Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, September 12, 2013

Koppal Dist Crimes


ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು:

ಇಸ್ಪೇಟ ಜೂಜಾಟದ ಪ್ರಕರಣಗಳು:

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 140/2013 ಕಲಂ. 87 ಕನರ್ಾಟಕ ಪೊಲೀಸ್ ಕಾಯ್ದೆ:. :

ಇಂದು ದಿ: 11-09-2013 ರಂದು 02-45 ಎ.ಎಮ್ ಕ್ಕೆ. ಶ್ರೀ ವಿಜಯ್. ಬಿರಾದಾರ. ಪಿ.ಐ ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರನ್ನು ಹಾಗೂ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆಯನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶ ಏನೆಂದರೆ, ಇಂದು ದಿ: 11-09-2013 ರಂದು 01-20 ಎ,ಎಮ್ ಗಂಟೆಯ ಸುಮಾರಿಗೆ ಕೊಪ್ಪಳ ನಗರದ ಗವಿಮಠ ರಸ್ತೆಯ ಹಳೆಯ ಆರ್.ಟಿ.ಓ ಕಚೇರಿಯ ಸಧ್ಯ ಆಧಾರ ಕಾರ್ಡ ವಿತರಣೆಯ ಆಫೀಸ್ ಮುಂದೆ ಸಾರ್ವಜನಿಕ ಸ್ಥಳದಲ್ಲ್ಲಿ 08 ಜನ ಆರೋಪಿತರಾದ 1] ತಾರಾಚಂದ್ ತಂ. ಗಂಗಾಧರ ದಲಭಂಜನ್. ಸಾ: ಭಾಗ್ಯನಗರ. 2] ನರೇಶ ತಂ. ಮಲ್ಲಪ್ಪ ಕವಲೂರ. ವಯ 29, ಜಾ: ಲಿಂಗಾಯತ, ಉ: ಫೈನಾನ್ಸ ಕೆಲಸ, ಸಾ: ಕವಲೂರ ಓಣಿ ಕೊಪ್ಪಳ. 3] ಮಹಾವೀರ ತಂ. ಫುಕರಾಜ ಜೈನ್, ವಯ: 23 ವರ್ಷ, ಜಾ: ಜೈನ, ಉ: ವ್ಯಾಪಾರ, ಸಾ: ಪಾಂಡುರಂಗ ಗುಡಿ ಹತ್ತಿರ ಕೊಪ್ಪಳ. 4] ಸುನೀಲ್ ತಂ. ಜಗನ್ನಾಥ ದೇಶಮುಖ, ವಯ: 28 ವರ್ಷ, ಜಾ: ಮರಾಠ, ಉ: ಅಕ್ಕಸಾಲಿಗ ಕೆಲಸ, ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ. 5] ಸಂಗಮೇಶ ತಂ. ಸುರೇಶ ಅಂಗಡಿ, ವಯ: 32 ವರ್ಷ, ಜಾ: ಲಿಂಗಾಯತ, ಉ: ಕಿರಾಣಿ ಅಂಗಡಿ ಕೆಲಸ, ಸಾ: ತೋಟದ ಭಾವಿ ಕೊಪ್ಪಳ. 6] ಗವಿಸಿದ್ದಪ್ಪ ತಂ. ಭರಮಪ್ಪ ಕವಲೂರ. ವಯ: 32 ವರ್ಷ, ಜಾ: ಲಿಂಗಾಯತ, ಉ: ಒಕ್ಕಲುತನ, ಸಾ: ಬಿ.ಟಿ. ಪಾಟೀಲ ನಗರ ಕೊಪ್ಪಳ. 7] ಕೃಷ್ಣ ತಂ. ಸುದೇಂದ್ರಸಾ ಕಾಟವಾ, ವಯ: 31 ವರ್ಷ, ಜಾ: ಕ್ಷತ್ರಿಯ, ಉ: ಪಂಪಸೆಟ್ ಮಶಿನರಿ ಕೆಲಸ, ಸಾ: ಬಿ.ಟಿ. ಪಾಟೀಲ ನಗರ ಕೊಪ್ಪಳ. 8] ಶಹಭಾಜ್ ತಂ. ಮಹ್ಮದ್ ಹುಸೇನ್ ಜಲಾಲಸಾಬ ಮನಿಯಾರ. ವಯ: 24 ವರ್ಷ, ಜಾ: ಮುಸ್ಲಿಂ, ಉ: ವ್ಯಾಪಾರ, ಸಾ: ಗವಿಶ್ರೀನಗರ ಒಂದನೇ ಕ್ರಾಸ್ ಕೊಪ್ಪಳ ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ 11,200=00 ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಮತ್ತು ಒಂದು ಹಾಳೆಯ ಚೀಲವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. .

2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 130/2013 ಕಲಂ. 87 ಕನರ್ಾಟಕ ಪೊಲೀಸ್ ಕಾಯ್ದೆ:

ದಿನಾಂಕ: 11-09-2013 ರಂದು ಬೆಳಿಗ್ಗೆ 10.45 ಗಂಟೆಗೆ ಶ್ರೀ ಹೆಚ್. ಗುರುಬಸವರಾಜ ಪಿ.ಎಸ್.ಐ. ಕುಕನೂರ ಪೊಲೀಸ್ ಠಾಣೆರವರಿಗೆ ರಾಜೂರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರಗೆ ಇಬ್ಬರೂ ಪಂಚರಿಗೆ ಬರಮಡಿಕೊಂಡು ಮತ್ತು ಸಿಬ್ಬಂದಿಯವರಾದ ಹೆಚ್.ಸಿ.142 ಪಿ.ಸಿ.- 404, 353. 154, 280 ರವರೊಂದಿಗೆ ಹೋಗಿ ರಾಜೂರ ಆಶ್ರಯ ಕಾಲೋನಿ ಹತ್ತಿರ ರಸ್ತೆಯ ಮೇಲೆ ಜೀಪ್ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ರಾಜೂರ ಆಶ್ರಯ ಕಾಲೋನಿಯ ಹತ್ತಿರ ಹೋಗಿ ಸಮುದಾಯ ಭವನದ ಮರೆಗೆ ನಿಂತು ನೋಡಲಾಗಿ ಸದರ ಸಮುದಾಯದ ಭವನದ ಪೂರ್ವಭಾಗದ ಕಟ್ಟಡದ ಮರೆಗೆ ಸಾರ್ವಜನಿಕ ಸ್ಥಳದಲ್ಲಿ ಒಂಬತ್ತು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಇಸ್ಪೀಟ ಜೂಜಾಟವನ್ನು ಆಡುತ್ತಿರುವಾಗ ಪಂಚರ ಸಮಕ್ಷಮ ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು ಅವರಿಂದ ಜೂಜಾಟ ನಗದು ಹಣ 4950=00 ರೂ ಹಾಗೂ 52 ಇಸ್ಪೀಟ ಎಲೆ ಮತ್ತು ಒಂದು ಪ್ಲಾಸ್ಡಿಕ ಚೀಲ ಇವುಗಳನ್ನು ಜಪ್ತ ಮಾಡಿಕೊಂಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. .

3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 124/2013 ಕಲಂ. 87 ಕನರ್ಾಟಕ ಪೊಲೀಸ್ ಕಾಯ್ದೆ:

