Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, May 31, 2017

ಇಂದು ಕೊಪ್ಪಳ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಡಾ. ಅನೂಪ್ ಎ. ಶೆಟ್ಟಿ ಐ.ಪಿ.ಎಸ್.ರವರು ಪ್ರಭಾರ ವಹಿಸಿಕೊಂಡರು ಮತ್ತು ವರ್ಗಾವಣೆಗೊಂಡ ಡಾ: ಕೆ. ತ್ಯಾಗರಾಜನ್ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರನ್ನು ಬೀಳ್ಕೊಡಲಾಯಿತು ಈ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸ್ ಅಧೀಕಾರಿಗಳು ಮತ್ತು ಸಿಬ್ಬಂದಿರವರು ಹಾಜರಿದ್ದರು.

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 121/2017 ಕಲಂ. 279,  337, 338, 304(ಎ)  ಐ.ಪಿ.ಸಿ ಮತ್ತು 181(3) ಎಂ.ವಿ. ಕಾಯ್ದೆ:.
ದಿ:30.05.2017 ರಂದು ನಮ್ಮ ಠಾಣೆಯ ಕೊರ್ಟ ಕರ್ತವ್ಯದ ಸಿಪಿಸಿ-25 ಬಾಲಚಂದ್ರ ರವರು ತೆಗೆದುಕೊಂಡು ಬಂದ ಮಾನ್ಯ ಜೆ.ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳದ ಪಿ.ಸಿ-ನಂ:125/2017. ನೇದ್ದರ ಖಾಸಗಿ ಫಿರ್ಯಾದಿಯು ಮಾನ್ಯ ಸಿಪಿಐ ಕೊಪ್ಪಳ ಗ್ರಾಮಿಣ ವೃತ್ತ ರವರ ಕಚೇರಿಯಿಂದ ದಿ-30.05.2017 ರಂದು ಬೆಳೆಗ್ಗೆ 11.00 ಗಂಟೆಗೆ ಠಾಣೆಗೆ ಸ್ವೀಕೃತಿಯಾಗಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ದಿನಾಂಕ-18.03.2015 ರಂದು ಸಂಜೆ 05.30 ಗಂಟೆಗೆ ಕಿನ್ನಾಳ ಗ್ರಾಮದಿಂದ ಮಂಗಳೂರ ರಸ್ತೆಯ ಕಡೆ ಫಿರ್ಯಾದಿ ಮತ್ತು ಅವರ ತಮ್ಮ ಮೃತ ಅಂದಾನಪ್ಪ ಇಬ್ಬರೂ ವಾಕಿಂಗ್ ಹೊರಟಾಗ ಹಿಂದುಗಡೆಯಿಂದ ಬಸವರಾಜ ತಂದೆ ಧರ್ಮನಗೌಡ ಪೊಲೀಸ್ ಪಾಟೀಲ್ ವಯ:32, ಸಾ:ಚಿಕ್ಕಬಿಡನಾಳ ಈತನು ತನ್ನ ಟಿವಿಎಸ್ ಸ್ಟಾರ್ ಸ್ಪೋರ್ಟ ದ್ವಿಚಕ್ರ ವಾಹನ ಸಂಖ್ಯೆ: ಕೆಎ-37-ಯು-0292 ನೇದ್ದನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಫಿರ್ಯಾದಿ ತಮ್ಮ ಅಂದಾನಪ್ಪ ಇವರಿಗೆ ಹಿಂದಿನಿಂದ ಜೋರಾಗಿ ಟಕ್ಕರ ಕೊಟ್ಟು ಅಪಘಾತಪಡಿಸಿದ್ದು ಅಪಘಾತದಲ್ಲಿ ಅಂದಾನಪ್ಪ ಇವರ ಬಲಗಾಲು ಪೂರ್ತಿ ಮುರಿದು ತಲೆಗೆ ಭಾರಿ ಪೆಟ್ಟಾಗಿ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು ನಂತರ ಹೆಚ್ಚಿನ ಇಲಾಜ ಕುರಿತು ಬೆಳಗಾಂವ ಕೆ.ಎಲ್.ಇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ದಿ-18.03.2015 ರಂದು ಅಪಘಾತಪಡಿಸಿ ನನ್ನ ತಮ್ಮ ಅಂದಾನಪ್ಪನ ಸಾವಿಗೆ ಕಾರಣನಾದ ಬಸವರಾಜ ತಂದೆ ಧರ್ಮನಗೌಡ ಪೊಲೀಸ್ ಪಾಟೀಲ್ ವಯ:32, ಸಾ: ಚಿಕ್ಕಬಿಡನಾಳ ಈತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 122/2017 ಕಲಂ. 279,  338 ಐ.ಪಿ.ಸಿ:.
ದಿ:30-05-17 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿದಾರರು ಆರೋಪಿ ಬಸವರಾಜ ನ ಮೋಟಾರ ಸೈಕಲ್ ನಂ: ಕೆಎ-37/ಇಬಿ-0216 ನೇದ್ದರ ಹಿಂದೆ ಕುಳಿತುಕೊಂಡು ಹಂದ್ರಾಳದಿಂದಾ ವಾಪಾಸ್ ಕೊಪ್ಪಳಕ್ಕೆ ಅಂತಾ ಮಿಲೆನಿಯಮ್ ಕಾಲೇಜ ಸಮೀಪ ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯಲ್ಲಿ ಬರುತ್ತಿದ್ಧಾಗ ಸದರಿ ಬಸವರಾಜ ಇತನು ತನ್ನ ಮೋಟಾರ ಸೈಕಲ್ ನ್ನು ಹಲಿಗೇರಿ ಕಡೆಯಿಂದ ಕೊಪ್ಪಳದ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಓಡಿಸುತ್ತಾ ಕರ್ವಿಂಗ್ ನ್ನು ಗಮನಿಸದೆ ರಸ್ತೆಯ ಎಡಬಾಜು ಪಲ್ಟಿ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿ ಮತ್ತು ಆರೋಪಿತನಿಗೆ ಭಾರಿ ಗಾಯವಾಗಿರುತ್ತವೆ. ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ಸವಾರ ಬಸವರಾಜ ಹಡಪದ. ಸಾ: ಹನುಮಸಾಗರ. ತಾ: ಮುಂಡರಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ. 279, 336,  338 ಐ.ಪಿ.ಸಿ:.

ದಿನಾಂಕ:-30-05-2017 ರಂದು ರಾತ್ರಿ 9-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ವಾಹನ ಅಪಗಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹನುಮಂತಪ್ಪ ತಂದಿ ಭೀಮಪ್ಪ ಬಳ್ಳಾರಿ ವಯಾ-48ವರ್ಷ ಜಾ.ಕುರುಬರು ಉ-ಒಕ್ಕಲುತನ ಸಾ. ನಂದಿಹಳ್ಳಿ ಪಿರ್ಯಾದಿದಾರರು ಮತ್ತು ಪಿರ್ಯಾದಿ ಮಗ ಮಂಜುನಾಥ ಕೂಡಿ ತಮ್ಮ ಮೋಟಾರ್ ಸೈಕಲ್ ನಂ KA-37EA8659 ನೆದ್ದನ್ನು ತೆಗೆದುಕೊಂಡು ಹುಲಿಗಿಗೆ ಹೋಗಿ ದರ್ಶನಮಾಡಿಕೊಂಡು ವಾಪಸ ನಂದಿಹಳ್ಳಿಗೆ ಹೊರಟಗಿದ್ದಾಗ್ಗೆ ಗಂಗಾವತಿ- ಕಾರಟಗಿ ರಸ್ತೆಯ ದಿನಾಂಕ:-30-05-2017 ರಂದು ರಾತ್ರಿ 8-30 ಗಂಟೆಗೆ ಸಿದ್ದಾಪೂರದ ಈಳಿಗನೂರು ಕ್ರಾಸ್ ಹತ್ತಿರ ಕಾರ್ ನಂ AP-28DR-9898 ನೆದ್ದರ ಚಾಲಕ ನರಸಿಂಹ ತಂದಿ ಉತ್ತಪ್ಪ ಈತನು ಕಾರಟಗಿ ಕಡೆಯಿಂದ ತನ್ನ ಕಾರನ್ನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಅಜಾಗುರುಕತೆಯಿಂದ ಎರ್ರಾಬಿರ್ರಿಯಾಗಿ ರಸ್ತೆಯಲ್ಲಿ ಚಲಾಯಿಸಿಕೊಂಡು ಪಿರ್ಯಾದಿದಾರರ ಮಗ ಮಂಜುನಾಥ ಈತನು ಚಲಾಯಿಸಿಕೊಂಡು ಹೋರಟಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿ ಹನುಮಂತಪ್ಪನಿಗೆ ಎಡಗಾಲು ಪಾದಕ್ಕೆ ಗಂಬೀರ ರಕ್ತಗಾಯ ಮತ್ತು ಸೊಂಟಕ್ಕೆ ಒಳಪೆಟ್ಟು ಮೋ.ಸೈ ಚಾಲಕ ಮಂಜುನಾಥನಿಗೆ ಎಡಗಾಲಿಗೆ ಒಳಪೆಟ್ಟಾಗಿರುತ್ತದೆ ಕಾರ್ ಚಾಲಕ ಕಾರ ಚಾಲು ಮಾಡಿಕೊಂಡು ಹೋಗಿರುತ್ತಾನೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Tuesday, May 30, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ.  337, 338, 304(ಎ)  ಐ.ಪಿ.ಸಿ:.

