Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, February 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 420 ಸಹಿತ 34 ಐ.ಪಿ.ಸಿ:.
ನನಗೆ ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಶ್ರೀಮತಿ ಪ್ರೇಮಾ ಗಂಡ ಪ್ರಭಾಕರ ಪುಡೂರು ಇವರ ಪರಿಚಯವಾಗಿದ್ದು ಸದರಿಯವರು ಕುಷ್ಟಗಿಯಲ್ಲಿ ಶಾಂತಲ ಗ್ರಾಮೀಣ ಶಿಕ್ಷಣ ಅಭಿವೃದ್ದಿ ಸಂಸ್ಥೆ ಎನ್.ಜಿ.ಓ ದ ಅದ್ಯಕ್ಷರಾಗಿದ್ದು ಕೆಲಸ ಮಾಡಿಕೊಂಡಿದ್ದು ಸದರಿಯವರು ನನಗೆ ಹುಬ್ಬಳ್ಳಿಯ ಮದರ್ ಎನ್.ಜಿ.ಓ ದ ಸುರೇಶ ಕುಮಾರ ಪೆನ್ ಡಂ ರಾಜ್ಯಾಧ್ಯಕ್ಷರು ಕುಬೇರಾ ಮ.ಕೋ.ಆ.ಸೋ , ಇವರನ್ನು ಪರಿಚಯ ಮಾಡಿಸಿದರು. ಸದರಿ ಸುರೇಶ ಕುಮಾರ ಪೆನ್ ಡಂ ಇವರು ನಮ್ಮದು ಕುಬೇರ ಮಲ್ಟಿ ಪರ್ಪಸ್ ಕೋಆಪರೇಟಿವ್ ಸೋಸೈಟಿ ಮೇನ್ ಬ್ರಾಚ್ ಹುಬ್ಬಳ್ಳಿಯಲ್ಲಿ ಇದ್ದು ನಿಮಗೆ ಗಂಗಾವತಿ ನಗರದಲ್ಲಿ ಕುಬೇರ ಮಲ್ಟಿ ಪರ್ಪಸ್ ಕೋಆಪರೇಟಿವ್ ಸೋಸೈಟಿಯ ಸಬ್ ಬ್ರಾಚ್ ಅನುಮತಿಯನ್ನು ಕೊಡಿಸುತ್ತೇನೆ ಅದಕ್ಕೆ ನೀವು ರೂ 5,00,000-00 ಗಳನ್ನು ಪಾವತಿಸಿದರೆ ನಿಮಗೆ ಒಂದು ತಿಂಗಳಲ್ಲಿ ಶಾಖೆಗೆ ಅನುಮತಿ ನೀಡಿ ವ್ಯವಹಾರಕ್ಕಾಗಿ ರೂ.10,00,000-00 ಹಣವನ್ನು ಕೊಡಿಸುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಅವರ ಶಾಖೆಯ ಶ್ರೀ ಗುರುಮೂರ್ತಿ ದಾವಣಗೆರೆ, ಸಂಸ್ಥಾಪಕರು ಕುಬೇರಾ ಮ.ಕೋ.ಆ.ಸೋ, ಶ್ರೀ ಫ್ರಾಂಕ್ಲಿನ್ ದಲಬಂಜನ, ನಿದೇರ್ಶಕರು ಮದರ್ ಎನ್.ಜಿ.ಓ ಹುಬ್ಬಳ್ಳಿ, ಶ್ರೀಮತಿ ಫಿಲೋಮಿನಾ ಪೆನ್ ಡಂ, ಅಧ್ಯಕ್ಷರು ಕುಬೇರಾ ಮ.ಕೋ.ಆ.ಸೋ ಹುಬ್ಬಳ್ಳಿಶಾಖೆ ಇವರ ಪರಿಚಯವನ್ನು ಮಾಡಿಕೊಟ್ಟರು. ಆಗ ಗುರುಮೂರ್ತಿ ದಾವಣಗೆರೆ ಈತನು ಅಕೌಂಟ್ ನಂಬರ್ 061305003694 ನೇದ್ದನ್ನು ಹಾಗೂ ಇನ್ನೊಂದು ಅಕೌಂಟ್ ನಂಬರ್ ನೀಡಿದ್ದು ಸದರಿ ಅಕೌಂಟ್ ನಂಬರಗಳಿಗೆ ನೀವು ಹಣವನ್ನು ಪಾವತಿಸಿದರೆ ನಿಮಗೆ  ಕುಬೇರಾ ಮ.ಕೋ.ಆ.ಸೋ ಯ ಗಂಗಾವತಿಯಲ್ಲಿ ಸಬ್ ಬ್ರಾಂಚ್ ತರೆಯಲು ಅನುಮತಿಯನ್ನು ಕೊಡಿಸುತ್ತೇನೆ ಅಂತಾ ತಿಳಿಸಿದ್ದು ಇರುತ್ತದೆ. ಶ್ರೀ ಗುರುಮೂರ್ತಿ ಅವರ ಮಾತಿನಂತೆ ನಾನು ಹಾಗೂ ಶ್ರೀಮತಿ ಭಾರತಿ ಗಂಡ ಕೃಷ್ಣ ಸಾ: ಹೆಚ್.ಆರ್.ಎಸ್. ಕಾಲೋನಿ ಗಂಗಾವತಿ, ಶ್ರೀಮತಿ ಭುವನೇಶ್ವರಿ ಗಂಡ ದೊಡ್ಡಬಸಪ್ಪ ಸಾ: ಬಸಪಟ್ಟಣ, ತಾ: ಗಂಗಾವತಿ, ಶ್ರೀ ಕೃಷ್ಣ ತಂದೆ ಸಣ್ಣಭೋಗಪ್ಪ, ಸಾ: ಹೆಚ್.ಆರ್ ಎಸ್ ಕಾಲೋನಿ ಗಂಗಾವತಿ ಎಲ್ಲರೂ ಕೂಡಿಕೊಂಡು ಗುರುಮೂರ್ತಿ ರವರ ನೀಡಿದ ಅಕೌಂಟ್ ನಂಬರಗೆ 061305003694 ನೇದ್ದಕ್ಕೆ ದಿನಾಂಕ 09-06-2014 ರಂದು ರೂ.4,60,000-00, ಮತ್ತು ಅದೇ ದಿನ ಅದೇ ಅಕೌಂಟಿಗೆ ರೂ.40,000-00 ಗಳನ್ನು ಪಾವತಿಸಿದ್ದು ಮತ್ತು ದಿನಾಂಕ 28-06-2014 ರಂದು ರೂ 25,040-00 ಗಳನ್ನು ಪಾವತಿಸಿದ್ದು ಮತ್ತು ಇನ್ನೊಂದು ಖಾತೆಗೆ ದಿನಾಂಕ  18-10-2014 ರಂದು ರೂ. 15,000-00 ಗಳನ್ನು, ಹಾಗೂ ಅದೇ ಖಾತೆಗೆ ದಿನಾಂಕ 25-10-2014 ರಂದು ರೂ 4,000-00 ಗಳನ್ನು ಪಾವತಿಸಿದ್ದು ಇರುತ್ತದೆ. ಈ ಎರಡು ಖಾತೆಗಳಿಗೆ ಪಾವತಿಸಿದ ಒಟ್ಟು ಹಣ ರೂ. 