Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, August 31, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 107/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ:31-08-2014 ರಂದು 12-05 ಎಎಂಕ್ಕೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಲಿಖತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ:30-08-2014 ರಂದು ಸಾಯಂಕಾಲ 6-00 ಗಂಟೆಗೆ ತಾನು ಮತ್ತು ತನ್ನ ಅಣ್ಣನಾದ ನಜೀರ್ ಸಾಬ ಇಬ್ಬರೂ ಸೇರಿಕೊಂಡು ಕುಕನೂರಿನ ಗಾವರಾಳ ಈರಪ್ಪ  ಇವರ ಜಾಗೇಯಲ್ಲಿರುವ ತಮ್ಮ ಬಣವಿಯಿಂದ ಮೇವು ತರಲು ಹೊರಟಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ:ಕೆಎ;26 ಜೆ-932 ನೇದ್ದರಲ್ಲಿ ಹಿಂದೆ ತನ್ನ ತಾಯಿಯನ್ನು ಕೂಡ್ರಿಸಿಕೊಂಡು ಕುಕನೂರು ಕಡೆಯಿಂದ ಮಸಬಹಂಚಿನಾಳ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರನ ಅಣ್ಣನಿಗೆಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಪಿರ್ಯಾದಿ ಅಣ್ಣನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು, ಅಲ್ಲದೇ, ಪಿರ್ಯಾದಿದಾರನ ತಾಯಿ ಸುಮಂಗಲಾ ಇವರಿಗೆ ಸಾದಾಸ್ವರೂಪದ ಗಾಯಗಳಾಗಿದ್ದು, ಗಾಯಾಳು ನಜೀರ್ ಸಾಬ ಈತನಿಗೆ ಗದಗಿನ ಬಸವರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಿ, ವಾಪಸ್ ಠಾಣೆಗೆ ಬಂದು ದೂರು ನೀಡಿದ್ದು,   ಕಾರಣ, ಸದರಿ ಮೋಟಾರ್ ಸೈಕಲ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:107/14 ಕಲಂ:279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 50/2014 ಕಲಂ. 279 ಐ.ಪಿ.ಸಿ:.
ದಿನಾಂಕ 30-08-2014 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹೇಶ ಜಾಥೋಡ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 30-08-2014 ರಂದು ಬೆಳಿಗ್ಗೆ 10-30 ಗಂಟೆಗೆ ತಾನು ಮತ್ತು ಶ್ರೀಧರ ಇಬ್ಬರೂ ಕೂಡಿ ಮೋಟಾರ್ ಸೈಕಲ್ ನಂಬರ್ KA 37 / V 2058 ನೇದ್ದರ ಮೇಲೆ ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದಿದ್ದು, ಮೋಟಾರ್ ಸೈಕಲ್ ನ್ನು ಶ್ರೀಧರ ಇತನು ಚಲಾಯಿಸುತ್ತಿದ್ದನು. ತಾನು ಹಿಂದೆ ಕುಳಿತುಕೊಂಡಿದ್ದೆನು. ಕೊಪ್ಪಳ ನಗರದ ಗವಿಮಠ ರಸ್ತೆಯ ಮೇಲೆ ಜಿಲ್ಲಾ ನ್ಯಾಯಾಲಯದ ಸಮೀಪ ಶ್ರೀಧರ ಇತನು ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಎದುರುಗಡೆಯಿಂದ ಮೋಟಾರ್ ಸೈಕಲ್ ನಂಬರ್ KA 37 / R 6363 ನೇದ್ದರ ಸವಾರನೂ ಸಹ ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು ಇಬ್ಬರೂ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಮುಖಾಮುಖಿಯಾಗಿ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ತನಗೆ ಹಾಗೂ ಶ್ರೀಧರನಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಮತ್ತು ಇನ್ನೊಬ್ಬ ಮೋಟಾರ್ ಸೈಕಲ್ ಸವಾರ ಮಂಜುನಾಥ ಇತನಿಗೆ ಎಡಕಣ್ಣಿನ ಕೆಳಗೆ ಒಳಪೆಟ್ಟು ಬಿದ್ದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಗಣಕೀಕೃತ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 50/2014 ಕಲಂ. 279 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/2014 ಕಲಂ. 379 ಐ.ಪಿ.ಸಿ:.

ದಿನಾಂಕ 30-08-2014 ರಂದು ಮಧ್ಯಾಹ್ನ 12-30 ಗಂಟೆಗೆ ಶ್ರೀ ಅಶೋಕ ಕುಮಾರ ಜವಳಿ ತಂದೆ ಭೀಮಣ್ಣ ಜವಳಿ ವಯ 54 ವರ್ಷ  ಜಾ: ಲಿಂಗಾಯತ ಉ: ವ್ಯಾಪಾರ ಸಾ: ಪ್ರಭುದೇವ ನಿಲಯ, ವಡ್ಡರಹಟ್ಟಿ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾದಿದಾರರ ಮಗನು ದಿನಾಂಕ 22-08-2014 ರಂದು ಗಂಗಾವತಿ ನಗರದ ಶಿವೆ ಟಾಕೀಜ್ ಹತ್ತಿರ ಇರುವ ಶ್ರೀ ಸಾಯಿ ಲಕ್ಷ್ಮಿ ರೆಸಿಡೆನ್ಸಿ ಲಾಡ್ಜ್ ನ ಪ್ರಾರಂಭೋತ್ಸವಕ್ಕೆ ಫಿರ್ಯಾದಿದಾರರ ಹಿರೋ ಹೊಂಡ ಸ್ಪ್ಲೆಂಡರ್ ಮೋಟಾರ ಸೈಕಲ್  ನಂ. ಕೆ.ಎ.37/ಕ್ಯೂ. 8622 ಚಾಸ್ಸಿ ಸಂ. MBLHA10EE9HG05388 ಇಂಜನ್ ಸಂ. HA10EA9 HG  05367 ಕೆಂಪು ಬಣ್ಣದ್ದು. ಅಂ.ಕಿ.ರೂ. 20,000/- ಬೆಲೆ ಬಾಳುವುದನ್ನು ತೆಗೆದುಕೊಂಡು ಹೋಗಿ ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಡ್ಜ ಹತ್ತಿರ ನಿಲ್ಲಿಸಿ ಲಾಡ್ಜನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ 3-30 ಪಿ.ಎಂ.ಕ್ಕೆ ವಾಪಸ್ ಬಂದು ನೋಡಿದಾಗ ಸದರಿ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 208/14 ಕಲಂ. 379 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008