ದಿ:29.05.2017 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:29-05-17 ರಂದು ಸಂಜೆ 5-45 ಗಂಟೆಯ ಸುಮಾರಿಗೆ ಓಜನಹಳ್ಳಿ ಸೀಮಾದಲ್ಲಿ ಫಿರ್ಯಾದಿ ಮತ್ತು ತನ್ನ ಅಣ್ಣ ರಮೇಶ ಕೂಡಿಕೊಂಡು ಓಜನಹಳ್ಳಿ ಸೀಮಾದ ತಮ್ಮ ಹೊಲದಲ್ಲಿ ಕಸ ತೆಗೆಯಲು ಹೋದಾಗ, ಬಾಜು ಹಿರೇಹಳ್ಳದಲ್ಲಿ ಓಜನಹಳ್ಳಿ ಗ್ರಾಮದ ಟ್ರ್ಯಾಕ್ಟರ ಮಾಲೀಕ ಪ್ರಭುಗೌಡ ಈಶ್ವರಗೌಡ್ರ ಹಾಗೂ ಚಾಲಕ ಹನುಮೇಶ ದೊಡ್ಡಮನಿ ಇವರುಗಳು ಗಿಳಿಯಪ್ಪ ಸಾ: ಹೊನ್ನುಣಸಿ ಹಾಗೂ ಶಿವರಾಜ @ ಶಿವಪ್ಪ ಸಾ: ಓಜನಹಳ್ಳಿ ಇವರುಗಳಿಗೆ ಮರಳನ್ನು  ತುಂಬಲು ಕರೆದುಕೊಂಡು ಹೋಗಿದ್ದು ಅಲ್ಲಿ ಮರಳನ್ನು ತುಂಬುವಾಗ ಮರಳು ಗುಡ್ಡೆ ಕುಸಿದು ಮರಳು ತುಂಬುವವರ ಮೇಲೆ ಬೀಳುತ್ತದೆ ಅಂತಾ ಕಂಡುಬಂದರು ಕೂಡಾ ಟ್ರ್ಯಾಕ್ಟರ ಮಾಲೀಕ ಮತ್ತು ಚಾಲಕ ಇವರುಗಳು ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸಿದ್ದರಿಂದ ಮರಳು ತುಂಬುತ್ತಿದ್ದ ಗಿಳಿಯಪ್ಪ ಮತ್ತು ಶಿವರಾಜನ ಮೇಲೆ ಮರಳಿನ ಗುಡ್ಡೆ [ಪಡಿ] ಕುಸಿದು ಬಿದ್ದು, ಗಿಳಿಯಪ್ಪನಿಗೆ ಸಾದಾಗಾಯ ಮತ್ತು ರಕ್ಷಣೆ ಮಾಡಲು ಹೋಗಿದ್ದ ಫಿರ್ಯಾದಿಯ ಅಣ್ಣ ರಮೇಶನಿಗೆ ಭಾರಿ ಪೆಟ್ಟಾಗಿದ್ದು ಇರುತ್ತದೆ. ಅಲ್ಲದೇ ಶಿವರಾಜನಿಗೆ ಮರಳಿನ ಹತ್ತಿರ ಇದ್ದ ಟ್ರ್ಯಾಕ್ಟರ ಟ್ರೇಲರ್ ಸಮೇತ ಮರಳಿನಲ್ಲಿ ಬಡಿದು ಭಾರಿ ಪೆಟ್ಟಾಗಿದ್ದರಿಂದ ಆತನಿಗೆ ಕೊಪ್ಪಳದ ಖುಷಿ ಆಸ್ಪತ್ರೆಗೆ ಕರೆತಂದಾಗ ರಾತ್ರಿ 7-30 ಗಂಟೆಗೆ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ ಆಗಿರುವ ಬಗ್ಗೆ ತಿಳಿಸಿದ್ದು ಇರುತ್ತದೆ. ಸದರ ಟ್ರ್ಯಾಕ್ಟರ ಸೊನಾಲಿಕಾ ಕಂಪನಿಯದಿದ್ದು ನೋಡಿದಲ್ಲಿ ಗುರ್ತಿಸುತ್ತೇನೆ. ಕಾರಣ ಸದರಿ ಟ್ರ್ಯಾಕ್ಟರ ಮಾಲೀಕ ಮತ್ತು ಚಾಲಕನ ನಿರ್ಲಕ್ಷತನವೇ ಶಿವರಾಜನ ಸಾವಿಗೆ ಕಾರಣವಾಗಿರುತ್ತದೆ. ಕಾರಣ ಟ್ರ್ಯಾಕ್ಟರ ಮಾಲೀಕ ಮತ್ತು ಚಾಲಕ ನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ತಡವಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಸಲಿಸಿ ತಪಾಸಣೆ ಕೈಗೊಂಡಿದ್ದು ಅದೆ. 

Monday, May 29, 2017

1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ. 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರಾದ ದೇವಪ್ಪ ತಂದೆ ರಾಮಪ್ಪ ಗಂಗನಾಳ ಇಂದು ಮದ್ಯಾಹ್ನ 03-00 ಗಂಟೆಯ ಸುಮಾರಿಗೆ ಕುಷ್ಟಗಿಯ ಗಂಜಗೆ ಬಂದಿದ್ದೇನು. ಸಂಜೆ 05-15 ಗಂಟೆ ಸುಮಾರಿಗೆ ಪಿರ್ಯಾದಿಗೆ ಪೋನ ಮೂಲಕ ತನ್ನ ಅಳಿಯನಾದ ರಾಮಪ್ಪ ಈತನಿಗೆ ಅಪಘಾತವಾಗಿದೆ ಅಂತಾ ಸುದ್ದಿ ಗೊತ್ತಾಗಿ. ಕೂಡಲೇ ತಾನು ತಮ್ಮ ಸಂಬಂದಿಕನಾದ ಬಸವರಾಜ ನಾಯಕ ಈತನನ್ನು ಕರೆದುಕೊಂಡು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು. ಆಗ ನಾನು ನಮ್ಮ ಅಳಿಯ ರಾಮಪ್ಪ ಕಮತರ ಈತನನ್ನು ನೋಡಲಾಗಿ ಈತನ ತಲೆಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ, ನಂತರ ಅಪಘಾತವಾದ ಮೋಟಾರ ಸೈಕಲ ನೋಡಲು ಅದರ ನಂಬರ ಕೆ.-37-ಇಬಿ-7727 ಅಂತಾ ಇದ್ದು ಅದರ ಸವಾರನ ಹೆಸರು ವಿಚಾರಿಸಲು ಲಕ್ಷ್ಮಣ ತಂದೆ ಮರಿಯಪ್ಪ ಬ್ಯಾಳಿ ವಯಾ 38 ವರ್ಷ ಜಾ:ಹಿಂದೂ ಲಿಂಗಾಯತ ಉ:ಒಕ್ಕಲುತನ ಸಾ:ತಾಳಕೇರಿ ಅಂತಾ ಗೊತ್ತಾಯಿತು, ಈತನಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ನಂತರ ವಿಚಾರಿಸಲಾಗಿ ಸದರಿ ಲಕ್ಷ್ಮಣ ಈತನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ರಸ್ತೆಯಲ್ಲಿನ ತೆಗ್ಗನ್ನು ನೋಡದೇ ಹಾಗೇಯೇ ನಡೆಸಿದ್ದರಿಂದ ಹಿಂದೆ ಕುಳಿತ ನನ್ನ ಅಳಿಯನಾದ ರಾಮಪ್ಪನು ಪುಟಿದು ಕೆಳಗೆ ಬಿದ್ದು ಗಾಯಗೊಂಡಿರುವ ಬಗ್ಗೆ ಗೊತ್ತಾಯಿತು. ನಂತರ ಕೂಡಲೇ 108 ಅಂಬುಲೆನ್ಸಗೆ ಪೋನ ಮಾಡಿ ಅಂಬುಲೆನ್ಸ ಬಂದ ನಂತರ ಚಿಕತ್ಸೆಗಾಗಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ವೈದ್ಯಾಧೀಕಾರಿಗಳು ಪ್ರಥಮ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಅಂಬುಲೆನ್ಸದಲ್ಲಿ ಬಾಗಲಕೋಟಗೆ ಹೋಗುತ್ತಿದ್ದಾಗ ಹುನಗುಂದ ಹತ್ತಿರ ಮಾರ್ಗದಲ್ಲಿ ಸದರಿ ರಾಮಪ್ಪ ಈತನು ಸಂಜೆ 06-30 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 119/2017 ಕಲಂ. 279, 338 ಐ.ಪಿ.ಸಿ:.

