1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 67/2014 ಕಲಂ. 279, 337 ಐ.ಪಿ.ಸಿ:.
ದಿನಾಂಕ 26-07-2014 ರಂದು ಶನಿವಾರ ದಿವಸ ಬೆಳಿಗ್ಗೆ
10-30 ಗಂಟೆ ಸುಮಾರಿಗೆ ನಾಗರ ಅಮವಾಸ್ಯೆ ದಿವಸ ನಾನು, ನನ್ನ ತಂಗಿಯಾದ ಅಯ್ಯಮ್ಮ ಗಂಡ ದುರುಗೇಶ ವಕ್ರಾಣಿ
ಇಬ್ಬರೂ ಸೇರಿ ನನ್ನ ಮಗಳಾದ ಚೈತ್ರಾ, ವಯಸ್ಸು 5 ವರ್ಷ ಇವಳನ್ನು ಕರೆದುಕೊಂಡು ತಾವರಗೇರಾಕ್ಕೆ ಸಮೀಪದಲ್ಲಿರುವ
ಶ್ರೀ ಕರಿಯಪ್ಪ ತಾತನ ದೇವಸ್ಥಾನಕ್ಕೆ ಬಂದಿದ್ದೆವು.ನಾವು ದೇವರ ದರ್ಶನ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ
ಹೋಗುವ ಕುರಿತು ತಾವರಗೇರಾ-ಗಂಗಾವತಿ ಮುಖ್ಯರಸ್ತೆಯ ಎಡಭಾಗದಲ್ಲಿ ತಾವರಗೇರಾದಿಂದ ಬರುವ ವಾಹನಗಳಿಗಾಗಿ
ಕಾಯುತ್ತಾ ನಿಂತಿದ್ದೆವು. ನಾವು ಕಾಯುತ್ತಾ ನಿಂತಿದ್ದಾಗ
ನನ್ನ ಮಗಳು ನನ್ನ ತಂಗಿಯ ಕೈಯನ್ನು ಹಿಡಿದುಕೊಂಡು ನಿಂತಿದ್ದಳು. ಆಗ ಗಂಗಾವತಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ನಡೆಯಿಸಿಕೊಂಡು ಬಂದವನೇ ಇನ್ನೇನು ನಮಗೆ ಟಕ್ಕರ್ಕೊಡಬೇಕು ಅಷ್ಟರಲ್ಲಿ ನಾನು, ನನ್ನ ತಂಗಿ ಹಾಗೂ ಮಗಳನ್ನು
ಎಳೆದುಕೊಂಡು ಪಕ್ಕಕ್ಕೆ ಸರಿದಿದ್ದು ಆದಾಗ್ಯೂ ಕಾರು ನನ್ನ ಮಗಳಿಗೆ ಟಕ್ಕರ್ಕೊಟ್ಟು ಮುಂದೆ ಹೋಗಿ ನಿಂತಿತು. ಪರಿಣಾಮವಾಗಿ ನನ್ನ ಮಗಳಿಗೆ ಬಲಗಣ್ಣಿನ ಮೇಲೆ ಹಣೆಗೆ ರಕ್ತ
ಗಾಯವಾಗಿದ್ದು ಇರುತ್ತದೆ. ಆಗ ಸಮಯ ಮಧ್ಯಾಹ್ನ
3-00 ಗಂಟೆ ಆಗಿರಬಹುದು. ನಂತರ ನನ್ನ ಮಗಳಿಗೆ ಅಪಘಾತಪಡಿಸಿದ
ವಾಹನವನ್ನು ನೋಡಲಾಗಿ ಮಾರುತಿ ಸುಜುಕಿ ಎಟರ್ಿಗಾ ಕಾರ್ ಇದ್ದು, ಅದರ ನಂ. ಕೆ.ಎ.34/ಎನ್-4048 ಅಂತಾ
ಇತ್ತು. ಅದರ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು
ರಾಜಾ ತಂದೆ ಯರಿಯಪ್ಪ ಸಾ: ಕುವೆಂಪುನಗರ, ಬಳ್ಳಾರಿ ಅಂತಾ ತಿಳಿಸಿದನು. ನಂತರ ನಾನು ಹಾಗೂ ನನ್ನ ತಂಗಿ ಇಬ್ಬರೂ ಸೇರಿ ನನ್ನ ಮಗಳನ್ನು
ತಾವರಗೇರಾ ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ
ಕುರಿತು ಸಕರ್ಾರಿ ಆಸ್ಪತ್ರೆ, ತಾವರಗೇರಾದಲ್ಲಿ ದಾಖಲು ಮಾಡಿದ್ದು ಇರುತ್ತದೆ. ಸದರಿ ಮಾರುತಿ ಸುಜುಕಿ
ಎಟರ್ಿಗಾ ಕಾರ್ ನಂ. ಕೆ.ಎ.34/ಎನ್-4048 ನೇದ್ದರ ಚಾಲಕನಾದ ರಾಜಾ ತಂದೆ ಯರಿಯಪ್ಪ ಸಾ: ಕುವೆಂಪುನಗರ,
ಬಳ್ಳಾರಿ ಇವನು ಕಾರನ್ನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ರಸ್ತೆಯ ಎಡಭಾಗದಲ್ಲಿ
ನಿಂತಿದ್ದ ನನ್ನ ಮಗಳಿಗೆ ಟಕ್ಕರ್ಕೊಟ್ಟು ಅಪಘಾತಪಡಿಸಿ ಗಾಯಗೊಳಿಸಿದ್ದು ಇದೆ.
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 144/2014 ಕಲಂ. 279, 337, 338
ಐ.ಪಿ.ಸಿ:.
ದಿ: 26-07-2014 ರಂದು ಮದ್ಯಾನ 3:00 ಗಂಟೆಯ ಸುಮಾರಿಗೆ
ಕನಕಗಿರಿ-ಚಿಲಕಮುಖಿ ರಸ್ತೆಯ ಮೇಲೆ ಕುದರಿಮೋತಿ ಕ್ರಾಸ್ ಹತ್ತಿರ ಆರೋಪಿತನಾದ ಪಾಷಾ ತಂದೆ ರಾಜಾಸಾಬ
ವಯಾ: 35 ವರ್ಷ ಜಾ: ಮುಸ್ಲಿಂ ಉ: ಡ್ರೈವರ ಕೆಲಸ ಸಾ: ಕನಕಗಿರಿ ತಾ: ಗಂಗಾವತಿ ಜಿ: ಕೊಪ್ಪಳ ತನ್ನ
ಮೋ.ಸೈ ನಂ ಕೆ.ಎ-37/ಎಲ್-3430 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ಚಲಾಯಿಸಿಕೊಂಡು ನಿಯಂತ್ರಣ ಸಾಧಿಸದೇ ಸ್ಕೀಡ್ ಮಾಡಿ ಮೋ.ಸೈ ಹಿಂದೆ ಕುಳಿತ ಪಿರ್ಯಾದಿದಾರ
ಹೊನ್ನುರಸಾಬ ತಂದೆ ಬುಡನಸಾಬ ತಿಪ್ಪಳ್ಳಿಯವರ ವಯಾ: 39 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: 2
ನೇ ವಾರ್ಡ ಕನಕಗಿರಿ ತಾ: ಗಂಗಾವತಿ ಜಿ: ಕೊಪ್ಪಳ ಹಾಗೂ ನಬಿಸಾಬ, ಇವರನ್ನು ಕೆಳಗೆ ಬೀಳಿಸಿ ಮತ್ತು
ಆರೋಪಿತನು ಸಹ ಸಾದಾ ಹಾಗೂ ಭಾರಿ ರಕ್ತಗಾಯಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಪಿಯರ್ಾದಿ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 169/2014 ಕಲಂ. 143, 147, 323,
354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 26-07-2014 ರಂದು ಮಧ್ಯಾಹ್ನ
12-30 ಗಂಟೆಗೆ ಶ್ರೀಮತಿ ಸಾಧೀಕಬೇಗಂ ಗಂಡ ಶೇಖ್ ಸಲಿಂ ವಯ 41 ವರ್ಷ ಜಾ; ಮುಸ್ಲಿಂ ಉ: ಮನೆಗೆಲಸ
ಸಾ: ಅಗಡಿ ಸಂಗಣ್ಣ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು
ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 25-07-2014 ಮುಂಜಾನೆ 11-00 ಗಂಟೆಯ ಸುಮಾರಿಗೆ ಅಗಡಿ
ಸಂಗಣ್ಣ ಕ್ಯಾಂಪಿನಲ್ಲಿ ನಗರಸಭೆಯ ಪೌರಕಾರ್ಮಿಕರು ಗಟಾರ ಸ್ವಚ್ಚ ಮಾಡಲು ಬಂದಾಗ ಫಿರ್ಯಾದಿದಾರಳು
ಅವರಿಗೆ ತನ್ನ ಮನೆಯ ಹತ್ತಿರ ಗಟಾರ ಸ್ವಚ್ಚ ಮಾಡುವಂತೆ ಹೇಳಿದ್ದಕ್ಕೆ ಫಿರ್ಯಾದಿದಾರಳ ಮನೆಯ
ಪಕ್ಕದವರಾದ ಆರೋಪಿ ಸಲೀಮಾ ಇಕೆಯು ಫಿರ್ಯಾದಿಗೆ ಮುನ್ಸಿಪಾಲ್ಟಿಯವರು ನಿನ್ನ ಮಿಂಡರೇನು, ನಿಮ್ಮಮ್ಮನ ಮಿಂಡರೇನು ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕಪಾಳಕ್ಕೆ ಬಡಿದಿದ್ದು ಅಲ್ಲದೇ
ಸಲೀಮಾಳ ತಮ್ಮ ಗೌಸ್ ಬಂದವನೇ ಲೇ ಸೂಳೇ ಅಂತಾ ಬೈದಾಡುತ್ತಾ ಕೈಯಿಂದ ಎಡಗಡೆಯ ಕಪಾಳಕ್ಕೆ
ಬಡಿದಿದ್ದು ಹಾಗೂ ಸಲೀಮಾಳ ತಂಗಿ ನೂರಾ ಮತ್ತು ಮತ್ತೋಬ್ಬ ತಮ್ಮ ಹಮೀದ ಮತ್ತು ಮಗನಾದ ಸಾಧೀಕ್
ರವರು ಸಹ ಬಂದು ಫಿರ್ಯಾದಿಗೆ ಲೇ ಸೂಳೇ ನಿಂದು
ಬಹಳ ಆಗಿದೆ ನಿನ್ನ ಮುಗಿಸಿ ಬಿಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ
ಹಾಕುತ್ತಾ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಸಲೀಮಾ, ಗೌಸ್ ಮತ್ತು ಸಾಧೀಕ್ ರವರು ಕೂಡಿಕೊಂಡು ಫಿರ್ಯಾದಿದಾರಳು ಧರಿಸಿದ್ದ ಸೀರೆಯನ್ನು ಹಿಡಿದು
ಎಳೆದಾಡಿದ್ದು ಅಲ್ಲದೇ ಗೌಸ್ ಇತನು ನನ್ನ ಕುಪ್ಪಸವನ್ನು ಎಳೆದಿದ್ದರಿಂದ ಕುಪ್ಪಸವು
ಹರಿದಿರುತ್ತದೆ. ಇದನ್ನು ನೋಡಿ ಬಿಡಿಸಲು ಹೋದ
ಫಿರ್ಯಾದಿದಾರಳ ಮಗನಾದ ಸಲ್ಮಾನ ಇತನಿಗೂ ಸಹ ಆರೋಪಿತರಾದ ಸಾಧೀಕ ಮತ್ತು ಗೌಸ್ ಕೂಡಿಕೊಂಡು ಜೀವದ
ಬೆದರಿಕೆ ಹಾಕಿ ಕೈಯಿಂದ ಹೊಡಿ-ಬಡಿ ಮಾಡಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 170/2014 ಕಲಂ. 143, 147, 323,
354, 504, 506 ಸಹಿತ 149 ಐ.ಪಿ.ಸಿ:.
ಇಂದು ದಿನಾಂಕ 26-07-2014 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ ಶೇಖ್ ಗೌಸಪಾಷಾ ತಂದೆ
ಶೇಖ್ ಹುಸೇನಪೀರಾ ವಯ 40 ಜಾ; ಮುಸ್ಲಿಂ ಉ: ಕಾಂಟ್ರ್ಯಾಕ್ಟರ್ ಸಾ: ಅಗಡಿ ಸಂಗಣ್ಣ ಕ್ಯಾಂಪ್,
ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ
25-07-2014 ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಅಗಡಿ ಸಂಗಣ್ಣ ಕ್ಯಾಂಪಿನಲ್ಲಿ ಫಿರ್ಯಾದಿ ಮತ್ತು
ಆರೋಪಿತರ ಮನೆಯ ಮುಂದಿನ ಗಟಾರ ಸ್ವಚ್ಚತೆ ಮಾಡುವ ವಿಷಯವಾಗಿ ಒಬ್ಬರಿಗೊಬ್ಬರು ಜಗಳ
ಮಾಡಿಕೊಂಡಿದ್ದು ಈ ವಿಷಯವಾಗಿ ಇಂದು ದಿನಾಂಕ 26-07-2014 ರಂದು ಸಾಯಂಕಾಲ 4-00 ಗಂಟೆ ಫಿರ್ಯಾದಿ
ಹಾಗೂ ಅವರ ಸಹೋದರಿಯರು ಮತ್ತು ಸಹೋದರರು ಅಗಡಿ ಸಂಗಣ್ಣ ಕ್ಯಾಂಪಿನಲ್ಲಿರುವ ತಮ್ಮ ಮನೆಯಲ್ಲಿ
ಇರುವಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸದರಿಯವರ ಮನೆಯ ಹತ್ತಿರ ಹೋಗಿ ಅವಾಚ್ಯ ಶಬ್ದಗಳಿಂದ
ಲೇ ನೀಚ ಸೂಳೇಮಕ್ಕಳೆ, ಲಂಗಾ ಸೂಳೇಮಕ್ಕಳೆ ಮನೆಯಿಂದ ಹೊರಗೆ ಬರ್ರಿ, ನಿಮಗೆ ಮುಗಿಸಿ ಬಿಡುತ್ತೇವೆ
ಅಂತಾ ಜೀವದ ಬೆದರಿಕೆ ಹಾಕಿದ್ದು ಫಿರ್ಯಾದಿದಾರರು
ಮನೆಯಿಂದ ಹೊರಗೆ ಬಂದು ಮನೆಯ ಹತ್ತಿರ ಗಲಾಟೆ ಮಾಡಬೇಡಿರೆಂದು ಹೇಳಿದರು ಸಹ ಕೇಳದೆ
ಆರೋಪಿತರೆಲ್ಲರು ಕೂಡಿಕೊಂಡು ಫಿರ್ಯಾದಿ ಹಾಗೂ ಅವರ ಸಹೋದರರಿಗೆ ಮತ್ತು ಸಹೋದರರಿಗೆ ಅವಾಚ್ಯ
ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಫಿರ್ಯಾದಿ ಸಹೋದರಿಯ ಸೀರೆ ಹಿಡಿದು
ಎಳೆದಾಡಿ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ಕಡಿದು ಬಿಡುತ್ತೇವೆ ಅಂತಾ ವಗೈರೆ ಆಗಿ ನೀಡಿದ
ಫಿರ್ಯಾದಿ ಸಾರಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 64/2014 ಕಲಂ. 292 ಐ.ಪಿ.ಸಿ ಮತ್ತು 67(ಎ)
ಐ.ಟಿ. ಕಾಯ್ದೆ 2008:.
ದಿನಾಂಕ 26-07-2014 ರಂದು 13:30 ಗಂಟೆಗೆ
ಮಂಗಳೂರ ಗ್ರಾಮದಲ್ಲಿ ಆರೋಪಿತನಾದ ಸುರೇಶ ತಂದೆ ಧಮಣ್ಣ ತನ್ನ ಸೇಲ್
ಟೆಫ್ ಮೋಬೈಲ ಸರ್ವಿಸ್ ಅಂಗಡಿಯಲ್ಲಿ ಕಂಪ್ಯಟರದಲ್ಲಿ ಜನರಿಗೆ ಸ್ತ್ರೀ ಮತ್ತು ಪುರುಷ್ರ
ಅಸಹ್ಯಕರವಾದ ಅಶ್ಲೀಲ ಚಿತ್ರಗಳನ್ನು ತೋರಿಸುವುದು
ಹಾಗೂ ಸದರಿ ಅಶ್ಲೀಲ ಚಿತ್ರಗಳನ್ನು ಸಿಡಿಗಳಿಗೆ ಡೌನ್ ಲೋಡ್ ಮಾಡಿಕೊಡುವುದನ್ನು ಖಾತ್ರಿ
ಪಡಿಸಿಕೊಂಡು ಶ್ರೀ. ಸಿದ್ದರಾಮಯ್ಯ ಪಿಎಸ್‌ಐ ರವರು
ಸಿಬ್ಬಂದಿಯರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ
ಮಾಡಿ ಅಂಗಡಿಯಲ್ಲಿದ್ದ ಕಂಪ್ಯೂಟರ ಸಾಮಾಗ್ರಿಗಳಾದ
1) ಮಾನೀಟರ್, 2)ಸಿಪಿಯು, 3)ಕೀಬೋಡ್, ಮತ್ತು 4)ಮೌಸ್, 5)ಅಡಪ್ಟರ್ 6) ಎರಡು ಅಶ್ಲೀಲ ಚಿತ್ರಗಳ ವಿಡಿಯೊ ಸಿ,ಡಿ ಗಳನ್ನು
ಜಪ್ತ ಮಾಡಿಕೊಂಡು ವಾಪಸ ಠಾಣೆಗೆ ಬಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 65/2014 ಕಲಂ. 87 ಕೆ.ಪಿ. ಕಾಯ್ದೆ
(Karnataka Police Act).
ದಿನಾಂಕ: 26.07.2014 ರಂದು ಸಾಯಾಂಕಾಲ 05-30 ಗಂಟೆಗೆ
ಹಿರೇವಂಕಲಕುಂಟ ಸೀಮಾದಲ್ಲಿ ಇರುವ ಹಳ್ಳದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1)ಮಂಜುನಾಥ ತಂದೆ ದೊಡ್ಡ ಈರಪ್ಪ ವೀರಾಪೂರು ವ: 30, ಜಾ|| ಹರಿಜನ ಸಾ|| ಹಿರೇವಂಕಲಕುಂಟ ಮಹಾಂತೇಶ ತಂದಿ ಬಸವರಾಜ ಸೌದತ್ತಿ ವ:
32 ವರ್ಷ ಜಾ: ಲಿಂಗಾಯತ ಸಾ: ಇರಕಲ್ಗಡ ತಾ: ಕೊಪ್ಪಳ
3) ಅಡಿವೆಯ್ಯ ತಂದಿ ಸಿದ್ದಯ್ಯ ಹಿರೇಮಠ ವ: 42 ವರ್ಷ ಜಾ: ಜಂಗಮ ಸಾ: ಬಸಾಪೂರು 4) ಬಸವರಾಜ ತಂದಿ ಶಂಕ್ರಪ್ಪ ಕಟಗಿಹಳ್ಳಿ ವ: 40ವರ್ಷ ಜಾ:
ಗಾಣಿಗೇರ ಸಾ: ತಾಳಕೇರಿ 5) ಮಾರುತಿ ತಾಯಿ ಹನಮವ್ವ ಟೆಂಗುಂಟಿ ಸಾ: ಹಿರೇವಂಕಲಕುಂಟ 6) ಶಾಂತಪ್ಪ ಪೂಜಾರಿ
ಸಾ: ಚಿಕ್ಕವಂಕಲಕುಂಟ 7) ಸೋಮಣ್ಣ ಹೂನೂರು ಸಾ: ಚಿಕ್ಕವಂಕಲಕುಂಟ
8) ಶರಣಪ್ಪ ತಂದಿ ಶಂಕರಪ್ಪ ನಿಲೂಗಲ್ ಸಾ: ಹಿರೇವಂಕಲಕುಂಟ 9) ಹನಮಂತ ತಂದಿ ದೇವಪ್ಪ ಬಡಿಗೇರ ಸಾ:
ಹಿರೇವಂಕಲಕುಂಟ 10) ಮಾರುತಿ ತಂದೆ ದುರಗಪ್ಪ ಟೆಂಗುಂಟಿ
ಸಾ: ಹಿರೇವಂಕಲಕುಂಟ 11) ಈರಪ್ಪ ತಂದಿ ಹೋಳೆಯಪ್ಪ ಚಿಣಗಿ ಸಾ: ಹಿರೇವಂಕಲಕುಂಟ 12) ಕುಂಟೆಪ್ಪ ತಂದಿ
ದೇವಪ್ಪ ಎಮ್ಮಿ ಸಾ: ಚಿಕ್ಕವಂಕಲಕುಂಟ ಪಣಕ್ಕೆ ಹಣ ಕಟ್ಟಿ ಸಂದರಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ
ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಲಾಗಿ ಆರೋಪಿತರ ಪೈಕಿ ಆರೋಪಿನಂ; 1 ರಿಂದ
4 ನೇದ್ದವರು ಸಿಕ್ಕಿಬಿದ್ದಿದ್ದು ಇವರಿಂದ ಇಸ್ಪೇಟು
ಜೂಜಾಟದ ನಗದು ಹಣ ರೂ. 12285/- ಮತ್ತು ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಆರೋಪಿನಂ: 5 ರಿಂದ 12 ನೇದ್ದವರು ಓಡಿಹೋಗಿದ್ದು ಇರುತ್ತದೆ
ಪಿ.ಎಸ್.ಐ ರವರು ಠಾಣೆಗೆ ಬಂದು ಸಿಕ್ಕಿಬಿದ್ದ ಆರೋಪಿತರನ್ನು ಹಾಗೂ ಜಪ್ತ ಮಾಡಿದ ಇಸ್ಪೇಟು ಜೂಜಾಟಟದ
ಸಾಮಗ್ರಿಗಳನ್ನು ಹಾಗೂ ಪಂಚನಾಮೆಯೊಂದಿಗೆ ತಮ್ಮ ವರದಿಯನ್ನು ಸಲ್ಲಿಸಿದ ಆದಾರದ ಮೇಲೆಂದ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment