  ಬೆಳಿಗ್ಗೆ 9-15 ಗಂಟೆಗೆ ನಾನು ಮತ್ತು ನಮ್ಮ ಸಂಬಂಧಿ ಅಣ್ಣ ವಿಜಯಪ್ಪ ಕೂಡಿಕೊಂಡು ನಮ್ಮೂರಿನ ಶ್ರೀ ವೆಂಟಕೇಶ್ವರ ದೇವಸ್ಥಾನದ ಹತ್ತಿತರ ಮಾತನಾಡುತ್ತಾ ನಿಂತುಕೊಂಡಿದ್ದಾಗ ನನ್ನ ಕೊನೆಯ ಮಗ ರಘುವೀರ ತನು ತಮ್ಮುರಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ತಮ್ಮ ಓಣಿಯ ಕೆಲವು ಹುಡುಗರ ಜೊತೆ ಒಂದು ಟ್ರ್ಯಾಕ್ಟರ್ ಟ್ರಾಲಿಯ ಹತ್ತಿರ ಆಟವಾಡುತ್ತಿದ್ದು ಈ ವೇಳೆಗೆ ಒಬ್ಬ ಟ್ರ್ಯಾಕ್ಟರ್ ಚಾಲಕ ತಾನು ನಿಲ್ಲಿಸಿದ್ದ ಟ್ರ್ಯಾಲಿಯನ್ನು ಇಂಜೀನ್ನಿಗೆ ಜೋಡಿಸಿಕೊಳ್ಳಲು ವಾಹನವನ್ನು  ಹಿಂದಕ್ಕೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಟ್ರ್ಯಾಲಿ ಹತ್ತಿರ ಆಟವಾಡುತ್ತಿದ್ದ ಹುಡುಗರನ್ನು ಗಮನಿಸದೇ ಟ್ರ್ಯಾಕ್ಟರ್ ಇಂಜೀನ್ ನನ್ನು ರಿವಸ್ಸ್ ಆಗಿ ಜೋರಾಗಿ ತಗೆದುಕೊಂಡು ಹೋಗಿದ್ದರಿಂದ ಅಲ್ಲಿಯೇ ಆಟವಾಡುತ್ತಿದ್ದ ನನ್ನ ಮಗ ರಘೂವೀರ ಈತನಿಗೆ ಇಂಜೀನಿನ್ನ ದೊಡ್ಡ ಗಾಲಿಗೆ ಟಚ್ ಆಗಿ ಆತನು ಗಾಲಿಯ  ಕೆಳಗೆ ಸಿಕ್ಕಿಹಾಕಿಕೊಂಡಿದ್ದು ಕೂಡಲೇ ನಾನು ಮತ್ತ ನನ್ನ ಅಣ್ಣ ವಿಜಯಪ್ಪ ಗಾಭರಿಯಿಂದ ಓಡಿ ಹೋಗಿ ನನ್ನ ಮಗನಿಗೆ ಎತ್ತಿಕೊಂಡು ನೋಡಲಾಗಿ ಆತನ ಎಡಗಾಲಿನ ತೊಡೆಯಿಂದ ಪಾದವವರೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಟ್ರ್ಯಾಕ್ಟರ್ ಚಾಲಕನಿಗೆ ನೋಡಲಾಗಿ ಆತನು ವಾಹನ ಬಿಟ್ಟು ಒಡಿ ಹೋಗಿದ್ದನು.  ಟ್ರ್ಯಾಕ್ಟರ್ ಇಂಜೀನ್ ನಂಬರ್ ನೋಡಲಾಗಿ ಅದು ಕೆಎ-37ಟಿಬಿ-0466 ನೇದ್ದು ಇದ್ದಿತು. ನಂತರ ಗಾಯಗೊಂಡ ನನ್ನ ಮಗನನ್ನು ನಾನು ಮತ್ತು ನನ್ನ ಅಣ್ಣ ವಿಜಯಪ್ಪ ಹಾಗೂ ನಮ್ಮ ಓಣಿಯ ಇತರರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಗಂಗಾವತಿಯ ಚಿನವಾಲರ ಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Tuesday, October 25, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 109/2016 ಕಲಂ: 279, 304(ಎ) ಐ.ಪಿ.ಸಿ:
ದಿನಾಂಕ: 24-10-2016 ರಂದು ಮುಂಜಾನೆ 0600 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ ನಂ. ಕೆಎ-37/ಎಸ್-8133 ನೇದ್ದನ್ನು  ಯಲಬುರ್ಗಾ-ಕೊಪ್ಪಳ ರಸ್ತೆ ಮೇಲೆ ಯಲಬುರ್ಗಾ ಸೀಮಾದಲ್ಲಿ ಬರುವ ರೇವಣಪ್ಪ ಹಿರೇಕುರಬರ ಇವರ ಹೊಲದ ಹತ್ತಿರ ಸದರಿ ಮೋಟಾರ ಸೈಕಲನ್ನು ಯಲಬುರ್ಗಾ ಕಡೆಯಿಂದ ಕೊಪ್ಪಳ ಕಡೆಗೆ ಅತೀಜೋರಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಸದ್ರಿಯವನ ತಲೆಯ ಮುಂದಿನ ಬಲ ಭಾಗಕ್ಕೆ ಭಾರಿ ಸ್ವರೂಪದ ರಕ್ತ ಗಾಯವಾಗಿ ಮೂಗಿನಿಂದ ರಕ್ತ ಬಂದು ನಾಲಿಗೆ ಕಚ್ಚಿಕೊಂಡಿದ್ದರಿಂದ ಬಾಯಿಯಿಂದ ಕೂಡಾ ರಕ್ತ ಬಂದಿದ್ದು ಇರುತ್ತದೆನಂತರ ಸದ್ರಿಯವನು ಮುಂಜಾನೆ 0620 ಗಂಟೆಯ ಸುಮಾರಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 272/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 24-10-2016 ರಂದು ಮುಂಜಾನೆ 9-00 ಗಂಟೆಯ ಸುಮಾರಿಗೆ ಕೊರಡಕೇರಾ ಗ್ರಾಮದ ಬಾಲಪ್ಪ ಪೂಜಾರ ರವರು ತೀರಿಕೊಂಡಿರುತ್ತಾರೆ. ಇಂದು ಮದ್ಯಾಹ್ನ ಅಂತ್ಯಾ ಸಂಸ್ಕಾರ ಇದೆ. ನೀವು ಬರಬೇಕು ಹಾಗೂ ಸಂಬಂದಿಕರಿಗೆ ವಿಷಯ ತಿಳಿಸಿ ಅಂತಾ ಮಾಹಿತಿ ತಿಳಿಸಿದ್ದು, ಸದರಿ ಮಾಹಿತಿಯ ಪ್ರಕಾರ ನಾನು ನಮ್ಮ ಸಂಬಂದಿಕರು 13 ಜನ ಕೂಡಿ ನಮ್ಮೂರಿನ ಟಾಟಾ ಎ.ಸಿ. ನಂ. ಕೆ.ಎ-37-ಎ-4827 ನೇದ್ದರಲ್ಲಿ ಮುಂಜಾನೆ 10-30 ಗಂಟೆಯ ಸುಮಾರಿಗೆ ಹತ್ತಿಕೊಂಡು, ಕೊರಡಕೇರಾ ಗ್ರಾಮಕ್ಕೆ ಹೋಗಲು ಹೊರಟಿದ್ದು ಇರುತ್ತದೆ ಅದರ ಚಾಲಕನಾದ ದೇವಪ್ಪ ಕೊನಸಾಗರ ಈತನು. ಟಾಟಾ ಎ.ಸಿ ವಾಹನವನ್ನು ನಡೆಸುತ್ತಿದ್ದನು. ನಂತರ ಮುಂಜಾನೆ 11-00 ಗಂಟೆಯ ಸುಮಾರಿಗೆ ಬಂಡಿ ಕ್ರಾಸದಿಂದ ಕೊರಡಕೇರಾ ಕಡೆಗೆ ಗಜೇಂದ್ರಗಡ-ಕುಷ್ಟಗಿ ರಸ್ತೆಯ ಮೇಲೆ ಪ್ರಲ್ಹಾದರಾವ್ ಬ್ರಾಹ್ಮಣರ ಹೊಲದ ಹತ್ತಿರ ನಮ್ಮ ಟಾಟಾ ವಾಹನದ ಚಾಲಕನಾದ ದೇವಪ್ಪ ಕೊನಸಾಗರ ಈತನು ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗುತ್ತಾ ಒಮ್ಮಿದೊಮ್ಮಲೇ ಬ್ರೇಕ್ ಮಾಡಿ ನಿಯಂತ್ರಣ ತಪ್ಪಿ ಓಳಮಗ್ಗಲಾಗಿ ರಸ್ತೆಯ ಎಡಕ್ಕೆ ವಾಹನವನ್ನು ಕೆಡವಿ ಅಪಘಾತಪಡಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಮೇಲ್ಕಾಣಿಸಿದವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಮತ್ತು ಒಳಪೆಟ್ಟುಗಳಾಗಿದ್ದು,  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 305/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 24-10-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಸಿದ್ದಪ್ಪ ತಂದೆ ಪಾಮಣ್ಣ ಮತ್ತು ನಮ್ಮೂರಿನ ಪಂಪಣ್ಣ ತಂದೆ ಬಸಪ್ಪ ಬಳ್ಳಾರಿ, ನಾಯಕ ಇವರು ಕೂಡಿಕೊಂಡು ನಮ್ಮೂರಿನ ಸಿದ್ದಪ್ಪನ ಹೋಟಲ್ ಹತ್ತಿರ  ಗಂಗಾವತಿ ಕೊಪ್ಪಳ ರಸ್ತೆಯ ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದೆವು. ಆಗ ನಮ್ಮೂರಿನ ಸೋಮವ್ವ ಗಂಡ ನಿಂಗಪ್ಪ ಗೊಲ್ಲರ ಮತ್ತು ಅವರ ತಂಗಿ ನೇತ್ರಮ್ಮ ಗಂಡ ನರಿಯಪ್ಪ ಗೊಲ್ಲರ ಇವರು ಮತ್ತು ನೇತ್ರಮ್ಮಳ ಮಗ ಸಣ್ಣೆಪ್ಪ ವಯಸ್ಸು 5 ವರ್ಷ ಈತನಿಗೆ ಕರೆದುಕೊಂಡು ತಮ್ಮ ಹೊಲದಿಂದ ವಾಪಸ್ ಮನೆಯ ಕಡೆಗೆ ಗಂಗಾವತಿ ಕೊಪ್ಪಳ ರಸ್ತೆಯ ಎಡ ಪಕ್ಕದಲ್ಲಿ ಬರುತ್ತಿದ್ದರು. ಆಗ ಅವರ ಹಿಂಭಾಗ ಕೊಪ್ಪಳ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿ ವೇಗವಾಗಿ ಮತ್ತು ತೀವ್ರ ನಿರ್ಲಕ್ಷತನದಿಂದ ರಸ್ತೆಯ ಮೇಲೆ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹೊರಟಿದ್ದ ಸಣ್ಣೆಪ್ಪ ಇವನಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಕಾರನ್ನು ಸ್ವಲ್ಪ ನಿಲ್ಲಿಸಿದಂತೆ ಮಾಡಿ ಹಾಗೆಯೇ  ಹೊರಟು ಹೋಗಿದ್ದು, ಈ ಸಮಯದಲ್ಲಿ ನಾವು ಕಾರ ನಂಬರ ನೋಡಲು ಸ್ವಿಫ್ಟ್ ಕಂಪನಿ ಇದ್ದು, ನಂ: ಕೆ.ಎ-25/ ಎಂ.ಬಿ-3744 ಇತ್ತು. ನಂತರ ಅಲ್ಲಿಯೇ ಇದ್ದ ನಾನು ಮತ್ತು ಪಂಪಣ್ಣ ಇಬ್ಬರು ಹೋಗಿ ಸಣ್ಣೆಪ್ಪನಿಗೆ ನೋಡಲು ಅವನ ಹಣೆಯ ಮೇಲೆ ಭಾರಿ ಒಳಪೆಟ್ಟು ಬಿದ್ದು, ತೆರಚಿದ ಗಾಯವಾಗಿದ್ದು ಎಡಗಡೆ ಸೊಂಟದ ಮೇಲೆ ತೆರಚಿದ ಗಾಯವಾಗಿತ್ತು. ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಕೂಡಲೆ ಗಾಯಗೊಂಡ ಸಣ್ಣೆಪ್ಪನಿಗೆ ಯಾವುದೋ ಒಂದು ವಾಹನದಲ್ಲಿ ಅವನ ತಾಯಿ ನೇತ್ರಮ್ಮ, ಮತ್ತು ದೊಡ್ಡಮ್ಮಳಾದ ಸೋಮವ್ವ ಇವರ ಜೊತೆಗೆ ಮಲ್ಲನಗೌಡ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ದಾಖಲಿಸಿ ಬಂದಿರುತ್ತೇನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 110/2016 ಕಲಂ: 78(3) Karnataka Police Act.
ದಿನಾಂಕ: 24-10-2016  ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿ ಹಿರೇಮ್ಯಾಗೇರಿ ಗ್ರಾಮದಲ್ಲಿ ಬರುವ ಅಕ್ಕಮಾದೇವಿ ದೇವಸ್ಥಾನದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಂದು ರೂಪಾಯಿಗೆ 80 ರೂಪಾಯಿಗಳು ಬರುತ್ತವೆ ಓಸಿ ಮಟಕಾ ನಂಬರಗಳನ್ನು ಬರೆಯಿಸಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಓಸಿ ಮಟಕಾ ನಂಬರಗಳನ್ನು ಬರೆದುಕೊಳ್ಳುತಿದ್ದಾಗ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿ ನಂ 01 ನೇದ್ದವನ ಹತ್ತಿರ ಮಟಕಾ ಜೂಜಾಟದ ನಗದು ಹಣ 540/-ರೂ. ಹಾಗೂ ಒಂದು ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಗಳೊಂದಿಗೆ ಸಿಕ್ಕಿಬಿದ್ದಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(3) Karnataka Police Act.
ದಿನಾಂಕ: 24-10-2016 ರಂದು ಸಂಜೆ 4:20 ಗಂಟೆಗೆ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಮೇಣೆಧಾಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿ ವ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 2370-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ ಮರಿಸ್ವಾಮಿ ಉರಿಜಾಳ ಸಾ: ತಾವರಗೇರಾ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Monday, October 24, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 304/2016 ಕಲಂ: 87 Karnataka Police Act.
ದಿನಾಂಕ:- 23-10-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರಾಳ ಸೀಮಾದಲ್ಲಿ ಮೇನ ಕೆನಾಲ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಮತ್ತು  ಸಿಬ್ಬಂದಿಯವರಾದ ಸಿ.ಹೆಚ್.ಸಿ. 32, ಸಿಪಿಸಿ- 363, 180, 429, 277, 118 ಎ.ಪಿ.ಸಿ. 77 ಇವರನ್ನು ಮತ್ತು ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಒಳದಾರಿಯಿಂದ ಮೇನ್ ಕೆನಾಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಕೆನಾಲ ಮುಂದೆ ಒಂದು ಬೇನಿವ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 10 ಜನರು ಸಿಕ್ಕಿಬಿದ್ದಿದ್ದು. ವಿಚಾರಿಸಲು ಅವರು ತಮ್ಮ ಹೆಸರುಗಳು  ಮಲ್ಲಿಕಾರ್ಜುನ ತಂ/ ವಿರುಪಾಕ್ಷಿ ಹಾಗೂ ಇತರೆ 09 ಜನರು ಸಿಕ್ಕಿದ್ದು, ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5,850-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 214/2016 ಕಲಂ: 87 Karnataka Police Act.
