Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, February 28, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 49/2015 ಕಲಂ. 420 ಸಹಿತ 34 ಐ.ಪಿ.ಸಿ:.
ನನಗೆ ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಶ್ರೀಮತಿ ಪ್ರೇಮಾ ಗಂಡ ಪ್ರಭಾಕರ ಪುಡೂರು ಇವರ ಪರಿಚಯವಾಗಿದ್ದು ಸದರಿಯವರು ಕುಷ್ಟಗಿಯಲ್ಲಿ ಶಾಂತಲ ಗ್ರಾಮೀಣ ಶಿಕ್ಷಣ ಅಭಿವೃದ್ದಿ ಸಂಸ್ಥೆ ಎನ್.ಜಿ.ಓ ದ ಅದ್ಯಕ್ಷರಾಗಿದ್ದು ಕೆಲಸ ಮಾಡಿಕೊಂಡಿದ್ದು ಸದರಿಯವರು ನನಗೆ ಹುಬ್ಬಳ್ಳಿಯ ಮದರ್ ಎನ್.ಜಿ.ಓ ದ ಸುರೇಶ ಕುಮಾರ ಪೆನ್ ಡಂ ರಾಜ್ಯಾಧ್ಯಕ್ಷರು ಕುಬೇರಾ ಮ.ಕೋ.ಆ.ಸೋ , ಇವರನ್ನು ಪರಿಚಯ ಮಾಡಿಸಿದರು. ಸದರಿ ಸುರೇಶ ಕುಮಾರ ಪೆನ್ ಡಂ ಇವರು ನಮ್ಮದು ಕುಬೇರ ಮಲ್ಟಿ ಪರ್ಪಸ್ ಕೋಆಪರೇಟಿವ್ ಸೋಸೈಟಿ ಮೇನ್ ಬ್ರಾಚ್ ಹುಬ್ಬಳ್ಳಿಯಲ್ಲಿ ಇದ್ದು ನಿಮಗೆ ಗಂಗಾವತಿ ನಗರದಲ್ಲಿ ಕುಬೇರ ಮಲ್ಟಿ ಪರ್ಪಸ್ ಕೋಆಪರೇಟಿವ್ ಸೋಸೈಟಿಯ ಸಬ್ ಬ್ರಾಚ್ ಅನುಮತಿಯನ್ನು ಕೊಡಿಸುತ್ತೇನೆ ಅದಕ್ಕೆ ನೀವು ರೂ 5,00,000-00 ಗಳನ್ನು ಪಾವತಿಸಿದರೆ ನಿಮಗೆ ಒಂದು ತಿಂಗಳಲ್ಲಿ ಶಾಖೆಗೆ ಅನುಮತಿ ನೀಡಿ ವ್ಯವಹಾರಕ್ಕಾಗಿ ರೂ.10,00,000-00 ಹಣವನ್ನು ಕೊಡಿಸುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಅವರ ಶಾಖೆಯ ಶ್ರೀ ಗುರುಮೂರ್ತಿ ದಾವಣಗೆರೆ, ಸಂಸ್ಥಾಪಕರು ಕುಬೇರಾ ಮ.ಕೋ.ಆ.ಸೋ, ಶ್ರೀ ಫ್ರಾಂಕ್ಲಿನ್ ದಲಬಂಜನ, ನಿದೇರ್ಶಕರು ಮದರ್ ಎನ್.ಜಿ.ಓ ಹುಬ್ಬಳ್ಳಿ, ಶ್ರೀಮತಿ ಫಿಲೋಮಿನಾ ಪೆನ್ ಡಂ, ಅಧ್ಯಕ್ಷರು ಕುಬೇರಾ ಮ.ಕೋ.ಆ.ಸೋ ಹುಬ್ಬಳ್ಳಿಶಾಖೆ ಇವರ ಪರಿಚಯವನ್ನು ಮಾಡಿಕೊಟ್ಟರು. ಆಗ ಗುರುಮೂರ್ತಿ ದಾವಣಗೆರೆ ಈತನು ಅಕೌಂಟ್ ನಂಬರ್ 061305003694 ನೇದ್ದನ್ನು ಹಾಗೂ ಇನ್ನೊಂದು ಅಕೌಂಟ್ ನಂಬರ್ ನೀಡಿದ್ದು ಸದರಿ ಅಕೌಂಟ್ ನಂಬರಗಳಿಗೆ ನೀವು ಹಣವನ್ನು ಪಾವತಿಸಿದರೆ ನಿಮಗೆ  ಕುಬೇರಾ ಮ.ಕೋ.ಆ.ಸೋ ಯ ಗಂಗಾವತಿಯಲ್ಲಿ ಸಬ್ ಬ್ರಾಂಚ್ ತರೆಯಲು ಅನುಮತಿಯನ್ನು ಕೊಡಿಸುತ್ತೇನೆ ಅಂತಾ ತಿಳಿಸಿದ್ದು ಇರುತ್ತದೆ. ಶ್ರೀ ಗುರುಮೂರ್ತಿ ಅವರ ಮಾತಿನಂತೆ ನಾನು ಹಾಗೂ ಶ್ರೀಮತಿ ಭಾರತಿ ಗಂಡ ಕೃಷ್ಣ ಸಾ: ಹೆಚ್.ಆರ್.ಎಸ್. ಕಾಲೋನಿ ಗಂಗಾವತಿ, ಶ್ರೀಮತಿ ಭುವನೇಶ್ವರಿ ಗಂಡ ದೊಡ್ಡಬಸಪ್ಪ ಸಾ: ಬಸಪಟ್ಟಣ, ತಾ: ಗಂಗಾವತಿ, ಶ್ರೀ ಕೃಷ್ಣ ತಂದೆ ಸಣ್ಣಭೋಗಪ್ಪ, ಸಾ: ಹೆಚ್.ಆರ್ ಎಸ್ ಕಾಲೋನಿ ಗಂಗಾವತಿ ಎಲ್ಲರೂ ಕೂಡಿಕೊಂಡು ಗುರುಮೂರ್ತಿ ರವರ ನೀಡಿದ ಅಕೌಂಟ್ ನಂಬರಗೆ 061305003694 ನೇದ್ದಕ್ಕೆ ದಿನಾಂಕ 09-06-2014 ರಂದು ರೂ.4,60,000-00, ಮತ್ತು ಅದೇ ದಿನ ಅದೇ ಅಕೌಂಟಿಗೆ ರೂ.40,000-00 ಗಳನ್ನು ಪಾವತಿಸಿದ್ದು ಮತ್ತು ದಿನಾಂಕ 28-06-2014 ರಂದು ರೂ 25,040-00 ಗಳನ್ನು ಪಾವತಿಸಿದ್ದು ಮತ್ತು ಇನ್ನೊಂದು ಖಾತೆಗೆ ದಿನಾಂಕ  18-10-2014 ರಂದು ರೂ. 15,000-00 ಗಳನ್ನು, ಹಾಗೂ ಅದೇ ಖಾತೆಗೆ ದಿನಾಂಕ 25-10-2014 ರಂದು ರೂ 4,000-00 ಗಳನ್ನು ಪಾವತಿಸಿದ್ದು ಇರುತ್ತದೆ. ಈ ಎರಡು ಖಾತೆಗಳಿಗೆ ಪಾವತಿಸಿದ ಒಟ್ಟು ಹಣ ರೂ. 5,44,040-00 ರೂ ಗಳನ್ನು ಪಾವತಿಸಿದ್ದು ಒಟ್ಟು ಹಣದಲ್ಲಿ ನಾವೆಲ್ಲರೂ ಸಮನಾಗಿ ಹಣ ಹಾಕಿದ್ದು ಇರುತ್ತದೆ. ನಂತರ ನಾವು ಗಂಗಾವತಿ ನಗರದಲ್ಲಿ ಒಂದು ಕಟ್ಟಡವನ್ನು ಬಾಡಿಗೆ ತೆಗೆದುಕೊಂಡು ಸುಮಾರು ರೂ. 5,00,000-00 ಗಳ ಬ್ಯಾಂಕಿಗೆ ಬೇಕಾಗುವಂತಹ ಸಲಕರಣೆಗಳನ್ನು ಖರೀದಿಸಿದ್ದು ಇರುತ್ತದೆ. ಆದರೆ ಇಲ್ಲಿಯವರೆಗೆ ಗುರುಮೂರ್ತಿ, ಸುರೇಶ ಕುಮಾರ ಪೆನ್ ಡಂ, ಶ್ರೀ ಫ್ರಾಂಕ್ಲಿನ್ ದಲಬಂಜನ ಶ್ರೀಮತಿ ಫಿಲೋಮಿನಾ ಪೆನ್ ಡಂ ರವರು ನಮಗೆ ಕುಬೇರ ಮ.ಕೋ.ಆ.ಸೋ ಸಬ್ ಬ್ರಾಂಚ್ ತೆರೆಯಲು ಅನುಮತಿ ನೀಡಿರುವುದಿಲ್ಲ. ಕಾರಣ ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 49/2015 ಕಲಂ 420 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. 279, 338 ಐ.ಪಿ.ಸಿ:
ಇಂದು ದಿನಾಂಕ: 27-02-2015 ರಂದು ರಾತ್ರಿ 10.45 ಗಂಟೆಗೆ ಫೀರ್ಯಾದಿ ಶ್ರೀ ಹುಸೇನಭಾಷ ತಂದೆ ದಾವಲಸಾಬ ವಚಿಾ|| 21 ವರ್ಷ ಜಾತಿ|| ಮುಸ್ಲಿಂ ಉ|| ಕೂಲಿ ಕೇಲಸ ಸಾ|| ಅಮರ ಭಗತಸಿಂಗ ನಗರ ಗಂಗಾವತಿ ಇವರು ಠಾಣೇಗೆ ಹಾಜರಾಗಿ ಒಂದು ಲಿಖಿತ  ದೂರು ಸಲ್ಲಿಸಿದ್ದು ಎನೆಂದರೆ, ನಾನು ಇಂದು ದಿನಾಂಕ 27-02-2015 ರಂದು ಸಾಯಂಕಾಲ 6.45 ಗಂಟೆ ಸುಮಾರಿಗೆ ಗಂಗಾವತಿ ನಗರದ ಕಂಪ್ಲಿ ವೃತ್ತದಲ್ಲಿ ಸಿ.ಕೆ ಅಶ್ರಪ್ ರವರ ಕಿರಾಣಿ ಅಂಗಡಿಯ ಮುಂದೆ ನಿಂತಾಗ ಒಂದು ಹುಡುಗನು, ಗುಂಡಮ್ಮ ಕ್ಯಾಂಪ್ ಕಡೆಯಿಂದ ತನ್ನ ಸೈಕಲ್ ನಡೆಸಿಕೊಂಡು ಕಂಪ್ಲಿ ಸರ್ಕಲನಲ್ಲಿ ಹೊಗುತ್ತಿದ್ದನು, ಅದೆ ವೇಳೆಗೆ ಒಂದು ಟ್ರ್ಯಾಕ್ಟರ ರಾಯಚೂರು ರಸ್ತೆಕಡೆಯಿಂದ, ಅತೀ ಜೋರಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಆ ಹುಡುಗನ ಸೈಕಲ್ಗೆ ಹಿಂದಿನಿಂದ ಬಲವಾಗಿ ಠಕ್ಕರಕೊಟ್ಟಿತು. ಆಗ ಹುಡುಗನು, ಸೈಕಲ್ನಿಂದ ಕೇಳಗೆ ಬಿದ್ದಿದ್ದು, ತಕ್ಷಣವೇ ನಾನು ಹಾಗು ಇತರರು ಹೊಗಿ ನೋಡಲಾಗಿ, ಸದರಿ ಹುಡುಗನ ತಲೆಗೆ ಭಾರಿ ಪೆಟ್ಟಾಗಿ ರಕ್ತ ಬಂದಿತ್ತು, ಮುಂದೆನಿಂತ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ 33 ಟಿ.ಎ-2485 ಟ್ರ್ಯಾಲಿ ನಂ ಕೆ.ಎ - 37 J 5106 ಅಂತಾ ಇದ್ದು, ಅದರ ಟ್ರ್ಯಾಲಿಯಲ್ಲಿ ಉಸುಕಿನ ಲೋಡ್ ಇತ್ತು, ಆ ಟ್ರ್ಯಾಕ್ಟರನ ಡ್ರೈವರ್ ಹೆಸರು ವಿಚಾರಿಸಲಾಗಿ ಖಾಸಿಂಸಾಬ ತಂದೆ ನಬಿಸಾಬ ಸಾ|| ಸಂಗಾಪೂರ ಅಂತಾ ತಿಳಿಸಿದನು. ಆಗ ಗಾಯಗೊಂಡಿದ್ದ ಹುಡುಗನನ್ನು, ನಾನು ಮತ್ತು ಸಾರ್ವಜನಿಕರು ಕೂಡಿಕೊಂಡು, ಅಲ್ಲಿಯೆ ಇದ್ದ, ಒಂದು ಆಟೋದಲ್ಲಿ, ಹಾಕಿಕೊಂಡು ಡಾ|| ಮಲ್ಲನಗೌಡ ಆಸ್ಪತ್ರೆಗೆ ತಂದು ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು ಇರುತ್ತದೆ. ನಂತರ ಗಾಯಗೊಂಡ ಹುಡುಗನ ಹೆಸರು ವಿಚಾರಿಸಲಾಗಿ, ಅವನ ಹೆಸರು ಹಮೀದ ಪಾಶ ತಂದೆ ಶೇಖ್ ಇಬ್ರಾಹಿಂ ಪಾಶಾ ವಯಾ|| 11 ವರ್ಷ ಸಾ|| ಜುಲಾಯಿನಗರ ಅಂತಾ ಗೊತ್ತಾಯಿತು. ಕಾರಣ ಸದರಿ ಟ್ರ್ಯಾಕ್ಟರ ಚಾಲಕ ಖಾಸಿಂಸಾಬ ತಂದೆ ನಬಿಸಾಬ ಇತನು ತನ್ನ ಟ್ರ್ಯಾಕ್ಟರ ಕೆ.ಎ 33 ಟಿ.ಎ-2485 ಟ್ರ್ಯಾಲಿ ನಂ ಕೆ.ಎ – 37 J 5106 ನೇದ್ದನ್ನು ಅತೀ ಜೋರಾಗಿ ಮತ್ತು ಅಲಕ್ಷತನದಿಂದ, ರಾಯಚೂರ ರಸ್ತೆ ಕಡೆಯಿಂದ ಚಲಾಯಿಸಿಕೊಂಡು ಬಂದು, ಮುಂದೆ ಹೊರಟಿದ್ದ ಸೈಕಲ ಚಾಲಕ ಹಮೀದ ಪಾಶ ತಂದೆ ಶೇಖ್ ಇಬ್ರಾಹಿಂ ಪಾಶಾ ಇತನಿಗೆ ಹಿಂದಿನಿಂದ ಠಕ್ಕರಕೊಟ್ಟು ತಲೆಗೆ ಭಾರಿ ರಕ್ತಗಾಯ ಮಾಡಿದವನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಸದರಿ ದೂರನ್ನು ನಮ್ಮ ಹಿರಿಯರೋಂದಿಗೆ ಮತ್ತು ಗಾಯಾಳುವನ ಸಂಬಂದಿಕರೊಂದಿಗೆ ಚರ್ಚಿಸಿ ನಂತರ ಬಂದು ನೀಡಿರುತ್ತೆನೆ ಅಂತಾ ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗಂಗಾವತಿ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ 10/2015 ಕಲಂ 279, 338 ಭಾರತೀಯ ದಂಢ ಸಂಹಿತೆ  ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
3)  ಹನುಮಸಾಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 4/2015 ಕಲಂ. 174 ಸಿ.ಆರ್.ಪಿ.ಸಿ:.

ಮೃತಳಿಗೆ ಆಗಾಗ ಹೊಟ್ಟೆನೋವು ಬರುತ್ತಿದ್ದು ಸಾಕಷ್ಟು ಬಾರಿ ಖಾಸಗಿಯಾಗಿ ತೋರಿಸಿದರು ಸಹ ಗುಣಮುಖವಾಗಿರಲಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಇಂದು ದಿನಾಂಕ: 27-02-2015 ಬೆಳಿಗ್ಗೆ 05-00 ಸುಮಾರಿಗೆ ಮನೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದು ಇಲಾಜು ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿಂದ ಕೊಪ್ಪಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜು ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಇಲಾಜು ಫಸಿಸದೇ ಇಂದು ದಿನಾಂಕ: 27-02-2015 ರಂದು ಮದ್ಯಾಹ್ನ 2-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಮರಣದಲ್ಲಿ ಯಾರ ಮೇಲೆ ಯಾವದೇ ಸಂಶಯ ದೂರು ವಗೈರೆ ಇರುವದಿಲ್ಲ. ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶವಿರುತ್ತದೆ.

0 comments:

 
Will Smith Visitors
Since 01/02/2008