ದಿ:28-05-2017 ರಂದು ರಾತ್ರಿ 9-30 ಗಂಟೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಆರೈಕೆಯಲ್ಲಿದ್ದ ಹಾಗೂ ಪ್ರತ್ಯಕ್ಷ ಸಾಕ್ಷಿದಾರರಾದ, ಸೈಯದ ಸಾದಿಕಲಿ ಸಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೆನೆಂದರೆ, ಇಂದು ದಿ:28-05-17 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಫಿರ್ಯಾದಿದಾರು ಗಿಣಿಗೇರಿ ಕಡೆಯಿಂದ ಕೊಪ್ಪಳಕ್ಕೆ ತಮ್ಮ ಮೋಟಾರ ಸೈಕಲ್ ಓಡಿಸಿಕೊಂಡು ಬರುವಾಗ ಕೊಪ್ಪಳ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಎಮ್.ಎಸ್.ಪಿ.ಎಲ್ ಕ್ರಾಸ್ ಹತ್ತಿರ ತನ್ನ ಮುಂದೆ ಸ್ಕೂಟಿ ನಂ: ಕೆಎ-37/ಇಬಿ-5645 ನೇದ್ದರ ಚಾಲಕ ಖಾಸಿಂ ಅಲಿ ಇತನು ತನ್ನ ವಾಹನದ ಹಿಂದೆ ಖಾಸೀಂಸಾಬ ಬಳ್ಳಾರಿ. ಇತನಿಗೆ ಕೂಡ್ರಿಸಿಕೊಂಡು ಗಿಣಿಗೇರಿ ಕಡೆಯಿಂದ ಕೊಪ್ಪಳದ ಕಡೆಗೆ ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ವಾಹನ ನಿಯಂತ್ರಿಸದೇ ಪಲ್ಟಿ ಮಾಡಿದ್ದರಿಂದ ಸ್ಕೂಟಿ ಸವಾರ ಮತ್ತು ಹಿಂಬದಿ ಸವಾರನಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Sunday, May 28, 2017

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 118/2017 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ:27-05-17 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಮೋಟಾರ ಸೈಕಲ್ ಓಡಿಸಿಕೊಂಡು ಗುಳದಳ್ಳಿಯಿಂದ ಗಿಣಿಗೇರಿ ಕಡೆಗೆ ಅಂತಾ ಸಪ್ತಗಿರಿ ಪೆಟ್ರೋಲಬಂಕ್ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರುಗಡೆ ಅಂದರೆ ಗಿಣಿಗೇರಿ ಕಡೆಯಿಂದ ಒಂದು ಲಾರಿ ಬರುತ್ತಿದ್ದು ಸದರಿ ಲಾರಿಯ ಹಿಂದಿನಿಂದ ಟ್ರ್ಯಾಕ್ಸ ನಂ: ಕೆಎ-37/8163 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಲಾರಿಯನ್ನು ಓವರ ಟೇಕ್ ಮಾಡಿಕೊಂಡು ಬಂದು ಫಿರ್ಯಾದಿದಾರರ ಮುಂದೆ ಹೊರಟಿದ್ದ ಹಿರೋ ಡೀಲಕ್ಸ ಹೊಸ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಅಲ್ಲದೇ ರಸ್ತೆಯ ಬಾಜು ನಡೆದುಕೊಂಡು ಹೊರಟಿದ್ದ ಪಾದಚಾರಿಗೆ ಸಹ ಟಕ್ಕರ ಕೊಟ್ಟು ಅಪಘಾತ ಮಾಡಿ ವಾಹನ ಸಮೇತ ಚಾಲಕನು ಓಡಿ ಹೋಗಿದ್ದು ಇರುತ್ತದೆ. ಅಪಘಾತ ಮಾಡಿದ ಚಾಲಕನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ. ಸದರಿ ಅಪಘಾತದಲ್ಲಿ ಮೋಟಾರ ಸೈಕಲ್ ಸವಾರ ಸಿದ್ದಪ್ಪ ಕಾಸನಕಂಡಿ ಸಾ: ಗಿಣಿಗೇರಿ. ಇತನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು ಪಾದಚಾರಿ ಮುದಿಯಪ್ಪ ಕಿಡದಾಳ. ಸಾ: ಸಂಗಾಪೂರ. ಇತನಿಗೆ ಸಹ ಭಾರಿ ಪೆಟ್ಟುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಮತ್ತು ಮೋಟಾರ ಸೈಕಲ್ ಹಿಂಬದಿ ಸವಾರ ತಿರುಪತೆಪ್ಪ ಅರಕೇರಿ. ಸಾ: ಗಿಣಿಗೇರಿ. ಇತನಿಗೆ ತೀವ್ರ ಗಾಯಗಳಾಗಿದ್ದರಿಂದ ಕೂಡಲೇ ಸಮೀಪದ ಗಿಣಿಗೇರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸಂಜೆ 5-30 ಗಂಟೆಗೆ ಬ್ರಾಟ್ ಡೆಡ್ ಆಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ. 143, 147, 148, 341, 323, 324, 395, 506 ಸಹಿತ 149 ಐ.ಪಿ.ಸಿ:
ದಿನಾಂಕ 27-05-2017 ರಂದು ರಾತ್ರಿ 9-00 ಗಂಟೆಗೆ ನಾನು, ನನ್ನ ಬೈಕ್ ದಲ್ಲಿ ಮನೆಗೆ ಬರುತ್ತಿರುವಾಗ ಆಸೀಫ್ ಸಾ: ಪಂಪಾನಗರ ಹಾಗೂ ಇತರೇ 15 ಜನರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಚಾಕು, ಬಡಿಗೆಗಳನ್ನು ತೆಗೆದುಕೊಂಡು, ಪಂಪಾನಗರ ಸರ್ಕಲ್, ವೀರೇಶ ಫೋಟೋ ಸ್ಟುಡಿಯೋ ಹತ್ತಿರ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ನಿನ್ನನ್ನು, ನಿನ್ನ ಮನೆಯವರನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ, ನೀನೇನು ಸೆಂಟ ಮಾಡುತ್ತಿ ಸೂಳೇಮಗನೆ ಅಂತಾ ಬೈದು ಎಲ್ಲರೂ ಹಲ್ಲೆ ಮಾಡಿದ್ದು, ನನ್ನ ಬಲಗಣ್ಣಿಗೆ ರಕ್ತಗಾಯವಾಗಿದ್ದು, ಬಡಿಗೆಗಳಿಂದ ಹೊಡೆದಿದ್ದರಿಂದ ಹಣೆಗೆ, ತುಟಿಗೆ, ತಲೆಗೆ, ಬೆನ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತವೆ.  ನನ್ನ ಕೊರಳಲ್ಲಿದ್ದ ಬಂಗಾರದ 4 ತೊಲೆ ಚೈನು, 5 ತೊಲೆ ಬ್ರಾಸ್ಲೈಟ್ ಕಿತ್ತುಕೊಂಡು ಹೋಗಿರುತ್ತಾರೆ.  ನನ್ನ ಬೈಕ್ ಕೆಳಗೆ ಬಿದ್ದು, ನಾನು ಕೆಳಗೆ ಬಿದ್ದಾಗ ಎಲ್ಲರೂ ನನಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿರುತ್ತಾರೆ. ನಾನು ನೋವಿನಿಂದ ಚೀರಾಡುತ್ತಿರುವಾಗ ನಿನ್ನನ್ನು ನಿನ್ನ ಮನೆಯವರನ್ನು ಮುಗಿಸಿಬಿಡುತ್ತೇವೆಂದು ಪ್ರಾಣ ಬೆದರಿಕೆ ಒಡ್ಡಿರುತ್ತಾರೆ.  ಆಗ ಅಲ್ಲಿದ್ದ ಜನರು ಹಾಗೂ ವೀರೇಶ ಗುಡೂರ ಇವರು ಬಂದಾಗ ಅವರೆಲ್ಲರೂ ಓಡಿಹೋಗಿದ್ದು, ಹೋಗುವಾಗ ಈಗ ನೀನು ಉಳಿದುಕೊಂಡೆ, ಮುಂದೆ ನಿನ್ನನ್ನು ಬಿಡುವುದಿಲ್ಲವೆಂದರು.  ನಮ್ಮ ಮನೆಯವರು ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಪೂರ್ವದಲ್ಲಿ ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ. 323, 324, 307, 504, 506, ಸಹಿತ 34 ಐ.ಪಿ.ಸಿ:.

ದಿನಾಂಕ: 27-05-2017 ರಂದು ಶನಿವಾರ ಸಂಜೆ 3-30 ಗಂಟೆ ಸುಮಾರಿಗೆ ಫಿರ್ಯಾದಿದಾರರು ಮತ್ತು ಅವರ ಅಣ್ಣ ಬಾಳೇಶ್ ಇಬ್ಬರೂ ಕೂಡಿ ಇದ್ಲಾಪುರ ಕ್ರಾಸ್ನಿಂದ ಊರೋಳಗೆ ಹೋಗಲು ತಮ್ಮ ಮೋ.ಸೈಕಲ್ ತೆಗೆದುಕೊಂಡು ಹೊರಟಿದ್ದು ಆಗ ಗ್ರಾಮದ ದುರುಗಮ್ಮನ ಗುಡಿ ಹತ್ತಿರ ರಸ್ತೆಯಲ್ಲಿ ಅಡ್ಡವಾಗಿ ಹೋಗುತ್ತಿದ್ದ ಆರೋಪಿತರಿಗೆ ಸೈಡ್ ಕೊಡಲು ಫಿರ್ಯಾದಿದಾರರು ಗಾಡಿಯ ಹಾರನ್ ಹಾಕಿದ್ದು, ಆಗ ತಿರುಗಿ ನೋಡಿದ ಆರೋಪಿ ಶಂಕರಗೌಡನು ಲೇ ಸೂಳೆ ಮಕ್ಕಳೆ ನಮ್ಮ ಮೇಲೆ ಗಾಡಿ ಹಾಯಿಸಲು ಬರುತ್ತಿರೆನಲೇ ನಿಮ್ಮನ್ನು ಇವತ್ತು ಜೀವ ಸಹಿತ ಉಳಿಸುವುದಿಲ್ಲ ಅಂತಾ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಮೂವರು ತೆಗೆದುಕೊಂಡು ಅದರಲ್ಲಿ ಶಂಕರಗೌಡನು ಫಿರ್ಯಾದಿದಾರರ ಎಡಕಿವಿಯ ಹತ್ತಿರ, ಚಂದ್ರಶೇಖರನು ತಲೆಯ ಮೇಲೆ, ರಮೇಶನು ಮೂಗಿನ ಹತ್ತಿರ ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿದ್ದು ಇರುತ್ತದೆ. ಆಗ ಫಿರ್ಯಾದಿದಾರರನ್ನು ಬಿಡಿಸಲು ಬಂದ ಅವರ ಅಣ್ಣ ಬಾಳೇಶನಿಗೂ ಕೂಡ ಕಲ್ಲನ್ನು ಎಸೆದಿದ್ದು ಆತನು ತಪ್ಪಿಸಿಕೊಂಡಿರುತ್ತಾನೆ. ಆಗ ಗ್ರಾಮದ ಪಡಿಯಪ್ಪ ತಂದೆ ದುರುಗಪ್ಪ ಹರಿಜನ. ದೊಡ್ಡಬಸವ ತಂದೆ ನಾಗಪ್ಪ ಬೋಗಾಪುರ, ಮತ್ತು ಯಮನೂರಪ್ಪ ತಂದೆ ಹನುಮಪ್ಪ ಬೋಗಾಪುರ ರವರು ಬಂದು ಜಗಳವನ್ನು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಫಿಯರ್ಾದಿದಾರರನ್ನು ಅವರ ಅಣ್ಣ ದುರುಗೇಶ, ಮತ್ತು ಬಾಳೇಶ್ ಕೂಡಿ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ತಾವರಗೇರಾ ಸರಕಾರಿ ಆಸ್ಪತ್ರೆಯಲ್ಲಿ ಇಲಾಜು ಕುರಿತು ದಾಖಲು ಮಾಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

