Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, October 25, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 243/2014 ಕಲಂ. 87 ಕೆ.ಪಿ. ಕಾಯ್ದೆ:.

ದಿನಾಂಕ: 24-10-2014 ರಂದು 20-00 ಗಂಟೆಗೆ ಶ್ರೀ ಈ. ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ರವರು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 14 ಜನರ ಮೇಲೆ  ಕ್ರಮ ಜರುಗಿಸಲು ಒಂದು ವರದಿ ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 24-10-2014 ರಂದು ಸಾಯಂಕಾಲ 5-45 ಗಂಟೆಗೆ ಆರೋಪಿತರಾದ ಬಸವರಾಜ ತಂದೆ ದೊಡ್ಡಬಸಪ್ಪ ವಯಾ: 23 ವರ್ಷ, ಜಾ: ಕುರುಬರ, ಉ: ಕೂಲಿ ಕೆಲಸ, ಸಾ: ತೋರಣಗಲ್, ತಾ: ಹೊಸಪೇಟೆ. 02]  ರವಿ ತಂದೆ ಕಾಡಪ್ಪ ವಯಾ: 19 ವರ್ಷ, ಜಾ: ಮೇಷನ್ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 03]   ನಾಗೇಶ ತಂದೆ ನರಸಪ್ಪ ವಯಾ: 30 ವರ್ಷ, ಜಾ; ನಾಯಕ, ಉ: ಹಮಾಲಿ ಕೆಲಸ, ಸಾ; ಬನ್ನಿಗಿಡ ಕ್ಯಾಂಪ್ ಗಂಗಾವತಿ. 04]  ರವಿ ತಂದೆ ಸೆಲ್ವರಾಜ್ ವಯಾ: 19 ವರ್ಷ, ಜಾ: ವಡ್ಡರ, ಉ: ಮೇಷನ್ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 05]     ಖಾದರ ತಂದೆ ರಾಜಮಹ್ಮದ್ ವಯಾ: 22 ವರ್ಷ, ಜಾ; ಮುಸ್ಲಿಂ, ಉ: ಡ್ರೈವರ್, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 6]   ಶೇಕ್ಷಾವಲಿ ತಂದೆ ಮೆಹಬೂಬ ವಯಾ: 55 ವರ್ಷ, ಜಾ: ಮುಸ್ಲಿಂ, ಉ: ಆಟೋ ಡ್ರೈವರ್, ಸಾ; ಮುರಾರಿ ಕ್ಯಾಂಪ್ ಗಂಗಾವತಿ. 07] ಮೀನಾಜ್ ತಂದೆ ವಲಿಮೋದ್ದೀನ್ ವಯಾ: 28 ವರ್ಷ, ಜಾ: ಮುಸ್ಲಿಂ, ಉ: ವೈರಿಂಗ ಕೆಲಸ, ಸಾ: ಕಿಲ್ಲಾ ಏರಿಯಾ ಗಂಗಾವತಿ. 08]      ಕೇಶಣ್ಣ ತಂದೆ ನಾಗಣ್ಣ ವಯಾ: 52 ವರ್ಷ, ಜಾ; 52 ವರ್ಷ, ಜಾ; ಎಸ್.ಸಿ., ಉ: ಕೂಲಿ ಕೆಲಸ, ಸಾ: ಶರೀಪ್ ನಗರ ಕರ್ನೂಲ್ ಆಂದ್ರಪ್ರದೇಶ. ಹಾ: ವ:- ಗಂಗಾವತಿ.  09]      ಶೇಖರಪ್ಪ ತಂದೆ ಈರಣ್ಣ ಹೊಸಗೇರಿ, ವಯಾ: 40 ವರ್ಷ, ಜಾ: ನಾಯಕ, ಉ: ಕೂಲಿಕೆಲಸ, ಸಾ; ಬಸವಣ್ಣ ದೇವಸ್ಥಾನದ ಹತ್ತಿರ ಹೊಸಗೇರಿ, ತಾ: ಗಂಗಾವತಿ.  10]      ಜೀವರತ್ನಂ ತಂದೆ ಆದಂ ವಯಾ; 52 ವರ್ಷ, ಜಾ: ಕ್ರಿಶ್ಚಿಯನ್, ಉ: ಕೂಲ ಕೆಲಸ, ಸಾ: ಬನ್ನಿಗಿಡ ಕ್ಯಾಂಪ್ ಗಂಗಾವತಿ. 11]       ಚಂದ್ರಪ್ಪ ತಂದೆ ಶಂಕ್ರಪ್ಪ ವಯಾ: 41 ವರ್ಷ, ಜಾ; ಮರಾಠ, ಉ: ಗ್ಯಾರೇಜ್ ಕೆಲಸ, ಸಾ: ಬನ್ನಿಗಿಡದ ಕ್ಯಾಂಪ್ ಗಂಗಾವತಿ. 12]      ಹನುಮಂತ ತಂದೆ ಓಂಕಾರಪ್ಪ ವಯಾ: 40 ವರ್ಷ, ಜಾ: ನೇಕಾರ, ಉ: ಕೂಲಿ ಕೆಲಸ, ಸಾ: ಮುರಾರಿ ನಗರ ಗಂಗಾವತಿ.  13]      ಹುಸೇನಪ್ಪ ತಂದೆ ಯಮನಪ್ಪ ವಯಾ: 55 ವರ್ಷ, ಜಾ: ಈಳಿಗೇರ, ಉ: ಕಾಯಿಪಲ್ಲೆ ವ್ಯಾಪಾರ, ಸಾ: ಸಂತೆಬಯಲು ಗಂಗಾವತಿ. 14]      ಬಾಷಾ ತಂದೆ ಗಫೂರ್ ಸಾಬ ವಯಾ: 32 ವರ್ಷ, ಜಾ; ಮುಸ್ಲಿಂ, ಉ: ಕೇಬಲ್ ಆಪರೇಟರ್, ಸಾ: ಮುರಾರಿ ನಗರ,  ಗಂಗಾವತಿ.  ಗಂಗಾವತಿ ನಗರದ ಬನ್ನಿಗಿಡ ಕ್ಯಾಂಪಿನಲ್ಲಿರುವ ವಿ.ಆರ್.ಎಲ್. ಆಪೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ ರೂ. 21,500-00 ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008