ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ.
193/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ. 04-11-2014 ರಂದು 6-30 ಪಿ.ಎಂ.ಕ್ಕೆ ಅಶೋಕ ಈಳಿಗೇರ ಈತನು ತನ್ನ ಮೋಟಾರ ಸೈಕಲ್
ನಂ. ಕೆ.ಎ.37/ಎಕ್ಸ.6354 ನೇದ್ದರಲ್ಲಿ ಹಿಂದೆ ಹನಮೇಶ ಎಲಿಗಾರ ಈತನಿಗೆ ಕೂಡಿಕೊಂಡು ಹಿಟ್ನಾಳದಿಂದ
ಕೊಪ್ಪಳಕ್ಕೆ ಹೋಗುತ್ತಿರುವಾಗ ಹಿಟ್ನಾಳ ಕಡೆಯಿಂದ ಬಂದು ಹಿಟ್ನಾಳ ಕ್ರಾಸ್ ಹತ್ತಿರ ಮೋಟಾರ
ಸೈಕಲ್ನ್ನು ಎನ್.ಹೆಚ್. 13 ಸರ್ವಿಸ್ ರಸ್ತೆಯ ಮೇಲೆ ಅತಿವೇಗವಾಗಿ ಹಾಗೂ ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಕ್ರಾಸ್ ದಲ್ಲಿ ಮೋಟಾರ ಸೈಕಲ್ ಒಮ್ಮೇಲೆ ತಿರುಗಿಸಿ ಸ್ಕಿಡ್ ಮಾಡಿ ಅಪಘಾತ
ಮಾಡಿದ್ದು ಹಿಂದೆ ಕುಳಿತ ಹನಮೇಶನಿಗೆ ತಲೆಗೆ ಮತ್ತು ಸೊಂಟಕ್ಕೆ ಒಳಪೆಟ್ಟು ಬಿದ್ದಿದ್ದು, ಅಲ್ಲದೆ ಎಲಗೈ ಬಲಗಾಲ
ಮೊಣಕಾಲಿಗೆ ಗಾಯಗಳಾಗಿರುತ್ತವೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment