ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.
223/2014 ಕಲಂ. 341, 323, 506 ಸಹಿತ 34 ಐ.ಪಿ.ಸಿ:.
ದಿ:07-10-2014 ರಂದು ರಾತ್ರಿ 10-55 ಗಂಟೆಗೆ
ಫಿರ್ಯಾದಿದಾರರಾದ ಕೃಷ್ಣ ಸೊರಟೂರ. ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ
ಸಾರಾಂಶವೇನೆಂದರೆ, ಇಂದು ಸಂಜೆ 4-30 ಗಂಟೆಯ ಸುಮಾರಿಗೆ ತಿರುಗಾಡುವ ದಾರಿಯಲ್ಲಿ ಸೈಜು
ಕಲ್ಲುಗಳನ್ನಿಟ್ಟು ಅಕ್ರಮವಾಗಿ ಗೋಡೆ ಕಟ್ಟುವಾಗ ನೋಡಿದ ಫಿರ್ಯಾದಿದಾರರು ಅಡ್ಡಾಡಲು ತೊಂದರೆ
ಆಗುತ್ತದೆ. ಎಂದು ಕ್ಯಾಮರಾ ತೆಗೆದುಕೊಂಡು ಫೋಟೋ ತೆಗೆಯಲು ಹೋದಾಗ ಆರೋಪಿ ಚಂದ್ರಶೇಖರ ಸಿಂಗಟಾಲೂರ
ಇತನು ಸೈಜು ಕಲ್ಲನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಫೋಟೋ ತೆಗೆದುಕೊಂಡು ಏನು ಮಾಡತೀಯಲೇ
ಅಂದವನೇ ಕಲ್ಲನ್ನು ಮೇಲೆ ಎಸೆದಾಗ ತಪ್ಪಿಸಿಕೊಳ್ಳಲು ಕೈಯಲ್ಲಿದ್ದ ಕ್ಯಾಮರಾ ಕೆಳಗಡೆ ಬಿದ್ದಿದ್ದು
ಇರುತ್ತದೆ. ಅಲ್ಲದೇ ಸೈಜುಕಲ್ಲು ಫಿರ್ಯಾದಿಯ ಎಡಕಾಲ ಬೆರಳಿನ ಮೇಲೆ ಬಿದ್ದು
ರಕ್ತಗಾಯವಾಗಿರುತ್ತದೆ. ನಂತರ ಫಿರ್ಯಾದಿಯು ಭಯಗೊಂಡು ತನ್ನ ಮನೆಯ ಕಡೆಗೆ ಹೊರಟಾಗ ಆರೋಪಿತನು
ತಡೆದು ನಿಲ್ಲಿಸಿ ಕೈಯಿಂದ ಮೈ ಕೈ ಗೆ ಹೊಡಿಬಡಿ ಮಾಡಿ ದಬ್ಬಾಡಿದ್ದರಿಂದ ಮೆಟ್ಟಿಲ ಮೇಲೆ ಬಿದ್ದು
ಬಲಗೈ ಮತ್ತು ಟೊಂಕಕ್ಕೆ ಪೆಟ್ಟಾಗಿದ್ದು ಇರುತ್ತದೆ. ಆಗ ಫಿರ್ಯಾದಿಯ ಅಣ್ಣ ರಂಗನಾಥ ಇವರು ಬಂದು
ಅವನಿಗೆ ಈ ರೀತಿ ಮಾಡಿದರೆ ಹೇಗೆ ಅಂತಾ ಅಂದಿದ್ದಕ್ಕೆ ನಿನಗೂ ಸಹ ಕಲ್ಲು ಎತ್ತಿ ಹಾಕಿ ನಿಮ್ಮನ್ನು
ಕೊಂದು ಬಿಡುತ್ತೇನೆ. ಯಾವ ಮಗ ಏನು ಮಾಡುತ್ತಾನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ಕಾರಣ ಸದರಿ ಚಂದ್ರಶೇಖರ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಕೊಪ್ಪಳ
ನಗರ ಠಾಣೆ ಗುನ್ನೆ ನಂ: 223/2014 ಕಲಂ: 341,323,504,506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment