Our Commitment For Safe And Secure Society

Our Commitment For Safe And Secure Society

This post is in Kannada language.

To view, you need to download kannada fonts from the link section.
Follow us on FACEBOOK also type
Koppal District Police

Monday, September 26, 2016

A murder case detected in Yelburga PS1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 159/2016 ಕಲಂ: 87 Karnataka Police Act:.
ದಿನಾಂಕ: 25-09-2016 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕಿನ್ನಾಳ ರಸ್ತೆಯ ಪ್ರಮೋದ ಕಲ್ಯಾಣ ಮಂಟಪದ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ  09 ಜನ ಆರೋಪಿತರು ಗುಂಪಾಗಿ ಕುಳಿತುಕೊಂಡು ಅಂದರ-ಬಾಹರ್ ಇಸ್ಪೀಟ ಜೂಜಾಟದಲ್ಲಿ ತೊಡಗಿರುವಾಗ ಶ್ರೀ ಸತೀಶ.ಎಸ್.ಪಾಟೀಲ್ ಪಿ.ಐ ಕೊಪ್ಪಳ ನಗರ ಠಾಣೆ ರವರು  ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿತರಿಂದ  13730=00  ಇಸ್ಪೀಟ ಜೂಜಾಟದ ಹಣವನ್ನು ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಮುದ್ದೇಮಾಲು ಹಾಗೂ ಆರೋಪಿತರೊಂದಿಗೆ ಹಾಜರಪಡಿಸಿದ್ದು, ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಸ್ವೀಕೃತ ಮಾಡಿಕೊಂಡು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾಗವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 282/2016 ಕಲಂ 279, 337, 338 ಐಪಿಸಿ:.
ದಿನಾಂಕ. 25-09-2016 ರಂದು 4-00 ಪಿ.ಎಂ.ಕ್ಕೆ ಫಿರ್ಯಾದಿ ಯಮನಪ್ಪ ತಂ/ ಹನಮಂತ ಮೂಗನೂರ ವಯಾ 31 ವರ್ಷ, ಜಾ. ಕುರುಬರು ಉ. ಕಟ್ಟಿಗೆ ವ್ಯಾಪಾರ ಸಾ. ಬಸಾಪಟ್ಟಣ ತಾ. ಗಂಗಾವತಿರವರು ತಮ್ಮ ಮಗ ವಿರೇಶ ವಯಾ 10 ವರ್ಷ ಇಬ್ಬರು ಚಿಕ್ಕಬೆಣಕಲ್ ದಿಂದ ಹಿರೇ ಬೆಣಕಲ್ ಗೆ ನಡೆದುಕೊಂಡು ಬರುತ್ತಿರುವಾಗ ಚಿಕ್ಕ ಬೆಣಕಲ್ ಹಿರೇ ಬೆಣಕಲ್ ರಸ್ತೆಯ ನಡುವೆ ಗಾಳೆಮ್ಮ ಗುಡಿ ಹತ್ತಿರ ಹಿಂದಿನಿಂದ ಮೋಟಾರ ಸೈಕಲ್ ನಂ. ಕೆ.ಎ.37/ವೈ.8318 ನೇದ್ದರ ಚಾಲಕ ವಿರೇಶ ತಂ/ ಪಕೀರಪ್ಪ ಗಿಣಿಗೇರಾ ಈತನು ತನ್ನ ಹೆಂಡತಿ ಉಮಾದೇವಿ ಇವರನ್ನು ಹಿಂದೆ ಕೂಡಿಸಿಕೊಂಡು ಮೋಟಾರ ಸೈಕಲನ್ನು ಅತಿವೇಗವಾಗಿ ನಿರ್ಲಕ್ಷತನದಿಂದ ಅಡ್ಡಾದಿಡ್ಡ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಫಿರ್ಯಾದಿ ಮಗ ವಿರೇಶನಿಗೆ ಡಿಕ್ಕಿ ಕೊಟ್ಟು ಅಪಘಾತ ಮಾಡಿ ಮೋಟಾರ ಸೈಕಲ್ ನಿಯಂತ್ರಣ ಮಾಡಲು ಆಗದೆ ಮೋಟಾರ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ಫಿರ್ಯಾದಿ ಮಗನಿಗೆ ಮೋಟಾರ ಸೈಕಲ ಚಾಲಕ ವಿರೇಶನಿಗೆ ಗಾಯಗಳಾಗಿದ್ದು ವಿರೇಶನ ಹೆಂಡತಿ ಉಮಾದೇವಿ ಇವರಿಗೆ ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಎಡಕಿವಿಯಿಂದ ಸ್ವಲ್ಪ ರಕ್ತ ಬಂದು ಮೂರ್ಚೆ ಹೋಗಿರುತ್ತಾಳೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 251/2016 ಕಲಂ 279,337,338,427 .ಪಿ.ಸಿ..

ದಿನಾಂಕ:25-09-2016 ಮುಂಜಾನೆ 09-00 ಗಂಟೆಯ ಸುಮಾರಿಗೆ ಫಿರ್ಯಾಧಿಯಾದ ನಾನು ಭೀಮಪ್ಪ ತಂದೆ ಹನುಮಪ್ಪ ಬಳೂಟಗಿ ಸಾ:ಗೂಡೂರ ನಮ್ಮ ಅಳಿಯನಾದ ಪ್ರಕಾಶ ತಂದೆ ರಾಮಣ್ಣ ಹೊಸಮನಿ ಇಬ್ಬರೂ ಕೂಡಿ ನಮ್ಮ ಅಳಿಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-29 ವ್ಹಿ-7527 ನೇದ್ದನ್ನು ತೆಗೆದುಕೊಂಡು ನಮ್ಮ ವಯಕ್ತಿಕ ಕೆಲಸದ ನಿಮಿತ್ಯ ಕುಷ್ಟಗಿಗೆ ಹೊರಟು ಕುಷ್ಟಗಿಗೆ ಬಂದು ಕುಷ್ಟಗಿಯಲ್ಲಿ ಮದ್ಯಾಹ್ನದವರೆಗೆ ನಮ್ಮ ಕೆಲಸವನ್ನು ಮುಗಿಸಿಕೊಂಡು ವಾಪಸ ಗೂಡೂರಗೆ ಹೋಗಲು ಕುಷ್ಟಗಿ-ಹನಮಸಾಗರ ರಸ್ತೆಯ ಮೇಲೆ ಹೋಗುತ್ತಿರುವಾಗ ಮದ್ಯಾಹ್ನ 04-00 ಗಂಟೆಯ ಸುಮಾರಿಗೆ ತಳವಗೇರಾ ಸೀಮಾದಲ್ಲಿ ತಳವಗೇರಾ ಇನ್ನೂ 1 ಕಿ.ಮೀ ದೂರ ಇರುವಾಗ್ಗೆ ನಮ್ಮ ಮೋಟಾರ ಸೈಕಲನ್ನು ನಡೆಯಿಸುತ್ತಿದ್ದ ನಮ್ಮ ಅಳಿಯ ಪ್ರಕಾಶ ಇತನು ಮೋಟಾರ ಸೈಕಲನ್ನ ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಮುಂದೆ ಎಡಗಡೆ ರಸ್ತೆಯ ಮೇಲೆ ಹೋಗುತ್ತಿದ್ದ ಒಂದು ಎಮ್ಮಿಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದರಿಂದ ನಾವು ಮೋಟಾರ ಸಮೇತ ಎಡಗಡೆ ಬಿದ್ದಿದ್ದು ಗಾಯ ಮಾಡಿಕೊಂಡಿದ್ದು ಎಮ್ಮಿಗೆ ಬಲಗಾಲು ಹಿಂಗಾಲು ಮುರಿದಂತಾಗಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Sunday, September 25, 2016

1] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ: 87 Karnataka Police Act:.
ದಿನಾಂಕ 23-09-2016 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಹಿರೇವಂಕಲಕುಂಟಾ ಗ್ರಾಮದಲ್ಲಿ ಸ್ಮಶಾನದ ಹತ್ತಿರ ಇರುವ ಖಾಲಿ ಜಾಗೆಯಲ್ಲಿ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ ಒಬ್ಬನು ಸಿಕ್ಕಿಬಿದ್ದಿದ್ದು ಇನ್ನೂಳಿದ 3 ಜನರು ಓಡಿ ಹೋಗಿದ್ದು ಇರುತ್ತದೆ ಸಿಕ್ಕಿ ಬಿದ್ದ ಆರೋಪಿತನಿಂದ ಹಾಗೂ ಪಣಕ್ಕೆ ಅಂತಾ ಹಚ್ಚಿದ ಕಣದಲ್ಲಿದ್ದ ಹಣ ಸೇರಿ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 500/-ರೂ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಜಪ್ತಿ ಪಂಚನಾಮೆಯೊಂದಿಗೆ ಪಿಎಸ್ಐ ರವರು ತಮ್ಮ ವರದಿ ಸಲ್ಲಿಸಿದ್ದರಿಂದ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78(3) Karnataka Police Act:.

ದಿನಾಂಕ: 23-09-2016 ರಂದು 7-00 ಪಿ.ಎಂ. ಕ್ಕೆ ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಸಾವರ್ಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆಂದು ವಂಚನೆ ಮಾಡಿ ಅವರನ್ನು ಮೋಸಗೊಳಿಸಿ ಅವರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿರುವಾಗ ದಾಳಿ ಮಾಡಿ ಹಿಡಿದಿದ್ದು, ದಾಳಿ ಕಾಲಕ್ಕೆ ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು, ಒಬ್ಬ ಆರೋಪಿತನು ಓಡಿ ಹೋಗಿರುತ್ತಾನೆ.  ಸಿಕ್ಕಿ ಬಿದ್ದವರ ಹತ್ತಿರ 5130 ರೂ. ನಗದು ಹಣ ಮತ್ತು 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳು ಸಿಕ್ಕಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

Saturday, September 24, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 162/2016 ಕಲಂ: 78(3) Karnataka Police Act:.
ದಿನಾಂಕ: 23-09-2016 ರಂದು 7-00 ಪಿ.ಎಂ. ಕ್ಕೆ ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ನಿಂತುಕೊಂಡು ಸಾವರ್ಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆಂದು ವಂಚನೆ ಮಾಡಿ ಅವರನ್ನು ಮೋಸಗೊಳಿಸಿ ಅವರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟದಲ್ಲಿ ತೊಡಗಿರುವಾಗ ದಾಳಿ ಮಾಡಿ ಹಿಡಿದಿದ್ದು, ದಾಳಿ ಕಾಲಕ್ಕೆ ಇಬ್ಬರು ಆರೋಪಿತರು ಸಿಕ್ಕಿ ಬಿದ್ದಿದ್ದು, ಒಬ್ಬ ಆರೋಪಿತನು ಓಡಿ ಹೋಗಿರುತ್ತಾನೆ.  ಸಿಕ್ಕಿ ಬಿದ್ದವರ ಹತ್ತಿರ 5130 ರೂ. ನಗದು ಹಣ ಮತ್ತು 2 ಬಾಲ್ ಪೆನ್ ಹಾಗೂ 2 ಮಟ್ಕಾ ಚೀಟಿಗಳು ಸಿಕ್ಕಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 87/2016 ಕಲಂ: 87 Karnataka Police Act:.
ದಿನಾಂಕ: 23-09-2016 ರಂದು ಸಾಯಂಕಾಲ 16-15 ಗಂಟೆಗೆ ಠಾಣೆಯಲ್ಲಿದ್ದಾಗ ವೆಂಕಟಾಪೂರ ಗ್ರಾಮದಲ್ಲಿ ಸೇವಾಲಾಲ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಹನುಮಸಾಗರ ಠಾಣೆಯಲ್ಲಿದ್ದ ಸಿಬ್ಬಂದಿ ಹೆಚ್.ಸಿ-11, 83, ಪಿ.ಸಿ-126, 162, 223, 208, 244 ರವರೊಂದಿಗೆ ಹೊರಟು ಗೊರೇಬಿಹಾಳ ಕ್ರಾಸ್ ಹತ್ತಿರ ನಿಂತ ಇಬ್ಬರು ಪಂಚರನ್ನು ಕರೆದುಕೊಂಡು ವೆಂಕಟಾಪೂರ ಗ್ರಾಮ ತಲುಪಿ ಸೇವಾಲಾಲ ಗುಡಿಯ ಹತ್ತಿರ ಸ್ವಲ್ಪದೂರ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸೇವಾಲಾಲ ಗುಡಿಯ ಹಿಂದೆ ಮರೆಗೆ ನಿಂತು ನೋಡಲಾಗಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 11 ಜನ ಆರೋಪಿತರು ಸಿಕ್ಕಿ ಬಿದಿದ್ದು. ಸದರಿ ಆರೋಪಿತರು ಜೂಜಾಟಕ್ಕೆ ಉಪಯೋಗಿಸಿದ್ದ 52 ಸ್ಪೇಟ್ ಎಲೆಗಳು ಹಾಗೂ 2160/- ರೂಪಾಯಿಗಳು ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ಬರ್ಕಾ ಸಿಕ್ಕಿಬಿದಿದ್ದು.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