ದಿ:- 11-09-2013 ರಂದು ಸಂಜೆ 5:30 ಗಂಟೆಗೆ ಶ್ರೀ ಹನುಮರಡ್ಡೆಪ್ಪ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆರವರು ಗಣಪತಿ ಬಂದೋಬಸ್ತ ಪೆಟ್ರೋಲಿಂಗ್ ಮಾಡುತ್ತಾ ಹೇರೂರು ಗ್ರಾಮದ ಹತ್ತಿರ ಇದ್ದಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಸಕ್ಕಿ ಹಂಚಿನಾಳ ಸೀಮಾದಲ್ಲಿ ಸುಬ್ಬಾರಾವ್ ಎಂಬುವವರ ಮನೆಯ ಹಿಂಭಾಗ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ನನ್ನ ಸಂಗಡ ಪೆಟ್ರೋಲಿಂಗ್ನಲ್ಲಿ ಇದ್ದ ಪಿ.ಸಿ. 100, 131, 117, 38, 289 ಎಪಿಸಿ. 77 ರವರು ಮತ್ತು ಇಬ್ಬರು ಪಂಚರಾದ (1) ತಿಪ್ಪಣ್ಣ ತಂದೆ ಯಮನೂರಪ್ಪ ನವಲಿ, 35 ವರ್ಷ ಸಾ: ಮರಕುಂಬಿ (2) ಶೇಖರಯ್ಯ ಸ್ವಾಮಿ ತಂದೆ ಚನ್ನವೀರಯ್ಯ ಸ್ವಾಮಿ, 25 ವರ್ಷ, ಸಾ: ಮರಕುಂಬಿ ಇವರನ್ನು ಬರಮಾಡಿಕೊಂಡು ಸರಕಾರಿ ಜೀಪ್ ನಂ: ಕೆ.ಎ-37/ ಜಿ-307 ನೇದ್ದರಲ್ಲಿ ಹೊರಟು ಕೇಸಕ್ಕಿ ಹಂಚಿನಾಳ ಸೀಮಾದಲ್ಲಿ ಜೀಪ್ನ್ನು ನಿಲ್ಲಿಸಿ ನಂತರ ನಡೆದುಕೊಂಡು ಹೊರಟು ನೋಡಲಾಗಿ ಅಲ್ಲಿ ಒಂದು ಮನೆಯ ಪಕ್ಕದಲ್ಲಿರುವ ರಸ್ತೆಯ ಪಕ್ಕದಲ್ಲಿ ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 6:00 ಗಂಟೆಯಾಗಿದ್ದು, ಕೂಡಲೇ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಈ ಕೆಳಕಂಡವರು ಸಿಕ್ಕಿಬಿದ್ದರು. ಇನ್ನೊಬ್ಬನು ಅಲ್ಲಿಂದ ಓಡಿ ಹೋದನು. ಸಿಕ್ಕಿಬಿದ್ದವರ ಹೆಸರನ್ನು ವಿಚಾರಿಸಲು (1) ಲಕ್ಕಪ್ಪ ತಂದೆ ನಿಂಗಪ್ಪ, ವಯಸ್ಸು 55 ವರ್ಷ, ಜಾತಿ: ಕುರುಬರು ಉ: ಕೂಲಿ ಕೆಲಸ ಸಾ: ಹಣವಾಳ ಕ್ಯಾಂಪ್ (2) ಪಂಪಯ್ಯಸ್ವಾಮಿ ತಂದೆ ಅಮರಯ್ಯಸ್ವಾಮಿ ಹಿರೇಮಠ, ವಯಸ್ಸು 55 ವರ್ಷ, ಜಂಗಮರು ಉ: ಕೂಲಿ ಕೆಲಸ ಸಾ: ಮರಕುಂಬಿ. (3) ಪಂಪಾಪತಿ ತಂದೆ ಚನ್ನಬಸಪ್ಪ, ಮೇಟಿ, ವಯಸ್ಸು 48 ವರ್ಷ, ಜಾತಿ: ಲಿಂಗಾಯತ ಉ: ಕೂಲಿ ಕೆಲಸ ಸಾ: ಮರಕುಂಬಿ (4) ಹನುಮನಗೌಡ ತಂದೆ ಗಂಗನಗೌಡ, ವಯಸ್ಸು 45 ವರ್ಷ, ಜಾತಿ: ನಾಯಕ ಉ: ಕೂಲಿ ಕೆಲಸ ಸಾ: ಕೇಸಕ್ಕಿ ಹಂಚಿನಾಳ. (5) ದುರಗಪ್ಪ ತಂದೆ ಪಾಪಯ್ಯ ಕೊಲ್ಲಾರಿ, ವಯಸ್ಸು 60 ವರ್ಷ, ಜಾತಿ: ಗೊಲ್ಲರು ಉ: ಒಕ್ಕಲುತನ ಸಾ: ಹಣವಾಳ. ಅಂತಾ ತಿಳಿಸಿದ್ದು, ಓಡಿ ಹೋದವನ ಬಗ್ಗೆ ವಿಚಾರಿಸಲು (6) ಸುಬ್ಬಾರಾವ್ ಸಾ: ಕೇಸಕ್ಕಿ ಹಂಚಿನಾಳ ಅಂತಾ ತಿಳಿಸಿದರು. ಸದರಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 6,900-00, ಮತ್ತು 52 ಇಸ್ಪೇಟ್ ಎಲೆಗಳು, ಮತ್ತು ಇಸ್ಪೇಟ್ ಆಡಲು ಕೆಳಗೆ ಹಾಸಿದ್ದ ಒಂದು ಟಾವಲ್ ಜಪ್ತು ಮಾಡಲಾಯಿತು..