5,44,040-00 ರೂ ಗಳನ್ನು ಪಾವತಿಸಿದ್ದು ಒಟ್ಟು ಹಣದಲ್ಲಿ ನಾವೆಲ್ಲರೂ ಸಮನಾಗಿ ಹಣ ಹಾಕಿದ್ದು ಇರುತ್ತದೆ. ನಂತರ ನಾವು ಗಂಗಾವತಿ ನಗರದಲ್ಲಿ ಒಂದು ಕಟ್ಟಡವನ್ನು ಬಾಡಿಗೆ ತೆಗೆದುಕೊಂಡು ಸುಮಾರು ರೂ. 5,00,000-00 ಗಳ ಬ್ಯಾಂಕಿಗೆ ಬೇಕಾಗುವಂತಹ ಸಲಕರಣೆಗಳನ್ನು ಖರೀದಿಸಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಗುರುಮೂರ್ತಿ, ಸುರೇಶ ಕುಮಾರ ಪೆನ್ ಡಂ, ಶ್ರೀ ಫ್ರಾಂಕ್ಲಿನ್ ದಲಬಂಜನ ಶ್ರೀಮತಿ ಫಿಲೋಮಿನಾ ಪೆನ್ ಡಂ ರವರು ನಮಗೆ ಕುಬೇರ ಮ.ಕೋ.ಆ.ಸೋ ಸಬ್ ಬ್ರಾಂಚ್ ತೆರೆಯಲು ಅನುಮತಿ ನೀಡಿರುವುದಿಲ್ಲ. ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 49/2015 ಕಲಂ 420 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. 279, 338 ಐ.ಪಿ.ಸಿ:
ಇಂದು ದಿನಾಂಕ: 27-02-2015 ರಂದು ರಾತ್ರಿ 10.45 ಗಂಟೆಗೆ ಫೀರ್ಯಾದಿ ಶ್ರೀ ಹುಸೇನಭಾಷ ತಂದೆ ದಾವಲಸಾಬ ವಚಿಾ|| 21 ವರ್ಷ ಜಾತಿ|| ಮುಸ್ಲಿಂ ಉ|| ಕೂಲಿ ಕೇಲಸ ಸಾ|| ಅಮರ ಭಗತಸಿಂಗ ನಗರ ಗಂಗಾವತಿ ಇವರು ಠಾಣೇಗೆ ಹಾಜರಾಗಿ ಒಂದು ಲಿಖಿತ  ದೂರು ಸಲ್ಲಿಸಿದ್ದು ಎನೆಂದರೆ, ನಾನು ಇಂದು ದಿನಾಂಕ 27-02-2015 ರಂದು ಸಾಯಂಕಾಲ 6.45 ಗಂಟೆ ಸುಮಾರಿಗೆ ಗಂಗಾವತಿ ನಗರದ ಕಂಪ್ಲಿ ವೃತ್ತದಲ್ಲಿ ಸಿ.ಕೆ ಅಶ್ರಪ್ ರವರ ಕಿರಾಣಿ ಅಂಗಡಿಯ ಮುಂದೆ ನಿಂತಾಗ ಒಂದು ಹುಡುಗನು, ಗುಂಡಮ್ಮ ಕ್ಯಾಂಪ್ ಕಡೆಯಿಂದ ತನ್ನ ಸೈಕಲ್ ನಡೆಸಿಕೊಂಡು ಕಂಪ್ಲಿ ಸರ್ಕಲನಲ್ಲಿ ಹೊಗುತ್ತಿದ್ದನು, ಅದೆ ವೇಳೆಗೆ ಒಂದು ಟ್ರ್ಯಾಕ್ಟರ ರಾಯಚೂರು ರಸ್ತೆಕಡೆಯಿಂದ, ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಆ ಹುಡುಗನ ಸೈಕಲ್ಗೆ ಹಿಂದಿನಿಂದ ಬಲವಾಗಿ ಠಕ್ಕರಕೊಟ್ಟಿತು. ಆಗ ಹುಡುಗನು, ಸೈಕಲ್ನಿಂದ ಕೇಳಗೆ ಬಿದ್ದಿದ್ದು, ತಕ್ಷಣವೇ ನಾನು ಹಾಗು ಇತರರು ಹೊಗಿ ನೋಡಲಾಗಿ, ಸದರಿ ಹುಡುಗನ ತಲೆಗೆ ಭಾರಿ ಪೆಟ್ಟಾಗಿ ರಕ್ತ ಬಂದಿತ್ತು, ಮುಂದೆನಿಂತ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ 33 ಟಿ.ಎ-2485 ಟ್ರ್ಯಾಲಿ ನಂ ಕೆ.ಎ - 37 J 5106 ಅಂತಾ ಇದ್ದು, ಅದರ ಟ್ರ್ಯಾಲಿಯಲ್ಲಿ ಉಸುಕಿನ ಲೋಡ್ ಇತ್ತು, ಆ ಟ್ರ್ಯಾಕ್ಟರನ ಡ್ರೈವರ್ ಹೆಸರು ವಿಚಾರಿಸಲಾಗಿ ಖಾಸಿಂಸಾಬ ತಂದೆ ನಬಿಸಾಬ ಸಾ|| ಸಂಗಾಪೂರ ಅಂತಾ ತಿಳಿಸಿದನು. ಆಗ ಗಾಯಗೊಂಡಿದ್ದ ಹುಡುಗನನ್ನು, ನಾನು ಮತ್ತು ಸಾರ್ವಜನಿಕರು ಕೂಡಿಕೊಂಡು, ಅಲ್ಲಿಯೆ ಇದ್ದ, ಒಂದು ಆಟೋದಲ್ಲಿ, ಹಾಕಿಕೊಂಡು ಡಾ|| ಮಲ್ಲನಗೌಡ ಆಸ್ಪತ್ರೆಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಗಾಯಗೊಂಡ ಹುಡುಗನ ಹೆಸರು ವಿಚಾರಿಸಲಾಗಿ, ಅವನ ಹೆಸರು ಹಮೀದ ಪಾಶ ತಂದೆ ಶೇಖ್ ಇಬ್ರಾಹಿಂ ಪಾಶಾ ವಯಾ|| 11 ವರ್ಷ ಸಾ|| ಜುಲಾಯಿನಗರ ಅಂತಾ ಗೊತ್ತಾಯಿತು. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಖಾಸಿಂಸಾಬ ತಂದೆ ನಬಿಸಾಬ ಇತನು ತನ್ನ ಟ್ರ್ಯಾಕ್ಟರ ಕೆ.ಎ 33 ಟಿ.ಎ-2485 ಟ್ರ್ಯಾಲಿ ನಂ ಕೆ.ಎ – 37 J 5106 ನೇದ್ದನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ, ರಾಯಚೂರ ರಸ್ತೆ ಕಡೆಯಿಂದ ಚಲಾಯಿಸಿಕೊಂಡು ಬಂದು, ಮುಂದೆ ಹೊರಟಿದ್ದ ಸೈಕಲ ಚಾಲಕ ಹಮೀದ ಪಾಶ ತಂದೆ ಶೇಖ್ ಇಬ್ರಾಹಿಂ ಪಾಶಾ ಇತನಿಗೆ ಹಿಂದಿನಿಂದ ಠಕ್ಕರಕೊಟ್ಟು ತಲೆಗೆ ಭಾರಿ ರಕ್ತಗಾಯ ಮಾಡಿದವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಸದರಿ ದೂರನ್ನು ನಮ್ಮ ಹಿರಿಯರೋಂದಿಗೆ ಮತ್ತು ಗಾಯಾಳುವನ ಸಂಬಂದಿಕರೊಂದಿಗೆ ಚರ್ಚಿಸಿ ನಂತರ ಬಂದು ನೀಡಿರುತ್ತೆನೆ ಅಂತಾ ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ 10/2015 ಕಲಂ 279, 338 ಭಾರತೀಯ ದಂಢ ಸಂಹಿತೆ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
3)  ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 4/2015 ಕಲಂ. 174 ಸಿ.ಆರ್.ಪಿ.ಸಿ:.

ಮೃತಳಿಗೆ ಆಗಾಗ ಹೊಟ್ಟೆನೋವು ಬರುತ್ತಿದ್ದು ಸಾಕಷ್ಟು ಬಾರಿ ಖಾಸಗಿಯಾಗಿ ತೋರಿಸಿದರು ಸಹ ಗುಣಮುಖವಾಗಿರಲಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ದಿನಾಂಕ: 27-02-2015 ಬೆಳಿಗ್ಗೆ 05-00 ಸುಮಾರಿಗೆ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದು ಇಲಾಜು ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿಂದ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಇಲಾಜು ಫಸಿಸದೇ ಇಂದು ದಿನಾಂಕ: 27-02-2015 ರಂದು ಮದ್ಯಾಹ್ನ 2-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮರಣದಲ್ಲಿ ಯಾರ ಮೇಲೆ ಯಾವದೇ ಸಂಶಯ ದೂರು ವಗೈರೆ ಇರುವದಿಲ್ಲ. ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶವಿರುತ್ತದೆ.

Friday, February 27, 2015

Robbery Case Detected.




ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 40/2015 ಕಲಂ. 498(ಎ), 506, 507, 509 ಸಹಿತ 34 ಐ.ಪಿ.ಸಿ ಹಾಗೂ 3 & 4 ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು 66-ಎ ಐ.ಟಿ. ಕಾಯ್ದೆ:  
ದಿ:26-02-2015 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಪೂರ್ಣಿಮಾ ಗಂಡ ಅಂಕಿತಕುಮಾರ ಸಾ: ಬೆಂಗಳೂರ ಹಾವ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ನನ್ನ ತಂದೆ-ತಾಯಿಯವರು ನನ್ನನ್ನು ಕಳೆದ ದಿ:15-09-2013 ರಂದು ಬೆಂಗಳೂರ ಚಾಮರಾಜಪೇಟೆ ನಿವಾಸಿ ಅಂಕಿತಕುಮಾರ ಎಂಬುವವರಿಗೆ ಗುರುಹಿರಿಯರ ಸಮಕ್ಷಮ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಸುಮಾರು 02 ತಿಂಗಳ ನಂತರ ನನ್ನ ಗಂಡ ಅಂಕಿತಕುಮಾರ ಇವರು ನನಗೆ ಸರಿಯಾಗಿ ನೋಡಿಕೊಳ್ಳದೇ ನಿಮ್ಮ ತಂದೆ ತಹಶೀಲ್ದಾರ ಇದ್ದಾರೆ ಅದಕ್ಕೆ ನೀನು ನಿಮ್ಮ ತವರುಮನೆಯಿಂದ ಹಣ, ಒಡವೆ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿದನು. ಅಲ್ಲದೇ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ನಿನಗೆ ಹೊಡೆದು ಮುಗಿಸುತ್ತೇನೆಂದು ಜೀವದ ಬೆದರಿಕೆ ಹಾಕಿ ತಮ್ಮ ಮನೆಯಿಂದ ಹೊರಗಡೆ ಕಳುಹಿಸಿದ್ದರಿಂದ ಕೊಪ್ಪಳಕ್ಕೆ ಬಂದು ತಂದೆಯ ಮನೆಯಲ್ಲಿ ವಾಸವಾಗಿದ್ದೇನೆ. ನಂತರ ವರದಕ್ಷಿಣೆ ಹಣ, ಒಡವೆ ತೆಗೆದುಕೊಂಡು ಬರಲಿಲ್ಲ ಅಂತಾ ಸಿಟ್ಟು ಮಾಡಿಕೊಂಡು ನಮ್ಮ ತಾಯಿ ಶ್ರೀಮತಿ ಚಂದ್ರಮ್ಮ ಇವರ ಮೊಬೈಲ್ ನಂ:7353404520 ಗೆ ತನ್ನ ಮೊಬೈಲ್ ನಂ: 9886913123 ದಿಂದಾ ಕರೆ ಮಾಡಿ ಬೆದರಿಕೆ ಕೊಡುತ್ತಿದ್ದಾನೆ. ನನ್ನ ಪೋಟೋವನ್ನು ತನ್ನ ಮೊಬೈಲ್ದಲ್ಲಿ ಹಾಕಿಕೊಂಡು ತನ್ನ ಮೊಬೈಲ್ ನಂಬರದಲ್ಲಿ ವಿಜಯವರ್ಧನ ವಿಕ್ಟರಿ ಹಾಗೂ ರಾಜವರ್ಧನ್ ಅಂತಾ ಬೇರೆ ಬೇರೆ ಹೆಸರಿನಲ್ಲಿ ಅಕೌಂಟ್ ಕ್ರಿಯೇಟ ಮಾಡಿಕೊಂಡು ಇತರೆಯವರ ಮೊಬೈಲ್ ನಂಬರಗಳಿಗೆ ವ್ಯಾಟ್ಸಪ್ ಮೂಲಕ ಚಾಟಿಂಗ್ ಮಾಡುತ್ತಾ ಬೆದರಿಕೆ ಹಾಕಿ ಆತಂಕ ಸೃಷ್ಟಿಸುತ್ತಿದ್ದಾನೆ. ಅಲ್ಲದೇ ನಮ್ಮ ತಾಯಿಯ ಮೊಬೈಲ್ ನಂಬರಿಗೆ ಇತರೆ ಅಪರಿಚಿತ ಮೊಬೈಲ್ ನಂಬರಗಳಾದ 1] 9632030679, 2] 8095037434, ಮತ್ತು 3] 9449026275 ನಂಬರಗಳಿಂದ ಬೇರೆ ಬೇರೆ ಗಂಡಸು ವ್ಯಕ್ತಿಗಳು ಕರೆ ಮಾಡಿ ನನ್ನನ್ನು ನನ್ನ ಗಂಡನ ಹತ್ತಿರ ಕಳುಹಿಸದೇ ಹೋದರೆ ನಿಮ್ಮನ್ನು ಕೊಲೆ ಮಾಡುತ್ತೇವೆಂದು ನಮ್ಮ ತಾಯಿಗೆ ಜೀವದ ಬೆದರಿಕೆ ಹಾಕುತ್ತಿದ್ದಾರೆ. ನಂತರ ಕಳೆದ 02 ತಿಂಗಳಿನಿಂದ ಪದೇ ಪದೇ ನಮ್ಮ ತಂದೆಯ ಮೊಬೈಲ್ ನಂ: 9986321917 ನೇದ್ದಕ್ಕೆ ನನ್ನ ಗಂಡ ಅಂಕಿತಕುಮಾರ ಇವನು ತನ್ನ ಮೊಬೈಲ್ ನಂ: 9886913123 ದಿಂದಾ ಕರೆ ಮಾಡಿ ನನ್ನನ್ನು  ಹಣ, ಒಡವೆ ಸಹಿತ ಕಳುಹಿಸಿಕೊಡು ಇಲ್ಲದಿದ್ದರೇ ನಿಮ್ಮನ್ನು ಕೊಲೆ ಮಾಡಿ ಮುಗಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾನೆಕಾರಣ ಸದರಿ 1] ಅಂಕಿತಕುಮಾರ ಹಾಗೂ ಅವರ ತಮ್ಮ 2] ವಿನಯಕುಮಾರ ತಂದೆ ಮುದ್ದುಲಿಂಗೇಶ್ವರ. ಇಬ್ಬರೂ ಸಾ: ಚಾಮರಾಜಪೇಟೆ ಬೆಂಗಳೂರ. ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2)  ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 11/2015 ಕಲಂ. 323, 324, 353, 504, 506 ಐ.ಪಿ.ಸಿ:
ಫಿರ್ಯಾದಿದಾರರು ಇಂದು ದಿನಾಂಕ: 26-02-2015 ರಂದು ರಾತ್ರಿ 8-30 ಗಂಟೆಗೆ  ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸದರಿ ಫಿರ್ಯಾದಿ ಸಾರಾಂಶವೇನೆಂದರೆ, ಪ್ರತಿ ದಿನದಂತೆ ಇಂದು ದಿನಾಂಕ 26-02-2015 ರಂದು ಮುಂಜಾನೆ 10-30 ಗಂಟೆಗೆ ತುಗ್ಗಲಡೋಣಿ ಗ್ರಾಮ ಪಂಚಾಯತಗೆ ಹೋಗಿ ಎಂದಿನಂತೆ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನು. ಮುಂಜಾನೆ 11-30 ಗಂಟೆಯ ಸುಮಾರಿಗೆ ಗ್ರಾಮ ಪಂಚಾಯತ ಸದಸ್ಯರಾದ ಮಲ್ಲವ್ವ ಗಂಡ ಚಾಳಪ್ಪ ಹರಿಜನ ರವರ ಗಂಡನಾದ ಚಾಳಪ್ಪ ತಂದಿ ದುರಗಪ್ಪ ಹರಿಜನ ಇವರು ಗ್ರಾಮ ಪಂಚಾಯತಿಗೆ ಬಂದು ತುಗ್ಗಲಡೋಣಿ ಗ್ರಾಮದಿಂದ ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ ಕಾಮಗಾರಿ ಬಿಲ್ ಕೊಡುವಂತೆ ಕೇಳಿದರು. ಸದ್ಯಕ್ಕೆ ಗ್ರಾಮ ಪಂಚಾಯತ ಸದಸ್ಯರಾದ ಪರಸಪ್ಪ ಕಿನ್ನೂರಿ ಸಾ: ತುಗ್ಗಲಡೋಣಿ ರವರು ಬಿಲ್ ಕೊಡಬೇಡಿರಿ ಅಂತಾ ತಕರಾರು ಮಾಡಿರುತ್ತಾರೆ ಅದಕ್ಕಾಗಿ ಉಪಾದ್ಯಕ್ಷರನ್ನು ಕೇಳಿ ಕೊಡುತ್ತೇನೆ ಅಂತಾ ಗ್ರಾಮ ಪಂಚಾಯತ ಉಪಾದ್ಯಕ್ಷರಾದ ಹನಮಂತಪ್ಪ ತಂದಿ ಪರಸಪ್ಪ ಕುಣಮಿಂಚಿ ರವರನ್ನು ಕರೆಯಿಸಿದೆನು. ಪರಸಪ್ಪ ಕಿನ್ನೂರ ಈತನು ಇಂದು ದಿನಾಂಕ 26-02-2015 ರಂದು ಕುಷ್ಟಗಿಗೆ ತರಭೇತಿ ಕುರಿತು ಹೋಗಿರುತ್ತಾರೆ ಅವರು ಬಂದ ನಂತರ ವಿಚಾರಿಸೋಣ ಅಂತಾ ಹನಮಂತಪ್ಪ ಕುಣಮಿಂಚಿ ರವರು ತಿಳಿ ಹೇಳಿ ಕಳುಹಿಸಿದರು. ನಂತರ ಸಾಯಂಕಾಲ 4-00 ಗಂಟೆಯ ಸುಮಾರಿಗೆ ನಾನು ಗ್ರಾಮ ಪಂಚಾಯತಿಯಲ್ಲಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗ್ರಾಮ ಪಂಚಾಯತ ಸಿಪಾಯಿ ಯಲ್ಲಪ್ಪ ತಂದಿ ಶರಣಪ್ಪ ಬೆನ್ನಿ ಇವರು ಗ್ರಾಮ ಪಂಚಾಯತಿಯಲ್ಲಿ ಇದ್ದರು ಅದೇ ವೇಳೆಗೆ ಚಾಳಪ್ಪ ಹರಿಜನ ಮತ್ತು ಕರ ವಸೂಲಿಗಾರ ಯಂಕಪ್ಪ ವತ್ತಿ ಕೂಡಿ ಗ್ರಾಮ ಪಂಚಾಯತಿಗೆ ಬಂದು ತುಗ್ಗಲಡೋಣಿ ಗ್ರಾಮದಿಂದ ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ ಕಾಮಗಾರಿ ಬಿಲ್ ಕೊಡುವಲ್ಲಿ ಈಗ ತುಗ್ಗಲಡೋಣಿ ಮತ್ತು ಶ್ಯಾಡಲಗೇರಿ ಗ್ರಾಮದ ಡಿಮ್ಯಾಂಡ ರಜಿಷ್ಟರನ್ನು ಯಂಕಪ್ಪ ವತ್ತಿ ಈತನಿಗೆ ಕೊಡು ಅಂತಾ ನನಗೆ ಹೇಳಿದರು. ಅದಕ್ಕೆ ನಾನು ಈ ವಾರ ಗ್ರಾಮ ಪಂಚಾಯತಿಯ ಎಲ್ಲಾ ಅದ್ಯಕ್ಷ ಮತ್ತು ಉಪಾದ್ಯಕರ ಹಾಗೂ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ಸಭೆಯಲ್ಲಿ ಚರ್ಚಿಸಿ ಕೊಡುವದಾಗಿ ತಿಳಿಸಿದೆನು. ಆಗ ಚಾಳಪ್ಪ ಈತನು ಒಮ್ಮೆಲೇ ಸಿಟ್ಟಿನಿಂದ ಯಾವ ಸಾಮಾನ್ಯ ಸಭೆ ಕರೆಯುತ್ತೀಲೇ ಬೋಸುಡಿ ಮಗನ ಅಂತಾ ಅವಾಚ್ಯ ಶಬ್ದಗಳಿಂದ ಒದರಾಡ ಹತ್ತಿದನು ಬಾಯಿ ಮಾಡುವ ದ್ವನಿಯನ್ನು ಕೇಳಿ ಅಲ್ಲಿಗೆ ಹನಮಪ್ಪ ತಂದಿ ಹುಲ್ಲಪ್ಪ ಗದ್ದಿರವರು ಬಂದರು ಆಗ ಚಾಳಪ್ಪ ಈತನು ನನಗೆ ನಿನ್ನ ಬಿಡುವದಿಲ್ಲ ಮಗನ ಅಂದವರೆ ಕೈಯಿಂದ ನನ್ನ ಕಪಾಳಕ್ಕೆ ಬಡಿದು ನೀನು ಇಲ್ಲಿ ಹೇಗೆ ಕೆಲಸ ಮಾಡುತ್ತಿ ಮಗನ ನಾನು ನೋಡಿಯೇ ಬಿಡುತ್ತೇನೆ ಅಂತಾ ನನ್ನ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಲ್ಲೇ ಟೇಬಲ್ ಮೇಲೆ ಇಟ್ಟಿದ್ದ ಪೇಪರವೇಟ ಸಾಮಾನನ್ನು ತೆಗೆದುಕೊಂಡು ನನ್ನ ಎದೆಗೆ ಒಗಿದನು, ಆಗ  ಯಲ್ಲಪ್ಪ ತಂದಿ ಶರಣಪ್ಪ ಬೆನ್ನಿ, ಹನಮಪ್ಪ ತಂದಿ ಹುಲ್ಲಪ್ಪ ಗದ್ದಿರವರು ಬಿಡಿಸಿದರು ಆಗ ಚಾಳಪ್ಪನು ಇನ್ನ ಮ್ಯಾಗಿಂದ ಗ್ರಾಮ ಪಂಚಾಯತಿಗೆ ಬಂದು ಹೇಗೆ ಕೆಲಸ ಮಾಡುತ್ತಿ ಮಗನ ನಿನ್ನ ಇಲ್ಲಿಯೇ ಮರ್ಡರ ಮಾಡಿ ಮುಗಿಸಿ ಬಿಡುತ್ತೇನೆ ಅಂತಾ ನನಗೆ ಜೀವದ ಬೆದರಿಕೆಯನ್ನು ಹಾಕಿದರು. ಆಗ ಯಲ್ಲಪ್ಪ ಬೆನ್ನಿ, ಹನಮಪ್ಪ ಗದ್ದಿರವರು ಚಾಳಪ್ಪನಿಗೆ ಹೊರಗೆ ಕರೆದುಕೊಂಡು ಹೋದರು ತುಗ್ಗಲಡೋಣಿ ಗ್ರಾಮದಿಂದ ನೀರಲಕೊಪ್ಪ ಗ್ರಾಮಕ್ಕೆ ಹೋಗುವ ದೇವರ ದಾರಿಯ ಕಾಮಗಾರಿ ಬಿಲ್ ಸಂಬಂಧ ಅದೇ ಸಿಟ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಗ್ರಾಮ ಪಂಚಾಯತಿಗೆ ಬಂದು ನನಗೆ ಅವಾಚ್ಯವಾಗಿ ಬೈದು ಸರ್ಕಾರಿ ಕೆಲಸಕ್ಕೆ ಅಡಿಪಡಿಸಿ ಕೈಯಿಂದ ಬಡಿದು ಮತ್ತು ಪೇಪರವೇಟ ಸಾಮಾನಿನಿಂದ ಒಗೆದು ಜೀವದ ಬೆದರಿಕೆ ಹಾಕಿದ ಚಾಳಪ್ಪ ಹರಿಜನ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಗೊಂಡೆನು.
3)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 48/2015 ಕಲಂ. 143, 147, 323, 504, 506 ಸಹಿತ 149 ಐ.ಪಿ.ಸಿ:

ದಿನಾಂಕ 26-02-2015  ರಂದು 9-00 ಪಿ.ಎಂ.ಕ್ಕೆ ಶ್ರೀ ಮಲ್ಲಿಕಾರ್ಜುನ ಗೌಡ ತಂದೆ ವಿರುಪಾಕ್ಷಗೌಡ ಹೊಸಮನಿ, ವಯಾ: 33 ವರ್ಷ, ಜಾ: ರೆಡ್ಡಿ, ಉ: ಪತ್ರಕರ್ತ, ಸಾ: ಸಿದ್ದಾಪುರ, ತಾ: ಗಂಗಾವತಿ ತಾ: ಗಂಗಾವತಿ.ರವರು  ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರು ಕಲ್ಯಾಣ ರಾಜ್ಯ ಎಂಬ ಕನ್ನಡ ಮಾಸ ಪತ್ರಿಕೆಯ ಸಂಪಾದಕರಿದ್ದು ಈ ತಿಂಗಳ ಪೆಭ್ರುವರಿ ಸಂಚಿಕೆಯಲ್ಲಿ ನಮ್ಮ ಕಲ್ಯಾಣ ರಾಜ್ಯ ಮಾಸ ಪತ್ರಿಕೆಯಲ್ಲಿ ಬ್ಲಾಕ್ ಮೇಲರ್ ಡಾನ್ ಶರಣ ಅಲಿಯಾಸ ಶರಣೆಗೌಡ ಎಂಬ ಶೀರ್ಷಿಕೆ ಅಡಿಯಲ್ಲಿ ಶರಣೆಗೌಡನ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದು  ಇಂದು ದಿನಾಂಕ 26-02-2015 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಕೋರ್ಟ ಆವರಣದ ಕ್ಯಾಂಟೀನ್ ಪಕ್ಕದಲ್ಲಿ ನಿಂತಿದ್ದಾಗ ಶರಣೆಗೌಡ ತಂದೆ ಚಂದ್ರಗೌಡ ಮಾಲಿಪಾಟೀಲ್, ಸಾ: ಕೆಸರಟ್ಟಿ  ಹಾಗೂ ಇತರೇ 5 ಜನರು. ಅಕ್ರಮ ಗುಂಪು ಕಟ್ಟಿಕೊಂಡು ಬಂದು ಫಿರ್ಯಾದಿದಾರನಿಗೆ ಪತ್ರಕೆಯಲ್ಲಿ ತನ್ನ ಬಗ್ಗೆ ಬರೆದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿತ್ತಾರೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Wednesday, February 25, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 32/2015 ಕಲಂ. 78(3) ಕೆ.ಪಿ. ಕಾಯ್ದೆ:.
ದಿನಾಂಕ-24-02-2015 ರಂದು ಮದ್ಯಾಹ್ನ 2-45 ಗಂಟೆಯ ಸುಮಾರಿಗೆ ಕಾರಟಗಿಯ ಇಂದಪೂರ  ರವರ ಗಿರಣಿ ಹತ್ತಿರ ಸಾವಜನಿಕಸ್ಥಳದಲ್ಲಿ ಆರೋಪಿತನಾದ ರವಿ ತಂದಿ ಬಸವರಾಜ ಬತ್ತದ ಇತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಸದರಿ ಆರೋಪಿತನಿಂದ ಮಟ್ಕಾ ಜೂಜಾಟದ ಸಾಮಾಗ್ರಿಗಳು ಮತ್ತು ನಗದು ಹಣ ರೂ. 1210-00 ಗಳನ್ನು ಜಪ್ತ ಮಾಡಿಕೊಂಡು ಸ್ಥಳದಲ್ಲೇ ಪಂಚನಾಮೆ ಜರುಗಿಸಿಕೊಂಡು ವಾಪಾಸ್ ಠಾಣೆಗೆ ಬಂದು ನೀಡಿದ ಮೂಲ ಪಂಚನಾಮೆ ಮತ್ತು ವರದಿಯ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 38/2015 ಕಲಂ. 96(ಬಿ) & (ಸಿ) ಕೆ.ಪಿ. ಕಾಯ್ದೆ :.

¢£ÁAPÀ: 24-02-2015 gÀAzÀÄ ²æÃ. C±ÉÆÃPÀ J.J¸ï.L PÉÆ¥Àà¼À £ÀUÀgÀ ¥Éưøï oÁuÉgÀªÀgÀÄ ¦ügÁå¢ ¤ÃrzÀÄÝ, ¦ügÁå¢AiÀÄ ¸ÁgÁA±À K£ÉAzÀgÉ, ¤£Éß ¢£ÁAPÀ: 23-02-2015 gÀAzÀÄ gÁwæ 10-30 UÀAmɬÄAzÀ oÁuÁ ªÁå¦ÛAiÀÄ ¸ÉPÀÖgï £ÀA: 01 ªÀÄvÀÄÛ 02 gÀ°è ¦ügÁå¢zÁgÀgÀÄ vÀ£Àß ¢é-ZÀPÀæ ªÁºÀ£ÀzÀ ªÉÄÃ¯É gÁwæUÀ¸ÀÄÛ PÀvÀðªÀå ¤ªÀð»¸ÀÄvÁÛ EAzÀÄ ¢£ÁAPÀ: 24-02-2015 ¨É¼ÀV£À eÁªï 04-45 UÀAmÉUÉ £ÀUÀgÀzÀ §¤ß PÀnÖ KjAiÀÄzÀ »A¢ ©Eqï PÁ¯ÉÃeï ºÀwÛgÀ EzÁÝUÀ CzÉà ªÉüÉUÉ ©Ãmï ¹§âA¢AiÀĪÀgÀÄ §A¢zÀÄÝ DUÀ »A¢ ©Eqï PÁ¯ÉÃeï ºÀwÛgÀ E§âgÀÄ ¦ügÁå¢zÁgÀgÀ£ÀÄß £ÉÆÃr PÀvÀÛ®°è  vÀ£Àß ªÀÄÄR ªÀÄgɪÀiÁaPÉÆAqÀÄ C«vÀÄPÉÆArzÀÄÝ, DUÀ ¦ügÁå¢zÁgÀjUÉ CªÀgÀ ªÉÄÃ¯É ¸ÀA±ÀAiÀÄ §A¢zÀÄÝ, DUÀ CªÀgÀ£ÀÄß ¨É£ÀßwÛ »rzÀÄPÉÆAqÀÄ «ZÁj¸À¯ÁV CªÀgÀÄ ªÉÆzÀ°UÉ vÀªÀÄä ºÉ¸ÀgÀÄ ªÀÄvÀÄÛ «¼Á¸ÀªÀ£ÀÄß ¸ÀjAiÀiÁV ºÉüÀzÉà vÀ¥ÀÄà vÀ¥ÁàV ºÉýzÀÄÝ, £ÀAvÀgÀ vÀªÀÄä ºÉ¸ÀgÀÄ 1] ºÀÄ®ÄUÀ¥Àà vÀAzÉ zÉÆqÀعzÀÝ¥Àà ¨sÉÆë. ªÀAiÀiÁ: 24 ªÀµÀð eÁ: ªÀqÀØgÀ G: PÀÆ° PÉ®¸À 2] «gÀ¨sÀzÀæ¥Àà vÁ¬Ä UÀAUÀªÀÄä ªÀÄoÀzÀ ªÀAiÀiÁ: 22 ªÀµÀð eÁ: dAUÀªÀÄ G: UËAr PÉ®¸À E§âgÀÆ ¸Á: »gÉùAzÉÆÃV vÁ:f: PÉÆ¥Àà¼À. C®èzÉà gÁwæ ªÉüÉAiÀÄ°è C°èzÀÝ §UÉÎ «ZÁj¸À®Ä CªÀ£ÀÄ ¸ÀªÀÄ¥ÀðPÀªÁzÀ GvÀÛgÀ PÉÆqÀ°¯Áè, ¸ÀzÀjAiÀĪÀ£À£ÀÄß ºÁUÉAiÉÄà ©lÖ°è gÁwæ ªÉüÉAiÀÄ°è AiÀiÁªÀÅzÁzÀgÀÆ ¸ÀéwÛ£À C¥ÀgÁzsÀ ªÀiÁqÀĪÀ ¸ÀA¨sÀªÀ PÀAqÀħA¢zÀÝjAzÀ ªÀÄÄAeÁUÀÈvÉ PÀÄjvÀÄ ¸ÀzÀjAiÀĪÀ£À£ÀÄß ªÀ±ÀPÉÌ vÉUÉzÀÄPÉÆAqÀÄ ªÁ¥À¸À oÁuÉUÉ ¨É¼ÀV£À eÁªï 05-30 UÀAmÉUÉ PÀgÉzÀÄPÉÆAqÀÄ §AzÀÄ, ¨É¼ÀV£À eÁªï 6-00 UÀAmÉUÉ ¦ügÁå¢AiÀÄ£ÀÄß vÀAiÀiÁj¹ ªÀÄÄA¢£À PÀæªÀÄ dgÀÄV¸ÀĪÀAvÉ EgÀĪÀ ¦ügÁå¢ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ CzÉ. 

Monday, February 23, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 41/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ:
ದಿನಾಂಕ 22-02-2015 ರಂದು 11-45 ಎ.ಎಂ.ಕ್ಕೆ ಶ್ರೀ ಉದಯರವಿ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ಸೋಮಶೇಖರ ತಂದೆ ಶಿವಪ್ಪ ವಯಾ: 27 ವರ್ಷ, ಜಾ: ಲಿಂಗಾಯತ, ಉ: ಗುಮಾಸ್ತ, ಸಾ: ಮೆಹಬೂಬ ನಗರ ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತನು ಗಂಗಾವತಿ ನಗರದ ಮಹಿಬೂಬ ನಗರದಲ್ಲಿರುವ ಗೋವಾ ಬೇಕರಿಯ ಹತ್ತಿರ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 5,000-00 ರೂಗಳನ್ನು ಮತ್ತು ಭಾರತ ಗೆದ್ದರೆ 9,000-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 100-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ಸ್ಯಾಮಸಂಗ್ ಮೊಬೈಲ್ ದೊರೆತಿದ್ದು ಇರುತ್ತದೆ ಸದರಿ ಮೊಬೈಲ್ ದಲ್ಲಿ ಅವನು ಜನರಿಗೆ ಮಾತನಾಡಿದ ಬಗ್ಗೆ ಕಾಲ್ ರೆಕಾರ್ಡಿಂಗ್ ಸಹ ಇರುತ್ತದೆ. ಅವನಿಂದ ದೊರೆತ ಹಣ ಮತ್ತು ಮೊಬೈಲ್ ನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ಐದರಷ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 42/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು 12-00 ಪಿ.ಎಂ.ಕ್ಕೆ ಶ್ರೀ ಈ. ಕಾಳಿಕೃಷ್ಣ, ಪಿ.ಐ. ನಗರ ಪೊಲೀಸ್ ಠಾಣೆ ಗಂಗಾವತಿರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ 01] ರಸೂಲ್ ಖಾನ್ @ಮುನ್ನಾ ತಂದೆ ಮೈಬೂಬಖಾನ್,  02] ಇಕ್ಬಾಲ್ ತಂದೆ ಮಹ್ಮದ್ ಅಲಿ, 03] ಸುನಿಲ್ ತಂದೆ ಡಿ. ನಾರಾಯಣರಾವ್ ಎಲ್ಲರೂ ಸಾ: ಗಂಗಾವತಿ ಇವನ್ನು ಹಾಜರಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ: 22-02-2015 ರಂದು ಬೆಳಿಗ್ಗೆ 10-00 ಗಂಟೆಗೆ ಆರೋಪಿತರು ಗಂಗಾವತಿ ನಗರದ ಎ.ಪಿ.ಎಂ.ಸಿ. ಆವರಣದಲ್ಲಿ ಭಾರತ ಮತ್ತು ದಕ್ಷಿಣ ಆಪ್ರೀಕಾ ತಂಡಗಳ ನಡುವೆ ನಡೆದ ಕ್ರಿಕೇಟ್ ಆಟದ ಮೇಲೆ ಜೂಜಾಟದಲ್ಲಿ ತೊಡಗಿ ದಕ್ಷಿಣ ಆಪ್ರಿಕಾ ತಂಡ ಪಂದ್ಯ ಗೆದ್ದರೆ 1,000-00 ರೂಗಳನ್ನು ಮತ್ತು ಭಾರತ ಗೆದ್ದರೆ 1,800-00 ಕೊಡುವದಾಗಿ ಜನರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 11,600-00 ರೂ ಹಣ, ಜೂಜಾಟ ಆಡಲು ಬಳಸಿದ ಮೂರು ಸ್ಯಾಮಸಂಗ್ ಮೊಬೈಲ್ ಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಒಂದಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಬಗ್ಗೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 43/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ ಶರಣೇಗೌಡ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆ ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ನಾಗರಾಜ ತಂದೆ ಚನ್ನಪ್ಪ ಉಪ್ಪಿನ ಸಾ: ಇಲಾಹಿ ಕಾಲೋನಿ ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಇಲಾಹಿ ಕಾಲೋನಿಯ ಮಸೀದಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 400-00 ರೂ ಹಣ, ಜೂಜಾಟ ಆಡಲು ಬಳಸಿದ ಒಂದು ನೋಕಿಯಾ ಕಂಪನಿಯ ಮೊಬೈಲ್ ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತನು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4)  ಗಂಗಾತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 44/2015 ಕಲಂ. 78(1)(ಎ)(6) ಕೆ.ಪಿ. ಕಾಯ್ದೆ ಸಹಿತ 420 ಐ.ಪಿ.ಸಿ :.
