Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, December 31, 2017

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ: 375/2017 ಕಲಂ 379 ಐ.ಪಿ.ಸಿ. ಮತ್ತು 42, 43 ಕೆ.ಎಂ.ಎಂ.ಸಿ. ರೂಲ್ 1994 ಮತ್ತು 4,4(1), 4(1)(ಎ), ಎಂ.ಎಂ.ಡಿ.ಆರ್. ಕಾಯ್ದೆ 1957.
ದಿನಾಂಕ:- 30-12-2017 ರಂದು ಬೆಳಗಿನಜಾವ 03:00 ಗಂಟೆಗೆ ಶ್ರೀ ಪ್ರಕಾಶ ಮಾಳಿ ಪಿ.ಎಸ್.. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು ಮೂಲ ಪಂಚನಾಮೆಯೊಂದಿಗೆ ಮತ್ತು ಟ್ರ್ಯಾಕ್ಟರ/ಟ್ರಾಲಿಗಳು ಮತ್ತು ಆರೋಪಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಪ್ರಕಾರ ಇದೆ.  “ ಇಂದು ದಿನಾಂಕ: 30-12-2017 ರಂದು ಬೆಳಗಿನಜಾವ 00:30 ಗಂಟೆ ಸುಮಾರಿಗೆ ಮರಕುಂಬಿ ಗ್ರಾಮದ ಹಳ್ಳದಲ್ಲಿ ಯಾವುದೇ ಪರವಾನಿಗೆಯನ್ನು ಪಡೆಯದೆ ಕಳ್ಳತನದಿಂದ ಮರಳನ್ನು ಟ್ರ್ಯಾಕ್ಟರಗಳಲ್ಲಿ ತುಂಬುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಕೂಡಲೇ ನಾನು ಠಾಣೆಯಿಂದ ಶ್ರೀ ಮುದ್ದುರಂಗಸ್ವಾಮಿ ಪ್ರೊಬೇಷನರಿ ಪಿ.ಎಸ್.ಐ. ಪಿ.ಸಿ. 328, 363, ಎ.ಪಿ.ಸಿ- 15 ಇವರನ್ನು ಮತ್ತು ಪಂಚರನ್ನು ಕರೆದುಕೊಂಡು ಠಾಣೆಯ ಸರಕಾರಿ ಜೀಪ ನಂ. ಕೆ.ಎ-37/ ಜಿ-307 ನೇದ್ದರಲ್ಲಿ ಮರಕುಂಬಿ ಹಳ್ಳದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ನಿಂತು ನೋಡಲು ಎರಡು ಟ್ರ್ಯಾಕ್ಟರ ಹಾಗೂ ಟ್ರೇಲರುಗಳು ಇದ್ದು ಅವುಗಳಲ್ಲಿ ಮರಳು ಲೋಡ ಮಾಡಿದ್ದು, ಬೆಳಗಿನಜಾವ 01:00 ಗಂಟೆಗೆ ದಾಳಿ ಮಾಡಲಾಗಿ ಸ್ವಲ್ಪ ದೂರದಿಂದ ನಮ್ಮನ್ನು ಕಂಡು ಒಂದು ಟ್ರ್ಯಾಕ್ಟರ ಟ್ರಾಲಿಯಲ್ಲಿದ್ದ ಮರಳನ್ನು ಚಾಲಕನು ಅಲ್ಲಿಯೇ ಅನ್ ಲೋಡ್ ಮಾಡಿ ಅದರ ಚಾಲಕನು ವಾಹನ ಬಿಟ್ಟು ಓಡಿ ಹೋಗಿದ್ದು, ಇನ್ನೊಂದು ಟ್ರ್ಯಾಕ್ಟರ್/ ಟ್ರಾಲಿ ಚಾಲಕನನ್ನು ಹಿಡಿದಿದ್ದು, ವಿಚಾರಿಸಲು ಚಾಲಕನ ಹೆಸರು ಅನೀಫ್ ತಂದೆ ರಾಜಮಹ್ಮದ್ ಸೈಯ್ಯದ್, ವಯಸ್ಸು 25 ವರ್ಷ, ಜಾತಿ: ಮುಸ್ಲೀಂ ಉ: ಚಾಲಕ ಸಾ: ಗುರ್ರಮ್ಮ ಕ್ಯಾಂಪ್ ತಾ: ಗಂಗಾವತಿ ಅಂತಾ ತಿಳಿಸಿದನು.  ಅವನಿಗೆ  ಟ್ರ್ಯಾಕ್ಟರದಲ್ಲಿ ಮರಳು ತುಂಬಲು ಯಾವುದಾದರು ಪರವಾನಿಗೆ ಲೈಸನ್ಸ ಇದೆಯಾ ಅಂತಾ ವಿಚಾರಿಸಲು  ಯಾವುದೇ ಪರವಾನಿಗೆ ಇರುವದಿಲ್ಲ, ಅನಧಿಕೃತವಾಗಿ ಮರಳನ್ನು ತುಂಬಿ ಸಾಗಾಣಿಕೆ ಮಾಡುತ್ತೇವೆ ಅಂತಾ ಹೇಳಿದ್ದು ಸದರಿಯವನ ಟ್ರ್ಯಾಕ್ಟರ ಪರೀಶಿಲಿಸಲು ಜಾನ್ ಡೀರ್ ಕಂಪನಿ ಇದ್ದು ಅದಕ್ಕೆ ನಂಬರ್ ಇರುವದಿಲ್ಲ.  ಇದಕ್ಕೆ ಹೊಂದಿಕೊಂಡಿದ್ದ ಟ್ರೇಲರ್ ನೋಡಲು ಅದರ ನಂಬರ್ ಕೆ.ಎ-36/ ಟಿ.ಎ-7309 ಅಂತಾ ಇರುತ್ತದೆ. ಸದರ್ ಟ್ರೇಲರ್ ದಲ್ಲಿ  ಅಂ.ಕಿ 1000=00 ರೂ. ಬೆಲೆಬಾಳುವ ಮರಳು ತುಂಬಿದ್ದು ಇರುತ್ತದೆ. ಇನ್ನೊಂದು ಟ್ರ್ಯಾಕ್ಟರ್ ನೋಡಲು ಮಹೇಂದ್ರಾ ಕಂಪನಿ ಇದ್ದು, ಅದರ ನಂಬರ್ ನೋಡಲು ಕೆ.ಎ-37/ ಟಿ.ಎ-9732  ಅಂತಾ ಇದ್ದು, ಟ್ರಾಲಿಗೆ ನಂಬರ್ ಇರಲಿಲ್ಲಾ ಮತ್ತು ಅದರಲ್ಲಿನ ಮರಳು ಅನ್ ಲೋಡ್ ಮಾಡಿದ್ದು, ಖಾಲಿ ಇರುತ್ತದೆ. ಓಡಿ ಹೋದ ಚಾಲಕನ ಬಗ್ಗೆ ವಿಚಾರಿಸಲು ಅವನ ಹೆಸರು ತಿಳಿಯಲಿಲ್ಲಾ. ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಸರ್ಚ ಲೈಟ್ ಹಾಗೂ ಟ್ರಾಕ್ಟರ್ ಲೈಟಿನ ಬೆಳಕಿನಲ್ಲಿ ಬೆಳಗಿನಜಾವ 01:00 ರಿಂದ 02:00 ಗಂಟೆಯವರೆಗೆ  ಸ್ಥಳದಲ್ಲಿಯೇ ಪಂಚನಾಮೆಯನ್ನು ನಿರ್ವಹಿಸಿ ಎರಡೂ ಟ್ರ್ಯಾಕ್ಟರ್/ಟ್ರಾಲಿಗಳನ್ನು ಮತ್ತು ಚಾಲಕ ಅನೀಫನನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಚಾಲಕರು ಸರಕಾರಿ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆಯನ್ನು ಪಡೆದುಕೊಳ್ಳದೇ, ಯಾವುದೇ ದಾಖಲೆಗಳು ಇಲ್ಲದೇ ಅನಧಿಕೃತವಾಗಿ ಮತ್ತು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಟ್ರಾಕ್ಟರ್/ಟ್ರಾಲಿಯಲ್ಲಿ ಮರಳು ತುಂಬುತ್ತಿದ್ದವರ ಮೇಲೆ ಕಾನೂನು ಕ್ರಮ ಜರುಗಿಸಲು ವರದಿಯನ್ನು ಸಲ್ಲಿಸಿರುತ್ತೇನೆ. ” ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮಿಣ ಪೊಲೀಸ್ ಠಾಣೆ  ಗುನ್ನೆ ನಂ: 376/2017 ಕಲಂ: 279, 304(ಎ) ಐ.ಪಿ.ಸಿ.
ದಿನಾಂಕ:- 30-12-2017 ರಂದು ಸಂಜೆ 5:00 ಗಂಟೆಗೆ ಫಿರ್ಯಾದಿದಾರರಾದ ಯಮನೂರ ತಂದೆ ಇಟಗಿ ಪಂಪಣ್ಣ, ವಯಸ್ಸು 24 ವರ್ಷ, ಜಾತಿ: ಅಂಬಿಗರು ಉ: ಕೂಲಿ ಕೆಲಸ ಸಾ: ಕೃಷ್ಣದೇವರಾಯ ನಗರ. ತಾ: ಗಂಗಾವತಿ   ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ ನಿನ್ನೆ ದಿನಾಂಕ:-  29-12-2017 ರಂದು ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು, ಮಹಾಂತೇಶ @ ಹನುಮಂತ ತಂದೆ ನರಸಪ್ಪ, ವಯಸ್ಸು 35 ವರ್ಷ, ಜಾತಿ: ಕಬ್ಬೇರ ಸಾ: ಕೃಷ್ಣ ದೇವರಾಯ ನಗರ, ಆನಂದ ತಂದೆ ವಿರುಪಣ್ಣ, ಬಸವ ಕಬ್ಬೇರ, ವೀರೇಶ ತಂದೆ ವಿರುಪಣ್ಣ ಕಬ್ಬೇರ ಇವರುಗಳು ಕೂಡಿಕೊಂಡು ಶ್ರೀರಾಮನಗರ ಸೀಮಾದಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಗದ್ದೆಯಲ್ಲಿ ಕಟಾವು ಮಾಡಿ ರಾಶಿ ಮಾಡಿದ್ದ ಭತ್ತವನ್ನು ಚೀಲದಲ್ಲಿ ತುಂಬಿ ಟ್ರ್ಯಾಕ್ಟರ್/ಟ್ರಾಲಿಯಲ್ಲಿ ಲೋಡ್ ಮಾಡುವ ಕೂಲಿ ಕೆಲಸಕ್ಕೆ ಹೋಗಿದ್ದೆವು. ಆ ಪ್ರಕಾರ ಸ್ವರಾಜ ಕಂಪನಿಯ ಟ್ರ್ಯಾಕ್ಟರ್ ನಂಬರ್: ಕೆ.ಎ-37/ ಟಿ.ಎ-7236, ಟ್ರಾಲಿ ನಂಬರ್: ಕೆ.ಎ-37/ಟಿ.ಎ-9325 ನೇದ್ದರಲ್ಲಿ ಲೋಡ್ ಮಾಡಿದೆವು. ನಂತರ ಚಾಲಕನು ಶ್ರೀರಾಮನಗರದಲ್ಲಿ ವೇ ಬ್ರಿಡ್ಜ್ ನಲ್ಲಿ ತೂಕ ಮಾಡಿಸಿ ವಾಪಸ್ ಅಯೋಧ್ಯ ಕಡೆಗೆ ಬರುತ್ತಿದ್ದನು.  