ಇಂದು ದಿ:23.10.2016 ರಂದು 5-10 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಬಸಾಪೂರ ಗ್ರಾಮದ ಬಸ್ಟ್ಯಾಂಡ್ ಹಿಂಭಾಗದ ಹಾಗೂ ಕುಟುಗನಹಳ್ಳಿ ರಸ್ತೆಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ 17 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಮಾನ್ಯ ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತರವರ ನೇತೃತ್ವದಲ್ಲಿ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 4630=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. 09 ಜನ ಆರೋಪಿತರ ಓಡಿ ಹೋಗಿದ್ದು ಇರುತ್ತದೆ. ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 271/2016 ಕಲಂ: 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 23-10-2016 ರಂದು ಮುಂಜಾನೆ 07-30  ಗಂಟೆಗೆ  ಹನುಮಗೌಡ ತಂದೆ ಬಾಪುಗೌಡ ಗೌಡ್ರು ಸಾ: ಬಿಸನಾಳ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ನಿನ್ನೆ ದಿನಾಂಕ:22-10-2016 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಮಾಸಕಟ್ಟಿ ಗ್ರಾಮದ ಭೀಮಪ್ಪ ತಂದೆ ಹನುಮಪ್ಪ ವಾಲಿಕಾರ ಸಾ:ಮಾಸಕಟ್ಟಿ ರವರ ಸೋನಾಲಿಕಾ ಕಂಪನಿಯ ಟ್ರ್ಯಾಕ್ಟರನ್ನು ಅದರ ಚಾಲಕ ಸಿಂಗಪ್ಪ ತಂದೆ ಭೀಮಪ್ಪ ವಾಲಿಕಾರ ಸಾ: ಮಾಸಕಟ್ಟಿ  ಈತನು ಬಿಸನಾಳ ಸೀಮಾದಲ್ಲಿರುವ ನಮ್ಮ ಹೊಲ ಸರ್ವೇ ನಂ.10 ರಲ್ಲಿ 2 ಎಕರೆ ಜಮೀನು ರೂಟರ್ ಹೊಡಿಸಲು ಹೇಳಿದ್ದು. ಸದರಿ ಟ್ರ್ಯಾಕ್ಟರ ಚಾಲಕನು ಹೊಲಕ್ಕೆ ಬಂದು ಸಂಗಡ ನನ್ನ ಮಗನಾದ ಪ್ರವೀಣಗೌಡನನ್ನು ಸಹ ಟ್ರ್ಯಾಕ್ಟರ ಜೊತೆಗೆ ಕರೆದುಕೊಂಡು ಬಂದು ಹೊಲದಲ್ಲಿ ರೂಟರನ್ನು ಹೊಡೆಯುತ್ತಿದ್ದನು. ಸಂಜೆ-05-30 ಗಂಟೆಯ ಸುಮಾರಿಗೆ ಭೂಮಿಯು ಹಸಿ ಇದೆ ಹಾಗೂ ಕಸ, ಕಲ್ಲು ಇವೆ ಅದನ್ನು ನೀನು ತೆಗೆ ಅಂತಾ ಸಿಂಗಪ್ಪ ಈತನು ಹೇಳಿದ್ದರಿಂದ ನನ್ನ ಮಗನಾದ ಪ್ರವೀಣಗೌಡ ಈತನು ಕಸ ತೆಗೆಯುತ್ತಿದ್ದಾಗ ಸದರಿ ಟ್ರಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಎಡಗಡೆಯ ರೂಟರದಿಂದ ಪ್ರವೀಣಗೌಡನಿಗೆ ಟಕ್ಕರಕೊಟ್ಟಿದ್ದರಿಂದ ಸದರಿ ರೂಟರ ಕೆಳಗೆ ಬಿದ್ದು ರೂಟರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಸದರಿ ಅಪಘಾತದಲ್ಲಿ ನನ್ನ ಮಗನಿಗೆ ತಲೆಯ ಭಾಗ, ಮುಖ ಬಾರಿ ರಕ್ತಗಾಯವಾಗಿ ಅಪ್ಪಚ್ಚಿಯಾಗಿರುತ್ತದೆ. ಬಲಗಾಲು ಪಾದದ ಹತ್ತಿರ ಮುರಿದಂತಾಗಿ ಚರ್ಮ ಕಿತ್ತಿದ್ದು, ಎಡಗಾಲು ಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು ಸ್ವಲ್ಪ ಹೊತ್ತಿನ ನಂತರ ಅಂದರೆ ಸಂಜೆ  05-45 ಗಂಟೆಯ ಸುಮಾರಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  


Saturday, October 22, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 78 (3)  Karnataka Police Act.
