Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, January 31, 2016

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 16/2016 ಕಲಂ: 78(3) Karnataka Police Act:
ದಿನಾಂಕ 30.01.2016 ರಂದು ಸಾಯಂಕಾಲ 6:00 ಗಂಟೆಗೆ  ಮಾನ್ಯ  ಶ್ರಿಕಾಂತ ಕಟ್ಟಿಮನಿ ಡಿ.ಎಸ್.ಪಿ ಸಾಹೇಬರು ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಜ್ಷಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಗೂ 2 ಜನ ಆರೋಪಿತರನ್ನು ಹಾಜರು ಪಡಿಸಿದ್ದು ಅದರ ಸಾರಾಂಶ ವೇನೆಂದರೆ ಇಂದು ದಿನಾಂಕ 30.01.2016 ರಂದುಮದ್ಯಾನ 3:30 ಗಂಟೆಗೆ ತಮ್ಮ ಕಾರ್ಯಾಲಯದಲ್ಲಿದ್ದಾಗ ಕೊಪ್ಪಳ ನಗರದ ಕನಕಾಚಲಾ ಟಾಕೀಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು ಕೂಡಲೇ ಕಾರ್ಯಾಲಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಪಂಚರನ್ನು ಕರೆದುಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ನೋಡಲಾಗಿ ಕನಕಾಚಲ ಟಾಕೀಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ಪಟ್ಟಿಯನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ದಸ್ತಗಿರಿ ಮಾಢಿ ಅವರಿಂದ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 12,258=00 ರೂ, ಮಟಕಾ ಜೂಜಾಟದ ಪಟ್ಟಿ, ಒಂದು ಬಾಲ್ ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು ಮತ್ತು ಆರೋಪಿತ ಶಿವರೆಡ್ಡಿ ಸಾ: ಬೆಂಕಿ ನಗರ ಕೊಪ್ಪಳ ಇತನು ಮಟಕಾ ಪಟ್ಟಿ ತೆಗೆದುಕೊಳ್ಳುವ ಬುಕ್ಕಿಯಾಗಿದ್ದು ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.   
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 23/2016 ಕಲಂ: 323, 341, 355, 504, 506 ಐ.ಪಿ.ಸಿ:.
ದಿ:30-01-2016 ರಂದು ರಾತ್ರಿ 8-40 ಗಂಟೆಗೆ ಫಿರ್ಯಾದಿದಾರರಾದ ದೇವರೆಡ್ಡಿ ಕರಮುಡಿ ಸಾ: ಗಿಣಿಗೇರಿ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾಧಿ ಸಾರಾಂಶವೇನೆಂದರೇ, ಇಂದು ದಿ:30-01-16 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಾನು ಗಿಣಿಗೇರಿ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ನನ್ನ ಪಾನಶಾಪ್ ದಲ್ಲಿದ್ದಾಗ ಪ್ರಕಾಶ ಇವನು ಬಂದು ನನಗೆ 20 ಸಾವಿರ ರೂ ಕೊಡು ನನ್ನ ಮಗನಿಗೆ ಅರಾಮ ಇಲ್ಲಾ ತೋರಿಸಿಕೊಂಡು ಬರಬೇಕು ಅರ್ಜಂಟ್ ಇದೆ ಅಂತಾ ಕೇಳಿದನು. ಆಗ ನಾನು ಆತನಿಗೆ ನನ್ನ ಹತ್ತಿರ ಹಣ ಇಲ್ಲಾ ಅಂತಾ ಅಂದಿದ್ದಕ್ಕೆ ಆತನು ಕೇಳದೇ ಏಕಾಏಕೀ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ತನ್ನ ಚಪ್ಪಲಿಯಿಂದ ನನ್ನ ಮುಖಕ್ಕೆ ಹೊಡೆದು ಹಲ್ಲೆ ಮಾಡಿದ್ದು ಅಲ್ಲದೇ ಕಾಲಿನಿಂದ ಒದ್ದಿದ್ದರಿಂದ ನಾನು ಚೇರ ಮೇಲಿಂದ ಕೆಳಗಡೆ ಬಿದ್ದು ನನ್ನ ಎಡಕಾಲ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಲ್ಲದೇ ಆತನು ನನಗೆ ನಡೆದ ವಿಷಯ ಯಾರ ಮುಂದೆ ಹೇಳಿದರೆ ನಿನಗೆ ಹೊಡೆದು ಸಾಯಿಸುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿ ಪ್ರಕಾಶ ಪೊಲೀಸ್ ಪಾಟೀಲ ಸಾ: ಗಿಣಿಗೇರಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 23/2016. ಕಲಂ: 323,341,355,504,506 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 04/2016 ಕಲಂ: 143, 147, 341, 323, 504 ಸಹಿತ 34 ಐ.ಪಿ.ಸಿ:

¢£ÁAPÀ: 30-01-2016 gÀAzÀÄ ¸ÀAeÉ 07-30 UÀAmÉUÉ ¦üAiÀiÁð¢zÁgÀgÁzÀ ²æà AiÀĪÀÄ£ÀÆgÀ¥Àà vÀAzÉ ©üêÀÄ¥Àà UÀÄr»AzÀ® ªÀAiÀÄ: 27 ªÀµÀð. eÁw: PÀÄgÀħgÀÄ. ¸Á: JA.UÀÄqÀzÀÆgÀÄ. gÀªÀgÀÄ oÁuÉUÉ ºÁdgÁV MAzÀÄ °TvÀ zÀÆgÀÄ ¸À°è¹zÀÄÝ ¸ÁgÁA±ÀªÉ£ÉAzÀgÉ F ¢ªÀ¸À ¨É½UÉÎ 10-30 UÀAmÉUÉ vÁªÀÅ vÀªÀÄÆäj£À ¸ÀªÀÄÄzÁAiÀÄ ¨sÀªÀ£ÀzÀ ºÀwÛgÀ EzÁÝUÀ C°èUÉ §AzÀ vÀªÀÄÆäj£À §¸ÀªÀgÁd vÀAzÉ ¥ÀQÌÃgÀUËqÀ ªÀiÁ° ¥Ánî FvÀ£ÀÄ ¦üAiÀiÁð¢zÁgÀgÉÆA¢UÉ mÁ mÁ J¸ï UÁr ¨ÁrUÉ ºÉÆÃUÀĪÀ «µÀAiÀÄzÀ PÀÄjvÀÄ dUÀ¼À vÉUÉzÀÄ UÁrAiÀÄ°è PÀĽwzÀÝ ¦AiÀiÁð¢zÁgÀgÀ JzÉAiÀÄ ªÉÄð£À CAV »rzÀÄ J¼ÉzÀÄ UÁr¬ÄAzÀ PɼÀUÉ PÉqÀ« CªÁZÀåªÁV ¨ÉÊzÀÄ PÉʬÄAzÀ ºÉÆqɧqÉ ªÀiÁrzÀÄÝ C®èzÉ dUÀ¼À ©r¸À®Ä §AzÀ ¦üAiÀiÁð¢zÁgÀgÀ vÀªÀÄä §¸ÀªÀgÁd FvÀ¤UÀÆ PÀÆqÀ G½zÀ DgÉÆævÀgÀ ¥ÉÊQ zÉÆqÀا¸À¥Àà, zÉÆqÀØ¥Àà PË¢ EªÀgÀÄ PÉʬÄAzÀ ºÉÆÃqÉ¢zÀÄÝ G½zÀ DgÉÆævÀgÀÄ ¦üAiÀiÁð¢zÁgÀjUÉ CZÁªÀåªÁV ¨ÉÊ¢zÀÄÝ CAvÁ ªÀÄÄAvÁUÀ EzÀÝ ¦üAiÀiÁ𢠸ÁgÁA±ÀzÀ ªÉÄðAzÀ   ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

Saturday, January 30, 2016

1) ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 05/2016 ಕಲಂ: 279, 304(ಎ) ಐ.ಪಿ.ಸಿ ಹಾಗೂ 187 ಐ.ಎಂ.ವಿ. ಕಾಯ್ದೆ:
ದಿನಾಂಕ 29/1/2016 ರಂದು ರಾತ್ರಿ 8.-30 ಗಂಟೆಗೆ ಪಿರ್ಯಾದಿದಾರಳ ಗಂಡನಾದ ವೆಂಕಟೇಶ ಇತನು ಸೈಕಲ್ಲ ತಗೆದುಕೊಂಡು ಕಂಪ್ಲಿ ಸರ್ಕಲ್ ಕಡೆಯಿಂದ ಮನೆ ಕಡೆಗೆ ಬರುತ್ತಿರುವಾಗ ಕಂಪ್ಲಿ ರಸ್ತೆಯ ಸಿಂಗನಾಳ ಇವರ ಗದ್ದೆಯ ಹತ್ತಿರ ರಸ್ತೆಯ ಎಡಬಾಜು ಹೊರಟಿರುವಾಗ ಹಿಂದಿನಿಂದ ಅಂದರೆ ಕಂಪ್ಲಿ ಸರ್ಕಲ್ ಕಡೆಯಿಂದ ಯಾವುದೋ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ವೆಂಕಟೇಶ ಇತನ ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ವೆಂಕಟೇಶ ಇತನ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ರಕ್ತ ಸ್ರಾವವವಾಗಿದ್ದು ಮತ್ತು ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದುಇರುತ್ತದೆ ಅಪಘಾತ ಮಾಡಿದ ಲಾರಿಯ ಚಾಲಕ ತನ್ನ ಲಾರಿಯನ್ನು ಹಾಗೆಯೇ ಜೋರಾಗಿ ಕಂಪ್ಲಿ ಕಡೆಗೆ ತಗೆದುಕೊಂಡು ಹೋಗಿ ಪರಾರಿಯಾಗಿದ್ದು ಇರುತ್ತದೆ. ಸದರ ಲಾರಿಯ ನಂಬರ ಪ್ರತ್ಯಕ್ಷ ದರ್ಶಿಗಳು ನೋಡಿರುವುದಿಲ್ಲಾ ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ: 379 ಐ.ಪಿ.ಸಿ:.
ದಿನಾಂಕ 29-01-2016 ರಂದು ರಾತ್ರಿ 10-00 ಗಂಟೆಗೆ ಫೀರ್ಯಾದಿದಾರರಾದ ಶ್ರೀಮತಿ ವಿಜಯಲಕ್ಷ್ಮೀ ಗಂಡ ಶಂಕರರಡ್ಡಿ ಬಾಣದ, ವಯಾ: 26 ವರ್ಷ, ಜಾ; ರೆಡ್ಡಿ ಉ: ಮನೆಗೆಲಸ, ಸಾ: ಸದರ್ಾರಗಲ್ಲಿ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ: 26-01-2016 ರಂದು ತಾನು ತನ್ನ ಮನೆಯವರ ಸಂಗಡ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಹೋಗಿದ್ದು, ಜಾತ್ರೆಗೆ ಹೋಗುವ ಸಮಯದಲ್ಲಿ ತಾನು ಸುಮಾರು 50 ಗ್ರಾಂ ತೂಕದ ಅಂದಾಜು ಕಿಮ್ಮತ್ತು 1,25,000-00 ರೂ ಬೆಲೆ ಬಾಳುವ ಬಂಗಾರದ ಮಾಂಗಲ್ಯದ ಸರವನ್ನು ಕೊರಳಲ್ಲಿ ಹಾಕಿಕೊಂಡು ಹೋಗಿದ್ದರು. ರಥೋತ್ಸವ ಮುಗಿದ ನಂತರ ತಾನು ತನ್ನ ಕುಟುಂಬದ ಸದಸ್ಯರ ಸಂಗಡ ಜಾತ್ರೆ ಮಾಡಿಕೊಂಡು ವಾಪಾಸ್ ಮನೆಗೆ ಸಾಯಂಕಾಲ 7-30 ಗಂಟೆಯ ಸುಮಾರಿಗೆ ಬಂದಿರುತ್ತೇನೆ. ವಾಪಾಸ್ ಮನೆಗೆ ಬಂದ ನಂತರ ತಾನು ಕೊರಳಲ್ಲಿ ಹಾಕಿಕೊಂಡು ಹೋದ ಬಂಗಾರದ ಮಾಂಗಲ್ಯದ ಸರವನ್ನು ಬಿಚ್ಚಿ ಮನೆಯ ಅಲ್ಮಾರದಲ್ಲಿ ಇಡಲು ತನ್ನ ಕೊರಳಲ್ಲಿ ಕೈ ಹಾಕಿದಾಗ ತನ್ನ ಕೊರಳಲ್ಲಿನ ಮಾಂಗಲ್ಯದ ಸರ ಕಾಣಿಸಲಿಲ್ಲ. ಆಗ ತಾನು ಭಯಬೀತಳಾಗಿ ಮನೆಯಲ್ಲಿ ಬಟ್ಟೆ ಬದಲಿಸುವಾಗ ಬಿದ್ದಿರಬಹುದೇನೋ ಎಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದಾಗ ತನ್ನ ಕೊರಳಲ್ಲಿನ ಮಾಂಗಲ್ಯದ ಸರ ಕಂಡು ಬರಲಿಲ್ಲ. ತಾನು ಜಾತ್ರೆಗೆ ಹೋದಾಗ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವ ಬಂದು ವಾಪಾಸ್ ಹೋಗುವ ಸ್ಥಳದಲ್ಲಿರುವ ಗುಂಡುಗಳ ಹತ್ತಿರ ತಾನು ನಿಂತಿದ್ದಾಗ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದರು. ಆ ಸಮಯದಲ್ಲಿ ಜನರ ನೂಕು ನುಗ್ಗಲಿದ್ದು ಅಲ್ಲಿಯೇ ಯಾರೋ ಕಳ್ಳರು ನನ್ನ ಕೊರಳಲ್ಲಿನ ಅಂದಾಜು 50 ಗ್ರಾಂ ತೂಕದ ಅಂದಾಜು 1,25,000-00 ರೂಪಾಯಿ ಬೆಲೆ ಬಾಳುವ ಮಾಂಗಲ್ಯದ ಸರವನ್ನು ಯಾರೋ ಕಳ್ಳರು ಗಲಾಟೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಮುಂತಾಗಿ ಸಲ್ಲಿಸಿದ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂಡೇನು.  
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 31/2016 ಕಲಂ: 78(3) Karntaka Police Act.
ದಿನಾಂಕ. 29-01-2016 ರಂದು 6-30 ಪಿ.ಎಂ.ಕ್ಕೆ ಆರೋಪಿತನಾದ ಮಹಮ್ಮದ ಅಜೀಮ ಮುನಿರಾಬಾದ ಗ್ರಾಮದ ಗ್ಯಾಸ ಗುಡಾನ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಫೀರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆರೋಪಿತನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 2185-00 ರೂ. ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 05/2016 ಕಲಂ: 143, 147, 148, 341, 323, 324, 355, 504 ಸಹಿತ 149  ಐ.ಪಿ.ಸಿ:.
ದಿನಾಂಕ:-29/01/2016 ರಂದು 3-30 ಪಿ.ಎಂ.ಕ್ಕೆ ಫಿರ್ಯಾದಿದಾರರಾದ ಹನುಮರಡ್ಡೆಪ್ಪರವರು ಠಾಣೆಗೆ ಬಂದು ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೆನೆಂದರೆ, ಇಂದು ದಿನಾಂಕ; 29/01/2016  ರಂದು 11-00 ಎ.ಎಂ.ಕ್ಕೆ ತಾನು ತಮ್ಮ ಶೆಡ್ ನಿಂದ ತಮ್ಮ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಾಗ, ಫಿರ್ಯಾದಿ ತಮ್ಮ ಶೆಡ್ ಪಕ್ಕದಲ್ಲಿ ಕಟ್ಟಿಗೆ ಬಡ್ಡೆಗಳನ್ನು ಹಾಕಬೇಡ ಅಂತಾ ಹೇಳಿದ ದ್ವೇಷದಿಂದ ಆರೋಪಿತರೆಲ್ಲರೂ ಕೂಡಿ ಗುಂಪು ಕಟ್ಟಿಕೊಂಡು, ತಮ್ಮ ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದು ತನಗೆ ರಸ್ತೆಯಲ್ಲಿ ತಡೆದು ನಿಲ್ಲಿಸಿ ‘‘ಲೇ ಸೂಳೇ ಮಗನೇ ಆ ಜಾಗ ನಿನ್ನದೇನಲೇ ಅಲ್ಲಿ ನಿನ್ನ ಹಕ್ಕು ಏನಿದೇ’’’’ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಕಟ್ಟಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆದು ರಕ್ತಗಾಯಗೊಳಿಸಿದ್ದು ಆಗ ಘಟನೆಯನ್ನು ನೋಡಿದ ಗ್ರಾಮದ ಹೇಮಣ್ಣ ಸೋಂಪೂರ, ಕಲ್ಲಪ್ಪ ಬಡಿಗೇರ, ತಿಪ್ಪರಡ್ಡೆಪ್ಪ ಸೊಂಪೂರ, ದೇವರಡ್ಡಿ ಮಾದಿನೂರ, ಸೋಮಣ್ಣ ಸೋಂಪೂರರವರು ಬಂದು ಆರೋಪಿತರಿಗೆ ಸಿಟ್ಟು ಮಾಡಿ ಜಗಳ ಬಿಡಿಸಿದಾಗ ಆರೋಪಿತರು ತನಗೆ ‘‘ಇವತ್ತು ಉಳಿದುಕೊಂಡಿ ಇನ್ನೊಮ್ಮೆ ಸಿಗೋ ನಿನ್ನ ಜೀವ ಸಹಿತ ಉಳಿಸುವದಿಲ್ಲಾ’’’ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು ಇದರಿಂದ ತನಗೆ ಹಣೆ ಮೇಲೆ, ತಲೆಯ ಎಡಗಡೆ ರಕ್ತಗಾಯವಾಗಿ, ಬೆನ್ನಿಗೆ ಹಾಗೂ ಎದೆಗೆ ಒಳಪೆಟ್ಟು ಆಗಿದ್ದು, ತನಗೆ ಕೈಯಿಂದ, ಕಟ್ಟಿಗೆಯಿಂದ, ಚಪ್ಪಲಿಯಿಂದ ಹೊಡೆದು ಆವಾಚ್ಯವಾಗಿ ಬೈಯ್ದಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿ ತನಿಖೆ ಕೈ ಕೊಂಡೆನು.

Friday, January 29, 2016

1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 15/2016 ಕಲಂ: 279, 337, 338, 304(ಎ) ಐ.ಪಿ.ಸಿ:
ದಿ:-29-01-16 ರಂದು ಬೆಳಗಿನ  ಜಾವ 12-45 ಗಂಟೆಗೆ  ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದ ಬಗ್ಗೆ ಮಾಹಿತಿ ಬಂದಿದ್ದರಿಂದ ಕೂಡಲೆ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದವರ ಬಗ್ಗೆ ವಿಚಾರಿಸಿ ಅಲ್ಲಿ ಹಾಜರಿದ್ದ ಪ್ರತ್ಯೇಕ್ಷ ಸಾಕ್ಷಿ  ಕರಿಯಪ್ಪ ತಂದೆ ಮೂಕಪ್ಪ ವಯ 45 ವರ್ಷ ಸಾ. ನಂದಿಹಳ್ಳಿ ತಾ. ಗಂಗಾವತಿ  ರವರಿಗೆ ವಿಚಾರಿಸಲು ಇವರು ಒಂದು ಲಿಖಿತ ದೂರನ್ನು ಬರೆಯಿಸಿಕೊಟ್ಟಿದ್ದು ಅದರ ಸಾರಾಂಶವೆನಂದರೆ, ನಾನು ಮತ್ತು ನಮ್ಮೂರಿನ ಬಸವರಾಜ ಇಬ್ಬರು ಕೂಡಿ ಗಂಗಾವತಿಯಲ್ಲಿ ತಮ್ಮ ಸಂಬಂದಿಕರ ಮನೆಯಲ್ಲಿ ಇದ್ದ ಕಾರ್ಯವನ್ನು ಮುಗಿಸಿಕೊಂಡು ತಮ್ಮ ಮೋಟಾರ್ ಸೈಕಲ್ ಮೇಲೆ ಗಂಗಾವತಿ ರಾಯಚೂರು ರಸ್ತೆಯ ಮೇಲೆ ವಾಪಾಸ ಮನೆಗೆ ಬರುತ್ತಿರುವಾಗ್ಗೆ ಸಾಲುಂಚಿಮರ ದಾಟಿ ಕಾರಟಗಿ ಕಡೆಗೆ ಬರುತ್ತಿರುವಾಗ್ಗೆ ಕಾರ್ ನಂ ಕೆ.ಎ-36 ಎನ್.1611 ನೆದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ  ಅಲಕ್ಷತನದಿಂದ ಚಾಲಾಯಿಸಿಕೊಂಡು ನಮ್ಮ ಮೋಟಾರ್ ಸೈಕಲ್ ಸೈಡ ಹಾಕಿ ಮುಂದೆ ಬಂದು ಆಂಜನೆಯ ದೇವಸ್ಥಾನದ ಹತ್ತಿರ  ಕಾರಟಗಿ ಕಡೆಯಿಂದ ತನ್ನ ಸೈಡಿನಲ್ಲಿ ಬರುತ್ತಿದ್ದ ಟಾಟಾ ಏಸ್ ವಾಹನ ನಂ ಕೆಎ-34/ಎ-6440 ನೆದ್ದಕ್ಕೆ ಎದರುಗಡೆಯಿಂದ ಟಕ್ಕರ ಕೊಟ್ಟು ಅಪಘಾತಪಡಿಸಿದ್ದರಿಂದ ಎರಡು ವಾಹನಗಳ ಮುಂದಿನ ಭಾಗ ಸಂಪೂರ್ಣ ಜಕಂಗೊಂಡು ಟಾಟಾ ಏಸ್ ವಾಹನದಲ್ಲಿ ಕುಳಿತಿದ್ದ ವಾಹನ ಚಾಲಕ 1) ಯಂಕನಗೌಡ ತಂದೆ ಬಸನಗೌಡ  ಸಾ. ಟಿ. ರಾಂಪೂರ 2) ತಿಪ್ಪಣ್ಣ ತಂದೆ ಅಳ್ಳಪ್ಪ ನಾಯಕರ ಟಿ. ರಾಂಪೂರ 3) ಫಕೀರಪ್ಪ ತಂದೆ ಮಾರೆಪ್ಪ ಸಾ. ಕರ್ಜಿಗನೂರ 4) ಕನಗಿರಿ ತಂದೆ ಶಿವಮೂರ್ತಿ 5) ಗುಂಡಪ್ಪ ತಂದೆ ಶಿವನಪ್ಪ ಮತ್ತು ಕಾರ್ ಚಾಲಕ ಶ್ರೀನಿವಾಸ ಶೆಟ್ಟಿ ಮತ್ತು ಚಂದ್ರಶೇಖರ ಅಂಗಡಿ ಇವರಿಗೆ ಗಂಭೀರ ಮತ್ತು ಸಾಧಾ ಸ್ವರೂಪದ ಗಾಯಗಳಾಗಿರುತ್ತದೆ ಈ ಘಟನೆಯು ದಿನಾಂಕ:-28-01-2016 ರಂದು ರಾತ್ರಿ 11-40 ರಿಂದ 11-55 ಗಂಟೆಯ ಅವಧಿಯಲ್ಲಿ ಸಂಭವಿಸಿರುತ್ತದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ತಿಪ್ಪಣ್ಣ ತಂದೆ ಅಳ್ಳಪ್ಪ ನಾಯಕರ ಟಿ. ರಾಂಪೂರ ಈತನು ಮೃತಪಟ್ಟಿದ್ದು ಮತ್ತು ಪಕೀರಪ್ಪ ತಂದಿ ಮಾರೆಪ್ಪ ಈತನು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಕುರಿತು ಕಳುಹಿಸಿಕೊಡುತ್ತಿದ್ದಂತೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಈ ಘಟನೆಗೆ ಕಾರಣನಾದ ಕಾರ್ ನಂ  ಚಾಲಕ ಕೆ.ಎ-36 ಎನ್-1611 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 107 ಸಿ.ಆರ್.ಪಿ.ಸಿ.
ಚುನಾವಣಾ ಆಯೋಗ ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ಗ್ರಾಮಗಳಲ್ಲಿ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತ್ತು ತಾಲೂಕಾ ಮತ್ತು ಜಿಲ್ಲಾ ಪಂಚಾಯತ ಚುನಾವಣೆಗೆ ಸಾರ್ವಜನಿಕರಲ್ಲಿ ಮತಯಾಚಿಸುತ್ತಿದ್ದು, ಅಲ್ಲದೆ ಗ್ರಾಮಗಳ ಓಣಿಗಳಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ಸದರ  ಚುನಾವಣೆಯ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಕೊಪ್ಪಳ ಗ್ರಾಮೀಣ ಠಾಣಾ ಸರಹದ್ದಿ ಎಂ.ಓಬಿ ಆಸಾಮಿಯಾದ ನಾಗರಾಜ ತಂದೆ ಗಿರಿಯಪ್ಪ ಕವಲೂರ. ವಯಾ: 25 ವರ್ಷ, : ಉಪ್ಪಾರ, . ಕೂಲಿಕೆಲಸ ಸಾ. ಗಿಣಿಗೇರಿ. ಇವನು ತಮ್ಮ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಗಳ ಓಣಿಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಕಂಡುಬಂದಿದ್ದರಿಂದ ಅವರನ ಚಟುವಟಿಕೆಯ ನಿಯಂತ್ರಣಕ್ಕಾಗಿ ಸದರಿಯವನ ಮೇಲೆ ಮುಂಜಾಗ್ರತಾ ಕ್ರಮ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 107 ಸಿ.ಆರ್.ಪಿ.ಸಿ.
ಚುನಾವಣಾ ಆಯೋಗ ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು ಈಗ ಚುನಾವಣಾ ನೀತಿ ಸಂಹಿತೆಯು ಜಿಲ್ಲೆಯಲ್ಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈಗಾಗಲೇ ಗ್ರಾಮಗಳಲ್ಲಿ ಸ್ಥಳಿಯ ಮುಖಂಡರುಗಳು ತಮ್ಮ ತಮ್ಮ ಬೆಂಬಲಿಗರೊಂದಿಗೆ ಮತ್ತು ತಾಲೂಕಾ ಮತ್ತು ಜಿಲ್ಲಾ ಪಂಚಾಯತ ಚುನಾವಣೆಗೆ ಸಾರ್ವಜನಿಕರಲ್ಲಿ ಮತಯಾಚಿಸುತ್ತಿದ್ದು, ಅಲ್ಲದೆ ಗ್ರಾಮಗಳ ಓಣಿಗಳಲ್ಲಿ ಮತಯಾಚನೆಯ ಕಾರ್ಯಕ್ರಮ ಮಾಡುವದು ಸಾಮಾನ್ಯವಾಗಿದ್ದು ಇದರಿಂದಾಗಿ ಇಂತಹ ಸಂದರ್ಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖ್ಯಗಣ್ಯರು, ಮುಖಂಡರು ಸದರ  ಚುನಾವಣೆಯ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತ ಕೇಳುವುದಕ್ಕೆ ಆಗಮಿಸಲಿದ್ದು ಇಂತಹ ಸಂದರ್ಭದಲ್ಲಿ ಕೊಪ್ಪಳ ಗ್ರಾಮೀಣ ಠಾಣಾ ಸರಹದ್ದಿ ಎಂ.ಓಬಿ ಆಸಾಮಿಯಾದ ರವಿ ತಂದೆ ಕನಕಪ್ಪ ಜೀರ್. ವಯಾ: 22 ವರ್ಷ, ಜಾ: ಹೂಗಾರ, ಉ. ಕೂಲಿಕೆಲಸ ಸಾ. ಗಿಣಿಗೇರಿ. ಇವನು ತಮ್ಮ ಚಟುವಟಿಕೆಯನ್ನು ಮುಂದುವರೆಸಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಗಳ ಓಣಿಗಳಲ್ಲಿ ಬೇರೆ ಬೇರೆ ಅಭ್ಯರ್ಥಿಗಳಲ್ಲಿ ವೈಮನಸ್ಸನ್ನು ಉಂಟು ಮಾಡಿ ಯಾವುದೇ ರೂಪದಲ್ಲಿ ಅಹಿತಕರ ಘಟನೆ ಜರುಗುವಂತೆ ಮಾಡಿ ಅದರಿಂದ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವಂತೆ ಮಾಡುವ ಸಂಭವ ಕಂಡುಬಂದಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 19/2016 ಕಲಂ: 107 ಸಿ.ಆರ್.ಪಿ.ಸಿ.
ಸದ್ಯ ಜಿಲ್ಲಾ ಪಂಚಾಯತ ಮತ್ತು ತಾಲುಕ ಪಂಚಾಯತ ಚುನಾವಣೆ ಇರುವುದರಿಂದ ಹನಮಪ್ಪ ತಂ/ ಉಡಚಪ್ಪ ಹುಲಿಹೈದರ ವಯಾ 50, ಜಾ. ನಾಯಕ ಉ. ಒಕ್ಕಲುತನ ಸಾ. ಹೊಸ ಶಿವಪೂರ ಇತನು ಮುನಿರಾಬಾದ ಠಾಣೆಗೆ ರೌಡಿಶೀಟುದಾರರು ಇದ್ದು, ಚುನಾವಣೆ ವೇಳೆಯಲ್ಲಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸದರಿ ಪ್ರತಿವಾದಿದಾರರಿಂದ ಮುಚ್ಚಳಿಕೆ ಪತ್ರ ಪಡೆದುಕೊಳ್ಳುವಂತೆ ಮುಂಜಾಗ್ರತ ಕ್ರಮ ಜರುಗಿಸಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 30/2016 ಕಲಂ: 279, 337 ಐ.ಪಿ.ಸಿ.
ದಿನಾಂಕ. 28-01-2016 ರಂದು 12-30 ಪಿ.ಎಂ.ಕ್ಕೆ ಫಿರ್ಯಾದಿದಾರ ಅಳಿಯ ಜಿ. ನರಸಿಂಹಲು ಈತನು ಮೋ.ಸೈ. ನಂ. ಕೆ.ಎ.35/ಇ.ಬಿ.5844 ಚಲಾಯಿಸಿಕೊಂಡು ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲೆ ಮೂನ ಲೈಟ ಡಾಬಾದ ಹತ್ತಿರ ಹೊಸಪೇಟೆ ಕಡೆಗೆ ಹೋಗುತ್ತಿರುವಾಗ ಕಾರ ನಂ. ಕೆ.ಎ.50/ಎನ್.8785 ನೇದ್ದರ ಚಾಲಕನು ಕಾರನ್ನು ಅತಿವೆಗವಾಗಿ ನಿಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಿ. ನರಸಿಂಗಲು ಇವರ ಮೋ.ಸೈ.ಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದರಿಂದ ಜಿ. ನರಸಿಂಹಲು ಇವರಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದಿರಿಂದ ಜಿ. ನರಸಿಂಹಲು ಇವರಿಗೆ ಗಾಯ ಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
6) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 08/2016 ಕಲಂ: 107 ಸಿ.ಆರ್.ಪಿ.ಸಿ.


ದಿನಾಂಕ: 28-01-2016 ರಂದು ಸಾಯಂಕಾಲ 6-00 ಗಂಟೆಗೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಪೆಟ್ರೋಲಿಂಗ್ ಕುರಿತು ಹನಕುಂಟಿ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮದಲ್ಲಿ ತಿರುಗಾಡಿ ಸೂಕ್ಷ್ಮವಾಗಿ ಜನರನ್ನು ಮತ್ತು ಪೊಲೀಸ್ ಭಾತ್ಮೀದಾರರನ್ನು ಭೇಟಿ ಮಾಡಿ ವಿಚಾರಿಸಲಾಗಿ ತಿಳಿದು ಬಂದಿದ್ದೇನೆಂದರೆ, ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ನಾದ ಪ್ರಭುಗೌಡ ತಂದಿ ನೀಲನಗೌಡ ಪಾಟೀಲ್ ವಯ: 42 ವರ್ಷ ಜಾ: ವಾಲ್ಮೀಕಿ ಉ: ಒಕ್ಕಲುತನ ಸಾ: ಹನಕುಂಟಿ ಇವರು ಗ್ರಾಮದಲ್ಲಿನ ಮುಗ್ದ ಜನರಿಗೆ ಸಣ್ಣ ಪುಟ್ಟ ಜಗಳಗಳಲ್ಲಿ ಪ್ರಚೋದನೆ ಮಾಡಿ ಸಣ್ಣ ಜಗಳವನ್ನೆ ದೊಡ್ಡದು ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಸ್ವಭಾವದವರಾಗಿರುತ್ತಾರೆ. ಸದ್ಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಚುನಾವಣೆ ಜರುಗಲಿದ್ದು ಚುನಾವಣೆಯ ವೇಳೆ ಸದರಿಯವರು ತಮ್ಮ ಪಕ್ಷದ ಜನರಿಗೆ ಓಟು ಹಾಕುವಂತೆ ಹೆದರಿಸಿ, ಬೆದರಿಸುವ ಸಂಭಂವ ಕಂಡು ಬಂದಿರುತ್ತದೆ. ಅಲ್ಲದೇ ಸದರಿಯವರು ಚುನಾವಣೆಯ ವೇಳೆ ಸಣ್ಣ ಪುಟ್ಟ ಜಗಳಗಳಿಗೆ ವ್ಯತಿರೀಕ್ತವಾಗಿ ನಡೆದುಕೊಂಡು ಜನರಿಗೆ ಪ್ರಚೋದನೆ ನೀಡಿ ಸಣ್ಣ ಜಗಳವನ್ನೆ ದೊಡ್ಡದು ಮಾಡಿ ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುವ ಸಂಭವ ಕಂಡು ಬಂದಿದ್ದು, ಅಲ್ಲದೇ ಸಾರ್ವಜನಿಕರಿಗೆ ಹೆದರಿಸಿ ಬೆದರಿಸಿ ಚುನಾವಣೆಯಲ್ಲಿ ಒಂದು ಪಕ್ಷದ ಪರ ನಿಂತು ಇನ್ನೂಂದು ಪಕ್ಷಕ್ಕೆ ವಿರೋಧವಾಗಿ ಜನರಲ್ಲಿ ತಪ್ಪು ಮಾಹಿತಿ ನೀಡಿ ಜನರಲ್ಲಿ ಪಕ್ಷಗಳ ನಡುವೆ ವೈಮನಸ್ಸು ಹುಟ್ಟಿಸಿ ಎರಡು ಪಕ್ಷಗಳ ನಡುವೆ ಜಗಳ ಹೆಚ್ಚಿಸಿ ಸಾರ್ವಜನಿಕರಲ್ಲಿ ಎರಡು ಗುಂಪುಗಳಾಗಿ ಮಾರ್ಪಡಿಸಿ ಗ್ರಾಮಗಳಲ್ಲಿ ಶಾಂತಿ ಕದಡಿ ಅಶಾಂತತೆ ನೆಲಸಿ, ಸಾರ್ವಜನಿಕರ ಆಸ್ತಿಪಾಸ್ತಿಯ ನಷ್ಠ ಮತ್ತು ಸಾರ್ವಜನಿಕರ ನೆಮ್ಮದಿಗೆ ಭಂಗ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಕಂಡು ಬಂದಿರುತ್ತದೆ. ಇವರಿಂದ ಮುಂದಾಗುವ ಅನಾಹುತ ಹಾಗೂ ಶಾಂತತೆಗೆ ಭಂಗ ಉಂಟಾಗದಂತೆ ಶಾಂತಿಯುತವಾಗಿ ಮತದಾನ ನಡೆಯುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, January 28, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 14/2016 ಕಲಂ: 279, 337, 338 ಐ.ಪಿ.ಸಿ:.
ದಿ:27-01-16 ರಂದು ರಾತ್ರಿ 10-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡವರು ಚಿಕಿತ್ಸೆಗಾಗಿ ಸೇರಿಕೆಯಾದ ಬಗ್ಗೆ ಎಮ್.ಎಲ್.ಸಿ ಯಾದಿ ಬಂದಿದ್ದು ಇರುತ್ತದೆ. ನಂತರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹನುಮಪ್ಪ  ಗುರಿಕಾರ ಸಾ: ಹಿರೇಮನ್ನಾಪೂರ ಇವರನ್ನು ವಿಚಾರಣೆ ಮಾಡಿ ಅವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ದೂರಿನ ಸಾರಾಂಶವೇನೆಂದರೇ, ದಿ:27-01-16 ರಂದು ರಾತ್ರಿ ಕಂದಕೂರ ಗ್ರಾಮದಿಂದಾ ನಾನು ಮತ್ತು ನಮ್ಮೂರಿನ ಶರಣಪ್ಪ ಅರ್ಜಿ, ವಿರೇಶ ಟೆಂಗುಂಟಿ, ಹುಸೇನಬಾಷಾ ಹಾಗೂ ಶರಣಪ್ಪ ಸೂಡಿ ಹೀಗೆ ಎಲ್ಲರು ಕೂಡಿ ನಮ್ಮೂರಿನ ಹನುಮಂತಪ್ಪ ಗಡ್ಡಿ ಇವರ ಆಟೋ ನಂ:ಕೆಎ-37/ಎ-2209 ನೇದ್ದರಲ್ಲಿ ಕುಳಿತುಕೊಂಡು ಕೊಪ್ಪಳದಲ್ಲಿ ಶ್ರೀ ಗವಿಮಠ ಜಾತ್ರೆ ಗೆ ಹೋಗಲು ಅಂತಾ ಬರುತ್ತಿದ್ದು, ಸದರಿ ನಮ್ಮ ಆಟೋ ಚಾಲಕನು ತನ್ನ ಆಟೋವನ್ನು ಕುಷ್ಟಗಿ-ಕೊಪ್ಪಳ ರಸ್ತೆಯ ಇರಕಲ್ ಗಡಾ ದಾಟಿ 01 ಕಿಮೀ ಕೊಪ್ಪಳ ಕಡೆಗೆ ದೂರದಲ್ಲಿ ಬರುತ್ತಿದ್ದಾಗ, ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಕಾರ್ ನಂ: ಕೆಎ-04/ಎಮ್.ಕ್ಯೂ-5766 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೇ ನಮ್ಮ ಆಟೋಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ನನಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದು, ಮತ್ತು ನಮ್ಮ ಆಟೋದಲ್ಲಿದ್ದ ಚಾಲಕ ಹನುಮಂತಪ್ಪ  ಅರ್ಜಿ, ಮತ್ತು ಹುಸೇನಬಾಷಾ ಇವರಿಗೆ ಭಾರಿ ಸ್ವರೂಪದ ರಕ್ತಗಾಯ ಹಾಗೂ ಮೂಕ ಪೆಟ್ಟಾಗಿರುತ್ತವೆ. ಕಾರಣ ಅಪಘಾತ ಮಾಡಿದ ಚಾಲಕ ದಾವಲಸಾಬ ಸಾ: ಕಂದಕೂರ. ಅಂತಾ ಗೊತ್ತಾಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2)  ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 03/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ: 27-01-2016 ರಂದು ಫಿಯರ್ಾದಿದಾರರಾದ ಬುಡನಸಾಬ ತಂದೆ ಶ್ಯಾಮೀದಸಾಬ ಹಣಗಿ. ವಯ: 55 ವರ್ಷ. ಜಾತಿ: ಮುಸ್ಲಿಂ. ಉ: ಬಸ್ ನಂ: ಕೆ.ಎ-35/ಎಫ್.106 ನೇದ್ದರ ಚಾಲಕ ಸಾ: ಮೇಣಧಾಳ ಹಾ.ವಸ್ತಿ: ಬಸ್ ನಿಲ್ದಾಣದ ಹತ್ತಿರ ಗಂಗಾವತಿ. ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ಈ ದಿವಸ ಬೆಳಿಗ್ಗೆ ತಾವು ಮತ್ತು ಕಂಡಕ್ಟರ್ ಮಮತಾ ಇಬ್ಬರು ಕೂಡಿ ಬಸ್ ನಂ: ಕೆ.ಎ-35/ಎಫ್-106 ನೇದ್ದನ್ನು ತೆಗೆದುಕೊಂಡು ಗಂಗಾವತಿಯಿಂದ ಬಿಜಾಪುರಕ್ಕೆ ಹೋಗಿ ವಾಪಾಸು ಗಂಗಾವತಿಗೆ ಕುಷ್ಟಗಿಯಿಂದ ತಾವರಗೇರಾಕ್ಕೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದಾಗ ನವಲಹಳ್ಳಿ ಸಂಜೆ 03-50 ಗಂಟೆಗೆ ಎದುರುಗಡೆಯಿಂದ ಒಂದು ಮೋಟಾರು ಸೈಕಲ್ ಹಿರೋ ಸಿಡಿ ಡಿಲಕ್ಸ್ ನಂ: ಕೆ.ಎ-26/ಯು-1795 ನೇದ್ದರ ಮೇಲೆ ಇಬ್ಬರು ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಎಡರಸ್ತೆಯಲ್ಲಿ ಹೊರಟ ಬಸ್ನ ಬಲಗಡೆ ಬಾಡಿಗೆ ಟಕ್ಕರು ಮಾಡಿ ಅಪಘಾತಪಡಿಸಿದ್ದರಿಂದ ಸದರಿ ಇಬ್ಬರು ಬಿದ್ದು ಮೋಟಾರು ಸೈಕಲ್ ನಡೆಸುತ್ತಿದ್ದ ಸುರೇಶ ಹಾಳಕೇರಿ ಇವರಿಗೆ ಮೂಗಿಗೆ, ಬಾಯಿಗೆ ಮತ್ತು ಬಲಗಾಲ ಪಾದದ ಹತ್ತಿರ ಸಾದಾ ಮತ್ತು ತೀವ್ರ ರಕ್ತಗಾಯಗಳಾಗಿದ್ದು ಮತ್ತು ಹಿಂದೆ ಕುಳಿತ ನಾಗರಾಜ ಹಾಳಕೇರಿ ಈತನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಅಂತಾ ವಗೈರೆ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ. 
