Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, May 3, 2015

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 82/2015  ಕಲಂ 143, 147, 341, 323, 324, 307, 504, 506 ಸಹಿತ 149  ಐ.ಪಿ.ಸಿ:.
ದಿನಾಂಕ – 02-05-2015 ರಂದು ಸಾಯಂಕಾಲ 5-30 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಹೊಗಿದ್ದು  ಗಾಯಾಳು  ರಮೇಶ ಇತನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಗೆ ಕರೆದುಕೊಂಡು ಹೊಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಅಲ್ಲಿಂದ ಗಂಗಾವತಿಯ ಡಾ- ಮಲ್ಲನಗೌಡ ಆಸ್ಪತ್ರೆಗೆ ಬೇಟಿಕೊಟ್ಟು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ರಮೇಶ ಇವರಿಗೆ ವಿಚಾರಿಸಿದ್ದು  ಅವರು ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು  ಅದರ ಸಾರಾಂಶವೆನೆಂದರೆ,  ಮೇಲ್ಕಂಡ ಆರೋಪಿತರ ಪೈಕಿ  ಪರಸಪ್ಪ ಮತ್ತು  ಶರಣಪ್ಪ  ಇವರು  ರಂಗನಾಥ ಇತನೊಂದಿಗೆ ಜಗಳಾ ಮಾಡುವಾಗ್ಗೆ  ಫಿರ್ಯಾದಿದಾರರು ಬುದ್ದಿವಾದ ಹೇಳಿ ಬಿಡಿಸಿ ಕಳುಹಿಸಿದ್ದನ್ನು ಅದನ್ನೇ ಮೇಲ್ಕಂಡ ಆರೋಪಿತರು ಮನದಲ್ಲಿಟ್ಟುಕೊಂಡು ಅದೇ ಉದ್ದೇಶದಿಂದ ಫಿರ್ಯಾದಿದಾರರನ್ನು ಮಾರೇಪ್ಪ ಇವರ ಮನೆಯ ಹತ್ತಿರ ಕರೆಯಿಸಿಕೊಂಡು ಸಮಾನ ಉದ್ದೇಶದಿಂದ ಬಂದು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಮತ್ತು ಕಲ್ಲಿನಿಂದ ಹೊಡೆದು  ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಅಲ್ಲದೆ ಜೀವ ಭಯ ಹಾಕಿರುತ್ತಾರೆ ಅಂತಾ ಮುಂತಾಗಿ ಕೊಟ್ಟ  ಫಿರ್ಯಾದಿಯನ್ನ ಪಡೆದುಕೊಂಡ ವಾಪಾಸ್ ‌ಠಾಣೆಗ ರಾತ್ರೀ 9-45 ಗಂಟೆಗ ಬಂದು ಸದರ ಫಿರ್ಯಾದಿಯ  ಸಾರಾಂಶದ ಮೇಲಿಂದಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 83/2015  ಕಲಂ 143, 147, 341, 323, 324, 307, 504, 506 ಸಹಿತ 149  ಐ.ಪಿ.ಸಿ:.
ದಿನಾಂಕ 03-05-2015 ರಂದು 01-30 ಎ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ  ಶರಣಪ್ಪ ತಂದೆ ಕನಕಪ್ಪ ಕುರಕುಂದಿ ಸಾ: ಹೊಸಜೂರಟಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು  ಅದರ ಸಾರಾಂಶವೆನೆಂದರೆಮೇಲ್ಕಂಡ ಆರೋಪಿತರ ಪೈಕಿ  ರಮೇಶ ತಂದೆ ಹುಲಗಪ್ಪ ಸಾ: ಹೊಸಜೂರಟಗಿ ಈತನು  ದಿನಾಂಕ:  2-5-2015 ರಂದು ಬೆಳಿಗ್ಗೆ 11-45 ಎ.ಎಂ.ಕ್ಕೆ  ಕಾರಟಗಿ ಎ.ಪಿ.ಎಂ.ಸಿ. ಹತ್ತಿರ ಏಕಾಏಕಿ ಬಂದು ಪಿರ್ಯಾದಿದಾರರಿಗೆ ಮನೆಯ ವಿಷಯವಾಗಿ ಅವಾಚ್ಯ ಶಬ್ದಗಳಿಂದ ಬೈದಾಡಿ  ಫಿರ್ಯಾದಿಗೆ ಕೈಯಿಂದ ಹೊಡೆ ಬಡಿ ಮಾಡಿ ಕಾಲಿನಿಂದ ಒದ್ದುಕಲ್ಲಿನಿಂದ ತೆಲೆಗೆ ಹೊಡೆದು ಗಾಯಗೊಳಿಸಿ ಕೈಯಿಂದ ಕತ್ತು ಹಿಸುಕಿದ್ದು, ನಂತರ ಸಂಜೆ 4-15 ಗಂಟೆಗೆ ಪುನಃ. ಹೊಸಜೂರಟಗಿ ಗ್ರಾಮದಲ್ಲಿ ಪಿರ್ಯಾದಿದಾರರಿಗೆ ಮಾತನಾಡಲು ಕರೆಯಿಸಿ ತಡೆದುನಿಲ್ಲಿಸಿ ಮೇಲ್ಕಂಡ ಆರೋಪಿತರೆಲ್ಲರು  ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು  ಹೊಡೆಬಡಿ ಮಾಡಿದ್ದು, ಹಾಗೂ ನೀನು ಇಲ್ಲಿಯೇ ಸುಮ್ಮನಾದರೇ ಸರಿ ಇಲ್ಲವಾದರೆ ನಿಮ್ಮ ಕುಟುಂಬದವರಿಗೆ  ಇದೇ ರೀತಿ ಮಾಡಿ ನಿನ್ನ ಜೀವತ ಸಹಿತ ಇಲ್ಲದಂತೆ ಮಾಡಬೇಕಾಗುತ್ತದೆ ಅಂತಾ ಜೀವ ಭಯ ಹಾಕಿ ಕೊಲೆಗೆ ಪ್ರಯತ್ನಿಸಿರುತ್ತಾರೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ 101/2015  ಕಲಂ 279, 338 ಐ.ಪಿ.ಸಿ.:

ದಿನಾಂಕ: 02-05-2015 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಲಾರಿಯೊಂದಿಗೆ ಹೋಗಿದ್ದ ವಿಜಯಕುಮಾರ ಎಂಬಾತನು ಪೋನ್ ಮಾಡಿ  ಮಸ್ಕಿಯಿಂದ ನೆಲ್ಲು ಕಟಾವು ಕೆಲಸ ಮುಗಿಸಿಕೊಂಡು ಎರಡೂ ಲಾರಿಗಳಲ್ಲಿ ಮಷಿನಗಳನ್ನು ಹೇರಿಕೊಂಡು ವಾಪಸ್ಸು ಗಂಗಾವತಿ ಮುಖಾಂತರ ಬರುತ್ತಿರುತ್ತಿದ್ದೆವು. ನಾವು ಆಪರೇಟರಗಳೆಲ್ಲರೂ ಕೆ. ರೇವಣಸಿದ್ದಪ್ಪ ಇವರ ಲಾರಿ ನಂಬರ್: ಕೆ.ಎ-22/ ಬಿ-1376 ರಲ್ಲಿ ಮುಂದೆ ಬರುತ್ತಿದ್ದೆವು.  ಬಸಪ್ಪ ಇವರ ಲಾರಿ ನಂಬರ್ ಕೆ.ಎ-04/ಎ-7027  ನೇದ್ದು ನಮ್ಮ ಹಿಂದೆ ಹಿಂದೆ ಬರುತ್ತಿತ್ತು.  