Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, July 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
ಮಟಕಾ ಜೂಜಾಟದ ಪ್ರಕರಣ
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 222/2014 ಕಲಂ. 78(3) ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ-25-07-2014 ರಂದು 00-10 ಗಂಟೆಗೆ ಶ್ರೀ. ಎಂ. ನಾಗೆರೆಡ್ಡಿ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರು ಮಟ್ಕಾ ಜೂಜಾಟ ದಾಳಿಯ ಪಂಚನಾಮೆ ಹಾಗೂ ಲಿಖಿತ ಪಿರ್ಯಾದಿ ಮತ್ತು ಮಟ್ಕಾ ಜೂಜಾಟದಲ್ಲಿ ತೋಡಗಿದ್ದ 5 ಜನ ಆರೋಪಿತರೊಂದಿಗೆ ಠಾಣೆಗೆ ತಂದು ಹಾಜರ ಪಡಿಸಿದ್ದು ಅದರ ಸಾರಾಂಶವೆನಂದರೆ ದಿನಾಂಕ-24-07-2014 ರಂದು ಮಾನ್ಯ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರಿಗೆ ಮಾಹಿತಿ ಬಂದ ಮೆರೆಗೆ ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ಕಾರಟಗಿ ಠಾಣಾ ವ್ಯಾಪ್ತಿಯ ಸಾಲುಂಚಿಮರ ಗ್ರಾಮದ ಸೂರ್ಯನಾರಾಯಣ ಇವರಿಗೆ ಸಂಬಂದಿಸಿದ ಬಾಡಿಗೆ ಮನೆಯಲ್ಲಿ ಫೋನ್ ಮುಖಾಂತರ ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದ 5 ಜನ ಆರೋಪಿತರ ಮೇಲೆ ಇಬ್ಬರೂ ಪಂಚರ ಸಮಕ್ಷಮ ಮಾನ್ಯ ಪಿ.ಐ, ಡಿ.ಸಿ.ಐ.ಬಿ ಘಟಕ ಕೊಪ್ಪಳರವರು  ಮತ್ತು ಅವರ ಸಿಬ್ಬಂದಿಯವರು ದಾಳಿ ಮಾಡಲಾಗಿ ಮಟ್ಕಾಜೂಜಾಟದಲ್ಲಿ ತೊಡಗಿದ್ದ 5 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತರ ಕಡೆಯಿಂದ ಮಟ್ಕಾ ಜೂಜಾಟದ 10 ಮಟ್ಕಾ ನಂಬರ ಬರೆದ ಪಟ್ಟಿಗಳು, 5 ಬಾಲ್ ಪೆನ್ , 2 ಮೋಬೈಲ್ ಹಾಗೂ ನಗದು ಹಣ ರೂ 43,600--00 ರೂಪಾಯಿಗಳನ್ನು ಹಾಜರಿದ್ದ ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಯಿಸಿಕೊಂಡು ಠಾಣೆಗೆ ಬಂದು ನೀಡಿದ ವರದಿಯ ಮೇಲೆ ಠಾಣೆಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅಪಘಾತ ಪ್ರಕರಣ
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 43/2014 ಕಲಂ. 279, 338 ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ 25-07-2014 ರಂದು ಬೆಳಿಗ್ಗೆ 4-00 ಗಂಟೆಗೆ ಕೊಪ್ಪಳ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಫಿರ್ಯಾದಿ ನಾಗಲಿಂಗಯ್ಯ ಹಿರೇಮಠ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ನಿನ್ನೆ ದಿನಾಂಕ 24-07-2014 ರಂದು ರಾತ್ರಿ 10-45 ಗಂಟೆಗೆ ಫಿರ್ಯಾದಿ ಮತ್ತು ಹೋಮಗಾರ್ಡ ಶಫೀ ಇಬ್ಬರೂ ಕೂಡಿ ಫಿರ್ಯಾದಿಯ ಮೋಟಾರ್ ಸೈಕಲ್ ನಂ. KA-37/R-3220 ನೆದ್ದರಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ಹೊಗಿದ್ದು ಕರ್ತವ್ಯವನ್ನು ನಿರ್ವಹಿಸುತ್ತಾ ಇಂದು ದಿನಾಂಕ. 25-07-2014 ರಂದು ಬೆಳಗಿನ ಜಾವ 3-30 ಗಂಟೆಯ ಸುಮಾರಿಗೆ ಹಳೇ ಡಿ.ಸಿ ಕ್ರಾಸ್ ದಿಂದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಕಾಮಗಾರಿ ಕೆಲಸ ನಡೆದಿದ್ದು ಎಲ್ಲಾ ವಾಹನಗಳು ರಸ್ತೆಯ ಡಿವೈಡರ್ ದಿಂದ ಉತ್ತರ ಬಾಗದಲ್ಲಿಯೇ ಸಂಚರಿಸುತ್ತಿದ್ದವು. ಆ ಪ್ರಕಾರ ಫಿರ್ಯಾದಿ ಮೊಟಾರ್ ಸೈಕಲ್ ಹಿಂದೆ ಹೊಮ್ ಗಾರ್ಡ ಶಫೀ ಇತನನ್ನು ಕೂಡಿಸಿಕೊಂಡು ಅಶೋಕ ಸರ್ಕಲ್ ಕಡೆಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಕ್ರಷರ್ ವಾಹನದ ಚಾಲಕನು ತಾನು ಚಲಾಯಿಸುತ್ತಿರುವ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ್ ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಗೆ ಬಲಗಾಲ ಮೋಣಕಾಲಿಗೆ, ಎಡಗಡೆ ಎದೆಗೆ, ಎಡಗೈ ಮೋಣಕೈ ಹತ್ತಿರ ಬಾರಿ ಒಳಪೆಟ್ಟು ಮತ್ತು ಹೋಮಗಾರ್ಡ ಶಫೀ ಇವರಿಗೆ ಬಲಗಾಲ ಮೋಣಕಾಲ ಹತ್ತಿರ ಬಾರಿ ಒಳಪೆಟ್ಟು ಮತ್ತು ಬಲಗೈ ಮುಂಗೈಗೆ ರಕ್ತಗಾಯ ವಾಗಿರುತ್ತದೆ. ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗಾಯದ ಪ್ರಕರಣ
3) ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 104/2014 ಕಲಂ. 341, 324, 504 ಸಹಿತ 34 ಐ.ಪಿ.ಸಿ:.
ದಿನಾಂಕ: 24-07-2014 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಪಿರ್ಯಾದಿದಾರನಾದ ಶ್ರೀ ಪ್ರಕಾಶ ತಂದೆ ಈರಪ್ಪ ಬಣಕಾರ ವ: 25 ವರ್ಷ ಜಾ: ಮಾದರ ಉ: ಕೂಲಿ ಕೆಲಸ ಸಾ: ಬಾಬು ಜಗಜೀವನರಾಮ ನಗರ ಯಲಬುರ್ಗಾ ತನ್ನ ಮನೆಯಿಂದ ಹೊರಗಡೆ ತನ್ನ ಅಂಗಳದಲ್ಲಿ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರಾದ ಈರಪ್ಪ ತಂದೆ ಹನಮಪ್ಪ ಬಣಕಾರ ಜಾ: ಮಾದರ ಮತ್ತು ದುರಗಪ್ಪ ತಂದೆ ಹನಮಪ್ಪ ಬಣಕಾರ ಜಾ: ಮಾದರ ಸಾ: ಇಬ್ಬರೂ ಯಲಬುರ್ಗಾ. ನೇದ್ದವರು ಬಂದಿದ್ದು ಆಗ ಪಿರ್ಯಾದಿದಾರನು ಆರೋಪಿತರಿಗೆ ನಿಮ್ಮ ನಾಯಿಗಳು ಜನರಿಗೆ ಕಚ್ಚಿ ಲುಕ್ಸಾನ ಮಾಡುತ್ತವೆ ನೀವು ನಾಯಿಗಳನ್ನು ನಿಮ್ಮ ಮನೆಯಲ್ಲಿ ಕಟ್ಟಿಕೊಳ್ಳಿರಿ ಅಂತಾ ಅಂದಿದ್ದು ಆಗ ಆರೋಪಿತರು ಪಿರ್ಯಾದಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಆವಾಚ್ಛ ಶಬ್ದಗಳಿಂದ ಬೈಯ್ದು ಆರೋಪಿ 01 ಈತನು ಕೈ ಮುಷ್ಟಿ ಮಾಡಿ ಪಿರ್ಯಾದಿಯ ಬಲ ಕಿವಿಯ ಹಿಂಭಾಗ ಕುತ್ತಿಗಿಗೆ ಗುದ್ದಿ ದು:ಖಾಪತಗೊಳಿಸಿದ್ದು, ಆರೋಪಿ ನಂ: 02 ಈತನು ಪಿರ್ಯಾದಿಯ ತಲೆಯ ಕೂದಲನ್ನು ಹಿಡಿದು ತೊಡ್ಡಿಗೆ ಒದ್ದಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳವು ಪ್ರಕರಣ
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 159/2014 ಕಲಂ. 379 ಐ.ಪಿ.ಸಿ:.
ದಿನಾಂಕ: 24-07-2014 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರಾದ ಅನಿತಾ ಗಂಡ ಕುಮಾರಸ್ವಾಮಿ ದಳವಿ ವಯಾ: 28 ವರ್ಷ ಜಾ: ಮರಾಠ ಉ: ಗೃಹಿಣಿ ಸಾ: ಕಾರಿಗನೂರ 23 ನೇ ವಾರ್ಡ ಹೊಸಪೆಟೆ ತಾ: ಹೊಸಪೆಟೆ ಜಿ: ಬಳ್ಳಾರಿ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ, ಫಿರ್ಯಾದಿದಾರರು ಇಂದು ದಿನಾಂಕ: 24-07-2014 ರಂದು ಮುಜಾನೆ 9-00 ಗಂಟೆಗೆ ತಾನು ಮತ್ತು ತನ್ನ ತಮ್ಮ ವಿನಾಯಕ ಕೂಡಿಕೊಂಡು ತನ್ನ ತವರ ಮನೆಯಾದ ರಣತೂರ ತಾ: ಶಿರಹಟ್ಟಿ ಹೋಗಲು ಹೊಸಪೆಟೆಯಿಂದ ಕೊಪ್ಪಳಕ್ಕೆ ಹೊರಟಿದ್ದು, ತನ್ನ ವ್ಯಾನಿಟಿ ಬ್ಯಾಗಿನಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳಿರುವ ಪರ್ಸನ್ನು ಇಟ್ಟುಕೊಂಡಿದ್ದರು, ತಾವು ಮುಂಜಾನೆ 11-30 ಗಂಟೆಗೆ ಹೊಸಪೇಟೆಯಿಂದ ಕೊಪ್ಪಳಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು ನಂತರ ಮದ್ಯಾಹ್ನ 12-30 ಗಂಟೆಗೆ ಮುಂಡರಗಿ ಕಡೆಗೆ ಹೋಗುವ ಬಸ್ ಬಂದಿದ್ದರಿಂದ ಅವರ ತಮ್ಮ ವಿನಾಯಕ ಎರಡು ಲಗೇಜ್ ಬ್ಯಾಗ್ಗಳನ್ನು ತೆಗೆದುಕೊಂಡು ಬಸ್ ಹತ್ತಿದ್ದು, ಹಿಂದೆ ತಾನು ತನ್ನ 03 ವರ್ಷದ ಮಗನನ್ನು ಎತ್ತಿಕೊಂಡು ಬಲಗೈ ತೋಳಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ನೂಕು ನುಗ್ಗಲಿನಲ್ಲಿ  ಬಸ್ನ್ನು ಹತ್ತುತ್ತಿರುವಾಗ ತನ್ನ ತೋಳಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗಿನ ಚೈನ್ನ್ನು ಯಾರೋ ಕಳ್ಳರು ತೆರೆದು ವ್ಯಾನಿಟಿ ಬ್ಯಾಗಿನಲ್ಲಿದ್ದ [1] ಒಂದು ಬಂಗಾರದ ಚೈನ್ ಅಂದಾಜು ತೂಕ 10 ಗ್ರಾಂ ಅಂ.ಕಿ.ರೂ: 22,000=00 [2] ಒಂದು ಜೋತೆ ಕಿವಿ ಹ್ಯಾಂಗಿಂಗ್ಸ್ ಅಂದಾಜು ತೂಕ 10 ಗ್ರಾಂ ಅಂ.ಕಿ.ರೂ: 22,000=00 [3] ಒಂದು ಜೋತೆ ತಾಳಿ 02 ಗ್ರಾಂ ಅಂ.ಕಿ.ರೂ: 2,500=00 [4] ಒಂದು ಜೋತೆ ಬೆಳ್ಳಿ ಕಾಲುಂಗುರ ಅಂದಾಜು ತೂಕ 05 ಗ್ರಾಂ 350=00 [5] ಎರಡು ಸಣ್ಣ ಮಕ್ಕಳ ಬಂಗಾರದ ಉಂಗುರ ಒಟ್ಟು ಅಂದಾಜು ತೂಕ 01 ಗ್ರಾಂ ಅಂ.ಕಿ.ರೂ: 1,500=00 [6] ಎರಡು ಸಣ್ಣ ಮಕ್ಕಳ ಬೆಳ್ಳಿ ಉಂಗುರ ಅಂದಾಜು ಒಟ್ಟು ತೂಕ 01 ಗ್ರಾಂ ಅಂ.ಕಿ.ರೂ: 50=00 ಎಲ್ಲಾ ಸೇರಿ ಒಟ್ಟು ಅಂಕಿ.ರೂ: 48,400=00 ಬೆಲೆ ಬಾಳುವುಗಳನ್ನು ಕಳ್ಳತನ ಮಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.



0 comments:

 
Will Smith Visitors
Since 01/02/2008