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 18/2016 ಕಲಂ: 498(ಎ), 324, 504, 506 ಐ.ಪಿ.ಸಿ:.

ಫಿರ್ಯಾದಿದಾರಳು ದಿನಾಂಕ. 30-07-2015 ರಂದು ಹಳೆ ಶಿವಪುರ ಗ್ರಾಮದ ಮಂಜುನಾಥ ತಂ/ ಹನುಮಂತಪ್ಪ ಇವನಿಗೆ ಮದುವೆಯಾಗಿದ್ದು ಮಂಜುನಾಥನು ಸುಮಾರು 5-6 ವರ್ಷದಿಂದ ಫಿರ್ಯಾದಿ ಮೇಲೆ ಅನುಮಾನ ಪಡೆದು ಹೊಡೆಯುವದು ಬಡೆಯುವದು ಮಾಡಿ ಕಿರುಕುಳ ನೀಡುತ್ತಿದ್ದನು. ದಿನಾಂಕ. 26-01-2016 ರಂದು ಮದ್ಯಾನ್ಹ 12-30 ಗಂಟೆ ಸುಮಾರಿಗೆ ಫಿರ್ಯಾದಿಗೆ ಮಂಜುನಾಥನು ಮನೆಯಲ್ಲಿ ಬಾಗಿಲು ಮುಚ್ಚಿ ಕುಕ್ಕರಿನಿಂದ ಹೊಡೆದು ಕುಕ್ಕರನ ವಾಚರತೆಗೆದು ಕುತ್ತಿಗೆಗೆ ತಿರುಗಿಸಿ ನೆಲಕ್ಕೆ ಹೊಡೆದು ಎದೆ ಮೇಲೆ ಕುಳಿತು ಹೊಡೆದು ನಂತರ ಸೀಮೆ ಎಣ್ಣೆ ಮೈಮೇಲೆ ಹಾಕಿ ಕಡ್ಡಿ ಕೊರೆದಿದ್ದು ಫಿರ್ಯಾದಿದಾರಳು ಕೊರೆದ ಕಡ್ಡಿಯನ್ನು ಬಾಯಿಂದ ಊರಿ ಆರಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

Wednesday, January 27, 2016

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 12/2016 ಕಲಂ: 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿ:26-01-16 ರಂದು ಬೆಳಗಿನಜಾವ 05-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ದ್ಯಾಮವ್ವ ಕಟ್ಟೀಮನಿ ಸಾ: ಗಿಣಿಗೇರಿ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-01-16 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ಗ್ರಾಮದ ಶ್ರೀ ಸೇವಾಲಾಲ್ ಗುಡಿಯ ಹತ್ತಿರ ರಮೇಶ ಬಸಾಪೂರ ಹಾಗೂ ಇತರೆ 16 ಜನರು ಗುಂಪು ಕಟ್ಟಿಕೊಂಡು ಬಂದು  ದಿ:26-01-2016 ರಂದು ಝೇಂಡಾ ಹಾರಿಸುವ ಸಂಬಂಧ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ನಮಗೆ ಮೈ ಕೈ ಮುಟ್ಟಿ ಅವಮಾನ ಮಾಡಿ ಕೈಯಿಂದ ಹೊಡಿಬಡಿ ಮಾಡಿದ್ದು ಅಲ್ಲದೇ ಕಟ್ಟಿಗೆಯಿಂದ ನಮ್ಮ ತಂದೆಗೆ ಹೊಡೆದಿದ್ದು ಹೀಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 13/2016 ಕಲಂ: 143, 147, 148, 323, 324, 354, 504, 506 ಸಹಿತ 149 ಐ.ಪಿ.ಸಿ:.
ದಿ:26-01-16 ರಂದು ಬೆಳಗಿನಜಾವ 05-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಲಕ್ಷ್ಮಣ ತಂದೆ ಲೋಕಪ್ಪ ಬಸಾಪೂರ. ಸಾ: ಗಿಣಿಗೇರಿ ಇವರು ನೀಡಿದ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ:25-01-16 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ತಾಂಡಾದ ಶ್ರೀ ಸೇವಾಲಾಲ್ ಗುಡಿಯ ಹತ್ತಿರ ಪೀರಾನಾಯ್ಕ ಹಾಗೂ ಇತರೆ 19 ಜನರು ಗುಂಪು ಕಟ್ಟಿಕೊಂಡು ಬಂದು ದಿ:26-01-2016 ರಂದು ಝೇಂಡಾ ಹಾರಿಸುವ ಸಂಬಂಧ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು, ನಮ್ಮ ಹೆಣ್ಣುಮಕ್ಕಳಿಗೆ ಮೈ ಕೈ ಮುಟ್ಟಿ  ಎಳೆದಾಡಿ ಅವಮಾನ ಮಾಡಿ ಕೈಯಿಂದ ಹೊಡಿಬಡಿ ಮಾಡಿದ್ದು, ಮತ್ತು ಕಟ್ಟಿಗೆಯಿಂದ ನಮ್ಮ ದೊಡ್ಡಮ್ಮಳಾದ ಲಕ್ಷ್ಮವ್ವ ಳಿಗೆ ಹೊಡೆದಿದ್ದು ಹೀಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 26/2016 ಕಲಂ: 143, 147, 323, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 26-01-2016 ರಂದು 11-30 ಎ.ಎಂ.ಕ್ಕೆ  ತೌಫಿಕ್ ತಂದೆ ಖಾಜಾಹುಸೇನ ಶೇಖ್ ವಯಸ್ಸು 26 ವರ್ಷ  ಜಾ:ಮುಸ್ಲಿಂ ಉ: ಟಾಟಾ ಎಸಿಇ ವಾಹನದ ಚಾಲಕ ಸಾ: ಜಯನಗರ 01 ನೇ ಕ್ರಾಸ್ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 25-01-2016 ರಂದು ಫಿರ್ಯಾದಿದಾರರ ಅತ್ತೆ ಶ್ರೀಮತಿ ಮಂಜಲಿ ಬೇಗಂ ಇವರು ಫಿರ್ಯಾದಿದಾರನಿಗೆ ಮನೆಯಲ್ಲಿ ತೊಟ್ಟಿಲ ಕಾರ್ಯಕ್ರಮ ಇದೆ ಬರಬೇಕೆಂದು ಹೇಳಿದ್ದು ಅದರಂತೆ ಆರೋಪಿ ನಂ. 01 ಬಾಬಾ ಇತನು ಸಹ ಬರುವಂತೆ ಹೇಳಿದ್ದು ಫಿರ್ಯಾದಿದಾರನು ಹಾಗೂ ಅವರ ತಾಯಿ ಮತ್ತು ಸೋದರ ಅತ್ತೆ, ಸೋದರ ಅತ್ತೆಯ ಮಗಳು ಲಕ್ಷ್ಮೀಕ್ಯಾಂಪಿನಲ್ಲಿರುವ ಮನೆಯಲ್ಲಿ ತೊಟ್ಟಿಲ ಕಾರ್ಯಕ್ರಮಕ್ಕೆ ಹೋಗಿದ್ದು ರಾತ್ರಿ 11-30 ಗಂಟೆಯ ಸುಮಾರಿಗೆ ತೊಟ್ಟಿಲ ಕಾರ್ಯಕ್ರಮ ನಡೆಯುತ್ತಿರುವಾಗ ಆರೋಪಿತರಾದ ಬಾಬಾ, ಜಾಫರ, ಅಹ್ಮದ, ಮೋಹಿನ್ ಇವರು ಬಂದು ಫಿರ್ಯಾದಿಗೆ ಲೇ ಸೂಳೇಮಗನೆ ಹೆಂಗ ಬರ್ತಿಯಾ ನೀನು ಮನೆಗೆ, ನಿನ್ನ ಹೆಂಡತಿಯನ್ನು ಹೆಂಗೆ ಮನೆಗೆ ಕರೆದುಕೊಂಡು ಹೋಗುತ್ತೀಯಾ ನಿನಗೆ ಒಂದು ಗತಿ ಕಾಣಿಸಿ ಬಿಡುತ್ತೇವೆ ಅಂತಾ ಈ ಸೂಳೇಮಗನಿಗೆ ಜೀವಂತ ಉಳಿಸಬಾರದು ಅಂತಾ ಜೀವದ ಬೆದರಿಕೆ ಹಾಕುತ್ತಾ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ  ತೊಟ್ಟಿಲ ಕಾರ್ಯಕ್ರಮಕ್ಕೆ ಹೋಗಿದ್ದ ಫಿರ್ಯಾದಿಯ ತಾಯಿ ಹಾಗೂ ಸೋದರ ಅತ್ತೆ ಮತ್ತು ಅವರ ಮಗಳಿಗೆ ಆರೋಪಿತರಾದ ಮಂಜಲಿ ಬೇಗಂ ಹಾಗೂ ಆಸ್ಮಾ ಬೇಗಂ ಇವರು ಸೂಳೇ, ಬೋಸುಡಿ, ತುಡುಗಿ ಅಂತಾ ಬೈದಾಡಿ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಆರೋಪಿ ಬಾಬಾ ಇತನು ಸಹ ಅವಾಚ್ಯ ಶಬ್ದಗಳಿಂದ ಬೈದಾಡಿ ಫಿರ್ಯಾದಿದಾರರ ತಾಯಿಗೆ ಎದೆಗೆ ಕೈಯಿಂದ ಬಡಿದಿದ್ದು ಅಲ್ಲದೇ ಅಲ್ಲಿಗೆ ಬಂದ ಫಿರ್ಯಾದಿಯ ಅತ್ತೆಯ ಮಗನಿಗೂ ಸಹ ಹೊಡಿ-ಬಡಿ ಮಾಡಿದ್ದು ಅಲ್ಲದೇ ಇವರಲ್ಲಿ ಜಾಫರ್ ಇತನು ಬಲಗಡೆಯ ಕಣ್ಣಿಗೆ ಕೈ ಮುಷ್ಠಿ ಮಾಡಿ ಹೊಡೆದಿರುತ್ತಾನೆ. ಕಾರಣ ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ ಸಾರಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಸಂಚಾರಿ ಪೊಲೀಸ್ ಗಂಗಾವತಿ ಠಾಣೆ ಗುನ್ನೆ ನಂ. 4/2016 ಕಲಂ: 279, 304(ಎ) ಐ.ಪಿ.ಸಿ:.

ದಿನಾಂಕ 26-01-2016 ರಂದು ರಾತ್ರಿ 9-30 ಗಂಟೆಗೆ ಫಿರ್ಯಾದಿದಾರನ ತಂದೆಯಾದ ನಾಗೇಶಪ್ಪ ತಂದೆ ಪಂಪಣ್ಣ ಗಣಪ ವ:55 ಸಾ: ಹೀರೆಜಂತಕಲ್ ಗಂಗಾವತಿ ಇತನು ತನ್ನ ಮೋ/ಸೈ ನಂ ಕೆಎ37ಎಲ್ 7322 ನೇದ್ದನ್ನು ಚಾಲನೆ ಮಾಡಿಕೊಂಡು ಸಾಯಿಬಾಬ ಗುಡಿಕಡೆಯಿಂದ ವಿರುಪಾಪೂರ ಕಡೆಗೆ ಬರುತ್ತಿರುವಾಗ ಆರೋಪಿತನು ತನ್ನ ಆಟೋ ನಂ ಕೆಎ198715 ನೇದ್ದನ್ನು ವಿರುಪಾಪುರ ಕಡೆಯಿಂದ ಅತಿಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ರಾಂಗ್ ಸೈಡ್ ಬಲಕ್ಕೆ ಬಂದು ರಸ್ತೆಯ ಎಡಗಡೆ ಹೋರಟಿದ್ದ ಫಿರ್ಯಾಧಿದಾರನ ತಂದೆಯ ಮೋ/ಸೈಗೆ ಎದುರುಗಡೆಯಿಂದ ಟಕ್ಕರ್ ಕೊಟ್ಟಿದ್ದರಿಂದ ನಾಗೇಶಪ್ಪ ಇತನ ಎಡಕಾಪಳಕ್ಕೆ ಭಾರಿ ರಕ್ತಗಾಯವಾಗಿದ್ದು ಮತ್ತು ಎಡಗಾಲಿನ ಮೊಣಕಾಲಕೆಳಗೆ ಭಾರಿ ಒಳಪೆಟ್ಟಾಗಿ ಮತ್ತು ಗಾಯವಾಗಿದ್ದು ಮತ್ತು ರಕ್ತಶ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಕಾರಣ ಸದರಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

 
Will Smith Visitors
Since 01/02/2008