ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ
ನಂ. 74/2014 ಕಲಂ. 279, 337 ಐ.ಪಿ.ಸಿ:.
ದಿನಾಂಕ 19-11-2014 ರಂದು ಸಂಜೆ 7-00 ಗಂಟೆಗೆ ಕೊಪ್ಪಳ ಜಿಲ್ಲಾ
ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ
ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸವರಾಜ ಇವರ
ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 19-11-2014 ರಂದು ಬೆಳಿಗ್ಗೆ 9-30 ಗಂಟೆಗೆ ತಮ್ಮ ಗ್ರಾಮದಿಂದ ತಮ್ಮ ಮೋಟಾರ್ ಸೈಕಲ್ ನಂ, KA 37 / U 0515 ನೇದ್ದನ್ನು
ತೆಗೆದುಕೊಂಡು ತಾನು ಮತ್ತು ತಮ್ಮ ಊರಿನ ಬಾಳಪ್ಪ ಡೊಳ್ಳಿನ ಇಬ್ಬರೂ ಕೂಡಿ ಕೊಪ್ಪಳದ ಮುಖಾಂತರ
ಗಿಣಗೇರಾ ಗ್ರಾಮಕ್ಕೆ ಪೆಂಟಿಂಗ್ ಕೆಲಸ ಮಾಡುವ ಕುರಿತು ಹೋಗಿದ್ದು, ಅಲ್ಲಿ ಕೆಲಸವನ್ನು
ಮುಗಿಸಿಕೊಂಡು ವಾಪಾಸ್ ತಮ್ಮ ಊರಿಗೆ ಹೋಗಲು ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಗಿಣಗೇರಾದಿಂದ
ಕೊಪ್ಪಳದ ಕಡೆಗೆ ಬರುತ್ತಿರುವಾಗ ಸಂಜೆ 6-20 ಗಂಟೆಯ ಸುಮಾರಿಗೆ ಕೊಪ್ಪಳದ ಹೊರವಲಯದಲ್ಲಿ ಜೆ.ಕೆ.ಎಸ್ ಹೊಟೆಲ್ ಸಮೀಪ ಎದುರುಗಡೆಯಿಂದ
ಅಂದರೆ ಕೊಪ್ಪಳದ ಕಡೆಯಿಂದ ಕ್ರಷರ್ ವಾಹನ ನಂ. KA 37 / 5451 ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಕ್ರಷರ್ ವಾಹನವನ್ನು ಜೋರಾಗಿ
ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಮ್ಮ ಮೋಟಾರ್ ಸೈಕಲ್ ಗೆ ಠಕ್ಕರ್ ಮಾಡಿ ಅಪಘಾತ
ಮಾಡಿದ್ದು, ಇದರಿಂದ ತನಗೆ ಮತ್ತು ಬಾಳಪ್ಪ ಡೊಳ್ಳಿನ ಇಬ್ಬರಿಗೂ ಸಾದಾ ಸ್ವರೂಪದ ರಕ್ತಗಾಯ ಹಾಗೂ
ಒಳಪೆಟ್ಟುಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯನ್ನು ಸಂಜೆ 7-20 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ
ಪಡೆದುಕೊಂಡಿದ್ದು, ವಾಪಾಸ್ ಠಾಣೆಗೆ 8-15 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆನಂ. 74/2014 ಕಲಂ. 279, 337 ಐಪಿಸಿ ಅಡಿಯಲ್ಲಿ
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment