Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 30, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 225/2016 ಕಲಂ: 78(3) Karnataka Police Act.:
ದಿನಾಂಕ 29-09-2016 ರಂದು ರಾತ್ರಿ 7-15 ಗಂಟೆಯ ಸುಮಾರಿಗೆ ಆರೋಪಿತರಾದ 1) ಶರಣಪ್ಪ ತಂದಿ ಬಸಪ್ಪ ಬಂಡಿ ಸಾ. ಕಾರಟಗಿ 2) ಏಸುಬಾಬು ತಂದಿ ಸತ್ಯನಾರಾಯಣ ಸಾ. ಚಳ್ಳೂರು  ಕ್ಯಾಂಪ್ ಇವರು ಕಾರಟಗಿಯ ಎಮ್.ಕೆ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್. ಶ್ರೀ. ವೀರಾ ರೆಡ್ಡಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಮಾಡಿ ಹಿಡಿದುಕೊಂಡು  ಆರೋಪಿತರ ಕಡೆಯಿಂದ ನಗದು ಹಣ ರೂ.2460=00 ಗಳನ್ನು ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                         
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 226/2016 ಕಲಂ: 78(3) Karnataka Police Act.:
ದಿನಾಂಕ 29-09-2016 ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ಬೂದುಗುಂಪಾ ಗ್ರಾಮದ ಈಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ವೀರೇಶಪ್ಪ ತಂದೆ ವೀರಭದ್ರಪ್ಪ ಪಲ್ಲೇದ ವಯ 50 ವರ್ಷ ಜಾತಿ ಲಿಂಗಾಯತ ಉ. ಒಕ್ಕಲುತನ ಸಾ. ಬೂದುಗುಂಪಾ ತಾ. ಗಂಗಾವತಿ ಈತನ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ  ಆರೋಪಿತನ ನಗದು ಹಣ ರೂ.2830=00 ಗಳನ್ನು ಮತ್ತು  ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 287/2016 ಕಲಂ: 87 Karnataka Police Act.:
ದಿನಾಂಕ:- 29-09-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗಾಪೂರು ಗ್ರಾಮ ಸೀಮಾದ ಕಣಿವೆ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಮತ್ತು  ಸಿಬ್ಬಂದಿಯವರಾದ ಸಿಪಿಸಿ- 118, 97, 110, 358, 120, 323, ಹೆಚ್.ಸಿ. 156 ಎ.ಪಿ.ಸಿ. 77  ಮತ್ತು ಇಬ್ಬರು ಪಂಚರನ್ನು ಕೂಡಿಕೊಂಡು ಸಾಯಿನಗರ ಗ್ರಾಮಕ್ಕೆ ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಸಂಗಾಪೂರು ಸೀಮಾದ ಕಣಿವೆ ಆಂಜನೇಯ ಗುಡಿಯ ಹತ್ತಿರ ದೇವಸ್ಥಾನದ ಬೆಳಕಿನ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 16,030-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.ರುತ್ತದೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ: 32, 34 Karnataka Excise Act.

ದಿನಾಂಕ: 29-09-2016 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಗಾಣದಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಟೆಟ್ರಾಪ್ಯಾಕ್ಗಳನ್ನು ತನ್ನ ಸ್ವಾದಿನದಲ್ಲಿ ಇಟ್ಟುಕೊಂಡು ಅವುಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್. ಬೇವೂರ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 90 ಎಂ.ಎಲ್ನ ಅಳತೆಯುಳ್ಳ HAYWARDSCHEERS WHISKY  ಎಂಬ ಲೇಬಲುಳ್ಳ ಒಟ್ಟು 54 ಮದ್ಯದ ಟೆಟ್ರಾಪ್ಯಾಕ್ಗಳ ||ಕಿ||  1433/- ರೂ ಕಿಮ್ಮತ್ತಿನ ಮದ್ಯದ ಟೆಟ್ರಾಪ್ಯಾಕ್ಗಳನ್ನು ಮತ್ತು ನಗದು ಹಣ 450 ರೂಪಾಯಿಗಳನ್ನು ಜಪ್ತ್ ಮಾಡಿಕೊಂಡು ಬಂದಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Thursday, September 29, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 283/2016 ಕಲಂ: 290 ಐ.ಪಿ.ಸಿ ಮತ್ತು 92(ಐ), 37 ಸಹಿತ 109 Karnataka Police Act.:
ದಿನಾಂಕ: 26-09-2016 ರಂದು ರಾತ್ರಿ 9:00 ಗಂಟೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಇವರು ಕರ್ನಾಟಕ ರಾಜ್ಯ ಪೊಲೀಸ್ ಪರವಾಗಿ ದೂರನ್ನು ಸಲ್ಲಿಸಿದ್ದು, ಗೌರಿ ಗಣೇಶ ಹಬ್ಬದ ನಿಮಿತ್ಯ ದಿನಾಂಕ: 05-09-2016 ರಂದು ಚಿಕ್ಕಜಂತಕಲ್ ಗ್ರಾಮದ ಶ್ರೀ ಬಸವಣ್ಣ ದೇವಸ್ಥಾನದ ಹತ್ತಿರ ಶ್ರೀ ವಿನಾಯಕ ಯುವಕ ಸಂಘ ಇವರು ಪ್ರತಿಷ್ಠಾಪಿಸಿದಂತಹ ಗಣೇಶನನ್ನು ದಿನಾಂಕ: 25-09-2016 ರಂದು 21ನೇ ದಿವಸಕ್ಕೆ ವಿಸರ್ಜನೆ ಮಾಡುವ ಕಾರ್ಯಕ್ರಮ ಇದ್ದು, ಗಣೇಶನನ್ನು ಕೂಡಿಸಿದಂತಹ ಶ್ರೀ ವಿನಾಯಕ ಯುವಕ ಸಂಘ ಚಿಕ್ಕಜಂತಕಲ್ ಇವರು ಸಂಜೆ 6:30 ಗಂಟೆಯಿಂದ ದಿ:- 26-09-2016 ರ 00:30 ಎ.ಎಂ.ವರೆಗೆ ಬಸವಣ್ಣ ದೇವಸ್ಥಾನದಿಂದ ಟ್ರ್ಯಾಕ್ಟರ ನಂ: ಕೆ.ಎ-35/ 721 ರಲ್ಲಿ ಧ್ವನಿವರ್ಧಕಗಳನ್ನು (ಡಿ.ಜೆ.) ಅಳವಡಿಸಿಕೊಂಡು ಹಾಡುಗಳನ್ನು ಹಾಕಿಕೊಂಡು ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮುಖೇನಾ ಚಿಕ್ಕಜಂತಕಲ್ ತುಂಗಭದ್ರ ನದಿಗೆ ತೆಗೆದುಕೊಂಡು ಹೋಗಿ ಗಣೇಶ ವಿಸರ್ಜನೆ ಮಾಡಿರುತ್ತಾರೆ.  ಆದರೆ ಈ ಸಮಯದಲ್ಲಿ ವಿನಾಯಕ ಯುವಕ ಸಂಘದ ಪ್ರಮುಖ ಆಯೋಜಕರಾದ (1) ಶಿವರಾಜ ತಂದೆ ವೆಂಕಟಪ್ಪ ಪೂಜಾರ, ಜಾತಿ: ನೇಕಾರ ವಯಸ್ಸು 28 ವರ್ಷ, ಉ: ಒಕ್ಕಲುತನ ಸಾ: ಚಿಕ್ಕಜಂತಕಲ್ ಹಾಗೂ ಇತರೆ 9 ಜನರು ಧ್ವನಿವರ್ಧಕವನ್ನು ಉಪಯೋಗಿಸಲು ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ ಟ್ರ್ಯಾಕ್ಟರನಲ್ಲಿ ಧ್ವನಿವರ್ಧಕಗಳನ್ನು (ಡಿ.ಜೆ) ಅಳವಡಿಸಿಕೊಂಡು ರಾತ್ರಿ 10:00 ಗಂಟೆಯ ನಂತರವೂ ಸಹ ಸಾರ್ವಜನಿಕರಿಗೆ ಕಿರುಕುಳ ಉಂಟಾಗುವ ರೀತಿಯಲ್ಲಿ ಹೆಚ್ಚಿನ ಶಬ್ದದಲ್ಲಿ ಹಾಡುಗಳನ್ನು ಹಾಕಿಕೊಂಡು ಮೆರವಣಿಗೆ ಮಾಡಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿರುತ್ತಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 255/2016 ಕಲಂ: 435 ಐ.ಪಿ.ಸಿ:

ದಿನಾಂಕ: 28-09-2016 ರಂದು ಮದ್ಯಾಹ್ನ 12-30  ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಘನವಂತಪ್ಪ ತೋಟದ ವಯಾ: 36 ವರ್ಷ ಸಾ: ಹಿರೇಮನ್ನಾಪೂರ ರವರು ಫಿರ್ಯಾಧಿಯನ್ನು ನೀಡಿದ್ದು ಹಿರೇಮನ್ನಾಪೂರ ಗ್ರಾಮದ ತನ್ನ ಮಾಲಿಕತ್ವದ ಜಮೀನು ಸರ್ವೆ ನಂ: 283/1 ರಲ್ಲಿ ಸಜ್ಜೆ ಬೆಳೆಯನ್ನು ಬೆಳೆದು ನಂತರ ಕಟಾವು ಮಾಡಿ ಒಂದು ಗೂಡನ್ನು ಹಾಕಲಾಗಿತ್ತು. ದಿನಾಂಕ: 27-09-2016 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಆರೋಪಿತರು ದುರುದ್ದೇಶದಿಂದ ಸದರಿ ಸಜ್ಜೆ ಗೂಡನ್ನು ಬೆಂಕಿ ಹಚ್ಚಿ ಸುಟ್ಟಿರುತ್ತಾರೆ. ಸದರಿ ಗೂಡಿನ  ಅಂದಾಜು ಕಿಮ್ಮತ್ತು 50,000=00 ರೂ ಗಳಾಗಬಹುದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

Tuesday, September 27, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 197/2016 ಕಲಂ: 143, 147, 148, 323, 324, 504, 506 ಸಹಿತ 149 ಐ.ಪಿ.ಸಿ:
ದಿನಾಂಕ 26-09-2016 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ಪಿರ್ಯಾಧಿದಾರರು ತಮ್ಮೊಂದಿಗೆ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಬಸವರಾಜ ಹಳ್ಳಿ ಹಾಗೂ ಇತರೆ ಕಾರ್ಯಕರ್ತರೊಂದಿಗೆ ಕಲ್ಯಾಣಿ ಸ್ಟೀಲ್ ಪ್ಯಾಕ್ಟರಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ಯಾಕ್ಟರಿಯ 1ನೇ ಗೇಟ್ ಮುಂದುಗಡೆ ಧರಣಿ ಕುಳಿತುಕೊಂಡಿದ್ದಾಗ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ಪಿರ್ಯಾಧಿ ಹಾಗೂ ಅವರ ಸಂಘಟನೆಯವರೊಂದಿಗೆ  ಜಗಳ ತೆಗೆದು ಕೈಯಿಂದ, ಕಟ್ಟಿಗೆಯಿಂದ ಹೊಡಿ ಬಡಿ ಮಾಡಿ ಜೀವದ ಬೆದರಿಕೆ ಹಾಕಿದ್ದು ಇದರಿಂದ ಪಿರ್ಯಾಧಿ ವಿಜಯಕುಮಾರ ಹಾಗೂ ಬಸವರಾಜ ಹಳ್ಳಿ ಇವರು ಧುಖಾಃಪಾತಗೊಂಡಿದ್ದು ಇರುತ್ತದೆ.  ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 198/2016 ಕಲಂ: 143, 341, 323, 504, 506 ಸಹಿತ 149 ಐ.ಪಿ.ಸಿ:
ದಿನಾಂಕ-26.09.2016 ರಂದು ಬೆಳೆಗ್ಗೆ 10.00 ಗಂಟೆಯ ಸುಮಾರಿಗೆ ರಕ್ಷಣ ವೇದಿಕೆ ಅಧ್ಯಕ್ಷರಾದ ವಿಜಯಕುಮಾರ ಮತ್ತು ಸಂಗಡಿಗರು ಪ್ರತಿದಿನ ಕಲ್ಯಾಣಿ ಕಂಪನಿಗೆ ಹೋಗುವ ಕೂಲಿ ಕಾರ್ಮಿಕರನ್ನು ಕಲ್ಯಾಣಿ ಸ್ಟೀಲ್  ಫ್ಯಾಕ್ಟರಿಯ 1 ನೇ ಗೇಟ್ ಹತ್ತಿರ ತಡೆದು ಒಳಗಡೆ ಕೆಲಸಕ್ಕೆ ಬಿಡದೇ ನಿಲ್ಲಿಸಿದಾಗ ಫಿರ್ಯಾದಿದಾರರು ಮತ್ತು ಇತರರು ರಕ್ಷಣಾ ವೇದಿಕೆಯ ಅಧ್ಯಕ್ಷ ವಿಜಯ ಕುಮಾರ ಈತನನ್ನು ಕರೆದು ಸಮಸ್ಯೆ ಬಗ್ಗೆ ಮಾತನಾಡೋಣ ಅಂತಾ ಕರೆದಾಗ ವಿಜಯಕಮಾರ ಈತನು ಕೇಳದಿದ್ದಾಗ  ಫಿರ್ಯಾದಿದಾರರು ಲೇಬರಗಳನ್ನು ಕಂಪನಿಯ ಒಳಗಡೆ ಬಿಡಿಸಲು ಹೋದಾಗ ರಕ್ಷಣ ವೇದಿಕೆ ಅಧ್ಯಕ್ಷರಾದ ವಿಜಯಕುಮಾರ ಮತ್ತು ಆತನ ಸಂಘಟೆಯ ಕಾರ್ಯಕರ್ತರು ಗುಂಪುಕಟ್ಟಿಕೊಂಡ ಪಿರ್ಯಾದಿದಾರರಿಗೆ ಮತ್ತು ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ  ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 199/2016 ಕಲಂ: 143, 341, 323, 504, 506 ಸಹಿತ 149 ಐ.ಪಿ.ಸಿ:
ದಿ:26-09-2016 ರಂದು ಮಧ್ಯಾನ್ಹ 1-45 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ಆರೋಪಿತರಾದ ವಿಜಯಕುಮಾರ ಹಾಗೂ ಇತರೆ 25-30 ಜನ ಕರವೇ ಕಾರ್ಯಕರ್ತರು ಕೂಡಿಕೊಂಡು ಕಲ್ಯಾಣಿ ಪ್ಯಾಕ್ಟರಿಯ ಮೊದಲನೇ ಗೇಟ್ ಮುಂದೆ ಪ್ಯಾಕ್ಟರಿಯವರಿಗೆ ಯಾವದೇ ಮಾಹಿತಿಯನ್ನು ನೀಡದೇ ಪ್ಯಾಕ್ಟರಿಯ ಧ್ವಾರ ಬಾಗಿಲನ್ನು ಬಂದ್ ಮಾಡಿ ಕಾರ್ಮಿಕರನ್ನು ತಡೆದು ನಿಲ್ಲಿಸಿ  ಪಿರ್ಯಾಧಿ ಹಾಗೂ ಕಂಪನಿಯವರ ಮೇಲೆ ಅವಾಚ್ಯವಾಗಿ ಬೈದಾಡುತ್ತಾ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 252/2016 ಕಲಂ: 379 ಐ.ಪಿ.ಸಿ:
ಮಾನಪ್ಪ ತಂದೆ ಭೀಮಪ್ಪ ಫಿರ್ಯಾದಿದಾರರು ತಮ್ಮ ವ್ಯಯಕ್ತಿಕ ಕೆಲಸದ ನಿಮಿತ್ಯ ಒಂದು ಹಿರೋ ಹೆಚ್.ಎಫ್.ಡಿಲಕ್ಸ ಮೋ.ಸೈ ನಂ: ಕೆ.ಎ-29/ಡಬ್ಲೂ-2189 ನೇದ್ದನ್ನು ತೆಗೆದುಕೊಂಡಿದ್ದು ಸದರಿ ಮೋ.ಸೈ ನೇದ್ದನ್ನು ತಮ್ಮ ಸಂಬಂಧಿಕರಾದ ಬಸವರಾಜ  ದಿನಾಂಕ: 12-09-2016 ರಂದು ಕೊರ್ಟನಲ್ಲಿ ತನ್ನ ವ್ಯಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಬಂದು ಸದರಿ ಮೋ.ಸೈ ನ್ನು ಬಸವೇಶ್ವರ ಸರ್ಕಲ್ ಹತ್ತಿರ ಇರುವ ವಿನಾಯಕ ರಾಧಾ ಜ್ಯೂವೆಲರ್ ಅಂಗಡಿಯ ಮುಂದೆ ನಿಲ್ಲಿಸಿ ವಾಪಾಸ್ ತನ್ನ ಕೆಲಸ ಮುಗಿಸಿಕೊಂಡು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಬಂದು ನೋಡಲಾಗಿ ನನ್ನ ಮೋ.ಸೈ ಇರುವದಿಲ್ಲ ಅಂತಾ ತಿಳಿಸಿದ್ದು, ನಂತರ ನಾವು ಸದರಿ ಮೋ.ಸೈನ್ನು ಇಲ್ಲಿಯವರೆಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ನನ್ನ ಮೋ.ಸೈ ಸಿಕ್ಕಿರುವದಿಲ್ಲ. ಕಾರಣ ನನ್ನ ಮೋ.ಸೈ ನಂ: ಕೆ.ಎ-29/ಡಬ್ಲೂ-2189  ಇಂಜಿನ್ ನಂ: HA11EFC9L16004 ಮತ್ತು ಚೆಸ್ಸಿ ನಂ: MBLHA11EWC9L06681 ನೇದ್ದು ಇದರ ಅಂದಾಜು 25,000=00 ರೂ. ಕಿಮ್ಮತ್ತಿನ ಮೋ.ಸೈ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 253/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ: 26-09-2016 ರಂದು ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿಕರಾದ ಶರಣಪ್ಪ ತಂದೆ ರುದ್ರಪ್ಪ ತುಮ್ಮರಗುದ್ದಿ ಇವರು ಪೋನ್ ಮಾಡಿ ತಿಳಿಸಿದ್ದೇನೆಂದರೆ ನಿಮ್ಮ ಅಣ್ಣನಾದ ಬಸವರಾಜನು ಕುಷ್ಟಗಿಯಿಂದ ಕುರುಬನಾಳಗೆ ಬರುತ್ತಿರುವಾಗ ನಮ್ಮೂರ ಕ್ರಾಸ್ ಹತ್ತಿರ ರಾತ್ರಿ 7-00 ಗಂಟೆಯ ಸುಮಾರಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ಆತನಿಗೆ ಟಕ್ಕರ ಕೊಟ್ಟು ನಿಲ್ಲಿಸದೇ ಹೋಗಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಣ್ಣನಾದ ಬಸವರಾಜ ಇತನಿಗೆ ಅಪಘಾತವಾಗಿದ್ದು ನಿಜವಿದ್ದು ಆತನಿಗೆ ಬಲಗೈ ರಟ್ಟೆಯ ಹತ್ತಿರ ಮುರಿದಂತಾಗಿದ್ದು, ಹಣೆಯ ಎಡಗಡೆ ಭಾಗದಲ್ಲಿ ತೆರಚಿದ ಗಾಯ, ಮೂಗಿಗೆ ತೆರಚಿದ ಗಾಯ, ಎಡಗೈ ಮುಂಗೈಗೆ ತೆರಚಿದ ಗಾಯ, ಎಡಗಾಲು ಹೆಬ್ಬೆರಳಿಗೆ, ಬಲಗೈ ಮುಂಗೈಗೆ ತೆರಚಿದ ಗಾಯವಾಗಿದ್ದು  ಆತನು ನಡೆಸುತ್ತಿದ್ದ ಮೋ.ಸೈ ಹಿರೋ ಸ್ಪ್ಲೇಂಡರ್ ಪ್ಲಸ್ ನಂ: ಕೆ.ಎ-37/ವಿ-2184 ಅಂತಾ ಇದ್ದು ನಂತರ ನಾನು ಮತ್ತು ಶರಣಪ್ಪ ಇಬ್ಬರೂ ಕೂಡಿ 108 ಅಂಬುಲೇನ್ಸಗೆ ಕರೆಯಿಸಿ ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Monday, September 26, 2016

A murder case detected in Yelburga PS1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 159/2016 ಕಲಂ: 87 Karnataka Police Act:.
ದಿನಾಂಕ: 25-09-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಿನ್ನಾಳ ರಸ್ತೆಯ ಪ್ರಮೋದ ಕಲ್ಯಾಣ ಮಂಟಪದ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  09 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಕೊಪ್ಪಳ ನಗರ ಠಾಣೆ ರವರು  ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  13730=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾಗವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 282/2016 ಕಲಂ 279, 337, 338 ಐಪಿಸಿ:.
ದಿನಾಂಕ. 25-09-2016 ರಂದು 4-00 ಪಿ.ಎಂ.ಕ್ಕೆ ಫಿರ್ಯಾದಿ ಯಮನಪ್ಪ ತಂ/ ಹನಮಂತ ಮೂಗನೂರ ವಯಾ 31 ವರ್ಷ, ಜಾ. ಕುರುಬರು ಉ. ಕಟ್ಟಿಗೆ ವ್ಯಾಪಾರ ಸಾ. ಬಸಾಪಟ್ಟಣ ತಾ. ಗಂಗಾವತಿರವರು ತಮ್ಮ ಮಗ ವಿರೇಶ ವಯಾ 10 ವರ್ಷ ಇಬ್ಬರು ಚಿಕ್ಕಬೆಣಕಲ್ ದಿಂದ ಹಿರೇ ಬೆಣಕಲ್ ಗೆ ನಡೆದುಕೊಂಡು ಬರುತ್ತಿರುವಾಗ ಚಿಕ್ಕ ಬೆಣಕಲ್ ಹಿರೇ ಬೆಣಕಲ್ ರಸ್ತೆಯ ನಡುವೆ ಗಾಳೆಮ್ಮ ಗುಡಿ ಹತ್ತಿರ ಹಿಂದಿನಿಂದ ಮೋಟಾರ ಸೈಕಲ್ ನಂ. ಕೆ.ಎ.37/ವೈ.8318 ನೇದ್ದರ ಚಾಲಕ ವಿರೇಶ ತಂ/ ಪಕೀರಪ್ಪ ಗಿಣಿಗೇರಾ ಈತನು ತನ್ನ ಹೆಂಡತಿ ಉಮಾದೇವಿ ಇವರನ್ನು ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಅಡ್ಡಾದಿಡ್ಡ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಫಿರ್ಯಾದಿ ಮಗ ವಿರೇಶನಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಮೋಟಾರ ಸೈಕಲ್ ನಿಯಂತ್ರಣ ಮಾಡಲು ಆಗದೆ ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ಫಿರ್ಯಾದಿ ಮಗನಿಗೆ ಮೋಟಾರ ಸೈಕಲ ಚಾಲಕ ವಿರೇಶನಿಗೆ ಗಾಯಗಳಾಗಿದ್ದು ವಿರೇಶನ ಹೆಂಡತಿ ಉಮಾದೇವಿ ಇವರಿಗೆ ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಎಡಕಿವಿಯಿಂದ ಸ್ವಲ್ಪ ರಕ್ತ ಬಂದು ಮೂರ್ಚೆ ಹೋಗಿರುತ್ತಾಳೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 251/2016 ಕಲಂ 279,337,338,427 .ಪಿ.ಸಿ..

ದಿನಾಂಕ:25-09-2016 ಮುಂಜಾನೆ 09-00 ಗಂಟೆಯ ಸುಮಾರಿಗೆ ಫಿರ್ಯಾಧಿಯಾದ ನಾನು ಭೀಮಪ್ಪ ತಂದೆ ಹನುಮಪ್ಪ ಬಳೂಟಗಿ ಸಾ:ಗೂಡೂರ ನಮ್ಮ ಅಳಿಯನಾದ ಪ್ರಕಾಶ ತಂದೆ ರಾಮಣ್ಣ ಹೊಸಮನಿ ಇಬ್ಬರೂ ಕೂಡಿ ನಮ್ಮ ಅಳಿಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-29 ವ್ಹಿ-7527 ನೇದ್ದನ್ನು ತೆಗೆದುಕೊಂಡು ನಮ್ಮ ವಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಹೊರಟು ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಮದ್ಯಾಹ್ನದವರೆಗೆ ನಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸ ಗೂಡೂರಗೆ ಹೋಗಲು ಕುಷ್ಟಗಿ-ಹನಮಸಾಗರ ರಸ್ತೆಯ ಮೇಲೆ ಹೋಗುತ್ತಿರುವಾಗ ಮದ್ಯಾಹ್ನ 04-00 ಗಂಟೆಯ ಸುಮಾರಿಗೆ ತಳವಗೇರಾ ಸೀಮಾದಲ್ಲಿ ತಳವಗೇರಾ ಇನ್ನೂ 1 ಕಿ.ಮೀ ದೂರ ಇರುವಾಗ್ಗೆ ನಮ್ಮ ಮೋಟಾರ ಸೈಕಲನ್ನು ನಡೆಯಿಸುತ್ತಿದ್ದ ನಮ್ಮ ಅಳಿಯ ಪ್ರಕಾಶ ಇತನು ಮೋಟಾರ ಸೈಕಲನ್ನ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಮುಂದೆ ಎಡಗಡೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ಎಮ್ಮಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೋಟಾರ ಸಮೇತ ಎಡಗಡೆ ಬಿದ್ದಿದ್ದು ಗಾಯ ಮಾಡಿಕೊಂಡಿದ್ದು ಎಮ್ಮಿಗೆ ಬಲಗಾಲು ಹಿಂಗಾಲು ಮುರಿದಂತಾಗಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Sunday, September 25, 2016

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ: 87 Karnataka Police Act:.
ದಿನಾಂಕ 23-09-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದಲ್ಲಿ ಸ್ಮಶಾನದ ಹತ್ತಿರ ಇರುವ ಖಾಲಿ ಜಾಗೆಯಲ್ಲಿ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ ಒಬ್ಬನು ಸಿಕ್ಕಿಬಿದ್ದಿದ್ದು ಇನ್ನೂಳಿದ 3 ಜನರು ಓಡಿ ಹೋಗಿದ್ದು ಇರುತ್ತದೆ ಸಿಕ್ಕಿ ಬಿದ್ದ ಆರೋಪಿತನಿಂದ ಹಾಗೂ ಪಣಕ್ಕೆ ಅಂತಾ ಹಚ್ಚಿದ ಕಣದಲ್ಲಿದ್ದ ಹಣ ಸೇರಿ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 500/-ರೂ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಜಪ್ತಿ ಪಂಚನಾಮೆಯೊಂದಿಗೆ ಪಿಎಸ್ಐ ರವರು ತಮ್ಮ ವರದಿ ಸಲ್ಲಿಸಿದ್ದರಿಂದ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78(3) Karnataka Police Act:.

ದಿನಾಂಕ: 23-09-2016 ರಂದು 7-00 ಪಿ.ಎಂ. ಕ್ಕೆ ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಸಾವರ್ಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆಂದು ವಂಚನೆ ಮಾಡಿ ಅವರನ್ನು ಮೋಸಗೊಳಿಸಿ ಅವರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿರುವಾಗ ದಾಳಿ ಮಾಡಿ ಹಿಡಿದಿದ್ದು, ದಾಳಿ ಕಾಲಕ್ಕೆ ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು, ಒಬ್ಬ ಆರೋಪಿತನು ಓಡಿ ಹೋಗಿರುತ್ತಾನೆ.  ಸಿಕ್ಕಿ ಬಿದ್ದವರ ಹತ್ತಿರ 5130 ರೂ. ನಗದು ಹಣ ಮತ್ತು 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳು ಸಿಕ್ಕಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

 
Will Smith Visitors
Since 01/02/2008