ದಿನಾಂಕ 22-02-2015 ರಂದು  12-30 ಪಿ.ಎಂ.ಕ್ಕೆ ಶ್ರೀ DAd£ÉÃAiÀÄ ಪಿ.ಎಸ್.ಐ. ¸ÀAZÁj ¥Éưøï oÁuÉ UÀAUÁªÀw ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ ಪರಮಜ್ಯೋತಿ ತಂದೆ ವೆಂಕೋಬಣ್ಣ 02] ನಂಜಯ್ಯ ತಂದೆ ಬೆಟ್ಟದಯ್ಯ ಇಬ್ಬರುಸಾ: ಹಿರೇಜಂತಕಲ್-ಗಂಗಾವತಿ ಇವರನ್ನು ಹಾಜರ ಪಡಿಸಿ ಸದರಿಯವನ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ, ಇಂದು ದಿನಾಂಕ 22-02-2015 ರಂದು ವಿಶ್ವಕಪ್ ಕ್ರಿಕೇಟ್ ಪಂದ್ಯಾಟದ ನಿಮಿತ್ಯವಾಗಿ ಭಾರತ-ದಕ್ಷಿಣ ಆಫ್ರೀಕ ದೇಶಗಳ ತಂಡಗಳ ನಡುವ 50 ಓವರಗಳ ಕ್ರೀಕೇಟ್ ಪಂದ್ಯಾವಳಿ ಇದ್ದು, ಆರೋಪಿತನುಇಂದು  ಮುಂಜಾನೆ 10-15 ಗಂಟೆಗೆ ಗಂಗಾವತಿ ನಗರದ ಹಿರೇಜಂತಕಲ್ ಏರಿಯಾದ ಪಂಪಾಪತಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೊಂದಿಗೆ ಭಾರತ ಗದ್ದರೆ 1000 ರೂ.ಗಳಿಗೆ 1500 ರೂ.ಗಳನ್ನು ಕೊಡುವುದಾಗಿ ಮತ್ತು ಆಸ್ಟ್ರೇಲಿಯಾ ಗೆದ್ದರೆ 1000 ರೂ. ಗಳಿಗೆ 1000 ರೂ.ಗಳನ್ನು ಕೊಡುವುದಾಗಿ ಜನರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಪಡೆದುಕೊಂಡು ಅವರಿಗೆ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನಿಂದ ಜೂಜಾಟಕ್ಕೆ ಸಂಬಂಧಿಸಿದ 430-00 ರೂ ಹಣ, ಜೂಜಾಟ ಆಡಲು ಬಳಸಿದ ಎರಡು ಸ್ಯಾಮಸಂಗ್ ಕಂಪನಿಯ ಮೊಬೈಲ್ ಗಳು ದೊರೆತಿದ್ದು ಇರುತ್ತದೆ  ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ.  ಆರೋಪಿತರು ಇಂದು ನಡೆದ ಭಾರತ ಮತ್ತು ದಕ್ಷಿಣ ಆಫ್ರೀಕಾ ತಂಡಗಳ ನಡುವೆ ನಡೆದ ವಿಶ್ವಕಪ್ ಕ್ರಿಕೇಟ್ ನ ಸರಣಿಯ ಕ್ರಿಕೇಟ್ ಆಟದ ಮೇಲೆ ಜೂಜಾಟ ಆಡುತ್ತಾ ಸಾರ್ವಜನಿಕರಿಗೆ ಹೆಚ್ಚಿನ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 36/2015 ಕಲಂ. 279, 337 338 ಐ.ಪಿ.ಸಿ:.
ದಿನಾಂಕ 22.02.2015 ರಂದು ಬೆಳಿಗ್ಗೆ 08:45 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಎನ್.ಹೆಚ್-63 ಕೊಪ್ಪಳ-ಗದಗ ರಸ್ತೆ ದದೇಗಲ್ ಗ್ರಾಮದ ಹತ್ತಿರ ರಸ್ತೆ ತಿರುವಿನಲ್ಲಿ ಆರೋಪಿತನು ತನ್ನ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.-37/ಏಫ್-390 ನೇದ್ದನ್ನು ಗದಗ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಎದುರಿಗೆ ಬರುತ್ತಿದ್ದ ಪಿರ್ಯಾದಿದಾರರ ಮೋ.ಸೈ ನಂ ಕೆ.-37/ಕ್ಯೂ-9101 ನೇದ್ದಕ್ಕೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
6) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 37/2015 ಕಲಂ. 279, 338 ಐ.ಪಿ.ಸಿ:.

ದಿನಾಂಕ 21.02.2015 ರಂದು ಮದ್ಯಾನ 3:00 ಗಂಟೆಯ ಸುಮಾರಿಗೆ ಕೊಪ್ಪಳ-ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮಾದಿನೂರ-ದದೇಗಲ್ ರಸ್ತೆ ದದೇಗಲ್ ಸೀಮಾದಲ್ಲಿ ಆರೋಪಿತನು ತನ್ನ ಲಾರಿ ನಂ .ಪಿ-37/ವಾಯ್-2678 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ರಸ್ತೆಯ ಎಡಕ್ಕೆ ಪಲ್ಟಿ ಮಾಡಿದ್ದರಿಂದ ಆರೋಪಿ ಚಾಲಕನಿಗೆ ಭಾರಿ ಸ್ವರೂಪದ ಗಾಯವಾಗಿದ್ದು ಇರುತ್ತದೆ.

 
Will Smith Visitors
Since 01/02/2008