ಸಂಜೆ 4:30 ಗಂಟೆಯ ಸುಮಾರಿಗೆ ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯ ಶ್ರೀರಾಮನಗರ ಸೀಮಾದಲ್ಲಿ ನಾವು ಭತ್ತವನ್ನು ಲೋಡ್ ಮಾಡಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ವಾಪಸ್ ಊರಿಗೆ ಹೋಗಲು ನಿಂತುಕೊಂಡಾಗ ಚಾಲಕ ಕೃಷ್ಣ ಈತನು ಟ್ರ್ಯಾಕ್ಟರ/ಟ್ರಾಲಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ನಮ್ಮನ್ನು ಕಂಡು ನಮ್ಮ ಹತ್ತಿರ ಬಂದು ನಿಲ್ಲಿಸಲು ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಟ್ರಾಲಿಯು ಮುಂದೆ ನಿಂತಿದ್ದ ಮಹಾಂತೇಶ @ ಹನುಮಂತ ಈತನಿಗೆ ಬಡಿದು ಟ್ರಾಲಿಯು ಸ್ವಲ್ಪ ಓಳು ಮಗ್ಗಲಾಗಿ ಬಿದ್ದಿದ್ದು, ಇದರಿಂದ ಟ್ರಾಲಿಯಲ್ಲಿದ್ದ ಭತ್ತದ ಚೀಲಗಳು ಬಿದ್ದಿದ್ದು, ಇದರಿಂದ ಮಹಾಂತೇಶ @ ಹನುಮಂತನ ಮೇಲೆ ಭತ್ತದ ಚೀಲಗಳು ಬಿದ್ದು   ಭಾರೀ ಒಳಪೆಟ್ಟು ಮತ್ತು ತೆರೆಚಿದ ಗಾಯಗಳಾಗಿದ್ದು, ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ನಂತರ ಮಹಾಂತೇಶ @ ಹನುಮಂತ ಈತನನ್ನು ನಾನು ಯಾವುದೋ ಒಂದು ಆಟೋದಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಕರೊಂದಿಗೆ ಕೂಡಿ ವಿಮ್ಸ್ ಬಳ್ಳಾರಿಯಲ್ಲಿ ದಾಖಲು ಮಾಡಿ ನಾನು ಇಂದು ವಾಪಸ್ ಬಂದಿದ್ದು, ಆದರೆ ಆತನು ಚಿಕಿತ್ಸೆ ಪಡೆಯುವಾಗ ಗುಣಮುಖನಾಗದೆ ಇಂದು ದಿನಾಂಕ:- 30-12-2017 ರಂದು 3:40 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಆತನ ಹೆಂಡತಿ ಉಮಾದೇವಿ ಇವರು ಫೋನ್ ಮಾಡಿ ತಿಳಿಸಿದರು.  ಕಾರಣ ನಾನು ಈಗ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಮಾನ್ಯರು ಈ ಅಪಘಾತ ಮಾಡಿದ ಟ್ರ್ಯಾಕ್ಟರ ಚಾಲಕ ಕೃಷ್ಣ ಇವನ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ.”  ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ ಪೊಲೀಸ್ ಠಾಣೆ  ಗುನ್ನೆ ನಂ: 179/2017 ಕಲಂ:419,420,465,468, ಸಹಿತ 149 ಐ.ಪಿ.ಸಿ.
ದಿನಾಂಕ:30-12-2017 ರಂದು ಸಾಯಂಕಾಲ 7-30 ಗಂಟೆಗೆ ನಮ್ಮ ಠಾಣೆಯ ಕೋರ್ಟ ವಿರೇಶ ಪಿ.ಸಿ.-42 ರವರು ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ:29/2017 ನೇದ್ದನ್ನು ತಂದು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯನ್ನು ಪಡೆದುಕೊಂಡು ಪರಿಶೀಲನೆ ಮಾಡಿ ನೋಡಲು, ಅದರ ಸಾರಾಂಶವೆನೆಂದರೆ, ಫಿರ್ಯಾದಿದಾರಳಿಗೆ ಸಂಬಂಧಿಸಿದ ಹುಲಿಗೆಡ್ಡ ಗ್ರಾಮದ ಸರ್ವೇ ನಂ:94 ವಿಸ್ತೀರ್ಣ 17 ಎಕರೆ 22 ಗುಂಟೆ ಜಮೀನಿನ ಪೈಕಿ 3 ಎಕರೆ ವಿಸ್ತಿರ್ಣಿದ ಜಮಿನನ್ನು ಮೇಲ್ಕಂಡ  ಎಲ್ಲಾ ಆರೋಪಿತರು ಏಕ್ಕೋದ್ದೇಶದಿಂದ ಕೂಡಿಕೊಂಡು ದಿ;07-07-2017 ರಂದು ಖೋಟ್ಟಿ ಖರೀದಿ ವಚನ ಪತ್ರವನ್ನು ಬರೆಯಿಸಿ, ದಿನಾಂಕ:11-07-2017 ರಂದು  ಸಬ್ ರಿಜಿಸ್ಟರ ಯಲಬುರ್ಗಾದಲ್ಲಿ ಖರೀದಿ ಪತ್ರ ಮಾಡಿಸಿರುತ್ತಾರೆ. ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 179/2017 ಕಲಂ:419,420,465,468, ಸಹಿತ 149 ಐ.ಪಿ.ಸಿ. ಅಡಿಯಲ್ಲಿ  [ಮಾನ್ಯ ನ್ಯಾಯಾಲಯದ ಉಲ್ಲೇಖಿತ ] ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕುಷ್ಟಗಿ ಪೊಲೀಸ್ ಠಾಣೆ  ಗುನ್ನೆ ನಂ: 340/2017 ಕಲಂ 341,323,504, 506, R/W 149 IPC & 3(1)(10)SC/ST ACT 1989.
ದಿನಾಂಕ:30-12-2017 ರಂದು ಮದ್ಯಾಹ್ನ 04-15 ಗಂಟೆಗೆ ಪಿರ್ಯಾದಿದಾರರಾದ ಗಣೇಶ ತಂದೆ ಮುದಕಪ್ಪ ದನ್ನೂರ ವಯಾ 42 ವರ್ಷ ಜಾ: ಹಿಂದೂ ಮಾದರ ಉ: ಕೂಲಿಕೆಲಸ ಸಾ: ಕ್ಯಾದಗುಪ್ಪಾ ತಾ: ಕುಷ್ಟಗಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಪಿರ್ಯಾದಿಯ ಸಾರಾಂಶವೆನೆಂದರೆ ಪಿರ್ಯಾದಿದಾರರು ಇಂದು ದಿನಾಂಕ:30-12-2017 ರಂದು ಮುಂಜಾನೆ 08-00 ಗಂಟೆಯ ಸುಮಾರಿಗೆ ನಮ್ಮ ಗ್ರಾಮದ ಹನುಮಗೌಡ ತಂದೆ ಕರಕನಗೌಡ ಗೌಡ್ರ ಈತನು ಪಿರ್ಯಾದಿಗೆ ಪೋನ ಮಾಡಿ ಬಸವ ವಸತಿ ಯೋಜನೆಯ ಮನೆ ಫಲಾನುಭವಿ ಆಯ್ಕೆಯಾದ ಬಗ್ಗೆ ನಿನ್ನ ಜೊತೆ ಮಾತಾನಾಡುವದಿದೆ ಬಸ್ ಸ್ಟ್ಯಾಂಡ ಹತ್ತಿರ ನೀನು ಬಾ ಅಂತಾ ಹೇಳಿದನು. ಆಗ ಪಿರ್ಯಾದಿಯ ಸಂಗಡ ತಮ್ಮ ಅಳಿಯನಾದ ಹನುಮಪ್ಪ ಶಿವನಗುತ್ತಿ ಇಬ್ಬರೂ ಕೂಡಿ ನಮ್ಮೂರ ಬಸ್ ಸ್ಟ್ಯಾಂಡ ಹತ್ತಿರ 08-15 ಗಂಟೆಯ ಸುಮಾರಿಗೆ ಬಂದಿದ್ದು . ಆಗ ಹನುಮಗೌಡ ಗೌಡ್ರ ಈತನು ನನಗೆ ಬಸವ ವಸತಿ ಯೋಜನೆಯ ಮನೆಗಳನ್ನು ನಮ್ಮ ಶಾಸಕರು ಹಾಕಿದ ಮನೆಗಳನ್ನು ನೀವು ಏಕೇ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ ಅಂತಾ ಕೇಳಿದೇನು. ಆಗ ನಾನು ಆಯ್ಕೆ ಮಾಡಿಲ್ಲಾ ಗ್ರಾಮ ಪಂಚಾಯತ ಗ್ರಾಮ ಸಭೆಯಲ್ಲಿ ಆಯ್ಕೆ ಆಗಿದೆ ಇದಕ್ಕೂ ನನಗೂ ಸಂಬಂದವಿಲ್ಲಾ ಅಂತಾ ಹೇಳಿದಾಗ ಸದರಿ ಬಸವ ವಸತಿ ಯೋಜನೆಯ ಮನೆಗಳ ವಿಚಾರವಾಗಿ ಹನುಮಗೌಡನು ಒಮ್ಮಿಂದೊಮ್ಮಲೇ ಸಿಟ್ಟಿಗೆ ಬಂದವನೇ ಲೇ ಗಣೇಶ ಕೀಳು ಜಾತಿಯ ಸೂಳೇ ಮಗನೇ ಅಂತಾ ಜಾತಿ ನಿಂದನೇ ಮಾಡಿ ನಮ್ಮ ಮುಂದೆ ದೊಡ್ಡಸ್ಥಿಕೆಯಿಂದ ಧಿಮಾಕ ಹಡುಸುತ್ತೀರಾ ಅಂತಾ ಅಂದನು ಆಗ ನಾನು ನನ್ನ ಬಗ್ಗೆ ಸುಮ್ಮ ಸುಮ್ಮನೇ ತಪ್ಪು ತಿಳಿದುಕೊಂಡು ಬಾಯಿಗೆ ಬಂದಾಗ ಮಾತಾಡಬೇಡ ಅನ್ನುತ್ತಿದ್ದಾಗ ಅಷ್ಟರಲ್ಲಿಯೇ ನಿಂಗಪ್ಪ ಕಂಠಿ, ಬಸವರಾಜ ವಾಲಿಕಾರ, ಬೀರಪ್ಪ ಚೋಪ್ರಿ, ವಿಜಯ ದೇಸಾಯಿ ಮತ್ತು ಮಹಾಂತೇಶ ಬುಳ್ಳಿ ಇವರೆಲ್ಲರೂ ಕೂಡಿಕೊಂಡು ಬಂದವರೇ ಆ ಮಾದಿಗ ಸೂಳೇ ಮಕ್ಕಳದು ಏನು ಕೇಳುತ್ತಿರಿ ಒದಿರಿ ಬಡಿರಿ ಅನ್ನುತ್ತಾ ಬಸವರಾಜನು ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡನು ಆಗ ನಿಂಗಪ್ಪನು ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದು ಕಪಾಳಕ್ಕೆ ಕೈಯಿಂದ ಹೊಡೆದು ಕಾಲಿನಿಂದ ಬೆನ್ನಿಗೆ ಒದ್ದನು. ಹನಮಗೌಡನು ತನ್ನ ಕೈಗಳಿಂದ ಬೆನ್ನಿಗೆ ಹೊಡೆದನು ಬೀರಪ್ಪನು ವಿಜಯ ಮತ್ತು ಮಹಾಂತೇಶರವರು ಸಹ ಕೂಡಿಕೊಂಡು ನನ್ನ ಮೈಕೈಗೆ ಹೊಡೆಯುವುದು ಬಡಿಯುವುದು ಮಾಡಿದನು ಆಗ ಬಿಡಿಸಲು ಬಂದ ನಮ್ಮ ಅಳಿಯ ಹನುಮಪ್ಪನಿಗೆ ನಿಂಗಪ್ಪ ಮತ್ತು ಹನುಮಗೌಡ ಇಬ್ಬರೂ ಲೇ ಭೋಸೂಡಿ  ಮಗ ಹನುಮ್ಯಾ ನೀನು ಬಿಡಿಸಾಕ ಬಂದಿಯಾ ನಿನ್ನದು ತಿಂಡಿ ಬಹಳ ಆಗೈತಿ ಅಂತಾ ಅಂದು ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡಿಬಡಿ ಮಾಡಿದರು. ಅದೇ ವೇಳೆಗೆ ನಮ್ಮೂರ ರುದ್ರಪ್ಪ ತಂದೆ ಹನುಮಪ್ಪ ದನ್ನೂರ, ನಾಗೇಶ ತಂದೆ ಭೀಮಪ್ಪ ಶಿವನಗುತ್ತಿ, ಶರಣಗೌಡ ತಂದೆ ಶಿವನಗೌಡ ಪಾಟೀಲ ಮತ್ತು ರಮೇಶ ತಂದೆ ಶರಣಪ್ಪ ಸಜ್ಜಲಗುಡ್ಡ ಇವರೆಲ್ಲರೂ ಬಂದು ಜಗಳ ಬಿಡಿಸಿಕೊಂಡರು. ನಂತರ ನಾನು ನನಗೆ ಅನ್ಯಾಯವಾಗಿದೆ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ ಕೊಡುತ್ತೇನೆ ಅಂತಾ ಅಂದೇನು. ಆಗ ಲೇ ಗಣೇಶ ಮತ್ತು ಹನುಮ್ಯಾ ನೀವು ಏನಾದಾರೂ ಪೊಲೀಸ್ ಠಾಣೆಗೆ ಹೋಗಿ ನಮ್ಮ ಮೇಲೆ ಕಂಪ್ಲೇಂಟ ಕೊಟ್ಟು ವಾಪಸ ಊರಿಗೆ ಬಂದರೇ ನಿಮ್ಮಿಬ್ಬರನ್ನು ತುಂಡು ತುಂಡಾಗಿ ಕಡಿದು ಕೊಲೆ ಮಾಡುತ್ತೇವೆ ಅಂತಾ ಜೀವದ ಹೆದರಿಕೆ ಹಾಕಿ ಹೋದರು. ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಗಂಗಾವತಿ ಗ್ರಾಮೀಣ ಠಾಣೆಯ ಗುನ್ನೆ ನಂಬರ್: 377/2017 ಕಲಂ 78(1)(ಎ)(ತ) & (2) ಕೆ.ಪಿ. ಆ್ಯಕ್ಟ್ ಅಡಿ.
ದಿ:- 30-12-2017  ರಂದು ಸಂಜೆ 7:00 ಗಂಟೆಗೆ ಶ್ರೀಮತಿ ಶಾರವ್ವ, ಮ.ಎ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಕನರ್ಾಟಕ ರಾಜ್ಯ ಪೊಲೀಸ್ ಪರವಾಗಿ ಸ್ವಂತ ಫಿರ್ಯಾದಿಯನ್ನು, ಪಂಚನಾಮೆ, ಆರೋಪಿ ಮತ್ತು ಮಾಲಿನೊಂದಿಗೆ ಹಾಜರ್ಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.  ಇಂದು ದಿ:- 30-12-2017 ರಂದು ಸಂಜೆ 4:00 ಗಂಟೆಗೆ ಠಾಣೆ ವ್ಯಾಪ್ತಿಯ ಜಂಗಮರ ಕಲ್ಗುಡಿ ಗ್ರಾಮದ ಕೊರ್ರಮ್ಮ ಗುಡಿಯ ಹತ್ತಿರ ಕೆಲವೊಂದು ಜನರು ಕೋಳಿ ಪಂದ್ಯವನ್ನು ಸೋಲು ಗೆಲುವಿನ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಕೋಳಿ ಪಂದ್ಯದ ಮೇಲೆ ಜೂಜು ನಡೆಯುವ ಬಗ್ಗೆ ಅವರಿಗೆ ತಿಳಿಸಿದ್ದು, ಪಂಚರು ಹಾಗೂ ಶ್ರೀ ಮುದ್ದುರಂಗಸ್ವಾಮಿ ಪ್ರೊಬೇಷನರಿ ಪಿ.ಎಸ್.ಐ. ಮತ್ತು ಪಿ.ಸಿ. 110, 229 ರವರು ಕೂಡಿಕೊಂಡು ವೈಯಕ್ತಿಕ ಮೋಟಾರ ಸೈಕಲ್ಗಳಲ್ಲಿ ಸಂಜೆ 4:15 ಗಂಟೆಗೆ ಠಾಣೆ ಬಿಟ್ಟು, ಜಂಗಮರ ಕಲ್ಗಡಿ ಗ್ರಾಮ ತಲುಪಿ ವಾಹನಗಳನ್ನು ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ಕೊರ್ರಮ್ಮನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ನಿಂತುಕೊಂಡಿದ್ದು, ಮಧ್ಯದಲ್ಲಿ ಎರಡು ಹುಂಜಗಳು ಇದ್ದು, ಜನರು ಒಂದು ಹುಂಜದ ಮೇಲೆ ನನ್ನದು 100 ರೂಪಾಯಿ, ಇನ್ನೊಂದು ಹುಂಜದ ಮೇಲೆ ನನ್ನದು 100 ರೂಪಾಯಿ ಅನ್ನುತ್ತಿದ್ದರು. ಆಗ ಸಂಜೆ 5:00 ಗಂಟೆಯಾಗಿದ್ದು, ತಕ್ಷಣ ನಾವು ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ ಇಬ್ಬರು ವ್ಯಕ್ತಿಗಳು ಮತ್ತು ಒಂದು ಹುಂಜ ಸಿಕ್ಕಿದ್ದು, ಉಳಿದವರು ಓಡಿ ಹೋಗಿದ್ದು, ಇನ್ನೊಂದು ಹುಂಜವನ್ನು ಓಡಿ ಹೋದವರು ಹಿಡಿದುಕೊಂಡು ಹೊರಟು ಹೋಗಿದ್ದು, ಸಿಕ್ಕ ಇಬ್ಬರನ್ನು ವಿಚಾರಿಸಲು ಅವರು ತಮ್ಮ ಹೆಸರು (1) ಶಿವನಾಗ ತಂದೆ ಕಲಿಕಮೂತರ್ಿ ತಮ್ಮಿನೀಡಿ, ವಯಸ್ಸು 31 ವರ್ಷ, ಜಾತಿ: ಕಮ್ಮಾ ಉ: ಲ್ಯಾಬ್ ಟೆಕ್ನಿಷಿಯನ್ ಸಾ: ಬಾಪಿರೆಡ್ಡಿ ಕ್ಯಾಂಪ್ (2) ರಾಜು ತಂದೆ ವೆಂಕಟೇಶ್ವರ ರಾವ್ ಪೆದ್ದಿರೆಡ್ಡಿ, ವಯಸ್ಸು 23 ವರ್ಷ, ಜಾತಿ: ಕಾಪು ಉ: ಕೂಲಿ ಕೆಲಸ ಸಾ: ಆಂಜನೇಯ ಮೂತರ್ಿ ಹತ್ತಿರ, ಜಂಗಮರ ಕಲ್ಗುಡಿ ಅಂತಾ ಹೇಳಿದ್ದು, ಅವರ ಹತ್ತಿರ ಒಂದು ಹುಂಜ ಇದ್ದು, ಅದು ಬಿಳಿ ಬಣ್ಣದ್ದು ಇತ್ತು. ಅವರ ಹತ್ತಿರ ಜೂಜಾಟದ ನಗದು ಹಣ ಒಟ್ಟು 9,000-00 ರೂಪಾಯಿ ದೊರೆತವು. ಈ ಬಗ್ಗೆ ಸಂಜೆ 5:00 ರಿಂದ 6:00 ಗಂಟೆಯವರೆಗೆ ಸ್ಥಳದಲ್ಲಿಯೇ ಪಂಚನಾಮೆಯನ್ನು ನಿರ್ವಹಿಸಲಾಯಿತು. ನಂತರ ಸಿಕ್ಕ ಇಬ್ಬರು ಆರೋಪಿತರು ಮತ್ತು ಹುಂಜದೊಂದಿಗೆ ಠಾಣೆಗೆ ಬಂದಿದ್ದು, ಆರೋಪಿತರು ಹುಂಜಗಳ ಮೇಲೆ ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿದ್ದು ಕಾರಣ ಅವರ ವಿರುದ್ಧ ಕಲಂ 78(1)(ಎ)(ತ) & (2) ಕೆ.ಪಿ. ಆ್ಯಕ್ಟ್ ಪ್ರಕಾರ ಕ್ರಮ ಜರುಗಿಸಲು ಈ ವರದಿಯನ್ನು ಸಲ್ಲಿಸಿದ್ದು ಇರುತ್ತದೆ. ಅಂತಾ ಸಾರಾಂಶ ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದು, ಕಾರಣ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ. 
6] ಕಾರಟಗಿ ಪೊಲೀಸ್ ಠಾಣೆಯ ಗುನ್ನೆ ನಂಬರ್: 291/2017 ಕಲಂ. 379 IPC & KMMC Role 3, 36 & 42 R/w 44 MMRD Act 1957 Role 4, 4(1), 4(a) R/w 21(4), 21.
ದಿನಾಂಕ 30-12-2017 ರಂದು ರಾತ್ರಿ 11-20 ಗಂಟೆಗೆ ಪಿ.ಎಸ್. ಕಾರಟಗಿ ರವರು ಠಾಣೆಗೆ ಹಾಜರಾಗಿ, ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ದೊಂದಿಗೆ ವರದಿ ಹಾಗೂ ಪಂಚನಾಮೆಯನ್ನು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 30-12-2017 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಸಿದ್ದಾಪೂರ ಬಸ್ ನಿಲ್ದಾಣದ ಸಮೀಪ ಕೊಟ್ನೆಕಲ್ ರೋಡಿನಲ್ಲಿ ಒಬ್ಬ ಟ್ರ್ಯಾಕ್ಟರ್ ಚಾಲಕನು ಒಂದು ನೀಲಿ ಬಣ್ಣದ Sonalika DI-35 ಟ್ರ್ಯಾಕ್ಟರ್ ಇಂಜಿನ್ ಮೇಲೆ ಇರುವ ನಂಬರ್ 3100FL73B617951F3  ನೆದ್ದರ ಟ್ರೇಲರ್ ದಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ್ ಅಂದಾಜು 1500/- ಬೆಲೆಬಾಳುವ ಮರಳನ್ನು  ಸರಕಾರದಿಂದ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಸರಕಾರಕ್ಕೆ ಯಾವುದೇ ರಾಜಧನ ಕಟ್ಟದೇ ಕಳ್ಳತನದಿಂದ ಸಾಗಿಸುತ್ತಿದ್ದಾಗ್ಗೆ ಹಿಡಿದುಕೊಳ್ಳುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕನು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ  ಟ್ರ್ಯಾಕ್ಟರ್ ರಸ್ತೆಯ ಮೇಲೆ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಸದ್ರಿ ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಸದ್ರಿ ಓಡಿ ಹೋದ ಟ್ರ್ಯಾಕ್ಟರ್ ಚಾಲಕ ಮತ್ತು ಟ್ರ್ಯಾಕ್ಟರ್ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯ  ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ

Tuesday, December 26, 2017

1] ಕುಕನೂರ  ಪೊಲೀಸ್ ಠಾಣೆ  ಗುನ್ನೆ ನಂ: 201/2017 ಕಲಂ. 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ:25-12-2017 ರಂದು ಆರೋಪಿ ನಂ. 01 ನೇದವನು ಹಿಟಾಚಿ ಆಯಿಲ್ ಪೈಪ್ ತರುವ ಸಲುವಾಗಿ ಮೋಟಾರ್ ಸೈಕಲ್ ನಂ. ಕೆಎ-37/ವಿ-4854 ನೇದ್ದರ ಹಿಂದುಗಡೆ ಸೀಟಿನಲ್ಲಿ ಪಿರ್ಯಾದಿದಾರನಿಗೆ ಕುಳಿಸಿಕೊಂಡು ಯಲಬುರ್ಗಾದಿಂದ ಕೊಪ್ಪಳ ಕಡೆಗೆ ಅತಿಜೋರು ಅಲಕ್ಷತನದಿಂದ ಚಲಾಯಿಸಿಕೊಂಡು ಹೋರಟಿದ್ದಾಗ ರಾತ್ರಿ 7-30 ಗಂಟೆ ಸುಮಾರು ರಾಜೂರು ದಾಟಿ ಕುಕನೂರು ಕಡೆಗೆ 01 ಕಿ.ಮೀ. ಅಂತರದಲ್ಲಿ ಆರೋಪಿ ನಂ. 02 ನೇದವನು ತಾನು ಚಲಾಯಿಸುತಿದ್ದ ನೊಂದಣಿ ಸಂಖ್ಯೆ ಇರದ ಟ್ರ್ಯಾಕ್ಟರನ್ನು ಕುಕನೂರು ಕಡೆಯಿಂದ ರಾಜೂರು ಕಡೆಗೆ ಅತಿಜೋರು & ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು, ಎರಡು ವಾಹನದ ಚಾಲಕರು ಪರಸ್ಪರ ಡಿಕ್ಕಿ ಹೊಡೆಸಿರುತ್ತಾರೆ. ಇದರಿಂದಾಗಿ ಪಿರ್ಯಾದಿಗೆ & ಆರೋಪಿ ನಂ. 01 ನೇದವನಿಗೆ ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಆರೋಪಿ ನಂ. 02 ನೇದವನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೇನು.