ನಾವು ಗಂಗಾವತಿ-ಸಿಂಧನೂರ ಮುಖ್ಯ ರಸ್ತೆಯಲ್ಲಿ ಪ್ರಗತಿನಗರದಲ್ಲಿ ಬೆಳಗಿನ ಜಾವ 01:00 ಗಂಟೆಯ ಸುಮಾರಿಗೆ ಬಂದಾಗ ನಮ್ಮ ಲಾರಿಯು ಕೆಟ್ಟು ನಿಂತಿದ್ದು, ಆಗ ಹಿಂದೆ ಬರುತ್ತಿದ್ದ ಲಾರಿಯನ್ನು ಸಹಾಯಕ್ಕಾಗಿ ನಿಲ್ಲಿಸಲು ನಮ್ಮ ಸಂಗಡ ಇದ್ದ ಹನುಮಂತ ತಂದೆ ಮಹೇಶಪ್ಪ ಮತ್ತು ಪರಮೇಶಿ ತಂದೆ ಬಸವರಾಜಪ್ಪ ಒಳಗುಂದಿ ಇವರುಗಳು ರಸ್ತೆಯ ಎಡಭಾಗದಲ್ಲಿ ನಿಂತಿದ್ದರು.  ಬೆಳಗಿನಜಾವ 01:15 ರಿಂದ 01:30 ಗಂಟೆಯ ಸಿಂಧನೂರು ಕಡೆಯಿಂದ ಬಂದ ಲಾರಿ ನಂಬರ್ ಕೆ.ಎ-04/ಎ-7027 ನೇದ್ದಕ್ಕೆ  ಅವರು ಕೈ ಸನ್ನೆ ಮಾಡಿ ನಿಲ್ಲಿಸಲು ಸೂಚಿಸುತ್ತಿರುವಾಗ ಆ ಲಾರಿಯ ಚಾಲಕ ಇಸ್ಮಾಯಿಲ್ ಈತನು ಲಾರಿಯನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ಹನುಮಂತ ಮತ್ತು ಪರಮೇಶ ಇವರಿಗೆ ಡಿಕ್ಕಿ ಹೊಡೆದು ಒಮ್ಮೆಲೇ ಎಡಗಡೆ ತಿರುಗಿಸಿಕೊಂಡಿದ್ದರಿಂದ ಲಾರಿಯು ರಸ್ತೆಯ ಬಾಜು ಪಲ್ಟಿಯಾಗಿ ಉರುಳಿ ಬಿದ್ದಿತು.  ಕೂಡಲೇ ನಾನು ಮತ್ತು ರೇವಣ ಸಿದ್ದಪ್ಪ ಇವರ ಲಾರಿ ಚಾಲಕ ಮೌನೇಶ ತಂದೆ ಚಂದ್ರಪ್ಪ 33 ವರ್ಷ, ಕುರುಬರು ಸಾ: ಗಂಗನರಸಿ ಇವರು ಹೋಗಿ ನೋಡಲಾಗಿ ಹನುಮಂತಪ್ಪನಿಗೆ ತಲೆಗೆ, ಸೊಂಟಕ್ಕೆ ಮತ್ತು ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು, ಪರಮೇಶಿಗೆ ಸೊಂಟಕ್ಕೆ, ಕಾಲುಗಳಿಗೆ ತೀವ್ರ ಒಳಪೆಟ್ಟಾಗಿದ್ದವು. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದ್ದು ಅಂಬ್ಯುಲೆನ್ಸ್ ಬಂದ ನಂತರ ಅವರನ್ನು ಚಿಕಿತ್ಸೆ ಕುರಿತು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗುತ್ತಿರುವದಾಗಿ  ತಿಳಿಸಿದನು. ಕೂಡಲೇ ನಾನು ಸ್ಥಳಕ್ಕೆ ಬಂದು ವಾಹನವನ್ನು ನೋಡಿ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ಕೊಟ್ಟಿರುತ್ತೇನೆ. ಈ ಅಪಘಾತಕ್ಕೆ ಕಾರಣನಾದ ಸ್ವರಾಜ್ ಮಜಡಾ ಲಾರಿ ನಂ: ಕೆ.ಎ-04/ಎ-7027 ನೇದ್ದರ ಚಾಲಕ ಇಸ್ಮಾಯಿಲ್ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 101/2015 ಕಲಂ 279, 338 ಐ.ಪಿ.ಸಿ. ಅಡಿ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.

0 comments:

 
Will Smith Visitors
Since 01/02/2008