Saturday, May 27, 2017

1] ಕೊಪ್ಪಳ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 23/2017 ಕಲಂ. 279, 338 ಐ.ಪಿ.ಸಿ..
ದಿನಾಂಕ. 26-05-2017 ರಂದು ಮದ್ಯಾಹ್ನ 2-00 ಗಂಟೆಗೆ  ಫಿರ್ಯಾದಿ ಆನಂದ ತಂದೆ ಯಂಕಪ್ಪ ಮೆಡಕುಂದ ವಯ. 36 ಜಾತಿ. ಹಡಪದ ಉ. ಕಟಿಂಗ್ ಶಾಪ್ ಸಾ. ಸುಣಗಾರ ಓಣಿ, ವಾರ್ಡ ನಂ. 17 ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಸದರಿ ಹೇಳಿಕೆಯನ್ನು ಗಣಕೀಕರಣ ಮಾಡಿಕೊಂಡಿದ್ದು ಅದರ ಸಾರಾಂಶವೆನೆಂದರೆ, ಮೊನ್ನೆ ದಿನಾಂಕ. 24-05-2017 ರಂದು ರಾತ್ರಿ 9-00 ಗಂಟೆ ಸುಮಾರು ಫಿರ್ಯಾದಿದಾರರ ಅಂಗಡಿಯಲ್ಲಿ ಕೆಲಸ ಮಾಡುವ ವೆಂಕಟೇಶ ಇವರು ಭಾಗ್ಯನಗರದಲ್ಲಿರುವ ಅವರ ಅಳಿಯ ಪ್ರಕಾಶ ಇವರ ಮನೆಗೆ ಊಟಕ್ಕೆ ಹೋಗಿದ್ದು, ಊಟ ಮುಗಿಸಿಕೊಂಡು ರಾತ್ರಿ 11-30 ಗಂಟೆ ಸುಮಾರು ವಾಪಸ್ ಭಾಗ್ಯನಗೆರ-ಕೊಪ್ಪಳ ರಸ್ತೆಯ ಮೇಲೆ ಬರುತ್ತಿರುವಾಗ ಸಾಯಿಬಾಬ ಗುಡಿಯ ಹತ್ತಿರ ಬೈಕ್ ನಂ. ಕೆಎ-37/ಡಬ್ಲೂ-6743 ನೇದ್ದರ  ಸವಾರ ಸುರೇಶ ಈತನು ಎದುರುಗಡೆಯಿಂದ ತನ್ನ ವಾಹನವನ್ನು ಅತೀ ಜೋರಾಗಿ ಹಾಗೂ ನಿರ್ಲಕ್ಷ್ಯತನದಿಂದ ನಡೆಸಿ ವೆಂಕಟೇಶನಿಗೆ ಇವರಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು ಸದರಿ ಅಪಘಾತದಿಂದ ವೆಂಕಟೇಶ ಇವರಿಗೆ ಎಡಗಾಲು ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿದ್ದು, ಎಡಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ ಹಾಗೂ ಎಡಕಪಾಳಕ್ಕೆ ತೆರಚಿದ ಗಾಯಗಳಾಗಿದ್ದು, ಸದರಿ ಅಪಘಾತದ ಬಗ್ಗೆ ವೆಂಕಟೇಶ ಇವರ ಮನೆಯಲ್ಲಿ ಹಿರಿಯರೊಂದಿಗೆ ವಿಚಾರಿಸಿ ಇಂದು ಬಂದು ಫಿರ್ಯಾಧಿಸಿದ್ದು ಇರುತ್ತದೆ ಅಂತಾ ಇದ್ದ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 24/2017 ಕಲಂ. 174 ಸಿ.ಆರ್.ಪಿ.ಸಿ.
ದಿ:26-05-2017 ರಂದು ಬೆಳಿಗ್ಗೆ 09-15 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಕರಿಯಮ್ಮ ಗಂಡ ಮಂಜುನಾಥ ಪಿನ್ನಿ. ಸಾ: ಇರಕಲಗಡಾ ಇವರು ಘಟನಾಸ್ಥಳದಲ್ಲಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೇ, ಫಿರ್ಯಾದಿದಾರಳ ಗಂಡ ಮೃತ ಮಂಜುನಾಥ ಪಿನ್ನಿ ಇತನು ಒಕ್ಕಲುತನ ಮಾಡಿಕೊಂಡಿದ್ದು, ಮನೆಯಲ್ಲಿ ಹಿರಿಯತನ ಮಾಡುತ್ತಿದ್ದನು. ಮತ್ತು ಮೃತನ ತಂದೆ ಪಂಪಣ್ಣ ಇವರ ಹೆಸರಿನಲ್ಲಿ ಇರಕಲಗಡಾ ಸೀಮಾದಲ್ಲಿ ಸುಮಾರು 05 ಎಕರೆ ಜಮೀನು ಇದ್ದು, ಸದರಿ ಜಮೀನುದಲ್ಲಿ ರಿಗ್ ಬೋರ್ ನೀರು ಕಡಿಮೆಯಾಗಿ ಕನಕಾಂಬರಿ, ಮಲ್ಲಿಗೆ ಬೆಳೆ ಹಾನಿಯಾಗಿದ್ದು ಇರುತ್ತದೆ. ಸದರಿ ಜಮೀನಿನ ಮೇಲೆ ತನ್ನ ತಂದೆ ಪ್ರಗತಿ ಕೃಷ್ಣಾ ಬ್ಯಾಂಕ್ ಇರಕಲಗಡಾ ದಲ್ಲಿ 02 ಲಕ್ಷ ರೂ ಬೆಳೆಸಾಲ ಮಾಡಿಕೊಂಡಿದ್ದು, ಮೃತನು ಕೈಸಾಲ 02 ಲಕ್ಷ ರೂ ಮಾಡಿಕೊಂಡಿದ್ದು ಇರುತ್ತದೆ. ಇತ್ತೀಚೆಗೆ 04 ರಿಗ್ ಬೋರಗಳನ್ನು ಹಾಕಿಸಿದರು ನೀರು ಬಿದ್ದಿರುವುದಿಲ್ಲ. ಹೀಗಾಗಿ ಮೃತ ಮಂಜುನಾಥನು ಬರಗಾಲ ಬಂದು ಸಾಲದ ಹಣ ಪಾವತಿ ಮಾಡಲು ಬಹಳ ತೊಂದರೆಯಾಗಿದೆ ಎಂದು ಚಿಂತಿಸಿ, ದಿ: 25-05-2017 ರಂದು ರಾತ್ರಿ 11-30 ರಿಂದ ದಿ:26-05-2017 ರಂದು ಬೆಳಿಗ್ಗೆ 06-30 ಗಂಟೆಯ ಅವಧಿಯಲ್ಲಿ ತಮ್ಮ ಹೊಲದಲ್ಲಿರುವ ಶ್ರೀ ತಾಯಮ್ಮ ದೇವಿಯ  ಕಟ್ಟಿಯ ಮೇಲಿನ ಬೇವಿನ ಮರದ ಟೊಂಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 115/2017 ಕಲಂ.143, 147, 341, 323, 326, 504, 506, ಸಹಿತ 149 ಐ.ಪಿ.ಸಿ…
ದಿ:26-05-2017 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ, ನಿಂಗಪ್ಪ ಗೊಡೆಕರ, ಸಾ: ಕಿನ್ನಾಳ ಇವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಇಂದು ದಿ:26.05.2017 ರಂದು ಬೆಳಿಗ್ಗೆ 09-00 ಗಂಟೆಗೆ ಫಿರ್ಯಾದಿದಾರರು ತಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರು ಅಕ್ರಮ ಗುಂಪು ಕಟ್ಟಿಕೊಂಡು ಬಂದು ಹಳೇ ಮನೆಯಲ್ಲಿರುವ ಪರಸಪ್ಪ ಮಲಾಜೆ ಇವರಿಗೆ ಬಿಡಿಸಿ ತಮಗೆ ಮನೆ ಕೊಡುವಂತೆ ಜಗಳ ತೆಗೆದು ಅವಾಚ್ಯ  ಶಬ್ದಗಳಿಂದ ಬೈದು, ಕೈಗಳಿಂದ ಹಲ್ಲೆ ಮಾಡಿ ಫಿರ್ಯಾದಿಯ ತಮ್ಮ ನಾಗಪ್ಪ ನ ಮನೆಯ ಸಮೀಪ ಮೇನಬಜಾರದ ಬಾಜು ಫೋನಿನ ಕಂಬಕ್ಕೆ ಫಿರ್ಯಾದಿಗೆ ಕಟ್ಟಿ ಕಟ್ಟಿಗೆ ಯಿಂದ ಹಲ್ಲೆ ಮಾಡಿದ್ದರಿಂದ ಎಡಕಾಲಿಗೆ ಭಾರಿ ಪೆಟ್ಟಾಗಿದ್ದು ಇರುತ್ತದೆ. ಮತ್ತು ಸಮೀಪದ ನಾಗಪ್ಪನ ಮನೆಗೆ ಹೋಗಿ ಅವರ ಮನೆಯ ಕದಕ್ಕೆ ಕಲ್ಲಿನಿಂದ ಹೊಡೆದು ಕಬ್ಬಿಣದ ಹಾರಿಯಿಂದ ಜಖಂ ಗೊಳಿಸಿ ಏ ಸೂಳೇ ಮಕ್ಕಳೆ ಕದ ತೆಗೆಯಿರಿಲೇ ಆ ಮುದುಕನ್ನ ಕಟ್ಟಿವಿ ಈಗ ನಿಮ್ಮನ್ನೆಲ್ಲಾ ಹೊಡೆದು ಸಾಯಿಸುತ್ತೇವೆಂದು ಜೀವದ ಬೆದರಿಕೆ ಹಾಕಿ ಅಲ್ಲಿಂದ ವಾಪಾಸ್ ಮುದುಕನ ಹತ್ತಿರ ಬಂದು ಕಂಬದಿಂದಾ ಆತನಿಗೆ ಬಿಚ್ಚಿ ಸದರ ಗ್ರಾಮದ ಕಾಮನಕಟ್ಟೆಯ ಹತ್ತಿರ ಎಳೆದುಕೊಂಡು ಹೋಗಿ ಅವಮಾನ ಮಾಡಿದ್ದು ಇರುತ್ತದೆ. ಅಲ್ಲದೇ ಫಿರ್ಯಾಧಿಗೆ ಆರೋಪಿತರು ಲೇ ಸೂಳೇಮಗನೇ ನಮ್ಮ ಪಾಲಿಗೆ ಬರುವ  ಆಸ್ತಿಯನ್ನು ಬೇಗನೇ ಸರಿ ಮಾಡಿಕೊಡು ಇಲ್ಲದಿದ್ದರೆ ನಿನಗೆ ಹೊಡೆದು ಸಾಯಿಸುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 120/2017 ಕಲಂ.304(ಎ) ಐ.ಪಿ.ಸಿ…
ದಿನಾಂಕ 26-05-2017 ರಂದು 4-00 ಪಿ.ಎಂ.ಕ್ಕೆ ಪಿರ್ಯಾದು ಶಂಕರ ತಂದೆ ನಾಗಪ್ಪ ಬಳಿಗಾರ ಸಾ: ಬೆಳವಡಿ ಜಿ: ಬೆಳಗಾಂ ಇವರಿಂದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 26-05-2017 ರಂದು ಪಿರ್ಯಾದುದಾರರು ಮತ್ತು ಅವರ ಸ್ನೇಹಿತರು ಕೂಡಿಕೊಂಡು ಹುಲಿಗಿಯ ಹುಲಿಗೆಮ್ಮ ದೇವಿದರ್ಶನ ಮಾಡಿಕೊಂಡು ಹಿಟ್ನಾಳ ಗ್ರಾಮದಲ್ಲಿರುವ ಸ್ನೇಹಿತನಿಗೆ ಮಾತನಾಡಿಸಲು ಹೋದಾಗ ಹಿಟ್ನಾಳ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ಅಲ್ಲೆ ಒಂದು ಕ್ರೇನ್ ನಂ.ಕೆ.ಎಲ್.11 / 9068 ನೇದ್ದು ಕೆಟ್ಟಿದ್ದು ಅದನ್ನು ಆಪರೇಟರ್ ಕ್ರೇನ್ ಮೇಲಕ್ಕೆತ್ತಿದ್ದು ಆಗ ಪಿರ್ಯಾದುದಾರರ ಸ್ನೇಹಿತ ಶೇಖರ ಇವನು ಅದರ ಕೆಳಗಡೆ ಹೋಗುತ್ತಿರುವಾಗ ಕ್ರೇನ್ ನ ಕೊಂಡಿಯು ಕಳಚಿ ಒಮ್ಮೇಲೆ ಶೇಖರ್ ಇವನ ಮೇಲೆ ಬಿಳಲು ಶೇಖರ್ ನಿಗೆ ಬಾರಿ ರಕ್ತಗಾಯವಾಗಿದ್ದು ಚಿಕಿತ್ಸೆ ಕೊಡಿಸಲು ಮುನಿರಾಬಾದ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 71/2017 ಕಲಂ.78(3) ಕೆ.ಪಿ. ಕಾಯ್ದೆ..
ದಿನಾಂಕ: 26-05-2017 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಆರೋಪಿತನು ತಿಗರಿ  ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಫಿರ್ಯಾಧಿದಾರರು ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿ ರಾಮಣ್ಣ ತಂದೆ ಲಕ್ಕಪ್ಪ ಟಣಕನಕಲ್ ಸಾ: ಹಟ್ಟಿ ಇತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 852=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು, ನಂತರ ಆರೋಪಿತನಿಗೆ ಮಟಕಾ ನಂಬರ ಬರೆದ ಪಟ್ಟಿಯನ್ನು ಯಾರಿಗೆ ಕೋಡುತ್ತಿಯಾ ಅಂತಾ ವಿಚಾರಿಸಿದಾಗ ಪಟ್ಟಿಯನ್ನು ಹಿರೇಸಿಂದೋಗಿ ಗ್ರಾಮದ ಹನಮಂತ ಕವಳಕೇರಿ ಇತನಿಗರ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ರಾತ್ರಿ 9-15 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

Friday, May 26, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ. 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ:-25-05-2017 ರಂದು ನಮ್ಮ ಮಾವನಾದ ಪರನಗೌಡ ತಂದೆ ಅಮರಪ್ಪ ಕೋಲ್ಕರ್ ಸಾ. ಈಳಿಗನೂರ ಇವರು ತಮ್ಮ ಟಿ.ವಿ.ಎಸ್. ಎಕ್ಸಲ್ ಸುಫರ್  ಮೋಟಾರ್ ಸೈಕಲ್ ನಂ. ಕೆಎ-37/ವೈ-2479 ನೇದ್ದನ್ನು ತಗೆದುಕೊಂಡು ಸಿದ್ದಾಪೂರಕ್ಕೆ ದೇವಸ್ಥಾನಕ್ಕೆ ಬಂದಿದ್ದು, ನಾನು ಸಹ ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ನನ್ನ ಮೋಟಾರ್ ಸೈಕಲ್ ತಗೆದುಕೊಂಡು ಸಿದ್ದಾಪೂರಕ್ಕೆ ಬಂದು ಸಿದ್ದಾಪೂರದಲ್ಲಿಮುಂಜಾನೆ 11-30 ಗಂಟೆ ಸುಮಾರಿಗೆ ಈಳಿಗನೂರ-ನಂದಿಹಳ್ಳಿ ಕ್ರಾಸ್ ದಲ್ಲಿ ಇರುವ ಮೋಬೈಲ್ ಶಾಪ್ ದಲ್ಲಿ ಕರೆನ್ಸಿ ಹಾಕಿಸಿಕೊಳ್ಳಲು ನಿಂತಿದ್ದಾಗ ಇದೇ ಸಮಯಕ್ಕೆ ಸಿದ್ದಾಪೂರದ ಬಸ್ ನಿಲ್ದಾಣದ ಕಡೆಯಿಂದ ನಮ್ಮ ಮಾವ ತನ್ನ ಮೋಟಾರ್ ಸೈಕಲ್ ಮೇಲೆ ಎಡ ರಸ್ತೆಯಲ್ಲಿ ಬರುತ್ತಿದ್ದಾಗ ಎದುರಿಗೆ ಕಾರಟಗಿ ಕಡೆಯಿಂದ ಟಾಟಾ ಮ್ಯಾಜಿಕ ವಾಹನ ನಂ ಕೆಎ-37/9292 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮಾವನ ಮೋಟಾರ್ ಸೈಕಲ್ ಗೆ ಠಕ್ಕರ್ ಮಾಡಿ ಅಪಘಾತಪಡಿಸಿ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಾನು ಮತ್ತು ಅಲ್ಲಿಯೇ ಇದ್ದ ನಮ್ಮೂರಿನ ತಿಪ್ಪಣ್ಣ ತಂದೆ ದೊಡ್ಡಹನ್ಮಂತಪ್ಪ ಹಾಗೂ ಭೀರಪ್ಪ ಸಾ. ಈಳಿಗನೂರ ರವರು ಕೂಡಿ ನೋಡಲಾಗಿ ನಮ್ಮ ಮಾವನಿಗೆ ಹಣೆಯ ಹತ್ತಿರ ಗಂಭೀರಗಾಯ ಹಾಗೂ ಎಡಗಾಲಿನ ಪಾದಕ್ಕೆ ಹಾಗೂ ಇತರೆ ಕಡೆಗಳಲ್ಲಿ ಗಂಭೀರ ಸ್ವರೂಪದ ಗಾಯಗಳಾಗಿದ್ದು ನಂತರ ಗಾಯಗೊಂಡ ನಮ್ಮ ಮಾವನನ್ನು ಚಿಕಿತ್ಸೆ ಕುರಿತು ಗಂಗಾವತಿ ಮಲ್ಲಿಕಾರ್ಜುನ ನರ್ಸಿಂಗ್ ಹೋಂ ದಲ್ಲಿ ದಾಖಲು ಮಾಡಿದ್ದು ಇರುತ್ತಧೆ. ಗುನ್ನೆ ದಾಖಲು ಮಾಡಿಕೊಂಡು ತನಿಕೆಯ ಕೈಗೊಂಡಿದ್ದು ಇರುತ್ತದೆ.