Thursday, September 22, 2016

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 14/2016 ಕಲಂ: 87 Karnataka Police Act:.
ದಿನಾಂಕ:21-09-2016 ರಂದು 6-30 ಪಿಎಂಕ್ಕೆ ಮಸಬಹಂಚಿನಾಳ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಮಾನ್ಯ ಸಿ.ಪಿ.ಐ.ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ರವರು ಮಸಬಹಂಚಿನಾಳ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನದ ಹಿಂದಿನ ಬಯಲು ಜಾಗೇಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, 5 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 2450/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 196/2016 ಕಲಂ: 498(ಎ), 323, 504, 506 ಸಹಿತ 34 ಐ.ಪಿ.ಸಿ ಮತ್ತು 3, 4, 6 ವರದಕ್ಷಿಣೆ ನಿಷೇಧ ಕಾಯ್ದೆ:.

ದಿ:21-09-2016 ರಂದು ಮಧ್ಯಾನ್ನ 01.00  ಗಂಟೆಗೆ ಮಾನ್ಯ ಜೆ.ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳ ರವರಿಂದ ಖಾಸಗಿ ಫಿರ್ಯಾದಿ ಸಂ : 157/2016. ಹಾಗೂ ಎಲ್.ಟಿ. ಸಂ :887/2016. ದಿ : 17-09-2016 ನೇದ್ದರಲ್ಲಿ ಫಿರ್ಯಾದಿಯು ಸ್ವೀಕೃತವಾಗಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶವೇನೆಂದರೇ, ಕಳೆದ ದಿ:04-06-2015 ರಂದು ಆರೋಪಿ ನಂ : 01 ನೇದ್ದವರು ಫಿರ್ಯಾದಿದಾರಳಿಗೆ ಡಾವಣಗೇರಿಯಲ್ಲಿ ಮದುವೆ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತರು ಸದರಿ ಮದುವೆಗಾಗಿ ಫಿರ್ಯಾದಿದಾರರಿಗೆ ವರದಕ್ಷಿಣೆ ರೂಪದಲ್ಲಿ 8 ಲಕ್ಷ ರೂ. ಹಾಗೂ 15 ತೊಲೆ ಬಂಗಾರದ ವಡವೆಗಳನ್ನು ಕೊಡುವಂತೆ ಬೇಡಿಕೆ ಇಟ್ಟಿದ್ದು ಇರುತ್ತದೆ. ಫಿರ್ಯಾದಿಯ ಪೋಷಕರು ತನ್ನ ಮಗಳು ಚೆನ್ನಾಗಿರಲೆಂದು ಮದುವೆಯ ಕಾಲಕ್ಕೆ 3 ಲಕ್ಷ ರೂ. ಹಣ ಹಾಗೂ 06 ತೊಲೆ ಬಂಗಾರದ ಒಡವೆಗಳನ್ನು ಕೊಟ್ಟಿದ್ದು ಇರುತ್ತದೆ. ನಂತರ ಫಿರ್ಯಾದಿದಾರಳಿಗೆ ತನ್ನ ಗಂಡ ಮತ್ತು ಮನೆಯವರು ಚೆನ್ನಾಗಿ ನೋಡಿಕೊಳ್ಳದೇ, ಫಿರ್ಯಾದಿಯ ಗಂಡ ಮತ್ತು ಅತ್ತೆ ಮಾವ ನಾದಿನಿಯವರು ಕೂಡಿಕೊಂಡು ಫಿರ್ಯಾದಿದಾರಳಿಗೆ ವರದಕ್ಷಿಣೆ ಹಣ ಒಡವೆ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು ಇರುತ್ತದೆ. ನಂತರ ಫಿರ್ಯಾದಿ ದಾರಳು ಡಂಬ್ರಳ್ಳಿಗೆ ಬಂದಾಗ ಆರೋಪಿತರಿಗೆ ಕರೆಯಿಸಿ ಹಿರಿಯರ ಸಮಕ್ಷಮ ಪಂಚಾಯತಿ ಮಾಡಿದ್ದು ಆಗ ಆರೋಪಿತನು ವೈದ್ಯಕೀಯ ಉಪಚಾರಕ್ಕಾಗಿ ಉಳಿದ ವರದಕ್ಷಿಣೆ ಹಣ ಮತ್ತು ಬಂಗಾರದ ಒಡವೆ, ಕಾರು ಕೊಡಬೇಕು ಇಲ್ಲದಿದ್ದರೆ 02 ನೇ ಮದುವೆ ಮಾಡಿಕೊಳ್ಳುವುದಾಗಿ ಹೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Wednesday, September 21, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 195/2016 ಕಲಂ: 504, 323, 326, 448, 506 ಐ.ಪಿ.ಸಿ:.
ಫಿರ್ಯಾದಿ ಶ್ರೀದೇವಿ ತನ್ನ ಮನೆಯ ಮುಂದೆ ಕುಳಿತು ಮುಸರಿ ತಿಕ್ಕುವಾಗ ಅವಳ ತಂದೆಯ ತಾಯಿ ಅಂದರೆ ಅಜ್ಜಿ ಹನಮವ್ವಳು ನೋಡಿ ಫಿರ್ಯಾದಿಗೆ ಸಾಕು ಬಿಡು ಶಾಲೆಗೆ ಹೋಗು ಮನೆಯ ಮುಂದೆ ಕುಳಿತು ಹೊರಗಡೆ ಮುಸರಿ ತಿಕ್ಕಬೇಡ ವಯಸ್ಸಿನ ಹುಡುಗರು ಓಣಿ ದಾರಿಯಲ್ಲಿ ತಿರುಗಾಡುತ್ತಾರೆ. ಆಗಲೇ ನೀನು ದೊಡ್ಡವಳಾಗಿದ್ದಿಯಾ ಕೊಡ ತೆಗೆದುಕೊಳ್ಳುವ ಮಗಳು ಎಂದು ಬಾಯಿ ಮಾಡಿ ಕಳುಹಿಸುವಾಗ ಓಣಿಯ ದೇವರಾಜ ಎಂಬುವವನು ಫಿರ್ಯಾದಿ ಅಜ್ಜಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಹೇಳಿದಾಗ ಆತನಿಗೆ ಫಿರ್ಯಾದಿಯ ಅಜ್ಜಿ ಹನಮವ್ವಳು ಇಲ್ಲಾ ಏಕೆ ಇಲ್ಲಿ ನಿಂತೀರಿ ಅಂತಾ ಹೇಳಿ ಕಳುಹಿಸಿದಳು. ನಂತರ ನಿನ್ನೆ ರಾತ್ರಿ 8-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳು ತನ್ನ ಅಜ್ಜಿ, ಹನುಮವ್ವ, ತಾಯಿ ರತ್ನಮ್ಮ, ತಂದೆ ಗವಿಸಿದ್ದಪ್ಪ ಇರುವಾಗ ಆರೋಪಿ ಪಾರಮ್ಮ ಹುಣಸಿಹಾಳ ಇವಳು ಬಂದು ಫಿರ್ಯಾದಿಯ ಅಜ್ಜಿಗೆ ಲೇ ಭೋಸೂಡಿ ಇಂದು ಮುಂಜಾನೆ ನನ್ನ ಮಗ ದೇವರಾಜನಿಗೆ ಏಕೆ ಬೈಯ್ದಿಯಾ ನನ್ನ ಮಗ ಅಂಥಾದ್ದು ಏನು ಮಾಡಿದ್ದಾನೆಂದು ಜಗಳ ಮಾಡಿದಳು. ಆಗ ಆಕೆಗೆ ಫಿರ್ಯಾದಿಯ ತಂದೆ-ತಾಯಿ ಯವರು ಸಣ್ಣ ವಿಚಾರ ಯಾಕೆ ದೊಡ್ಡದು ಮಾಡುತ್ತೀಯಾ ಎಂದು ಹೇಳಿದರು ಸಹ ಅವಳು ಕೇಳದೇ, ಫಿರ್ಯಾದಿಗೆ ಲೇ ಸೂಳೇ ಇದೆಲ್ಲಾ ನಿನ್ನಿಂದಲೇ ಆಗಿದ್ದೆಂದು ಮೈ ಕೈ ಮುಟ್ಟಿ ಎಳೆದಾಡಿ ಕೈಗಳಿಂದ ಹಲ್ಲೆ ಮಾಡಿದ್ದು, ಅಲ್ಲದೇ ಫಿರ್ಯಾದಿಯ ಮನೆಯ ಅಡುಗೆ ಮನೆಯಲ್ಲಿ ಆರೋಪಿತಳು ಅತೀಕ್ರಮ ಪ್ರವೇಶ ಮಾಡಿ ಡಬರಿಯಲ್ಲಿ ಕಾಯಿಸಲು ಇಟ್ಟಿದ್ದ ನೀರನ್ನು ತೆಗೆದುಕೊಂಡು ಬಂದವಳೇ ಬಿಸಿನೀರನ್ನು ಫಿರ್ಯಾದಿಯ ಮೈಮೇಲೆ ಚೆಲ್ಲಿದ್ದರಿಂದ ಫಿರ್ಯಾದಿಯ ಎಡಕಪಾಳಕ್ಕೆ, ಎದೆಗೆ, ಎಡಗೈ ರಟ್ಟೆಗೆ ಎಡಭುಜಕ್ಕೆ, ಇತರೆ ಕಡೆಗಳಲ್ಲಿ ಚರ್ಮ ಸುಟ್ಟಂತೆ ನೀರಿನ ಬೊಬ್ಬೆಯಾಗಿ ಭಾರಿ ಗಾಯಗಳಾಗಿರುತ್ತವೆ. ನಂತರ ಆರೋಪಿತಳು ಫಿರ್ಯಾದಿಗೆ ಇಷ್ಟಕ್ಕೆ ಸುಮ್ಮನೆ ಬಿಡು ಇದನ್ನು ಯಾರ ಮುಂದೆ ಹೇಳಿದರೇ ನಿನಗೆ ಸೀಮೆ ಎಣ್ಣೆ ಉಗ್ಗಿ ಬೆಂಕಿ ಹಚ್ಚಿ ಸಾಯಿಸಿಬಿಡುತ್ತೇನೆಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾಳೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 157/2016 ಕಲಂ: 143, 147, 406, 323, 504, 506 ಸಹಿತ 149 ಐ.ಪಿ.ಸಿ:.

ಮಾನ್ಯ ನ್ಯಾಯಾಲಯದ ಉಲ್ಲೇಖಿತ ದೂರನ್ನು ಪಿಸಿ-414 ರವರು ಹಾಜರುಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿಯಾದ ನಾನು ಕೊಪ್ಪಳ ನಿವಾಸಿ ಇದ್ದು, ನನ್ನ ಮಗಳ ಮದುವೆ ಮಾಡಲಿಕ್ಕೆ ವರನಿಗೆ ಹುಡುಕಾಡುತ್ತಿದ್ದಾಗ ಮೌಲಾಸಾಬ ಎಂಬ ಎಜೆಂಟ್ ನು ಸಂಡೂರು ತಾಲೂಕ ಹೊಸ ದರೋಜಿ ಗ್ರಾಮದ ನಿವಾಸಿ ವಲಿಸಾಬ ಇವರ ಮಗನಾದ  ಶಕೀಲಅಹ್ಮದ ಎಂಬ ವರ ತಂದಿದ್ದು, ಎರಡೂ ಕುಟುಂಬದ ಸದಸ್ಯರು ಒಪ್ಪಿಕೊಂಡು ನಂತರ ದಿನಾಂಕ: 26-04-2016 ರಂದು ಕೊಪ್ಪಳ ಗಣೇಶ ನಗರದಲ್ಲಿರುವ ನಮ್ಮ ಮನೆಯಲ್ಲಿ ಆರೋಪಿತರು ಮತ್ತು ಸಾಕ್ಷಿದಾರರ ಸಮಕ್ಷಮ ನಿಶ್ಚಿತಾರ್ಥ ನೆರವೇರಿಸಿದ್ದು, ಆ ಕಾಲಕ್ಕೆ ಆರೋಪಿತರ ಒತ್ತಾಯದ ಮೇಲಿಂದ ನಿಶ್ಚಿತಾರ್ಥಕ್ಕಾಗಿ 10000/- ರೂ. ಹಣ ಮತ್ತು ಒಂದು ತೊಲೆ ಬಂಗಾರದ ಉಂಗುರ ಮತ್ತು ಅಲ್ಲದೆ ಮದುವೆಯ ನಿಶ್ಚಯ ಕಾಲಕ್ಕೆ ಮಾತುಕತೆಯಂತೆ 1,50,000/- ರೂ ವಲಿಸಾಬ ಇವರಿಗೆ ಕೊಟ್ಟಿದ್ದು ಇರುತ್ತದೆ. ಅಲ್ಲದೆ ದಿನಾಂಕ: 24-09-2016 ರಂದು ಕೊಪ್ಪಳದ ನೌಕರರ ಭವನದಲ್ಲಿ ಮದುವೆ ಮಾಡುವುದಾಗಿ ಮಾತುಕತೆ ಮಾಡಿದ್ದು ಇರುತ್ತದೆ. ನಂತರ ದಿನಾಂಕ: 21-08-2016 ರಂದು ಆರೋಪಿತರೆಲ್ಲರೂ ನಮ್ಮ ಮನೆಗೆ ಬಂದು ನೀನು 5,00,000/- ರೂ ನಗದು ಹಣ ಕೊಟ್ಟರೆ ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುತ್ತೇವೆ ಇಲ್ಲವಾದರೆ ನಿಮ್ಮ ಮಗಳನ್ನು ಬೇರೆ ಎಲ್ಲಿಯಾದರೂ ಕೊಡಿರಿ ಅಂತಾ ಹೇಳಿದ್ದು, ಆಗ ನಾನು ನಮ್ಮ ಹಿರಿಯರನ್ನು ಕರೆಯಿಸಿ ಕೇಳಿದಾಗ ನನಗೆ ಅವಾಚ್ಯವಾಗಿ ಬೈದಾಡಿ ಕಾಲಿನಿಂದ ಹೊಡಿಬಡಿ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.

Monday, September 19, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 193/2016 ಕಲಂ: 279, 338 & 304(ಎ) ಐ.ಪಿ.ಸಿ:.

ದಿನಾಂಕ:17.09.2016 ರಂದು ರಾತ್ರಿ 9-05 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪರಶುರಾಮ ಇವರ ಆರೈಕೆಯಲ್ಲಿದ್ದ ಸಂಬಂಧಿಕ ಮುದಿಯಪ್ಪ ಚಲುವಾದಿ ಸಾ: ತಳಕಲ್. ಇವರ ಹೇಳಿಕೆ ಫಿರ್ಯಾದಿಯನ್ನು ರಾತ್ರಿ 10-00 ಗಂಟೆಗೆ ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:17-09-16 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ತಮ್ಮ ಪರಶುರಾಮ ತಂದೆ ಸಿದ್ದಪ್ಪ ದೊಡ್ಡಮನಿ. ಕೊಪ್ಪಳ ನಗರಸಭೆ ಪೌರಕಾರ್ಮಿಕ, ಸಾ: ತಳಕಲ್ ಇತನು ಕೊಪ್ಪಳ ಕಡೆಯಿಂದ ತಳಕಲ್ ಕಡೆಗೆ ತನ್ನ ಮೋಟಾರ ಸೈಕಲ್ ನಂ; ಕೆಎ-37/ಯು-3553 ನೇದ್ದನ್ನು ಓಡಿಸಿಕೊಂಡು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಗುಳಗಣ್ಣವರ ಕಾಲೇಜ ಸಮೀಪದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರುಗಡೆ ಅಂದರೆ ಗದಗ ಕಡೆಯಿಂದ ಬಂದ ಕಾರ್ ನಂ: ಟಿ.ಎನ್-05/ಎ.ಎಮ್-8466 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಢು ಬಂದವನೇ ಪರಶುರಾಮ ಇವರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಪರಶುರಾಮನಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಕಾರ್ ಚಾಲಕ ರುದ್ರವಿಘ್ನೇಶ್ವರ ಸಾ: ಅಮಾಂಜಿಕೇರಿ ಚನೈ [ಟಿ.ಎನ್] ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಸಲ್ಲಿಸಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ. ನಂತರ ದಿನಾಂಕ 18-09-2016 ರಂದು ರಾತ್ರಿ 11-45 ಗಂಟೆಗೆ ಗಾಯಾಳು ಪರಶುರಾಮ ತಂದೆ ಸಿದ್ದಪ್ಪ ದೊಡ್ಡಮನಿ ಇವರು ಧಾರವಾಡ ಎಸ.ಡಿ.ಎಮ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮ್ರತ ಪಟ್ಟಿದ್ದು ಇರುತ್ತದೆ.

Sunday, September 18, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 302, 201 ಐ.ಪಿ.ಸಿ:.
ದಿನಾಂಕ 15-09-2016 ರಂದು ಆರೋಪಿತರು ಫಿರ್ಯಾದುದಾರ ಮಗನಾದ ರಂಗಪ್ಪ ಬಡಿಗೇರ ಈತನಿಗೆ ಸಿಸಿ ರಸ್ತೆ ಕಾಮಗಾರಿ ಕೆಲಸಕ್ಕೆ ಹಿಟ್ನಾಳ ಗ್ರಾಮಕ್ಕೆ ಕರೆದುಕೊಂಡು ಹೋಗಿ ಬೆಳಗಿನ ಸಮಯದಲ್ಲಿ ಕೆಲಸ ಮಾಡಿದ ನಂತರ ಆರೋಪಿತರು ಹಿಂದಿನ ಹಳೆಯ ದ್ವೇಷದಿಂದ ಕೊಲೆ ಮಾಡಿ, ಅಗಳಕೇರಾ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿಸಾಕಿದ್ದು ಇರುತ್ತದೆ. ಸದರಿ ರಂಗಪ್ಪ ಬಡಿಗೇರ ಈತನ ಕೊಲೆಯ ಸತ್ಯಾಸತ್ಯತೆ ಪತ್ತೆ ಮಾಡಿ ನ್ಯಾಯ ದೊರಕಿಸಬೇಕೆಂದು ಮುಂತಾಗಿ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು  ಇರುತ್ತದೆ.    
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 85/2016 ಕಲಂ: 324.354.504.506 ಸಹಿತ 34 ಐ.ಪಿ.ಸಿ:.
ಪಿರ್ಯಾದಿರಾರರು ಕಟ್ಟಿಗೆ ಕಡೆಯಲು ಅರೋಪಿ ಸಿದ್ದಪ್ಪನ ಹತ್ತಿರ ಕೊಡ್ಲಿ ಕೇಳಿ ತೆಗೆದುಕೊಂಡಿದ್ದು, ಕೊಡ್ಲಿಯನ್ನು ಕಳೆದುಕೊಂಡಿದ್ದು ನಂತರ ಬೇರೆ ಕೊಡ್ಲಿಯನ್ನು ಕೊಡಲು ಹೋದರೆ ಪಿರ್ಯಾದಿಯ ಸಂಗಡ ಸಿದ್ದಪ್ಪ ಮತ್ತು ಆತನ ಹೆಂಡತಿ ಇಬ್ಬರು ಸೇರಿಕೊಂಡು ಬಾಯಿ ಮಾಡಿಕೊಂಡು ಸಿಟ್ಟಾಗಿದ್ದರು. ದಿನಾಂಕ 16/09/2016 ರಂದು ಮುಂಜಾನೆ ಮಂಜವ್ವಳು ಪಿರ್ಯಾದಿಯ ಮನೆಯ ಹತ್ತಿರ ಬಂದು ಬಾಯಿ ಮಾಡಿದ್ದು ಪಿರ್ಯಾದಿಯು ಕೆಲಸ ಮುಗಿಸಿಕೊಂಡು ವಾಪಸು ಮನೆಗೆ ರಾತ್ರಿ 8-00 ಗಂಟೆಗೆ ಬಂದು ಮಂಜವ್ವಳ್ಳಿಗೆ ಯಾಕ ಒದರಾಡಿತ್ತಿರಿ ನಿಮಗೆ ಹೊಸ ಕೊಡ್ಲಿ ಕೊಡಿಸುತ್ತೀವಿ ಅಂತಾ ಪಿರ್ಯಾದಿಯ ಅಂಗಳದಲ್ಲಿ ಹೇಳುವಷ್ಟರಲ್ಲಿ ಸಿದ್ದಪ್ಪ ಮತ್ತು ಗಿಡ್ಡಪ್ಪ ತಂದೆ ಫಕೀರಪ್ಪ ಭಂಡಾರಿ ಹಾಗೂ ಶರಣಪ್ಪ ತಂದೆ ಕನಕಪ್ಪ ಭಂಡಾರಿ ರವರು ಎಲ್ಲರೂ ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಕೊಂಡು ಬಂದು ಅದೇನು ಕೊಡ್ಲಿ ಕೊಡಸುತ್ತಿದಿ ಮಗನೇ ನಿನಗೆ ಸರಿಯಾಗಿ ಕೊಟ್ರೇ ತಾನಾಗೇ ಬರುತ್ತೆ ಅಂತಾ ಪಿರ್ಯಾದಿಯ ಎಡಗೈ ಮೋಣಕೈಗೆ ಸಿದ್ದಪ್ಪ ಕಟ್ಟಿಗೆಯಿಂದ ಹೊಡೆದು ಮೂಖಪೆಟ್ಟು ಮಾಡಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 143, 147, 148, 504, 323, 324 ಸಹಿತ 149 ಐ.ಪಿ.ಸಿ

ಪಿರ್ಯಾದಿರಾರ ಮನೆಯ ಹತ್ತಿರ ಆರೋಪಿತರೆಲ್ಲಾ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗಡೆಗಳನ್ನು ಹಿಡಿದುಕೊಂಡು ಬಂದು ನಿಮಗೆ ಕೊಡ್ಲಿಬೇಕಾ, ನಿಮಗೆ ಯಾವ ಕೊಡ್ಲಿ ಇಲ್ಲಾ ಏನು ಇಲ್ಲಾ. ಅಂತಾ ಅವಾಚ್ಯ ಬೈದಾಡಿ, ಫಿರ್ಯಾದಿಗೆ ಹಾಗೂ ಫಿರ್ಯಾದಿ ಗಂಡನಿಗೆ ಎಲ್ಲರೂ ಕೈಯಿಂದ ಹೊಡೆ, ಬಡೆ ಮಾಡಿದ್ದು. ಕನಕಪ್ಪ ಈತನು ಕಟ್ಟಿಗೆ ಯಿಂದ  ಫಿರ್ಯಾದಿಯ ಬಲಗೈ ರೆಟ್ಟೆಗೆ ಹೊಡೆದು ಮೂಖ ಪೆಟ್ಟು ಮಾಡಿದನು. ಭೀಮಪ್ಪನು ಫಿರ್ಯಾಧಿ ಗಂಡನಿಗೆ ಬಲ ತಲೆಗೆ ಹೊಡೆದು ಒಳ ಪೆಟ್ಟು ಮಾಡಿದ್ದು. ಹನಮವ್ವ ಈಕೆಯು ಫಿರ್ಯಾದಿಯ ಹೊಟ್ಟೆಗೆ ಒದ್ದು ಒಳ ಪೆಟ್ಟು ಮಾಡಿದಳು, ಆಗ ಫಿರ್ಯಾದಿಯ ಮೈದುನರು ಹಾಗೂ ಹನಮಪ್ಪ, ಶರಣಪ್ಪ ರವರು ಜಗಳವನ್ನು ಬಿಡಿಸಿ ಕಳಿಸಿದ್ದು ಇರುತ್ತದೆ. . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

Saturday, September 17, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 275/2016 ಕಲಂ: 498(), 323, 324, 354, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 30-08-2012 ರಂದು ಫಿರ್ಯಾದಿ ದೂರನ್ನು ಶ್ರೀಮತಿ ಯಾಸ್ಮೀನ್ ಮದುವೆಯು ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಜಿ. ಅಬ್ದುಲ್ ಲತೀಫ್ ತಂದೆ ರೆಹಮತ್ ಸಾಬ, ವಯಸ್ಸು 28 ವರ್ಷ ಇವರೊಂದಿಗೆ ಆಗಿದ್ದು, ಮದುವೆಯ ಸಮಯದಲ್ಲಿ ರೂ. 50,000-00 ಹಾಗೂ 100 ಗ್ರಾಂ. ಬಂಗಾರವನ್ನು ಆರೋಪಿ ಜಿ. ಅಬ್ದುಲ್ ಲತೀಫ್ ಹಾಗೂ ಅವರ ಮನೆಯವರು ವರದಕ್ಷಿಣೆಯಾಗಿ ಪಡೆದುಕೊಂಡಿದ್ದು, ಮದುವೆಯಾದ ಒಂದೂವರೆ ವರ್ಷದವರೆಗೆ ಫಿರ್ಯಾದಿದಾರರು ಗಂಡನ ಮನೆಯಲ್ಲಿ ಅವರೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಯಿಸಿದ್ದು, ಆದರೆ ನಂತರದ ದಿನಗಳಲ್ಲಿ ಗಂಡನ ಮನೆಯಲ್ಲಿ ಫಿರ್ಯಾದಿದಾರರ ಗಂಡ ಹಾಗೂ ಮನೆಯವರಾದ (1) ಜಿ. ಅಬ್ದುಲ್ ಲತೀಫ್ ತಂದೆ ರೆಹಮತ್ ಸಾಬ, (2) ರೆಹಮತ್ ಸಾಬ ತಂದೆ ಶೇಖ್ ಸಾಬ, 65 ವರ್ಷ (3) ಶಕನ್ ಬೀ ಗಂಡ ರೆಹಮತ್ ಸಾಬ, 58 ವರ್ಷ (4) ವಲಿಬಾಷಾ ತಂದೆ ಶೇಖ್ ಸಾಬ, 60 ವರ್ಷ (5) ದಾದಾ ಪೀರ್ ತಂದೆ ರೆಹಮತ್ ಸಾಬ, 44 ವರ್ಷ (6) ರಫೀಕ್ ತಂದೆ ರೆಹಮತಸಾಬ, 41 ವರ್ಷ ಎಲ್ಲರೂ ಸಾ: ಮೋಕಾ ತಾ: ಜಿ: ಬಳ್ಳಾರಿ ಇವರುಗಳು ಕೂಡಿಕೊಂಡು ಫಿರ್ಯಾದಿದಾರಳಿಗೆ ತವರುಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ ರೂ. 2,00,000-00 ಗಳನ್ನು ತರುವಂತೆ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ಅಲ್ಲದೇ ಇದರ ಮಧ್ಯೆ ಮೋಟಾರ ಬೈಕ್ ಖರೀದಿಸಲು ಸಹ 20,000-00 ರೂ.ಗಳನ್ನು ಫಿರ್ಯಾದಿದಾರರ ತಂದೆಯಿಂದ ಆರೋಪಿತರು ಪಡೆದುಕೊಂಡಿದ್ದು, ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬರಬೇಕೆಂದು ಹೊಡಿ-ಬಡಿ ಮಾಡುವುದು, ಅವಾಚ್ಯವಾಗಿ ಬೈಯ್ಯುವುದು ಮತ್ತು ಊಟಕ್ಕೆ ಸರಿಯಾಗಿ ನೀಡದೇ ವಿಪರೀತ ಹಿಂಸೆಯನ್ನು ನೀಡಿ ಕೊನೆಯದಾಗಿ ದಿನಾಂಕ:-08-12-2014 ರಂದು ಹೊಡಿ-ಬಡಿ ಮಾಡಿ ಗಂಡನ ಮನೆಯಿಂದ ತವರುಮನೆಗೆ ಕಳುಹಿಸಿರುತ್ತಾರೆ.  ನಂತರ ಹಿರಿಯರು ಅನೇಕ ಬಾರಿ ಮೋಕಾಗೆ ಹೋಗಿ ಪಂಚಾಯತಿಗಳನ್ನು ಮಾಡಲಾಗಿ ಆರೋಪಿತರು ಫಿರ್ಯಾದಿದಾರಳನ್ನು ಕರೆದುಕೊಳ್ಳದೇ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿರುತ್ತಾರೆ.  ಅಲ್ಲದೇ ಆರೋಪಿ ಗ್ಯಾರವಿ ಕಾರ್ಯಕ್ರಮಕ್ಕೆಂದು ಬಂದಾಗ ಹಾಗೂ ನಂತರ 20-08-2015 ರಂದು ಚಿಕ್ಕಜಂತಕಲ್ ಗ್ರಾಮಕ್ಕೆ ಬಂದಾಗ ಪುನ: ವರದಕ್ಷಿಣೆಗಾಗಿ ಜಗಳ ಮಾಡಿ ಹೋಗಿರುತ್ತಾರೆ.  ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 216/2016 ಕಲಂ: 323, 341, 381, 447, 417, 418, 418, 420, 466, 467, 468, 504, 506 ಐ.ಪಿ.ಸಿ:.

ಪಿರ್ಯಾದಿದಾರಾದ ವಿರೇಶ ತಂದಿ ದಿ. ವಿರಣ್ಣ ಜೀರ್ ವಯಾ-35ವರ್ಷ ಉದ್ಯೋಗ- ಒಕ್ಕಲುತನ ಸಾ. ಮಾರ್ಡ ನಂ 6 ಶರಣಬಸವೇಶ್ವರ ದೇವಸ್ಥಾನದ ಹಿಂದುಗಡೆ, ಕಾರಟಗಿ ರವರಿಗೆ ಸಂಬಂದಿಸಿಧ ಜಮೀನು ಸರ್ವೆ ನಂ 415/2 ನೆದ್ದರಲ್ಲಿಯ ಸದ್ಯ ಪಿರ್ಯಾದಿದಾರರ ಹೆಸರಿನಲ್ಲಿರುವ 00-11 ಗುಂಟೆ ಜಮೀನಿಗೆ ಸಂಬಂದಿಸಿದಂತೆ ಆರೋಪಿ ನಂ 1 ಶ್ರೀ ವಿಠ್ಠಲರಾವ್ ತಂದೆ ಮಾದವಚಾರ್ಯ ಕೊಳ್ಳಿ, ವಯಾ-49 ವರ್ಷ - ಒಕ್ಕಲುತನ 2)  ಶ್ರೀಮತಿ ರಮಾಬಾಯಿ @ ರಾಧಾಬಾಯಿ ಗಂಡ ಕೃಷ್ಣಾಚಾರ ವಯಾ-75 ವರ್ಷ -ಒಕ್ಕಲುತನ ಸಾ. ಕಾರಟಗಿ ಹಾ. ಕಂಪ್ಲಿ ತಾ. ಹೊಸಪೇಟ 3)  ಆರ್. ಕೃಷ್ಣಸಿಂಗ್ ತಂದಿ ವೆಂಕಟಸಿಂಗ್ ಸಾ. ಕಾರಟಗಿ ತಾ. ಗಂಗಾವತಿ 4) ರಾಮರಾವ್ ಕುಲಕುರ್ಣಿ ಸಾ. ಕಾರಟಗಿ ತಾ. ಗಂಗಾವತಿ ಸಾ. ಕಾರಟಗಿರವರ ಕೂಡಿಕೊಂಡು ಆರೋಪಿ ನಂ 1 ರವರಿಗೆ ಆರೋಪಿ ನಂ 2 ರವರು ಜಿ.ಪಿ. ಕೊಟ್ಟಂತೆ ಸುಳ್ಳು ಜಿ.ಪಿ. ಸೃಷ್ಟಿ ಮಾಡಿದ್ದು ಅಲ್ಲದೇ ಮೋದಲು ಬೇರೆ ಆಸ್ತಿಗಳಿಗೆ ಆರೋಪಿ ನಂ 1 ರವರಿಗೆ ಆರೋಪಿ ನಂ 2 ರವರು ಕೊಟ್ಟಿದ್ದ ಜಿ.ಪಿ. ದಾಖಲಾತಿಯನ್ನು ತಿದ್ದುಪಡಿ ಮಾಡಿ ಪಿರ್ಯಾದಿದಾರರ ಜಮೀನು ಸರ್ವೆ ನಂ 415/2 ನೆದ್ದರಲ್ಲಿಯ 00-11 ಗುಂಟೆ ಜಮೀನಿಗೆ ಸಂಬಂದಿಸಿದಂತೆ ಆರೋಪಿ ನಂ 1 ಈತನು ತಕರಾರು ಮಾಡಿ 03-08-2016 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಅಶ್ಲೀಲವಾಗಿ ಬೈದು ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

 
Will Smith Visitors
Since 01/02/2008