ಅಪಘಾತ ಪ್ರಕರಣ:

4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 157/2013 ಕಲಂ. 279, 337, 338 ಐ.ಪಿ.ಸಿ:. :

ದಿನಾಂಕ:11.09.2013 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಎನ್.ಹೆಚ್-50 ರಸ್ತೆಯ ಮೇಲೆ, ಜಿನ್ನಾಪೂರ ತಾಂಡಾ ಸೀಮಾದಲ್ಲಿ ಫಿಯರ್ಾದಿದಾರ, ಬಾಳಪ್ಪ, ಜಗದೀಶ ಎಂಬ ಮೂರು ಜನರು ತಮ್ಮ ಮೋ.ಸೈನಂ.ಕೆ.ಎ-37/ಕ್ಯೂ-8036 ನೇದ್ದರಲ್ಲಿ ಹೊಸಪೇಟ ಕಡೆಯಿಂದ ಕುಷ್ಟಗಿ ಕಡೆಗೆ ಬರುತ್ತೀರುವಾಗ ಆರೋಪಿತನಾದ ಮಹಾಂತೇಶ ನಾಯಕ ಇತನು ತನ್ನ ಕೆಂಪು ಬಣ್ಣದ ಹಿರೋ ಕಂಪನಿಯ ಹೊಸದಾದ ಹೆಚ್.ಎಫ್. ಡಿಲಕ್ಸ ನಂಬರ ಬರೆಯಿಸದ ಮೋಟಾರ ಸೈಕಲ್ ನೇದ್ದನ್ನು ಕುಷ್ಟಗಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ಬಲಕ್ಕೆ ಓಡಿಸಿಕೊಂಡು ಹೋಗಿ ಎದುರುಗಡೆಯಿಂದ ಫಿಯರ್ಾದಿದಾರರ ಮೋ.ಸೈ.ಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದು ಇದರಿಂದ ಬಾಳಪ್ಪ, ಜಗದೀಶ ಮತ್ತು ಆಪಾದೀತ ಮಹಾಂತೇಶ ಇವರಿಗೆ ಸಾದಾ ಹಾಗೂ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಮಹಾಂತೇಶ ನಾಯಕ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಸಾರಾಂಶ ಮೇಲಿಂದ ಶ್ರೀ ಯಲ್ಲಪ್ಪ ಸಿ.ಹೆಚ್.ಸಿ 78 ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಪ್ರಕರಣ ದಾಖಲಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. .

