Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 31, 2015

1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 211/2015 ಕಲಂ. 78(3) Karnataka Police Act:.
ದಿನಾಂಕ 30.10.2015 ರಂದು ಸಾಯಂಕಾಲ 7:00 ಗಂಟೆಗೆ ಕೊಪ್ಪಳ ನಗರದ ಪಾನಘಂಟಿ ಕಲ್ಯಾಣ ಮಂಟಪದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಇತನು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೇದುಕೊಡುತ್ತಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಕಿ ದಾಳಿ ಮಾಡಿ ಅವನಿಂದ ನಗದು ಹಣ 790=00 ರೂ , ಮಟಕಾ ನಂಬರ ಬರೇದ ಚೀಟಿ, ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದು ಇರುತ್ತದೆ. ಆರೋಪಿ ನಂ 02 ಇತನು ಮಟಕಾ ನಂಬರ ಪಟ್ಟಿಯನ್ನು ತೆಗೆದುಕೊಳ್ಳುತ್ಯಿದ್ದು ಇರುತ್ತದೆ.
2) ಯಲಬುರ್ಗಾ ಪೊಲೀಸ್ ಠಾಣಾ ಗುನ್ನೆ ನಂ. 109/2015  ಕಲಂ 363 ಐ.ಪಿ.ಸಿ:.

ಪಿರ್ಯಾದಿದಾರರ ಮೊಮ್ಮಗನಾದ ಕುಮಾರ ಹಡಪದ ವಯ- 13 ವರ್ಷ ಇತನು ದಿನಾಂಕ- 23-09-2015 ರಂದು ಯಲಬುರ್ಗಾ ಪೊಲೀಸ್ ಠಾಣೆಯಿಂದ ರಕ್ಷಣೆ ಮಾಡಿ ಕೊಪ್ಪಳ ಬಾಲಕರ ಬಾಲಮಂದಿರಕ್ಕೆ ಸೇರಿಕೆ ಮಾಡಿದ್ದು ನಂತರ ಅಲ್ಲಿಂದ ದಿನಾಂಕ- 17-10-2015 ರಂದು ಬಾಲಕರ ಬಾಲಮಂದಿರ ಕೊಪ್ಪಳದಿಂದ ತಪ್ಪಿಸಿಕೊಂಡು ಯಲಬುರ್ಗಾ ಪಟ್ಟಣದ ಶಿವಮೂರ್ತಪ್ಪ ಹಡಪದ ರವರಿಗೆ ಸಿಕ್ಕಿದ್ದು ನಂತರ ಅವರು ಮೂಲಕ ಪಿರ್ಯಾದಿದಾರರ ಮನೆಗೆ ಬಂದಿದ್ದು ನಂತರ ದಿನಾಂಕ- 18-10-2015 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಮನೆಯಲ್ಲಿ ಮಲಗಿಕೊಂಡಿದ್ದಾಗ ಪಿರ್ಯಾದಿರಾರರಿಗೆ ಹೇಳದೆ ಕೇಳದೆ ಪಿರ್ಯಾದಿದಾರರ ಮನೆಯಿಂದ ಕಾಣೆಯಾಗಿದ್ದು ಇರುತ್ತದೆ. ಅಲ್ಲಿಂದ ಇಲ್ಲಿಯವರೆಗೆ ಹುಡುಕಾಡಲಾಗಿ ಪತ್ತೆಯಾಗಿರುವದಿಲ್ಲ. ಕಾಣೆಯಾದ ಬಾಲಕನ ತಾಯಿ ತೀರಿಕೊಂಡಿದ್ದು ಮತ್ತು ತಂದೆಯು ಕೂಡ ಮಾನಸಿಕ ಅಸ್ವಸ್ಥನಿರುತ್ತಾನೆ.  ನನ್ನ ಮೊಮ್ಮಗ ಕುಮಾರ ಇತನು ಕಾಣೆಯಾಗಿದ್ದು ಕಾರಣ ಮಾನ್ಯರು ಕುಮಾರನನ್ನು ಪತ್ತೆ ಮಾಡಿಕೊಡಬೇಕು ಅಂತಾ ಮುಂತಾಗಿ ಪಿರ್ಯಾದಿ ಸಾರಾಂಶವಿರುತ್ತದೆ. ಕುಮಾರ ಇತನ ಚಹರೆಪಟ್ಟಿ ಈ ಕೆಳಗಿನಂತೆ ಇರುತ್ತದೆ. ಎತ್ತರ : 128 ಸೆಂಟಿ ಮೀಟರ, ತೂಕ 31 ಕೆ,ಜಿ, ಮೈಕಟ್ಟು: ದಪ್ಪನೆ ಮೈಕಟ್ಟು, ದುಂಡು ಮುಖ, ಮೈಬಣ್ಣ : ಗೋಧಿ ಮೈ ಬಣ್ಣ ಭಾಷೆ : ಕನ್ನಡ ಮಾತನಾಡುತ್ತಾನೆ ಮತ್ತು ಮಾನಸಿಕ ಅಸ್ವಸ್ಥನಾಗಿರುವ ಸ್ವಭಾವದ ಲಕ್ಷಣಗಳನ್ನು ಹೊಂದಿರುತ್ತಾನೆ. ಧರಿಸಿದ ಬಟ್ಟೆಗಳು : ನೀಲಿ ಆಪ್ ಪ್ಯಾಂಟ ಮತ್ತು ಹಳದಿ ಬಣ್ಣದ ಅಂಗಿ (ಶರ್ಟ) ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Friday, October 30, 2015

1) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ.102/2015 ಕಲಂ.87 Karnataka Police Act.
ಶ್ರೀ ಶಂಕರಗೌಡ ಎ.ಎಸ್.ಐ. ಅಳವಂಡಿ ರವರು, ಸಿಬ್ಬಂದಿಯವರು ಮತ್ತು ಪಂಚರು ಕೂಡಿಕೊಂಡು ಇಂದು ದಿನಾಂಕ: 29-10-2015 ರಂದು ಸಾಯಂಕಾಲ 5-00 ಗಂಟೆಗೆ ಠಾಣಾ ವ್ಯಾಪ್ತಿಯಲ್ಲಿ ಅಳವಂಡಿ ಗ್ರಾಮದ ಹೂರವಲಯದಲ್ಲಿರುವ ಶ್ರೀ. ಮಳಿಮಲ್ಲಪ್ಪನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 7 ಜನ ಆರೋಪಿತರು ಸಿಕ್ಕಿದ್ದು, ಆರೋಪಿತರಿಂದ ನಗದು ಹಣ ರೂ. 1,250=00 ಗಳು, 52 ಇಸ್ಪೇಟ್ ಎಲೆಗಳು, ಹಾಗೂ ಒಂದು ಗೋಣಿ ಚೀಲವನ್ನು ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಸಂಜೆ 6-30 ಗಂಟೆಗೆ ಬಂದು ಒಂದು ವರದಿಯನ್ನು ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು, ಸದರ ವರದಿಯ ಸಾರಾಂಶ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 222/2015 ಕಲಂ.279, 304(ಎ) ಐ.ಪಿ.ಸಿ:
ದಿನಾಂಕ 29-10-2015 ರಂದು ಪಿರ್ಯಾದುದಾರರು ಹಿಟ್ನಾಳ ಟೋಲ್ ಗೇಟ ದಾಟಿ ಹೋಗುತ್ತಿರುವಾಗ 04-00 ಪಿ.ಎಂ.ಸುಮಾರಿಗೆ ಆರೋಪಿತನು ತನ್ನ ಮೋ.ಸೈನ್ನು ಎನ್.ಹೆಚ್.13 ಕುಷ್ಟಗಿ-ಹೊಸಪೇಟೆ ಒನ್ ವೇ ರಸ್ತೆಯ ಮೇಲೆ ಅತೀ ವೇಗ ಅಲಕ್ಷತನದಿಂದ ತನ್ನ ಮೋ.ಸೈ,ನಂ.ಕೆ.ಎ29/ಇ.ಎ.2764 ನೇದ್ದನ್ನು ಚಲಾಯಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಪಟ್ಟಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಮೋ.ಸೈ.ಸಮೇತ ಕೆಳಗೆ ಬಿದ್ದಿದ್ದರಿಂದ ತಲೆಗೆ ರಕ್ತಗಾಯ,ಕೈಮತ್ತು ಕಾಲುಗಳಿಗೆ ಗಾಯ ಒಳಪೆಟ್ಟಾಗಿದ್ದು ನಂತರ ಜಿ.ಎಂ.ಆರ್.ಅಂಬುಲೇನ್ಸನಲ್ಲಿ ಚಿಕಿತ್ಸೆ ಕುರಿತು ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 259/2015 ಕಲಂ. 379 ಐ.ಪಿ.ಸಿ:

ದಿ-29.10.2015 ರಂದು ರಾತ್ರಿ 08.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಂಪತ್ ತಂದೆ ಚೂರಿ ಮಲ್ಲಪ್ಪ ವಯಸ್ಸು : 46, ಜಾತಿ: ಲಿಂಗಾಯತ, ಉದ್ಯೋಗ: ಮ್ಯಾನೇಜರ್, ಸಾ: ಕಂದಗಲ್ಲ ಗ್ರಾಮ ತಾ:ಜಿ; ದಾವಣಗೇರಿ, ಹಾ.ವ; ವಿಧ್ಯಾನಗರ, ವೈಭವ ಹೊಟೇಲ್ ಹಿಂಬಾಗ, ಚಿತ್ರದುರ್ಗ, ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನಂದರೆ, ದಿ-29.10.2015 ರಂದು ಬೆಳಗಿನ ಜಾವ 0230 ಗಂಟೆ ಯಿಂದ ಬೆಳೆಗ್ಗೆ 06.00 ಗಂಟೆಯ ಅವದಿಯಲ್ಲಿ ನಮ್ಮ ಕಂಪನಿಯ ಲಾರಿ ನಂ-ಕೆಎ-25/ಬಿ8332 ನೇದ್ದರ ಚಾಲಕನು ಲಾರಿಯಲ್ಲಿ ಪಾರ್ಸಲ್ ಲೋಡ್ ಮಾಡಿಕೊಂಡು ಕುಷ್ಟಗಿ ಹೊಸಪೇಟಿ ಮಧ್ಯ ಎನ್.ಹೆಚ್-50 ರಸ್ತೆಯ ಮೆತಗಲ್ಲ ಗ್ರಾಮದ ಸಮೀಪ ನ್ಯೂ ಆಯಿ ಮಾತಾ ಹೈ ವೇ ಹೊಟೆಲ್ ಹತ್ತಿರ ಪಾರ್ಕಿಂಗ್ ಮಾಡಿದ ವೇಳೆಯಲ್ಲಿ ಲಾರಿಯಲ್ಲಿದ್ದ ಒಟ್ಟು ಅಂ.ಕಿ 19,000-00 ರೂ ಬೆಲೆ ಬಾಳುವ 04 ಮೆಡಿಸಿನ್ ಬಾಕ್ಸ್ಗಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನ ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, October 29, 2015

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ.240/2015 ಕಲಂ.87 Karnataka Police Act.
ದಿನಾಂಕ 28-10-2015 ರಂದು 1830 ಗಂಟೆಗೆ ಶ್ರೀ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರಪೊಲೀಸ್ಠಾಣೆರವರುಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 05 ಜನರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ,  ದಿನಾಂಕ 28-10-2015 ರಂದು ಸಂಜೆ 5-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಯಲ್ಲಿನಗಂಗಾಧರಕಾಂಪ್ಲೆಕ್ಸ್ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ  ಶ್ರೀ .ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 9,470-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ ಸಂಜೆ 5-00 ರಿಂದ 6-00 ಗಂಟೆವರೆಗೆ ಪಂಚನಾಮೆ ಬರೆದುಕೊಂಡಿದ್ದು ಇರುತ್ತದೆ. ಆರೋಪಿತರ ಮೇಲೆ ಪ್ರಕರಣ ದಾಖಲಿಸಲು ನೀಡಿದ ವರದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.210/2015 ಕಲಂ.78(3) Karnataka Police Act.
ದಿನಾಂಕ 28.10.2015 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ಆರೋಪಿತನಾದ ಸಾಧೀಕ ಕೊಪ್ಪಳ ನಗರದ ದೇವರಾಜ ಅರಸು ಕಾಲೋನಿಯ ಆಯಿಲ್ ಮಿಲ್ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಇದು ನಶೀಬದ ಆಟ ಅಂತಾ ಕೂಗಿ ಕರೆಯುತ್ತಾ ಮಟಕಾ ಜೂಜಾಟದ ನಂಬರ ಬರೇದುಕೊಡುತ್ತಿದ್ದಾಗ ಅಧಿಕಾರಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ 520 ರೂ ಹಾಗೂ ಮಟಕಾ ನಂಬರ ಬರೇದ ಪಟ್ಟಿ, ಬಾಲ್ ಪೆನ್ನ್ ವಶಪಡಿಸಿಕೊಂಡಿದ್ದು ಇರುತ್ತದೆ.
3) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.209/2015 ಕಲಂ.379 ಐ.ಪಿ.ಸಿ:

ದಿನಾಂಕ 26-10-2015 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾಧಿದಾರರಾದ ರಾಜಾಹುಸೇನ ತಂದೆ ಶೈಲನ್ ಸಾಬ ಗಡ್ಡದ ವಯಾ 32 ವರ್ಷ ಜಾ ಮುಸ್ಲಿಂ ಉ ಮಂಡಾಳ ಭಟ್ಟಿ ಕೆಲಸ ಸಾ ಹಟಗಾರ ಪೇಟೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 06-10-2015 ರಂಧು ಸಂಜೆ 6-30 ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ ಟಿ.ವಿ.ಎಸ್.ಎಕ್ಸ್.ಎಲ್ ಮೋಟಾರ ಸೈಕಲ್  ನಂ KA 37/Y 2370  ಅಂ.ಕಿ.ರೂ 25,000 ನೇದ್ದನ್ನು ನಗರದ ಜವಾಹರ ರಸ್ತೆಯ ದಿವಟರ ಸರ್ಕಲ್ ಹತ್ತಿರದ ಪ್ಯಾನ್ ರಿಪೇರಿ ಅಂಗಡಿಗೆ ತನ್ನ ಪ್ಯಾನ್ ರಿಪೇರಿ ಮಾಡಿಸಲು ಹೋಗಿದ್ದು, ಹೋಗುವಾಗ ತನ್ನ ಮೋಟಾರ ಸೈಕಲ್ ನ್ನು ಅಂಗಡಿಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಅಂಗಡಿಗೆ ಹೋಗಿ ತನ್ನ ಪ್ಯಾನ್ ನ್ನು ರಿಪೇರಿ ಮಾಡಲು ಕೋಟ್ಟು ವಾಪಸ ಸಂಜೆ 6-45  ಗಂಟೆಗೆ ಬಂದು ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ಜವಾಹರ ರೋಡ್ ನಲ್ಲಿ , ಬಸ್ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು.   ಕಾರಣ ಮಾನ್ಯರವರು ದಿನಾಂಕ 06-10-2015 ರಂಧು ಸಂಜೆ 6-30 ಗಂಟೆಯಿಂದ ದಿನಾಂಕ 06-10-2015  gÀAzÀÄ ಸಂಜೆ 6-45  ಗಂಟೆಯ ಅವಧಿಯಲ್ಲಿ ತನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿದ ಯಾರೋ ಕಳ್ಳರನ್ನ ಪತ್ತೇ ಹಚ್ಚಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಹಾಗೂ ತಾನು ಅಂದಿನಿಂದ Eಲ್ಲಿಯವರೆಗೆ ತನ್ನ ಮೋಟಾರ ಸೈಕಲನ್ನು ಹುಡುಕಾಡಿ ಸಿಗದೇ ಇದ್ದುದ್ದರಿಂದ ಇಂದು ತಡವಾಗಿ ಬಂದು ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Wednesday, October 28, 2015

1) ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 167/2015 ಕಲಂ. 78(3) Karnataka Police Act.
¢£ÁAPÀ 27-10-2015 gÀAzÀÄ ¸ÀAeÉ 7-30 UÀAmÉUÉ ²æà GzÀAiÀÄ gÀ« ¦.J¸ï.L. PÀ£ÀPÀVj ¥Éưøï oÁuÉ gÀªÀgÀÄ oÁuÉUÉ §AzÀÄ ªÀgÀ¢, ºÁUÀÆ ¥ÀAZÀ£ÁªÉÄ ºÁUÀÆ DgÉÆæ ªÀÄvÀÄÛ ªÀÄlPÁ ¸ÀA§A¢ü¹zÀ ¸ÁªÀiÁVæUÀ¼À£ÀÄß ºÁdgÀ¥Àr¹zÀÄÝ, ¸ÀzÀgÀ ªÀgÀ¢AiÀÄ ¸ÁgÁA±ÀªÉãÉAzÀgÉ, ¢£ÁAPÀ 27-10-21015 gÀAzÀÄ ¸ÀAeÉ 6-00 UÀAmÉAiÀÄ ¸ÀĪÀiÁjUÉ PÀ£ÀPÀVj UÁæªÀÄzÀ PÀ®ÄèPÀA§zÀ ºÀwÛgÀ EgÀĪÀ E¨Áæ»A ºÉÆÃmÉÃ¯ï ªÀÄÄAzÉ DgÉÆæ £ÀA.1 SÁeÁºÀĸÉãï vÀAzÉ ªÀĺÀäzÀ¸Á§ ©Ãr, ªÀAiÀiÁ 34 ªÀµÀð eÁw ªÀÄĹèA ¸Á: 4 £Éà ªÁqÀð PÀ£ÀPÀVj ªÀÄvÀÄÛ 2 £ÁUÉñÀ vÀAzÉ PÀjAiÀÄ¥Àà ªÀįÁè¥ÀÄgÀ, ªÀAiÀiÁ 53 ªÀµÀð eÁw ªÁ°äÃQ G: PÀÆ°PÉ®¸À ¸Á: PÀ£ÀPÀVj gÀªÀgÀÄ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä §gÀÄvÀÛzÉà §¤ß CAvÁ £À¹Ã§ dÆeÁlzÀ CAvÁ PÀÆUÀÄvÁÛ ¸ÁªÀðd¤PÀgÀ£ÀÄß §gÀ ªÀiÁrPÉÆAqÀÄ CªÀjAzÀ ºÀt ¥ÀqÉzÀÄ CªÀjUÉ N.¹. £ÀA§gÀUÀ¼À£ÀÄß §gÉzÀÄ PÉÆqÀÄwÛzÁÝUÀ ¥ÀAZÀgÉÆA¢UÉ zÁ½ ªÀiÁqÀ®Ä DgÉÆæ £ÀA.1 FvÀ£ÀÄ ¹QÌzÀÄÝ, DgÉÆæ £ÀA.2 FvÀ£ÀÄ Nr ºÉÆÃVzÀÄÝ, DgÉÆæ £ÀA.1 FvÀ¤AzÀ 01 ªÀÄlPÁ §gÉzÀ ¥ÀnÖ, 1 ¨Á¯ï ¥É£ÀÄß ¹QÌzÀÄÝ, Nr ºÉÆÃzÀ DgÉÆævÀ£ÀÄ ©Ã¸ÁQzÀ ªÀÄlPÁ dÆeÁlzÀ £ÀUÀzÀÄ ºÀt gÀÆ.490/- ¹QÌzÀÄÝ, ªÀÄmÁPÀ ¸ÁªÀiÁVæUÀ¼À£ÀÄß ªÀÄvÀÄÛ £ÀUÀzÀÄ ºÀtªÀ£ÀÄß ¥ÀAZÀgÀ ¸ÀªÀÄPÀëªÀÄ d¥ÀÛ ªÀiÁr, ¥ÀAZÀ£ÁªÉÄAiÀÄ£ÀÄß ªÀiÁrzÀÄÝ DgÉÆæ £ÀA.3 FvÀ£ÀÄ ªÀÄlPÁ §ÄQÌ EgÀÄvÁÛ£É CAvÁ ªÀÄÄAvÁV ¤ÃrzÀ ªÀgÀ¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.167/15 PÀ®A 78 (3) PÉ.¦. AiÀiÁPÀÖ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
2) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 58/2015 ಕಲಂ.279,  ಐ.ಪಿ.ಸಿ:
ದಿನಾಂಕ 27-10-2015 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಸಲ್ಲಿಸಿದ ಗಣಕೀಕರಣ ಫಿರ್ಯಾದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 27-10-2015 ರಂದು ಸಂಜೆ 4-15 ಗಂಟೆಗೆ ಫಿರ್ಯಾದಿದಾರರು ತಮ್ಮ ಸ್ನೇಹಿತನ ಕಾರ ನಂಬರ KA-37/M-8221 ನೆದ್ದರಲ್ಲಿ ಅವರ ಸ್ನೇಹಿತರು ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದು ಅಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಾಸ ಗಂಗಾವತಿಗೆ ಹೊಗುತ್ತಿರುವಾಗ ಕೊಪ್ಪಳ ನಗರದ ಕೊಪ್ಪಳ-ಗಿಣಿಗೇರಾ ರಸ್ತೆಯ ಮೇಲೆ ಕಿಡದಾಳ ರೆಲ್ವೇಗೇಟ್ ಸಮೀಪ ಹೋಗುತ್ತಿರುವಾಗ, ಎದುರುಗಡೆಯಿಂದ ಟ್ಯಾಂಕರ ನಂಬರ. KA-19/AA-8960  ನೆದ್ದರ ಚಾಲಕನು ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಚಲಾಯಿಸುತ್ತಿದ್ದ ಕಾರಿನ ಬಲಗಡೆಯ ಭಾಗಕ್ಕೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಕಾರಿನ ಬಲಗಡೆಯ ಹಿಂದಿನ ಗಾಲಿಯ ಮೇಲೆ ಡ್ಯಾಮೇಜ ಆಗಿದ್ದು ಕಾರಿನಲ್ಲಿ ಇರುವವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ ಅಂತಾ ಮುಂತಾಗಿದ್ದ ಗಣಕೀಕರಣ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 186/2015 ಕಲಂ.279, 337, 338 ಐ.ಪಿ.ಸಿ:
ದಿನಾಂಕ: 27-10-2015 ರಂದು ರಾತ್ರಿ 7-00 ಗಂಟೆಗೆ ಎಂಎಲ್ ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಪಿರ್ಯಾದಿ ನಾಗಪ್ಪ ತಂದೆ ಹನುಮಪ್ಪ ವಗ್ಗರ ವಯ: 25, ಜಾ: ಕುರುಬರ ಉ: ಕೂಲಿಕೆಲಸ, ಸಾ: ಹಿರೇಮಲಗಾವಿ ತಾ: ಹುನುಗುಂದ ರವರ ಹೇಳಿಕೆ ಸಾರಾಂಶವೇನೆಂದರೆ ಇಂದು ದಿನಾಂಕ: 27-10-2015 ರಂದು ಮದ್ಯಾಹ್ನ ಪಿರ್ಯಾಧಿ ಮತ್ತು ಅವರ ಅಳಿಯನಾದ ಸುರೇಶ ಕೂಡಿಕೊಂಡು ಮೋ/ಸೈ ನಂ ಕೆಎ-19-ಇಡಿ-1914 ನೇದ್ದರಲ್ಲಿ ಟಕ್ಕಳಕಿ ಗ್ರಾಮಕ್ಕೆ ಜಾತ್ರೆ ಕುರಿತು ಬಂದಿದ್ದು ನಂತರ ನಾವು ಟಕ್ಕಳಕಿಯಿಂದ ಕುಷ್ಟಗಿಗೆ ಊಟ ಮಾಡುವ ಕುರಿತು ಬಂದು ಕುಷ್ಟಗಿಯಲ್ಲಿ ಊಟ ಮಾಡಿಕೊಂಡು ಟಕ್ಕಳಕಿ ಹೋಗುವಾಗ ನಮ್ಮ ಮೋ/ಸೈ ನ್ನು ಸುರೇಶ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಕುಷ್ಟಗಿ-ಇಲಕಲ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ-50 ಟೆಂಗುಂಟಿ ಕ್ರಾಸ್ ಹತ್ತಿರ ಮೋ/ಸೈ ನ್ನು ಏಕಾಏಕಿ ಹೆದ್ದಾರಿಯಲ್ಲಿ ಸರ್ವಿಸ್ ರೋಡ ಮತ್ತು ಮೇನ್ ರೋಡ್ ಮದ್ಯದ ರೋಡ ಡಿವೈಡರ ಕಬ್ಬಿಣದ ಕಟಾಂಜನಕ್ಕೆ ಟಕ್ಕರ ಮಾಡಿದನು ಇದರಿಂದ ನಾವು ಮೋ/ಸೈ ನೊಂದಿಗೆ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ಸುರೇಶನಿಗೆ ಎಡಗಾಲು ಮಿನುಗಂಡದ ಹತ್ತಿರ ಮುರಿದಂತಾಗಿದ್ದು ಮತ್ತು ಎಡಗಣ್ನಿನ ಮೇಲೆ, ಎಡಕಿವಿಗೆ ರಕ್ತಗಾಯವಾಗಿದ್ದು, ಪಿರ್ಯಾದಿಗೆ ಯಾವುದೇ ಗಾಯ ವೈಗೈರೈಯಾಗಿರುವುದಿಲ್ಲಾ ಅಂತಾ ವಾಪಸ್ ಠಾಣೆಗೆ 7-45 ಬಂದು ಸುರೇಶನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
4) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 187/2015 ಕಲಂ.279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 27-10-2015 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪುಟ್ಟಪ್ಪ ತಂದೆ ನಾಗಪ್ಪ ಕರಿ ವಯ: 50, ಜಾ: ಸುಡುಗಾಡು ಸಿದ್ದರು, ಉ: ಕುಲ ಕಸುಬು  ಸಾ: ಶರೀಫ್ ನಗರ ಕುಷ್ಟಗಿ  ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ  ಸಾರಾಂಶವೇನೆಂದರೆ ಇಂದು ದಿನಾಂಕ: 27-10-2015 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನನ್ನ ತಮ್ಮನಾದ ಹನಮಂತಪ್ಪ ಇತನಿಗೆ ಅಪಘಾತವಾಗಿದೆ ಅಂತಾ ಸುದ್ದಿ ಗೊತ್ತಾಗಿ ನಾನು ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಿದ್ದು ಈ ದಿವಸ ಸಂಜೆ 6-00 ಗಂಟೆ ಸುಮಾರಿಗೆ ಕುಷ್ಟಗಿ-ಹೊಸಪೇಟ ರಾಷ್ಟ್ರೀಯ ಹೆದ್ದಾರಿ-50 ರಸ್ತೆಯ ಸರ್ವಿಸ್ ರೋಡಿನಲ್ಲಿ ನೀರಿನ ಮಲ್ಲಪ್ಪನ  ಮನೆಯ ಹತ್ತಿರ ನನ್ನ ತಮ್ಮನಾದ ಹನಮಂತಪ್ಪನು ರಸ್ತೆ ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಿಗೆ  ಟಕ್ಕರ ಕೊಟ್ಟು ವಾಹನವನ್ನು ನಿಲ್ಲಿಸದೇ ಹಾಗೆಯೇ ಹೋಗಿದ್ದು ಇದರಿಂದ ಆತನ ತಲೆಗೆ ರಕ್ತ ಗಾಯವಾಗಿ ಬಲಗಡೆ ಕಣ್ಣಿನ ಮೇಲೆ ರಕ್ತ ಗಾಯವಾಗಿದ್ದು ನಂತರ ಆತನನ್ನು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ. 
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 206/2015 ಕಲಂ.379 ಐ.ಪಿ.ಸಿ:

ದಿನಾಂಕ 27-10-2015 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿದಾರರಾದ ಗಿರೀಶ್ ತಂದೆ ಶಿವಪ್ಪ ಬಂಗಾರ ಶೆಟ್ಟರ ಸಾ ರೈಲ್ವೆ ಸ್ಟೇಷನ್ ಏರಿಯಾ ಗಾಂಧಿನಗರ ಕೊಪ್ಪಳ  ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೆ.  ದಿನಾಂಕ 23-10-2015 ರಂದು ರಾತ್ರಿ 10-30 ಗಂಟೆಗೆ ಫೀರ್ಯಾದಿದಾರರು ತಮ್ಮ ಹೆಸರಿನಲ್ಲಿರುವ ಹಿರೊ ಹೊಂಡಾ ಸಿಡಿ 100 ನಂ KA 05/X 5270 ಅಂ.ಕಿ.ರೂ 15,000 ನೇದ್ದನ್ನು ತಮ್ಮ ಕೆಲಸಕ್ಕೆ ಉಪಯೋಗಿಸಿಕೊಂಡು ಗಾಂಧಿನಗರದಲ್ಲಿರುವ ತಮ್ಮ ಮನೆಯ ಕಂಪೌಂಡ ಒಳಗೆ ತಂದು ನಿಲ್ಲಿಸಿ ಬೆಳಿಗ್ಗೆ 6-00 ಗಂಟೆಗೆ ಎದ್ದು ಹೊರಗಡೆ ಬಂದು ತಾನು ನಿಲ್ಲಿಸಿದ್ದ ಮೋಟಾರ ಸೈಕಲ್ ನೋಡಿದಾಗ ತನ್ನ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಹುಡುಕಿದರೂ ಎಲ್ಲಿಯೂ ಕಂಡು ಬರಲಿಲ್ಲಾ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದು ಬಂದಿತು. ಕಾರಣ ಮಾನ್ಯರವರು ದಿನಾಂಕ 23-10-2015 gÁw 10-30 ಗಂಟೆಯಿಂದ ದಿನಾಂಕ 24-10-2015 ಮುಂಜಾನೆ 6-00  ಗಂಟೆಯ ಅವಧಿಯಲ್ಲಿ ತನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Monday, October 26, 2015

1) ಮುನಿರಾಬಾದಪೊಲೀಸ್ ಠಾಣೆ ಗುನ್ನೆ ನಂ.219/2015 ಕಲಂ.279, 304(ಎ) ಐ.ಪಿ.ಸಿ:
ದಿನಾಂಕ. 23-10-2015 ರಂದು 11-15 ಪಿ.ಎಂ.ಕ್ಕೆ ಫಿರ್ಯಾದಿದಾರರ ತಂದೆ ಪಂಚಯ್ಯ ಇವರು ಮೋ.ಸೈ. ನಂ. ಕೆ.ಎ.37/ವೈ.9836 ನೇದ್ದರಲ್ಲಿ ಹಿಂದೆ ಕುಳಿತುಕೊಂಡು ಕೂಕನಪಳ್ಳಿಯಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಮೋ.ಸೈ. ಚಲಾಯಿಸುತ್ತಿದ್ದ ಶಾಂತಯ್ಯನು  ಎನ್.ಹೆಚ್. 13 ರಸ್ತೆಯ ಮೇಲೆ ಬೂದೇಶ್ವರ ಕೆರೆ ಹತ್ತಿರ ಮೋ.ಸೈ.ನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗಿತ್ತಿರುವಾಗ ಒಂದು ಕೋತಿ ಬಂದು ಮೋ.ಸೈ.ಗೆ ಬಂದು ಬಡಿದಿದ್ದರಿಂದ ಮೋ.ಸೈ. ನಿಯಂತ್ರಣ ಮಾಡಲು ಆಗದೆ ನಿರ್ಲಕ್ಷತನದಿಂದ ಮೋ.ಸೈ. ಸ್ಕಿಡ್ ಮಾಡಿ ಅಪಘಾತ ಮಾಡಿಕೊಂಡು ಬಿದ್ದು, ಹಿಂದೆ ಕುಳಿತ ಪಂಚಯ್ಯ ಇವರಿಗೆ ತಲೆಗೆ ಭಾರಿ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿ ಎಸ್.ಡಿ.ಎಂ. ಆಸ್ಪತ್ರೆಗೆ ಹೋಗಿದ್ದು ಅಲ್ಲಿ ವೈದ್ಯಾಧಿಕಾರಿಗಳು ಉಳಿಯುವ ಭರವಸೆ ನೀಡಲಾರದ್ದರಿಂದ ಮುಂದೆ ಯಾವುದಾದರು ದೊಡ್ಡ ಆಸ್ಪತ್ರೆಗೆ ಕರೆದುಕಂಡು ಹೋಗಬೇಕೆಂದು ಸ್ವ ಇಚ್ಚೆಯಿಂದ ಡಿಸ್ ಚಾರ್ಚ ಮಾಡಿಸಿಕೊಂಡು ಊರಿಗೆ ಕೂಕನಪಳ್ಳಿ ಗ್ರಾಮಕ್ಕೆ ಕರೆದುಕೊಂಡು ಬಂದಾಗ ಇಂದು ದಿನಾಂಕ. 25-10-2015 ರಂದು ಸಾಯಂಕಾಲ 7-30 ಗಂಟೆಗೆ ಕೂಕನಪಳ್ಳಿ ಗ್ರಾಮದಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖತಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಗಂಗಾವತಿನಗರಪೊಲೀಸ್ ಠಾಣೆ ಗುನ್ನೆ ನಂ. 237/2015 ಕಲಂ.363 ಐ.ಪಿ.ಸಿ:
ದಿನಾಂಕ 25-10-2015 ರಂದು 18-30 ಗಂಟೆಗೆ ಎಂ.ಕೆ.ಶ್ರೀಕಾಂತ ತಂದೆ ದಿ:ಎಂ.ಖಾಜನಗೌಡ ಮಾನಸಗಲ್ ವಯ 30 ವರ್ಷ ಜಾ: ಈಡಿಗ ಉ: ವ್ಯವಸಾಯ ಸಾ: ಜಯನಗರ, ಗಂಗಾವತಿ ರವರು  ಠಾಣೆಗೆ ಹಾಜರಾಗಿ ಒಂದು ಹೇಳಿಕೆನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನ ಸಹೋದರನಾದ ಇ.ಬಿ.ನಾಗರಾಜ ತಂದೆ ಎ.ಇ. ಬಸವರಾಜ 28 ವರ್ಷ ಈತನು ಹಳೆ ಕಾರಗಳನ್ನು ಕಮಿಷನ್ ಆಧಾರದ ಮೇಲೆ ವ್ಯಾಪಾರ ಮಾಡಿಕೊಂಡಿದ್ದು ಅದರಂತೆ ಆರೋಪಿ ಆಸೀಪ್ ಅಲಿ ಸಾ: ಗದಗ ಈತನು ಸಹ ಹಳೆ ಕಾರುಗಳನ್ನು ಕಮಿಷನ್ ಆಧಾರದ ಮೇಲೆ ವ್ಯಾಪಾರ ಮಾಡಿಕೊಂಡಿದ್ದು, ಸದರಿಯವರಿಬ್ಬರ ನಡುವೆ ಹಳೆ ಕಾರುಗಳ ವ್ಯವಹಾರ ಇದ್ದು ನಾಗರಾಜ ಈತನು ಆಸೀಫ್ ಅಲಿಗೆ ವ್ಯವಹಾರದಲ್ಲಿ 06-07 ಲಕ್ಷ ರೂಪಾಯಿಗಳನ್ನು ಕೊಡಬೇಕಾಗಿರುವುದು ಕೊಡದೆ ಸುಮಾರು ಎರಡು ವರ್ಷಗಳಿಂದ ಸತಾಯಿಸುತ್ತಿದ್ದರಿಂದ ದಿನಾಂಕ 24-10-2015 ರಂದು 19-30 ಗಂಟೆಯ ಸುಮಾರಿಗೆ ನಾಗರಾಜ ಈತನು ಗಂಗಾವತಿ ನಗರದ ಜುಲಾಯಿ ನಗರದಲ್ಲಿಯ ಅಜಯ ಆಟೋ ಕನ್ಸೆಲ್ಟಿನ್ಸಿ ಆಫೀಸದಲ್ಲಿ ಇರುವಾಗ ಆರೋಪಿತನು ಬಂದು ನಾಗರಾಜನಿಗೆ ತನ್ನ ಸಂಗಡ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆಂದು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 237/2015, ಕಲಂ 363 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 184/2015 ಕಲಂ.379 ಐ.ಪಿ.ಸಿ:
ದಿನಾಂಕ: 25-10-2015 ರಂದು ಸಾಯಂಕಾಲ 5-45 ಗಂಟೆಗೆ ಪಿರ್ಯಾದಿದಾರನಾದ ಪಿ.ಕನ್ನನ್ ತಂದೆ ಪೆರುಮಾಳ  ಸಾ: ಮನೆ ನಂ: 12 ಇಂದಿರಾ ನಗರ ಪಣಚನಲ್ಲೂರು( ಟಿ.ಎನ್) ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 16-10-2015 ರಂದು ಗುಜರಾತ ರಾಜ್ಯ ದಲ್ಲಿರುವ ಸುರೇಂದ್ರನಗರದ ನೇಸ್ಟಲೇ ಇಂಡಿಯಾ ಲಿಮಿಟೇಡ್ ಕಂಪನಿಯಿಂದ 1) POLO Mini Jar Total 80 Bax, 2) POLO Mint Big Roll Total 20 Bax, 3) MILKYBAR Eclairs Total 490 Box & 4) POLO Mint Roll Total 168 Box ಹಿಗೇ ಒಟ್ಟು 758 ಚಾಕಲೇಟ್ ಬಾಕ್ಸಗಳು ಒಟ್ಟು ಬೆಲೆ 18,98,290=00 ರೂಪಾಯಿಗಳಷ್ಟು ಚಾಲಕೇಟ ಬಾಕ್ಸಗಳನ್ನು ಲೋಡ ಮಾಡಿಕೊಂಡು ತಮಿಳುನಾಡು ರಾಜ್ಯದ ತಿರುವಳ್ಳೂರನ ಅದೇ ನೇಸ್ಟಲೇ ಇಂಡಿಯಾ ಲಿಮಿಟೇಡ್ ಕಂಪನಿಗೆ ತಲುಪಿಸಲು  ಸಂಜೆ 05-30 ಗಂಟೆಯ ಸುಮಾರಿಗೆ ಸುರೇಂದ್ರನಗರ ಬಿಟ್ಟು ಹೊರಟೆವು. ನಾವು ಇಬ್ಬರೂ ಡ್ರೈವರಗಳು ಆಗಿದ್ದರಿಂದ ಒಬ್ಬ ಒಬ್ಬರೂ ಡ್ರೈವಿಂಗ ಮಾಡಿಕೊಂಡು ಅಲ್ಲಲ್ಲಿ ಊಟ, ನಾಷ್ಟ ಹಾಗೂ ಸ್ನಾನ ಮಾಡಿಕೊಳ್ಳುತ್ತಾ ಮತ್ತು  ವಿಶ್ರಾಂತಿ ಮಾಡುತ್ತಾ ಬರುತ್ತಿದ್ದೆವು. ಸೋನಕಾಡ  ಸೊಲ್ಲಾಪೂರ ಮಾರ್ಗವಾಗಿ ಆಲಮಟ್ಟಿಯವರೆಗೆ ಡ್ರೈವಿಂಗ ಮಾಡಿಕೊಂಡು ಬಂದು ನಮ್ಮ ಲಾರಿಯ 2 ನೇ ಚಾಲಕನಾದ ಪಿ. ತಂಗರಾಜ ರವರಿಗೆ ಡ್ರೈವಿಂಗ ಮಾಡಲು ಕೊಟ್ಟು ವಿಶ್ರಾಂತಿ ಮಾಡುತ್ತಿದ್ದೇನು. ಪಿ. ತಂಗರಾಜನು ಇಲಕಲ್ ದಾಟಿ ಮಹಾರಾಣಿ ಡಾಬಾದವರೆಗೆ ಡ್ರೈವಿಂಗ ಮಾಡಿಕೊಂಡು ದಿನಾಂಕ:19-10-2015 ರಂದು ಬೆಳಗಿನ ಜಾವ 03-00 ಗಂಟೆಗೆ ಬಂದು ತನಗೆ ನಿದ್ದೆ ಬರುತ್ತಿದ್ದರಿಂದ ಮಹಾರಾಣಿ ಡಾಬಾದಲ್ಲಿ ಲಾರಿಯನ್ನು ನಿಲ್ಲಿಸಿ ಮಲಗಿದ್ದನು. ನಂತರ ಬೆಳಗಿನ ಜಾವ 05-00 ಗಂಟೆಯ ಸುಮಾರಿಗೆ ಎದ್ದು  ಪುನಃ 2 ನೇ ಚಾಲಕ ಪಿ.ತಂಗರಾಜನು ಲಾರಿಯನ್ನು ನಡೆಸಿಕೊಂಡು ವಣಗೇರಿ ಟೋಲನಾಕ ದಾಟಿ ಬೆಳಗಿನ 06-00 ಗಂಟೆಯ ಸುಮಾರಿಗೆ ಎಡಗಡೆ ಪಾಕಿಂಗ್ ದಲ್ಲಿ ಲಾರಿಯನ್ನು ನಿಲ್ಲಿಸಿ ಮೇಲೆ ಹತ್ತಿ ನೋಡಲು ನಮ್ಮ ಲಾರಿಯ ಮೇಲೆ ಹಾಕಿರುವ ತಡಪಾಲುನ್ನು ಸುಮಾರು ಒಂದು ಮಾರಿನಷ್ಟು ಕತ್ತರಿಸಿ [ಕೊಯ್ದು] ಲಾರಿಯಲ್ಲಿದ್ದ 1) POLO Mini Jar Total 80 Bax,ಗಳ ಪೈಕಿ 14 ಬಾಕ್ಸಗಳನ್ನು 1 ಬಾಕ್ಸಗೆ 3413=00 ರೂಪಾಯಿಯಂತೆ 14 ಬಾಕ್ಸಗಳ ಕಿಮ್ಮತ್ತು 47782=00, 2) POLO Mint Big Roll Total 20 Bax, ಗಳ ಪೈಕಿ 03 ಬಾಕ್ಸಗಳನ್ನು 1 ಬಾಕ್ಸಗೆ 2950=00 ರೂಪಾಯಿಯಂತೆ 03 ಬಾಕ್ಸಗಳ ಕಿಮ್ಮತ್ತು 8850=00, 3) MILKYBAR Eclairs Total 490 Box ಗಳ ಪೈಕಿ 28 ಬಾಕ್ಸಗಳನ್ನು 1 ಬಾಕ್ಸಗೆ 2485=00 ರೂಪಾಯಿಯಂತೆ 28 ಬಾಕ್ಸಗಳ ಕಿಮ್ಮತ್ತು 69580=00, ಮತ್ತು 4) POLO Mint Roll Total 168 Box  ಗಳ ಪೈಕಿ 32 ಬಾಕ್ಸಗಳನ್ನು 1 ಬಾಕ್ಸಗೆ 2075=00 ರೂಪಾಯಿಯಂತೆ 32 ಬಾಕ್ಸಗಳ ಕಿಮ್ಮತ್ತು 66400=00, ಹಿಗೇ ಒಟ್ಟು 77 ಬಾಕ್ಸಗಳು ಒಟ್ಟೂ ರೂ: 1,92,612=00 ರೂಪಾಯಿಗಳಷ್ಟು ಬೆಲೆ ಬಾಳುವ ಚಾಕಲೇಟ ಬಾಕ್ಸಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಹೋಗಿದ್ದು ಇರುತ್ತದೆ. ಈ ಬಗ್ಗೆ ನಮ್ಮ ಲಾರಿಯ ಟ್ರಾನ್ಸಪೋರ್ಟ ಮಾಲಕರಿಗೆ ಹಾಗೂ  ನೇಸ್ಟಲೇ ಇಂಡಿಯಾ ಲಿಮಿಟೇಡ್ ಕಂಪನಿಯವರಿಗೆ ವಿಷಯ ತಿಳಿಸಿ ಈಗ ತಡವಾಗಿ ಬಂದು ಪಿರ್ಯಾದಿಯನ್ನು ಹಿಂದಿಯಲ್ಲಿ ಹೇಳಿದ್ದನ್ನು ಕನ್ನಡಕ್ಕೆ ಅನುವಾದಿಸಿ ಗಣಕೀಕರಣ ಮಾಡಿಸಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


Saturday, October 24, 2015

1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 143/2015 ಕಲಂ. 279, 337, 338. 304(ಎ) ಐ.ಪಿ.ಸಿ:.  