Thursday, May 25, 2017

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ. 143, 147, 148, 323, 324 504, 506 ಐ.ಪಿ.ಸಿ ಸಹಿತ 149 ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ:
ದಿನಾಂಕ 24-05-2017 ರಂದು ರಾತ್ರಿ 11-30 ಗಂಟೆಗೆ  ಪಾಮಣ್ಣ ತಂದೆ ಭೀಮಪ್ಪ, ವಯಸ್ಸು 23 ವರ್ಷ, ಜಾ: ಮಾದಿಗ, ಉ: ಕೂಲಿಕೆಲಸ, ಸಾ: ಗಾಂಧಿನಗರ, ನಾನು, ನನ್ನ ವೈಯಕ್ತಿಕ ಕೆಲಸದ ನಿಮಿತ್ಯ ಬಂಬೂಬಜಾರ್ ಗೆ ಹೋಗಿದ್ದು, ಅಲ್ಲಿ ನಿನ್ನೆ ದಿನಾಂಕ 23-05-2017 ರಂದು ಸಂಜೆ 5-00 ಗಂಟೆ ಸುಮಾರಿಗೆ ನನ್ನ ಚಿಕ್ಕಪ್ಪನ ಮಗನಾದ ರಮೇಶ ತಂದೆ ಪಾಮಣ್ಣ ಇವನ ವಿಚಾರವಾಗಿ ಠಾಣೆಗೆ ದೂರು ನೀಡುವ ಸಂಬಂಧವಾಗಿ ಇಂದು ರಾಘವೇಂದ್ರ (ಚಿನ್ನೋಡ) (2) ಸದ್ದಾಮ (3) ರಿಯಾಜ (ರೊಡ್ಡ) (4) ಉಮರ್ (5) ರಸೂಲ ಮತ್ತು ಇತರೇ 25 ರಿಂದ 30 ಜನರು ಎಲ್ಲರೂ ಸಾ: ಗಂಗಾವತಿ ಇವರು  ಗುಂಪು ಸೇರಿ ಬಂದು ಜಾತಿ ನಿಂದನೆ ಮಾಡಿ ನನಗೆ ಹೊಡೆಬಡೆ ಮಾಡಿ ಕಲ್ಲು, ಕಟ್ಟಿಗೆ ಹಾಗೂ ಕೈಗೆ ಸಿಕ್ಕ ಆಯುಧಗಳಿಂದ ಹಲ್ಲೆ ಮಾಡಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ. 279, 338, 283 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:

ದಿ:24-05-2017 ರಂದು 9-20 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹ್ಮದ್ ಶೇಖ್ ಉಸ್ಮಾನ ಇವರ ಆರೈಕೆಯಲ್ಲಿದ್ದ ಶಾಬುದ್ದೀನ್ ಜವಳಗೇರಿ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೆನೆಂದರೆ, ಇಂದು ದಿ:24-05-17 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಮಹ್ಮದ್ ಶೇಖ್ ಉಸ್ಮಾನ ಇತನು ತನ್ನ ಮೋಟಾರ ಸೈಕಲ್ ನಂ: ಕೆಎ-37/ಎಲ್-6001 ನೇದ್ದನ್ನು ಕೊಪ್ಪಳದ ಕಡೆಯಿಂದ ಭಾನಾಪೂರ ಕಡೆಗೆ ಹಲಿಗೇರಿ ಸಮೀಪದಲ್ಲಿ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಚಲಾಯಿಸಿಕೊಂಡು ಹೋಗುವಾಗ ತನ್ನ ಮುಂದೆ ರಸ್ತೆಯ  ಮಧ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ ನಂ: ಕೆಎ-37/ಟಿಬಿ-1727 ನೇದ್ದನ್ನು ಗಮನಿಸದೆ ಅದರ ಹಿಂದೆ ಟಕ್ಕರ ಕೊಟ್ಟು ಅಪಘಾತ ಮಾಡಿಕೊಂಡಿದ್ದರಿಂದ ಸವಾರನ ತಲೆಗೆ ಮತ್ತು ಎಡಕಣ್ಣಿನ ಹುಬ್ಬಿನ ಮೇಲೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಮತ್ತು ಸದರ ಟ್ರ್ಯಾಕ್ಟರ ಚಾಲಕನು ತನ್ನ ವಾಹನವನ್ನು ರಸ್ತೆಯಲ್ಲಿ ಹೋಗಿ ಬರುವ ವಾಹನಗಳಿಗೆ ಯಾವುದೇ ಸೂಚನೆಗಳನ್ನು ನೀಡದೇ ರಸ್ತೆಯ ಮದ್ಯದಲ್ಲಿ ನಿಲ್ಲಿಸಿ ರಸ್ತೆಯ ಸಂಚಾರಕ್ಕೆ ಅಡ್ಡಿಪಡಿಸಿ ವಾಹನ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕ ಮತ್ತು ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

Wednesday, May 24, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ. 279, 304(ಎ), 201 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:

ದಿ:24-05-17 ರಂದು 10-30 ಎ.ಎಮ್ ಕ್ಕೆ ಮೆತಗಲ್ ಸಮೀಪ ವಾಹನ ಅಪಘಾತವಾದ ದೂರವಾಣಿ ಮೂಲಕ ಮಾಹಿತಿ ಬಂದಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿದ್ದ ಮೃತ ಚನ್ನಪ್ಪ ಗಾರವಾಡ ಇವರ ಅಣ್ಣ ಯಲ್ಲಪ್ಪ ಇವರನ್ನು ವಿಚಾರಿಸಿದ್ದು ಸದರಿಯವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ದಿ:24-05-2017 ರಂದು 01-40 .ಎಮ್ ಸುಮಾರಿಗೆ ಫಿರ್ಯಾದಿದಾರರ ತಮ್ಮ ಮೃತ ಚನ್ನಪ್ಪನು ಹೊಸಪೇಟೆ-ಕುಷ್ಟಗಿ ಎನ್.ಹೆಚ್-50 ರಸ್ತೆಯ ಮೆತಗಲ್ ಸಮೀಪ ತನ್ನ ಮೋಟಾರ ಸೈಕಲ್ ನಂ: ಕೆಎ-37/ಇಬಿ-4730 ನೇದ್ದನ್ನು ಓಡಿಸಿಕೊಂಡು ಬರುವಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ತನ್ನ ತಮ್ಮ ಚನ್ನಪ್ಪನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿ ಯಾವುದೇ ಸಾಕ್ಷಿ ಪುರಾವೆ ಸಿಗದಂತೆ ಹೋಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಚನ್ನಪ್ಪನಿಗೆ ತೀವ್ರ ಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.  

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ: 04 ಕರ್ನಾಟಕ ಮೀತಿ ಮಿರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004 ಮತ್ತು ಕಲಂ. 343, 323, 504, 506 ಐ.ಪಿ.ಸಿ:
ದಿನಾಂಕ:-23-05-2017 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶಶಿಕಲಾ ಗಂಡ ತಿರುಪತಿ ಚಕೋಟಿ ವಯಾ-28ವರ್ಷ ಜಾ.ನಾಯಕ ಸಾ. ಹೊಸಜೂರಟಗಿ ತಾ.ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ಕೊಟ್ಟಿದ್ದು ಸದ್ರಿ ದೂರಿನ ಸಾರಾಂಶವೆನಂದರೆ ನನ್ನ ಗಂಡ ನಾನು ಸಂಸಾರ ಸಮೇತ ಹೊಸಜೂರಟಗಿ ಗ್ರಾಮದಲ್ಲಿ ವಾಸವಾಗಿದ್ದು ಮಾಹೇ2016 ನೇ ಸೆಪ್ಟಂಬರ್ ತಿಂಗಳಿನಲ್ಲಿ ನನ್ನ ಗಂಡನು ನಮಗೆ ಹಣದ ಅಡಚಣೆ ಇದ್ದುದರಿಂದ ನಮ್ಮ ಸಂಬಂದಿಕನಾಗುವ ನಮ್ಮ ಜನಾಂಗದ ಶಿವಪ್ಪ ತಂದಿ ಕಾಳಿಂಗಪ್ಪ ಹತ್ತಿಮರದ ಸಾ. ವಡ್ಡರಹಟ್ಟಿ (ಉಳ್ಳಿಡಗ್ಗಿ) ಇತನ ಕಡೆ ಹಣ ಕೇಳಿದ್ದಕ್ಕೆ ಆತನು ನನ್ನ ಗಂಡನಿಗೆ 30,000=00 ರೂ. ಕೊಡುವ ಸಲುವಾಗಿ 100 ರೂಪಾಯಿಗೆ 4=00 ರೂ.ಬಡ್ಡಿಯೆಂತೆ ಕೊಡುತ್ತೇನೆ ಅಂತಾ ಕೇಳಿದ್ದರಿಂದ ನಮಗೆ ತುಂಬಾ ಹಣದ ಅಡಚಣೆಯಾಗಿದ್ದರಿಂದ ನನ್ನ ಗಂಡನು ಆತನ ಕಡೆಯಿಂದ 100=00 ಗೆ 4 ರೂ ಬಡ್ಡಿಯೆಂತೆ ದಿನಾಂಕ:-12-09-2016 ರಂದು ಒಟ್ಟು 30,000=00 ಸಾಲ ತೆಗದುಕೊಂಡಿದ್ದನು ಇದಕ್ಕೆ ತನೆ ಗ್ಯಾರಂಟ್ ಬೇಕು ಅಂತಾ ನನ್ನ ಗಂಡನ ಎಸ್.ಬಿ.ಎಮ್ ಬ್ಯಾಂಕಿನ ಸಹಿ ಮಾಡಿದ ಖಾಲಿ ಚೆಕ್ ನಂ 243833, 243834 ನೆದ್ದವುಗಳನ್ನು ಮತ್ತು ಒಂದು ಖಾಲಿ ಪ್ರಾಮೀಸರಿ ನೋಟ್ ಮೇಲೆ ಸಹಿ ಮಾಡಿಸಿಕೊಂಡಿದ್ದನು. ನಂತರ  ನನ್ನ ಗಂಡನಿಗೆ ಹಣದ ಅಡಚಣೆ ಮತ್ತು ಬರಗಾರದ ಪರಸ್ಥಿತಿಯಲ್ಲಿ ಕೆಲಸ ಸಿಗದೇ ಕಾರಣ ಬಡ್ಡಿ ಕಟ್ಟಲು ಆಗದೇ ಇದ್ದುದರಿಂದ ನನ್ನ ಗಂಡನಿಗೆ ಶಿವಪ್ಪ ಈತನು ಪ್ರತಿ ದಿನ ಸಾಲ ಮರಪಾವತಿಯ ಸಲುವಾಗಿ ಕಿರುಕುಳ ಕೊಟ್ಟು ಮನೆಗೆ ಬಂದು ನನ್ನ ಗಂಡನಿಗೆ ಅಸ್ಲೀಲವಾಗಿ ಮಾತನಾಡಿ, ಕೈಯಿಂದ ಹೊಡೆದು ಜೀವ ಬೇದರಿಕೆ ಹಾಕಿ ಹೋಗಿದ್ದು ಅಲ್ಲದೇ ನನ್ನ ಗಂಡನಿಂದ ಪಡೆದುಕೊಂಡಿದ್ದ ಚೆಕ್ ಗಳ ಮೇಲೆ ಕೊರ್ಟಿನಲ್ಲಿ ಚೆಕ್ ಭೊನ್ಸ್ ಕೇಸ್ ಮಾಡಿ ನನ್ನ ಗಂಡನಿಗೆ ಪ್ರತಿದಿನ ಪೋನ ಮಾಡಿ ಸಾಲದ ಹಣ ಕಟ್ಟು ಇಲ್ಲವಾದ ನಿನ್ನನ್ನು ಕೊಂದು ಆದರೂ ನನ್ನ ಸಾಲದ ಹಣ ತೆಗದುಕೊಳ್ಳುತ್ತೇನೆ ಅಂತಾ ಜೀವದ ಬೇದರಿಕೆ ಹಾಕುತ್ತಿದ್ದಾನೆ ಮತ್ತು ನನ್ನ ಗಂಡನು ಮನೆಯಲ್ಲಿ ಇಲ್ಲದಾಗ ಮನೆಗೆ ಬಂದು ನನ್ನಿಂದ 10 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದು ಇದೆ. ನನ್ನ ಗಂಡನು ಇತರ ಚಿತ್ರಹಿಂಸೆ ತಾಳದೇ ಮನೆಗೆ ಸರಿಯಾಗಿ ಬರದೇ ಊಟ ಸರಿಯಾಗಿ ಮಾಡದೇ ತಿರುಗುತ್ತಿದ್ದಾನೆ ಕಾರಣ ನಮಗೆ ಹಣದ ಅವಶ್ಯಕತೆಯನ್ನು ನೋಡಿ ಶಿವಪ್ಪ ಈತನು ಹೆಚ್ಚಿನ ಬಡ್ಡಿಗೆ ಸಾಲ ಕೊಟ್ಟು ಸಾಲದ ಮರುಪಾವತಿಗೆ ಕಿರುಕುಳ ಕೊಟ್ಟಿದ್ದು ಈತನು ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ: 323, 324, 353, 333, 504, 506  ಸಹಿತ 34 ಐ.ಪಿ.ಸಿ:

ದಿನಾಂಕ: 23-05-2017 ರಂದು 1345 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಯಮನೂರಪ್ಪ ಸಿ.ಪಿ.ಸಿ-294 ಕಾರಟಗಿ ಪೊಲೀಸ್ ಠಾಣೆ ರವರು ಇತರ ಸಿಬ್ಬಂದಿಯರೊಂದಿಗೆ ಹುಲಗಿ ಗ್ರಾಮದ ಶ್ರೀ ಹುಲಿಗೇಮ್ಮ ದೇವಿಯ ಜಾತ್ರಾ ಬಂದೋಬಸ್ತ ಕರ್ತವ್ಯದ ಮೇಲೆ ನಂದಿ ವೃತ್ತದ ಬ್ಯಾರಕೇಡ ಹತ್ತಿರ ರಸ್ತೆಯ ಮೇಲೆ ಸಮವಸ್ತ್ರದಲ್ಲಿ ಬಂದೋಬಸ್ತ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಆರೋಪಿತರಾದ 1. ಬಸವರಾಜ ತಂದೆ ಇಂದ್ರಪ್ಪ ವಕೀಲರು 2. ಮಂಜುನಾಥ ತಂದೆ ತಿರುಪತೆಪ್ಪ ಕನಕಗಿರಿ ತಮ್ಮ ಮೋಟಾರ ಸೈಕಲ ನಂ: ಕೆ.ಎ-37/8418 ನೇದ್ದರ ಮೇಲೆ ಬಂದು ತಮ್ಮನ್ನು ದೇವಸ್ಥಾನದ ಒಳಗಡೆ ಹೋಗಲು ಬ್ಯಾರಕೇಡ ತೆಗೆಯಬೇಕು ತೆಗೆಯಬೇಕು ಅಂತಾ ಹೇಳಿದಾಗ ಪಿರ್ಯಾದಿದಾರರು ಆರೋಪಿ ನಂ: 1 ಈತನಿಗೆ ಯಾವದೇ ವಾಹನಗಳನ್ನು ಒಳಗಡೆ ಹೋಗಲು ಬಿಡುವದಿಲ್ಲ ಅಂತಾ ಹೇಳಿದ್ದು ಆಗ ಸದ್ರಿ ಆರೋಪಿತನು ತನ್ನ ಮೋಟಾರ ಸೈಕಲನಿಂದ ಕೆಳಗೆ ಇಳಿದು ಬಂದು ಪಿರ್ಯಾದಿದಾರರಿಗೆ ನಾನು ವಕೀಲನಿದ್ದರು ಕೂಡಾ ನೀನು ನನಗೆ ಒಳಗಡೆ ಹೋಗಲು ಏಕೆ ಬಿಡುವದಿಲ್ಲ ನಿಮ್ಮಂತ ಪೊಲೀಸರನ್ನು ನಾನು ಬಹಳ ನೋಡಿದ್ದೇನೆ ಬ್ಯಾರಕೇಡ ತೆಗೆಯಿರಿ ಅಂತಾ ಅಂದಾಗ ಪಿರ್ಯಾದಿದಾರರು ಸದ್ರಿ ಆರೋಪಿತನಿಗೆ ಬ್ಯಾರಕೇಡ ತೆಗೆಯುವದಿಲ್ಲ ಅಂತಾ ಅಂದಾಗ ಆರೋಪಿ ನಂ: 1 ಮತ್ತು 2 ಇಬ್ಬರೂ ಕೂಡಿಕೊಂಡು ಪಿರ್ಯಾದಿದಾರರಿಗೆ `` ನಿಮ್ಮ ಪೊಲೀಸ್ ಸೂಳೇ ಮಕ್ಕಳದು ಸೊಕ್ಕು ಜಾಸ್ತಿಯಾಗಿದೆ ಸೂಳೇ ಮಗನೆ’’ ಅಂತಾ ಆವಾಚ್ಛ ಶಬ್ದಗಳಿಂದ ಬೈಯ್ದು ಆರೋಪಿ ನಂ: 1 ಈತನು ಪಿರ್ಯಾದಿದಾರರ ಸಮವಸ್ತ್ರದ ಎದೆಯ ಮೇಲಿನ ಅಂಗಿಯನ್ನು ಹಿಡಿದು ಜಗ್ಗಾಡಿ ಕೈಯಿಂದ ಮುಖಕ್ಕೆ ಹೊಡೆದು ಸಮವಸ್ತ್ರದ ಅಂಗಿ ಹಿಡಿದು ಎಳದಾಡಿ ಶರ್ಟಿನ ಜೇಬನ್ನು ಹರಿದಿದ್ದು ಇರುತ್ತದೆ. ಆರೋಪಿ ನಂ: 2 ಈತನು ಕಟ್ಟಿಗೆಯ ಬಡಿಗೆಯಿಂದ ಪಿರ್ಯಾದಿದಾರರ ಬಲಗೈ ಹೆಬ್ಬರಳಿಗೆ ಜೋರಾಗಿ ಹೊಡೆದು ಒಳಪೆಟ್ಟು ಹಾಗೂ ಗಾಯವನ್ನುಂಟು ಮಾಡಿ ಕರ್ತ್ಯವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

Tuesday, May 23, 2017

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ: 279, 304(ಎ) ಐ.ಪಿ.ಸಿ
ಫಿರ್ಯಾದಿದಾರರಾದ ಶ್ರೀ ಅಗರೆಪ್ಪ ತಂದೆ ಗೋವಿಂದಪ್ಪ ಕಟಗಿ ವಯ 42 ವರ್ಷ ಜಾತಿ ಕುರುಬರ . ಒಕ್ಕಲುತನ ಸಾ. ಕೊಟ್ನೇಕಲ್ ತಾ. ಗಂಗಾವತಿ ರವರು ಫಿರ್ಯಾದಿ ನೀಡಿದ್ದು ತಮ್ಮ ಅಳಿಯನಾದ ಸಣ್ಣರುದ್ರಪ್ಪ ತಂದೆ ಭೀಮಪ್ಪ ಸಿದ್ರಾಂಪುರ ಈತನದು ಒಂದು ಟ್ರ್ಯಾಕ್ಟರ್ ನಂ ಕೆಎ-37/ಟಿಬಿ-1697 ಅಂತಾ ಇದ್ದು ಇದಕ್ಕೆ ಗೋವಿಂದಪ್ಪ ತಂದೆ ಲಿಂಗಪ್ಪ ಕುಂಟೋಜಿ ಸಾ. ಕೊಟ್ನೇಕಲ್ ಈತನು ಚಾಲಕ ಅಂತಾ ಕೆಲಸ ಮಾಡಿಕೊಂಡಿರುತ್ತಾನೆದಿನಾಂಕ 22-05-2017 ರಂದು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ನಾನು ನಮ್ಮೂರಿನ ಬಸವಣ್ಣ ಕಟ್ಟೆಯ ಹತ್ತಿರ ರುವ ಹೋಟೆಲ್ ಗೆ ಚಹ ಕುಡಿಯಲೆಂದು ಹೋರಟಿದ್ದಾಗ ನಮ್ಮ ಅಳಿಯನಾದ ಸಣ್ಣ ರುದ್ರಪ್ಪೀತನ ಮಗಳಾದ ಕುಮಾರಿ ಭೀಮಮ್ಮ ವಯ 14 ವರ್ಷ ಕೆಯು ತಮ್ಮ ಮನೆಯಿಂದ ಕಿರಾಣಿ ಅಂಗಡಿಗೆ ಬರುತ್ತಿದ್ದು ಅದೇ ವೇಳೆಗೆ ಸಣ್ಣ ರುದ್ರಪ್ಪನ ಟ್ರ್ಯಾಕ್ಟರ್ ಚಾಲಕ ಮನೆಯಿಂದ ಟ್ರ್ಯಾಕ್ಟರ್ ಚಾಲುವು ಮಾಡಿಕೊಂಡು ನಿರ್ಲಕ್ಷತನದಿಂದ ಓಣಿಯ ರಸ್ತೆ ಇರುವುದನ್ನು ಗಮನಿಸದೇ ಮತ್ತು ಮುಂದೆ ನಡೆದುಕೊಂಡು ಹೊರಟಿದ್ದ ಭೀಮಮ್ಮಳನ್ನು ಗಮನಿಸದೇ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಮದು ಭಿಮಮ್ಮ ಈಕೆಗೆ  ಠಕ್ಕರ್ ಮಾಡಿ ಅಪಘಾತಪಡಿಸಿದ್ದರಿಂದ ಟ್ರ್ಯಾಕ್ಟರ್ ಇಂಜಿನಿನ ಮುಂದಿನ ಗಾಲಿ ಆಕೆಯ ತಲೆಯ ಮೇಲೆ ಹಾಯ್ದು ಹೋಗಿ ಆಕೆಗ ತಲೆಗೆ ಗಂಭಿರಗಾಯವಾಗಿದ್ದು ಅಲ್ಲಿಯೇ ಇದ್ದ ನಾನು ಆಕೆಯನ್ನು ಎತ್ತಿಕೊಂಡು ನೋಡಲು ಆಕೆ ಮಾತನಾಡುವ ಸ್ಥಿತಿಯಲ್ಲಿ ಇದ್ದಿಲ್ಲಅಪಘಾತವನ್ನು ನೋಡಿದ ಮನೆಯ ಮುಂದೆ ಇದ್ದ ಸಣ್ಣ ರುದ್ರಪ್ಪ ಮತ್ತು ನಾನು ಕೂಡಿಕೊಂಡು ಭೀಮಮ್ಮಳನ್ನು ಚಿಕಿತ್ಸೆ ಕುರಿತು ಗಂಗಾವತಿ ಮಲ್ಲನಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಅಣ್ಣಿಗೇರಿ ಹತ್ತಿರ ಮದ್ಯಾಹ್ನ 1-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 111/2017 ಕಲಂ: 302, 324, 504 ಸಹಿತ 34 ಐ.ಪಿ.ಸಿ:

ದಿ:22-05-2017 ರಂದು ರಾತ್ರಿ 7-40 ಗಂಟೆಯ ಸುಮಾರಿಗೆ ತನ್ನ ಗಂಡ ಯಂಕನಗೌಡ ಇತನು ತಮ್ಮ ಮನೆಯಿಂದ ಬೀಡಿ ತರಲು ಅಂತಾ ಹೋಗಿ ವಾಪಾಸ್ ಮನೆಗೆ ಅಂತಾ ನಡೆದುಕೊಂಡು ಶ್ರೀ ಹನಮಂತ ದೇವರ ಗುಡಿಯ ಸಮೀಪ ಬರುತ್ತಿದ್ದಾಗ, ಆರೋಪಿತರು ಹಿಂದಿನಿಂದ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಬಂದು ಯಂಕನಗೌಡನಿಗೆ ಆರೋಪಿ ಕಲ್ಲಪ್ಪನು ಹಿಡಿದುಕೊಂಡು ಕೆಳಗಡೆ ಕೆಡವಿ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದು, ಆಗ ಫಿರ್ಯಾದಿದಾರರು ನೋಡಿ ತನ್ನ ಸಂಗಡ ಅಲ್ಲಿಯೇ ಇದ್ದ ತಮ್ಮ ಚಿಗವ್ವ ಶ್ಯಾವಂತ್ರೆಮ್ಮಳಿಗೆ ಕರೆದುಕೊಂಡು ಹತ್ತಿರ ಬಿಡಿಸಿಕೊಳ್ಳಲು ಹೋದಾಗ ಆರೋಪಿ ಕಲ್ಲಪ್ಪನು ಲೇ ಸೂಳೇಯರೇ ಈ ಸೂಳೇಮಗ ನನ್ನ ಹೆಂಡತಿ ದ್ರಾಕ್ಷಾಯಣಿಗೆ ನೋಡುತ್ತಾನೆ. ಅದಕ್ಕೆ ಈ ಸೂಳೇಮಗನಿಗೆ ಹೊಡೆದು ಸಾಯಿಸುತ್ತೇವೆ. ಎಂದು ಜಗಳ ತೆಗೆದು ಆರೋಪಿ ವಿರೇಶನು ಕೂಡಾ ಅದೇ ಸಿಟ್ಟಿನಿಂದ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಮೃತ ಯಂಕನಗೌಡನ ಎರಡು ಕಾಲುಗಳಿಗೆ ಜೋರಾಗಿ ಹೊಡೆದಿದ್ದು ಅಲ್ಲದೇ ಆರೋಪಿ ದ್ರಾಕ್ಷಾಯಣಿ ಇವಳು ಕೂಡಾ ತನ್ನ ಗಂಡನ ಕೈಯಲ್ಲಿದ್ದ ಕಟ್ಟಿಗೆ ಕಸಿದುಕೊಂಡು ಮೃತ ಯಂಕನಗೌಡನ ಬಲಗೈ ತೋಳಿಗೆ ಹೊಡಿದಿರುತ್ತಾಳೆ. ಬಿಡಿಸಲು ಹೋದ ಶ್ಯಾವಂತ್ರಮ್ಮಳಿಗೆ ಆರೋಪಿ ದ್ರಾಕ್ಷಾಯಣಿ ಇವಳು ಅದೇ ಕಟ್ಟಿಗೆಯಿಂದ ಎಡಗೈ ಮುಂಗೈಗೆ ಹೊಡೆದಿರುತ್ತಾಳೆ. ಮತ್ತು ಮೃತ ಯಂಕನಗೌಡನಿಗೆ 03 ಜನ ಆರೋಪಿತರು ದರದರನೇ ಎಳೆದುಕೊಂಡು ತಮ್ಮ ಮನೆಯ ಸಮೀಪದ ಅಂಗಳದ ವರೆಗೆ ಎಳೆದು ಹಾಕಿದಾಗ ಆರೋಪಿ ಕಲ್ಲಪ್ಪನು ಈ ಸೂಳೇಮಗ ಯಂಕನಗೌಡ ನನ್ನ ಹೆಂಡತಿ ಜೊತೆ ಅದಾನ ಬಿಡಬಾರದು ಇವನಿಗೆ ಎಂದವನೇ ತನ್ನ ಹೆಂಡತಿ ದ್ರಾಕ್ಷಾಯಣಮ್ಮ ಳ ಕೈಯಲ್ಲಿದ್ದ ಕಟ್ಟಿಗೆ ಕಸಿದುಕೊಂಡು ಯಂಕನಗೌಡನ ತಲೆಗೆ ಜೋರಾಗಿ ಹೊಡೆದಿದ್ದರಿಂದ ಅವನ ತಲೆಯಲ್ಲಿ ರಕ್ತ ಬಂದಿರುತ್ತದೆ. ಮತ್ತು ಆರೋಪಿ ವಿರೇಶನು ಕೂಡಾ ತನ್ನ ಕೈಯಲ್ಲಿದ್ದ ಅದೇ ಕಟ್ಟಿಗೆಯಿಂದ ಪುನಃ ಯಂಕನಗೌಡನ ಕಾಲುಗಳಿಗೆ ಜೋರಾಗಿ ಹೊಡೆದು ಇವನನ್ನು ಇವತ್ತು ಸಾಯಿಸಬೇಕು ಎಂದಾಗ ಫಿರ್ಯಾದಿ ಮತ್ತು ಓಣಿಯ ಜನರು ಬಂದು ಬಿಡಿಸಿಕೊಂಡಿರುತ್ತಾರೆ. ಸದರಿ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ಯಂಕನಗೌಡನಿಗೆ 108 ಅಂಬುಲೆನ್ಸ ದಲ್ಲಿ ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ನಂತರ ಇಂದು ದಿ: 23-05-17 ರಂದು 00-15 ,ಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

 
Will Smith Visitors
Since 01/02/2008