ಶ್ರೀ ಶಂಕರಪ್ಪ ನಾಯ್ಕ್ ಪಿ.ಎಸ್.ಐ. ರವರಿಗೆ ದಿನಾಂಕ: 21-10-2016 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬಸರಳ್ಳಿ ಗ್ರಾಮದ ಶ್ರೀ ಕನಕದಾಸ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಂದ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿದ್ದು ಅಲ್ಲಿ ಜೂಜಾಟದಲ್ಲಿ ನಿರತನಾಗಿದ್ದ ಸಿದ್ದಪ್ಪ ತಂದೆ ಯಲ್ಲಪ್ಪ ಬನ್ನಿಕೊಪ್ಪ ಸಾ: ಬಿಸರಳ್ಳಿ ಸಿಕ್ಕಿದ್ದು ಇತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 550=00 ರೂ.ಗಳನ್ನು ಜಪ್ತ ಮಾಡಿಕೊಂಡಿದ್ದು, ಹಾಗೂ ಆರೋಪಿತನು ತಾನು ಮಟಕಾ ನಂಬರ ಬರೆದ ಪಟ್ಟಿಯನ್ನು ರಾಮಣ್ಣ ಗುಡಿ ಸಾ: ಕವಲೂರು  ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 302/2016 ಕಲಂ: 78 (3)  Karnataka Police Act.
ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರಿಗೆ ಶ್ರೀರಾಮನಗರ ಗ್ರಾಮದ ಸರಸ್ವತಿ ಲಾಡ್ಜ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮೋಸ ಮಾಡವ ಉದ್ದೇಶದಿಂದ ಮಟಕಾ ಜೂಜಾಟ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ದಾಳಿ ಮಾಡಲಾಗಿ ಆರೋಪಿ ಮೌಲಾಸಾಬ ತಂದೆ ಇಮಾಮಸಾಬ ಮುಲ್ಲಾ, ವಯಸ್ಸು 35 ವರ್ಷ, ಜಾತಿ: ಮುಸ್ಲೀಂ ಉ: ಪಂಚರ್ ಶಾಪ್ ಸಾ: ಕುಂಟೋಜಿ ತಾ. ಗಂಗಾವತಿ. ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,650/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ ಪೆನ್ನು ಮತ್ತು  ಒಂದು ನೋಕಿಯ ಮೊಬೈಲ್ ದೊರೆತಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 270/2016 ಕಲಂ: 87 Karnataka Police Act.
ಶ್ರೀ ರಾಮಪ್ಪ ಜಲಗೇರಿ ಪಿ.ಎಸ್.ಐ ಕುಷ್ಠಗಿ ಠಾಣೆ ರವರಿಗೆ ಕ್ಯಾದಗುಪ್ಪಾ ಸೀಮಾದಲ್ಲಿಯ ರಾಘವೇಂದ್ರ ದೇಸಾಯಿ ರವರ ಹೊಲದಲ್ಲಿರುವ ಟಾವರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾಗ 05 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 4500=00 ರೂ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆಯ ನ್ಯೂಸ್ ಪೇಪರ ಇವುಗಳನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Friday, October 21, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 247/2016 ಕಲಂ: 78 (3)  Karnataka Police Act.
ದಿನಾಂಕ 20-10-2016 ರಂದು ರಾತ್ರಿ 6-45 ಗಂಟೆಯ ಸುಮಾರಿಗೆ ಸಿದ್ದಾಪೂರ ಗ್ರಾಮದ ಸಿನಿಮಾ ಟಾಕೀಸ್  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ 1) ವಿಶ್ವನಾಥ ತಂದೆ ಬಸಯ್ಯ ಹಿರೇಮಠ ವಯ 31 ವರ್ಷ ಜಾತಿ ಜಂಗಮ ಉ. ಕೂಲಿಕೆಲಸ ಸಾ. ಮಲ್ಲಿಕಾರ್ಜುನ ನಗರ ಸಿದ್ದಾಪೂರ ತಾ. ಗಂಗಾವತಿ ಇವನ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ಪಿ.ಎಸ್.ಐ. ಕಾರಟಗಿ ರವರು ದಾಳಿ ಮಾಡಿ ಹಿಡಿದುಕೊಂಡು ಅವರಿಂದ ನಗದು ಹಣ ರೂ. 630=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಅಂತಾ ಮುಂತಾಗಿ ನೀಡಿದ ವರದಿಯ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 175/2016 ಕಲಂ: 78 (3)  Karnataka Police Act.
ದಿ: 20-10-2016 ರಂದು ರಾತ್ರಿ 7-00 ಗಂಟೆಗೆ ಕೊಪ್ಪಳ ನಗರದ ಹಸನ್ ಕ್ರಾಸ್ ಹತ್ತಿರದ ಈಶ್ವರ ವೈನ್ಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಕಿರಣ ತಂದೆ ಪರಶುರಾಮ ಸಾ ಪವಾರ ವಯಾ: 24 ವರ್ಷ ಜಾ; ಸಾವಜಿ ಉ: ಖುಷ್ಕಾ ವ್ಯಾಪಾರ ಸಾ: ಯತ್ನಟ್ಟಿ ರೋಡ್ ಭಾಗ್ಯನಗರ ಕೊಪ್ಪಳ. ಇತನು ಜನರ ಗುಂಪಿನಲ್ಲಿ ನಿಂತುಕೊಂಡು ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ ಅಂತಾ ಕೂಗುತ್ತಾ ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ರಾತ್ರಿ 7-00 ಗಂಟೆಯ ವೇಳೆಗೆ ದಾಳಿ ಮಾಡಿದಾಗ ಆರೋಪಿ ಕಿರಣ ತಂದೆ ಪರಶುರಾಮ ಸಾ ಇತನು ಸಿಕ್ಕಿದ್ದು ಇತನಿಂದ 1] 650=00 ರೂ. ನಗದು ಹಣ. 2] ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 176/2016 ಕಲಂ: 78 (3)  Karnataka Police Act.
ದಿ: 20-10-2016 ರಂದು ರಾತ್ರಿ 8-45 ಗಂಟೆಗೆ ಕೊಪ್ಪಳ ನಗರದ ಅಂಬೇಡ್ಕರ್ ಭವನದ ಹತ್ತಿರದ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಮಾಂಜನಿ ತಂದೆ ಮಾರೇಪ್ಪ ಮುತ್ತಗಾರ ವಯಾ: 40 ವರ್ಷ ಜಾ: ಚನ್ನದಾಸರ ಉ: ಸ್ಟೇಷನರಿ ವ್ಯಾಪಾರ ಸಾ: ಹಮಾಲರ ಕಾಲೋನಿ ಕೊಪ್ಪಳ. ಇತನು ಜನರ ಗುಂಪಿನಲ್ಲಿ ನಿಂತುಕೊಂಡು ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ ಅಂತಾ ಕೂಗುತ್ತಾ ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ರಾತ್ರಿ 8-45 ಗಂಟೆಯ ವೇಳೆಗೆ ದಾಳಿ ಮಾಡಿದಾಗ ಆರೋಪಿ ರಾಮಾಂಜನಿ ತಂದೆ ಮಾರೇಪ್ಪ ಮುತ್ತಗಾರ ಇತನು ಸಿಕ್ಕಿದ್ದು ಇತನಿಂದ 1] 750=00 ರೂ. ನಗದು ಹಣ. 2] ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು,  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.
4] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78 (3)  Karnataka Police Act 42 IPC.

ದಿನಾಂಕ 20-10-2016 ರಂದು ಸಂಜೆ 6-00 ಗಂಟೆಗೆ ವಡಕಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವರ ಗುಡಿಯ ಮುಂದೆ ಇರುವ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ ಆರೋಫಿತನು ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಅವರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ಎಂಬ ನಸೀಬದ ಜೂಜಾಟ ಅಂತಾ ಕೂಗುತ್ತಾ ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಾ ಮೋಸ ಮಾಡುತ್ತಿರುವದನ್ನು ಖಾತ್ರಿ ಪಡೆಸಿಕೊಂಡು ಪಿ.ಎಸ್.ಐ. ಮತ್ತು ಸಿಬ್ಬಂದಿರವರು ಒಮ್ಮೆಲೆ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ.1615=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು ಮತ್ತು ನಗದು ಹಣವನ್ನು ಜಪ್ತಿಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Thursday, October 20, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 297/2016 ಕಲಂ: 78(3) Karnataka Police Act.
ದಿನಾಂಕ:- 19-10-2016 ರಂದು ಉಡಮಕಲ್ ಗ್ರಾಮದ ಶರಣಬಸವೇಶ‍್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಹೋಗಿ ದಾಳಿ ಮಾಡಲಾಗಿ ತನ್ನ ಹೆಸರು ಹನಮಂತ ತಂ/ ನಿಂಗಪ್ಪ ಮುಕರ್ತನಾಳ. ವಯಾ 35 ಜಾ. ನಾಯಕ ಉ. ಕೂಲಿ ಕೆಲಸ ಸಾ. ಉಡಮಕಲ್ ತಾ. ಗಂಗಾವತಿ. ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 690/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ ಪೆನ್ನು ದೊರೆತಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 298/2016 ಕಲಂ: 279, 338 ಐ.ಪಿ.ಸಿ.

ಶಾರದಮ್ಮ ಗಂ/ ಅಯ್ಯಪ್ಪ ಕಮ್ಮಾರ ಸಾ. ವೆಂಕಟಗಿರಿ ಇವರು ನೀಡಿದ ಹೇಳಿಕೆ ಫಿರ್ಯಾದಿ ಹಾಜರ ಪಡಿಸಿದ್ದು ಸಾರಾಂಶವೆನಂದರೆ. ದಿನಾಂಕ. 16-10-2016 ರಂದು 05-00 ಪಿ.ಎಂಕ್ಕೆ. ಫಿರ್ಯಾದಿದಾರರ ಮಗ ಮಂಜುನಾಥ ಇವನು ಕೆಸರಟ್ಟಿಗೆ ಹೋಗಿದ್ದು ಅಲ್ಲಿ ತನ್ನ ಗೆಳೆಯನ ಮೋಟಾರ ಸೈಕಲ್ ನಂ. ಕೆ.ಎ.02/ಈ.ಎಫ್.7906 ಇದನ್ನು ಕೆಸರಟ್ಟಿಯಲ್ಲಿ ಗಂಗಾವತಿ ಕನಕಗಿರಿ ರಸ್ತೆಯ ಮೇಲೆ ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಸ್ಕಿಡ್ ಮಾಡಿಕೊಂಡು ಬಿದ್ದು ಅಪಘಾತ ಮಾಡಿಕೊಂಡಿದ್ದರಿಂದ ಮಂಜುನಾಥನ ತಲೆಗೆ ಒಳಪೆಟ್ಟು ಬಿದ್ದು ಮೂರ್ಚೆ ಹೋಗಿದ್ದು, ಹೆಚ್ಚಿನ ಚಿಕಿತ್ಸೆ ಕುರಿತು ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

 
Will Smith Visitors
Since 01/02/2008