Sunday, September 8, 2013

Koppal Dist Crimes


ಅಪಘಾತ ಪ್ರಕರಣಗಳು :

1) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 155/2013 ಕಲಂ. 279, 338 ಐ.ಪಿ.ಸಿ:

ದಿನಾಂಕ: 07.09.2013 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ಮಂಗಳಾಪೂರ-ಗುನ್ನಳ್ಳಿ ರಸ್ತೆಯ ಮೇಲೆ, ಮಂಗಳಾಪೂರ ಗ್ರಾಮದ ರಹಿಮಾನಸಾಬ ಇವರ ಮನೆಯ ಹತ್ತಿರದ ರಸ್ತೆಯ ಮೇಲೆ ಆರೋಪಿತನಾದ ಯಮನೂರಸಾಬ ಇತನು ತನ್ನ ಮೋ.ಸೈ ನಂ ಕೆ.ಎ-27/ಹೆಚ್-7031 ನೇದ್ದನ್ನು ಕೊಪ್ಪಳ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಪಿಯರ್ಾದಿದಾರರ ಮೊಮ್ಮಗಳಾದ ಅಕ್ಕಮಹಾದೇವಿ ವಯಾ: 6 ವರ್ಷ ಇವಳಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದು ಇದರಿಂದ ಅವಳಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಮೋ.ಸೈ ನಂ.ಕೆ.ಎ-27/ಹೆಚ್-7031 ನೇದ್ದರ ಸವಾರ ಯಮನೂರಸಾಬ ಇತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಸಾರಾಂಶ ಮೇಲಿಂದ ಶ್ರೀಮತಿ ಪದ್ಮಾವತಿ ಮಹೆಚ್.ಸಿ 109 ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 221/2013 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:

ದಿನಾಂಕ:- 07-09-2013 ರಂದು ಬೆಳಿಗ್ಗೆ 08:30 ಗಂಟೆಗೆ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಕೊಪ್ಪಳ ಕಡೆಯಿಂದ ಲಾರಿ ನಂಬರ್: ಕೆ.ಎ-37/ 4564 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದಿದ್ದರಿಂದ ವೇಗ ನಿಯಂತ್ರಿಸಲು ಆಗದೇ ರಸ್ತೆಯ ತನ್ನ ಎಡಗಡೆ ಹೋಗದೇ ಒಮ್ಮೆಲೇ ಬಲಗಡೆಗೆ ತಿರುಗಿಸಿಕೊಂಡು ಬಂದು ಚಿಕ್ಕಬೆಣಕಲ್ ಕ್ರಾಸ್ ಹತ್ತಿರ ಇರುವ ಭೀಮಯ್ಯ ತಂದೆ ರಂಗಯ್ಯ ಇವರ ಪಂಚರ್ ಅಂಗಡಿಯ ಮುಂದೆ ಪಂಚರ್ ಹಾಕಲು ನಿಲ್ಲಿಸಿದ್ದ ಟಾಟಾ ಏಸ್ ಗೂಡ್ಸ್ ವಾಹನ ನಂ: ಕೆ.ಎ-37/ 9176 ನೇದ್ದಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಲಾರಿಯು ಅಂಗಡಿಯ ಪಕ್ಕದ ದನದ ಶೆಡ್ ಮೇಲೆ ಉರುಳಿ ಬಿದ್ದು, ಶೆಡ್ನಲ್ಲಿದ್ದ ಭೀಮಯ್ಯನ 2 ಎಮ್ಮೆಗಳು ಸ್ಥಳದಲ್ಲಿಯೇ ಸತ್ತಿದ್ದು, ಭೀಮಯ್ಯ ತಂದೆ ರಂಗಯ್ಯ, 55 ವರ್ಷ ಸಾ: ಚಿಕ್ಕಬೆಣಕಲ್ ಹಾಗೂ ಅವರ ಮಗ ಆಂಜನೇಯ ತಂದೆ ಭೀಮಯ್ಯ, ವಯಸ್ಸು 28 ವರ್ಷ, ಜಾತಿ: ವಾಲ್ಮೀಕಿ ಉ: ಪಂಚರ್ ಹಾಕುವುದು ಸಾ: ಚಿಕ್ಕಬೆಣಕಲ್ ಮತ್ತು ಟಾಟಾ ಏಸ್ ಚಾಲಕ ಜಗದೀಶ ತಂದೆ ಜೈನಾಗೇಶ ಕುರ್ತಕೋಟಿ, ವಯಸ್ಸು 24 ವರ್ಷ, ಲಿಂಗಾಯತ ಸಾ: ಚಿಕ್ಕಬೆಣಕಲ್ ಮತ್ತು ಅಲ್ಲಿಯೇ ನಿಂತಿದ್ದ ಲಿಂಗರಾಜ ತಂದೆ ನರಸಪ್ಪ ಹಿರೇಕುರುಬರು, ವಯಸ್ಸು 25 ವರ್ಷ, ಜಾತಿ: ಕುರುಬರು ಉ: ವಿದ್ಯಾಥರ್ಿ ಸಾ: ಚಿಕ್ಕಬೆಣಕಲ್ ಇವರಿಗೆ ತೀವ್ರ ಮತ್ತು ಸಾದಾ ಗಾಯಗಳಾಗಿದ್ದು, ಅಪಘಾತವಾದ ನಂತರ ಲಾರಿ ಚಾಲಕನು ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ. ನಂತರ ಗಾಯಾಳುಗಳನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಇರುತ್ತದೆ. ಶ್ರೀ. ಹನುಮರೇಡ್ಡೆಪ್ಪ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 229/2013 ಕಲಂ. 279, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:

ದಿನಾಂಕ. 06-07-2013 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಮಾವ ರಮೇಶ ಪೊಲೀಸ್ ಪಾಟೀಲ ಸಾ. ಹೊಸಪೇಟೆ ಇವರು ತಮ್ಮ ಮೋಟಾರ ಸೈಕಲ್ ನಂ. ಕೆ.ಎ.35/ಎಕ್ಸ.1018 ನೇದ್ದರಲ್ಲಿ ಹೊಸಪೇಟೆಯಿಂದ ಅಬ್ಬಿಗೆರಿಗೆ ಹೋಗಿ ಅಬ್ಬಗೆರೆಯಿಂದ ರಾತ್ರಿ ಬೂದಗುಂಪಾಕ್ಕೆ ಬಂದು ಫಿರ್ಯಾದಿಗೆ ಮಾತನಾಡಿಸಿಕೊಂಡು ತಮ್ಮ ಮೋಟಾರ ಸೈಕಲದಲ್ಲಿ ಹೊಸಪೇಟೆಗೆ ಹೋಗಿ ಬೂದಗುಂಪಾ ಕ್ರಾಸ್ ಕಡೆಗೆ ಹೋಗುತ್ಗಿರುವಾಗ ಕೊಪ್ಪಳ ಗಂಗಾವತಿ ರಸ್ತೆಯ ಮೇಲೆ ಪೆಟ್ರೊಲ್ ಬಂಕ ಮುಂದೆ ಗಂಗಾವತಿ ರಸ್ತೆಯ ಮೇಲೆ ಲಾರಿ ನಂ. ಹೆಚ್.ಆರ್.61/ಬಿ.0906 ನೇದ್ದರ ಚಾಲಕನು ಲಾರಿಯನ್ನು ಗಂಗಾವತಿ ಕಡೆಯಿಂದ ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದು ರಮೇಶ ಇವರಿಗೆ ಹಿಂದೆ ಠಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ರಮೇಶ ಇತನು ಮೋ.ಸೈ. ಸಮೇತ ಕೆಳಗೆ ಬಿದ್ದಾಗ ಲಾರಿಯ ಮುಂದಿನ ಎಡಗಡೆಯ ಗಾಲಿ ರಮೇಶ ಇತನ ಬಲಗಾಲ ಮೇಲೆ ಹತ್ತಿ ಹೋಗಿದ್ದರಿಂದ ಬಲಗಾಲ ತೊಡೆಯಿಂದ ಪಾದದ ವರೆಗೆ ಚರ್ಮ ಹರಿದು ಎಲಬು ಮುರಿದು ಮಾಂಸಖಂಡ ಹೊರಗೆ ಬಂದು ಭಾರಿ ಗಾಯವಾಗಿರುತ್ತದೆ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶ ಇರುತ್ತದೆ. ಶ್ರೀ. ವಿ.ಕೆ. ಹಿರೇಗೌಡರ್ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Monday, September 2, 2013

Koppal Dist Crimes.


1) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ 74/2013 ಕಲಂ- 279, 304 (ಎ) ಐ.ಪಿ.ಸಿ : ದಿನಾಂಕ: 01.09.2013 ರಂದು ರಾತ್ರಿ 8.30 ಗಂಟೆ ಸುಮಾರಿಗೆ ಆರೋಪಿತನಾದ (ಮೃತ) ಬಾಲಾಜಿ @ ಬಾಲಪ್ಪ ತಂದೆ ಸಿದ್ದಪ್ಪ ಬಿಸನಳ್ಳಿ ವಯಾ: 36 ವರ್ಷ ಜಾ: ಗಾಣಿಗೇರ ಉ: ಸಿಡ್ಸ್ ಕಂಪನಿಯಲ್ಲಿ ಸುಪರವೈಸರ್ ಕೆಲಸ ಸಾ: ಕೊಡದಾಳ ಹಾ.ವ: ಚಿಲಕಮುಖಿ ತಾ:ಜಿ: ಕೊಪ್ಪಳ ತನ್ನ ಮೋಟಾರ ಸೈಕಲ್ ನಂ: ಕೆಎ 35 / ಕ್ಯೂ 2214 ನೇದ್ದನ್ನು ಮಂಗಳೂರು ಕಡೆಯಿಂದ ಕುದರಿಮೋತಿ ಕಡೆಗೆ ಮಂಗಳೂರು-ಕುದರಿಮೋತಿ ರಸ್ತೆಯ ಮೇಲೆ ಮಂಗಳೂರು ಸೀಮಾದಲ್ಲಿ ಮೋಟಾರ ಸೈಕಲನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟಾರ ಸೈಕಲ್ ಮೇಲೆ ನಿಯಂತ್ರಣ ಸಾಧಿಸದೇ ರಸ್ತೆಯ ಮೇಲೆ ಅಪಘಾತ ಮಾಡಿಕೊಂಡು ಬಿದ್ದು ಭಾರಿ ಪ್ರಮಾಣದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಶ್ರೀ. ಶಂಕರನಾಯಕ್ ಎ.ಎಸ್.ಐ ಬೇವೂರು ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 2)ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ 74/2013 ಕಲಂ- 279, 304 (ಎ) ಐ.ಪಿ.ಸಿ : 118/2013 ಕಲಂ. 376, 506 ಐ.ಪಿ.ಸಿ ದಿನಾಂಕ: 02-09-2013 ರಂದು ಬೆಳಗಿನ ಜಾವ 0100 ಗಂಟೆಗೆ ಇಲಕಲ್ಲ ಕಡಪಟ್ಟಿ ಆಸ್ಪತ್ರೆಯಿಂದಾ ಪೋನ ಮಾಹಿತಿ ಬಂದಅನ್ವಯ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಇಲಾಜ ಪಡೆಯುತ್ತಿದ್ದ ಬಾಲಕಿ ವಯಾ 9 