ದಿನಾಂಕ:23-10-2015 ರಂದು 3-00 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ವಿಚಾರಿಸಿದ್ದು, ಇಬ್ಬರೂ ಗಾಯಾಳುಗಳನ್ನು ಗದಗಗೆ ರೇಫರ್ ಮಾಡಿದ್ದು, ಕಳುಹಿಸಿ, ಪಿರ್ಯಾದಿಯ ಹೇಳಿಕೆ ಪಿರ್ಯಾದಿಯನ್ನು 3-10 ಪಿಎಂದಿಂದ 4-10  ಪಿಎಂದವರೆಗೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಆರೋಪಿತನು ಚಲಾಯಿಸುತ್ತಿದ್ದ ಟ್ರ್ಯಾಕ್ಟರದಲ್ಲಿ ತಾನು, ಸುರೇಶ, ಶರಣಪ್ಪ ಹಾಗೂ ಯಲ್ಲಪ್ಪ ಸೇರಿ ಸಿಮೆಂಟ್ ಹೆಂಡಿಗಳನ್ನು ಲೋಡ್ ಮಾಡಿಕೊಂಡು ಕುಕನೂರದಿಂದ ಬೇವೂರಗೆ ಹೋಗುತ್ತಿರುವಾಗ ಸದರ ಟ್ರ್ಯಾಕ್ಟರಿಯನ್ನು ಆರೋಪಿತ ಕುಕನೂರಿನ ಗುದ್ನೆಪ್ಪ ಸರ್ಕಲ್ ಕಡೆಯಿಂದ ಗುದ್ನೆಪ್ಪನ ಮಠದ ಕಡೆಗೆ ಹೋಗುವ ಗ್ರಾಮ ಪಂಚಾಯತಿಯ ಹತ್ತಿರ ರಸ್ತೆಯ ತಿರುವಿನಲ್ಲಿ ಟ್ರ್ಯಾಕ್ಟರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ಟ್ರ್ಯಾಲಿ ಪಲ್ಟಿಯಾಗಿದ್ದು, ತಾನು ಪುಟಿದು ಮುಂದೆ ಬಿದ್ದಿದ್ದು, ಆದರೆ, ಉಳಿದವರು ಹೆಂಡಿಯ ಕೆಳಗೆ ಸಿಕ್ಕಿಹಾಕಿಕೊಂಡಿದ್ದು, ನೋಡಿದ ಜನ ಬಂದು ಉಪಚರಿಸಲು ಯಲ್ಲಪ್ಪ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸುರೇಶ ಮತ್ತು ಶರಣಪ್ಪ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತನಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು, ಅಂಬ್ಯುಲೆನ್ಸ್ ದಲ್ಲಿ ತಮಗೆ ಚಿಕಿತ್ಸೆ ಕುರಿತು ಕರೆದುಕೊಂಡು ಬಂದಿದ್ದು, ಸದರ ಘಟನೆಗೆ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದ ಚಾಲನಯೇ ಕಾರಣವಾಗಿರುತ್ತದೆ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 4-20 ಪಿಎಂಕ್ಕೆ ಬಂದು ಸದರ ದೂರಿನ ಸಾರಾಂಶದ ಮೇಲಿಂದ ಕುಕನೂರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 183/2015 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ 23-10-2015 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾಧಿದಾರರಾದ ಯಮನಪ್ಪ ತಂದೆ ಹನಮಪ್ಪ ಗುಮಗೇರಿ ವಯಾ: 50 ವರ್ಷ ಜಾತಿ: ವಾಲ್ಮಿಕಿ ಉ; ಒಕ್ಕಲುತನ ಸಾ: ಕಂದಕೂರು   ತಾ: ಕುಷ್ಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತಿ ಫಿರ್ಯಾದಿ ಸಾರಾಂಶವೇನೆಂದರೆ, ನನ್ನ ಕಾಸಾ ಅಣ್ಣನಾದ ಹನಮಂತಪ್ಪ ಇತನ ಮಗನಾದ ಕನಕಪ್ಪ ಗುಮಗೇರಿ ಇತನು ಹಿರೋ ಮೋಟರ್ ಸೈಕಲ್ ನಂ: ಕೆ.ಎ-37/ವಿ-4963 ನೇದ್ದನ್ನು ತೆಗೆದುಕೊಂಡು ತನ್ನಅಕ್ಕಳಾದ ಮಂಜಮ್ಮಳನ್ನು ನಾಗರಾಳ ಊರಿಗೆ ಬಿಟ್ಟು ಬರಲು ಇಂದು ದಿನಾಂಕ: 23-10-2015 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಹೋಗಿದ್ದನು. ನಂತರ ಮಂಜವ್ವಳನ್ನು ಬಿಟ್ಟು ವಾಪಾಸ್ ಕಂದಕೂರು ಗ್ರಾಮ್ಕಕೆ ಬರುವಾಗ ದಾರಿಯಲ್ಲಿ ನಮ್ಮೂರ ಮೌನೇಶ ತಂದೆ ಮಲ್ಲಪ್ಪ ಚಕ್ರಸಾಲಿ ಇತನು ನಾನು ಊರಿಗೆ ಬರುತ್ತೇನೆ ಅಂತಾ ಹೇಳಿದ್ದರಿಂದ ಕನಕಪ್ಪನು ಮೌನೇಶನನ್ನು ತನ್ನ ಮೊಟರ್ ಸೈಕಲ್ ನ ಹಿಂದುಗಡೆ ಕುಡಿಸಿಕೊಂಡು ಊರಿಗೆ ಬರುವಾಗ ಸಂಜೆ 4-00 ಗಂಟೆ ಸುಮಾರಿಗೆ ಕಂದಕೂರು ಸೀಮಾದಲ್ಲಿ ಕಂದಕೂರು ನಾಗರಾಳ ರಸ್ತೆಯಲ್ಲಿ ಶರಣಪ್ಪ ಬಿಜಕಲ್ ಇವರ ಹೊಲದ ಹತ್ತಿರ ಎಡಗಡೆ ಬರುತ್ತಿರುವಾಗ ಎದುರುಗಡೆಯಿಂದ ಮಿನಿ ಲಾರಿ ನಂ: ಕೆ.ಎ-28/9487 ನೇದ್ದರ ಚಾಲಕನಾದ ಬಸವರಾಜ ತಂದೆ ದೇವಪ್ಪ ಕಾಮನೂರು ಸಾ: ಕಂದಕೂರು ಇತನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನಾಗರಾಳ ಕಡೆಯಿಂದ ಬರುತ್ತಿದ್ದ ಕನಕಪ್ಪನ ಮೋಟರ್ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಕನಕಪ್ಪನಿಗೆ ಎಡಗಡೆ ತಲೆಗೆ ಭಾರಿ ರಕ್ತ ಗಾಯವಾಗಿ ಮಾಂಸ ಮುದ್ದೆಗಳು ಹೊರ ಬಂದಿದ್ದು, ಹಣೆಗೆ, ಬಲಗಾಲ ಮೊಣಕಾಲಿಗೆ ಭಾರಿ ರಕ್ತ ಗಾಯವಾಗಿ  ಬಲ ಭುಜ ಮುರಿದಂತಾಗಿ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಹಿಂದೆ ಕುಳಿತ ಮೌನೇಶ ಚಕ್ರಸಾಲಿ ಇತನಿಗೆ ತಲೆಯ ಹಿಂಬಾಗಕ್ಕೆ ಬಾರಿ ರಕ್ತ ಗಾಯವಾಗಿ ಮೂಗಿನಿಂದ ರಕ್ತ ಬರುತ್ತಿದ್ದು ಬಲಗಾಲ ಮೊಣಕಾಲು ಮುರಿದಂತಾಗಿದ್ದು ನಂತರ ದಾರಿಯಲ್ಲಿ ಹೋಗುತ್ತಿದ್ದ ನಮ್ಮ ಅಳಿಯನಾದ ಶರಣಪ್ಪ ಗೋಪಾಳಿ ಇತನು ನೋಡಿ ನನಗೆ ಫೋನ್ ಮಾಡಿ ವಿಷಯ ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಬಂದು ನೋಡಲಾಗಿ ವಿಷಯ ನಿಜವಿರುತ್ತದೆ. ನಂತರ ಭಾರಿ ರಕ್ತ ಗಾಯಗೊಂಡ ಮೌನೇಶ ಚಕ್ರಸಾಲಿ ಇತನನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬಾಗಲಕೋಟಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮದ್ಯದಲ್ಲಿ ಟೋಲ್ ನಾಕಾ ಹತ್ತಿರ ಮೌನೇಶನು ಸಹ ಮೃತಪಟ್ಟಿರುತ್ತಾನೆ. ಸದರಿ ಅಪಘಾತಪಡಿಸಿದ ಮಿನಿ ಲಾರಿ ನಂ: ಕೆ.ಎ-28/9487 ನೇದ್ದರ ಚಾಲಕನಾದ ಬಸವರಾಜ ಕಾಮನೂರು ಸಾ: ಕಂದಕೂರು ಇತನು ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾನೆ. ಕಾರಣ ಆತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 236/2015 ಕಲಂ. 307 ಐ.ಪಿ.ಸಿ:.

ದಿನಾಂಕ 23-10-2015 ರಂದು 21-30 ಗಂಟೆಗೆ ಶ್ರೀಮತಿ ಸುಂಕಮ್ಮ ಗಂಡ ಹನುಮಂತಪ್ಪ ವಯಾ: 68 ವರ್ಷ, ಜಾ: ಭೋವಿ, ಉ: ಕೂಲಿ ಕೆಲಸ, ಸಾ: ವಿರುಪಾಪೂರ ಗಂಗಾವತಿ ರವರು  ಠಾಣೆಗೆ ಹಾಜರಾಗಿ ಒಂದು ಹೇಳಿಕೆ ನೀಡಿದ್ದು ಅದರ ಸಾರಾಂಶವೇನೆಂದರೆ, ಆರೋಪಿತನಾದ ಶೇಖರಪ್ಪ ಇವನು ಗಾಯಾಳು ಅಂಜಿನಪ್ಪ ಈತನ ಹತ್ತಿರ ಟ್ರಾಕ್ಟರ್ ಡ್ರೈವರ್ ಕೆಲಸ ಮಾಡಿಕೊಂಡಿದ್ದು, ಅವನು ಇಂದು ಗಾಯಾಳು ಅಂಜಿನಪ್ಪನಿಗೆ ರಾತ್ರಿ 8-30 ಗಂಟೆಯ ಸುಮಾರಿಗೆ ಸಾರಾಯಿ ಕುಡಿಯುಲು ಹಣ ಕೇಳಿದ್ದು ಆ ಸಮಯದಲ್ಲಿ ಅವನು ನನ್ನ ಬಳಿ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗಿದ್ದು ಇರುತ್ತದೆ. ನಂತರ ಅಂಜಿನಪ್ಪನು ಇಂದು ದಸರಾ ಹಬ್ಬ ಇದ್ದುದರಿಂದ ಓಣಿಯಲ್ಲಿನ ತನ್ನ ಸಂಬಂಧಿಕರಿಗೆ ಮತ್ತು ಕುಲಸ್ಥರಿಗೆ ಬನ್ನಿ ಕೊಡಲು ಹೋಗಿದ್ದು, ಅವನು ಬನ್ನಿ ಕೊಡಲು ಹೋದ ಸಮಯವನ್ನು ನೋಡಿ ಆರೋಪಿತನಾದ ಶೇಖರಪ್ಪ ಇವನು ಅಂಜಿನಪ್ಪನು ತನಗೆ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಅವನನ್ನು ಕೊಲೆ ಮಾಡಿ ಬಿಡಬೇಕು ಎಂಬ ಉದ್ದೇಶದಿಂದ ಸಾರಾಯಿ ಬಾಟಲಿಯನ್ನು ತೆಗೆದುಕೊಂಡು ನನ್ನ ಅಕ್ಕಳ ಮಗನಾದ ಅಂಜಿನಪ್ಪನಿಗೆ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಅದರಿಂದ ಅಂಜಿನಪ್ಪನಿಗೆ ಬಾರೀ ಪ್ರಮಾಣದ ರಕ್ತಗಾಯವಾಗಿದ್ದು ಇರುತ್ತದೆ. ಸದ್ಯ ಅವನನ್ನು ಚಿಕಿತ್ಸೆ ಕುರಿತು ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಪಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
Will Smith Visitors
Since 01/02/2008