2] ಹನುಮಸಾಗರ ಪೊಲೀಸ್ ಠಾಣೆ  ಗುನ್ನೆ ನಂ: 178/2017. ಕಲಂ: 279, 337, 338 ಐ.ಪಿ.ಸಿ :.
ದಿನಾಂಕ: 24-12-2017 ರಂದು ಫಿರ್ಯಾದಿಯ ತಂದೆ ಹನುಮಂತಸಾ ತುಳಸಿಕಟ್ಟಿ ರವರು  ರಾತ್ರಿ 08-00 ಗಂಟೆಯ ಸುಮಾರಿಗೆ ಕೆಲಸದ ನಿಮಿತ್ತ ಸೇಬಿನಕಟ್ಟಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ತಮ್ಮ ಎಕ್ಸ್.ಎಲ್.ಸೂಪರ್ ಮೋಟಾರ್ ಸೈಕಲ್ ನಂ: ಕೆ.-37/ಡಬ್ಯ್ಲೂ-0001 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ಕೆಲಸ ಮುಗಸಿ ವಾಪಸ್ ಹನಮಸಾಗರಕ್ಕೆ ಬರುವಾಗ ಯಲ್ಲಪ್ಪ ಕೊಣೆರಿ ರವರ ಹೊಲದ ಹತ್ತಿರ ರಾತ್ರಿ 10-45 ಗಂಟೆಯ ಸುಮಾರು ನಮ್ಮ ಎಕ್ಸ್.ಎಲ್. ಸೂಪರ್ ಮೋಟಾರ್ ಸೈಕಲ್ ಕೆ.-37/ಡಬ್ಯ್ಲೂ-0001 ತೆಗೆದುಕೊಂಡು ರೋಡಿನ ಎಡಗಡೆ ಬರುವಾಗ ಹಿಂದಿನಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗ ಹಾಗೂ ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿಕೊಂಡು ಬಂದು ಪಿರ್ಯಾದಿ ತಂದೆಯ ಮೋಟಾರ್ ಸೈಕಲಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು, ಅಪಘತಪಡಿಸಿದ ಲಾರಿ ನಂ: ಕೆ.-29/9275 ಅಂತಾ ಇದ್ದು, ಚಾಲಕನ ಹೆಸರು ನೀಲಪ್ಪ ತಂದೆ ಮಲ್ಲಪ್ಪ ಇದರಾಳ ಸಾ: ಹೂಲಗೇರಿ ಅಂತಾ ಇದ್ದು. ನಂತರ 108 ಆಂಬ್ಯುಲೆನ್ಸಗೆ ಫೋನ್ ಮಾಡಿ ಆಂಬ್ಯುಲೆನ್ಸ ಕರೆಸಿಕೊಂಡು ತಮ್ಮ ತಂದೆಯನ್ನು ಉಪಚಾರ ಕುರಿತು ಇಲಕಲ್ ಮಹಾಂತೇಶ ಅಕ್ಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಪಡಿಸಿ ಇಂದು ತಡವಾಗಿ ಠಾಣೆಗೆ ಬಂದಿದ್ದು, ಕಾರಣ ಅಪಘಾತಪಡಿಸಿದ ಲಾರಿ ನಂ: ಕೆ.-29/9275 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ನೀಡಿದ್ದು ಅದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ  ಗುನ್ನೆ ನಂ: 188/2017. ಕಲಂ: 420 ಐ.ಪಿ.ಸಿ :.

ದಿನಾಂಕ: 25-12-2017 ರಂದು 08-30 ಪಿ.ಎಮ್. ಕ್ಕೆ ಫಿರ್ಯಾಧಿ ಮಹೆಬೂಬ್ ಜಿಲಾನ್ ಮೋಟರ್ ವಾಲೆ ಸಾ: ತೆಗ್ಗಿನಕೇರಾ ಓಣಿ ಕೊಪ್ಪಳ ರವರು ನೀಡಿದ ಪಿರ್ಯಾದಿ ಕೊಡುವುದೇನೆಂದರೆ, ನನಗೆ ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ ಶೇಖ್ ಇವರ ಪರಿಚಯವಿದ್ದು ಇವರು ಕೊಪ್ಪಳ ನಗರದ ಹಂಚರಾಜ ಬಾಗಸವಾರ ಇವರ ಕಾಂಪ್ಲೆಕ್ಸನಲ್ಲಿ ಒಂದು ಜ್ಯುವೇಲರ್ಸ ಶಾಪ್ ಇಟ್ಟುಕೊಂಡಿದ್ದು ಸದರಿ ಶಾಪ್ ನಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ಹೊಸದಾಗಿ ಮಾಡಿಕೊಡುವುದು ಮತ್ತು ರೀಪೇರಿ ಮಾಡಿಕೊಡುವುದು ಮಾಡುತ್ತಿದ್ದು ಮತ್ತು ಶಾಪ್ ನಲ್ಲಿ ರೋಲ್ಡಗೋಲ್ಡ ಹೆಣ್ಣು ಮಕ್ಕಳ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದು ಇರುತ್ತದೆ. ನಾನು ದಿನಾಂಕ 14-02-2017 ರಂದು ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ ಶೇಖ್ ಇವರ ಜುವೆಲರಿ ಶಾಪಗೆ ಹೋಗಿ ನನ್ನ ಹತ್ತಿರ ಇದ್ದ ಈ ಕಳಕಂಡ ಬಂಗಾರದ ಸಾಮಾನುಗಳನ್ನು ರೀಪೇರಿಗೆ ಮತ್ತು ಹೊಸದಾಗಿ ಮಾಡಲು ಕೊಟ್ಟಿದ್ದು ಇರುತ್ತದೆ. ನಾನು ಒಟ್ಟು 3 1/2 ತೊಲೆ ಬಂಗಾರ ಹಾಗೂ 40,000/- ರೂ. ಹಣ ಕೊಟ್ಟಿದ್ದು ಇರುತ್ತದೆ. ಅದರಂತೆ  ನಮ್ಮ ಸಂಬಂದಿಕರಾದ ಚಾಂದ್ ಪಾಶ ಇವರು ಒಟ್ಟು 9 ತೊಲೆ 01 ಗ್ರಾಮ್ ಬಂಗಾರದ ಸಮಾನುಗಳು ಮತ್ತು 67,000/- ರೂ. ಮುಂಗಡ ಹಣವನ್ನು ಕೊಟ್ಟಿದ್ದು ಇರುತ್ತದೆ. ಅದರಂತೆ ಮಹೆಬೂಬ ಹುಸೇನ್ ತಂದೆ ಅಬ್ದುಲ್ ಸಾಬ ಸಾ: ತೆಗ್ಗಿನಕೇರಾ ಕೊಪ್ಪಳ ಇವರು ಒಂದು ಬಂಗಾರದ ಉಂಗುರ 1/2 ತೊಲೆ ಮಾಡಿಕೊಡಲು 15,000=00 ರೂ ಗಳನ್ನು ಮತ್ತು ಅಬ್ದುಲ್ ರಹೆಮಾನ್ ಸಾ: ಹಟಗಾರಪೇಟೆ ಕೊಪ್ಪಳ ಇವರು ಮತ್ತು ನಾನು ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ ಶೇಖ್ ಇವರ ಹತ್ತಿರ ಹೋಗಿ ಜುಮಕಿ, ಓಲೆ, ಮತ್ತು ಮಾಟಿಲ್ ಸೇರಿ 1 ತೊಲೆ 7.1/2 ಗ್ರಾಂ ಬಂಗಾರದ ಸಾಮಾನುಗಳನ್ನು ಮಾಡಿ ಕೊಡಲು ಒಟ್ಟು 70,000=00 ರೂ ಗಳನ್ನು ಅಡ್ವಾನ್ಸ ಕೊಟ್ಟಿದ್ದು, ಮತ್ತು ಆರ್.ಖಾಜಾಪಾಷಾ ತಂದೆ ಮೌಲಾಸಾಬ ರೆಡ್ಡಿ ಸಾ: ತೆಗ್ಗಿನಕೇರಾ ಕೊಪ್ಪಳ ಇವರು 1/2 ತೊಲೆಯ ಬಂಗಾರದ ಉಂಗುರ ಮತ್ತು 1/2 ತೊಲೆಯ ಕಿವಿ ಓಲೆ ಮಾಡಿ ಕೊಡಲು 30,000=00 ರೂ ಗಳನ್ನು ಅಡ್ವಾನ್ಸ ಕೊಟ್ಟಿದ್ದು ಅಲ್ಲದೆ ರೀಪೇರಿ ಮಾಡಲು ಅಂತಾ ಒಂದು ಬಂಗಾರ ನೆಕ್ಲೇಸ್ ಅ.ತೂ.3.1/2 ತೊಲೆ ಅ.ಕಿ.90,000=00 ರೂ ಬೆಲೆ ಬಾಳುವುದನ್ನು ಕೊಟ್ಟಿದ್ದು ಇರುತ್ತದೆ.  ಕಾರಣ ಮೇಲ್ಕಂಡ ನಾನು ಮತ್ತು ನಮ್ಮ ಸಂಬಂಧಿಕರು ಸೇರಿ ಶಫಾತಾಜ್ ಜ್ಯುವೇಲರ್ಸ ಮಾಲೀಕನಾದ ರಹಮತ್ಉಲ್ಲಾ ಶೇಖ್ ಇವರ ಜುವೇಲರಿ ಅಂಗಡಿಗೆ ಹೋದಾಗ ರಹಮತ್ ಉಲ್ಲಾ ಶೇಖ್ ಇವರ ಮಾವನವರಾದ ಶಬ್ಬೀರಸಾಬ ಇವರು ಸಹ ನಾವು ಹೊಸದಾಗಿ ಬಂಗಾರದ ಸಾಮಾನುಗಳನ್ನು ಮಾಡಿಸಲು ಅಡ್ವಾನ್ಸ ಕೊಡುವಾಗ ಹಾಗೂ ರೀಪೇರಿಗೆ ಬಂಗಾರದ ಸಾಮಾನುಗಳನ್ನು ಕೊಡುವಾಗ ಅಂಗಡಿಯಲ್ಲಿ ಇದ್ದು ಇಬ್ಬರೂ ನನ್ನ ಹಾಗೂ ನಮ್ಮ ಸಂಬಂದಿಕರ ಹೊಸದಾಗಿ ಬಂಗಾರದ ಸಾಮಾನುಗಳನ್ನು ಮಾಡಲು ಅಡ್ವಾನ್ಸ ಹಣ ಮತ್ತು ರೀಪೇರಿಗೆ ಕೊಟ್ಟ ಬಂಗಾರದ ಸಾಮಾನುಗಳನ್ನು ನಮಗೆ ಹಣವನ್ನು ಕೊಡದೇ ಮತ್ತು ರೀಪೇರಿಗೆ ಕೊಟ್ಟ ಬಂಗಾರದ ಸಾಮಾನುಗಳನ್ನು ಕೊಡದೇ ಅಂಗಡಿ ಬಂದ್ ಮಾಡಿಕೊಂಡು ನನಗೆ ಮತ್ತು ನಮ್ಮ ಸಂಬಂದಿಕರಿಗೆ ಮೋಸ ಮಾಡಿ ಹೋಗಿದ್ದು ಇರುತ್ತದೆ, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ

 
Will Smith Visitors
Since 01/02/2008