ವರ್ಷ ಇವರ ಮಾವ ಪಿಯರ್ಾದಿದಾರರಾದ ಗುರುಸಂಗಪ್ಪ ತಂದೆ ಶಂಕ್ರಪ್ಪ ನಾಗೂರ ಸಾ; ಹುಲಗೇರಿ ರವರು ನೀಡಿದ ಲಿಖಿತ ಪಿಯರ್ಾದಿ ಸಾರಾಂಶ ಏನೇಂದರೆ ಪಿಯರ್ಾದಿಯ ತಂಗಿಯ ಮಗಳು ಸುಮಾರು 3 ವರ್ಷದಿಂದಾ ಹುಲಗೇರಾ ಗ್ರಾಮದಲ್ಲಿಯೇ ಇದ್ದಿದ್ದು 3 ನೇ ತರಗತಿ ಅಭ್ಯಾಸ ಮಾಡುತ್ತಿದ್ದು ಅದೆ. ದಿನಾಂಕ:- 01-09-2013 ರಂದು ರಾತ್ರಿ 8 ಗಂಟೆಗೆ ಪಿಯರ್ಾಧಿ ಮನೆಗೆ ಬಂದಿದ್ದು ಮನೆಯಲ್ಲಿ ತಮ್ಮನ ಹೆಂಡತಿಯು ಪರಿಶೀಲಿಸದಾಗ ಬಾಲಕಿಯ ಗುಪ್ತಾಂಗದಿಂದಾ ರಕ್ತ ಬಂದಿದ್ದು ಕಂಡಿದ್ದು ಇಲಾಜ ಕುರಿತು ಇಲಕಲ್ಲ ಅಸ್ಪತ್ರೆಗೆ ಸೇರಿಸಿದ್ದು, ಅಸ್ಪತ್ರೆಯಲ್ಲಿ ಪಿಯರ್ಾದಿದಾರರು ಹಾಗು ವೈದ್ಯರು ಬಾಲಕಿಯನ್ನು ವಿಚಾರಣೆ ಮಾಡಿದಾಗ ದಿನಾಂಕ; 1-09-2013 ರಂದು ಮುಂಜಾನೆ 11 ಗಂಟೆಯ ಸುಮಾರು ತನ್ನ ಸಂಗಡ ಓದುವ ಗೆಳತಿ ಹತ್ತಿರ ಕನ್ನಡ ನೋಟ ಬುಕ್ಕ ತರಲು ಗ್ರಾಮದ ಶಾಲೆಯ ಬಾಜು ಇರುವ ಸಂದಿಯಲ್ಲಿ ಹೋದಾಗ ಒಬ್ಬ ಅಪರಿಚಿತ ಹುಡುಗ ಕಪ್ಪು ಬಣ್ಣದವನಿದ್ದು, ಕೆಂಪು ಶರ್ಟ, ಕಪ್ಪು ಪ್ಯಾಂಟ್ ತೊಟ್ಟಿದವನು ತನಗೆ ಡಿಕ್ಕಿ ಹೊಡೆದು ನೆಲಕ್ಕೆ ಕೆಡವಿದ್ದು ನಂತರ ತೊಟ್ಟಿದ್ದ ಚಡ್ಡಿ ಬಿಚ್ಚಿ ಬಟ್ಟೆ ಎತ್ತಿ, ತನ್ನ ಪ್ಯಾಂಟ ಬಿಚ್ಚಿ ತನ್ನ ಮೈಮೇಲೆ ಬಿದ್ದು ಚೀರದಂತೆ ಬಾಯಿ ಹಿಡಿದು ಬೆದರಿಕೆ ಹಾಕಿ ತನಗೆ ಕೆಡಿಸಿರುತ್ತಾನೆ ಅಂತಾ ಹೇಳಿರುತ್ತಾಳೆ ಅಂತಾ ನೀಡಿದಿ ಫಿಯರ್ಾದಿ ಮೇಲಿಂದ ಶ್ರೀ ಶೇಖಮಹೇಬೂಬ ಎ.ಎಸ್.ಐ ಹನಮಸಾಗರ ಪೊಲೀಸ್ ಠಾಣೆ ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

 
Will Smith Visitors
Since 01/02/2008